mail-img print-img

ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ; ಫೆಲೆಸ್ತೀನ್‌ಗೆ ಬೆಂಬಲ: ಪ್ರಧಾನಿ

ಬುಧವಾರ - ಸೆಪ್ಟೆಂಬರ್ -12-2012

ಹೊಸದಿಲ್ಲಿ, ಸೆ. 11: ವಿಶ್ವಸಂಸ್ಥೆಯ ಪೂರ್ಣ ಹಾಗೂ ಸಮಾನ ಸದಸ್ಯತ್ವವನ್ನು ಪಡೆಯುವ ಫೆಲೆಸ್ತೀನ್‌ನ ಪ್ರಯತ್ನಕ್ಕೆ ನಿರಂತರ ಬೆಂಬಲ ನೀಡುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಮಂಗಳವಾರ ಹೇಳಿದ್ದಾರೆ. “ಯುನೆಸ್ಕೊದಲ್ಲಿ ಪೂರ್ಣ ಸದಸ್ಯತ್ವ ಸ್ಥಾನಮಾನವನ್ನು ಪಡೆಯುವ ಫೆಲೆಸ್ತೀನ್ ರಾಷ್ಟ್ರದ ಪ್ರಯತ್ನಗಳನ್ನು ನಿರಂತರವಾಗಿ ಬೆಂಬಲಿಸುವ ಮೂಲಕ ಭಾರತ ಸಕ್ರಿಯ ಪಾತ್ರ ವಹಿಸಿತ್ತು. ವಿಶ್ವಸಂಸ್ಥೆಯ ಪೂರ್ಣ ಹಾಗೂ ಸಮಾನ ಸದಸ್ಯತ್ವವನ್ನು ಪಡೆಯುವ ಫೆಲೆಸ್ತೀನ್‌ನ ಪ್ರಯತ್ನಗಳನ್ನೂ ನಾವು ನಿರಂತರವಾಗಿ ಬೆಂಬಲಿಸುತ್ತೇವೆ” ಎಂದು ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ನೀಡಿದ ಅಧಿಕೃತ ಭೇಟಿಯ ಸಂದರ್ಭದಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಪ್ರಧಾನಿ ಹೇಳಿದರು.“ಫೆಲೆಸ್ತೀನ್ ಮತ್ತು ಇಸ್ರೇಲ್ ನಡುವೆ ಶೀಘ್ರವೇ ಶಾಂತಿ ಮಾತುಕತೆ ಆರಂಭಗೊಳ್ಳುವುದನ್ನು ಭಾರತ ಎದುರು ನೋಡುತ್ತಿದೆ. ಇದು ಉಭಯ ಬಣಗಳು ವ್ಯಾಪಕ ತಳಹದಿಯ ತಿಳುವಳಿಕೆಯೊಂದಕ್ಕೆ ಬರಲು ಸಹಾಯ ಮಾಡಲಿದೆ ಎಂಬ ವಿಶ್ವಾಸ ನಮಗಿದೆ” ಎಂದರು.

ಭಾರತ ಪ್ರವಾಸದಲ್ಲಿರುವ ಫೆಲೆಸ್ತೀನ್ ಅಧ್ಯಕ್ಷರೊಂದಿಗೆ ತಾನು ಅತ್ಯಂತ ಫಲಪ್ರದ ಮಾತುಕತೆಗಳನ್ನು ನಡೆಸಿರುವುದಾಗಿ ಡಾ. ಸಿಂಗ್ ತಿಳಿಸಿದರು.“ಅಧ್ಯಕ್ಷ ಅಬ್ಬಾಸ್ ಮತ್ತು ನಾನು ಭಾರತ-ಫೆಲೆಸ್ತೀನ್ ಭಾಗೀದಾರಿಕೆಗೆ ಪೂರಕವಾಗುವ ನಿಟ್ಟಿನಲ್ಲಿ ಅತ್ಯಂತ ಉಪಯುಕ್ತ ಮಾತುಕತೆಗಳನ್ನು ನಡೆಸಿದೆವು. ಉಭಯ ದೇಶಗಳ ನಡುವಿನ ಭಾಗೀದಾರಿಕೆ ಇತಿಹಾಸದಲ್ಲೇ ಹಾಸು ಹೊಕ್ಕಾಗಿದೆ ಹಾಗೂ ಅದು ನಮ್ಮ ರಾಷ್ಟ್ರೀಯ ತತ್ವಗಳಲ್ಲೇ ಇದೆ” ಎಂದು ಪ್ರಧಾನಿ ಹೇಳಿದರು.

ಫೆಲೆಸ್ತೀನ್ ಹೋರಾಟಕ್ಕೆ ಬೆಂಬಲ ಭಾರತದ ವಿದೇಶ ನೀತಿಯ ಪ್ರಮುಖ ಅಂಶವಾಗಿದೆ ಎಂಬುದರತ್ತ ಬೆಟ್ಟು ಮಾಡಿದ ಪ್ರಧಾನಿ, “ಪೂರ್ವ ಜೆರುಸಲೇಂ ರಾಜಧಾನಿಯಾಗಿ ಸಾರ್ವಭೌಮ, ಸ್ವತಂತ್ರ ಹಾಗೂ ಏಕೀಕೃತ ಫೆಲೆಸ್ತೀನ್ ರಾಷ್ಟ್ರವನ್ನು ನಿರ್ಮಿಸುವ ಫೆಲೆಸ್ತೀನ್‌ನ ಜನರ ಹೋರಾಟಕ್ಕೆ ಭಾರತದ ದೃಢ ಬೆಂಬಲವನ್ನು ತಮ್ಮ ಭೇಟಿಯ ವೇಳೆ ನಾನು ಪುನರುಚ್ಚರಿಸಿದೆ” ಎಂದರು.
 

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮೊದಲ ಯುದ್ಧದಲ್ಲಿ ಗೆದ್ದ ಸಿದ್ದರಾಮಯ್ಯ

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮೊದಲ ಯುದ್ಧವನ್ನು ಗೆದ್ದಿದ್ದಾರೆ. ಸರಕಾರ ಸುಸೂತ್ರವಾಗಿ ನಡೆಯ ಬೇಕೆಂದಿದ್ದರೆ ಈ ಯುದ್ಧವನ್ನು ಗೆಲ್ಲಲೇ ಬೇಕಾಗ ...


ನಿಮ್ಮ ಅನಿಸಿಕೆ

postClick here to post your views
EPAPER
access

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್

ಅಕ್ಷರ ಸೇವೆಯಿಂದ ಜನಸೇವೆಗೆ;ತೆಂಕಮಿಜಾರಿನ ಮುತ್ತು

ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...


- ಪ್ರೇಮಶ್ರೀ ಕಲ್ಲಬೆಟ್ಟು

ನಾನು ಮತ್ತು ದೇವರು

 ರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...


- ಸುನೀಲ್ ರಾವ್

ಬಿಟ್ಟಿ ಅಂಕದ ಪಿಯುಸಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಬುಟ್ಟಿಗೆಸೆ!

 ಮಾನ್ಯರೆ,

ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...


- -‘ಮಾತರಿ’ ಸಾಗ