ಬೆಂಗಳೂರು, ಎ.10: ಮಧ್ಯಮ ವೇಗಿ ಲಕ್ಷ್ಮೀಪತಿ ಬಾಲಾಜಿ ಪ್ರಹಾರ (4-18) ಮತ್ತು ನಾಯಕ ಗೌತಮ್ ಗಂಭೀರ್ ಅವರ ಅರ್ಧಶತಕ(64) ನೆರವಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್)ತಂಡ ಇಲ್ಲಿ ನಡೆದ ಐದನೆ ಆವೃತ್ತಿಯ ಐಪಿಎಲ್ ಟ್ವೆಂಟಿ 20 ಪಂದ್ಯಾವಳಿಯ ಹತ್ತನೆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡವನ್ನು 42 ರನ್‌ಗಳಿಂದ ಸೋಲಿಸಿದೆ.
ಇದರೊಂದಿಗೆ ಕೋಲ್ಕತಾ ನೈಟ್ ರೈಡರ್ಸ್ ತಂಡ ತಾನಾಡಿರುವ ಮೂರು ಪಂದ್ಯಗಳ ಪೈಕಿ ಮೊದಲ ಗೆಲುವು ದಾಖಲಿಸಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೆಲ್ಲಲು 166 ರನ್‌ಗಳ ಗುರಿ ಪಡೆದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಲಷ್ಟೇ ಶಕ್ತವಾಯಿತು.
ಆರ್‌ಸಿಬಿ ತಂಡ 3.3 ಓವರ್‌ಗಳಲ್ಲಿ 8 ರನ್ ಗಳಿಸಿದ್ದಾಗ ಆರಂಭಿಕ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ (6) ಮತ್ತು ವೆಸ್ಟ್ ಇಂಡೀಸ್‌ನ ಅಪಾಯಕಾರಿ ಬ್ಯಾಟ್ಸ್‌ಮನ್ ಕ್ರಿಸ್ ಗೇಯ್ಲಿ(2) ಅವರಿಗೆ ಜಾಕ್ ಕಾಲಿಸ್ ಪೆವಿಲಿಯನ್ ದಾರಿ ತೋರಿಸಿದರು. ತಂಡದ ಸ್ಕೋರ್ 5.5 ಓವರ್‌ಗಳಲ್ಲಿ 20 ರನ್ ಆಗಿದ್ದಾಗ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ(6) ಅವರನ್ನು ಔಟು ಮಾಡಿದ ಬಾಲಾಜಿ ತನ್ನ ಪ್ರಹಾರ ಆರಂಭಿಸಿದರು. ಆನಂತರ ಎಬಿ ಡೆವಿಲಿಯರ್ಸ್ (10), ಮಾಯಾಂಕ ಅಗರ್‌ವಾಲ್(5), ಮತ್ತು ಡೇನಿಯಲ್ ವೆಟೋರಿ(20) ಇವರನ್ನು ಪೆವಿಲಿಯನ್‌ಗೆ ಅಟ್ಟಿ ಅಪೂರ್ವ ಯಶಸ್ಸು ಗಳಿಸಿದರು. 18ಕ್ಕೆ 4 ವಿಕೆಟ್ ಉಡಾಯಿಸಿದ ಬಾಲಾಜಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಸೌರಬ್ ತಿವಾರಿ(18) ಅವರು ಡೋಶಾಟ್‌ಗೆ ವಿಕೆಟ್ ಒಪ್ಪಿಸಿದರು. ಆರ್ ವಿನಯ ಕುಮಾರ್ (26) ಮತ್ತು ಹರ್ಷಲ್ ಪಟೇಲ್ (10) ಎಂಟನೆ ವಿಕೆಟ್‌ಗೆ 28 ರನ್ ಗಳಿಸಿ ಕ್ರೀಸ್‌ನಲ್ಲಿ ನಿಲ್ಲುವ ಸೂಚನೆ ನೀಡಿದರು. ಆದರೆ ಶಾಕಿಬ್ ಅಲ್ ಹಸನ್ (2-21) ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.
ಗಂಭೀರ್ ಅರ್ಧಶತಕ
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಕೋಲ್ಕತಾ ನೈಟ್ ರೈಡರ್ಸ್ ತಂಡ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ನಾಯಕ ಗೌತಮ್ ಗಂಭೀರ್ (64), ಜಾಕ್ ಕಾಲಿಸ್ (22) ಮತ್ತು ವಿಕೆಟ್ ಕೀಪರ್ ಮನ್ವಿಂದೆರ್ ಬಿಸ್ಲಾ (46) ಉತ್ತಮ ಬ್ಯಾಟಿಂಗ್ ನೆರವಿನಲ್ಲಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 165 ರನ್ ಗಳಿಸಿತ್ತು.
ನಾಯಕ ಗಂಭೀರ್ ಮತ್ತು ಕಾಲಿಸ್ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್‌ಗೆ 6 ಓವರ್‌ಗಳಲ್ಲಿ 60 ರನ್‌ಗಳನ್ನು ಕಲೆ ಹಾಕಿ ತಂಡಕ್ಕೆ ಭದ್ರವಾದ ಅಡಿಪಾಯ ಹಾಕಿಕೊಟ್ಟಿದ್ದರು. ಕಾಲಿಸ್ 23 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಗಳಿಸಿ ಆರ್‌ಸಿಬಿ ನಾಯಕ ಡೇನಿಯಲ್ ವೆಟೋರಿ ಎಸೆತವನ್ನು ಉತ್ತರಿಸುವಲ್ಲಿ ಎಡವಿ ವಿಕೆಟ್ ಕೀಪರ್ ಡೆವಿಲಿಯರ್ಸ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಎರಡನೆ ವಿಕೆಟ್‌ಗೆ ಗಂಭೀರ್‌ಗೆ ಬಿಸ್ಲಾ ಸಾಥ್ ನೀಡಿದರು. ಇವರ ಮೂಲಕ ತಂಡ ಖಾತೆಗೆ 7.1 ಓವರ್‌ಗಳಲ್ಲಿ 65 ರನ್ ಬಂತು. ಬಿಸ್ಲಾ 29 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಇರುವ 46 ರನ್ ಗಳಿಸಿ ಅರ್ಭಟಿಸಿದರು. ಆದರೆ 13.3ನೆ ಓವರ್‌ನಲ್ಲಿ ಮುರಳೀಧರನ್ ಅವರಿಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ 4 ರನ್‌ನಿಂದ ಬಿಸ್ಲಾ ಅರ್ಧಶತಕ ವಂಚಿತಗೊಂಡರು.
ಆ ಬಳಿಕ ಬಂದ ಆಲ್‌ರೌಂಡರ್ ಯೂಸುಫ್ ಪಠಾಣ್ (1) ಬೇಗನೆ ನಿರ್ಗಮಿಸಿದರು. ಗಂಭೀರ್ 28 ಎಸೆತ(8 ಬೌಂಡರಿ ಮತ್ತು 1 ಸಿಕ್ಸರ್) ನೆರವಿನಲ್ಲಿ ಅರ್ಧ ಶತಕ ಪೂರ್ಣ ಗೊಳಿಸಿದರು. 64 ರನ್ (39 ಎಸೆತ, 9 ಬೌಂಡರಿ, 1 ಸಿಕ್ಸರ್) ಗಳಿಸಿ ಕ್ರೀಸ್‌ಗೆ ಅಂಟಿಕೊಂಡಿದ್ದ ನಾಯಕ ಗಂಭೀರ್‌ಗೆ 16.2ನೆ ಓವರ್‌ನಲ್ಲಿ ಝಹೀರ್ ಖಾನ್ ಕೊನೆಗೂ ಪೆವಿಲಿಯನ್ ಹಾದಿ ತೋರಿಸಿದರು.
ಗಂಭೀರ್ ನಿರ್ಗಮನದ ಬಳಿಕ ಕೋಲ್ಕತಾ ನೈಟ್ ರೈಡರ್ಸ್‌ನ ಪೆವಿಲಿಯನ್ ಪೆರೇಡ್ ಆರಂಭಗೊಂಡಿತು. 15 ರನ್‌ಗಳಿಗೆ 4 ವಿಕೆಟ್‌ಗಳು ಉರುಳಿತು. ಮನೋಜ್ ತಿವಾರಿ (2), ರ್ಯಾನ್ ಟೆನ್ ಡೊಶಾಟ್(3), ಶಾಕಿಬ್ ಅಲ್ ಹಸನ್(4), ಲಕ್ಷ್ಮೀರತನ್ ಶುಕ್ಲಾ(5) ಒಂದಂಕೆಯ ಕೊಡುಗೆ ನೀಡಿ ನಿರ್ಗಮಿಸಿದರು. ಆಗ ತಂಡದ ಸ್ಕೋರ್ 19.3 ಓವರ್‌ಗಳಲ್ಲಿ 154 ರನ್. ಆ ಬಳಿಕ ಒಂಬತ್ತನೆ ವಿಕೆಟ್‌ಗೆ ಬ್ರೆಟ್ ಲೀ ಔಟಾಗದೆ 8(4 ಎಸೆತ, 1 ಸಿಕ್ಸರ್) ಮತ್ತು ರಜತ್ ಬಾಟಿಯಾ ಔಟಾಗದೆ 4ರನ್ (1 ಎಸೆತ, 1 ಬೌಂಡರಿ) ಗಳಿಸಿ ತಂಡದ ಸ್ಕೋರ್‌ನ್ನು 165ಕ್ಕೆ ತಲುಪಿಸಿದರು.
ರಾಯಲ್ ಚಾಲೆಂಜರ್ಸ್ ಪರ ಸಂಘಟಿತ ದಾಳಿ ನಡೆಸಿದ ಝಹೀರ್ ಖಾನ್ (2-31), ಆರ್.ವಿನಯ್ ಕುಮಾರ್ (2-18), ಮುರಳೀಧರನ್ (2-31), ಹರ್ಷಲ್ ಪಟೇಲ್ (1-46) ಮತ್ತು ಡೇನಿಯಲ್ ವೆಟೋರಿ (1-22) ವಿಕೆಟ್ ಹಂಚಿಕೊಂಡರು.
ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾನ್ ಬೂಕರ್ ಪ್ರಶಸ್ತಿ ಕೂದಲೆಳೆಯಲ್ಲಿ ಕೈ ತಪ್ಪಿತು. ಅಮೆರಿಕದ ಹಿರಿಯ ಬರಹಗಾರ್ತಿ ಲಿಡಿಯಾ ಡೇವಿಸ್ ಈ ಪ್ರಶಸ್ತಿಯನ್ನ ...
Click here to post your views ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...