
ಮುಂಬರುವ ಲಂಡನ್ ಒಲಿಂಪಿಕ್ಸ್‌ನಲ್ಲಿ ಹದಿಮೂರು ಇವೆಂಟ್‌ಗಳಲ್ಲಿ ಚಿನ್ನದ ಬೇಟೆಗೆ ಭಾರತದಿಂದ ಎಪ್ಪತ್ತಾರು ಮಂದಿ ಟಿಕೆಟ್ ಕಾಯ್ದಿರಿಸಿದ್ದಾರೆ. ಇನ್ನೂ ಹಲವು ಮಂದಿ ಸ್ಪರ್ಧಾಳುಗಳು ಟಿಕೆಟ್ ಗಿಟ್ಟಿಸಿಕೊಳ್ಳುವ ನಿರೀಕ್ಷೆ ಇದೆ. ನಾಲ್ಕು ವರ್ಷಗಳ ಹಿಂದೆ ಬೀಜೀಂಗ್ ಒಲಿಂಪಿಕ್ಸ್‌ನಲ್ಲಿ ಭಾರತದ 56 ಮಂದಿ ಪ್ರವೇಶ ಗಿಟ್ಟಿಸಿಕೊಂಡಿದ್ದರು. ಇದು ಇದೀಗ 76ಕ್ಕೆ ಏರಿದೆ. 56 ಪುರುಷರು ಮತ್ತು 20 ಮಹಿಳಾ ಕ್ರೀಡಾಪಟುಗಳು ಕೂಟಕ್ಕೆ ಆಯ್ಕೆಯಾಗಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಕಾಣುತ್ತಿದ್ದಾರೆ.ಒಲಿಂಪಿಕ್ಸ್‌ನ ವೇಳೆ ಭಾರತದ ಸ್ಪರ್ಧಾಳುಗಳ ಸಂಖ್ಯೆ 85ಕ್ಕೆ ತಲುಪುವ ನಿರೀಕ್ಷೆ ಇದೆ. ಯಾಕೆಂದರೆ ಕೆಲವು ಕ್ರೀಡೆಗಳಿಂದ ಒಲಿಂಪಿಕ್ಸ್‌ಗೆ ಸ್ಪರ್ಧಾಳುಗಳ ಆಯ್ಕೆ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.ಭಾರತದ ಕ್ರೀಡಾಪಟುಗಳು ಕಳೆದ ನೂರ ಹನ್ನೊಂದು ವರ್ಷಗಳಲ್ಲಿ ನಡೆದ ಹಲವು ಒಲಿಂಪಿಕ್ಸ್ ನಲ್ಲಿ ಬೇರೆ ಬೇರೆ ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದರೂ ಪದಕ ಬಾಚಿದ್ದು ಕೇವಲ ಇಪ್ಪತ್ತು.ಇದರಲ್ಲಿ ಹಾಕಿಯ ಕೊಡುಗೆ ದೊಡ್ಡದು.1900ರಿಂದ 2008ರ ತನಕ ನಡೆದ ಸಮ್ಮರ್ ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ಹಾಕಿ ತಂಡ 11 ಪದಕಗಳನ್ನು ಬಾಚಿಕೊಂಡಿತ್ತು.ಇದರಲ್ಲಿ ಚಿನ್ನ 8, ಬೆಳ್ಳಿ 1 ಮತ್ತು 2 ಕಂಚು ಪದಕ ಹಾಕಿ ಮೂಲಕ ಭಾರತದ ಖಾತೆಗೆ ಜಮೆ ಆಗಿತ್ತು ಎನ್ನುವುದು ಇಲ್ಲಿ ಗಮನಿಸತಕ್ಕ ವಿಚಾರವಾಗಿದೆ.ಕಳೆದ ಬೀಜಿಂಗ್ ಒಲಿಂಪಿಕ್ಸ್‌ಗೆ ಭಾರತದ ಹಾಕಿ ತಂಡ ಪದಕದ ಬೇಟೆಗೆ ಆಯ್ಕೆಯಾಗುವಲ್ಲಿ ವಿಫಲವಾಗಿತ್ತು.
ಈ ಬಾರಿ ಹಾಕಿ ತಂಡ ಒಲಿಂಪಿಕ್ಸ್‌ಗೆ ಪ್ರವೇಶ ಪಡೆದಿದೆ. 16 ಮಂದಿ ಆಟಗಾರರನ್ನು ಒಳಗೊಂಡ ಹಾಕಿ ತಂಡ ಲಂಡನ್‌ಗೆ ಪ್ರಯಾಣ ಬೆಳೆಸಲು ತಯಾರಿ ನಡೆಸುತ್ತಿದೆ.ಹಾಕಿಯನ್ನು ಹೊರತುಪಡಿಸಿದರೆ ಶೂಟಿಂಗ್ 11, ಬಾಕ್ಸಿಂಗ್ 8, ಕುಸ್ತಿ ಪಟುಗಳು 5, ಆರ್ಚರಿ ಯಲ್ಲಿ 4, ಅಥ್ಲೀಟಿಕ್ಸ್‌ನಲ್ಲಿ 13, ಬ್ಯಾಡ್ಮಿಂಟನ್‌ನಲ್ಲಿ 6, ಜೂಡೋ 1, ರೋವಿಂಗ್ 3, ಸ್ವಿಮ್ಮಿಂಗ್ 5, ವೇಟ್ ಲಿಫ್ಟಿಂಗ್ 2, ಟೇಬಲ್ ಟೆನಿಸ್ 2 ಹಾಗೂ ಟೆನಿಸ್‌ನಲ್ಲಿ ಏಕೈಕ ಆಟಗಾರ ಪ್ರವೇಶ ಪಡೆದಿದ್ದಾರೆ.
ರೈಫಲ್ ಶೂಟರ್ ಅಭಿನವ್ ಬಿಂದ್ರಾ ಕಳೆದ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಸ್ವರ್ಣ ಗೆದ್ದವರು. ಮತ್ತೆ ಪದಕದ ಬೇಟೆಯಲ್ಲಿದ್ದಾರೆ. ಅವರೊಂದಿಗೆ ರೈಫಲ್ ಶೂಟರ್ ಗಗನ್ ನಾರಂಗ್, ಶಾಟ್-ಗನ್ ರಂಜನ್‌ಸಿಂಗ್ ಸೋದಿ ಪದಕದ ಕನಸು ಕಾಣುತ್ತಿ ದ್ದಾರೆ.ಬೀಜಿಂಗ್‌ನಲ್ಲಿ ಕಂಚು ಪಡೆದ ಬಾಕ್ಸರ್ ಸುಶೀಲ್ ಕುಮಾರ್ ಮತ್ತು 2012 ರ ಏಶ್ಯನ್ ಚಾಂಪಿಯನ್ ಯೋಗೀಶ್ವರ್ ದತ್ತ್ ಪದಕದ ನಿರೀಕ್ಷೆಯಲ್ಲಿ ದ್ಧಾರೆ. ಬಿಜೀಂಗ್‌ನಲ್ಲಿ ಕಂಚು ಎಗರಿಸಿದ ಬಾಕ್ಸರ್ ವೀಜೇಂದರ್ ಸಿಂಗ್, ಐದು ಬಾರಿ ವಿಶ್ವ ಚಾಂಪಿಯನ್ ಪ್ರಶಸ್ತಿಯನ್ನು ಬಾಚಿಕೊಂಡ ಮಹಿಳಾ ಬಾಕ್ಸರ್ ಎಂ.ಸಿ ಮೇರಿ ಕೋಮ್ ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಮಹಿಳಾ ಬಾಕ್ಸಿಂಗ್‌ನ್ನು ಮೊದಲ ಬಾರಿ ಸೇರಿಸಿಕೊಳ್ಳಲಾಗಿದೆ.ಮೊದಲ ಅವಕಾಶದಲ್ಲಿ ಸ್ವರ್ಣ ಗೆಲ್ಲುವ ಕನಸು ಕಾಣುತ್ತಿರುವ ಮೇರಿ ಕೋಮ್‌ಗೆ ಇದು ಕೊನೆಯ ಒಲಿಂಪಿಕ್ಸ್ ಅವಕಾಶ.ಒಲಿಂಪಿಕ್ಸ್ ಬಳಿಕ ಕಣದಿಂದ ದೂರ ಸರಿಯುವ ಆಲೋಚನೆಯಲ್ಲಿ ಇದ್ದಾರೆ.ಕೇಂದ್ರ ಸರಕಾರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತದ ಕ್ರೀಡಾಳುಗಳಿಗೆ ತರಬೇತಿಗೆ 238 ಕೋಟಿ ರೂ.ಮತ್ತು ವಿದೇಶಿ ಕೋಚ್‌ಗಳ ನೆರವು ಪಡೆಯಲು ಹೆಚ್ಚುವರಿಯಾಗಿ 20 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ. ಕ್ರೀಡಾಪಟುಗಳಿಗೆ ತಯಾರಿ ನಡೆಸಲು ಸರಕಾರ ಒಟ್ಟು 258 ಕೋಟಿ ರೂ. ನೀಡಿದ್ದರೂ ಕ್ರೀಡಾಪಟುಗಳು ಎಷ್ಟರ ಮಟ್ಟಿಗೆ ದೇಶದ ಋಣವನ್ನು ಉಳಿಸಿಕೊಂಡಿದ್ದಾರೆ ಎನ್ನುವುದು ಒಲಿಂಪಿಕ್ಸ್ ಆರಂಭಗೊಂಡ ಬಳಿಕ ಗೊತ್ತಾಗಬಹುದು.
ಒಲಿಂಪಿಕ್ಸ್‌ಗೆ ಇನ್ನೂ ಹೆಚ್ಚು ಸಮಯ ಇಲ್ಲ. ಜುಲೈ 27ಕ್ಕೆ ಒಲಿಂಪಿಕ್ಸ್ ಆರಂಭವಾಗುತ್ತದೆ. ಆಗಸ್ಟ್ 12ರ ತನಕ ನಡೆಯುವ ಈ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಟೆನಿಸ್‌ನಲ್ಲಿ ಪದಕ ಗೆಲ್ಲುವ ಅವಕಾಶ ಇದೆ. ಆದರೆ ಲಿಯಾಂಡರ್ ಪೇಸ್ ಮಾತ್ರ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಲಿಯಾಂಡರ್ ಪೇಸ್ 1996ರ ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿ ಕಂಚು ಪಡೆದಿದ್ದರು. ಅವರು ಎಟಿಪಿ ಡಬಲ್ಸ್ ರ್ಯಾಂಕಿಂಗ್‌ನಲ್ಲಿ 7ನೆ ಸ್ಥಾನವನ್ನು ಕಾಯ್ದು ಕೊಂಡಿರುವ ಹಿನ್ನೆಲೆಯಲ್ಲಿ ಒಲಿಂಪಿಕ್ಸ್‌ಗೆ ನೇರ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಆದರೆ ಅವರಿಗೆ ಜೊತೆಗಾರರು ಇಲ್ಲದ ಚಿಂತೆ ಕಾಡತೊಡಗಿದೆ. ರೋಹಣ್ ಬೋಪಣ್ಣ, ಮಹೇಶ್ ಭೂಪತಿ, ಸೋಮದೇವ್ ದೇವ್ ವರ್ಮನ್ ಮುಂತಾದ ಘಟಾನುಘಟಿ ಟೆನಿಸ್ ತಾರೆಯರು ಇದ್ದರೂ, ಅವರ್ಯಾರು ಒಲಿಂಪಿಕ್ಸ್‌ಗೆ ನೇರ ಪ್ರವೇಶ ಪಡೆದಿಲ್ಲ.
ವಿಶ್ವ ಟೆನಿಸ್ ರ್ಯಾಂಕಿಂಗ್‌ನಲ್ಲಿ ಟಾಪ್ 10ನಲ್ಲಿ ಸ್ಥಾನ ಪಡೆದಿರುವ ಆಟಗಾರರಿಗೆ ನೇರ ಪ್ರವೇಶದ ಅವಕಾಶ ಇದೆ. ಬೋಪಣ್ಣ, ಭೂಪತಿ, ಸೋಮದೇವ್ ಇವರ್ಯಾರು ಅಗ್ರ 10ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಲಿಯಾಂಡರ್ ಪೇಸ್ ನೇರ ಪ್ರವೇಶದ ಜೊತೆಗೆ ತನ್ನ ಜೊತೆಗಾರನನ್ನು ಆಯ್ಕೆ ಮಾಡುವ ಅವಕಾಶ ಪಡೆದಿದ್ದಾರೆ. ಭೂಪತಿ -ಭೂಪಣ್ಣ ಅವರು ಟಾಪ್ 10ರಲ್ಲಿ ಸ್ಥಾನ ಪಡೆಯದ ಕಾರಣದಿಂದಾಗಿ ಅವರಿಗೆ ಈ ಅವಕಾಶ ಇಲ್ಲ. ಭೂಪತಿ-ಭೂಪಣ್ಣ ಒಂದು ವೇಳೆ ಜೊತೆಯಾಗಿ ಆಡುವುದಿದ್ದರೆ ಅವರಿಗೆ ಒಲಿಂಪಿಕ್ಸ್‌ನಲ್ಲಿ ಆಡುವ ಅವಕಾಶ ಇದೆ. ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ ಇದು ಸ್ಪಷ್ಟಗೊಂಡಿಲ್ಲ. ಪೇಸ್‌ಗೆ ಭೂಪತಿ ಅಥವಾ ಭೂಪಣ್ಣ ಇವರಲ್ಲಿ ಯಾರಾದರೂ ಒಬ್ಬರು ಜೊತೆಗಾರನಾದರೆ ಭಾರತಕ್ಕೆ ಇನ್ನೊಂದು ಜೋಡಿಯನ್ನು ಕಣಕ್ಕಿಳಿಸಲು ಅವಕಾಶ ಇದೆಯೋ? ಎನ್ನುವ ಗೊಂದಲ ಇನ್ನೂ ನಿವಾರಣೆಯಾಗಿಲ್ಲ.
ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಲಿಯಾಂಡರ್ ಪೇಸ್‌ಗೆ ಜೊತೆಗಾರ ಯಾರು ಎನ್ನುವ ವಿಚಾರದಲ್ಲಿ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.ಪೇಸ್ ಇಂತಹ ಸಮಸ್ಯೆ ಯನ್ನು ಎದುರಿಸುತ್ತಿದರೆ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಝಾಗೆ ಲಂಡನ್‌ಗೆ ನೇರ ಪ್ರವೇಶದ ಹಾದಿ ಮುಚ್ಚಿದೆ. ವೈಲ್ಡ್ ಕಾರ್ಡ್ ಮೂಲಕ ಮಾತ್ರ ಒಲಿಂಪಿಕ್ಸ್‌ಗೆ ಪ್ರವೇಶ ಪಡೆಯಬಹುದಾಗಿದೆ.
ವೈಲ್ಡ್ ಕಾರ್ಡ್ ದೊರೆಯುವ ವಿಚಾರ ಇನ್ನೂ ನಿರ್ಧಾರವಾಗಿಲ್ಲ.ಫ್ರೆಂಚ್ ಓಪನ್‌ನಲ್ಲಿ ಸಾನಿಯಾ ಮಿಶ್ರ ಡಬಲ್ಸ್ನಲ್ಲಿ ಮಹೇಶ್ ಭೂಪತಿ ಜೊತೆ ಗ್ರಾನ್ ಸ್ಲಾಮ್ ಪ್ರಶಸ್ತಿ ಬಾಚಿಕೊಂಡಿದ್ದರೂ, ಸಾನಿಯಾಗೆ ಡಬ್ಲುಟಿಎ ಟೆನಿಸ್ ರ್ಯಾಂಕಿಂಗ್‌ನಲ್ಲಿ ಮೇಲೆರಲು ಈ ಗೆಲುವು ನೆರವು ನೀಡಿಲ್ಲ. ಅವರು ಡಬಲ್ಸ್ ರ್ಯಾಂಕಿಂಗ್‌ನಲ್ಲಿ 12ನೆ ಸ್ಥಾನದಲ್ಲಿದ್ದಾರೆ. ಭೂಪತಿ 14ನೆ ಸ್ಥಾನದಲ್ಲಿದ್ದಾರೆ. ಈ ಕಾರಣಕ್ಕಾಗಿ ಲಿಯಾಂಡರ್ ಪೇಸ್ ಜೊತೆ ಸಾನಿಯಾ ಮಿಶ್ರ ಡಬಲ್ಸ್ ಆಡುವ ಅವಕಾಶ ಪಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.ಒಟ್ಟಿನಲ್ಲಿ ಭಾರತದ ಟೆನಿಸ್‌ನಲ್ಲಿ ಮುಂದುವರಿ ದಿರುವ ಗೊಂದಲ ಶುಕ್ರವಾರ ನಡೆಯಲಿರುವ ಭಾರತ ದ ಟೆನಿಸ್ ಸಂಸ್ಥೆಯ ಸಭೆಯಲ್ಲಿ ನಿವಾರಣೆಗೊಳ್ಳುವ ಸಾಧ್ಯತೆ ಇದೆ.
‘ಮುರಿದು ನೇತಾಡುತ್ತಿರುವ ಏಸುವಿನ ಕೈ, ಮುರಿದ ಕಾಲು, ಒಡೆದ ಮುಖ....’’ ಈ ಸಮಾಜದ ಕ್ರೌರ್ಯ ಮತ್ತು ವಿರೂಪಕ್ಕೆ ಹಿಡಿದ ಕನ್ನಡಿಯಂತೆ ಮಾಧ್ಯಮಗಳ ಮುಖಪುಟದಲ್ಲ ...
Click here to post your views ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನ ...
ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...