mail-img print-img

ಕುಡಂಕುಳಂನಲ್ಲಿ ಶ್ಮಶಾನ ಮೌನ;ಪ್ರತಿಭಟನಕಾರರಿಂದ ಸರಣಿ ಉಪವಾಸ

ಬುಧವಾರ - ಸೆಪ್ಟೆಂಬರ್ -12-2012

ಕುಡಂಕುಳಂ, ಸೆ.11:ಪೊಲೀಸ್ ಗೋಲಿಬಾರ್‌ಗೆ ಓರ್ವ ಮೀನುಗಾರ ಬಲಿಯಾದ ಒಂದು ದಿನದ ಬಳಿಕ ಇಂದು ಕುಡಂಕುಳಂ ಅಣು ವಿದ್ಯುತ್ ಸ್ಥಾವರ ಪರಿಸರದಲ್ಲಿ ಶ್ಮಶಾನ ಮೌನ ನೆಲೆಸಿದೆ. ಕುಡಂಕುಳಂ ಪರಮಾಣು ವಿದ್ಯುತ್ ಯೋಜನೆ ವಿರೋಧಿ ಕಾರ್ಯಕರ್ತರ ವಿರುದ್ಧ ಪೊಲೀಸ್ ಹಿಂಸಾಚಾರವನ್ನು ಪ್ರತಿಭಟಿಸಿ ಪ್ರತಿಭಟನೆಯ ಕೇಂದ್ರಬಿಂದುವಾದ ಇದಿಂತಕಾರಯ್‌ಯಲ್ಲಿ ನಡೆಸುತ್ತಿರುವ ಸರಣಿ ಉಪವಾಸ ಮುಷ್ಕರವನ್ನು ಪ್ರತಿಭಟನಕಾರರು ಮುಂದುವರಿಸಿದ್ದಾರೆ. ಅದೇ ವೇಳೆ, ಪರಿಸರದಲ್ಲಿ ಪೊಲೀಸರು ಬಿಗು ಭದ್ರತೆಯನ್ನು ಏರ್ಪಡಿಸಿದ್ದಾರೆ.ಪರಿಸ್ಥಿತಿ ಶಾಂತವಾಗಿದೆ ಎಂದು ಪೊಲೀಸರು ಇಲ್ಲಿ ತಿಳಿಸಿದರು. ಆದರೆ, ಪೊಲೀಸರು ಇಲ್ಲಿನ ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. “ಭದ್ರತೆಯನ್ನು ಹೆಚ್ಚಿಸಲಾಗಿದೆ” ಎಂದು ಮೂಲಗಳು ತಿಳಿಸಿವೆ.ಸ್ಥಾವರದ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿರುವ ಪರಮಾಣು ವಿದ್ಯುತ್ ವಿರುದ್ಧ ಜನರ ಚಳವಳಿಯ ಸಂಚಾಲಕ ಎಸ್.ಪಿ. ಉದಯ ಕುಮಾರ್ ಮತ್ತು ಪುಷ್ಪರಾಯನ್ ಸೇರಿದಂತೆ ಚಳವ ಳಿಯ ಪ್ರಮುಖ ನಾಯಕರು ಇಂದು ರಾತ್ರಿ ಕುಡಂಕುಳಂ ಪೊಲೀಸ್ ಠಾಣೆಗೆ ಬಂದು ಬಂಧನಕ್ಕೊಳ ಗಾಗುವರು ಎಂದು ಉದಯಕುಮಾರ್‌ಗೆ ನಿಕಟ ವಾಗಿರುವ ಮೂಲಗಳು ತಿಳಿಸಿವೆ.

ಪರಮಾಣು ಸ್ಥಾವರ ವಿರುದ್ಧದ ಹೋರಾಟ ನಿನ್ನೆ ಹಿಂಸೆಗೆ ತಿರುಗಿತ್ತು. ಪ್ರತಿಭಟನಕಾರರು ತೂತುಕುಡಿ ಜಿಲ್ಲೆಯ ಮನ ಪಾಡ್‌ನಲ್ಲಿನ ಪೊಲೀಸ್ ಠಾಣೆಯೊಂದರ ಮೇಲೆ ದಾಳಿ ನಡೆಸಲು ಯತ್ನಿಸಿದಾಗ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.ಇಂದಿಂತಕಾರಯ್ ಮತ್ತು ಸುತ್ತಮುತ್ತಲ ಗ್ರಾಮಗಳಿಗೆ ಸೀಮಿತವಾಗಿ ಒಂದು ವರ್ಷ ಕಾಲ ನಡೆದ ಪರಮಾಣು ವಿದ್ಯುತ್ ಸ್ಥಾವರದ ವಿರುದ್ಧದ ಹೋರಾಟ, ಸ್ಥಾವರಕ್ಕೆ ಯುರೇನಿಯಂ ಇಂಧನ ತುಂಬಿಸುವುದಾಗಿ ಅಧಿಕಾರಿಗಳು ಘೋಷಿಸಿದ ಬಳಿಕ ನೆರೆಯ ತೂತುಕುಡಿ ಜಿಲ್ಲೆಗೂ ಹಬ್ಬಿದೆ.

ಇಂದಿಂತಕಾರಯ್ ಗ್ರಾಮದ ಸಮುದ್ರ ತೀರ ನಿನ್ನೆ ರಣರಂಗವಾಗಿತ್ತು. ಇಲ್ಲಿ ಪೊಲೀಸರು ಮತ್ತು ಪ್ರತಿಭಟನಕಾರರು ಸಂಘರ್ಷಕ್ಕಿಳಿದರು. ಪೊಲೀಸರು ಪ್ರತಿಭಟನಕಾರರ ಮೇಲೆ ಬೆತ್ತಪ್ರಯೋಗ ಮಾಡಿದರು ಹಾಗೂ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು.ಪೊಲೀಸ್ ಕ್ರಮವನ್ನು ಖಂಡಿಸಿ ಪರಮಾಣು ವಿದ್ಯುತ್ ವಿರುದ್ಧದ ಜನರ ಚಳವಳಿ ನಿನ್ನೆಯಿಂದ ೪೮ ಗಂಟೆಗಳ ಸರಣಿ ಉಪವಾಸ ನಡೆಸುತ್ತಿದೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಭಾರತದ ಹೆಮ್ಮೆ ಅನಂತಮೂರ್ತಿ

ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾನ್ ಬೂಕರ್ ಪ್ರಶಸ್ತಿ ಕೂದಲೆಳೆಯಲ್ಲಿ ಕೈ ತಪ್ಪಿತು. ಅಮೆರಿಕದ ಹಿರಿಯ ಬರಹಗಾರ್ತಿ ಲಿಡಿಯಾ ಡೇವಿಸ್ ಈ ಪ್ರಶಸ್ತಿಯನ್ನ ...


ನಿಮ್ಮ ಅನಿಸಿಕೆ

postClick here to post your views
EPAPER
access

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್