
ಹೊಸದಿಲ್ಲಿ, ಜು.9: ಅಬುಧಾಬಿಯಿಂದ ಹೊಸದಿಲ್ಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ಸೋಮವಾರ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡುದರಿಂದ ಪಾಕಿಸ್ತಾನದ ದಕ್ಷಿಣದ ಸಿಂಧ್‌ನ ಸವಾಬ್‌ಶಾದಲಿ ತುರ್ತಾಗಿ ಇಳಿಯಬೇಕಾಯಿತೆಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.ವಿಮಾನದಲ್ಲಿದ್ದ ಎಲ್ಲ 122 ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಏರ್ ಬಸ್‌ನ ಕ್ಯಾಪ್ಟನ್ ಪಾಕಿಸ್ತಾನದ ಅಧಿಕಾರಿಗಳನ್ನು ಸಂಪರ್ಕಿಸಿ ತುರ್ತು ಅವತರಣಕ್ಕೆ ಅನುಮತಿ ಕೇಳಿದರೆಂದು ನಾಗರಿಕ ವಿಮಾನಯಾನ ಪ್ರಾಧಿಕಾರದ ವಕ್ತಾರ ಪರ್ವೇಜ್ ಜಾರ್ಜ್ ಹೇಳಿದ್ದಾರೆ.ವಿಮಾನವು ನಸುಕಿನ 3:37ರ ವೇಳೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನವಾಬ್‌ಶಾದಲ್ಲಿ ಸುರಕ್ಷಿತವಾಗಿ ಇಳಿಯಿತೆಂದು ಅವರು ತಿಳಿಸಿದ್ದಾರೆ.ಅಬುಧಾಬಿಯಿಂದ ದಿಲ್ಲಿಗೆ ಹಾರುತ್ತಿದ್ದ ಏರ್‌ಇಂಡಿಯಾ ವಿಮಾನವು ಪಾಕಿಸ್ತಾನದ ಮೇಲೆ ಹಾರುತ್ತಿದ್ದಾಗ ಪೈಲೆಟ್ ಕಾಕ್‌ಪಿಟ್‌ನಲ್ಲಿ ಅಪಾಯ ಸೂಚಕ ದೀಪವನ್ನು ಗಮನಿಸಿದನು ಹಾಗೂ ಹತ್ತಿರದ ನವಾಬ್‌ಶಾ ನಿಲ್ದಾಣದಲ್ಲಿ ಇಳಿಯಲು ಅನುಮತಿ ಕೇಳಿದನು.
ಪಾಕಿಸ್ತಾನಿ ಅಧಿಕಾರಿಗಳು ಪ್ರಯಾಣಿಕ ರಿಗೆ ವಿಮಾನದಿಂದ ಇಳಿಯಲು ಅನುಮತಿ ನೀಡಿದರೂ, ಕ್ಯಾಪ್ಟನ್ ಅವರನ್ನು ವಿಮಾನದಲ್ಲೇ ಇರುವಂತೆ ವಿನಂತಿಸಿದನೆಂದು ಜಾರ್ಜ್ ವಿವರಿಸಿದ್ದಾರೆ.ಸಿಲುಕಿರುವ ಪ್ರಯಾಣಿಕರನ್ನು ಒಯ್ಯಲು ಏರ್ ಇಂಡಿಯಾ ಬೇರೆ ವಿಮಾನ ಕಳುಹಿಸಿದೆ. ಈ ಘಟನೆಯ ಕುರಿತ ಭಾರತವು ತನ್ನ ಪಾಕಿಸ್ತಾನಿ ದೂತಾವಾಸದೊಂದಿಗೆ ನಿಕಟ ಸಂಪರ್ಕದಲ್ಲಿದೆ.
ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾನ್ ಬೂಕರ್ ಪ್ರಶಸ್ತಿ ಕೂದಲೆಳೆಯಲ್ಲಿ ಕೈ ತಪ್ಪಿತು. ಅಮೆರಿಕದ ಹಿರಿಯ ಬರಹಗಾರ್ತಿ ಲಿಡಿಯಾ ಡೇವಿಸ್ ಈ ಪ್ರಶಸ್ತಿಯನ್ನ ...
Click here to post your views ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...