mail-img print-img

ದುಬೈಯಲ್ಲಿ ಭಾರತೀಯ ಪಿಂಚಣಿ ಯೋಜನೆ ಕೇಂದ್ರ ಶೀಘ್ರ ಪ್ರಾರಂಭ

ಬುಧವಾರ - ಜುಲೈ -25-2012

ಅಬುಧಾಬಿ, ಜು.25: ಸಾಗರೋತ್ತರ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಭಾರತೀಯ ಕಾರ್ಮಿಕರಿಗಾಗಿ ಹೊಸದಾಗಿ ಭಾರತ ಸರಕಾರವು ದುಬೈಯಲ್ಲಿ ಭಾರತೀಯ ಪಿಂಚಣಿ ಯೋಜನೆ ಕೇಂದ್ರವೊಂದನ್ನು ಶೀಘ್ರದಲ್ಲೇ ತೆರೆಯಲಿದೆ.

ಮಹತ್ವಾಕಾಂಕ್ಷೆಯ ನೂತನ ಯೋಜನೆ ಪಿಂಚಣಿ ಹಾಗೂ ಜೀವವಿಮಾ ನಿಧಿ(ಪಿಎಲ್‌ಐಎಫ್)ಯಡಿಯಲ್ಲಿ ಸಾವಿರಾರು ಭಾರತೀಯ ಪ್ರಜೆಗಳನ್ನು ನೋಂದಾಯಿಸಿಕೊಳ್ಳಲು ದುಬೈಯಲ್ಲಿ ಈ ಮೊದಲ ಕೇಂದ್ರವು ಅಸ್ತಿತ್ವಕ್ಕೆ ಬರಲಿದೆ.

ನೂತನ ಯೋಜನೆಯಿಂದ ಪ್ರಮುಖವಾಗಿ ಮೂರು ರೀತಿಯ ಪ್ರಯೋಜನಗಳಿದ್ದು, ಅದು ತಮ್ಮ ವೃದ್ಧಾಪ್ಯದ ಅವಧಿಗಾಗಿ ಪರಿಣಿತ ಹಾಗೂ ಪರಿಣಿತರಲ್ಲದ ಭಾರತೀಯ ಕಾರ್ಮಿಕರಿಂದ ಉಳಿತಾಯ ಮಾಡಿಸಿ ತಾಯ್ನಾಡಿಗೆ ಮರಳುವ ವೇಳೆ ಆರ್ಥಿಕ ನೆರವು ಒದಗುವಂತೆ ಮಾಡಲಿದೆ. ಮಾತ್ರವಲ್ಲದೆ, ಒಂದು ವೇಳೆ ಈ ಯೋಜನೆಯ ಸದಸ್ಯರು ಹೊರದೇಶದಲ್ಲಿ ದುಡಿಯುವ ವೇಳೆ ಆಕಸ್ಮಿಕ ಸಾವಿಗೆ ಒಳಗಾಗದಲ್ಲಿ ಅಂತಹವರಿಗೆ ಒಂದು ಲಕ್ಷ ರೂಪಾಯಿ(6,500 ದಿರ್ಹಂ) ಮೊತ್ತದ ಜೀವವಿಮೆಯೂ ಈ ಯೋಜನೆಯಲ್ಲಿ ಅಡಕವಾಗಿದೆ.

ಯುಎಇಯಲ್ಲಿರುವ ಸುಮಾರು 20 ಲಕ್ಷ ಭಾರತೀಯರಲ್ಲಿ ಶೇಕಡ 65ರಷ್ಟು ಮಂದಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಅಂತಹವರು ಈ ನೂತನ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು ಮೊದಲ ಅವಕಾಶ ಪಡೆಯಲಿದ್ದಾರೆ.

ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಕಾರ್ಮಿಕರು 18 ರಿಂದ 50 ವರ್ಷದೊಳಗಿನ ಪ್ರಾಯದವರಾಗಿದ್ದು, ಎಮಿಗ್ರೇಶನ್ ಕ್ಲಿಯರೆನ್ಸ್ ರಿಕ್ವೈರ್ಡ್‌(ಇಸಿಆರ್) ಪಾಸ್‌ಪೋರ್ಟ್‌ಗಳನ್ನು ಹೊಂದಿದವರಾಗಿರಬೇಕು. ಮೆಟ್ರಿಕ್ಯುಲೇಶನ್(ದರ್ಜೆ 10) ಉತ್ತೀರ್ಣರಾಗದವರಿಗೆ ಭಾರತ ಸರಕಾರವು ಇಸಿಆರ್ ಪಾಸ್‌ಪೋರ್ಟ್‌ಗಳನ್ನು ನೀಡುತ್ತದೆ.

ದುಬೈಯಲ್ಲಿ ತೆರೆಯಲ್ಪಡುವ ನೋಂದಣಿ ಕೇಂದ್ರವು ಈ ಉದ್ದೇಶದ ಮೊದಲ ಸಾಗರೋತ್ತರ ಕೇಂದ್ರವಾಗಿದೆ ಎಂದು ಭಾರತೀಯ ಸಾಗರೋತ್ತರ ವ್ಯವಹಾರಗಳ ಸಚಿವಾಲಯ(ಎಂಒಐಎ) ತಿಳಿಸಿದೆ. ಈ ನಿಟ್ಟಿನಲ್ಲಿ ಕೇರಳದಲ್ಲಿ ಈಗಾಗಲೇ ಒಂದು ಕೇಂದ್ರವನ್ನು ತೆರೆಯಲಾಗಿದೆ.

ಹೆಚ್ಚಿನ ಸಂಖ್ಯೆಯ ಭಾರತೀಯರು ದುಬೈ ಹಾಗೂ ಅಮೀರಶಾಹಿ ರಾಷ್ಟ್ರಗಳಲ್ಲಿ ದುಡಿಯುತ್ತಿರುವುದೇ ನೂತನ ಯೋಜನೆಗೆ ಸಂಬಂಧಿಸಿದ ಕೇಂದ್ರವನ್ನು ದುಬೈಯಲ್ಲಿ ತೆರೆಯಲು ಪ್ರಮುಖ ಕಾರಣವಾಗಿದೆ ಎಂದು ಯುಎಇಯಲ್ಲಿರುವ ಭಾರತದ ರಾಯಭಾರಿ ತಿಳಿಸಿದ್ದಾರೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಜನಸಂಖ್ಯೆ ಹೆಚ್ಚಳದ ಪರಿಣಾಮ

ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...


ನಿಮ್ಮ ಅನಿಸಿಕೆ

postClick here to post your views
EPAPER
access

ಅಗ್ಗದ ಮದ್ಯಕೆ ಶುದ್ಧ ನೀರು ಬೆರೆಸಿ ಕುಡಿವ ವೇಳೆಗೆ ಸೌಭಾಗ್ಯದ ಸೋನಿಯಾ ಬಾರಮ್ಮಾ...

ಕಳಂಕಿತರನ್ನು ಸಚಿವ ಸಂಪುಟದಿಂದ ಹೊರಗಿಟ್ಟು ಭೇಷ್ ಅನಿಸಿಕೊಂಡ ಸಿದ್ದು, ಖಾತೆ ಹಂಚಿಕೆಯಲ್ಲ ...


- ಪಿ.ಕೆ.ಮಲ್ಲನಗೌಡರ್‌

ಮನೋಲ್ಲಾಸದ ನಾಲೆಗಳು: (ಭಾಗ-2)

ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...


- ಶೂದ್ರ ಶ್ರೀನಿವಾಸ್

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್