mail-img print-img

ಸಾರ್ವಜನಿಕ ವಲಯ ಬ್ಯಾಂಕ್‌ಗಳ ದ್ವಿದಿನ ಮುಷ್ಕರ ಆರಂಭ

ಗುರುವಾರ - ಆಗಸ್ಟ್ -23-2012

ಹೊಸದಿಲ್ಲಿ, ಆ.22: ಬ್ಯಾಂಕಿಂಗ್ ವಲಯದ ಸುಧಾರಣೆ ಹಾಗೂ ಸಾಮಾನ್ಯ ಚಟುವಟಿಕೆಗಳ ಹೊರಗುತ್ತಿಗೆಯನ್ನು ವಿರೋಧಿಸಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ನೌಕರರಿಂದ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರ ಆರಂಭಿಸಿದ್ದು ವ್ಯವಹಾರ ತೀವ್ರ ಬಾಧಿತವಾಗಿದೆ.

ಆದಾಗ್ಯೂ, ಹಲವು ಖಾಸಗಿ ವಲಯದ ಬ್ಯಾಂಕ್‌ಗಳು, ವಿದೇಶಿ ಬ್ಯಾಂಕ್‌ಗಳು ಹಾಗೂ ಎಟಿಎಂಗಳು ಸಾಮಾನ್ಯವಾಗಿಯೇ ವ್ಯವಹಾರ ಮುಂದುವರಿಸಿವೆ.

ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರ ಹಾಗೂ ಅಧಿಕಾರಿಗಳ 9 ಸಂಘಟನೆಗಳ ಒಕ್ಕೂಟವಾಗಿರುವ ಬ್ಯಾಂಕ್ ಒಕ್ಕೂಟಗಳ ಸಂಯುಕ್ತ ವೇದಿಕೆ (ಯುಎಫ್‌ಬಿಯು) ಈ ಮುಷ್ಕರಕ್ಕೆ ಕರೆ ನೀಡಿದೆ.

ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ವ್ಯವಹಾರ ಸುಧಾರಣೆಗೆ ಹಾಗೂ ಮಾನವ ಸಂಪನ್ಮೂಲ ಪ್ರಬಂಧನದ ಕುರಿತ ಖಂಡೇಲ್ವಾಲಾ ಸಮಿತಿಯ ವರದಿಯ ಏಕಪಕ್ಷೀಯ ಜಾರಿಯನ್ನು ಅದು ಪ್ರತಿಭಟಿಸುತ್ತಿದೆ.

ಇಂದು ಮುಂಜಾನೆಯಿಂದ ಮುಷ್ಕರ ನಡೆಯುತ್ತಿದೆ. ಸುಮಾರು 10 ಲಕ್ಷ ನೌಕರರು ಇದರಲ್ಲಿ ಭಾಗವಹಿಸುತ್ತಿದ್ದಾರೆ. 24 ಸಾರ್ವಜನಿಕ ವಲಯ, 12 ಖಾಸಗಿ ಹಾಗೂ 6 ವಿದೇಶಿ ಬ್ಯಾಂಕ್‌ಗಳ ನೌಕರರು ಅವರಲ್ಲಿ ಸೇರಿದ್ದಾರೆಂದು ಅಖಿಲ ಭಾರತ ಬಾಂಕ್ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ತಿಳಿಸಿದ್ದಾರೆ.

ಎಟಿಎಂಗಳು ಅವುಗಳಲ್ಲಿ ಹಣವಿರುವ ತನಕ ಕಾರ್ಯ ಚರಿಸಲಿವೆ. ಆಮೇಲೆ ಅವುಗಳ ಸೇವೆಯು ಬಾಧಿತವಾ ಗಲಿದೆಯೆಂದು ಅವರು ಹೇಳಿದ್ದಾರೆ.

 ಸರಕಾರದ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣ ಗಳ ವಿರುದ್ಧ ಮುಷ್ಕರಕ್ಕೆ ಕರೆ ನೀಡಲಾಗಿದೆ. ಕೆಟ್ಟ ಸಾಲಗಳ ವಸೂಲಿಗೆ ಕಠಿಣ ಹಾಗೂ ಪರಿಣಾಮ ಕಾರಿ ಕ್ರಮ ಕೈಗೊಳ್ಳ ಬೇಕೆನ್ನುವುದು ಬ್ಯಾಂಕ್ ಒಕ್ಕೂಟಗಳ ಬೇಡಿಕೆ ಯಾಗಿದೆ. ಮುಷ್ಕರವು ಸಾಮಾನ್ಯವಾಗಿ ಸಾಗುತ್ತಿದೆ. ಪ್ರದರ್ಶನವು ಪೂರ್ವಹ್ನ 10.30 ಕ್ಕೆ ಆರಂಭವಾಗಲಿದೆ.

ಮುಷ್ಕರದಲ್ಲಿ ಎಲ್ಲಾ 9 ಒಕ್ಕೂಟಗಳು ಭಾಗವಹಿಸುತ್ತಿವೆ ಯೆಂದು ಎಸ್‌ಬಿಎ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ರಾಕೇಶ್ ಅಗರ್ವಾಲ್ ತಿಳಿಸಿದ್ದಾರೆ.

ಪಿಂಚಣಿ ಹಾಗೂ ಮನೆ ಸಾಲಗಳ ಮರು ವಿಮರ್ಶೆ, ವಾರದಲ್ಲಿ 5 ದಿನ ಕೆಲಸ ಹಾಗೂ ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಬ್ಯಾಂಕ್ ಒಕ್ಕೂಟ ಗಳು ಬೇಡಿಕೆ ಮುಂದಿರಿಸಿವೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸುಮಾರು 87 ಸಾವಿರ ಶಾಖೆಗಳಿದ್ದು 10 ಲಕ್ಷಕ್ಕೂ ಹೆಚ್ಚು ನೌಕರರಿದ್ದಾರೆ. 63 ಸಾವಿರ ಎಟಿಎಂಗಳನ್ನು ನಡೆಸುತ್ತಿರುವ ಈ ಬ್ಯಾಂಕ್‌ಗಳು ದೇಶಾದ್ಯಂತ ಶೇ. 75 ರಷ್ಟು ಬ್ಯಾಂಕಿಂಗ್ ವ್ಯವಹಾರವನ್ನು ನಿಯಂತ್ರಿಸುತ್ತಿವೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಜನಸಂಖ್ಯೆ ಹೆಚ್ಚಳದ ಪರಿಣಾಮ

ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮನೋಲ್ಲಾಸದ ನಾಲೆಗಳು: (ಭಾಗ-2)

ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...


- ಶೂದ್ರ ಶ್ರೀನಿವಾಸ್

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್