ಮುಂಬೈ, ಸೆ.11: ಭಾರತದ ‘ನೀತಿ ಕುಸಿತ’ದ ಕುರಿತು ಟೀಕಿಸುವುದಕ್ಕೆ ಭಾರತದ ಅಮೆರಿಕನ್ ರಾಯಭಾರಿಣಿ ನ್ಯಾನ್ಸಿ ಪೊವೆಲ್ ಹಿಂಜರಿದರಾದರೂ,ದೇಶದಲ್ಲಿ ‘ಅಮೆರಿಕದ ಹೂಡಿಕೆಗೆ ಸಂಬಂಧಿಸಿದ ವಿಷಯಗಳು’ ಶೀಘ್ರ ಮುಂದುವರಿಯ ಬಹುದೆಂದು ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ.ನಿನ್ನೆ ರಾತ್ರಿ ಏಶ್ಯ ಸೊಸೈಟಿಯಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯ ಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರನ್ನು ಭಾರತದ ಪ್ರಸಕ್ತ ‘ನೀತಿ ಕುಸಿತ’ದಿಂದ ಸ್ವಲ್ಪ ಮಟ್ಟಿಗೆ ನಿರಾಶಯರಾಗಿದ್ದೀರಾ? ಎಂದು ಪ್ರಶ್ನಿಸಿದಾಗ, ತಾನೊಬ್ಬಳು ವೃತ್ತಿಪರ ರಾಜತಂತ್ರಜ್ಞೆ ಹಾಗೂ ರಾಯಭಾರಿಣಿಯೆಂದು ನ್ಯಾನ್ಸಿ ಉತ್ತರಿಸಿದರು. ಆದಾಗ್ಯೂ, ತಾನು ನಿರ್ದಿಷ್ಟವಾಗಿ ಉಲ್ಲೇಖಿಸಿರುವಂತೆ ಭಾರತದಲ್ಲಿ ಆರ್ಥಿಕ ನೀತಿಯ ವಿಶ್ಲೇಷಣೆ ಅಗತ್ಯವಾಗಿದೆ. ಇದರೊಂದಿಗೆ ಅಮೆರಿಕದ ಹೆಚ್ಚಿನಹೂಡಿಕೆ ಹಾಗೂ ವ್ಯಾಪಾರ ಭಾಗೀದಾರಿಕೆಗೆ ಉತ್ತೇಜನವೂ ಅಗತ್ಯವಾಗಿದೆ. ಇಂತಹ ಕೆಲವು ವಿಚಾರಗಳು ಶೀಘ್ರ ಮುಂದುವರಿಯಬಹುದೆಂಬುದು ತನ್ನ ಆಶಾವಾದವಾಗಿದೆ ಎಂದವರು ಹೇಳಿದರು.
ಭಾರತವು ಇರಾನ್‌ನಿಂದ ತೈಲ ಆಮದು ಮಾಡದಂತೆ ಅಮೆರಿಕ ಹೇಗೆ ಮನವೊಲಿಸುವುದೆಂಬ ಪ್ರಶ್ನೆಗೆ, ಇಲ್ಲಿ ಎರಡು ವಿಚಾರಗಳಿವೆ.ಇಲ್ಲಿ ಅಂತಾರಾಷ್ಟ್ರೀಯ ನಿಷೇಧ ವಲಯವೂ ಒಂದಿದ್ದು, ಅದು ನೈಜ ಹಲ್ಲುಗಳನ್ನು ಹೊಂದಿದೆ. ಎರಡನೆಯದಾಗಿ, ಇರಾನ್ ಐಎಇಎಗೆ ಬದ್ಧವಿರುವುದೆಂದು ತಾವು ಆಶಿಸುತ್ತೇವೆ. ಇದರಲ್ಲಿ ಭಾರತದ ಪಾತ್ರ ಬಹಳಷ್ಟು ಉಪಯುಕ್ತವಾದುದೆಂದು ಪೊವೆಲ್ ಉತ್ತರಿಸಿದರು. ಅಮೆರಿಕ, ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ಸಂಬಂಧದ ಬಗ್ಗೆ ವಿವರಿಸಿದ ಅವರು, ಪಾಕಿಸ್ತಾನದ ಆರ್ಥಿಕತೆ ಬೆಳೆಯುವಂತೆ ಹಾಗೂ ಪ್ರಜಾತಾಂತ್ರಿಕತೆ ಬೆಂಬಲ ಪಡೆಯುವಂತೆ ಹಾದಿಯನ್ನು ಹುಡುಕುವ ಕುರಿತು ಅದರೊಂದಿಗೆ ಭಾರತ-ಅಮೆರಿಕಗಳೆರಡೂ ತಮ್ಮದೇ ಆದ ಹಾದಿಯಲ್ಲಿ ಮಾತುಕತೆ ಮುಂದುವರಿಸುವುದು ಅತ್ಯಂತ ಪ್ರಧಾನವಾದುದು ಎಂದು ಅಭಿಪ್ರಾಯಿಸಿದರು.
ಅಂತಹ ಮಾರ್ಗಗಳು ಭಯೋತ್ಪಾದನೆ ನಿಗ್ರಹದ ಮೂಲಭೂತ ಮಾರ್ಗಗಳಾಗಿವೆ. ಜನರು ಹೆಚ್ಚು ಸಂಪತ್ತುಳ್ಳವರಾದರೆ ಅವರ ಮಾತಿಗೆ ಬೆಲೆ ಬರುತ್ತದೆ. ಜನರನ್ನು ಹೆಚ್ಚು ಪ್ರಜಾಸತ್ತೆಯುಳ್ಳವರನ್ನಾಗಿಸಿದರೆ ಅವರಿಗೆ ಸರಕಾರದ ಎಲ್ಲ ಶಕ್ತಿಗಳನ್ನು ನಿಯಂತ್ರಿಸುವ ಸಾಮರ್ಥ್ಯ ಬರುತ್ತದೆ. ಆದರೆ ಅದು ಅತ್ಯಂತ ನಿಧಾನವಾದ ಪ್ರಕ್ರಿಯೆಯಾಗಿರುತ್ತದೆ. ಅದರಿಂದ ಇಂತಹ ಪ್ರಕ್ರಿಯೆಯನ್ನು ಉಪೇಕ್ಷಿಸಲು ನಿರ್ಧರಿಸಿದ ಒಂದಿಬ್ಬರನ್ನಷ್ಟೇ ತೆಗೆಯಬಹುದು ಎಂದು ಪೊವೆಲ್ ಹೇಳಿದರು.
ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...
Click here to post your views ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...
ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...