
ಕಮಲ ಮಹಿಳೆಯಾಗಿ ಬೆಳೆದು ಬಂದ ಯಶೋಗಾಥೆಯನ್ನು ವಾರ್ತಾಭಾರತಿಯ ಜೂನ್ 12ರ ಸಂಚಿಕೆಯಲ್ಲಿ ಹಂಚಿ ಕೊಂಡಿದ್ದೀರಿ.ಮಹಿಳಾ ಪಂಚಾಯತ್ ಸದಸ್ಯೆಯರ ಪ್ರಸಕ್ತ ಮಂಜನಾಡಿ ಗ್ರಾಪಂ ಸದಸ್ಯೆಯಾಗಿ ಸುಗ್ರಾಮದ ಮೂಲಕ ಗ್ರಾಪಂನ ಅಭಿವೃದ್ಧಿಗೆ ಕಾರಣರಾಗಿರುವ ಯಶೋಗಾಥೆ ಇಲ್ಲಿದೆ.ತನಗೆ ಪಂಚಾಯತ್ ವತಿಯಿಂದ ಒಂದು ಬಾವಿ ಮಂಜೂರಾಯಿತು.ಯೋಜನೆಯಲ್ಲಿ ನಿಗದಿಪಡಿಸಲಾದ ಕಾಮಗಾರಿ ಅಲ್ಲಿ ನಡೆದಿರಲಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿ ತನಿಖೆಗೆ ಆಗ್ರಹಿಸಿದೆ.ತನಿಖೆಯಾಗಿ ಬಿಡುಗಡೆಯಾದ ಹಣದಲ್ಲಿ ಕಾಮಗಾರಿ ಪೂರ್ಣ ಆಗದೆ ಇರುವುದು ಗೊತ್ತಾಯಿತು. ಆ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳು ಸೂಚನೆ ನೀಡಿದರು. ಕೊನೆಗೂ ಅಪೂರ್ಣಗೊಂಡ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ಪಂಚಾಯತ್‌ನಲ್ಲಿ ತಮ್ಮ ಹಕ್ಕಿಗಾಗಿ ನಡೆದ ಆರಂಭದ ಹೋರಾಟವನ್ನು ಕಮಲ ನೆನಪಿಸಿ ಕೊಳ್ಳುತ್ತಾರೆ. ಕಮಲ ಗ್ರಾಮ ಪಂಚಾಯತ್ ನ ಪ್ರತಿ ಸಭೆಗೂ ತಪ್ಪದೆ ಹಾಜರಾಗುತ್ತಾರೆ.
ಜನರ ಸಮಸ್ಯೆಗಳ ಬಗ್ಗೆ ಸಭೆಗಳಲ್ಲಿ ಪ್ರಸ್ತಾಪಿಸುತ್ತಾರೆ.ಮೊಂಟೆ ಪದವು ಕೊರಗರ ಕಾಲನಿಯ ಆರು ಕುಟುಂಬಗಳಿಗೆ ಈ ಬಾರಿ ಸಮಾಜಕಲ್ಯಾಣ ಇಲಾಖೆಯಿಂದ ಮನೆ ಮಂಜೂರಾಗಿದೆ.ಕಳೆದ 35 ವರುಷಗಳಿಂದ ಈ ಕುಟುಂಬಗಳು ತಮಗೆ ಸ್ವಂತ ಮನೆಗಾಗಿ ಹಂಬಲಿಸುತ್ತಿದ್ದವರಿಗೆ ಮನೆ ಆಗಿರುವುದು ಸಂತಸ ತಂದಿದೆ.ಇನ್ನೂ ನಾಲ್ಕು ಕೊರಗ ಕುಟುಂಬಗಳಿಗೆ ಭೂಮಿ ಮಂಜೂರಾಗಬೇಕೆಂದು ಕಮಲ ಸಂಬಂಧಪಟ್ಟ ಅಧಿಕಾರಿಗೆ ಅರ್ಜಿ ಸಲ್ಲಿಸಿ ಆಗ್ರಹಿಸುತ್ತಿದ್ದಾರೆ.
ಮಹಿಳಾ ನಾಯತ್ವಕ್ಕೆ ಪ್ರೇರಣೆ;-ಕಮಲ ಗ್ರಾಮ ಪಂಚಾಯತ್ ಸದಸ್ಯೆಯಾಗಿ ಮಾತ್ರವಲ್ಲದೆ ಇತರ ಮಹಿಳಾ ಗ್ರಾಮ ಪಂಚಾಯತ್ ಸದಸ್ಯರನ್ನು ಒಳಗೊಂಡು ಸಂಘಟನೆಯಾದ ಸುಗ್ರಾಮದ ಮೂಲಕ ಇತರರಿಗೂ ಪ್ರೇರಣೆ ನೀಡುತ್ತಿದ್ದಾರೆ. ಮಹಿಳಾ ನಾಯಕತ್ವಕ್ಕೂ ಸಹಕಾರಿಯಾಗಿದೆ, ಇದಕ್ಕೊಂದು ಉದಾಹರಣೆ ಎಂಬಂತೆ ಮಂಜನಾಡಿ ಗ್ರಾಮ ಪಂಚಾಯತ್‌ನ ಅಲ್ಪಸಂಖ್ಯಾತ ಸಮುದಾಯ ಮಹಿಳೆ ಐಸಮ್ಮ ಮುಹಮ್ಮದ್.ತಾನು ಹೇಗೆ ಬೆಳೆದೆ ಎಂಬ ಬಗ್ಗೆ ಐಸಮ್ಮ ಹೇಳುವಂತೆ,-ನಾವು ಸುಗ್ರಾಮ ಸಂಘಟನೆಯ ಮೂಲಕ ಸಭೆ ಸೇರಿ ಗ್ರಾಮದ ಅಭಿವೃದ್ಧಿಯ ಬಗ್ಗೆ ಚರ್ಚಿಸುತ್ತೇವೆ. ನಾನು ಪ್ರತಿನಿಧಿಸುವ ಉರುಮಣೆ ಪದಳಿಕಟ್ಟೆ ವಾರ್ಡ್ ಪ್ರದೇಶದಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ಇತ್ತು. ಸುಗ್ರಾಮದ
ಮೂಲಕ ಪಂಚಾಯತ್ ಸಭೆಯಲ್ಲಿ ಪ್ರಸ್ತಾಪಿಸಿ ಪಂಚಾಯತ್ ಮೂಲಕ ಬಾವಿ ನಿರ್ಮಿಸಲು ಸಾಧ್ಯವಾಯಿತು. ಈಗ ನನ್ನ ವಾರ್ಡಿನ 25 ಮನೆಗಳಿಗೆ ನೀರು ಪೂರೈಕೆಯ ಜವಾಬ್ದಾರಿ ನಾನೆ ನಿರ್ವಹಿಸುತ್ತಿದ್ದೇನೆ. ಕಮಲ ನಮಗೆ ಮಾರ್ಗದರ್ಶನ ಮಾಡುತ್ತಾರೆ.
ನಮ್ಮ ಪರಿಸರದ ಸ್ವಚ್ಛತೆ,ಗ್ರಾಮ ನೈಮರ್ಲ್ಯದ ಕಡೆ ಒತ್ತು ನೀಡುತ್ತೇವೆ. ಎಲ್ಲಾ ಮನೆಗಳಿಗೆ ಶೌಚಾಲಯ ನಿರ್ಮಿಸಲು ಸಾಧ್ಯವಾಗಿದೆ.ನಾನು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದೇನೆ, ಸಣ್ಣ ಹಿಡುವಳಿ ಇದೆ.ಅಲ್ಲಿ ಮಲ್ಲಿಗೆ ಹೂವಿನ ಗಿಡ ನೆಟ್ಟು ಕೃಷಿ ಮಾಡಲು ಹೊರಟ್ಟಿದ್ದೇನೆ. ಇದರಿಂದ ನನಗೆ ಆರ್ಥಿಕವಾಗಿ ಸಹಾಯವಾಗಿದೆ. ಮಹಿಳೆಯರು ಒಂದು ಕಡೆ ಸಭೆ ಸೇರುವ ಕಾರಣ ನಮ್ಮಲ್ಲಿ ಸಾಮರಸ್ಯ ಬೆಳೆದಿದೆ, ತಾರತಮ್ಯ ಇಲ್ಲ. ಸುಗ್ರಾಮದ ಮಹಿಳೆಯರು ಹೆಚ್ಚಿನ ಮುತುವರ್ಜಿಯಿಂದ ಪಾಲ್ಗೊಳ್ಳುತ್ತೇವೆ.
ಶಿಕ್ಷಣ,ಆರೋಗ್ಯದ ಬಗ್ಗೆ ಚರ್ಚೆ ನಡೆಯುತ್ತದೆ.ನನ್ನ ವಾರ್ಡ್‌ನಲ್ಲಿ ಮನೆ ಇಲ್ಲದ ಇಬ್ಬರಿಗೆ ಸರಕಾರದ ಯೋಜನೆಯಿಂದ ಮನೆ ಮಂಜೂರಾಗಿದೆ. ಬಡವರಿಗೆ ಸಹಾಯ ಮಾಡಲು ಸಾಧ್ಯವಾಗಿದೆ ಎಂದು ಐಸಮ್ಮ ವಿವರಿಸುತ್ತಾರೆ.
ಸುಗ್ರಾಮ ಪ್ರೇರಣೆ:ಸುಗ್ರಾಮ ಎಂಬವುದು ಗ್ರಾಮ ಪಂಚಾಯತ್ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘಟನೆ. 2005ರಲ್ಲಿ ರಚನೆಯಾಗಿದೆ.ಈ ಸಂಘಟನೆಗಳ ಮೂಲಕ ಪಡೆದ ಮಾಹಿತಿ, ತನ್ನಂತೆಯೇ ಕಷ್ಟದಲ್ಲಿದ್ದು ಪಂಚಾಯತ್ ಸದಸ್ಯೆಯಾಗಿ ಸಾಣೂರು ಪಂಚಾಯತ್‌ನ ಅಧ್ಯಕ್ಷೆಯಾಗಿ ದಲಿತ ಮಹಿಳೆ ಗುಲಾಬಿಯವರ ಸಾಧನೆ, ಮಾತುಗಳು, ಕೆಲಸ, ಸಾಮಾಜಿಕ ಕಾರ್ಯಕರ್ತರಾದ ಶೀನಶೆಟ್ಟಿ, ಕೃಷ್ಣ ಮೂಲ್ಯರ ಪ್ರೋತ್ಸಾಹ ನನಗೆ ಇನ್ನಷ್ಟು ಹುರುಪು ನೀಡಿತು ಎನ್ನುವ ಕಮಲ ರಾಜ್ಯ ಪದಾಧಿಕಾರಿಯಾಗಿ ಜಿಲ್ಲಾ ಸಂಘದ ಅಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಆರೋಗ್ಯ ಜಾಗೃತಿ: ನಾಟೆಕಲ್ ಎಂಬಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುತ್ತಿದೆ.ಪಂಚಾಯತ್ ವ್ಯಾಪ್ತಿಯ 0-5 ವರುಷ ದೊಳಗಿನ ಎಲ್ಲಾ 564 ಮಕ್ಕಳಿಗೆ ಚುಚ್ಚು ಮದ್ದು ಹಾಕಲಾಗಿದೆ.ಕಳೆದ ಮೂರು ವರುಷಗಳಲ್ಲಿ ಎರಡು ಇಲಿ ಜ್ವರದ ಪ್ರಕರಣಗಳನ್ನು ಬಿಟ್ಟರೆ ಬೇರೆ ಯಾವುದೇ ಸಾಂಕ್ರಾಮಿಕ ರೋಗಗಳು ಕಂಡುಬಂದಿಲ್ಲ.ಹಾಲಿ ವರ್ಷದಲ್ಲಿ ಮಂಜನಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಜನಿಸಿದ 82 ಮಕ್ಕಳಲ್ಲಿ ಯಾವ ಮಗುವು ಕಡಿಮೆ ತೂಕ ಹೊಂದಿಲ್ಲ!. ಪಂಚಾಯತ್‌ನ ಮಹಿಳಾ ಸದಸ್ಯರು ,5ಮಂದಿ ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯದ ಬಗ್ಗೆ ಜನ ಜಾಗೃತಿ ಮೂಡಿಸುವಲ್ಲಿ ಶ್ರಮಿಸುತ್ತಿದ್ದಾರೆ ಎಂದು ನಾಟೆಕಲ್ ಆರೋಗ್ಯ ಕೇಂದ್ರದ ವೈದ್ಯಾಧಿ ಕಾರಿಗಳು ಅಭಿಪ್ರಾಯ ಪಡುತ್ತಾರೆ.
*ಕಮಲಾ ಪರಿಶಿಷ್ಟ ಜಾತಿಗೆ ಸೇರಿದ ಮಹಿಳಾ ಪ್ರತಿನಿಧಿ.ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಹೊಂದಿದ್ದಾರೆ. ಪಂಚಾಯತ್‌ನ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸಾಕಷ್ಟು ಸಹಕಾರ ನೀಡುತ್ತಾರೆ ಎಂದು ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್ ಅಭಿಪ್ರಾಯ ಪಡುತ್ತಾರೆ.
*ಕಮಲ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯಾಗಿ ಪ್ರತಿ ಸಭೆಗೂ ತಪ್ಪದೆ ಹಾಜರಾಗುತ್ತಾರೆ. ಜನರ ಸಮಸ್ಯೆಗಳ ಬಗ್ಗೆ ಸಭೆಗಳಲ್ಲಿ ಪ್ರಸ್ತಾಪಿಸುತ್ತಾರೆ.ಎಂದು ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ ಪರಮೇಶ್ವರ ಭಂಡಾರಿ ವಾರ್ತಾಭಾರತಿಗೆ ತಿಳಿಸಿದ್ದಾರೆ.
*ಪಂಚಾಯತ್‌ನಲ್ಲಿ ಮಹಿಳಾ ಸದಸ್ಯರು ಆಯ್ಕೆಯಾದ ಬಳಿಕ,ಸರಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಮತ್ತು ಸಮಸ್ಯೆ ಪರಿಹಾರಕ್ಕೆ ನಾವು ಪಕ್ಷಾತೀತವಾಗಿ ಪರಿಹಾರಕ್ಕೆ ಪ್ರಯತ್ನ ನಡೆಸುತ್ತೇವೆ ಎನ್ನುವುದು ಮಂಜನಾಡಿಯ ಸದಸ್ಯೆ ಶಾಂಭವಿಯವರ ಆಭಿಪ್ರಾಯ.
2001ರ ಜನಗಣತಿಯ ಪ್ರಕಾರ 8283 ಜನ ಸಂಖ್ಯೆ ಇರುವ ಮಂಜನಾಡಿ ಗ್ರಾಮ ಪಂಚಾಯತ್‌ನಲ್ಲಿ 4161 ಹೆಂಗಸರು 4122 ಗಂಡಸರು. ಒಟ್ಟು 21ಸದಸ್ಯರು ಅವರಲ್ಲಿ 9 ಮಹಿಳಾ ಸದಸ್ಯರು. ಉಪಾಧ್ಯಕ್ಷರು ಸರೋಜಿನಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ. ಸುಗ್ರಾಮದ ಮೂಲಕ ಕೋಮು ಸಾಮರಸ್ಯ, ನಾಯಕತ್ವ ,ಗ್ರಾಮಾಭಿವೃದ್ಧಿಗೆ ಶ್ರಮಿಸಲು ಸಾಧ್ಯವಾಗಿದೆ ಎಂದು ಕಮಲ ಹೇಳುತ್ತಾರೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಭರವಸೆ ಯೋಜನೆಯ ಮೂಲಕ ಸುಮಾರು 300ಕ್ಕೂ ಅಧಿಕ ಮಂದಿ ಉದ್ಯೋಗ ಪಡೆದಿದ್ದಾರೆ. ದುಡಿಯುವ ಮಹಿಳೆಯರ ಪ್ರಮಾಣ 1991 ರಲ್ಲಿ 37.6ರಷ್ಟಿದ್ದರೆ, 2001ರ ಗಣತಿಯಲ್ಲಿ ಈ ಪ್ರಮಾಣ 41.7ಕ್ಕೆ ಏರಿಕೆಯಾಗಿದೆ. ಜನರ ತಲಾ ಆದಾಯದಲ್ಲೂ ಏರಿಕೆಯಾಗಿದೆ.
ಪ್ರತಿ ಮನೆಗಳಲ್ಲಿಯೂ ಕೆಲಸ ಇಲ್ಲದವರಿಗೆ ಕೆಲಸ ನೀಡಬೇಕೆನ್ನುವುದು ಸುಗ್ರಾಮದ ಸಭೆಗಳಲ್ಲಿ ಚರ್ಚೆಯಾಗುತ್ತದೆ ಮತ್ತು ಪ್ರಯತ್ನ ನಡೆಯುತ್ತದೆ.ಈ ಬಾರಿಯ ಪಂಚಾಯತ್ ಆಡಳಿತ ಸಮಿತಿ ಅಧಿಕಾರಕ್ಕೆ ಬಂದ ಬಳಿಕ 3ಲಕ್ಷ ರೂ.ಇದ್ದ ಪಂಚಾಯತ್‌ನ ಆದಾಯ ವೃದ್ಧಿಯಾಗಿ ರೂ.7ಲಕ್ಷಕ್ಕೆ ಏರಿಕೆಯಾಗಿದೆ.ಪರಿಶಿಷ್ಟ ಜಾತಿಯ ಮಕ್ಕಳ ಶಾಲಾ ಶಿಕ್ಷಣಕ್ಕೆ ಪಂಚಾಯತ್‌ನಿಂದ ಉಚಿತವಾಗಿ ಪುಸ್ತಕ ವಿತರಿಸಲಾಗುತ್ತದೆ. ಪ್ರಸಕ್ತ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಮೂಲಕ 10 ಲಕ್ಷ ರೂ. ವೆಚ್ಚದ ರಾಜೀವ ಗಾಂಧಿ ಸೇವಾ ಕೇಂದ್ರ ಮಂಜೂರಾಗಿ ನಿರ್ಮಾಣ ವಾಗುತ್ತಿದೆ ಎಂದು ಕಮಲ ತಿಳಿಸುತ್ತಾರೆ.
ಬೇಸಿಗೆಯ ಪ್ರಖರತೆ ಹೆಚ್ಚುತ್ತಲೇ ಇದೆ. ಕಾವೇರಿ ಮತ್ತು ಕೃಷ್ಣಾ ಕೊಳ್ಳದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಹಿಂದೆಂದೂ ಕಂಡರಿಯದಷ್ಟು ಕುಸಿದಿದೆ. ಪ್ರತಿ ಸಲದಂತೆ ಜ ...
Click here to post your views ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...
ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...
ಊರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...
ಮಾನ್ಯರೆ,
ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...
ಭಾರತ ದೇಶದ, ಜಗತ್ತಿನ ಅಗ್ರ ದಾರ್ಶನಿಕರಲ್ಲಿ ಓರ್ವರು ಶ್ರೀ ಶಂಕರಾಚಾರ್ಯರು. (ಕ್ರಿ. 8ನೆ ಶತಮಾನ) ಅವರ ದ ...
ಮಾನ್ಯರೇ, ಅಕ್ಷಯ ತೃತೀಯದಂದು ಚಿನ್ನ, ವಾಹನ ಅಥವಾ ಆಸ್ತಿಕೊಳ್ಳಲು ಶುಭ ದಿನ ಎಂದು ಯಾವುದೇ ಹ ...