mail-img print-img

*ನಾನೀಗ ಚಲಾವಣೆಯಲ್ಲಿರುವ ನಾಣ್ಯ.

ಸೋಮವಾರ - ಸೆಪ್ಟೆಂಬರ್ -10-2012

 -ಶಕುಂತಲಾ ಶೆಟ್ಟಿ, ಮಾಜಿ ಶಾಸಕಿ

 =ಚಲಾವಣೆಯಲ್ಲಿರುವ ನಾಲ್ಕಾಣೆ ನಾಣ್ಯ ಎಂದು ಸದಾನಂದ ಗೌಡರು ನಕ್ಕರಂತೆ.      


*ಬೊಕ್ಕಸದ ಹಣದಲ್ಲಿ ಶಾಸಕರು ವಿದೇಶ ಪ್ರವಾಸ ಹೋಗಿರುವುದು ತಪ್ಪು.

-ಡಿ.ವಿ.ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ

 =ಬೊಕ್ಸಸದಾದರೇನು, ಅವರ ಮನೆಯ ತಿಜೋರಿಯದ್ದಾದರೇನು, ಜನರ ಹಣವೇ ಅಲ್ಲವೆ?  


*ಕಾಂಗ್ರೆಸ್‌ನಿಂದ ಮಾತ್ರ ಜನರ ಸಮಸ್ಯೆ ದೂರ.

-ವಿನಯ ಕುಮಾರ್ ಸೊರಕೆ, ಎಐಸಿಸಿ ಕಾರ್ಯದರ್ಶಿ  

 =ಸದ್ಯಕ್ಕೆ ಕಾಂಗ್ರೆಸ್‌ನ ಸಮಸ್ಯೆ ದೂರ ಮಾಡುವವರಾರು, ಎನ್ನುವುದನ್ನು ಯೋಚಿಸಿ.      


*ಈಗಿನ ಪರಿಸ್ಥಿತಿಯಲ್ಲಿ ವಿದೇಶಕ್ಕೆ ಅಷ್ಟೇ ಅಲ್ಲ, ಹೊರ ರಾಜ್ಯಗಳಿಗೂ ಶಾಸಕರು ಹೋಗಬಾರದು.

 

-ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ  

 =ಅಂದರೆ ಮತ್ತೆ ರೆಸಾರ್ಟ್‌ಗೆ ಹೋಗುವ ದಿನ ಹತ್ತಿರ ಬಂತೆ?      


*ರಾಜ್ಯದಲ್ಲಿ ಉಗ್ರರನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಸರ್ವ ಸನ್ನದ್ಧವಾಗಿದೆ.

-ಜ್ಯೋತಿ ಪ್ರಕಾಶ್ ಮಿರ್ಜಿ, ಪೊಲೀಸ್ ಆಯುಕ್ತ  

 =ಚುನಾವಣೆ ಹತ್ತಿರ ಬರುತ್ತಿರುವ ಸೂಚನೆಯೆ? 


*ದೇಶದ ಸಂವಿಧಾನಕ್ಕಿಂತ ದೊಡ್ಡವರು ಯಾರೂ ಇಲ್ಲ.

-ನಿತೀಶ್ ಕುಮಾರ್, ಬಿಹಾರ ಮುಖ್ಯಮಂತ್ರಿ  

 =ಮೋದಿ ಜೈಲು ಸೇರುವವರೆಗೆ ನಿಮ್ಮ ಮಾತನ್ನು ಒಪ್ಪುವ ಹಾಗಿಲ್ಲ.    


*ಮೊದಲು ಅತಿ ಭ್ರಷ್ಟರನ್ನು ಹೊರಕ್ಕೆ ಕಳುಹಿಸಬೇಕು. ಇದಕ್ಕಾಗಿ ಕಡಿಮೆ ಭ್ರಷ್ಟರೊಡನೆ ಕೈಜೋಡಿಸಬೇಕು.

-ಕಿರಣ್ ಬೇಡಿ, ನಿವೃತ್ತ ಐಪಿಎಸ್ ಅಧಿಕಾರಿ  

 =ಅಡಿಕೆ ಕದ್ದವನು ಕಳ್ಳ, ಆನೆ ಕದ್ದವನೂ ಕಳ್ಳ.     


*ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಬಾರದಂತೆ ಮಡೆಸ್ನಾನ ಸಮಸ್ಯೆ ಪರಿಹರಿಸಲಾಗುವುದು.

-ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವ  

=ಪರಿಹರಿಸುವುದಕ್ಕಿಂತ ನಿಷೇಧಿಸುವುದೇ ಅರ್ಥಪೂರ್ಣವಲ್ಲವೆ?      


*ಜಾತಿ, ಧರ್ಮದ ಮೇಲೆ ಓಟಿನ ಬೇಟೆ ಇಂದಿನ ರಾಜಕೀಯ ದುಸ್ಥಿತಿಗೆ ಕಾರಣ.

-ಡಿ.ವಿ.ಸದಾನಂದ ಗೌಡ, ಮಾಜಿ  ಮುಖ್ಯಮಂತ್ರಿ  

 =ಬೇಟೆಯಾಡುವ ಶಕ್ತಿ ಕುಂದಿದ ಪುತ್ತೂರಿನ ಬೆಕ್ಕು ಸನ್ಯಾಸಿಯಾಯಿತಂತೆ.      


*ಎಬಿವಿಪಿ ಕೇಸ್ ವಾಪಸ್ ಆತುರದ ನಿರ್ಧಾರ.

-ಎಚ್.ಡಿ.ಸಾಂಗ್ಲಿಯಾನ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಉಪಾಧ್ಯಕ್ಷ  

 =ಚುನಾವಣೆ ಕೆಲಸಕ್ಕೆ ಜನ ಬೇಕಲ್ಲ, ಅದಕ್ಕೇ ಆತುರ.      


*ನನ್ನ ಕೈಗೆ ಸೇನೆ ಕೊಡಿ, ಪವಾಡ ನೋಡಿ.

-ಬಾಳಾ ಠಾಕ್ರೆ, ಶಿವಸೇನೆ ನಾಯಕ  

 =ಯಾವ ಸೇನೆ? ರಾಮ ಸೇನೆಯೋ, ಶಿವಸೇನೆಯೋ?      


*ಸಾಂಸ್ಕೃತಿಕ ಮೌಲ್ಯಗಳಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ.

-ಮೈ.ಚ.ಜಯದೇವ, ಆರೆಸ್ಸೆಸ್ ರಾಷ್ಟ್ರೀಯ ಸದಸ್ಯ  

=ವಂಚನೆಯನ್ನೇ ಸಾಂಸ್ಕೃತಿಕ ಮೌಲ್ಯವೆಂದು ನಿಮ್ಮಂಥವರು ಕಲಿಸಲು ಹೊರಡುತ್ತಿರುವಾಗ ಅವರದರಿಂದ ದೂರವಿರುವುದೇ ಒಳಿತು.      


*ವಿದೇಶದಲ್ಲಿ ವ್ಯಾಸಂಗ ಮಾಡಿದ ವೈದ್ಯರಿಗೆ ದೇಶದಲ್ಲಿ ಅವಕಾಶ.

-ಗುಲಾಂ ನಬಿ ಆಜಾದ್, ಕೇಂದ್ರ ಆರೋಗ್ಯ ಸಚಿವ  

=ದೇಶದ ಕಾಲೇಜುಗಳ ಮೇಲೆ ನಂಬಿಕೆಯಿಲ್ಲವೆ?       




Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಜನಸಂಖ್ಯೆ ಹೆಚ್ಚಳದ ಪರಿಣಾಮ

ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮನೋಲ್ಲಾಸದ ನಾಲೆಗಳು: (ಭಾಗ-2)

ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...


- ಶೂದ್ರ ಶ್ರೀನಿವಾಸ್

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್