ಬಂಗಾರ ಸಿಗಲಿಲ್ಲ ಬರಿಗೈಯಲ್ಲಿ ಬರಲಿಲ್ಲ
mail-img print-img

ಬಂಗಾರ ಸಿಗಲಿಲ್ಲ ಬರಿಗೈಯಲ್ಲಿ ಬರಲಿಲ್ಲ

- ಇಬ್ರಾಹಿಂ ಅಡ್ಕಸ್ಥಳ
ಶನಿವಾರ - ಆಗಸ್ಟ್ -18-2012

*ಒಲಿಂಪಿಕ್ಸ್‌ನಲ್ಲಿ ಭಾರತ ಪಡೆದ ಪದಕಗಳ ಸಂಖ್ಯೆ 26ಕ್ಕೇರಿದೆ   *ಅಮೆರಿಕ ಮತ್ತೆ ನಂ.1

ಲಂಡನ್ ಒಲಿಂಪಿಕ್ಸ್ ಮುಗಿದಿದೆ. ನಿರೀಕ್ಷೆಯಂತೆ ಅಮೆರಿಕ ಪದಕ ಪಟ್ಟಿಯಲ್ಲಿ ಗರಿಷ್ಠ ಚಿನ್ನದ ಪದಕಕದೊಂದಿಗೆ ಅಗ್ರಸ್ಥಾನ ಪಡೆದಿದೆ. ಬೀಜಿಂಗ್‌ನಲ್ಲಿ ಚೀನಾ ಮೇಲುಗೈ ಸಾಧಿಸಿತ್ತು. ಲಂಡನ್‌ನಲ್ಲಿ ಚೀನಾ ಮತ್ತು ಅಮೆರಿಕದ ನಡುವೆ ಹಾವು ಏಣಿ ಆಟ ನಡೆದಿದ್ದರೂ ಅಮೆರಿಕ ಕೊನೆಗೂ ಮೇಲುಗೈ ಸಾಧಿಸಿತು.ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚೀನಾದ ಅಥ್ಲೀಟ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆತಿಥೇಯ ಚೀನಾ ಪದಕ ಪಟ್ಟಿಯಲ್ಲಿ ಅಮೆರಿಕವನ್ನು ಹಿಂದಕ್ಕೆ ತಳ್ಳಿ ಅಗ್ರಸ್ಥಾನ ಪಡೆದಿತ್ತು. ಲಂಡನ್ ಒಲಿಂಪಿಕ್ಸ್‌ನಲ್ಲಿ ಆತಿಥೇಯ ಗ್ರೇಟ್ ಬ್ರಿಟನ್ ಮೂರನೆ ಸ್ಥಾನ ಪಡೆದಿದೆ. ಬೀಜಿಂಗ್‌ನಲ್ಲಿ ಅದು ನಾಲ್ಕನೆ ಸ್ಥಾನ ಪಡೆದಿತ್ತು. ಅಮೆರಿಕದ ಚಿನ್ನದ ಮೀನು ಖ್ಯಾತಿಯ ಈಜುಗಾರ ಮೈಕಲ್ ಫೆಲ್ಪ್ಸ್ ಕಳೆದ ಮೂರು ಒಲಿಂಪಿಕ್ಸ್‌ಗಳಲ್ಲಿ ಒಟ್ಟು 22 ಪದಕ(18 ಚಿನ್ನ, 2 ಬೆಳ್ಳಿ , 2 ಕಂಚು ) ಪಡೆದು ಇತಿಹಾಸ ಬರೆದಿದ್ದಾರೆ. ಅವರು ಈ ಒಲಿಂಪಿಕ್ಸ್‌ನಲ್ಲಿ 4 ಚಿನ್ನ ಮತ್ತು 2 ಬೆಳ್ಳಿ ಸೇರಿದಂತೆ ಒಟ್ಟು 6 ಪದಕಗಳನ್ನು ತನ್ನ ಖಾತೆಗೆ ಜಮೆ ಮಾಡಿದ್ದಾರೆ.

ಫೆಲ್ಪ್ಸ್ 2004, 2008 ಮತ್ತು 2012ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು ಗರಿಷ್ಠ ಚಿನ್ನದ ಪದಕಗಳನ್ನು ಎಗರಿಸುವ ಮೂಲಕ ಒಲಿಂಪಿಕ್ಸ್‌ಗೆ ವಿದಾಯ ಪ್ರಕಟಿಸಿದ್ದಾರೆ. ಮುಂದೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.ಈ ತನಕ ಒಲಿಂಪಿಕ್ಸ್‌ನ ಇತಿಹಾಸದಲ್ಲಿ ಗರಿಷ್ಠ ಪದಕಗಳನ್ನು ಪಡೆದ ದಾಖಲೆ ಸೋವಿಯತ್ ಯೂನಿಯನ್‌ನ ಮಹಿಳಾ ಅಥ್ಲೀಟ್ ಲಾರಿಸಾ ಲಾಟಿನಿನಾ (ಜಿಮ್ನಾಸ್ಟಿಕ್ ) ಹೆಸರಲ್ಲಿತ್ತು. ಈ ದಾಖಲೆಯನ್ನು ಅಳಿಸಿ ಹಾಕಿ ಫೆಲ್ಪ್ಸ್ ನೂತನ ದಾಖಲೆ ಬರೆದಿದ್ದಾರೆ.ಲಾರಿಸಾ 1956ರಿಂದ 1964ರ ಅವಧಿಯಲ್ಲಿ ನಡೆದ ಒಲಿಂಪಿಕ್ಸ್‌ಗಳಲ್ಲಿ ಒಟ್ಟು 18(9ಚಿನ್ನ, 5ಬೆಳ್ಳಿ, 4 ಕಂಚು) ಪದಕಗಳನ್ನು ಜಮೆ ಮಾಡಿದ್ದರು. ಅವರ ಈ ದಾಖಲೆಯನ್ನು 48 ವರ್ಷಗಳ ಬಳಿಕ ಫೆಲ್ಪ್ಸ್ ಅಳಿಸಿ ಹಾಕಿ ಹೊಸ ದಾಖಲೆಯನ್ನು ಸ್ಥಾಪಿಸಿದ್ದಾರೆ.

ಲಂಡನ್ ಒಲಿಂಪಿಕ್ಸ್‌ನಲ್ಲಿ ಫೆಲ್ಪ್ಸ್ ಚಿನ್ನದ ದಾಖಲೆ ಬರೆದಿರುವುದು ಒಂದಡೆಯಾದರೆ ಹಲವು ಮಂದಿ ಕೆಲವು ಸ್ಮರಣೀಯ ಕ್ಷಣಗಳನ್ನು ದಾಖಲಿಸಿ ಒಲಿಂಪಿಕ್ಸ್‌ಗೆ ಕಳೆಗೆ ಕಟ್ಟಿದ್ದಾರೆ.ಜಮೈಕಾದ ಅಥ್ಲೀಟ್ ಉಸೇನ್ ಬೋಲ್ಟ್ ಮೂರು ಸ್ವರ್ಣ ಪದಕಗಳನ್ನು ಕೊರಳಲ್ಲಿ ಧರಿಸಿದರು. 100 ಮತ್ತು 200 ಮೀಟರ್ ಓಟದಲ್ಲಿ ಚಿನ್ನ ಪಡೆಯುವ ಜೊತೆಗೆ 4x100 ರೀಲೆಯಲ್ಲಿ ಓಡಿ ಜಮೈಕಾ ಖಾತೆಗೆ ಚಿನ್ನ ಜಮೆ ಮಾಡಿದರು. ಬೋಲ್ಟ್ ಈ ಹಿಂದೆ ಬೀಜಿಂಗ್ ಒಲಿಂಪಿಕ್ಸ್‌ನಲ್ಲೂ 3 ಚಿನ್ನ ಪಡೆದಿದ್ದರು.

ಎರಡು ಒಲಿಂಪಿಕ್ಸ್‌ಗಳಲ್ಲಿ ಒಟ್ಟು 6 ಪದಕಗಳನ್ನು ಎಗರಿಸಿರುವ ಮೂಲಕ ಬೋಲ್ಟ್ ತನ್ನ ಹೆಸರಲ್ಲಿ ಹೊಸ ದಾಖಲೆ ಬರೆದಿದ್ದಾರೆ.ಲಂಡನ್ ಒಲಿಂಪಿಕ್ಸ್‌ನಲ್ಲಿ ಗರಿಷ್ಠ ಪದಕಗಳನ್ನು ಪಡೆದ ಐವರಲ್ಲಿ ನಾಲ್ಕು ಮಂದಿ ಅಮರಿಕದ ಅಥ್ಲೀಟ್‌ಗಳು ಮೇಲುಗೈ ಸಾಧಿಸಿದ್ದಾರೆ. ಅಮೆರಿಕದ ಫೆಲ್ಪ್ಸ್ ಅಗ್ರಸ್ಥಾನ ಪಡೆದಿದ್ದರೆ, ಅಮೆರಿಕದ ಮಿಸ್ಸಿ ಫ್ರಾಂಕ್ಲಿನ್ 5ಪದಕ (4 ಚಿನ್ನ, 1ಕಂಚು) ಎರಡನೆ ಸ್ಥಾನ, ಅದೇ ದೇಶದ ಅಲ್ಸಿನ್ ಸ್ಕಿಮಿಟ್ 5 ಪದಕ(3ಚಿನ್ನ, 1 ಬೆಳ್ಳಿ, 1 ಕಂಚು), ಮೂರನೆ ಸ್ಥಾನ, ಬೋಲ್ಟ್ 3 ಪದಕ(3 ಚಿನ್ನ) ನಾಲ್ಕನೆ ಸ್ಥಾನ ಮತ್ತು ಅಮೆರಿಕದ ಅಲ್ಸೆನ್ 3 ಚಿನ್ನದ ಪದಕಗಳೊಂದಿಗೆ ಐದನೆ ಸ್ಥಾನವನ್ನು ಹಂಚಿಕೊಂಡಿದ್ದಾರೆ.ಆ್ಯಂಡಿ ಮುರ್ರೆ ಕಳೆದ ವಿಂಬಲ್ಡನ್ ಫೈನಲ್‌ನಲ್ಲಿ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ರೋಜರ್ ಫೆಡರರ್ ವಿರುದ್ಧ ಸೋತು ಪ್ರಶಸ್ತಿ ಎತ್ತುವ ಸುವರ್ಣಾವಕಾಶವನ್ನು ಕಳೆದುಕೊಂಡಿದ್ದರು.

ಇದೀಗ ಒಲಿಂಪಿಕ್ಸ್‌ನಲ್ಲಿ ಅವರು ಸ್ವರ್ಣ ಜಯಿಸಿದ್ದಾರೆ.ಗ್ರೇಟ್ ಬ್ರಿಟನ್‌ನ ಮುಹಮ್ಮದ್ ಫರ್ಹಾ ಒಲಿಂಪಿಕ್ಸ್‌ನಲ್ಲಿ 5000 ಮತ್ತು 10000 ಮೀಟರ್ ಓಟದಲ್ಲಿ ಚಿನ್ನ ಗೆದ್ದರು.ಕಳೆದ ವರ್ಷ ಅವರು ವಿಶ್ವ ಚಾಂಪಿಯನ್‌ಶಿಪ್ ಕೂಟದಲ್ಲೂ ಈ ಎರಡು ವಿಭಾಗಗಳಲ್ಲಿ ಚಿನ್ನ ಜಯಿಸಿದ್ದರು. ಫರ್ಹಾ ಚಿನ್ನ ಜಯಿಸಿದ ಸಂಭ್ರಮದಲ್ಲಿ ಬೋಲ್ಟ್ ಪಾಲ್ಗೊಂಡು ಅವರ ಸಾಧನೆಯನ್ನು ಶ್ಲಾಘಿಸಿದರು.ಅಮೆರಿಕದ ಮಹಿಳಾ ತಂಡ 4x100 ರೀಲೆಯಲ್ಲಿ ಚಿನ್ನ ಜಯಿಸಿದ್ದಾರೆ. ಒಲಿಂಪಿಕ್ಸ್ ಚೊಚ್ಚಲ ಮಹಿಳಾ ಬಾಕ್ಸಿಂಗ್ ಚಿನ್ನವನ್ನು ಬ್ರಿಟನ್‌ನ ನಿಕೊಲಾ ಆ್ಯಡಮ್ಸ್ ಗೆದ್ದಿರುವುದು, 800 ಮೀಟರ್ ಓಟದಲ್ಲಿ ಡೇವಿಡ್ ರುಡಿಸಾ, ಕಿರಾನಿ ಜೇಮ್ಸ್ ಗ್ರೇನಾಡಾಗೆ ಮೊದಲ ಒಲಿಂಪಿಕ್ಸ್ ಚಿನ್ನ ದೊರಕಿಸಿಕೊಟ್ಟಿರುವುದು, ಸೌದಿ ಅರೇಬಿಯಾ ಪರ ಮೊದಲ ಬಾರಿಗೆ ಮಹಿಳಾ ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವುದು, ದಕ್ಷಿಣ ಆಫ್ರಿಕಾದ ಬ್ಲೇಡ್ ರನ್ನರ್ ಒಸ್ಕರ್ ಪಿಸ್ಟೋರಿಯಸ್ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿರುವುದು ಮತ್ತಿತರ ಅಪೂರ್ವ ಕ್ಷಣಗಳು ಲಂಡನ್ ಒಲಿಂಪಿಕ್ಸ್‌ನಲ್ಲಿ ದಾಖಲಾಗಿದೆ.

ಇಂಡಿಯಾ ಶೈನ್: ಭಾರತದಿಂದ ಲಂಡನ್ ಒಲಿಂಪಿಕ್ಸ್‌ನಲ್ಲಿ ಒಟ್ಟು 81 ಮಂದಿ ಅಥ್ಲೀಟ್‌ಗಳು ಭಾಗವಹಿಸಿದ್ದರು. 6 ಮಂದಿ ಪದಕ ಪಡೆದ ಖುಶಿಯಲ್ಲಿ ತವರಿಗೆ ವಾಪಸಾದರು. ಉಳಿದ 75 ಮಂದಿ ಪದಕದ ಬೇಟೆಯಲ್ಲಿ ಸೋತು ತವರಿಗೆ ಹಿಂದಿರುಗಿದರು.ಭಾರತ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 1 ಚಿನ್ನ ಮತ್ತು 2ಕಂಚು ಸೇರಿದಂತೆ 3 ಪದಕಗಳನ್ನು ಗೆದ್ದುಕೊಂಡಿತ್ತು. ಭಾರತ ಲಂಡನ್ ಒಲಿಂಪಿಕ್ಸ್‌ನಲ್ಲಿ 6 ಪದಕಗಳನ್ನು ಜಮೆ ಮಾಡುವುದರೊಂದಿಗೆ ತನ್ನ ಖಾತೆಗೆ ಸೇರಿಸಿದ ಪದಕಗಳ ಸಂಖ್ಯೆಯನ್ನು 26ಕ್ಕೆ ಏರಿಸಿದೆ. ಹಾಕಿಯಲ್ಲಿ 11, ಶೂಟಿಂಗ್ 4, ಅಥ್ಲೀಟಿಕ್ಸ್ 2, ಕುಸ್ತಿ 4, ಬಾಕ್ಸಿಂಗ್ 2, ಟೆನಿಸ್ 1, ವೇಟ್ ಲಿಫ್ಟಿಂಗ್ 1 ಮತ್ತು ಬ್ಯಾಡ್ಮಿಂಟನ್‌ನಲ್ಲಿ 1ಪದಕ ಭಾರತದ ಖಾತೆಗೆ ಜಮೆ ಅಗಿದೆ.

ಈ ಬಾರಿ 6 ಪದಕಗಳು ಭಾರತದ ಖಾತೆಗೆ ಜಮೆ ಆಗಿದ್ದರೂ ಚಿನ್ನ ದೊರೆತಿಲ್ಲ. ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಅಭಿನವ್ ಬಿಂದ್ರಾ ಭಾರತಕ್ಕೆ ವೈಯಕ್ತಿಕ ವಿಭಾಗದಲ್ಲಿ ಮೊದಲ ಬಾರಿ ಚಿನ್ನದ ಪದಕ ಜಮೆ ಮಾಡಿದ್ದರು. ಈ ಬಾರಿ ಮತ್ತೆ ಚಿನ್ನದ ನಿರೀಕ್ಷೆ ಮೂಡಿಸಿದ್ದರು. ಆದರೆ ಅವರು ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದರು. ಭಾರತ ಈ ವರೆಗೆ ಒಲಿಂಪಿಕ್ಸ್‌ನಲ್ಲಿ ಪಡೆದಿರುವ ಚಿನ್ನದ ಪದಕಗಳ ಪೈಕಿ ಹಾಕಿಯ ಪಾಲು ದೊಡ್ಡದು.ಹಾಕಿಯ ಪಾಲು 8 ಆಗಿದೆ. ಭಾರತಕ್ಕೆ ಪ್ರತಿ ಒಲಿಂಪಿಕ್ಸ್‌ನಲ್ಲೂ ಚಿನ್ನ ತಂದು ಕೊಡುತ್ತಿದ್ದ ಭಾರತದ ಹಾಕಿ ತಂಡ ನೆಲ ಕಚ್ಚಿದೆ.

ಲಂಡನ್ ಒಲಿಂಪಿಕ್ಸ್‌ನಲ್ಲಿ ತಾನಾಡಿರುವ 6 ಪಂದ್ಯಗಳಲ್ಲಿ ಸೋತು ಕೂಟದಲ್ಲಿ ಕೊನೆಯ ಸ್ಥಾನ ಪಡೆದಿದೆ. ಶೂಟಿಂಗ್‌ನಲ್ಲಿ ಚಿನ್ನ ಬರದ್ದಿದರೂ 1 ಬೆಳ್ಳಿ ಮತ್ತು 1 ಕಂಚು ದೊರೆತಿದೆ. ವಿಜಯಕುಮಾರ್ ಬೆಳ್ಳಿ ಮತ್ತು ಗಗನ್ ನಾರಂಗ್ 10 ಮೀಟರ್ ಫ್ರೀಸ್ಟೈಲ್‌ನಲ್ಲಿ ಕಂಚು ಪಡೆದಿದ್ದಾರೆ.ಬಾಕ್ಸಿಂಗ್‌ನಲ್ಲಿ ಭಾರತದ ಪರ 8 ಮಂದಿ ಭಾಗವಹಿಸಿದ್ದರು. 7 ಮಂದಿ ಪುರುಷ ಬಾಕ್ಸರ್‌ಗಳು ಪದಕ ಪಡೆಯುವಲ್ಲಿ ಎಡವಿದರು. ಆದರೆ ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಮಹಿಳಾ ಬಾಕ್ಸರ್ ಮೇರಿ ಕೋಮ್ ಕಂಚು ಗೆದ್ದು ಇತಿಹಾಸ ಬರೆದರು.

ವಿಶ್ವದ ನಂ.1 ಮಹಿಳಾ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಪದಕದ ಭರವಸೆ ಮೂಡಿಸಿದ್ದರು. ಆದರೆ ಅವರು ಹಾಗೂ ಅವರ ತಂಡ ಸೋತು ಬರಿಗೈಯಲ್ಲಿ ತವರಿಗೆ ತಲುಪಿದೆ. ಬಾಡ್ಮಿಂಟನ್‌ನಲ್ಲಿ ಸೈನಾ ನೆಹ್ವಾಲ್ ಚಿನ್ನ ತರದಿದ್ದರೂ, ಕಂಚು ತಂದು ಭಾರತದ ಖಾತೆಗೆ ಬ್ಯಾಡ್ಮಿಂಟನ್‌ನಲ್ಲಿ ಮೊದಲ ಪದಕ ಜಮೆ ಮಾಡಿದರು. ಒಲಿಂಪಿಕ್ಸ್ ತಂಡದ ಆಯ್ಕೆ ಮಾಡುವಾಗ ಅನಗತ್ಯವಾಗಿ ತಮ್ಮೆಳಗಿನ ಭಿನ್ನಾಭಿಪ್ರಾಯವನ್ನು ಹೊರಹಾಕಿ ಗೊಂದಲವನ್ನುಂಟು ಮಾಡಿದ್ದ ಟೆನಿಸ್ ತಾರೆಯರಾದ ಲಿಯಾಂಡರ್ ಪೇಸ್, ಸಾನಿಯಾ ಮಿರ್ಝಾ, ಮಹೇಶ್ ಭೂಪತಿ, ರೋಹನ್ ಬೋಪಣ್ಣ ಸೋತು ಬರಿಗೈಯಲ್ಲಿ ಬಂದಿದ್ದಾರೆ.

 

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಜನಸಂಖ್ಯೆ ಹೆಚ್ಚಳದ ಪರಿಣಾಮ

ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮನೋಲ್ಲಾಸದ ನಾಲೆಗಳು: (ಭಾಗ-2)

ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...


- ಶೂದ್ರ ಶ್ರೀನಿವಾಸ್

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್