
ಸೈಂಟ್ ಲೂಸಿಯಾ, ಜೂ.19: ಕಳಪೆ ಪ್ರದರ್ಶನದ ಕಾರಣದಿಂದಾಗಿ ಎರಡನೆ ಟೆಸ್ಟ್‌ನ್ನು ಕಳೆದುಕೊಂಡಿರುವ ಭಾರತ ‘ಎ’ ತಂಡ ವೆಸ್ಟ್ ಇಂಡೀಸ್ ‘ಎ’ ವಿರುದ್ಧದ ಮೂರನೆ ಹಾಗೂ ಅಂತಿಮ ಟೆಸ್ಟ್‌ನಲ್ಲೂ ಹೀನಾಯ ಸೋಲು ಅನುಭವಿಸಿದೆ.
ಮೂರನೆ ಟೆಸ್ಟ್‌ನ ನಾಲ್ಕನೆ ಹಾಗೂ ಅಂತಿಮ ದಿನವಾಗಿರುವ ಇಂದು ವೆಸ್ಟ್ ಇಂಡೀಸ್ ‘ಎ’ ತಂಡ ಭಾರತದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ.
ಗೆಲ್ಲಲು ಎರಡನೆ ಇನಿಂಗ್ಸ್‌ನಲ್ಲಿ 97 ರನ್‌ಗಳ ಸುಲಭದ ಸವಾಲನ್ನು ಪಡೆದ ವೆಸ್ಟ್ ಇಂಡೀಸ್ ‘ಎ’ ತಂಡ 17.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಅಗತ್ಯದ ರನ್ ಪೇರಿಸಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕೀರನ್ ಪೊವೆಲ್ ಔಟಾಗದೆ 56 ರನ್(67ಎ, 8ಬೌ, 2ಸಿ) ಮತ್ತು ಕ್ರೇಗ್ ಬ್ರಾತ್‌ವೈಟ್ ಔಟಾಗದೆ 36 ರನ್(57ಎ, 5ಬೌ) ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಮೊದಲ ಇನಿಂಗ್ಸ್‌ನಲ್ಲಿ ಶತಕ ಮತ್ತು ಎರಡನೆ ಇನಿಂಗ್ಸ್ ನಲ್ಲಿ ಅರ್ಧಶತಕ ಬಾರಿಸಿದ ಪೊವೆಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಹಾಗೂ ಮೆಕ್ಲೀನ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಪಂದ್ಯದ ಮೂರನೆ ದಿನದಾಟದ ಅಂತ್ಯಕ್ಕೆ ಭಾರತ ‘ಎ’ ತಂಡ ಎರಡನೆ ಇನಿಂಗ್ಸ್‌ನಲ್ಲಿ ಮನೋಜ್ ತಿವಾರಿ ಮತ್ತು ವೃದ್ಧಿಮಾನ್ ಸಹಾ ಅವರ 95 ರನ್‌ಗಳ ಜೊತೆಯಾಟದ ನೆರವಿನಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತ್ತು.
48 ರನ್ ಗಳಿಸಿರುವ ವೃದ್ಧಿಮಾನ್ ಸಹಾ ಮತ್ತು 16 ರನ್ ಗಳಿಸಿರುವ ಶಮಿ ಅಹ್ಮದ್ ಇಂದು ಆಟ ಮುಂದುವರಿಸಿ ತಂಡದ ಸ್ಕೋರ್‌ನ್ನು 190ಕ್ಕೆ ತಲುಪಿಸಿದರು. ಸಹಾ 228 ನಿಮಿಷಗಳ ಕಾಲ ಬ್ಯಾಟಿಂಗ್ ನಡೆಸಿ 161 ಎಸೆತಗಳನ್ನು ಎದುರಿಸಿ 7 ಬೌಂಡರಿಗಳ ನೆರವಿನಲ್ಲಿ 52 ರನ್ ಗಳಿಸಿದ್ದಾಗ ಮೆಕ್ಲೀನ್ ಅವರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.
ಆನಂತರ ಕ್ರೀಸ್‌ಗೆ ಆಗಮಿಸಿದ ಪರ್ವಿಂದರ್ ಅವಾನ ಅವರನ್ನು ಖಾತೆ ತೆರೆಯಲು ಅವಕಾಶ ನೀಡದೆ ಮೆಕ್ಲೀನ್ ಪೆವಿಲಿಯನ್‌ಗೆ ಅಟ್ಟುವ ಮೂಲಕ ಭಾರತ‘ಎ’ ತಂಡ ಆಲೌಟಾಯಿತು. ಶಮಿ ಅಹ್ಮದ್ ಔಟಾಗದೆ 33 ರನ್ ಗಳಿಸಿದರು. ಮೆಕ್ಲೀನ್ 57ಕ್ಕೆ 5 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.ಜಾನ್ಸನ್ 54ಕ್ಕೆ 3 ಮತ್ತು ಬಿಶೊ 28ಕ್ಕೆ 1 ವಿಕೆಟ್ ಹಂಚಿಕೊಂಡರು.
ಸೋಮವಾರ ವೆಸ್ಟ್ ಇಂಡೀಸ್ ವಿರುದ್ಧ 106 ರನ್‌ಗಳ ಹಿನ್ನಡೆ ಅನುಭವಿಸಿದ ಭಾರತ ಎರಡನೆ ಇನಿಂಗ್ಸ್ ಆರಂಭಿಸಿದಾಗ ಜಾನ್ಸನ್ ಮತ್ತು ಕೇವಿನ್ ಮೆಕ್ಲೀನ್ ಕರಾರುವಾಕ್ ದಾಳಿ ನಡೆಸಿ ತಂಡದ ನಾಲ್ಕು ವಿಕೆಟ್‌ಗಳನ್ನು ಬಹಳ ಬೇಗನೆ ಉಡಾಯಿಸಿದ್ದರು.
ಅಗ್ರಸರದಿಯ ದಾಂಡಿಗರಾದ ಅಭಿನವ್ ಮುಕುಂದ್ 20 ರನ್ ಗಳಿಸಿ ಜಾನ್ಸನ್‌ಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ತಂಡದ ಮೊದಲ ವಿಕೆಟ್ ಪತನಗೊಂಡಿತ್ತು. ಮುಕುಂದ್ ಗಳಿಸಿರುವ 20 ರನ್ ಸರಣಿಯಲ್ಲಿ ದಾಖಲಿಸಿದ ಗರಿಷ್ಠ ರನ್ ಆಗಿದೆ. ಆರು ಇನಿಂಗ್ಸ್‌ಗಳಲ್ಲಿ ಅವರ ಪ್ರದರ್ಶನ 0, 0, 8, 8, 10 ಮತ್ತು 20 ಆಗಿದೆ. ಮುಕುಂದ್ ಔಟಾದ ಬಳಿಕ ಅಜಿಂಕ್ಯ ರಹಾನೆ(2), ರೋಹಿತ್ ಶರ್ಮ (2) ಚೇತೇಶ್ವರ ಪೂಜಾರ (5) ಔಟಾದರು.
ಆಗ ಭಾರತದ ಸ್ಕೋರ್ 10.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 35 ರನ್. ಆ ಬಳಿಕ ಕ್ರೀಸ್‌ಗೆ ಆಗಮಿಸಿದ ಮನೋಜ್ ತಿವಾರಿ ಮತ್ತು ವೃದ್ಧಿಮಾನ್ ಸಹಾ ತಂಡಕ್ಕೆ ಆಸರೆ ನೀಡಿದರು. ಅವರು 95 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರ್‌ನ್ನು 130ಕ್ಕೆ ತಲುಪಿಸಿದರು.
ತಿವಾರಿ 154 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ಬ್ಯಾಟಿಂಗ್ ನಡೆಸಿ 62 ರನ್(119ಎ, 10ಬೌ, 1ಸಿ) ಗಳಿಸಿ ಮೆಕ್ಲೀನ್ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದು ನಿರ್ಗಮಿಸಿದರು. ಜಲಜ್ ಸಕ್ಷೇನಾ 2 ಮತ್ತು ದಾರೆಕರ್ 15 ರನ್ ಸೇರಿಸಿ ಪೆವಿಲಿಯನ್‌ಗೆ ವಾಪಸಾದರು. ಅಂತಿಮವಾಗಿ ಸಹಾ ಮತ್ತು ಅಹ್ಮದ್ 8ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 26 ರನ್‌ಗಳ ಕಾಣಿಕೆ ನೀಡಿ ತಮ್ಮ ಹೋರಾಟವನ್ನು ಅಂತಿಮ ದಿನಕ್ಕೆ ಕಾಯ್ದಿರಿಸಿದ್ದರು.
ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...
Click here to post your views ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...
ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...
ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...