mail-img print-img

ಮಾಯವಾದ ಬಸ್ಸುಗಳು!

ಬುಧವಾರ - ಸೆಪ್ಟೆಂಬರ್ -12-2012

ಮಾನ್ಯರೆ,

ಕಿನ್ನಿಗೋಳಿಯಿಂದ ಮುಂಡ್ಕೂರು-ಬೆಳ್ಮಣ್ ಮಾರ್ಗ ವಾಗಿ ಕಾರ್ಕಳಕ್ಕೆ ಬೆಳಗ್ಗೆ ಗಂಟೆ ೮:೩೦ ಮತ್ತು ೮:೪೫ಕ್ಕೆ ಹೊರಡುತ್ತಿದ್ದ ಎರಡೂ ಬಸ್ಸುಗಳು ಕಳೆದ ಆರೇಳು ತಿಂಗಳಿಂದ ಮಾಯವಾಗಿವೆ....!  ಪರವಾನಿಗೆ ಇದ್ದೂ, ಈ ಬಸ್ಸುಗಳ ಓಡಾಟ ಸ್ಥಗಿತಗೊಂಡಿದ್ದರಿಂದ ಈ ಭಾಗದಿಂದ ಬೆಳ್ಮಣ್-ಶಿರ್ವ-ಕಾರ್ಕಳಕ್ಕೆ ಹೋಗುವ ನಿತ್ಯ ಪ್ರಯಾಣಿಕರಿಗೆ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಿಗಳಿಗೆ  ಬಹಳಷ್ಟು ತೊಂದರೆಯಾಗಿದೆ. ಕಿನ್ನಿಗೋಳಿಯಿಂದ ಪೂರ್ವಾಹ್ನ ಗಂಟೆ 8:05ಕ್ಕೆ ಬಸ್ ಹೋದ ಮೇಲೆ  ನಂತರದ ಬಸ್ಸು ಗಂಟೆ 9:05ಕ್ಕೆ. ಈ ನಡುವಿನ ಅವಧಿಯಲ್ಲಿ ಚಲಿಸುತ್ತಿದ್ದ ಬಸ್‌ಗಳು ಈಗ ಕಾಣೆಯಾಗಿವೆ. ಈ ಬಸ್‌ಗಳ ಮಾಲಕರು  ರಸ್ತೆ ದುರಸ್ತಿಯ ನೆಪ ಒಡ್ಡಿ ಬಸ್‌ನ ಪರವಾನಿಗೆಯನ್ನು ಸೆರೆಂಡರ್    ಮಾಡಿದ್ದಾರೆ ಎಂದು ಜನರಾಡಿ ಕೊಳ್ಳುತ್ತಿದ್ದಾರೆ.

ರಸ್ತೆ  ತೇಪೆ ಕಾರ್ಯದೊಂದಿಗೆ ದುರಸ್ತಿಗೊಂಡಿದ್ದರೂ ಸಂಬಂಧಪಟ್ಟ ಬಸ್ ಮಾಲಕರು ಕಟೀಲು- ಕಿನ್ನಿಗೋಳಿ-ಬೆಳ್ಮಣ್-ಕಾರ್ಕಳಕ್ಕೆ  ಹೊಡರಬೇಕಾಗಿದ್ದ ಬಸ್‌ಗಳನ್ನು ರಸ್ತೆಗೆ ಇಳಿಸದಿರುವುದರಿಂದ  ದಿನನಿತ್ಯ ಶಾಲಾ ಕಾಲೇಜುಗಳಿಗೆ (ಮುಂಡ್ಕೂರು-ಶಿರ್ವ-ಬೆಳ್ಮಣ್-ನಿಟ್ಟೆ) ಮತ್ತು ಕೆಲಸಕ್ಕೆ ಹೋಗುವ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಅಲ್ಲದೆ 9:05 ಕಿನ್ನಿಗೋಳಿಯಿಂದ ಬಿಡುವ ಬಸ್‌ನಲ್ಲಿ ಎರಡು ಬಸ್‌ಗಳ ಪ್ರಯಾಣಿಕರು ತುಂಬಿ ತುಳುಕು ವುದರಿಂದ  ಕಾಲು ಇಡಲು ಜಾಗವಿಲ್ಲದೆ, ಮಹಿಳೆಯರೂ, ವಯೋವೃದ್ಧರೂ ಕೂಡಾ ವಿದ್ಯಾರ್ಥಿಗಳೊಂದಿಗೆ  ನೇತಾಡಿ ಕೊಂಡು ಬರುವ ದೃಶ್ಯ ಸಾಮಾನ್ಯವಾಗಿದೆ.

ಮಳೆಗಾಲದ ಪರಿಸ್ಥಿಯಲ್ಲೂ ನಿತ್ಯ ಪ್ರಯಾಣಿಕರ ಗೋಳು ಚಿಂತಾಜನಕ. ಇತ್ತೀಚೆಗೆ ವಿದ್ಯಾರ್ಥಿಗಳಿಬ್ಬರು ಜಾರಿ ಬಿದ್ದು ಕೈಕಾಲಿಗೆ ಗಾಯ ಮಾಡಿಕೊಂಡ ಘಟನೆಯೂ ನಡೆದಿದೆ. ಈ ಬಗ್ಗೆ (ಮುಂಡ್ಕೂರು-ಬೆಳ್ಮಣ್-ನಿಟ್ಟೆ) ನಿತ್ಯ ಪ್ರಯಾಣಿಕರು  ಬೇಸತ್ತು ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿತ್ಯ ಪ್ರಯಾಣಿಕರ ಸಹಿಯೊಂದಿಗೆ ದೂರು ನೀಡಿದ್ದಾರೆ. ಪರವಾನಿಗೆ ಇದ್ದೂ ಬಸ್‌ಗಳು ಓಡಾಡದಿದ್ದರೆ ಅಂತಹ ಪರವಾನಿಗೆ ರದ್ದುಗೊಳಿಸಿ, ಇತರರಿಗೆ ಅವಕಾಶ ನೀಡಬೇಕು. 

ಜನಸಾಮಾನ್ಯರಿಗೆ ತೊಂದರೆಯಾಗದಂತೆ ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಂಡು ಈ ಸಮಸ್ಯೆ ಪರಿಹರಿಸಬೇಕಾಗಿದೆ.ಈ ಸಮಸ್ಯೆಯನ್ನು  ಸಾರಿಗೆ ಸಚಿವರ ಗಮನಕ್ಕೂ ತಂದು ಈ ಭಾಗದಲ್ಲಿ ಸರಕಾರಿ ಬಸ್ ಓಡಾಟವನ್ನು ಪ್ರಾರಂಭಿಸುವಂತೆ ಮನವಿ ನೀಡುವ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ.

-ಎಸ್.ಎಸ್.ತೋನ್ಸೆ

 



Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಜನಸಂಖ್ಯೆ ಹೆಚ್ಚಳದ ಪರಿಣಾಮ

ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮನೋಲ್ಲಾಸದ ನಾಲೆಗಳು: (ಭಾಗ-2)

ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...


- ಶೂದ್ರ ಶ್ರೀನಿವಾಸ್

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್