ಮುಂಬೈ, ಎ.10: ಆತಿಥೇಯ ಮುಂಬೈ ಇಂಡಿಯನ್ಸ್ ತಂಡ ಬುಧವಾರ ಇಲ್ಲಿ ನಡೆಯಲಿರುವ ಐದನೆ ಆವೃತ್ತಿಯ ಐಪಿಎಲ್ ಟಿ-20 ಪಂದ್ಯಾವಳಿಯ 12ನೆ ಪಂದ್ಯದಲ್ಲಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಮುಂಬೈ ತಂಡದ ಬ್ಯಾಟಿಂಗ್ ಅಷ್ಟೇನು ಉತ್ತಮವಾಗಿಲ್ಲ. ಕಳೆದೆರಡು ಪಂದ್ಯಗಳಲ್ಲೂ ಕಡಿಮೆ ಮೊತ್ತದ ಸವಾಲನ್ನು ಬೆನ್ನಟ್ಟುವಲ್ಲಿ ಕಷ್ಟ ಅನುಭವಿಸಿದೆ. ಡೆಕ್ಕನ್ ಚಾರ್ಜರ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ರೋಹಿತ್ ಶರ್ಮ 50 ಎಸೆತಗಳಲ್ಲಿ 73 ರನ್‌ಗಳನ್ನು ಸಿಡಿಸದೆ ಇರುತ್ತಿದ್ದರೆ ಮುಂಬೈಗೆ ಗೆಲುವು ಸಾಧ್ಯ ಇರಲಿಲ್ಲ.
ಅಗ್ರಸರದಿಯ ಚಾಂಪಿಯನ್ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್ ಅನುಪಸ್ಥಿತಿ ಮುಂಬೈ ಇಂಡಿಯನ್ಸ್‌ನ್ನು ಕಾಡುತ್ತಿದೆ. ತಂಡದ ನಾಯಕ ಹರ್ಭಜನ್ ಸಿಂಗ್ ಅವರು ತಂಡವನ್ನು ಗೆಲುವಿನತ್ತ ಮುನ್ನಡೆಸುವಲ್ಲಿ ಎಡವುತ್ತಿದ್ದಾರೆ.
ಡೆಕ್ಕನ್ ಚಾರ್ಜರ್ಸ್ ವಿರುದ್ಧ 139 ರನ್‌ಗಳ ಸವಾಲನ್ನು ಬೆನ್ನಟ್ಟುವಲ್ಲಿ ತಂಡದ ಬ್ಯಾಟ್ಸ್‌ಮನ್‌ಗಳು ಎಡವಿ ದಾಗ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಕೊನೆಯ ಓವರ್‌ನಲ್ಲಿ ಗೆಲ್ಲಲು 18 ರನ್‌ಗಳ ಆವಶ್ಯಕತೆ ಇದ್ದಾಗ, ಶರ್ಮ ಮತ್ತು ಫ್ರಾಂಕ್ಲಿನ್ 21 ರನ್‌ಗಳನ್ನು ಕಬಳಿಸಿ ತಂಡಕ್ಕೆ ರೋಚಕ ಗೆಲುವು ತಂದು ಕೊಟ್ಟರು. ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಕೀರನ್ ಪೊಲಾರ್ಡ್ ಉತ್ತಮ ಕೊಡುಗೆ ನೀಡಿ ಸೋಲಿನಂಚಿಗೆ ಸಿಲುಕಿದ್ದ ತಂಡವನ್ನು ಪಾರು ಮಾಡುವಲ್ಲಿ ಶ್ರಮಿಸಿದ್ದರು ಎನ್ನುವುದು ಇಲ್ಲಿ ಗಮನಿಸತಕ್ಕ ವಿಚಾರವಾಗಿದೆ.
ಹರ್ಭಜನ್ ಸಿಂಗ್ ಬೌಲಿಂಗ್‌ನಲ್ಲಿ ತಂಡಕ್ಕೆ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಮೂರು ಪಂದ್ಯಗಳಲ್ಲೂ ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ್ದರು. ಆದರೆ ಬ್ಯಾಟ್ಸ್‌ಮನ್‌ಗಳು ಅವರ ನಿರೀಕ್ಷೆಗೆ ತಕ್ಕಂತೆ ಆಡಿಲ್ಲ.
ಚೆನ್ನೈ ವಿರುದ್ಧದ ಮೊದಲ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ, ಐಪಿಎಲ್‌ನಲ್ಲಿ ತನ್ನ ಚೊಚ್ಚಲ ಪಂದ್ಯದಲ್ಲಿ ಗಮನ ಸೆಳೆದು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡ ದಕ್ಷಿಣ ಆಫ್ರಿಕಾದ ರಿಚರ್ಡ್ ಲೆವಿ, ಬಳಿಕದ ಎರಡು ಪಂದ್ಯಗಳಲ್ಲೂ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡುವಲ್ಲಿ ವಿಫಲರಾಗಿದ್ದಾರೆ.
ಮುಂಬೈ ತಂಡದ ಬೌಲರ್‌ಗಳ ಪೈಕಿ ಮುನಾಫ್ ಪಟೇಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಪುಣೆ ವಿರುದ್ಧದ ಪಂದ್ಯದಲ್ಲಿ 26ಕ್ಕೆ 2 ಮತ್ತು ಡೆಕ್ಕನ್ ವಿರುದ್ಧ 20ಕ್ಕೆ 4 ವಿಕೆಟ್ ಉಡಾಯಿಸಿದ್ದರು. ಲಸಿತ್ ಮಾಲಿಂಗ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಿದ್ದಾರೆ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಪೊಲಾರ್ಡ್ ಮತ್ತು ಕೂಪರ್ ನಡುವಿನ ಕದನವೆಂದು ನಿರೀಕ್ಷಿಸಲಾಗಿದೆ.
ರಾಯಲ್ಸ್ ತಂಡದಲ್ಲಿರುವ ಅಜಿಂಕ್ಯ ರಹಾನೆ ಮತ್ತು ಅಂಕಿತ್ ಚೌಹಾಣ್ ಇತ್ತೀಚೆಗೆ ರಣಜಿ ಪಂದ್ಯದಲ್ಲಿ ವಾಂಖೇಡೆ ಸ್ಟೇಡಿಯಮ್‌ನಲ್ಲಿ ಆಡಿದ್ದಾರೆ. ಹೀಗಾಗಿ ಅವರಿಂದ ಈ ಪಂದ್ಯದಲ್ಲಿ ಉತ್ತಮ ಪ್ರದರ್ಸನ ನಿರೀಕ್ಷಿಸಲಾಗಿದೆ.
ರಹಾನೆ ಕಿಂಗ್ಸ್ ಇಲೆವೆನ್ ವಿರುದ್ಧದ ಪಂದ್ಯದಲ್ಲಿ 66 ಎಸೆತಗಳಲ್ಲಿ 16 ಬೌಂಡರಿ ಮತ್ತು ಒಂದು ಸಿಕ್ಸರ್ ಇರುವ 98 ರನ್ ಗಳಿಸಿದ್ದರು. ರಾಯಲ್ಸ್ ನಾಯಕ ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಎರಡೂ ಪಂದ್ಯಗಳಲ್ಲಿ ರನೌಟಾಗಿದ್ದಾರೆ. ಹೀಗಾಗಿ ರಾಯಲ್ಸ್ ತಾನು ಮಾಡು ತ್ತಿರುವ ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ.
ರಾಯಲ್ಸ್ ತವರಿನಲ್ಲಿ ನಡೆದ ಎರಡೂ ಪಂದ್ಯಗಳನ್ನು ತನ್ನಲ್ಲಿರುವ ಬ್ಯಾಟಿಂಗ್ ಶಕ್ತಿಯ ನೆರವಿನಲ್ಲಿ ಗೆದ್ದುಕೊಂಡಿದೆ. ಆದರೆ ಮುಂಬೈ ವಿರುದ್ಧದ ಪಂದ್ಯದಲ್ಲಿ ಅದರ ಬೌಲಿಂಗ್ ದಾಳಿಯ ಶಕ್ತಿ ಪರೀಕ್ಷೆಗೆ ಒಳಪಡುವುದು ಖಚಿತ.
ರಾಯಲ್ಸ್‌ನ ಮಧ್ಯಮ ಸರದಿ ಬಲಿಷ್ಠವಾಗಿದೆ. ರಾಜಸ್ಥಾನ ರಣಜಿ ಆಟಗಾರ ಮತ್ತು ಭಾರತದ ಅಂಡರ್ 19 ತಂಡದ ಮಾಜಿ ಆಟಗಾರ ಅಶೋಕ್ ಮೆನೆರಿಯಾ ಮತ್ತು ಅನುಭವಿ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್ ಬ್ರಾಡ್ ಹಾಡ್ಜ್ ತಂಡದ ಮಧ್ಯಮ ಸರದಿಯ ಶಕ್ತಿಯಾಗಿ ಇದ್ದಾರೆ.
ಎಡಗೈ ಸ್ಪಿನ್ನರ್ ಚೌಹಾನ್, ಆಫ್ ಸ್ಪಿನ್ನರ್ ಜೋಹಾನ್ ಬೋಥಾ , ಕೂಪರ್ ಮತ್ತು ಮದ್ಯಮ ವೇಗಿಗಳಾದ ಅಮಿತ್ ಸಿಂಗ್ ಮತ್ತು ಸಿದ್ಧಾರ್ಥ ತ್ರಿವೇದಿ ನೆರವಿನಲ್ಲಿ ರಾಜಸ್ಥಾನ ತಂಡ ಕಳೆದ ಎರಡು ಪಂದ್ಯಗಳಲ್ಲಿ ಯಶಸ್ವಿಯಾಗಿದೆ.
ಮುಂಬೈ ಮತ್ತು ರಾಜಸ್ಥಾನ ರಾಯಲ್ಸ್ ತಲಾ ಎರಡು ಪಂದ್ಯಗಳನ್ನು ಗೆದ್ದುಕೊಂಡು ತಲಾ ಅಂಕಗಳನ್ನು ಸಂಪಾದಿಸಿದೆ. ಆದರೆ ರಾಯಲ್ಸ್‌ನ ರನ್‌ರೇಟ್ ಉತ್ತಮವಾಗಿರುವ ಹಿನ್ನೆಲೆಯಲ್ಲಿ ಅದು ಅಗ್ರಸ್ಥಾನದಲ್ಲಿದೆ.
ಸಂಭಾವ್ಯ ತಂಡ
ಮುಂಬೈ ಇಂಡಿಯನ್ಸ್: ಹರ್ಭಜನ್ ಸಿಂಗ್(ನಾಯಕ), ರಿಚರ್ಡ್ ಲೆವಿ, ಟಿ ಸುಮನ್/ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮ, ಅಂಬಟಿ ರಾಯುಡು, ಕೀರನ್ ಪೊಲಾರ್ಡ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಜೇಮ್ಸ್ ಫ್ರಾಂಕ್ಲಿನ್, ಲಸಿತ್ ಮಾಲಿಂಗ, ಪ್ರಗ್ಯಾನ್ ಓಜಾ, ಮುನಾಫ್ ಪಟೇಲ್.
ರಾಜಸ್ಥಾನ ರಾಯಲ್ಸ್: ರಾಹುಲ್ ದ್ರಾವಿಡ್(ನಾಯಕ), ಅಜಿಂಕ್ಯ ರಹಾನೆ, ಶ್ರೀವತ್ಸ್ ಗೋಸ್ವಾಮಿ, ಅಶೋಕ್ ಮೆನೆರಿಯಾ, ಬ್ರಾಡ್ ಹಾಡ್ಜ್, ದಿನೇಶ್ ಚಾಂಡಿಮಾಲ್/ಓವೇಸ್ ಷಹಾ, ಜೋಹಾನ್ ಬೋಥಾ, ಕಿವೊನ್ ಕೂಪರ್, ಅಂಕಿತ್ ಚೌಹಾನ್, ಅಮಿತ್ ಸಿಂಗ್, ಸಿದ್ಧಾರ್ಥ ತ್ರಿವೇದಿ.
‘ಮುರಿದು ನೇತಾಡುತ್ತಿರುವ ಏಸುವಿನ ಕೈ, ಮುರಿದ ಕಾಲು, ಒಡೆದ ಮುಖ....’’ ಈ ಸಮಾಜದ ಕ್ರೌರ್ಯ ಮತ್ತು ವಿರೂಪಕ್ಕೆ ಹಿಡಿದ ಕನ್ನಡಿಯಂತೆ ಮಾಧ್ಯಮಗಳ ಮುಖಪುಟದಲ್ಲ ...
Click here to post your views ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನ ...
ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...