mail-img print-img

*ಲೋಕಾಯುಕ್ತ ನೇಮಕ ಮಾಡದಿರುವುದು ನನ್ನ 11 ತಿಂಗಳ ಅಧಿಕಾರಾವಧಿಯ ದೊಡ್ಡ ಪ್ರಮಾದ.

ಸೋಮವಾರ - ಜುಲೈ -23-2012

-ಡಿ.ವಿ.ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ

=ಮುಖ್ಯಮಂತ್ರಿ ಸ್ಥಾನ ಕೈ ತಪ್ಪುವುದು ಮೊದಲೇ ಗೊತ್ತಿದ್ದರೆ ಮಾಡಿ ಬಿಡುತ್ತಿದ್ದಿರಿ ಅಲ್ಲವೆ?  

 


*ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರೂ ರೇಸ್‌ನಲ್ಲಿಲ್ಲ.

-ಈಶ್ವರಪ್ಪ, ಉಪಮುಖ್ಯಮಂತ್ರಿ

=ಎಲ್ಲರೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ರೇಸ್‌ನಲ್ಲೇ ಇದ್ದಾರೆ.


*ಕಾಶ್ಮೀರ ವಿವಾದಕ್ಕೆ ಹೊರಗಿನವರು ಪರಿಹಾರ ಸೂಚಿಸಲು ಸಾಧ್ಯವಿಲ್ಲ.

 -ಬರಾಕ್ ಒಬಾಮಾ, ಅಮೆರಿಕಾ ಅಧ್ಯಕ್ಷ

=ಸದ್ಯಕ್ಕೆ ಕಾಶ್ಮೀರಿಗಳನ್ನು ಬಿಟ್ಟರೆ ಎಲ್ಲರೂ ಹೊರಗಿನವರೇ.  


*ನಾನು ಯಾರ ಕೈಗೊಂಬೆಯೂ ಅಲ್ಲ.

 -ಜಗದೀಶ್ ಶೆಟ್ಟರ್, ಮುಖ್ಯಮಂತ್ರಿ

=ಬಹುಶಃ ಯಡಿಯೂರಪ್ಪರ ಕಾಲ್ ಗೊಂಬೆಯಾಗಿರಬಹುದು.


*ಜೆಡಿಎಸ್ ಒಡೆಯಲು ಕಾಂಗ್ರೆಸ್ ನಾಯಕರು ಸಂಚು ರೂಪಿಸಿದ್ದರಿಂದಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಾಯಿತು.

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

=ಕಾಂಗ್ರೆಸ್ ನಾಯಕರು ಇನ್ನೊಮ್ಮೆ ಅಂತಹದೇ ಸಂಚು ರೂಪಿಸಲಿ ಎಂಬ ಆಸೆ ನಿಮಗೆ ಒಳಗೊಳಗೆ ಇರುವುದು ಬಿಜೆಪಿಗೆ ಗೊತ್ತಾಗಿ ಬಿಟ್ಟಿದೆ.  


*ನಮ್ಮ ಕುಟುಂಬಕ್ಕೆ ಯಾವುದೋ ಶಾಪ ತಟ್ಟಿದೆ. ಮುಸ್ಲಿಂ ಧರ್ಮದ ಎಲ್ಲ ಗುರುಗಳು ಆಶೀರ್ವಾದ ಮಾಡುವ ಮೂಲಕ ಶಾಪದಿಂದ ಮುಕ್ತಿ ನೀಡಬೇಕು.

-ದೇವೇಗೌಡ, ಮಾಜಿ ಪ್ರಧಾನಿ

=ಬಹುಶಃ ಮತದಾರರ ಶಾಪವಿರಬಹುದು.  


*ಹೈಕಮಾಂಡ್ ಸೂಚಿಸಿದರೆ ರಾಜ್ಯ ಕಾಂಗ್ರೆಸ್ ನಾಯಕತ್ವ ವಹಿಸಿಕೊಳ್ಳಲು ಸಿದ್ಧ

 -ವೀರಪ್ಪ ಮೊಯ್ಲಿ, ಕೇಂದ್ರ ಸಚಿವ

=ಅಂತೂ ರಾಜ್ಯದ ಜನರು ಇನ್ನೊಂದು ಮಹಾಕಾವ್ಯವನ್ನು ಓದಲು ಸಿದ್ಧರಾಗಲೇಬೇಕು.  


*ನಾವು ಅತೃಪ್ತರಲ್ಲ, ನೊಂದವರು.

 -ಗೋಪಾಲಕೃಷ್ಣ, ಸಚಿವ ಸ್ಥಾನ ವಂಚಿತ ಶಾಸಕ

=ಹಾಗಾದರೆ ನಾಡಿನ ಜನತೆಯೇ ಅತೃಪ್ತರಾಗಿರಬಹುದೆ?


*ಮೋದಿ ಹೀಟ್ಲರ್ ಇದ್ದಂತೆ

-ಕೇಶುಭಾಯ್ ಪಟೇಲ್, ಗುಜರಾತ್ ಮಾಜಿ ಮುಖ್ಯಮಂತ್ರಿ

=ಅದನ್ನು ಕೇಳಿ ಮೋದಿ ಸಂಭ್ರಮಿಸಿದರಂತೆ.  


*ಬರ ಪರಿಹಾರದ ಬಗ್ಗೆ ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ.

 -ಗೋವಿಂದ ಕಾರಜೋಳ, ಕನ್ನಡ ಮತ್ತು ಸಂಸ್ಕ್ರತಿ ಸಚಿವ

=ನಿಮ್ಮ ನಿಜ ತಾಯಿ ಸುಷ್ಮಾ ಸ್ವರಾಜ್ ರಾಜ್ಯದಿಂದ ದೋಚಿದ ಹಣವಿದೆಯಲ್ಲ ಅದನ್ನೇ ಬಳಸಿಕೊಳ್ಳಿ.


*ಮಕ್ಕಳು ತಪ್ಪು ಮಾಡಿದ್ದಾರೆ ಎಂದರೆ, ಅಪ್ಪ ಅವರನ್ನು ಸರಿಯಾಗಿ ಬೆಳೆಸಿಲ್ಲ ಎಂದರ್ಥ. ಹೀಗಾಗಿ ಅಪ್ಪನಿಗೆ ಶಿಕ್ಷೆ ವಿಧಿಸಬೇಕು

-ರಮಣ್ ಸಿಂಗ್, ಛತೀಸ್‌ಗಡ ಮುಖ್ಯಮಂತ್ರಿ

=ಪೊಲೀಸ್ ನಿಮ್ಮ ತಂದೆಯವರನ್ನು ಹುಡುಕುತ್ತಿದ್ದಾರಂತೆ.  


*ಮುಂದಿನ ಬಾರಿಯೂ ಬಿಜೆಪಿ ಅಧಿಕಾರಕ್ಕೆಬರುತ್ತದೆ, ಆಗ ನಾನು ಸಚಿವೆ ಆಗ್ತೇನೆ

-ವಿಮಲಾ ಗೌಡ, ವಿಧಾನ ಪರಿಷತ್ ಉಪಸಭಾಪತಿ

=ಯಾರೋ ನಿಮ್ಮನ್ನು ಜುಲೈ ತಿಂಗಳಲ್ಲಿ ಎಪ್ರಿಲ್ ಫೂಲ್ ಮಾಡಿದ್ದಾರೆ.


*ಯೋಗ ಈ ದೇಶವನ್ನು ನಿರೋಗಿ ಮಾಡಲು ಇರುವ ದಿವ್ಯಾಸ್ತ್ರ

 -ಬಾಬಾ ರಾಮ್‌ದೇವ್, ಯೋಗ ಗುರು

=ನಿಮ್ಮಂತಹ ಹತ್ತು ಹಲವು ರೋಗಗಳಿಗೆ ಶಸ್ತ್ರ ಚಿಕಿತ್ಸೆಯೇ ಬೇಕಾಗುತ್ತದೆ ಸ್ವಾಮೀಜಿ.



 

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...


ನಿಮ್ಮ ಅನಿಸಿಕೆ

postClick here to post your views
EPAPER
access

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್

ರಾಜಕೀಯ ಪಕ್ಷಗಳ ಆತ್ಮವಿಮರ್ಶೆ ಅಗತ್ಯ

ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...


- ನಾ ದಿವಾಕರ್