ಹಿಂದಿ ವಾರ್ತಾ ಪತ್ರಿಕೆಗಳನ್ನು ಮಾತ್ರ ಓದುವವರ ಹಾಗೂ ಅದರಲ್ಲಿ ಅಚ್ಚಾಗಿದ್ದನ್ನು ನಂಬುವವರ ಪ್ರಕಾರ ಭಾರತದಲ್ಲಿ ಮುಸ್ಲಿಮರು ಇಲ್ಲ. ಅಥವಾ ಅವರೇನಾದರೂ ಇದ್ದರೆ ಅವರು ಒಂದೋ ಶಾರುಖ್ ಮತ್ತು ಸಲ್ಮಾನ್‌ರಂತೆ ನಟರು ಅಥವಾ ಮನರಂಜನೆ ನೀಡುವವರು ಆಗಿರುತ್ತಾರೆ ಅಥವಾ ಅಬು ಸಲೀಂ ಮತ್ತು ಅಬು ಜುಂದಾಲ್‌ನಂತೆ ಕ್ರಿಮಿನಲ್‌ಗಳು ಅಥವಾ ಭಯೋತ್ಪಾದಕರು ಆಗಿರುತ್ತಾರೆ. ಓರ್ವ ಮುಸ್ಲಿಂ, ಭಾರತೀಯ ಸಮಾಜಕ್ಕೆ ದೇಣಿಗೆ ನೀಡುವ ಸಾಮಾನ್ಯ ನಾಗರಿಕ ಆಗಿರಲು ಸಾಧ್ಯವಿಲ್ಲ ಎಂದು ಒಬ್ಬ ಸಾಮಾನ್ಯ ಹಿಂದಿ ವಾರ್ತಾಪತ್ರಿಕೆ ಓದುಗ ಭಾವಿಸುತ್ತಾನೆ. ಮುಸ್ಲಿಮನ ಬಗ್ಗೆ ಏನನ್ನಾದರೂ ವರದಿ ಮಾಡು ವುದಿದ್ದರೆ ಅದು ಏನಾದರೂ ವಿಚಿತ್ರದಿಂದ ಕೂಡಿರಬೇಕು ಅಥವಾ ಕನಿಷ್ಠ ಮನೋರಂಜನೆ ಯಾದರೂ ಆಗಿರಬೇಕು. ಇದಕ್ಕೆ ವ್ಯತಿರಿಕ್ತವಾಗಿ ಉರ್ದು ವಾರ್ತಾ ಪತ್ರಿಕೆಗಳನ್ನು ಓದಿ. ಇದು ಇನ್ನೊಂದು ಭಾರತವೇನೋ ಎಂಬ ಭಾವನೆ ಬರುತ್ತದೆ.ಉದು೯ ಪತ್ರಿಕೆಗಳು ದೇಶದ ಒಂದಲ್ಲ ಒಂದು ಭಾಗದಲ್ಲಿ ನಡೆಯುವ ಮುಸ್ಲಿಂ ವಿರೋಧಿ ಗಲಭೆಗಳು; ಸಮುದಾಯದ ವಿರುದ್ಧ ಪೊಲೀಸ್ ದೌರ್ಜನ್ಯಗಳು; ಭಯೋತ್ಪಾದನೆ ವಿರುದ್ಧ ಹೋರಾಟದ ಹೆಸರಿನಲ್ಲಿ ಭದ್ರತಾ ಸಂಸ್ಥೆಗಳು ಮುಸ್ಲಿಂ ಯುವಕರನ್ನು ಎತ್ತಿಕೊಂಡು ಹೋಗುವುದು; ಬಂಧನದಲ್ಲಿರುವ ಮುಸ್ಲಿಮರಿಗೆ ನ್ಯಾಯಾಲಯಗಳು ಜಾಮೀನು ನೀಡದೆ ಇರುವುದು; ಮದ್ರಸಗಳ ಮೇಲೆ ಪೊಲೀಸರು ದಾಳಿ ನಡೆಸುವುದು; ಪೊಲೀಸ್ ಕಸ್ಟಡಿಯಲ್ಲಿ ಮುಸ್ಲಿಮರಿಗೆ ಚಿತ್ರಹಿಂಸೆ ಕೊಡುವುದು ಮುಂತಾದವುಗಳನ್ನು ವರದು ಮಾಡುತ್ತವೆ.
ಇದಲ್ಲದೇ ನ್ಯಾಯಾಂಗಕ್ಕೆ ಹೊರತಾದ ಕೊಲೆಗಳು; ಮುಸ್ಲಿಂ ವಾಸ್ತವ್ಯ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ, ಇಲಾಖೆಗಳು ಅಥವಾ ಖಾಸಗಿ ಕಂಪೆನಿಗಳು ವಕ್ಫ್ ಆಸ್ತಿಗಳನ್ನು ಗುಳುಂ ಮಾಡುವುದು; ಮುಸ್ಲಿಂ ಅಲ್ಪಸಂಖ್ಯಾತ ಶಾಲೆಗಳು ಮತ್ತು ಕಾಲೇಜುಗಳಿಗೆ ಮಂಜೂರಾದ ಅಧಿಕೃತ ಅನುದಾನಗಳು ಸಕಾಲದಲ್ಲಿ ಸಿಗದೆ ಇರುವುದು, ಹಾಗಾಗಿ ಶಿಕ್ಷಕರು ಮತ್ತು ಸಿಬ್ಬಂದಿಗೆ ಪ್ರತಿ ತಿಂಗಳು ಸಂಬಳ ಸಿಗದೆ ಇರುವುದು; ಮುಸ್ಲಿಂ ಪ್ರದೇಶಗಳಲ್ಲಿ ಮಸೀದಿ ಕಟ್ಟಲುಸರಕಾರಿ ಇಲಾಖೆಗಳು ಅನುಮತಿ ನಿರಾಕರಿಸುವುದು ಇವೇ ಮುಂತಾದ ವಿಷಯಗಳಿಗೆ ಸಂಬಂಧಿಸಿದ ವರದಿಗಳು ಎಲ್ಲಾ ಉರ್ದು ಪತ್ರಿಕೆಗಳ ಸಾಮಾನ್ಯ ಲಕ್ಷಣಗಳಾಗಿವೆ.
ಆದರೆ, ಇವುಗಳು ಕಲ್ಪನೆಗಳಲ್ಲ, ವಾಸ್ತವ ಸಂಗತಿಗಳು. ವರದಿಯನ್ನು ಬರೆಯುವಲ್ಲಿ ಅಥವಾ ವಿಷಯವನ್ನು ನೋಡುವಲ್ಲಿ ಕೊಂಚ ಮಟ್ಟಿನ ಅತಿಶಯೋಕ್ತಿ ಯಾಗಿರಬಹುದಾದ ಸಾಧ್ಯತೆ ಇದೆ. ಆದರೆ, ಈ ವಾಸ್ತವಗಳನ್ನು ಸುದ್ದಿಯಲ್ಲ ಎಂದು ಯಾರೂ ತಳ್ಳಿಹಾಕಲು ಸಾಧ್ಯವಿಲ್ಲ. ಇವುಗಳು 14 ಕೋಟಿ ಸಂಖ್ಯೆಯ ಅಥವಾ ಭಾರತದ ಒಟ್ಟು ಜನಸಂಖ್ಯೆಯ 13.4 ಶೇ.ದಷ್ಟಿರುವ ಸಮುದಾಯಕ್ಕೆ ನಿರಂತರವಾಗಿ ಆಗುತ್ತಿರುತ್ತವೆ.
ಆದರೆ, ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ ರಾಷ್ಟ್ರೀಯ ಪತ್ರಿಕೆಗಳು ಮುಸ್ಲಿಮರ ಸ್ಥಿತಿಗತಿಯ ಬಗ್ಗೆ ನಿರಂತರವಾಗಿ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಮುಸ್ಲಿಂ ಯುವಕರನ್ನು ಬಂಧಿಸುವ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದ ಹೆಸರಿನಲ್ಲಿ ಭದ್ರತಾ ಸಂಸ್ಥೆಗಳು ವಿಶೇಷವಾಗಿ ಬಿಹಾರದ ದರ್ಭಾಂಗ, ಉತ್ತರಪ್ರದೇಶದ ಅಝಮ್‌ಗಢ, ಮಹಾರಾಷ್ಟ್ರದ ಮಾಲೆಗಾಂವ್ ಮತ್ತು ಆಂಧ್ರ ಪ್ರದೇಶದ ಹೈದರಾಬಾದ್‌ನ ಮುಸ್ಲಿಂ ಯುವಕರನ್ನು ಗುರಿಯಾಗಿಸಿವೆ. ಈ ಪ್ರದೇಶಗಳಲ್ಲಿ ಮುಸ್ಲಿಮರು ಬೇರೆ ಸ್ಥಳಗಳಿಗೆ ಹೋಲಿಸಿದರೆ ಉತ್ತಮ ಸ್ಥಿತಿಯಲ್ಲಿದ್ದಾರೆ. ಇಲ್ಲಿನ ಹೆಚ್ಚಿನ ಯುವಕರು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿ ಭಾರತ ಹಾಗೂ ವಿದೇಶಗಳಲ್ಲಿ, ಮುಖ್ಯವಾಗಿ ಸೌದಿ ಅರೇಬಿಯ ಮತ್ತು ಇತರ ಕೊಲ್ಲಿ ದೇಶಗಳಲ್ಲಿ, ಕೆಲಸ ಪಡೆದಿದ್ದಾರೆ.
ಇದರಿಂದ ಅವರ ಕುಟುಂಬಗಳು ಆರ್ಥಿಕವಾಗಿ ಸಾಕಷ್ಟು ಉತ್ತಮ ಸ್ಥಿತಿಗೆ ತಲುಪಿವೆ. ಇದೇ ಅವರಿಗೆ ಮುಳುವಾಗಿದೆ. ಅವರನ್ನು ಹಣಿಯಲು ಭದ್ರತಾ ಸಂಸ್ಥೆಗಳು ಮತ್ತು ಪೊಲೀಸರು ಅಭಿಯಾನ ವೊಂದನ್ನು ಆರಂಭಿಸಿದ್ದಾರೇನೋ ಎನ್ನುವ ಭಾವನೆ ಮೂಡಿದೆ. ಅದೇ ವೇಳೆ, ಹಿಂದೂ ಆಡಳಿತಗಾರರು ಇನ್ನೊಂದು ಕಡೆಗೆ ನೋಡುತ್ತಿದ್ದಾರೆ.ನಾಗರಿಕ ಹಕ್ಕುಗಳ ಉಲ್ಲಂಘನೆ ಬಗ್ಗೆ ಮುಸ್ಲಿಂ ನಾಯಕತ್ವ ಮತ್ತು ಮಾನವಹಕ್ಕು ಕಾರ್ಯಕರ್ತರು ಧ್ವನಿಯೆಬ್ಬಿಸಿದ್ದಾರೆ. ತಪ್ಪಾಗಿ ಬಂಧಿಸಲ್ಪಟ್ಟ ವರ ಹಾಗೂ ಮೊಕದ್ದಮೆ ದಾಖಲಿಸಲ್ಪಟ್ಟವರ ಪರವಾಗಿ ನ್ಯಾಯ ಕೇಳಲು ಅವರು ಹೇಳಿಕೆಗಳನ್ನು ನೀಡುತ್ತಿದ್ದಾರೆ ಹಾಗೂ ಮೆರವಣಿಗೆಗಳು ಮತ್ತು ಸಭೆಗಳನ್ನು ನಡೆಸುತ್ತಿದ್ದಾರೆ. ಈ ಹೇಳಿಕೆಗಳು ಮತ್ತು ‘ಬಂಧನ’ ಘಟನೆಗಳು ಉರ್ದು ಪತ್ರಿಕೆಗಳಲ್ಲಿ ವರದಿಯಾಗುತ್ತವೆ. ಆದರೆ, ಎಂದಿನಂತೆ, ರಾಷ್ಟ್ರೀಯ ಪತ್ರಿಕೆಗಳು ಮೂಲಭೂತ ಹಕ್ಕುಗಳ ಉಲ್ಲಂಘನೆ ಬಗ್ಗೆ ದಿವ್ಯ ನಿರ್ಲಕ್ಷ ತಾಳಿವೆ.
ನನ್ನ ಅಭಿಪ್ರಾಯವನ್ನು ಸಾಬೀತುಪಡಿಸುವುದಕ್ಕಾಗಿ ನಾನು ಒಂದು ಹಿಂದಿ ಮತ್ತು ಒಂದು ಉರ್ದು ಪತ್ರಿಕೆಯ ತುಲನಾತ್ಮಕ ಓದುವಿಕೆಯಲ್ಲಿ ತೊಡಗಿದೆ. ಹಿಂದಿ ಪತ್ರಿಕೆಯಾಗಿ ನಾನು ‘ದೈನಿಕ್ ಜಾಗರಣ್’ ಮತ್ತು ಉರ್ದು ಪತ್ರಿಕೆಯಾಗಿ ‘ಇಂಕಿಲಾಬ್’ ಅನ್ನು ಆಯ್ಕೆ ಮಾಡಿದೆ. ಪ್ರಸಾರ ಸಂಖ್ಯೆಯಲ್ಲಿ ಜಾಗರಣ್ 2010 ರಂತೆ ಭಾರತದ ಎರಡನೆ ಅತಿದೊಡ್ಡ ಪತ್ರಿಕೆಯಾದರೆ, ಇಂಕಿಲಾಬ್ ಪ್ರತಿಷ್ಠಿತ ಪತ್ರಿಕೆಯಾಗಿದೆ. ಅದು ಭಾರತೀಯ ಸ್ವಾತಂತ್ರ ಹೋರಾಟದಲ್ಲೂ ಭಾಗವಹಿಸಿತ್ತು. ಇಂಕಿಲಾಬ್ 1938ರಲ್ಲಿ ಬಾಂಬೆಯಲ್ಲಿ ಜನ್ಮ ತಾಳಿತು. ಅದನ್ನು ಜಾಗರಣ್ ಗ್ರೂಪ್ 2010ರ ಮೇ ತಿಂಗಳಲ್ಲಿ ಖರೀದಿಸಿ ಉತ್ತರ ಭಾರತದ 10 ನಗರಗಳಲ್ಲಿ ಪತ್ರಿಕೆ ಆರಂಭಿಸಿತು ಹಾಗೂ ಆ ಮೂಲಕ ನಿಜವಾಗಿಯೂ ರಾಷ್ಟ್ರೀಯ ವಾರ್ತಾ ಪತ್ರಿಕೆ ಯಾಯಿತು. ಎರಡೂ ಪತ್ರಿಕೆಗಳು ಹಲವು ಆವೃತ್ತಿಗಳನ್ನು ಹೊಂದಿರುವುದರಿಂದ ನಾನು ಜುಲೈ 1ರಿಂದ 10ರವರೆಗೆ ದಿಲ್ಲಿ ಆವೃತ್ತಿಗಳನ್ನು ಖರೀದಿಸಿದೆ.
ನಾನು ಕಂಡುಕೊಂಡ ಅಂಶಗಳು ಈ ಕೆಳಗಿನಂತಿವೆ:
ನನ್ನ ಅಧ್ಯಯನದ ಅವಧಿಯಲ್ಲಿ ದೈನಿಕ್ ಜಾಗರಣ್ ಮುಸ್ಲಿಂ ಸಮುದಾಯ ಕುರಿತು ಯಾವುದೇ ಸುದ್ದಿಯನ್ನು ಪ್ರಥಮ ಪುಟದಲ್ಲಿ ಪ್ರಕಟಿಸಲಿಲ್ಲ. ಸಮುದಾಯಕ್ಕೆ ಸಂಬಂಧಿಸಿದ ಸುದ್ದಿ ಒಳಗಿನ ಪುಟಗಳಲ್ಲೂ ಬಹುತೇಕ ಖಾಲಿಯಾಗಿದ್ದವು. ಸ್ವಾತಂತ್ರೋತ್ತರ ಭಾರತ ದಲ್ಲಿ ಉರ್ದುವಿನ ಹಿನ್ನಡೆಯ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿ ಹಿಂದಿ ಪತ್ರಿಕೆಗಳನ್ನು ಖರೀದಿಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಹೆಚ್ಚಿನ ಯುವ ಮುಸ್ಲಿಮರಿಗೆ ಉರ್ದು ಗೊತ್ತಿಲ್ಲದೆ ಇರುವುದರಿಂದ ಅವರು ಹಿಂದಿ ಅಥವಾ ಇಂಗ್ಲಿಷ್ ಪತ್ರಿಕೆಗಳನ್ನು ಓದುತ್ತಾರೆ.ಜುಲೈ 2, 4, 6, 8ಮತ್ತು 10ರ ಪತ್ರಿಕೆಗಳ ಮುಖಪುಟಗಳಲ್ಲಿ ಕಂಡ ಮುಸ್ಲಿಂ ಹೆಸರುಗಳೆಂದರೆ ಮುಂಬೈ ಸ್ಫೋಟದ ಕಸಬ್ ಮತ್ತು 2012ರ ಜೂನ್ ತಿಂಗಳಲ್ಲಿ ಸೌದಿ ಅರೇಬಿಯದಿಂದ ಭಾರತಕ್ಕೆ ಗಡಿಪಾರಾದ ಶಂಕಿತ ಭಯೋತ್ಪಾದಕ ಅಬು ಜುಂದಾಲ್. ಮುಖಪುಟಗಳಲ್ಲಿ ಕಂಡು ಬಂದ ಇತರ ಮುಸ್ಲಿಂ ಹೆಸರುಗಳು ಖ್ಯಾತನಾಮರದ್ದು. ಜುಲೈ 1ರ ಸಂಚಿಕೆಯ ಮುಖಪುಟದ ಬಲ ತುದಿಯಲ್ಲಿ ಎ.ಆರ್.ರಹಮಾನ್‌ರ ಚಿತ್ರ ಪ್ರಕಟಿಸಲಾಗಿತ್ತು.
ಲಂಡನ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಕಾರ್ಯಕ್ರಮ ನೀಡಲಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ಸುದ್ದಿ ಒಳಪುಟದಲ್ಲಿಗೆ ಎಂದು ಚಿತ್ರದ ಕೆಳಗೆ ಸೂಚಿಸಲಾಗಿತ್ತು. ಅದೇ ರೀತಿ ಜುಲೈ 2ರ ಸಂಚಿಕೆಯಲ್ಲಿ ಅದೇ ಸ್ಥಳದಲ್ಲಿ ನಟ ಆಮಿರ್ ಖಾನ್‌ರ ಚಿತ್ರ ಪ್ರಕಟಿಸಲಾಗಿತ್ತು ಹಾಗೂ ಮದ್ಯಪಾನ ಚಟದ ಬಗ್ಗೆ ಆಮಿರ್ ಖಾನ್ ಬರೆದ ಕಾಲಂ 10೦ನೆ ಪುಟದಲ್ಲಿದೆ ಎಂದು ಚಿತ್ರದ ಕೆಳಗೆ ಸೂಚಿಸಲಾಗಿತ್ತು.
ಜುಲೈ 4ರ ಮುಖಪುಟದಲ್ಲಿ ದಿಲೀಪ್‌ಕುಮಾರ್ (ಯೂಸುಫ್ ಖಾನ್) ಚಿತ್ರ ಹಾಕಿ ಪಾಕಿಸ್ತಾನದಲ್ಲಿರುವ ಅವರ ಪೂರ್ವಿಕರ ಮನೆಯ ಬಗ್ಗೆ ಒಳಗಿನ ಪುಟದಲ್ಲಿ ಸುದ್ದಿಯಿದೆ ಎಂದು ಸೂಚಿಸಲಾಗಿತ್ತು. ಜುಲೈ 9ರ ಮುಖಪುಟದಲ್ಲಿ ಗಾಝಿಯಾಬಾದ್‌ನಲ್ಲಿ ನಡೆದ ಕೋಮು ಹಿಂಸೆಯ ಬಗ್ಗೆ ವರದಿಯಿತ್ತು. ಅದೊಂದು ಸಮತೋಲಿತ ವರದಿಯಾಗಿದ್ದರೂ ಗಾಯಗೊಂಡಾತ ಹಿಂದೂ ಎಂದು ಸೂಚಿಸುವಂತೆ ಹೆಸರು ಮತ್ತು ಚಿತ್ರವನ್ನು ನೀಡಲಾಗಿತ್ತು. (ಗಲಭೆಯಲ್ಲಿ ನಿರತವಾಗಿರುವ ಸಮುದಾಯಗಳ ಹೆಸರುಗಳನ್ನು ಕೊಡಬಾರದೆಂಬ ಸಾಮಾನ್ಯ ವರದಿಗಾರಿಕೆಯ ನಿಯಮಗಳ ಹೊರತಾಗಿಯೂ ಉರ್ದು ಪತ್ರಿಕೆಗಳು ಮುಸ್ಲಿಂ ಸಂತ್ರಸ್ತರ ಹೆಸರುಗಳನ್ನು ಪ್ರಕಟಿಸುತ್ತವೆ.)
ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...
Click here to post your views ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...
ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...