* ಇಂದಿನಿಂದ ಭಾರತ-ನ್ಯೂಝಿಲೆಂಡ್ ಮೊದಲ ಟೆಸ್ಟ್ ಪಂದ್ಯ
ಹೈದರಾಬಾದ್, ಆ.22: ಟೆಸ್ಟ್ ತಂಡದ ಬೆನ್ನ್ನೆಲುಬಿನಂತಿದ್ದ ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ನಿವೃತ್ತಿಯ ಬಳಿಕ ಟೀಮ್ ಇಂಡಿಯಾ ಮೊದಲ ಬಾರಿಗೆ ಇಲ್ಲಿನ ಉಪ್ಪಳದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಲಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್‌ನ್ನು ಎದುರಿಸಲಿದೆ. ತಂಡದಲ್ಲಿ ಖಾಯಂ ಆಗಿ ಹಲವು ವರ್ಷಗಳ ಸೇವೆ ಸಲ್ಲಿಸಿದ್ದ ಸಮಕಾಲೀನ ಐವರು ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಇವರಲ್ಲಿ ನಾಲ್ವರು ಕ್ರಿಕೆಟ್‌ಗೆ ವಿದಾಯ ಹೇಳಿದ ಕಾರಣದಿಂದಾಗಿ ತಂಡದಲ್ಲಿ ಸಚಿನ್ ತೆಂಡುಲ್ಕರ್ ಮಾತ್ರ ಉಳಿದ್ದಾರೆ. ದ್ರಾವಿಡ್ ಕೆಲವು ಸಮಯಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೆ, ಲಕ್ಷ್ಮಣ್ ನಿವೃತ್ತರ ಸಾಲಿಗೆ ಹೊಸ ಸೇರ್ಪಡೆ. ಲಕ್ಷ್ಮಣ್ ನ್ಯೂಝಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದರೂ, ಅವರು ಶನಿವಾರ ದಿಢೀರನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ ೮ ಟೆಸ್ಟ್‌ಗಳಲ್ಲಿ ಸೋಲು ಅನುಭವಿಸಿರುವ ಭಾರತ ಮುಂದೆ ನಡೆಯಲಿರುವ 10 ಟೆಸ್ಟ್, 13 ಏಕದಿನ ಮತ್ತು ಮೂರು ಟ್ವೆಂಟಿ-20ಪಂದ್ಯಗಳ ಸರಣಿಯಲ್ಲಿ ಕಳೆದು ಹೋಗಿರುವ ಸ್ಥಾನಮಾನವನ್ನು ಗಳಿಸಲು ಹೋರಾಟ ನಡೆಸಲಿದೆ. ಇದಲ್ಲದೆ ಭಾರತ ಸೆಪ್ಟಂಬರ್‌ನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್‌ನಲ್ಲಿ ಚಾಂಪಿಯನ್‌ಪಟ್ಟ ಗಳಿಸಲು ಸೆಣಸಾಡಲಿದೆ.
ಭಾರತ ಏಳು ತಿಂಗಳುಗಳ ಬಿಡುವಿನ ಬಳಿಕ ಟೆಸ್ಟ್ ಆಡುತ್ತಿದೆ. ಇಂಗ್ಲೆಂಡ್‌ನಲ್ಲಿ 0-4 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡು ನಂ.1 ಸ್ಥಾನವನ್ನು ಇಂಗ್ಲೆಂಡ್‌ಗೆ ಒಪ್ಪಿಸಿ ಬರಿಗೈಯಲ್ಲಿ ತವರಿಗೆ ಮರಳಿದ್ದ ಟೀಮ್ ಇಂಡಿಯಾ ಬಳಿಕ ಆಸ್ಟ್ರೇಲಿಯದಲ್ಲೂ ಟೆಸ್ಟ್ ಸರಣಿಯನ್ನು 0-4 ಅಂತರದಲ್ಲಿ ಸೋತು ಕಳಪೆ ಪ್ರದರ್ಶನ ನೀಡಿತ್ತು.ಹೈದರಾಬಾದ್‌ನ ಸ್ಥಳೀಯ ಹೀರೊ ಲಕ್ಷ್ಮಣ್ ತಂಡದಲ್ಲಿ ಇಲ್ಲದ ಪರಿಣಾಮವಾಗಿ ವೊದಲ ಟೆಸ್ಟ್ ಬಗ್ಗೆ ಸ್ಥಳೀಯರಲ್ಲಿ ಆಸಕ್ತಿ ಕಡಿಮೆಯಾಗಿದೆ. ಟಿಕೆಟ್ ಮಾರಾಟದಲ್ಲೂ ಲಕ್ಷ್ಮಣ್ ನಿವೃತ್ತಿ ಪರಿಣಾಮ ಬೀರಿದೆ.
ತಂಡದಲ್ಲಿ ತೆರವಾಗಿರುವ ನಂ.3 ಸ್ಥಾನವನ್ನು ವಿರಾಟ್ ಕೊಹ್ಲಿ ತುಂಬಿದ್ದಾರೆ.ಆದರೆ ನಂ.5 ಮತ್ತು ನಂ.6 ಕ್ರಮಾಂಕ ಭಾರತಕ್ಕೆ ಸವಾಲಾಗಿದೆ. ಸುರೇಶ್ ರೈನಾ, ಚೇತೇಶ್ವರ ಪೂಜಾರ ಮತ್ತು ಸುಬ್ರಹ್ಮಣ್ಯಂ ಬದ್ರಿನಾಥ್ ಖಾಲಿ ಇರುವ ಸ್ಥಾನವನ್ನು ತುಂಬಲು ಪೈಪೋಟಿ ನಡೆಸುತ್ತಿದ್ದಾರೆ.ಸಚಿನ್ ತೆಂಡುಲ್ಕರ್ ನೂರನೆ ಅಂತಾರಾಷ್ಟ್ರೀಯ ಶತಕ ದಾಖಲಿಸಿದ ಬಳಿಕ ಆಡಲು ಒತ್ತಡವಿಲ್ಲದಿದ್ದರೂ, ರಾಹುಲ್ ದ್ರಾವಿಡ್ ಮತ್ತು ಲಕ್ಷ್ಮಣ್ ನಿವೃತ್ತಿಯ ಬಳಿಕ ಅವರ ಹೆಗಲ ಮೇಲೆ ಹೆಚ್ಚು ಹೊರೆ ಬಿದ್ದಿದೆ. ತಂಡದಲ್ಲಿ ಹೆಚ್ಚು ರನ್ ದಾಖಲಿಸಲು ಗಮನ ನೀಡುವ ಜೊತೆಗೆ ತಂಡದಲ್ಲಿರುವ ಕಿರಿಯ ಆಟಗಾರರಿಗೆ ಮಾರ್ಗದರ್ಶನ ನೀಡಬೇಕಾಗಿದೆ.
ಭಾರತದ ವೇಗದ ದಾಳಿಯ ನೇತೃತ್ವವನ್ನು ಝಹೀರ್ ಖಾನ್ ಮತ್ತು ಇಶಾಂತ್ ಶರ್ಮ ವಹಿಸಲಿದ್ದಾರೆ. ಟೆಸ್ಟ್ ಪಂದ್ಯ ನಡೆಯಲಿರುವ ಹೈದರಾಬಾದ್‌ನ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲವಾಗಿದೆ. ಭಾರತದ ಸ್ಪಿನ್ ವಿಭಾಗವನ್ನು ರವಿಚಂದ್ರನ್ ಅಶ್ವಿನ್, ಪ್ರಗ್ಯಾನ್ ಓಜಾ ಮತ್ತು ಪಿಯೂಷ್ ಚಾವ್ಲಾ ಮುನ್ನೆಡೆಸುವರು.ಭಾರತದ ವಿರುದ್ಧ 20 ಟೆಸ್ಟ್ ವಿಕೆಟ್‌ಗಳನ್ನು ಪಡೆದಿರುವ ಡೇನಿಯಲ್ ವೆಟೋರಿ ಗಾಯದಿಂದಾಗಿ ನ್ಯೂಝಿಲೆಂಡ್ ತಂಡದಲ್ಲಿಲ್ಲ. ಇದು ತಂಡಕ್ಕೆ ದೊಡ್ಡ ನಷ್ಟ. ಕ್ರಿಸ್ ಮಾರ್ಟಿನ್, ಟ್ರೆಂಟ್ ಬೌಲ್ಟ್, ಟಿಮ್ ಸೌಥಿ, ನೀಲ್ ವ್ಯಾಂಗೆರ್ ಮತ್ತು ಡಗ್ ಬ್ರಾಸ್‌ವೆಲ್ ಅವರು ವೆಟೋರಿ ಅನುಪಸ್ಥಿತಿಯಲ್ಲಿ ತಂಡದ ಕೊರತೆಯನ್ನು ತುಂಬುವ ಪ್ರಯತ್ನ ನಡೆಸುವರು.
ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ), ಗೌತಮ್ ಗಂಭೀರ್, ವಿರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್, ಚೇತೇಶ್ವರ ಪೂಜಾರ, ಸುರೇಶ್ ರೈನಾ, ರವಿಚಂದ್ರನ್ ಅಶ್ವಿನ್, ಪ್ರಗ್ಯಾನ್ ಓಜಾ, ಝಹೀರ್ ಖಾನ್, ಇಶಾಂತ್ ಶರ್ಮ, ಉಮೇಶ್ ಯಾದವ್, ಅಜಿಂಕ್ಯ ರಹಾನೆ, ಸುಬ್ರಹ್ಮಣ್ಯಂ ಬದ್ರಿನಾಥ್ ಮತ್ತು ಪಿಯೂಷ್ ಚಾವ್ಲಾ.
ನ್ಯೂಝಿಲೆಂಡ್: ರಾಸ್ ಟೇಲರ್(ನಾಯಕ), ಟ್ರೆಂಟ್ ಬೌಲ್ಟ್, ಡಾಗ್ ಬ್ರಾಸ್‌ವೆಲ್,ಡೇನಿಯಲ್ ಫ್ಲೆನ್, ಜೇಮ್ಸ್ ಫ್ರಾಂಕ್ಲಿನ್, ಮಾರ್ಟಿನ್ ಗಪ್ಟಿಲ್, ಕ್ರಿಸ್ ಮಾರ್ಟಿನ್, ಬ್ರೆಂಡನ್ ಮೆಕಲಮ್, ತಾರುನ್ ನೆಥುಲಾ, ಜೀತನ್ ಪಟೇಲ್, ಟಿಮ್ ಸೌಥಿ, ಕ್ರುಗೆರ್ ವ್ಯಾನ್ ವೈಕೆ, ನೀಲ್ ವ್ಯಾಂಗೆರ್, ಬಿಜೆ ವ್ಯಾಟ್ಲಿಂಗ್ ಮತ್ತು ಕೇನೆ ವಿಲಿಯಮ್ಸ್.
ಪಂದ್ಯದ ಸಮಯ : ಬೆಳಗ್ಗೆ ೯:೩೦ಕ್ಕೆ
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಹದಿನಾಲ್ಕು ವರ್ಷದ ಹುಡುಗಿ ಮತ್ತು ಮೂರು ವರ್ಷದ ಹುಡುಗ ಹಸಿವಿನಿಂದಾಗಿ ಬರ್ಬರ ಸಾವನ್ನಪ್ಪಿದ್ದಾರೆ. ನಾಝ್ರಾ ಖಾತೂನ್ ಎನ್ನ ...
Click here to post your views ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...
ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...
ಊರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...
ಮಾನ್ಯರೆ,
ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...