= ಆದ್ದರಿಂದಲೇ ಹೆಚ್ಚಿನ ಫುಡಾರಿಗಳು ವಿಶ್ವಾಸದ್ರೋಹದ ಧೋರಣೆಯಲ್ಲಿ ಅಚಲ ನಂಬಿಕೆ ಇಟ್ಟಿರುತ್ತಾರೆ.
* ನ್ಯಾಯಾಲಯದ ಎಲ್ಲ ತೀರ್ಪಿಗೂ ನಮ್ಮ ಕುಟುಂಬ ತಲೆಬಾಗುತ್ತದೆ.
= ಬೇರೆ ಆಯ್ಕೆಯೇನಾದರೂ ಉಳಿದಿದೆಯೇ?
* ನನ್ನ ಗಂಡ ಸೂಪರ್.
=ದಾಂಪತ್ಯದ ಆರಂಭದ ದಿನದಲ್ಲಿ ಹಾಗೆಲ್ಲಾ ಅನಿಸುವುದುಂಟು.
* ನರೇಂದ್ರ ಮೋದಿ ಓರ್ವ ರಾಕ್ಷಸ.
=ಆತನನ್ನು ನೇತಾರನ ಸ್ಥಾನಕ್ಕೇರಿಸಿದ ಪಕ್ಷವನ್ನು ಏನೆಂದು ಕರೆಯುತ್ತೀರಿ?
* ಪ್ರಧಾನಿ ಮನಮೋಹನ್ ಸಿಂಗ್ ನಗಲೂ ಆಗದಷ್ಟು ಒತ್ತಡದಲ್ಲಿದ್ದಾರೆ.
=ಧರ್ಮಗುರುಗಳು ವಿದೂಷಕರಾಗಿ ನಗಿಸಲು ಇಳಿದಿರುವುದು ನಗುವ ವಿಷಯವೇ?
* ನಾನು ರಾಷ್ಟ್ರದ್ರೋಹಿಯಾಗಿದ್ದರೆ (ಸರಕಾರ) ನನ್ನನ್ನು ಜೈಲಿಗೆ ತಳ್ಳಲಿ.
=ಅಷ್ಟು ದೊಡ್ಡ ಅಪರಾಧಕ್ಕೆ ಇಷ್ಟು ಸಣ್ಣ ಶಿಕ್ಷೆ ಸಾಕೇ?
* ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರು ಹರಕೆಯ ಕುರಿಗಳಾಗುತ್ತಿದ್ದಾರೆ.
=ಧಾಟಿ ನೋಡಿದರೆ, ಯಾವುದೋ ಹೊಸ ಹುದ್ದೆಗಾಗಿ ಚೌಕಾಶಿ ಆರಂಭಿಸಿರುವ ಹಾಗಿದೆಯಲ್ಲಾ!
* ಹಣಕ್ಕೆ ಬೆಲೆ ನೀಡಿದರೆ ರಾಜಕಾರಣಿಗಳಿಗೆ ಬೆಲೆ ಸಿಗುವುದಿಲ್ಲ.
=ಆದರೂ ಅತ್ಯಧಿಕ ಬೆಲೆಕೊಟ್ಟು ರಾಜಕಾರಣಿಗಳನ್ನು ಖರೀದಿಸುತ್ತಿರುವ ಪಕ್ಷ ನಿಮ್ಮದೇ ತಾನೇ?
* ಶ್ರೀರಾಮುಲು ಅವರಿಗೆ ಉಜ್ವಲ ಭವಿಷ್ಯವಿದೆ.
=ತಾವು ಜ್ಯೋತಿಷ್ಯ ವೃತ್ತಿಗೆ ಇಳಿದಿದ್ದು ಯಾವಾಗಿನಿಂದ ಸ್ವಾಮೀ?
* ಕೊಳೆತ ಹಣ್ಣುಗಳ ಬುಟ್ಟಿಯಲ್ಲಿ ಒಳ್ಳೆಯ ಹಣ್ಣುಗಳನ್ನು ಹೆಚ್ಚುದಿನ ಇಡಬಾರದು.
= ನೀವಿರುವ ಬುಟ್ಟಿಯಲ್ಲಿನ ಎಲ್ಲ ಹಣ್ಣುಗಳೂ ಕೊಳೆತಿರುವುದರಿಂದ ಇದು ನೀವು ಚಿಂತಿಸಬೇಕಾದ ಸಮಸ್ಯೆ ಅಲ್ಲ.
* ನನಗೂ ಮುಖ್ಯಮಂತ್ರಿಯಾಗುವ ಆಸೆಯಿದೆ.
=ಆ ಸ್ವಾರ್ಥಕ್ಕಾದರೂ ಈಗಾಗಲೇ ಗುಜರಿಯಾಗಿರುವ ನಿಮ್ಮ ಪಕ್ಷವನ್ನು ಬಲಪಡಿಸಲು ಸ್ವಲ್ಪ ಶ್ರಮಿಸಿ ಸಾರ್.
*ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಅಡ್ಡಮತ ಹಾಕಿದ ಬಿಜೆಪಿ ಶಾಸಕರು ಯಾರ್ಯಾರು ಎಂಬುದು ನನಗೆ ಗೊತ್ತಿದೆ.
=ನೀವು ಅಡ್ಡ ಹಾದಿಯ ಪರಮ ತಜ್ಞರೆಂಬುದು ಗುಟ್ಟೇನೂ ಅಲ್ಲ.
ಪಿ.ಎ.ರೈ
ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...
Click here to post your views ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...
ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...