ಹೊಸದಿಲ್ಲಿ, ಜೂ.19: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿಯೆಂದು ಬಿಜೆಪಿ ಬಿಂಬಿಸಲು ಯತ್ನಿಸುತ್ತಿರುವಾಗಲೇ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಎನ್‌ಡಿಎಯ ಪ್ರಧಾನಿ ಅಭ್ಯರ್ಥಿ ‘ಜಾತ್ಯತೀತ ವ್ಯಕ್ತಿತ್ವ’ ಉಳ್ಳವರಾಗಿರಬೇಕೆಂದು ಹೇಳುವ ಮೂಲಕ ಇಂದು ಅದಕ್ಕೆ ಅಂಕುಶವೊಂದನ್ನು ತೊಡಿಸಿದ್ದಾರೆ.
ನಿತೀಶ್ ನೀಡಿರುವ ಹೇಳಿಕೆ ಎನ್‌ಡಿಎಯೊಳಗೆ ತಳಮಳವನ್ನು ಹುಟ್ಟಿಸಿದೆ. ಬಿಜೆಪಿಯ ಕೆಲವು ಮುಖಂಡರು ಈ ಹೇಳಿಕೆಗೆ ಟೀಕೆಯನ್ನು ವ್ಯಕ್ತಪಡಿಸಿದ್ದಾರೆ.ನಿತೀಶ್‌ರ ಅಭಿಪ್ರಾಯವನ್ನಿಂದು ಬಿಹಾರದ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಬೆಂಬಲಿಸಿದುದು ಗಮನಾರ್ಹವಾಗಿದೆ. ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ‘ಸಮಾಜದ ಎಲ್ಲ ವರ್ಗಗಳಿಗೂ ಸ್ವೀಕಾರಾರ್ಹನಾಗಿರಬೇಕು’ ಎಂದವರು ಹೇಳಿದ್ದಾರೆ. ಭಾರತವು ಹಲವು ಮತಗಳು ಹಾಗೂ ಹಲವು ಭಾಷೆಗಳ ದೇಶವಾಗಿದ್ದು, ಅದರ ನಾಯಕ ತನ್ನ ವ್ಯಕ್ತಿತ್ವದಲ್ಲಿ ಕಲೆ ಹೊಂದಿರ ಬಾರದೆಂದು ನಿತೀಶ್ ಕುಮಾರ್ ಅಭಿಪ್ರಾಯಿಸಿದ್ದಾರೆ.
2014ರ ಚುನಾವಣೆಗೆ ಸಾಕಷ್ಟು ಮೊದಲೇ ಎನ್‌ಡಿಎ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಬೇಕು. ಇದರಿಂದ ತಾವು ಯಾರಿಗೆ ಮತ ನೀಡಲಿದ್ದೇವೆಂದು ಮತದಾರರಿಗೆ ತಿಳಿಯುತ್ತದೆ ಎಂದ ಅವರು,ತಾನು ಪ್ರಧಾನಿ ಪದವಿಯ ಆಕಾಂಕ್ಷಿಯಲ್ಲವೆಂದು ಒತ್ತಿ ಹೇಳಿದ್ದಾರೆ.ಬಿಹಾರದಂತಹ ಅಭಿವೃದ್ಧಿಯಾಗದ ರಾಜ್ಯಗಳ ಸ್ಥಿತಿಗತಿ ಅರಿತುಕೊಂಡಿರುವ ನಾಯಕನೊಬ್ಬನನ್ನು ಎನ್‌ಡಿಎ ಹೊಂದಬೇಕು.
ಈ ನಾಯಕ ಮೈತ್ರಿಕೂಟದ ಪ್ರತಿ ಅಂಗಪಕ್ಷಕ್ಕೆ ಸ್ವೀಕಾರಾರ್ಹನಾಗಿರಬೇಕು. ಮೈತ್ರಿ ಕೂಟದ ನಾಯಕ ಜಾತ್ಯತೀತನಾಗಿರ ಬೇಕೆಂಬುದು ತನ್ನ ಬಯಕೆಯಾಗಿದೆಯೆಮದು ನಿತೀಶ್ ತಿಳಿಸಿದ್ದಾರೆ.ಎನ್‌ಡಿಎಯ ನಾಯಕ ಅಭಿವೃದ್ಧಿ ಹೊಂದಿರುವ ರಾಜ್ಯಗಳನ್ನು ಅಭಿವೃದ್ಧಿಪಡಿಸುವಂತಹವನಿರಬಾರದು.ಬದಲಿಗೆ ಅಭಿವೃದ್ಧಿ ಹೊಂದಿಲ್ಲದ ರಾಜ್ಯಗಳ ಭಾವನೆ ಅರಿಯುವಂತಹ ವ್ಯಕ್ತಿಯಾಗಿರಬೇಕೆಂದು ಅವರು ಅಭಿಪ್ರಾಯಿಸಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿಸಲ್ಪಡುತ್ತಿರುವಾಗಲೇ ನಿತೀಶ್ ಕುಮಾರ್‌ರ ಈ ಹೇಳಿಕೆ ಹೊರ ಬಿದ್ದಿರುವುದು ಗಮನಾರ್ಹವಾಗಿದೆ.ಪ್ರಧಾನಿ ಅಭ್ಯರ್ಥಿಯು ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ಅತ್ಯಂತ ನಂಬುಗೆಯುಳ್ಳವನಾಗಿರಬೇಕೆಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ರಾಜ್ಯಾದ್ಯಂತ ಮಳೆ ಚುರುಕುಗೊಳ್ಳುತ್ತಿದೆ. ಈ ಸಾಲಿನಲ್ಲಿ ಮಳೆ ನಿರೀಕ್ಷೆಯಷ್ಟು ಬರದೆ ಇದ್ದರೂ, ಮುಂದಿನ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ರಾಜ್ಯಾದ್ಯ ...
Click here to post your views ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...
ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...