=ದುರ್ಬಲ ಶಾಲೆಗಳ ಗೋಡೆಗಳು ಯಾವಾಗ ಬೇಕಾದರೂ ಉರುಳೀತು, ನಿಮ್ಮ ಸರಕಾರದ ಹಾಗೆ.
*ಅಮೆರಿಕದ ಯುವಜನರಿಗೆ ಬೆಂಗಳೂರಿಗರು ಪ್ರತಿಸ್ಪರ್ಧಿಗಳು.
=ಅಮೆರಿಕದ ರೈತರಿಗೆ ಕರ್ನಾಟಕದ ರೈತರು ಪ್ರತಿಸ್ಪರ್ಧಿಗಳಾದಾಗ ಸಂತೋಷ ಪಡಬಹುದು.
*ನರೇಂದ್ರ ವೊದಿ ಗುಜರಾತಿನ ಸಿಂಹ.
=ನೀವು ಆ ಗ್ರಾಮ ಸಿಂಹದ ಬಾಲವೆ?
* ಗುಜರಾತ್‌ನಲ್ಲಿ ನನಗೆ ಯಾವುದೇ ಭ್ರಷ್ಟಾಚಾರ ಕಂಡು ಬರುತ್ತಿಲ್ಲ.
=ನಿಮ್ಮ ಕಂಪೆನಿಯ ಔಷಧಿಗಳು ತೊರೆದು ಅಲೋಪತಿ ಔಷಧಿ ತೆಗೆದುಕೊಳ್ಳಿ. ಕಣ್ಣಿನ ರೋಗ ಗುಣವಾದೀತು.
*ರಾಜ್ಯದ ಕೆರೆಗಳ ಹೂಳೆತ್ತಲು ಕೇಂದ್ರ ಸರಕಾರಕ್ಕೆ ೯೦೦ ಕೋಟಿ ರೂ. ಮೊತ್ತದ ಪ್ರಸ್ತಾವನೆ ಕಳುಹಿಸಲಾಗಿದೆ.
=ಬಿಜೆಪಿಯೊಳಗಿನ ಹೂಳೆತ್ತುವುದು ಯಾವಾಗ?
*ಒಂದು ತಿಂಗಳಲ್ಲಿ ಮಳೆಯಾಗದಿದ್ದರೆ ರಾಜ್ಯದಲ್ಲಿ ಮತ್ತೆ ವಿದ್ಯುತ್ ಸಮಸ್ಯೆ ಉದ್ಭವಿಸಲಿದೆ.
=ಜೋರು ಮಳೆಯಾಗಿದ್ದಾಗ ಸಮಸ್ಯೆಯೇನೂ ನಿವಾರಣೆಯಾಗಿರಲಿಲ್ಲವಲ್ಲ?
*ಅಸ್ಸಾಂ ಹಿಂಸೆಗೆ ಅಕ್ರಮ ವಲಸೆ ಕಾರಣ.
=ಆರ್ಯರ ಅಕ್ರಮ ವಲಸೆಗೂ ಅಸ್ಸಾಂಗೂ ಏನು ಸಂಬಂಧ?
*ಬಸವಣ್ಣನ ಆಶಯಗಳು ಸಂಪೂರ್ಣ ಆಚರಣೆಗೆ ಬರದ ಕಾರಣ ಸಮಾಜದಲ್ಲಿ ಇಂದಿಗೂ ಅಸ್ಪಶ್ಯತೆ ಉಳಿದುಕೊಂಡಿದೆ.
=ಆಚರಣೆಗೆ ಬರದೇ ಇರಲು ಮುಖ್ಯ ಕಾರಣವೇ ಬಸವಣ್ಣನ ಅನುಯಾಯಿಗಳು.
*ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಜನತೆ ಸರಿಯಾದ ಪಾಠ ಕಲಿಸುತ್ತಾರೆ.
=ನೀವು ಪಾಠಗಳನ್ನು ಜೈಲಿನಲ್ಲೇ ಕಲಿಯಬಹುದು ಬಿಡಿ.
*ಹೆಣ್ಣು ಮಕ್ಕಳ ಸ್ವಾತಂತ್ರಕ್ಕೆ ಮತ್ತು ಹಕ್ಕುಗಳಿಗೆ ಚ್ಯುತಿ ಬಂದಾಗ ಆಯೋಗ ಅವರ ಜೊತೆ ಇರುತ್ತದೆ.
=ಅಂದರೆ, ಹೋಮ್‌ಸ್ಟೇ ಪ್ರಕರಣಗಳಲ್ಲಿ ಹಕ್ಕುಚ್ಯುತಿ ನಡೆಯಲಿಲ್ಲ ಎಂದು ಅಭಿಪ್ರಾಯವೆ?
*ಕಾಂಗ್ರೆಸ್‌ನವರೆಲ್ಲಾ ಹರಿಶ್ಚಂದ್ರರು ಅಂತ ಪ್ರಮಾಣ ಪತ್ರ ಕೊಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ.
=ಹೆಣ ಕಾಯುವುದಕ್ಕೇ ಸರಿ ಅಂತ ಪ್ರಮಾಣ ಪತ್ರ ಕೊಡೋದರಲ್ಲಿ ಅರ್ಥವಿಲ್ಲ ಬಿಡಿ.
*ಕೇಂದ್ರ ಸರಕಾರವು ಭಯೋತ್ಪಾದನೆ ವಿರುದ್ಧ ಕಠಿಣ ನೀತಿ ಜಾರಿಗೊಳಿಸಲು ಇದು ಸಕಾಲ.
=ನಿಮ್ಮಂತಹ ಭಯೋತ್ಪಾದಕರು ಅದಕ್ಕೆ ಆಸ್ಪದ ಕೊಡಬೇಕಲ್ಲ?
*ರೌಡಿಗಳನ್ನು ಠಾಣೆಗೆ ಕರೆಸಿಕೊಂಡು ಬುದ್ಧಿವಾದ ಹೇಳುವಂತೆ, ಯುವತಿಯರ ಹಾದಿ ತಪ್ಪಿಸುವವರನ್ನು ಸಹ ಕರೆಸಿ ನಿರಂತರ ಬುದ್ಧಿವಾದ ಹೇಳುವ ನೀತಿಯೊಂದನ್ನು ರೂಪಿಸಬೇಕು.
=ಪೊಲೀಸರು ನಿಮ್ಮನ್ನೇ ವೊದಲು ಕರೆಸಿ ಬುದ್ಧಿವಾದ ಹೇಳುವುದರಲ್ಲಿದ್ದಾರೆ.
*ಯಾವ ಕಾರಣಕ್ಕೂ ಪಠ್ಯದ ಕೇಸರೀಕರಣ ಮಾಡುವುದಿಲ್ಲ. ಆದರೆ ರಾಷ್ಟ್ರೀಯತೆ, ಭಾರತೀಯ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸುವ ಕೆಲಸ ಮಾಡಲು ಹಿಂಜರಿಯುವುದಿಲ್ಲ.
=ಬಿಜೆಪಿಯ ಸಂಸ್ಕೃತಿ, ರಾಷ್ಟ್ರೀಯತೆಯನ್ನು ರಾಜ್ಯದ ಜನರು ನೋಡಿ, ಬೆಚ್ಚಿ ಬಿದ್ದಿದ್ದಾರೆ. ಇನ್ನು ಅದನ್ನು ಮಕ್ಕಳು ಪಠ್ಯದಲ್ಲಿ ಕಲಿಯಬೇಕೆ?
*ಕದ್ದು ಮುಚ್ಚಿ ಹುಟ್ಟು ಹಬ್ಬ ಆಚರಣೆ ಮಾಡುವುದು ತಪ್ಪು.
=ಕದ್ದು ಮುಚ್ಚಿ ಮಾಡುವುದಿದ್ದರೆ ಮನೆಯಲ್ಲಿ ಮಾಡುತ್ತಿದ್ದರು. ಹೋಮ್‌ಸ್ಟೇಯಲ್ಲಿ ಯಾಕೆ ಮಾಡುತ್ತಿದ್ದರು?
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಹದಿನಾಲ್ಕು ವರ್ಷದ ಹುಡುಗಿ ಮತ್ತು ಮೂರು ವರ್ಷದ ಹುಡುಗ ಹಸಿವಿನಿಂದಾಗಿ ಬರ್ಬರ ಸಾವನ್ನಪ್ಪಿದ್ದಾರೆ. ನಾಝ್ರಾ ಖಾತೂನ್ ಎನ್ನ ...
Click here to post your views ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...
ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...
ಊರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...
ಮಾನ್ಯರೆ,
ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...