ಆತ್ಮೀಯರೇ,
ದೇಶದ ಶಿಕ್ಷಣ ವ್ಯವಸ್ಥೆಯ ಮೂಲಭೂತ ಸಮಸ್ಯೆ ಏನೆಂದು ಪ್ರತಿಯೊಬ್ಬರೂ ಚಿಂತಿಸಬೇಕಾದಂತಹ ಪರಿಸ್ಥಿತಿ ಉಂಟಾಗುತ್ತಿದೆ. 1950ರಲ್ಲಿ ಜಾರಿಯಾದ ಸಂವಿಧಾನದಲ್ಲಿ ರಾಜ್ಯ ನಿರ್ದೇಶನ ತತ್ವಗಳಲ್ಲಿ ವ್ಯಕ್ತವಾದ ಆಶಯಕ್ಕೆ ವ್ಯತಿರಿಕ್ತವಾಗಿ 40 ವರ್ಷಗಳ ಶಿಕ್ಷಣ ವ್ಯವಸ್ಥೆಯು ನಡೆಯಿತು. ಅದರ ಪರಿಣಾಮವಾಗಿ ದೊಡ್ಡ ಸಂಖ್ಯೆಯ ಮಕ್ಕಳು, ಉನ್ನತ ಶಿಕ್ಷಣವಿರಲಿ, ಪ್ರಾಥಮಿಕ ಶಿಕ್ಷಣದಿಂದಲೂ ವಂಚಿತರಾಗಿಯೇ ಉಳಿದಿದ್ದರು. ಅಂತಹ ಸ್ಥಿತಿಯಿದ್ದಾಗಲೇ, 90ರ ದಶಕದಲ್ಲಿ ಆಳುವವರು ದೇಶವನ್ನು ಸಂಪೂರ್ಣವಾಗಿ ಮುಕ್ತ ಮಾರುಕಟ್ಟೆಯ ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ತೆರೆದಿಡುವ ಪ್ರಕ್ರಿಯೆ ಶುರುವಾಯಿತು. ಅದರ ಜೊತೆಗೆ ಶಿಕ್ಷಣವನ್ನೂ ಕೂಡಾ ಖಾಸಗೀಕರಿಸುವ ಪ್ರಯತ್ನಗಳು ಭರದಿಂದ ಆರಂಭವಾದವು. ಸರಕಾರದ ಚಾಣಾಕ್ಷತನದಿಂದಾಗಿ ‘ಸಾರ್ವಜನಿಕ ಖಾಸಗಿ ಸಹಭಾಗತ್ವ’ದ ಹೆಸರಿನಲ್ಲಿ ಖಾಸಗೀಕರಣಕ್ಕೆ ಮಾನ್ಯತೆ ದೊರಕಿಸಲಾಯಿತು. ಖಾಸಗಿ ಸಂಸ್ಥೆಗಳ ಪರವಾಗಿ ಅನೇಕ ಕೋರ್ಟ್‌ಗಳ ತೀರ್ಪುಗಳೂ ಬಂದವು.
ದೇಶದ ಎಲ್ಲಾ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಅನಧಿಕೃತವಾಗಿ ಶಿಕ್ಷಣವನ್ನು ವ್ಯಾಪಾರವಾಗಿಸಿದೆ. ಇತ್ತೀಚಿಗೆ ಜಾರಿಯಾದ ‘ಶಿಕ್ಷಣ ಹಕ್ಕು ಕಾಯ್ದೆ’ಯ ನಿಯಮದಂತೆ 25 ಶೇ. ಸೀಟಗಳನ್ನು ದುರ್ಬಲ ವರ್ಗದವರಿಗೆ ನೀಡುವುದೆಂದರೆ ತಮಗೇನೋ ಸಹಿಸಲಸಾಧ್ಯವಾದ ಅನ್ಯಾಯವಾದಂತೆ ವರ್ತಿಸುತ್ತಿರುವ ಈ ಶಾಲೆಗಳ ಮಾಲಕರಾರೂ ಸಮಾಜೋದ್ಧಾರಕ್ಕಾಗಿ ಸಂಸ್ಥೆಗಳನ್ನು ತೆರೆದವರಲ್ಲ; ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಇಂಗ್ಲಿಷ ಮಾಧ್ಯಮ-ಸಿಬಿಎಸ್‌ಸಿ ಶಾಲೆಗಳನ್ನು ನಡೆಸುತ್ತಿರುವ, ಚಾರಿಟೆಬಲ್ ಟ್ರಸ್ಟ್, ಎಜುಕೇಶನ್ ಸೊಸೈಟಿಗಳ ಹೆಸರಿನಲ್ಲಿ ಸರಕಾರಕ್ಕೆ ಕೋಟಿಗಟ್ಟಲೆ ತೆರಿಗೆ ವಂಚಿಸುತ್ತಿರುವ, ತಮ್ಮ ಸಿಬ್ಬಂದಿ-ಶಿಕ್ಷಕರನ್ನು ಬಿಡಿಗಾಸಿಗೆ ದುಡಿಸಿ ಶೋಷಿಸುತ್ತಿರುವ, ಈ ಸಂಸ್ಥೆಗಳು ಜಾತಿವಾದವನ್ನೂ, ಧಾರ್ಮಿಕ ಮೂಲಭುತವಾದವನ್ನೂ ಕೂಡಾ ಬೋಧಿಸುತ್ತಿವೆ.
ಇತ್ತೀಚಿಗೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ‘ಕುಸ್ಮಾ’ದ ಶಾಲಾ ಬಂದ್ ಹಾಗೂ ಬಡ ಮಕ್ಕಳು ಖಾಸಗಿ ಶಾಲೆಗೆ ಬಂದರೆ ಸಮುದ್ರದ ನೀರಿಗೆ ಕೊಳಚೆ ನೀರು ಸೇರಿದಂತೆ ಎಂಬ ಹೇಳಿಕೆಯೇ ಈ ಶಾಲೆಗಳ ಜನ ವಿರೋಧಿತನಕ್ಕೊಂದು ಇತ್ತೀಚಿನ ನಿದರ್ಶನ. ಉನ್ನತ ಶಿಕ್ಷಣದಲ್ಲೂ ವಿದೇಶಿ ವಿಶ್ವವಿದ್ಯಾಲಯಗಳಿಗೆ ಅವಕಾಶ ನೀಡುವ ಮಸೂದೆಯಂತಹವನ್ನೂ ಪರಿಶೀಲಿಸುವ ಮಟ್ಟಿಗೆ ಈ ವ್ಯಾಪಾರೀಕರಣದ ಯತ್ನಗಳು ಮುಂದುವರೆದಿವೆ. ಇವೆಲ್ಲವೂ ಸಮಾಜದ ದಮನಿತ ಸಮುದಾಯಗಳ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ಅವಕಾಶ ವಂಚಿತರನ್ನಾಗಿಸುತ್ತಿವೆ.
ಸಂವಿಧಾನದ ಆಶಯಗಳಿಗೆ ಹಾಗೂ ಸಧೃಡ ದೇಶದ ನಿರ್ಮಾಣಕ್ಕೆ ಸಂಪೂರ್ಣವಾಗಿ ವಿರುದ್ಧವಾದ ಈ ಬೆಳವಣಿಗೆಗಳು ತಮ್ಮನ್ನೆಲ್ಲ ಆತಂಕಕ್ಕೆ ದೂಡಿವೆ. ಇವನ್ನೆಲ್ಲಾ ಎಲ್ಲಿಯಾದರೂ ಒಂದೆಡೆ ನಿಯಂತ್ರಿಸಲೇಬೇಕಿದೆ. ಪ್ರಪಂಚದಲ್ಲಿ ಉತ್ತಮ ಆಡಳಿತ ವ್ಯವಸ್ಥೆ ಹೊಂದಿರುವ ಎಲ್ಲಾ ರಾಷ್ಟ್ರಗಳಲ್ಲೂ ಸರಕಾರವೇ ಸಾರ್ವಜನಿಕ ಹಣದಲ್ಲಿ ಅತ್ಯುತ್ತಮವಾದ ಶಿಕ್ಷಣ ನಿಡುವಂತಹ ‘ಸಮಾನ ಶಾಲಾ ವ್ಯವಸ್ಥೆ’ಯೇ ಅಸ್ತಿತ್ವದಲ್ಲಿದೆ. ಇದನ್ನು ನೆರೆಹೊರೆ ಶಾಲೆಯ ಪರಿಕಲ್ಪನೆಯಲ್ಲಿ ಜಾರಿ ಮಾಡಲಾಗುತ್ತದೆ. ಒಂದು ನೆರೆಹೊರೆಯಲ್ಲಿರುವ ಎಲ್ಲಾ ಮಕ್ಕಳು-ವರ್ಗ, ವರ್ಣ, ಪ್ರದೇಶ ಭಾಷೆ ಅಥವಾ ಬೇರೆ ಯಾವುದೇ ಅಸಮಾನತೆಯಿಲ್ಲದೆ ಎಲ್ಲಾ ಮಕ್ಕಳೂ ಒಂದೆ ಶಾಲೆಯಲ್ಲಿ ಕಲಿಯುತ್ತಾರೆ.
ಬಹುತ್ವಗಳಿಗೂ ಅವಕಾಶವಿರುವ, ಆದರೆ ಸಮಾನವಾದ ಪಠ್ಯಕ್ರಮದಲ್ಲಿ ಶಿಕ್ಷಣ ಪಡೆಯುತ್ತಾರೆ. ದೇಶದ ಹಲವು ಚಿಂತಕರು, ಶಿಕ್ಷಣ ತಜ್ಞರು ಹಾಗೂ ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆ ಕಾಳಜಿಯುಳ್ಳ ನಾಗರಿಕರು ಸೇರಿ ‘ಶಿಕ್ಷಣದ ಹಕ್ಕಿಗಾಗಿ ಅಖಿಲ ಭಾರತ ಸಮಿತಿ’ಯನ್ನು ರಚಿಸಿಕೊಂಡು ಹಲವು ವಿಧಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. ಅದೇ ರೀತಿ ಕರ್ನಾಟಕದಲ್ಲೂ ‘ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ’ವು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ನೀವು ಈ ಆಂದೋಲನದಲ್ಲಿ ಭಾಗವಹಿಸುವಂತೆ ಕೋರುತ್ತೇವೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಹದಿನಾಲ್ಕು ವರ್ಷದ ಹುಡುಗಿ ಮತ್ತು ಮೂರು ವರ್ಷದ ಹುಡುಗ ಹಸಿವಿನಿಂದಾಗಿ ಬರ್ಬರ ಸಾವನ್ನಪ್ಪಿದ್ದಾರೆ. ನಾಝ್ರಾ ಖಾತೂನ್ ಎನ್ನ ...
Click here to post your views ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...
ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...
ಊರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...
ಮಾನ್ಯರೆ,
ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...