mail-img print-img

ಯುರೋ ಪಟ್ಟ ಬಿಟ್ಟು ಕೊಡದ ಸ್ಪೇನ್;ಐಕರ್ ಪಡೆಗೆ ಐತಿಹಾಸಿಕ ‘ಹ್ಯಾಟ್ರಿಕ್’ ವಿಜಯ

- ಇಬ್ರಾಹಿಂ ಅಡ್ಕಸ್ಥಳ
ಶುಕ್ರವಾರ - ಜುಲೈ -06-2012

ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ಸ್ಪೇನ್ ಸಾಕರ್ ತಂಡ ನಿರೀಕ್ಷೆಯಂತೆ ಸತತ ಎರಡನೆ ಬಾರಿ ಯುರೋ ಕಪ್ ಚಾಂಪಿಯನ್ ಪಟ್ಟವನ್ನು ಗೆದ್ದುಕೊಂಡಿತು.ಸ್ಪೇನ್ ಯುರೋ ಕಪ್‌ನ 52ವರ್ಷಗಳ ಇತಿಹಾಸದಲ್ಲಿ ಇಂತಹ ಮಹತ್ವದ ಸಾಧನೆ ಮಾಡಿರುವ ಮೊಟ್ಟ ಮೊದಲ ತಂಡ ಎನಿಸಿಕೊಂಡಿದೆ.2008ರ ಯುರೋ ಕಪ್, 2010ರ ಫಿಫಾ ವಿಶ್ವಕಪ್ ಮತ್ತು 2012ರ ಯುರೋ ಕಪ್ ಜಯಿಸಿರುವ ಸ್ಪೇನ್ ಸಾಕರ್ ಜಗತ್ತಿನ ರಾಜ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.ಪೊಲೆಂಡ್ ಮತ್ತು ಉಕ್ರೇನ್ ದೇಶಗಳು ಜಂಟಿಯಾಗಿ ಆಯೋಜಿಸಿದ್ದ ಹದಿನಾಲ್ಕನೆ ಆವೃತ್ತಿಯ ಯುರೋ ಕಪ್ ಫುಟ್ಬಾಲ್ ಟೂರ್ನಮೆಂಟ್ 24ದಿನಗಳ ಉಭಯ ದೇಶಗಳ 8ನಗರಗಳ ಕ್ರೀಡಾಂಗಣಗಳಲ್ಲಿ ನಡೆಯಿತು.ಒಟ್ಟು 16ತಂಡಗಳು ಭಾಗವಹಿಸಿದ್ದ ಈ ಸಾಕರ್ ಹಬ್ಬದಲ್ಲಿ 1,44,0896 ಮಂದಿ ಪ್ರೇಕ್ಷಕರು (ಅಂದರೆ ಸರಾಸರಿ ಪ್ರತಿ ಪಂದ್ಯಕ್ಕೆ ಪ್ರೇಕ್ಷಕರು 46,481) ನೇರವಾಗಿ ವೀಕ್ಷಿಸಿದರು. ಜೂನ್ 8ರಿಂದ ಜು.1ರ ತನಕ ನಡೆದ ಯುರೋ ಕಪ್ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 76ಗೋಲುಗಳು ದಾಖಲಾಗಿತ್ತು. 2008ರಲ್ಲಿ ಆಸ್ಟ್ರೀಯ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ಯುರೋ ಕಪ್‌ಗೆ ಹೋಲಿಸಿದಾಗ ಈ ಬಾರಿ ಕಡಿಮೆ ಗೋಲುಗಳು ದಾಖಲಾಗಿದೆ.


2008 ಮತ್ತು 2004ರ ಯುರೋ ಕಪ್‌ನಲ್ಲಿ ತಲಾ 77 ಗೋಲುಗಳು ದಾಖಲಾಗಿತ್ತು. 2000ರಲ್ಲಿ 85 ಗೋಲುಗಳು ದಾಖಲಾಗಿರುವುದು ಈ ಹಿಂದಿನ ಗರಿಷ್ಠ ಗೋಲುಗಳ ದಾಖಲೆ ಆಗಿತ್ತು. ಆದರೆ ಪ್ರೇಕ್ಷಕರ ಸಂಖ್ಯೆ ಈ ಬಾರಿ ಜಾಸ್ತಿಯಾಗಿದೆ ಎನ್ನುವುದು ವಿಶೇಷ.ಅದರಲ್ಲೂ ಮುಖ್ಯವಾಗಿ ಕೀವ್‌ನಲ್ಲಿ ನಡೆದ ಸ್ವೀಡನ್ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಪಂದ್ಯಕ್ಕೆ 64,640 ಪ್ರೇಕ್ಷಕರು ಸಾಕ್ಷಿಯಾಗಿದ್ದರು.ಸ್ಪೇನ್ ದೇಶ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಪರಿಸ್ಥಿತಿ ಹೀಗಿದ್ದರೂ ಅಲ್ಲಿನ ಫುಟ್ಬಾಲ್ ತಂಡ ಕಠಿಣ ಪರಿಶ್ರಮದ ಮೂಲಕ ಯಶಸ್ಸು ಸಂಪಾದಿಸಿದೆ. ದೇಶದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ.ದೇಶ ಆರ್ಥಿಕ ಸಂಕಷ್ಟದಲ್ಲಿದ್ದರೂ ಸ್ಪೇನ್‌ನಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಧಕ್ಕೆಯಾಗಿಲ್ಲ.

ಅಲ್ಲಿ ಕ್ರೀಡಾಪಟುಗಳು ತಮ್ಮಲ್ಲಿನ ವ್ಯವಸ್ಥೆಯ ಬಗ್ಗೆ ತಕರಾರು ಎತ್ತದೆ ಲಭ್ಯ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಂಡು ಅಪೂರ್ವ ಸಾಧನೆ ಮಾಡಿದ್ದಾರೆ.ಸ್ಪೇನ್‌ನ ಸರಕಾರ ಈಗಾಗಲೆ ಆರ್ಥಿಕ ಸಂಕಷ್ಟದಿಂದ ತನ್ನನ್ನು ಪಾರು ಮಾಡಲು 100 ಬಿಲಿಯನ್ ಯುರೋಸ್ ನೀಡುವಂತೆ ಯುರೋಪಿಯನ್ ಯೂನಿಯನ್‌ಗೆ ಮನವಿ ಮಾಡಿದೆ.ಸ್ಪೇನ್ ತಂಡ ಯುರೋ ಕಪ್ ಜಯಿಸಿರುವುದು ಅಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೆಚ್ಚಿನ ಶಕ್ತಿಯನ್ನು ಒದಗಿಸಿದೆ ಎಂದು ಹೇಳಬಹುದು.

ಫೈನಲ್ ಸಮರ: ಸ್ಪೇನ್ ತಂಡ ಈ ಬಾರಿ ಜರ್ಮನಿ, ಇಟಲಿ, ಪೋರ್ಚುಗಲ್, ಫ್ರಾನ್ಸ್ ತಂಡಗಳ ಚಾಂಪಿಯನ್ ಪಟ್ಟಕ್ಕೇರುವ ಕನಸನ್ನು ನುಚ್ಚು ನೂರು ಮಾಡಿದೆ.ಫೈನಲ್‌ನಲ್ಲಿ ಇಟಲಿ ತಂಡವನ್ನು ತನ್ನ ಬಿಗು ರಕ್ಷಣಾ ಕೋಟೆ ಕಟ್ಟಿ ಗೋಲು ಗಳಿಸಲು ಅವಕಾಶ ನೀಡಲಿಲ್ಲ.ಆಕ್ರಮಣಕಾರಿ ಆಟ ಪ್ರದರ್ಶಿಸಿ 4ಗೋಲುಗಳನ್ನು ಕಬಳಿಸಿ ಭರ್ಜರಿ ಗೆಲುವು ಸಾಧಿಸಿತು.ಫೈನಲ್ ಪಂದ್ಯ ವಿಶ್ವದ ನಂ.1 ಗೋಲು ಕೀಪರ್ ಹಾಗೂ ಸ್ಪೇನ್ ತಂಡದ ನಾಯಕ ಐಕರ್ ಕ್ಯಾಸಿಲ್ಲಾಸ್ , ಇಟಲಿಯ ಗೋಲು ಕೀಪರ್ ಹಾಗೂ ನಾಯಕ ಜಿಯಾನ್ಲುಗಿ ಬಫೋನ್ ನಡುವಿನ ಸಮರದಂತೆ ಬಿಂಬಿತವಾಗಿತ್ತು.ಈ ಸಮರದಲ್ಲಿ ಐಕರ್ ಪಡೆಯ ಡೇವಿಡ್ ಸಿಲ್ವ (14ನೆ ನಿಮಿಷ), ಜಾರ್ಡಿ ಅಲ್ಬಾ(41ನೆ ನಿಮಿಷ), ಫೆರ್ನಾಂಡೊ ಟೊರಸ್(84ನೆ ನಿಮಿಷ) ಮತ್ತು ಜುವಾನ್ ಮ್ಯಾಟಾ (88ನೆ ನಿಮಿಷ) ಚೆಂಡನ್ನು ಬಫೋನ್ ಕಣ್ಣು ತಪ್ಪಿಸಿ ಗುರಿ ತಲುಪಿಸಿ ತಂಡಕ್ಕೆ ಅಪೂರ್ವ ಯಶಸ್ಸು ತಂದು ಕೊಟ್ಟರು.

ಇಟಲಿಯ ಆಟಗಾರರು ಸ್ಪೇನ್ ತಂಡದ ಆಟಗಾರರ ಅತ್ಯುತ್ತಮ ಆಟದ ಮುಂದೆ ಸೊಲ್ಲೆತ್ತದೆ ಶರಣಾದರು. ಮೊದಲಾರ್ಧದಲ್ಲಿ ಇಟಲಿಯ ಕಡೆಯಿಂದ ಗೋಲು ಬರದಿದ್ದರೂ ಆಟಗಾರರು ಗೋಲು ಗಳಿಸುವ ನಿಟ್ಟಿನಲ್ಲಿ ಶ್ರಮಿಸಿದ್ದರು.ಇಟಲಿ ತಂಡದ ಆಟಗಾರರು ಅನಗತ್ಯವಾಗಿ ಚೆಂಡಿಗಾಗಿ ಒದ್ದಾಡಿ ಪಂದ್ಯದಲ್ಲಿ ಬಳಲಿದರು.ಗಾಯಾಳುಗಳ ಸಮಸ್ಯೆ ಅವರನ್ನು ಕಾಡಿತು. ಉತ್ತರಾರ್ಧದಲ್ಲಿ ಇಟಲಿ ಆಟಗಾರರ ಸಂಖ್ಯೆ 10ಕ್ಕೆ ಇಳಿದಿತ್ತು.ಆದರೆ ಸ್ಪೇನ್ ತಂಡ ದೈಹಿಕ ಸಾಮರ್ಥ್ಯವನ್ನು ಪಂದ್ಯದ ಕೊನೆಯ ತನಕ ಉಳಿಸಿಕೊಂಡು ಕ್ರೀಡಾ ಮನೋಭಾವ ಪ್ರದರ್ಶಿಸಿ ಆ ನಿಟ್ಟಿನಲ್ಲಿ ಯಶಸ್ಸು ಕಂಡರು.

ಇಟಲಿ ತಂಡದ ಯುವ ಸ್ಟ್ರೈಕರ್ ಮಾರಿಯೊ ಬಲೊಟೆಲ್ಲಿ ಬಗ್ಗೆ ಫೈನಲ್ ಪೂರ್ವದಲ್ಲಿ ಇಟ್ಟುಕೊಂಡ ನಿರೀಕ್ಷೆ ಹುಸಿಯಾಯಿತು. ಅವರಿಗೆ ಐಕರ್ ಮುಂದೆ ತನ್ನ ಕಾಲ್ಚಳಕ, ತಲೆ ಚಳಕ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ತನ್ನ ಗುರಿ ಮುಟ್ಟಿದಾಗ ಅಂಗಿ ಬಿಚ್ಚಿ ಓಡಾಡುವ ಬಲೊಟೆಲ್ಲಿ ಫೈನಲ್‌ನಲ್ಲಿ ನಿಸ್ಸಹಾಯಕರಾಗಿದ್ದರು.ಅವರು ಕೆಲವೊಂದು ಅನಗತ್ಯ ಹೊಡೆತಗಳಿಗೆ ಯತ್ನಿಸಿ ಕೈ ಸುಟ್ಟುಕೊಂಡರು.

ಇದರಿಂದ ಇಟಲಿ ಭಾರೀ ದಂಡ ತೆರಬೇಕಾಯಿತು.ಪಂದ್ಯದಲ್ಲಿ ಸ್ಪೇನ್ ಶೇ 57ರಷ್ಟು ನಿಯಂತ್ರಣ ಹೊಂದಿತ್ತು. 14 ಬಾರಿ ಗೋಲು ಗಳಿಸುವ ಪ್ರಯತ್ನ ನಡೆಸಿತ್ತು.6 ಬಾರಿ ಗುರಿಯತ್ತ ಚೆಂಡು ಸಾಗಿದ್ದರೂ, 4 ಗೋಲು ತಂಡದ ಖಾತೆಗೆ ಜಮೆ ಆಗಿತ್ತು. 3 ಬಾರಿ ಆಫ್ ಸೈಡ್ ಆಗಿತ್ತು.

ಇಟಲಿ ಚೆಂಡಿನ ಮೇಲೆ ಶೇ 43ರಷ್ಟು ನಿಯಂತ್ರಣ ಸಾಧಿಸಿತ್ತು. 11ಬಾರಿ ಗೋಲು ಗಳಿಸುವ ಪ್ರಯತ್ನ ನಡೆಸಿತು.ಎಲ್ಲವೂ ವ್ಯರ್ಥಗೊಂಡಿತು.3ಬಾರಿ ನಡೆಸಿದ ಪ್ರಯತ್ನ ಆಫ್‌ಸೈಡ್ ಆಗಿತ್ತು. ಸ್ಪೇನ್ ತಂಡದಲ್ಲಿ ಕಂಡು ಬಂದಷ್ಟು ಹೊಂದಾಣಿಕೆ ಮತ್ತು ಶಿಸ್ತು ಸಂಟಘಟಿತ ಪ್ರಯತ್ನ ಇಟಲಿ ತಂಡದಲ್ಲಿ ಕಂಡು ಬರಲಿಲ್ಲ.ಇದು ಅವರ ಸೋಲಿಗೆ ಪ್ರಮುಖ ಕಾರಣ ಎನ್ನಬಹುದು.

ಗೋಲ್ಡನ್ ಬೂಟ್:ಟೂರ್ನಿಯಲ್ಲಿ ಗರಿಷ್ಠ ಗೋಲು (3)ದಾಖಲಿಸಿದ ಸ್ಪೇನ್‌ನ ಫೆರ್ನಾಂಡೊ ಟೋರಸ್ ’ಗೋಲ್ಡನ್ ಬೂಟ್’ ಪ್ರಶಸ್ತಿ ಪಡೆದರು.ಟೂರ್ನಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ್ದ 2010ರ ಫಿಫಾ ವಿಶ್ವಕಪ್ ಫೈನಲ್ ಹೀರೋ ಇನಿಯೆಸ್ಟಾಗೆ 2012ರ ಯುರೋ ಶ್ರೇಷ್ಠ ಆಟಗಾರ ಪ್ರಶಸ್ತಿ ದೊರೆಯಿತು.ಸ್ಪೇನ್ ಫುಟ್ಬಾಲ್ ತಂಡ ದಿಢೀರನೆ ಯಶಸ್ಸು ಗಳಿಸಿಲ್ಲ. ಅದು ಈ ಮಟ್ಟಕ್ಕೆ ಬೆಳೆಯಬೇಕಾದರೆ ಕಠಿಣ ಸವಾಲುಗಳನ್ನು ಎದುರಿಸಿದೆ.

ಸ್ಪೇನ್ ತಂಡದ ಹುಟ್ಟು,ಬೆಳವಣಿಗೆ:1909ರಲ್ಲಿ ರಾಯಲ್ ಸ್ಪೇನಿಸ್ ಫುಟ್ಬಾಲ್ ಫೆಡರೇಶನ್ ಆಗಿ ಅಸ್ತಿತ್ವಕ್ಕೆ ಬಂದ ಸ್ಪೇನ್ ಫುಟ್ಬಾಲ್ ಸಂಸ್ಥೆ 1913ರಲ್ಲಿ ಫಿಫಾದ ಮಾನ್ಯತೆ ಪಡೆದಿತ್ತು.ಸ್ಪೇನ್ ತಂಡ ರೂಪುಗೊಂಡು ಸುಮಾರು 11ವರ್ಷಗಳ ತನಕ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿರಲಿಲ್ಲ.1920ರ ಒಲಿಂಪಿಕ್ ಗೇಮ್ಸ್‌ನಲ್ಲಿ ಡೆನ್ಮಾರ್ಕ್ ತಂಡವನ್ನು ಮಣಿಸುವ ಮೂಲಕ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿತ್ತು.1934ರಲ್ಲಿ ಫಿಫಾ ವಿಶ್ವಕಪ್‌ಗೆ ಪಾದಾರ್ಪಣೆ ಮಾಡಿತು.ಅರ್ಹತಾ ಸುತ್ತಿನಲ್ಲಿ ಪೋರ್ಚುಗಲ್‌ನ್ನು 9-0 ಮತ್ತು 2-1 ಅಂತರದಿಂದ ಮಣಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದಿತ್ತು.ಪ್ರಥಮ ಸುತ್ತಿನಲ್ಲಿ ಬ್ರೆಝಿಲ್‌ಗೆ 3-1 ಅಂತರದಲ್ಲಿ ಸೋಲುಣಿಸಿದ ಸ್ಪೇನ್ ಆ ಬಳಿಕ ಮೊದಲ ಬಾರಿ ಕ್ವಾರ್ಟರ್ ಫೈನಲ್ ತಲುಪಿತ್ತು.

1934ರ ವಿಶ್ವಕಪ್ ಬಳಿಕ 1950ರ ತನಕ ಸ್ಪೇನಿಸ್ ಸಿವಿಲ್ ವಾರ್ ಮತ್ತು ಎರಡನೆ ಜಾಗತಿಕ ಯುದ್ಧದ ಪರಿಣಾಮ ಸ್ಪೇನ್ ಸಾಕರ್ ತಂಡಕ್ಕೆ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪಂದ್ಯ ಆಡುವ ಅವಕಾಶ ಸಿಗಲಿಲ್ಲ.1950ರ ಫಿಫಾ ವಿಶ್ವಕಪ್‌ನಲ್ಲಿ ಭಾಗವಹಿಸಿ ನಾಲ್ಕನೆ ಸ್ಥಾನ ಪಡೆಯಿತು.2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಫಿಫಾ ವಿಶ್ವಕಪ್‌ನಲ್ಲಿ ಹಾಲೆಂಡ್ ನ್ನು ಮಣಿಸಿ ಮೊದಲ ಬಾರಿ ಸಾಕರ್ ಜಗತ್ತಿನ ರಾಜನಾಗಿ ಹೊರಹೊಮ್ಮಿತ್ತು.

ಯುರೋ ಕಪ್‌ನಲ್ಲಿ 1964ರಲ್ಲಿ ಮೊದಲ ಬಾರಿ ಪ್ರಶಸ್ತಿ ಜಯಿಸಿದ ಸ್ಪೇನ್ ತಂಡ ಆ ಬಳಿಕ 2008 ಮತ್ತು 2012ರಲ್ಲಿ ಪ್ರಶಸ್ತಿ ಜಯಿಸಿ ಗರಿಷ್ಠ 3ಬಾರಿ ಪ್ರಶಸ್ತಿ ಜಯಿಸಿದ ಜರ್ಮನಿ ತಂಡದ ಸಾಧನೆಯನ್ನು ಸರಿಗಟ್ಟಿದೆ.ಒಲಿಂಪಿಕ್ಸ್‌ನಲ್ಲಿ 1992ರಲ್ಲಿ ಚಾಂಪಿಯನ್ ಆಗಿತ್ತು. 2012ರಲ್ಲಿ ಚಾಂಪಿಯನ್‌ಪಟ್ಟಕ್ಕಾಗಿ ಸೆಣಸಾಡಲು ಅರ್ಹತೆ ಪಡೆದಿದೆ.




Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...


ನಿಮ್ಮ ಅನಿಸಿಕೆ

postClick here to post your views
EPAPER
access

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್

ರಾಜಕೀಯ ಪಕ್ಷಗಳ ಆತ್ಮವಿಮರ್ಶೆ ಅಗತ್ಯ

ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...


- ನಾ ದಿವಾಕರ್