
ಲಂಡನ್ ಒಲಿಂಪಿಕ್ಸ್ ಹತ್ತಿರ ಬಂದಿದೆ. ಕಳೆದ ಬೀಜಿಂಗ್ ಒಲಿಂಪಿಕ್ಸ್ ಸಮಯದಲ್ಲಿ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿತ್ತು. ಇದೀಗ ಮತ್ತೆ ಲಂಡನ್ ಒಲಿಂಪಿಕ್ಸ್ ವೇಳೆ ಟೀಮ್ ಇಂಡಿಯಾ ಏಕದಿನ ಸರಣಿಯನ್ನಾಡಲು ಲಂಕಾ ತಲುಪಿದೆ. 2008ರ ಬೀಜಿಂಗ್ ಒಲಿಂಪಿಕ್ಸ್ ವೇಳೆ ಭಾರತ ಮೂರು ಟೆಸ್ಟ್ ಮತ್ತು ಐದು ಏಕದಿನ ಸರಣಿಯನ್ನಾಡಲು ಲಂಕಾ ಪ್ರವಾಸ ಕೈಗೊಂಡಿದ್ದರೆ, ಈ ಬಾರಿ ಐದು ಏಕದಿನ ಮತ್ತು ಏಕೈಕ ಟ್ವೆಂಟಿ20 ಪಂದ್ಯವನ್ನು ಲಂಕಾ ವಿರುದ್ಧ ಆಡಲಿದೆ.ಭಾರತದ ಕ್ರಿಕೆಟ್ ತಂಡ ಸುದೀರ್ಘ ಬಿಡುವಿನ ಬಳಿಕ ಕ್ರೀಡಾಂಗಣಕ್ಕೆ ಇಳಿಯುತ್ತಿದೆ. ಕಳೆದ ಹತ್ತು ವರ್ಷಗಳ ಬಳಿಕ ಎರಡನೆ ಬಾರಿ ಸುದೀರ್ಘ ಬಿಡುವು ಸಿಕ್ಕಿದೆ. ಈ ಅವಧಿಯಲ್ಲಿ ಟೀಮ್ ಇಂಡಿಯಾ ಸದಸ್ಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ಬದಲಾಗಿದ್ದಾರೆ. ಹಿಂದಿನ ಕಹಿ ಘಟನೆಗಳನ್ನು ಕಡತದಿಂದ ದೂರ ಇರಿಸಿ ವಿಜಯದ ಗುರಿಯೆಡೆಗೆ ಸಾಗುವ ನಿಟ್ಟಿನಲ್ಲಿ ಚಿಂತನೆ ನಡೆಸಲು ತಂಡಕ್ಕೆ ಕಾಲಾವಕಾಶ ಸಿಕ್ಕಿದೆ ಎಂದು ಹೇಳಬಹುದು.ಟೀಮ್ ಇಂಡಿಯಾ ಕೊನೆಯ ಬಾರಿ ದಕ್ಷಿಣ ಆಫ್ರಿಕಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮಾರ್ಚ್ 30ರಂದು ಟ್ವೆಂಟಿ 20 ಪಂದ್ಯ ಆಡಿತ್ತು. ಆ ಬಳಿಕ ಟೀಮ್ ಇಂಡಿಯಾಕ್ಕೆ ನಿಗದಿತ ಸರಣಿ ಇರಲಿಲ್ಲ. ಹೀಗಾಗಿ ತಂಡದ ಆಟಗಾರರು ಐಪಿಎಲ್‌ನಲ್ಲಿ ಬ್ಯುಸಿ ಆಗಿದ್ದರು.
ಮಾ.31ರಿಂದ ಜು.20ರ ತನಕ ಅಂದರೆ 112 ದಿನಗಳ ಬಿಡುವಿನ ಬಳಿಕ ಟೀಮ್ ಇಂಡಿಯಾ ಲಂಕಾದ ಹಂಬನ್‌ತೋಟಾದಲ್ಲಿ ಜು.21ರಂದು ಐದು ಏಕದಿನ ಪಂದ್ಯಗಳ ಸರಣಿಯನ್ನು ಆರಂಭಿಸಲಿದೆ.ಟೀಮ್ ಇಂಡಿಯಾಕ್ಕೆ 2003ರಲ್ಲಿ 169 ದಿನಗಳ ಬಿಡುವು ಸಿಕ್ಕಿತ್ತು. 2005ರಲ್ಲಿ 103, 2004ರಲ್ಲಿ 90, 2005ರಲ್ಲಿ 70 ದಿನ, 2009ರಲ್ಲಿ 67 ದಿನ, 2010ರಲ್ಲಿ 62 ದಿನ ಮತ್ತು 2011ರಲ್ಲಿ 62 ದಿನ ಬಿಡುವಿನ ಸವಿಯನ್ನು ಅನುಭವಿಸಿತ್ತು. 2002ರಲ್ಲಿ ಪ್ರತಿ ತಿಂಗಳು ಟೆಸ್ಟ್ ಅಥವಾ ಏಕದಿನ ಸರಣಿ ಇತ್ತು. ಮಾ.20ರಿಂದ ಎ.10ರ ತನಕ 20 ದಿನಗಳ ಕಾಲ ಬಿಡುವು ದೊರೆತದ್ದು ಆ ವರ್ಷದ ಸುಧೀರ್ಘ ಬಿಡುವು ಎನ್ನಬಹುದು.
ಬೌಚರ್ ವಿದಾಯ: ಟೀಮ್ ಇಂಡಿಯಾ ಸುಧೀರ್ಘ ಬಿಡುವಿನ ಬಳಿಕ ಕ್ರೀಡಾಂಗಣಕ್ಕೆ ಇಳಿಯುವುದು ಒಂದಡೆ ಯಾದರೆ ವಿಶ್ವ ಕ್ರಿಕೆಟ್‌ನಲ್ಲಿ ಈ ಅವಧಿಯಲ್ಲಿ ಕೆಲವೊಂದು ಸ್ವಾರಸ್ಯಕರ ಘಟನೆ ನಡೆದಿದೆ. ಮುಖ್ಯವಾಗಿ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಮಾರ್ಕ್ ಬೌಚರ್ 999 ಬಲಿ ಯೊಂದಿಗೆ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.ಕೌಂಟಿ ಗ್ರೌಂಡ್‌ನಲ್ಲಿ ಜು.9ರಂದು ಎರಡು ದಿನಗಳ ಪ್ರದರ್ಶನ ಪಂದ್ಯದ ಮೊದಲ ದಿನ ದಕ್ಷಿಣ ಆಫ್ರಿಕಾದ ಬೌಲರ್ ಇಮ್ರಾನ್ ತಾಹಿರ್ ಎಸೆದ 46ನೆ ಓವರ್‌ನ ಕೊನೆಯ ಎಸೆತದಲ್ಲಿ ಸಾಮರ್ ಸೆಟ್ ತಂಡದ ಬ್ಯಾಟ್ಸ್‌ಮನ್ ಜಮಾಲ್ ಹುಸೈನ್ ಚೆಂಡನ್ನು ಎದುರಿಸಲು ಯತ್ನಿಸಿ ದರು. ಆದರೆ ಚೆಂಡು ಅವರ ಬ್ಯಾಟ್‌ಗೆ ಸಿಗದೆ ಸ್ಟಂಪ್‌ಗೆ ಬಡಿಯಿತು. ಇದೇ ವೇಳೆ ಸ್ಟಂಪ್‌ನ ಮೇಲೆ ಇರಿಸಲಾಗಿದ್ದ ಬೇಲ್ ವಿಕೆಟ್ ಕೀಪರ್ ಬೌಚರ್ ಅವರ ಎಡ ಗಣ್ಣಿಗೆ ಬಡಿಯಿತು.
ಈ ಅನಿರೀಕ್ಷಿತ ಘಟನೆಯ ಬಳಿಕ ಬೌಚರ್ ಕ್ರಿಕೆಟ್‌ಗೆ ವಿದಾಯ ಘೋಷಿಸುವ ನಿರ್ಧಾರವನ್ನು ಕೈಗೊಂಡರು. ಬೌಚರ್ ವಿಕೆಟ್ ಕೀಪರ್ ಆಗಿ 1000 ಬಲಿ ತೆಗದುಕೊಂಡ ದಾಖಲೆ ನಿರ್ಮಿಸುವ ಕನಸು ನನಸಾಗಲಿಲ್ಲ. ವಿಶ್ವ ಕ್ರಿಕೆಟ್‌ನಲ್ಲಿ ಗುರಿ ಮುಟ್ಟುವ ಯತ್ನದಲ್ಲಿ ಎಡವಿದ ಶ್ರೇಷ್ಠ ಕ್ರಿಕೆಟಿಗರ ಸಾಲಿಗೆ ಬೌಚರ್ ಸೇರ್ಪಡೆಗೊಂಡರು. ಒಂದು ವೇಳೆ 1 ಬಲಿ ಸಿಕ್ಕಿದ್ದರೆ ಬೌಚರ್ ಪಾಲಿಗೆ ಅದೊಂದು ಅಪೂರ್ವ ಸಾಧನೆ ಆಗಿ ಅವರ ವೃತ್ತಿ ಬದುಕಿನ ಕಡತದಲ್ಲಿ ಸೇರ್ಪಡೆಯಾಗುವ ಸಾಧ್ಯತೆ ಇತ್ತು.
ಬೌಚರ್ ಅವರ ಹಾಗೆ ಆಸ್ಟ್ರೇಲಿಯದ ದಂತಕಥೆ ಡಾನ್ ಬ್ರಾಡ್ಮನ್ ಬ್ಯಾಟಿಂಗ್ ಸರಾಸರಿಯನ್ನು 99.94ರಲ್ಲಿ ಕೊನೆಗೊಳಿದ್ದರು. 1948ರಲ್ಲಿ ಕೊನೆಯ ಟೆಸ್ಟ್‌ನಲ್ಲಿ ಶೇ.100 ಸಾಧನೆಗೆ 4ರನ್‌ಗಳ ಅಗತ್ಯತೆ ಇತ್ತು. ಆದರೆ ಶೂನ್ಯಕ್ಕೆ ಔಟಾಗಿ ಈ ಅವಕಾಶವನ್ನು ಕಳೆದುಕೊಂಡಿದ್ದರು. ಅಂತಿಮವಾಗಿ 1 ರನ್, 1ವಿಕೆಟ್, 1 ಕ್ಯಾಚ್ ಪಡೆಯಲು ಸಾಧ್ಯವಾಗದೆ ನಿಗದಿತ ಗುರಿ ತಲುಪುವಲ್ಲಿ ಎಡವಿದ ಹಲವು ಮಂದಿ ಕ್ರಿಕೆಟಿಗರು ವಿಶ್ವ ಕ್ರಿಕೆಟ್‌ನಲ್ಲಿ ಗುರುತಿಸಿಕೊಂಡಿದ್ದಾರೆ.
ಇಂಗ್ಲೆಂಡ್‌ನ ಟೆಸ್ಟ್ ಕ್ರಿಕೆಟಿಗ ಟಾಮ್ ಹಾವರ್ಡ್ 1999 ರನ್(1896 ರಿಂದ 1909), ಆಸ್ಟ್ರೇಲಿಯದ ಅರ್ಥರ್ ಮೈಲೆ 99 ವಿಕೆಟ್(1920ರಿಂದ 1926). ಡೇವಿಡ್ ಬೂನ್ 99 ಕ್ಯಾಚ್(1984 ರಿಂದ 1996), ವಿಕೆಟ್ ಕೀಪರ್‌ಗಳಾದ ಭಾರತದ ನಯನ್ ಮೋಂಗಿಯ 99 ಕ್ಯಾಚ್(1994-2001), ಆಸ್ಟ್ರೇಲಿಯದ ಜೂನಿಯರ್ ಮುರ್ರೆ 99 ಕ್ಯಾಚ್ (1993-2002) ಸಂಪಾದಿಸಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದರು.
ನ್ಯೂಝಿಲೆಂಡ್‌ನ ಬೌಲರ್ ನಥಾನ್ ಅಸ್ಲೆ 99 ವಿಕೆಟ್, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಹ್ಯಾನ್ಸಿ ಕ್ರೋನಿ 99 ಏಕದಿನ ವಿಜಯ(1994-2000) ಮತ್ತು ಭಾರತದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ 99ಟೆಸ್ಟ್ (1984-2000) ಆಡಿ ವೃತ್ತಿ ಬದುಕನ್ನು ಕೊನೆಗೊಳಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಹನೀಫ್ ಮುಹಮ್ಮದ್ 1959ರ ಜನವರಿಯಲ್ಲಿ 499 ರನ್‌ಗೆ ಔಟಾಗಿದ್ದರು. 35ವರ್ಷಗಳ ಕಾಲ ಈ ದಾಖಲೆಯನ್ನು ಯಾರಿಗೂ ಸರಿಗಟ್ಟಲು ಸಾಧ್ಯವಾಗಲಿಲ್ಲ.
1994ರಲ್ಲಿ ಬ್ರಿಯಾನ್ ಲಾರಾ 501 ರನ್ ಸಿಡಿಸಿ ತನ್ನ ಹೆಸರಿಗೆ ಹೊಸ ದಾಖಲೆಯನ್ನು ಬರೆದುಕೊಂಡರು. ಮಾರ್ಟಿನ್ ಕ್ರೊವ್ (ನ್ಯೂಝಿಲೆಂಡ್ ) 299ರನ್, ಮುಹಮ್ಮದ್ ಅಝರುದ್ದೀನ್ (ಭಾರತ)199, ಮ್ಯಾಥ್ಯೂವ್ ಎಲಿಯಟ್ (ಆಸ್ಟ್ರೇಲಿಯ) 199 ದ್ವಿಶತಕದ ಸಾಧನೆ ಮಾಡುವಲ್ಲಿ ಮುಗ್ಗರಿಸಿದ್ದರು.
ನೊಮಾನ್ ಯಾರ್ದಿಲಿ (ಇಂಗ್ಲೆಂಡ್), ಜಾನ್ ಬೆಕ್ (ನ್ಯೂಝಿಲೆಂಡ್),ಮಕ್ಸೂದ್ ಅಹ್ಮದ್(ಪಾಕಿಸ್ತಾನ), ರುಶಿ ಶ್ರುತಿ(ಭಾರತ), ಮಾರ್ಟಿಯನ್ ಮಾಕ್ಸಿಯನ್(ಇಂಗ್ಲೆಂಡ್), ದೀಪಕ್ ಪಟೇಲ್(ನ್ಯೂಝಿಲೆಂಡ್), ಅಲೆಕ್ಸ್ ಟುಡರ್(ಇಂಗ್ಲೆಂಡ್), ಎಸ್ ಕೆ ವಾರ್ನ್(ಆಸ್ಟ್ರೇಲಿಯ), ಅಸಿಮ್ ಕಮಾಲ್(ಪಾಕಿಸ್ತಾನ) ಇವರೆಲ್ಲ 99 ರನ್‌ಗೆ ಔಟಾಗಿ ಶತಕ ದಾಖಲಿಸುವ ಅವಕಾಶ ದಿಂದ ವಂಚಿತಗೊಂಡಿದ್ದರು.
ಲಂಕಾ ಪ್ರವಾಸದ ಬಗ್ಗೆ ಒಂದಿಷ್ಟು..
ಭಾರತ ಈ ಬಾರಿ ಲಂಕಾ ಪ್ರವಾಸದಲ್ಲಿ ಐದು ಏಕದಿನ ಪಂದ್ಯ ಮತ್ತು ಒಂದು ಟ್ವೆಂಟಿ-20 ಪಂದ್ಯವನ್ನಾಡಲಿದೆ. ಮುಂದೆ ಲಂಕಾದಲ್ಲಿ ಟ್ವೆಂಟಿ 20 ವಿಶ್ವಕಪ್ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ಈ ಪ್ರವಾಸ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಹಾಯಕವಾಗಲಿದೆ. ಲಂಕಾ ಸರಣಿ ಮುಗಿದ ಬಳಿಕ ಭಾರತ ನ್ಯೂಝಿಲೆಂಡ್, ಇಂಗ್ಲೆಂಡ್, ಪಾಕಿಸ್ತಾನ ಮತ್ತು ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ಸರಣಿಯನ್ನು ಆಡಲಿದೆ. ಹೀಗಾಗಿ ಲಂಕಾ ಪ್ರವಾಸದಲ್ಲಿ ಭಾರತ ಗೆಲುವಿನ ಅಭಿಯಾನ ಆರಂಭಿಸುವ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ. ಭಾರತದ ವಿರುದ್ಧ ಸೋತು ಎರಡನೆ ಬಾರಿ ವಿಶ್ವ ಚಾಂಪಿಯನ್ ಪ್ರಶಸ್ತಿ ಪಡೆಯುವಲ್ಲಿ ಮುಗ್ಗರಿಸಿದ ಶ್ರೀಲಂಕಾ ತಂಡ ತನ್ನ ತವರಲ್ಲಿ ವಿಶ್ವ ಚಾಂಪಿಯನ್ ಭಾರತವನ್ನು ಎದುರಿಸಲು ತಯಾರಿ ನಡೆಸಿದೆ.
ಶ್ರೀಲಂಕಾ ತಂಡ 2012ರ ಜೂನ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಿರುವ ಎರಡು ಏಕದಿನ ಪಂದ್ಯಗಳನ್ನು ಜಯಿಸಿದೆ. ಭಾರತ ಕಳೆದ ಮಾರ್ಚ್‌ನಲ್ಲಿ ಏಷ್ಯಾಕಪ್‌ನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಲಂಕಾ ಮತ್ತು ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿತ್ತು. ಆದರೆ ಬಾಂಗ್ಲಾ ವಿರುದ್ಧ ಸೋಲು ಅನುಭವಿಸಿದೆ. ಭಾರತ ತಂಡ ಲಂಕಾದ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಈ ವರೆಗೆ ಶೇ. 58.13 ಯಶಸ್ಸು ಸಾಧಿಸಿದ ದಾಖಲೆಯನ್ನು ಹೊಂದಿದೆ.
ಹೈಲೈಟ್ಸ್
ಭಾರತ-ಲಂಕಾ ಹೆಡ್ ಟು ಹೆಡ್ ಆಡಿರುವ ಏಕದಿನ ಪಂದ್ಯಗಳು : 134, ಭಾರತಕ್ಕೆ ಗೆಲುವು 71, ಸೋಲು 51, ಟೈ 1 ಮತ್ತು ಫಲಿತಾಂಶ ರಹಿತ 1.
ಟ್ವೆಂಟಿ 20 ಪಂದ್ಯ:4, ಭಾರತಕ್ಕೆ ಗೆಲುವು 2, ಸೋಲು 2.
*ಗರಿಷ್ಠ ಸ್ಕೋರ್:ಭಾರತ 373/6(1999ರ ವಿಶ್ವಕಪ್ ಇಂಗ್ಲೆಂಡ್), ಲಂಕಾದ ಗರಿಷ್ಠ ಸ್ಕೋರ್ 320/8(ಕೊಲೊಂಬೊ). *ಗರಿಷ್ಠ ವೈಯಕ್ತಿಕ ಸ್ಕೋರ್ :ನತ್ ಜಯಸೂರ್ಯ (ಲಂಕಾ) 189(161 ಎ, 21 ಬೌ, 4 ಸಿ) ಶಾರ್ಜದಲ್ಲಿ. ಮಹೇಂದ್ರ ಸಿಂಗ್ ಧೋನಿ(ಭಾರತ) ಔಟಾಗದೆ 183 (145 ಎ, 15 ಬೌ, 10 ಸಿ) ಜೈಪುರ.
*ಶ್ರೇಷ್ಠ ಬೌಲಿಂಗ್:ಮತ್ತಯ್ಯ ಮುರಳೀಧರನ್ (ಲಂಕಾ) 30ಕ್ಕೆ 7. ಆಶಿಶ್ ನೆಹ್ರಾ 6 ವಿಕೆಟ್.
*ಗರಿಷ್ಠ ಜೊತೆಯಾಟ:ಗಂಗುಲಿ-ದ್ರಾವಿಡ್ 318 ರನ್ ಟೌಂಟನ್, ಅಟಪಟ್ಟು- ಜಯವರ್ಧನೆ 226 ರನ್ ಶಾರ್ಜಾ.
ರಾಜ್ಯಾದ್ಯಂತ ಮಳೆ ಚುರುಕುಗೊಳ್ಳುತ್ತಿದೆ. ಈ ಸಾಲಿನಲ್ಲಿ ಮಳೆ ನಿರೀಕ್ಷೆಯಷ್ಟು ಬರದೆ ಇದ್ದರೂ, ಮುಂದಿನ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ರಾಜ್ಯಾದ್ಯ ...
Click here to post your views ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...
ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...