mail-img print-img

ಪ್ರಧಾನಿ ಸಿಂಗ್ ರಾಜೀನಾಮೆಗೆ ಒತ್ತಾಯ: ಕಲ್ಲಿದ್ದಲ ಕಾವಿಗೆ ಬಲಿಯಾದ ಕಲಾಪ

ಗುರುವಾರ - ಆಗಸ್ಟ್ -23-2012

ಹೊಸದಿಲ್ಲಿ, ಆ.22: ಕಲ್ಲಿದ್ದಲು ಗಣಿ ಮಂಜೂರಾತಿ ಹಗರಣದ ಕುರಿತು ವಿಪಕ್ಷ ಸತತ ಎರಡನೆಯ ದಿನವಾದ ಇಂದೂ ಸಂಸತ್ತಿನಲ್ಲಿ ಗದ್ದಲವೆಬ್ಬಿಸಿ ಪ್ರಧಾನಿ ಮನಮೋಹನ ಸಿಂಗರ ರಾಜೀನಾಮೆಗೆ ಆಗ್ರಹಿಸಿದುದರಿಂದ ಕಲಾಪ ಮುಂದೂಡಲಾಯಿತು. ಲೋಕಸಭಾಧ್ಯಕ್ಷೆ ಮೀರಾಕುಮಾರ್ ಹಾಗೂ ರಾಜ್ಯಸಭಾಧ್ಯಕ್ಷೆ ಹಾಮಿದ್ ಅನ್ಸಾರಿ ಕಲಾಪ ನಡೆಯಲು ಅವಕಾಶ ನೀಡುವಂತೆ ಮಾಡಿದ ಮನವಿಗಳಿಗೆ ವಿಪಕ್ಷೀಯರು ಕಿವಿಗೊಡಲಿಲ್ಲ.‘ಪ್ರಧಾನಿ ರಾಜೀನಾಮೆ ನೀಡಲೇ ಬೇಕು’ ಇತ್ಯಾದಿ ಘೋಷಣೆಗಳನ್ನು ಕೂಗುತ್ತ ವಿಪಕ್ಷ ಸದಸ್ಯರು ಸದನಗಳ ಅಂಗಳಕ್ಕಿಳಿದರು. ಇದರಿಂದಾಗಿ ಕಲಾಪವನ್ನು ಮತ್ತೆ ಮತ್ತೆ ಮುಂದೂಡಬೇಕಾಯಿತು. ಮೊದಲು 11 ಗಂಟೆಯ ನಂತರ ಸದನಗಳನ್ನು ಮುಂದೂಡಲಾಯಿತು. ಲೋಕಸಭೆಯನ್ನು ಮಧ್ಯಾಹ್ನ 12ರ ವರೆಗೆ ಹಾಗೂ ರಾಜ್ಯಸಭೆಯನ್ನು 11:30ರ ವರೆಗೆ ಮುಂದೂಡಲಾಯಿತು. ಉಭಯ ಸದನಗಳು ಮರುಸಮಾವೇಶಗೊಂಡಾಗಲೂ ಪರಿಸ್ಥಿತಿ ಸುಧಾರಿಸದ ಕಾರಣ ಅವುಗಳನ್ನು ಅಪರಾಹ್ಣ 2ರ ತನಕ ಅನಿವಾರ್ಯವಾಗಿ ಮುಂದೂಡಲಾಯಿತು.

2 ಗಂಟೆಯ ಬಳಿಕವೂ ಗದ್ದಲ ಮುಂದುವರಿದಾಗ ಉಭಯ ಸದನಗಳನ್ನೂ ದಿನಾಂತ್ಯಕ್ಕೆ ಮುಂದೂಡಲಾಯಿತು. ಸದನದಲ್ಲಿ ಚರ್ಚೆ ಮುಂದುವರಿಸಲು ಅವಕಾಶ ನೀಡುವಂತೆ ಕಾಂಗ್ರೆಸ್ ನಾಯಕರು ವಿಪಕ್ಷೀಯರ ಸಹಕಾರ ಕೋರಿದಾರಾದರೂ, ಪಟ್ಟು ಬಿಡದ ವಿಪಕ್ಷೀಯರು ಘೋಷಣೆ ಕೂಗುವುದನ್ನು ಮುಂದುವರಿಸಿ ಪ್ರಧಾನಿಯ ರಾಜೀನಾಮೆಗೆ ಆಗ್ರಹಿಸಿದರು. ಆಳುವ ಸದಸ್ಯರಾದ ಪವನ ಕುಮಾರ್ ಬನ್ಸಲ್, ಅಂಬಿಕಾ ಸೋನಿ ಹಾಗೂ ಫಾರೂಕ್ ಅಬ್ದುಲ್ಲಾ, ಪ್ರಧಾನಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲವೆಂದರು. ಬಿಜೆಪಿ ಸ್ವಂತ ಕಪಾಟಿನಲ್ಲಿ ಅಸ್ಥಿಪಂಜರಗಳನ್ನಿಟ್ಟುಕೊಂಡಿದೆ. ಅದಕ್ಕಾಗಿ ಅದು ಸದನ ನಡೆಯಗೊಡುವುದಿಲ್ಲ ಎಂದು ಬನ್ಸಾಲ್ ಆರೋಪಿಸಿದರು.

ಪ್ರಧಾನಿ ರಾಜೀನಾಮೆ ನೀಡುವುದಿಲ್ಲ. ಅವರು ಯಾಕೆ ರಾಜೀನಾಮೆ ನೀಡಬೇಕು. ವಿಪಕ್ಷೀಯರು ಪ್ರಧಾನಿಯ ಹೇಳಿಕೆಯನ್ನು ಆಲಿಸಬೇಕು ಹಾಗೂ ವಿಷಯದ ಕುರಿತು ಚರ್ಚೆಗೆ ಅನುವು ನೀಡಬೇಕು ಎಂದು ಆಕ್ರೋಶಿತರಾದ ಫಾರೂಕ್ ಅಬ್ದುಲ್ಲಾ ಹೇಳಿದರು. ಪ್ರಧಾನಿ ರಾಜೀನಾಮೆ ನೀಡಿದರೆ ಅವರು ಯಾರ ಜೊತೆ ವಿವಾದದ ಕುರಿತು ಚರ್ಚೆ ನಡೆಸುತ್ತಾರೆ? ಎಂದು ಸೋನಿ ಪ್ರಶ್ನಿಸಿದರು.ಸದನವನ್ನು ಅಮಾನತಿನಲ್ಲಿಡುವ ಪ್ರಶ್ನೆಯೇ ಇಲ್ಲ. ಅವರು ಸದನದಲ್ಲಿ ವಿಷಯದ ಬಗ್ಗೆ ಚರ್ಚೆಗೆ ಬರಬೇಕು ಹಾಗೂ ಆ ಮೂಲಕ ತಮ್ಮ ಪ್ರತಿಪಾದನೆಯನ್ನು ಸಮರ್ಥಿಸಬೇಕೆಂದು ಅವರು ಸವಾಲು ಹಾಕಿದರು.

ಎನ್‌ಡಿಎಯ ಅಂಗಪಕ್ಷ ಜೆಡಿಯು ತಾನು ಪ್ರಧಾನಿಯ ರಾಜೀನಾಮೆಯ ಬಗ್ಗೆ ಒಲವು ಹೊಂದಿಲ್ಲವೆಂದು ಹೇಳಿತು. ಸಿಎಜಿ ವರದಿಯ ಬಗ್ಗೆ ಸದನದಲ್ಲಿ ಚರ್ಚೆ ನಡೆಯಬೇಕೆಂಬುದು ತನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಆದರೆ, ತಾನು ಎನ್‌ಡಿಎಯ ನಿರ್ಧಾರಕ್ಕೂ ಬದ್ಧನಾಗಿರಬೇಕಾಗುತ್ತದೆ ಎಂದು ಜೆಡಿಯು ನಾಯಕ ಶರದ್ ಯಾದವ್ ಹೇಳಿದರು.

ಇದೇ ವೇಳೆ, ಪ್ರಧಾನಿಯ ರಾಜೀನಾಮೆಯ ಆಗ್ರಹವನ್ನು ಬೆಂಬಲಿಸುವಂತೆ ಬಿಜೆಪಿ ಮಾಡಿದ ಮನವಿಯನ್ನು ತೃಣಮೂಲ ಕಾಂಗ್ರೆಸ್ ಸಾರಾ ಸಗಟಾಗಿ ತಿರಸ್ಕರಿಸಿತು.ವಿಪಕ್ಷಗಳ ಬೇಡಿಕೆಯನ್ನು ‘ಅಸಾಂವಿಧಾನಿಕ’ ಎಂದು ತಳ್ಳಿ ಹಾಕಿದ ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್ ಜೈಸ್ವಾಲ್, ಕಲ್ಲಿದ್ದಲಿನ ವ್ಯವಹಾರ ಸಂಕೀರ್ಣ ವಿಷಯವಾಗಿದೆ. ಚರ್ಚೆಯ ಬಳಿಕವೇ ಹೊಣೆಗಾರಿಕೆ ನಿಗದಿಪಡಿಸಬಹುದಾಗಿದೆ ಎಂದರು.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಚರ್ಚ್‌ದಾಳಿ ಗೃಹ ಇಲಾಖೆಗೆ ಪಾಠವಾಗಲಿ

‘ಮುರಿದು ನೇತಾಡುತ್ತಿರುವ ಏಸುವಿನ ಕೈ, ಮುರಿದ ಕಾಲು, ಒಡೆದ ಮುಖ....’’ ಈ ಸಮಾಜದ ಕ್ರೌರ್ಯ ಮತ್ತು ವಿರೂಪಕ್ಕೆ ಹಿಡಿದ ಕನ್ನಡಿಯಂತೆ ಮಾಧ್ಯಮಗಳ ಮುಖಪುಟದಲ್ಲ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮಾನಸಿಕ ದಾಸ್ಯಕ್ಕೆ ಬಲಿಯಾದ ‘ದ ಇಂಡಿಯನ್’

ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನ ...


- ಬಿ.ಶ್ರೀಪಾದ ಭಟ್

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್