ಟೆಹ್ರಾನ್, ಜು.25: ವಿದೇಶಿ ಒತ್ತಡದ ಮೂಲಕ ಎಂದಿಗೂ ಇರಾನ್‌ನ ಲೆಕ್ಕಚಾರವನ್ನು ಬದಲಾಯಿಸಲಾಗದು ಎಂದು ಇರಾನಿನ ಇಸ್ಲಾಮಿಕ್ ಕ್ರಾಂತಿಯ ನಾಯಕ ಆಯತುಲ್ಲಾ ಸಯೀದ್ ಅಲಿ ಖಾಮಿನೈ ಹೇಳಿದ್ದಾರೆ. ಪಶ್ಚಿಮದ ರಾಷ್ಟ್ರಗಳು ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿರುವುದಾಗಿಯೂ ಅವರು ಹೇಳಿದ್ದಾರೆ.
ಟೆಹ್ರಾನ್‌ನಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಇರಾನ್‌ನ ಅಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ. ಇರಾನ್ ರಾಷ್ಟ್ರವು ಎಂದಿಗೂ ಪಾ ಶ್ಚಿಮಾತ್ಯ ಒತ್ತಡಕ್ಕೆ ಮಣಿಯದು ಹಾಗೂ ಅಮೆರಿಕ ಕಲ್ಪಿತ ಇರಾನ್ ಮೇಲಿನ ನಿರ್ಬಂಧಗಳು ಇರಾನ್‌ನ ಅಧಿಕಾರಿಗಳಲ್ಲಿ ತಮ್ಮ ರಾಷ್ಟ್ರೀಯ ಹಕ್ಕುಗಳಿಗಾಗಿ ಹೋರಾಡುವ ಕೆಚ್ಚನ್ನು ಮೂಡಿಸುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಆಯತುಲ್ಲಾ ಖಾಮಿನೈ ಅಭಿಪ್ರಾಯಿಸಿದ್ದಾರೆ.
‘‘ಅವರು (ಇರಾನ್‌ನ ಶತ್ರುಗಳು) ಹೆಚ್ಚಿನ ನಿರ್ಬಂಧಗಳು ಹಾಗೂ ಒತ್ತಡಗಳನ್ನು ಹೇರುವ ಮೂಲಕ ಇರಾನ್ ಅಧಿಕಾರಿಗಳ ಲೆಕ್ಕಾಚಾರವನ್ನು ಬುಡಮೇಲು ಮಾಡಬಹುದೆಂದು ಭಾವಿಸಿದ್ದಾರೆ. ಆದರೆ ವಾಸ್ತವಿಕವಾಗಿ, ನಮ್ಮ ಲೆಕ್ಕಚಾರದ ಬಗ್ಗೆ ನಾವು ಮರು ಚಿಂತನೆ ಮಾಡುವುದಿಲ್ಲ. ಆದರೆ ನಾವು ದೃಢ ನಿಶ್ಚಯದೊಂದಿಗೆ ನಮ್ಮ ಲೆಕ್ಕಾಚಾರದಂತೆಯೇ ಮುಂದುವರಿಯಲಿದ್ದೇವೆ. ಪಶ್ಚಿಮದ ಆರ್ಥಿಕ ದಿಗ್ಬಂಧನಗಳಿಗೆ ಇರಾನ್ ಸೂಕ್ತ ಪ್ರತಿರೋಧ ತೋರಲಿದೆ’’ ಎಂದು ಖಾಮಿನೈ ವಿವರಿಸಿದ್ದಾರೆ.
‘‘ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳು ಇರಾನ್‌ನ ಅಣು ಇಂಧನ ಕಾರ್ಯಕ್ರಮ ಹಾಗೂ ಮಾನವ ಹಕ್ಕು ವಿಚಾರಗಳ ಮೇಲೆ ಒತ್ತಡ ಹೇರಲು ಯತ್ನಿಸುತ್ತಿವೆ. ಆದರೆ ಇಸ್ಲಾಮಿಕ್ ಸ್ಥಾಪನೆಗಳೊಂದಿಗಿನ ಅವರ ವೈರತ್ವವೇ ನಿಜವಾಗಿಯೂ ಅವರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಇಸ್ಲಾಮಿಕ್ ಸ್ಥಾಪನೆಗಳೊಂದಿಗಿನ ದ್ವೇಷವನ್ನು ಅವರು ಪರಮಾಣು ಇಂಧನ ಕಾರ್ಯಕ್ರಮದ ಹೆಸರಿನಲ್ಲಿ ಈಡೇರಿಸಿಕೊಳ್ಳಲು ಯತ್ನಿಸುತ್ತಿದ್ದಾರೆ’’ ಎಂದು ಇದೇ ವೇಳೆ ಖಾಮಿನೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...
Click here to post your views ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...
ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...