ಕೊತ್ತನೂರಿನ ಸ್ನೇಕ್ ನಾಗರಾಜ್
mail-img print-img

ಕೊತ್ತನೂರಿನ ಸ್ನೇಕ್ ನಾಗರಾಜ್

- ಎಂ.ಮುನಿನಾರಾಯಣ, ಗಂಗನಹಳ್ಳಿ
ಶನಿವಾರ - ಆಗಸ್ಟ್ -18-2012

ಕಲ್ಲು ನಾಗರಹಾವು ಕಂಡರೆ ಹಾಲೆರವ ಜನ ಅದೆ ನಿಜ. ಹಾವನು ಕಂಡರೆ ಕಲ್ಲೊಡೆದು ಸಾಯಿಸುವಂತಹ ನೂರಾರು ಘಟನೆಗಳು ನಮ್ಮ ನೆರೆಹೊರೆಯಲ್ಲಿ ನಾವು ಕಣ್ಣಾರೆ ನೋಡಿರುತ್ತೇವೆ. ಆದರೆ ಜೀವನದಲ್ಲಿ ಎಂದೂ ಕಲ್ಲುನಾಗರಕ್ಕೆ ಪೂಜೆ ಮಾಡದ, ನಿಜ ಹಾವು ಕಂಡರೆ ಅದನ್ನು ಸಾಯಿಸದೆ ಸುರಕ್ಷಿತವಾಗಿ ಹಿಡಿದು ಕಾಡುಮೇಡಿಗೆ ಬಿಟ್ಟು ಬರುವ ಉರಗಪ್ರೇಮಿಯೊಬ್ಬ ನಮ್ಮ ನಡುವೆ ಇದ್ದಾನೆ. ಆತನೆ ಕೊತ್ತನೂರಿನ ಸ್ನೇಕ್ ನಾಗರಾಜ್.ತಾಲೂಕಿನ ಸುತ್ತ ಮುತ್ತ ಎಲ್ಲಿಯೆ ಆಗಲಿ ಮನೆ, ಮಠ, ಅಂಗಡಿಯಲ್ಲಿ ಹಾವು ಕಂಡರೆ ತಕ್ಷಣ ಕರೆ ಮಾಡೋದು ಇದೆ ನಾಗರಾಜ್‌ಗೆ. ಸ್ಥಳಕ್ಕೆ ದಾವಿಸುವ ನಾಗರಾಜ್ ಅದೆಂತಹ ಜಾತಿಯದ್ದೆ ಆಗಿರಲಿ, ಅದೆಷ್ಟೇ ದೊಡ್ಡಗಾತ್ರದ ಹಾವೆ ಆಗಿರಲಿ ಹುಡುಕಾಡಿ, ಹಿಡಿದು ಚೀಲಕ್ಕೆ ಹಾಕಿಕೊಂಡು ಅದನ್ನು ಸುರಕ್ಷಿತವಾಗಿ ಕಾಡು ಮೇಡಿಗೋ, ಗಿಡಮರಗಳ ಪೊದೆಗೊ ಬಿಟ್ಟುಬರುತ್ತಾನೆ. ಇದುವರೆಗೂ ಆತ ಹಿಡಿದು ರಕ್ಷಿಸಿದ ಹಾವುಗಳ ಸಂಖ್ಯೆಗೆ ಲೆಕ್ಕವಿಲ್ಲ. ಹಾಗಾಗಿ ಸುತ್ತ ಮುತ್ತ ಮಾತ್ರವಲ್ಲ, ನೆರೆಹೊರೆಯ ತಾಲೂಕಿನಲ್ಲೂ ಕೂಡ ಈತ ಸ್ನೇಕ್ ನಾಗರಾಜ್ ಎಂದೆ ಚಿರಪರಿಚಿತ.

ಕೆಲ ವರ್ಷಗಳ ಹಿಂದೆ ನಾಗರಾಜ್‌ರ ಮನೆಯೊಳಗೆ ಹಾವೊಂದು ಬಂದು ಸೇರಿಕೊಂಡಿದೆ. ಏನು ಮಾಡಬೇಕೆಂದು ದಿಕ್ಕುತೋಚದಾಗಿದೆ. ಹಾಗಂತ ಸುಮ್ಮನೆ ಕೂರುವಂತೆಯೂ ಇಲ್ಲ. ಆಗ ಹೇಗೋ ಧೈರ್ಯಮಾಡಿ ಮನೆಯೊಳಗಿದ್ದ ಹಾವನ್ನು ಹಿಡಿದು ಹೊರಗಡೆ ಬಿಟ್ಟಿದ್ದಾನೆ. ಮನೆಯೊಳಗೆ ಇರುವಷ್ಟು ಕಾಲವೂ ಹಾವು ತನ್ನ ಪಾಡಿಗೆ ತಾನು ಎಂಬಂತಿತ್ತು. ಯಾರನ್ನು ಏನೂ ಮಾಡಲಿಲ್ಲ. ಆಗಲೇ ನಾಗರಾಜ್‌ಗೆ ಅನಿಸಿದ್ದು ನಾನೂ ಹಾವು ಹಿಡಿಯಬಹುದೆಂದು. ಜೊತೆಗೆ ಹಾವನ್ನು ನಾವು ಏನೂ ಮಾಡದಿದ್ದರೆ ಅದು ಕೂಡ ನಮ್ಮನ್ನು ಏನೂ ಮಾಡದೆಂದು ಅನಿಸಿದ್ದು ಆಗಲೆ.

ಅಂದಿನಿಂದ ಆರಂಭವಾದ ಹಾವುಗಳನ್ನು ಹಿಡಿಯುವ ಕಾಯಕ ಇದುವರೆಗೂ ಯಾವುದೆ ಅಡ್ಡಿ ಆತಂಕವಿಲ್ಲದೆ ಮುಂದುವರೆದಿದೆ. ಇದುವರೆಗೂ ಆತ ಹಿಡಿದು ಕಾಡಿಗೆ ಬಿಟ್ಟ ಜೀವಂತ ಹಾವುಗಳ ಸಂಖ್ಯೆ ಸಾವಿರ ಗಡಿ ದಾಟಿದೆ. ನಾಗರಹಾವು, ಜೋರುಪೋತ, ಕೆರೆ ಹಾವು, ನೀರು ಹಾವು, ಹಸಿರು ಹಾವು, ಬಿಳ್ಳೂರು ಹಾವು, ಮಂಡಲ... ಹೀಗೆ ನಾಗರಾಜ್ ಹಿಡಿಯದ ಜಾತಿಯ ಹಾವಿಲ್ಲ. ಮನೆ, ಮಠ, ದೇವಸ್ಥಾನ, ತೋಟದ ಮನೆ, ಹಳೆಯ ಪಾಳುಬಿದ್ದ ಮನೆ, ಬಾವಿ, ಪಾಯ ಕಲ್ಲಿನ ಸಂದಿ, ಗೊಂಧಿ ಎಲ್ಲಿಯೇ ಆಗಲಿ ಸೇರಿಕೊಂಡ ಹಾವನ್ನು ಪತ್ತೆ ಹಚ್ಚಿ ಬರಿಗೈಲಿ ಹಿಡಿದು ಹಾಕುತ್ತಾನೆ.

ಇತರೆಯವರು ಸಾಮಾನ್ಯವಾಗಿ ಹಾವಿನ ಮೂತಿಯನ್ನು ಮೊದಲು ಹಿಡಿದಿಟ್ಟುಕೊಂಡು ಹಾವನ್ನು ನಿಯಂತ್ರಣಕ್ಕೆ ತಂದರೆ ನಾಗರಾಜ್ ಮಾತ್ರ ಹಾವಿನ ಬಾಲವನ್ನಷ್ಟೆ ಹಿಡಿದು ತನ್ನ ನಿಯಂತ್ರಣಕ್ಕೆ ತಂದುಕೊಳ್ಳುವುದು ವಿಶೇಷವೆ ಸರಿ. ಮಂಡಲ ಜಾತಿಯ ಹಾವನ್ನು ಬಿಟ್ಟು ಉಳಿದೆಲ್ಲಾ ಜಾತಿಯ ಹಾವುಗಳನ್ನು ಬರಿಗೈಲಿಯೆ ಹಿಡಿಯುತ್ತಾನೆಯಾದರೂ ಬಹಳ ವಿಷಕಾರಿಯಾದ ಮಂಡಲ ಹಾವನ್ನು ಮಾತ್ರ ಕೈಗೆ ಗ್ಲೌಸ್(ಪ್ಲಾಸ್ಟಿಕ್ ಕವರ್) ಹಾಕಿಕೊಂಡೆ ಹಿಡಿಯುತ್ತಾನೆ.

ಹಿಡಿದ ಹಾವನ್ನು ಪ್ಲಾಸ್ಟಿಕ್ ಚೀಲಕ್ಕೆ ಹಾಕಿಕೊಂಡು ಉಸಿರು ಕಟ್ಟದಂತೆ ಎಚ್ಚರವಹಿಸಿ ಊರಾಚೆಯ ಜನ ಸಂಚಾರವಿಲ್ಲದ ಯಾವುದಾದರೂ ಕಾಡು, ತೋಪು, ಪೊದೆಗಳಲ್ಲಿ ಬಿಟ್ಟುಬರುತ್ತಾನೆ.ಮನೆ ಮಠಗಳಲ್ಲಿ ಹಾವು ಸೇರಿಕೊಂಡರೆ ಜೀವಂತವಾಗಿ ಹಾವನ್ನು ಹಿಡಿಯಬಹುದು. ಆದರೆ ಹಾಳು ಬಾವಿಯೊಳಗಡೆ ಹಾವು ಬಿದ್ದರೆ ಆ ಹಾವು ಸತ್ತಂತೆಯೇ ಸರಿ ಎನ್ನುವ ನಾಗರಾಜ್ ಹಾಳುಬಾವಿಗೆ ಬಿದ್ದ ಅದೆಷ್ಟೊ ಹಾವುಗಳನ್ನು ಹಿಡಿದು ಪಾರುಮಾಡಿದ್ದಾನೆ. ಮೇವನ್ನು ಹುಡುಕಿಕೊಂಡು ಹಾಳುಬಾವಿಗಳ ಸುತ್ತ ಸರಿದಾಡುವಾಗ ಅಯತಪ್ಪಿ ಹಾಳು ಬಾವಿಗೆ ಬಿದ್ದರೆ ಬಾವಿಯಲ್ಲಿ ಹಾವಿಗೆ ಮೇವು ಏನೂ ಸಿಗುವುದಿಲ್ಲ. ಕಪ್ಪೆ, ಇಲಿ ಏನೂ ಬಾವಿಯಲ್ಲಿ ಇರುವುದಿಲ್ಲವಾದ್ದರಿಂದ ಪಾಳುಬಿದ್ದ ಬಾವಿಯಲ್ಲಿ ಬಿದ್ದ ಹಾವಿಗೆ ಸಾವು ಕಟ್ಟಿಟ್ಟ ಬುತ್ತಿ.

ಹಾವುಗಳ ಸಂತತಿ ಕಡಿಮೆಯಾದಂತೆಲ್ಲಾ ಜೀವಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುತ್ತಾನೆ ನಾಗರಾಜ್. ಹಾಗಾಗಿ ಮನೆಯೊಳಗೆ ಹೊಕ್ಕಿದ ಹಾವು ಹಿಡಿಯುವುದಕ್ಕಿಂತ ಪಾಳುಬಿದ್ದ ಬಾವಿಯಲ್ಲಿ ಇರುವ ಹಾವನ್ನು ಹಿಡಿದು ರಕ್ಷಿಸಿದಾಗ ನನ್ನ ಮನಸಿಗೆ ಹೆಚ್ಚಿನ ಸಂತೋಷ ಆಗುತ್ತದೆ ಎನ್ನುತ್ತಾನೆ.ನಾಗರಾಜ್‌ಗೆ ಸ್ವಂತ ಬೈಕಿಲ್ಲ. ಊರಲ್ಲಿನ ಹಾಲಿನ ಡೇರಿಯಲ್ಲಿ ಹಾಲು ಶೇಖರಣೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದು, ಅದರಿಂದ ಬರುವ ಹಣದಲ್ಲೆ ಜೀವನ ನಡೆಸುತ್ತಿದ್ದಾನೆ. ಯಾರಾದರೂ ಹಾವು ಹಿಡಿಯಲು ಕೇಳಿದರೆ ಅವರು ಬಂದು ವಾಹನದಲ್ಲಿ ಕರೆದುಕೊಂಡು ಹೋದರೆ ಸಾಕು. ಕೆಲವೊಮ್ಮೆ ಅವರು ಬೈಕ್ ಕಳುಹಿಸದಿದ್ದಾಗ ಈತನೆ ಯಾರದಾದರೂ ಕೈ ಕಾಲು ಹಿಡಿದು ಅವರಿಂದ ಡ್ರಾಪ್ ಹಾಕಿಸಿಕೊಂಡು ಹೋಗಿದ್ದೂ ಉಂಟು.

ಹಾವು ಹಿಡಿದ ನಂತರ ಮತ್ತೆ ಮನೆಯ ಹತ್ತಿರ ಬಿಟ್ಟರೆ ಸಾಕು. ಬೇರೇನು ಕೇಳೋಲ್ಲ. ಒಂದು ವೇಳೆ ಅವರಾಗಿಯೆ ಅವರು ಏನಾದರೂ ನೂರೋ ಇನ್ನೂರೋ ಕೊಟ್ಟರೆ ಬೇಡ ಎನ್ನುವುದಿಲ್ಲ. ಕೊಡದಿದ್ದರೆ ಕೊಡಿ ಎನ್ನುವುದಿಲ್ಲ. ಹಿಡಿದ ಹಾವುಗಳ ಸಂಖ್ಯೆ ಸಾವಿರದ ಗಡಿ ದಾಟಿದ್ದರೂ, ಹಾವು ಹಿಡಿದಾಗ ನಾಗರಾಜ್‌ಗೆ ಹಣ ಕೊಟ್ಟವರ ಸಂಖ್ಯೆಯಂತೂ ನೂರಿನ್ನೂರರ ಗಡಿದಾಟಿಲ್ಲ. ಆದರೂ ಬೇಸರವಿಲ್ಲ. ಹಾವಿಗೂ, ಹಾವು ಹೊಕ್ಕ ಮನೆಯವರಿಗೂ ಯಾವುದೇ ತೊಂದರೆಯಾಗದಂತೆ ಹಾವು ಹಿಡಿಯುವುದಷ್ಟೆ ನನ್ನ ಕೆಲಸ ಎಂದು ಭಾವಿಸಿರುವ ನಾಗರಾಜ್ ಯಾರೇ ದೂರವಾಣಿ ಕರೆ ಮಾಡಿದರೂ ಅಲ್ಲಿಗೆ ನಗುಮುಖದಿಂದ ಹೋಗಿ ಹಾವು ಹಿಡಿದು ಅದೆ ನಗುಮುಖದಿಂದ ವಾಪಸ್ಸಾಗುತ್ತಾನೆ.

ಇದೀಗ ಬಿಸಿಲ ರುದ್ರ ನರ್ತನ ಎಲ್ಲೆಲ್ಲೂ ಆವರಿಸಿದೆ. ಹಾಗಾಗಿ ಹಾವುಗಳು ಕೂಡ ಬಿಸಿಯ ಬೇಗೆ ತಾಳಲಾರದೆ ಹುತ್ತ, ಬೊಕ್ಕೆ(ರಂಧ್ರ) ಕಲ್ಲು, ಮಣ್ಣು, ಚಪ್ಪಡಿಗಳ ಮಧ್ಯದಿಂದ ಹೊರಗೆ ಬರುವುದು ಹೆಚ್ಚು. ಜನರು ಕೂಡ ಶೆಕೆ ತಾಳಲಾರದೆ ಮನೆ ಮಠ ಬಿಟ್ಟು ಮನೆ ಮುಂದಿನ ಹಜಾರ, ಬಯಲಿನಲ್ಲಿ ಮಲಗುತ್ತಾರೆ. ಹಳ್ಳಿಗಳಲ್ಲಿ ಮನೆಯ ಅಕ್ಕಪಕ್ಕ ಸೌದೆ, ಇಟ್ಟಿಗೆ, ಕಲ್ಲು ಚಪ್ಪಡಿಗಳ ರಾಶಿ ಸಾಮಾನ್ಯ. ಹಾಗಾಗಿ ಹಾವುಗಳ ಕಾಟವೂ ಕಾಡತೊಡಗುತ್ತದೆ. ಹಾವನ್ನು ಕಂಡರೆ ಕಲ್ಲು ಹೊಡೆದು ಸಾಯಿಸದೆ ಯಾವುದಕ್ಕೂ ಒಮ್ಮೆ ಸ್ನೇಕ್ ನಾಗರಾಜ್‌ರ ಮೊಬೈಲ್ ನಂಬರ್ 9342515443. 7760314729ಗೆ ಕರೆ ಮಾಡಿ.

ಇನ್ನೂ ಆರ್ಥಿಕವಾಗಿ ಬಡವನಾಗಿರುವ ಈತ ಅವಿದ್ಯಾವಂತನಾಗಿದ್ದು ಕಳೆದ ನಾಲ್ಕು ವರ್ಷಗಳ ಹಿಂದೆ ವನ್ಯಜೀವಿ ಸಂರಕ್ಷಣಾ ಸಂಸ್ಥೆಗೆ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಈವರೆಗೂ ಸದಸ್ಯತ್ವ ಪಡೆಯದೇ ಇರುವುದು ಈತನನ್ನು ಚಿಂತೆಗೀಡುಮಾಡಿದೆ. ಹಾಗೆಂದು ಧೃತಿಗೆಡದೇ ತಾನು ಮಾಡುವ ಕಾಯಕದಲ್ಲಿ ಶಿಸ್ತು ರೂಢಿಸಿಕೊಳ್ಳುವುದರೊಂದಿಗೆ ತಾಲೂಕಿನ ಜನತೆಯ ಪ್ರೀತಿ ಗಳಿಸಿದ್ದಾನೆ.



Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಚರ್ಚ್‌ದಾಳಿ ಗೃಹ ಇಲಾಖೆಗೆ ಪಾಠವಾಗಲಿ

‘ಮುರಿದು ನೇತಾಡುತ್ತಿರುವ ಏಸುವಿನ ಕೈ, ಮುರಿದ ಕಾಲು, ಒಡೆದ ಮುಖ....’’ ಈ ಸಮಾಜದ ಕ್ರೌರ್ಯ ಮತ್ತು ವಿರೂಪಕ್ಕೆ ಹಿಡಿದ ಕನ್ನಡಿಯಂತೆ ಮಾಧ್ಯಮಗಳ ಮುಖಪುಟದಲ್ಲ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮಾನಸಿಕ ದಾಸ್ಯಕ್ಕೆ ಬಲಿಯಾದ ‘ದ ಇಂಡಿಯನ್’

ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನ ...


- ಬಿ.ಶ್ರೀಪಾದ ಭಟ್

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್