
ಹೈದರಾಬಾದ್, ಮೇ10: ಡೇವಿಡ್‌ವಾರ್ನರ್‌ರ ಅಬ್ಬರದ ಬ್ಯಾಟಿಂಗ್ (ಅಜೇಯ 109ರನ್) ನೆರವಿನಿಂದ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಡೆಕ್ಕನ್ ಚಾರ್ಜರ್ಸ್‌ನ್ನು 9 ವಿಕೆಟ್‌ನಿಂದ ಮಣಿಸುವ ಮೂಲಕ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ವಶಪಡಿಸಿಕೊಂಡಿದೆ.ರಾಜೀವ್‌ಗಾಂಧಿ ಸ್ಟೇಡಿಯಂನಲ್ಲಿ ಗೆಲುವಿಗೆ 188 ರನ್‌ಗಳ ಕಠಿಣ ಗುರಿ ಪಡೆದಿದ್ದ ಡೆಲ್ಲಿಯು ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್‌ರನ್ನು (4) ಅಲ್ಪ ಮೊತ್ತಕ್ಕೆ ಕಳೆದುಕೊಂಡಿತು.ಆಗ ಜೊತೆಗೂಡಿದ ಡೇವಿಡ್ ವಾರ್ನರ್ ಹಾಗೂ ನಮಾನ್ ಓಜಾ 2ನೆ ವಿಕೆಟ್‌ಗೆ ಮುರಿಯದ 189 ರನ್‌ಗಳ ಜೊತೆಯಾಟದ ಮೂಲಕ ತಂಡ ಇನ್ನೂ 20 ಎಸೆತಗಳು ಬಾಕಿಯಿರುವಂತೆಯೇ 1 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಲು ಕಾರಣರಾದರು. ಡೇಲ್ ಸ್ಟೇಯ್ನೆ ಅನುಪಸ್ಥಿತಿಯಲ್ಲಿ ಬೌಲಿಂಗ್ ದಾಳಿ ಆರಂಭಿಸಿದ ಡೆಕ್ಕನ್ ತಂಡ ವಾರ್ನರ್-ಓಜಾರಿಂದ ಚೆನ್ನಾಗಿ ಚಚ್ಚಿಸಿಕೊಂಡಿತು. ಈ ಜೋಡಿಯು ಡೆಕ್ಕನ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ 9ನೆ ಓವರ್‌ಗೆ ತಂಡದ ಸ್ಕೋರ್‌ನ್ನು 100 ರ ಗಡಿ ದಾಟಿಸಿತು.
26 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್‌ಗಳನ್ನು ಒಳಗೊಂಡ ಮಿಂಚಿನ ಅರ್ಧಶತಕವನ್ನು ಸಿಡಿಸಿದ ವಾರ್ನರ್ ಎದುರಾಳಿ ಬೌಲರ್‌ಗಳ ಮೇಲರಗಿದರು. ಡೆಕ್ಕನ್ ದಾಳಿಯನ್ನು ಪುಡಿಗೈದ ವಾರ್ನರ್ 52 ಎಸೆತಗಳಲ್ಲಿ 10 ಬೌಂಡರಿ, 6 ಸಿಕ್ಸರ್‌ಗಳನ್ನು ಒಳಗೊಂಡ ಶತಕವನ್ನು ಪೂರೈಸಿದರು. ವಾರ್ನರ್‌ಗೆ ಉತ್ತಮ ಜೊತೆ ನೀಡಿದ ನಮಾನ್ ಓಜಾ(64 ರನ್, 46 ಎಸೆತ, 2 ಬೌಂಡರಿ, 5 ಸಿಕ್ಸರ್) ಈ ವರ್ಷದ ಐಪಿಎಲ್‌ನಲ್ಲಿ ಮೊದಲ ಅರ್ಧಶತಕವನ್ನು ಸಿಡಿಸಿದರು. ವಿದೇಶಿ ಬೌಲರ್‌ಗಳಿಲ್ಲದೆ ಬೌಲಿಂಗ್ ದಾಳಿ ನಡೆಸಿ ಡೆಕ್ಕನ್ ಪರವಾಗಿ ಧವನ್ ಏಕೈಕ ವಿಕೆಟ್ ಪಡೆದರು. ಧವನ್-ವೈಟ್ ಧಮಾಕ
ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಡೆಕ್ಕನ್ ಚಾರ್ಜರ್ಸ್ ತಂಡ ಫಾರ್ಮ್‌ನಲ್ಲಿರುವ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್ ಹಾಗೂ ಕ್ಯಾಮರೂನ್ ವೈಟ್ ಅವರ ಪವರ್‌ಫುಲ್ ಬ್ಯಾಟಿಂಗ್ ನೆರವಿನಿಂದ ನಿಗದಿತ ಓವರ್‌ಗೆ 4 ವಿಕೆಟ್‌ಗಳ ನಷ್ಟಕ್ಕೆ 187 ರನ್ ಕಲೆಹಾಕಿತು. ಟೂರ್ನಿಯಲ್ಲಿ ನಾಲ್ಕನೆ ಅರ್ಧಶತಕ ಸಿಡಿಸಿದ ಧವನ್ ಹಾಗೂ 5ನೆ ಶತಕಾರ್ಧ ದಾಖಲಿಸಿದ ವೈಟ್ ಕೊನೆಯ 9 ಓವರ್‌ನಲ್ಲಿ 117 ರನ್ ದೋಚುವ ಮೂಲಕ ಡೆಕ್ಕನ್ ಉತ್ತಮ ಮೊತ್ತ ಕಲೆ ಹಾಕಲು ನೆರವಾದರು. ಸೆಮಿ ಫೈನಲ್‌ಗೇರಬೇಕು ಎಂಬ ನಿರೀಕ್ಷೆ ಹಾಗೂ ಒತ್ತಡ ಇಲ್ಲದೆ ಆಡಿದ ವೈಟ್‌ಹಾಗೂ ಧವನ್ ಡೆಲ್ಲಿ ಬೌಲರ್‌ಗಳನ್ನು ಬೆಂಡೆತ್ತಿದರು.
ಡೆಕ್ಕನ್ ತಂಡ ಆರಂಭ ಉತ್ತಮವಾಗಿರಲಿಲ್ಲ. ತಂಡ ಮೊದಲ 10 ಓವರ್‌ನಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 64 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಆದರೆ, ಮುಂದಿನ 10 ಓವರ್‌ನಲ್ಲಿ ರನ್‌ಗಳ ಮಳೆಯನ್ನೇ ಹರಿಸಿ ಡೆಲ್ಲಿ ಗೆಲುವಿಗೆ ಸ್ಪರ್ಧಾತ್ಮಕ ಗುರಿ ವಿಧಿಸಿತು. ಡೆಕ್ಕನ್ ತಂಡ 6ನೆ ಓವರ್‌ಗೆ 33 ರನ್ ಸೇರಿಸುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಹ್ಯಾರಿಸ್(19) ಹಾಗೂ ನಾಯಕ ಕುಮಾರ ಸಂಗಕ್ಕರ(4) ವಿಕೆಟ್‌ನ್ನು ಕಳೆದುಕೊಂಡಿತು. ಆಗ 3ನೆ ವಿಕೆಟ್‌ಗೆ 126 ರನ್ ಜೊತೆಯಾಟವನ್ನು ನಡೆಸಿದ ಧವನ್ ಹಾಗೂ ವೈಟ್ ಡೆಕ್ಕನ್ ಇನಿಂಗ್ಸ್‌ಗೆ ಬಲ ನೀಡಿದರು. ಸ್ಪಿನ್ನರ್ ನದೀಂ ಎಸೆತದಲ್ಲಿ ಸತತ ಸಿಕ್ಸರ್‌ಗಳನ್ನು ಸಿಡಿಸಿದ ಧವನ್ 37 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ಗಳನ್ನು ಒಳಗೊಂಡ ಅರ್ಧಶತಕವನ್ನು ಪೂರೈಸಿದರು.
ಧವನ್‌ಗೆ ಉತ್ತಮ ಬೆಂಬಲ ನೀಡಿದ ವೈಟ್ 33 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್‌ಗಳನ್ನು ಒಳಗೊಂಡ ಅರ್ಧಶತಕವನ್ನು ಪೂರೈಸಿದರು. 84 ರನ್‌ಗೆ ರನೌಟ್ ಆದ ಧವನ್ 49 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ ಸಿಡಿಸಿದರು. ಕೊನೆಯ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದ ವೈಟ್(65) 40 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಸಿಡಿಸಿದರು.
ಸ್ಕೋರ್ ವಿವರ
ಡೆಕ್ಕನ್ ಚಾರ್ಜರ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 187 ರನ್
ಹ್ಯಾರಿಸ್ ಸಿ ಜಯವರ್ಧನೆ ಬಿ ಮೊರ್ಕೆಲ್ 19, ಶಿಖರ್ ಧವನ್ ರನೌಟ್ 84, ಕುಮಾರ ಸಂಗಕ್ಕರ ಸಿ ನದೀಂ ಬಿ ಆ್ಯರೋನ್ 4, ಕ್ಯಾಮರೂನ್ ವೈಟ್ ಸಿ ಓಜಾ ಬಿ ಆ್ಯರೋನ್ 65, ಜೆಪಿ ಡ್ಯುಮಿನಿ ನಾಟೌಟ್ 13, ಪಾರ್ಥಿವ್ ಪಟೇಲ್ ನಾಟೌಟ್ 0, ಇತರ 2, ವಿಕೆಟ್ ಪತನ: 1-28, 2-33, 3-159, 4-179, ಬೌಲಿಂಗ್: ರಸ್ಸಲ್ 4-0-39-0, ಇರ್ಫಾನ್ ಪಠಾಣ್ 4-0-46-0, ಮೊರ್ನೆ ಮೊರ್ಕೆಲ್ 4-0-32-1, ಆ್ಯರೋನ್ 4-0-30-2, ನದೀಂ 4-0-39-0.
ಡೆಲ್ಲಿ ಡೇರ್ ಡೆವಿಲ್ಸ್: 16.4 ಓವರ್‌ಗಳಲ್ಲಿ 1 ವಿಕೆಟ್‌ಗೆ 193 ರನ್
ವೀರೇಂದ್ರ ಸೆಹ್ವಾಗ್ ಸಿ ವೈಟ್ ಬಿ ಧವನ್ 4, ಡೇವಿಡ್ ವಾರ್ನರ್ 109 ನಾಟೌಟ್, ನಮಾನ್ ಓಜಾ 64 ನಾಟೌಟ್, ಇತರ 16, ವಿಕೆಟ್ ಪತನ: 1-4, ಬೌಲಿಂಗ್: ಶಿಖರ್ ಧವನ್ 2-0-27-1, ಸುಧೀಂದ್ರ 3.4-0-43-0, ಗೋನಿ 4-0-22-0, ಆಶಿಶ್ ರೆಡ್ಡಿ 2-0-29-0, ಅಮಿತ್ ಮಿಶ್ರಾ 4-0-44-0, ಅಂಕಿತ್ ಶರ್ಮ 1-0-16-0.
ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...
Click here to post your views ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...
ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...