ಅಂಕಣ

mail-img print-img

ವರದಿಗಾರಿಕೆಯಲ್ಲಿ ಹಿಂದಿ-ಉರ್ದು ವಿಭಜನೆ : ಧ್ವಂಸವೇ ಅಥವಾ ಹುತಾತ್ಮತೆಯೇ?

ಬುಧವಾರ - ಆಗಸ್ಟ್ -15-2012

ಜುಲೈ 6ರ ಮುಖಪುಟದಲ್ಲಿ ಮುಸ್ಲಿಮರ ಹೃದಯಕ್ಕೆ ಹತ್ತಿರವಾಗಿರುವ ಸುದ್ದಿಯೊಂದು ಪ್ರಕಟವಾಗಿತ್ತು. ಅದೆಂದರೆ ಬಾಬರಿ ಮಸೀದಿ. 16ನೆ ಶತಮಾನದ ಮಸೀದಿಯನ್ನು ಕೆಡವಲು ಅಂದಿನ ಪ್ರಧಾನಿ ನರಸಿಂಹ ರಾವ್ ಪಿತೂರಿ ನಡೆಸಿದ್ದರು ಎಂದು ಪತ್ರಕರ್ತ ಕುಲದೀಪ್ ನಾಯರ್ ತನ್ನ ಪುಸ್ತಕದಲ್ಲಿ ಹೇಳಿರುವುದನ್ನು ಮುಖಪುಟದಲ್ಲಿ ಪ್ರಮುಖವಾಗಿ ಪ್ರಕಟಿಸಲಾಗಿತ್ತು. ಆ ಸುದ್ದಿಯನ್ನು ಬರೆದ ವ್ಯಕ್ತಿ ಎಲ್ಲಿಯೂ ‘ಬಾಬರಿ’ ಎಂಬ ಪದ ಬಳಸದಂತೆ ಎಚ್ಚರವಹಿಸಿದ್ದ. ಬದಲಿಗೆ, ಆ ವ್ಯಕ್ತಿ ಅದನ್ನು ‘ವಿವಾದಾತ್ಮಕ ಕಟ್ಟಡ’ ಎಂಬುದಾಗಿ ಬರೆದಿದ್ದ. ಈ ಸುದ್ದಿಯನ್ನು ‘ಇಂಕಿಲಾಬ್’ ಮುಖಪುಟದ ಪ್ರಮುಖ ಸುದ್ದಿಯಾಗಿ ಪ್ರಕಟಿಸಿತು. ಇತರ ಎಲ್ಲ ಉರ್ದು ಪತ್ರಿಕೆಗಳಂತೆ ‘ಇಂಕಿಲಾಬ್’ ಕೂಡ ಬಾಬರಿ ಮಸೀದಿ ಧ್ವಂಸವನ್ನು ‘ಹುತಾತ್ಮತೆ’ ಎಂಬುದಾಗಿ ವ್ಯಾಖ್ಯಾನಿಸುತ್ತದೆ.

ಜಾಗರಣದ ಒಳಪುಟಗಳಲ್ಲಿರುವ ಕೆಲವು ಸುದ್ದಿಗಳು ನಕಾರಾತ್ಮಕವಾಗಿವೆ. ಶಂಕಿತ ಭಯೋತ್ಪಾದಕರು ಅಥವಾ ಕಾಶ್ಮೀರಿ ಪ್ರತ್ಯೇಕತಾವಾದಿಗಳ ಬಗ್ಗೆ ಈ ಪುಟಗಳಲ್ಲಿ ಸುದ್ದಿ ಬರುತ್ತವೆ. ಒಂದು ಸುದ್ದಿಯು ಡೆಹ್ರಾಡೂನ್‌ನ ಮುಸ್ಲಿಂ ಕ್ರಿಮಿನಲ್ ಒಬ್ಬನ ಬಂಧನಕ್ಕೆ ಸಂಬಂಧಿಸಿದೆ (ಜುಲೈ 9, ಪುಟ 5). ಇನ್ನೊಂದು ಸುದ್ದಿ ನಟ ಸಲ್ಮಾನ್ ಖಾನ್ ಸಹೋದರನ ಅಜಾಗರೂಕ ಚಾಲನೆ ಬಗ್ಗೆ ಇತ್ತು. ಈ ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.

10 ದಿನಗಳಲ್ಲಿ ಜಾಗರಣ್ ತನ್ನ ಒಳ ಪುಟಗಳಲ್ಲಿ ಮುಸ್ಲಿಮರಿಗೆ ಸಂಬಂಧಿಸಿದ ಎಂದು ಹೇಳಬಹುದಾದ ಒಟ್ಟು ಒಂಬತ್ತು ಸುದ್ದಿಗಳನ್ನು ಪ್ರಕಟಿಸಿತ್ತು. ಜುಲೈ 2ರ ಸಂಚಿಕೆ: ದಿಲ್ಲಿಯ ಫತೇಪುರ್ ಮಸೀದಿಯಲ್ಲಿ ಎಎಸ್‌ಐಯಿಂದ ದುರಸ್ತಿ ಕಾರ್ಯ ಆರಂಭ (ಪುಟ 2); ಬೆಂಕಿ ಅಪಘಾತಕ್ಕೀಡಾದ ಝಿಯರತ್‌ಗಾ ನವೀಕರಣಕ್ಕೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಭರವಸೆ (ಪುಟ 7); ಪಾಕಿಸ್ತಾನದಲ್ಲಿರುವ ದಿಲೀಪ್ ಕುಮಾರ್ ಮನೆಯನ್ನು ಗ್ರಂಥಾಲಯವಾಗಿ ಪರಿವರ್ತಿಸುವುದಿಲ್ಲ (ಪುಟ 10). ಜುಲೈ 4: ಇಸ್ರೇಲ್ ರಾಯಭಾರ ಕಚೇರಿ ಕಾರ್‌ಬಾಂಬ್ ಸ್ಫೋಟದ ಆರೋಪಿ ಪತ್ರಕರ್ತ ಕಝ್ಮಿಯ ನ್ಯಾಯಾಂಗ ಕಲಾಪ ಕುರಿತ ವರದಿ (ಪುಟ 2); 2002ರ ಗಲಭೆಯಲ್ಲಿ ಹಾನಿಗೀಡಾದ ಧಾರ್ಮಿಕ ಸ್ಥಳಗಳ ವಿವರಗಳನ್ನು ಸಲ್ಲಿಸುವಂತೆ ಗುಜರಾತ್ ಸರಕಾರಕ್ಕೆ ನ್ಯಾಯಾಲಯವೊಂದು ಸೂಚಿಸಿರುವುದಕ್ಕೆ ಸಂಬಂಧಿಸಿದ ವರದಿ (ಪುಟ 10). ಜುಲೈ 7: ಪತ್ರಕರ್ತ ಕಝ್ಮಿಯ ಕುರಿತ ಮತ್ತಷ್ಟು ವಿವರ (ಪುಟ 9). ಜುಲೈ 8: ಶಬೇ ಬರಾಅತೇ ಸಂಭ್ರಮವನ್ನು ಮುಸ್ಲಿಂ ಧರ್ಮಗುರುಗಳು ಖಂಡಿಸುವ ಸುದ್ದಿ (ಜಾಗರಣ್ ಸಿಟಿ 5). ಜುಲೈ 9: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸೈಕಲ್‌ಗಳು (ಪುಟ 7).

ಜುಲೈ 4ರ ಸಂಚಿಕೆಯಲ್ಲಿ 9ನೆ ಪುಟದಲ್ಲಿ ಒಂದು ಸುದ್ದಿಯಿದೆ. ಅದು ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗೀಲಾನಿ ಕಣಿವೆಯಲ್ಲಿನ ಭಯೋತ್ಪಾದನೆಗೆ ಭಾರತೀಯ ಭದ್ರತಾ ಸಂಸ್ಥೆಗಳನ್ನು ಹೊಣೆಯಾಗಿಸಿದ್ದಕ್ಕೆ ಸಂಬಂಧಿಸಿದ್ದು. ಭಾರತ ಪ್ರವಾಸದಲ್ಲಿದ್ದ ಪಾಕಿಸ್ತಾನಿ ವಿದೇಶ ಕಾರ್ಯದರ್ಶಿಯನ್ನು ಹೊಸದಿಲ್ಲಿಯಲ್ಲಿ ಭೇಟಿಯಾದ ಬಳಿಕ ಅವರು ಈ ಹೇಳಿಕೆ ನೀಡಿದ್ದರು. ಹೇಳಿಕೆ ಪ್ರಚೋದನಕಾರಿಯಾಗಿತ್ತು ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಒಂದು ಸುದ್ದಿಯನ್ನು ಸಂಪಾದಕೀಯದಂತೆ ಬರೆಯುವುದು ಒಬ್ಬ ವರದಿಗಾರನ ಅಥವಾ ಉಪಸಂಪಾದಕನ ಕೆಲಸವಲ್ಲ. ಅದರ ಶೀರ್ಷಿಕೆ ಹೀಗಿದೆ: ‘ಪಾಕ್ ಕಿ ಶಾ ಪರ್ ಗೀಲಾನಿ ನೆ ಫಿರ್ ಉಗ್ಲಾ ಝಹಾರ್ (ಪಾಕಿಸ್ತಾನದ ಪ್ರಚೋದನೆಯೊಂದಿಗೆ ಮತ್ತೆ ವಿಷ ಕಾರಿದ ಗೀಲಾನಿ)’. 10 ದಿನಗಳಲ್ಲಿ ಕಾಶ್ಮೀರದ ಬಗ್ಗೆ ಇತರ ಮೂರು ಸುದ್ದಿಗಳಿದ್ದವು.

ಅಬು ಜುಂದಾಲ್‌ನ ಸುದ್ದಿ ಪತ್ರಿಕೆಯಲ್ಲಿ ಪ್ರತಿದಿನವೆಂಬಂತೆ ಇತ್ತು. ಆದರೆ, ಯಾವುದೂ ಜಾಗರಣ್‌ನ ವಿಶೇಷ ಸುದ್ದಿಯಲ್ಲ. ಎಲ್ಲವೂ ಭದ್ರತಾ ಸಂಸ್ಥೆಗಳಲ್ಲಿರುವ ಗುರುತಿಸಲ್ಪಡದ ಮೂಲಗಳು ಪೂರೈಸಿದ ಮಾಹಿತಿ ಆಧಾರಿತ. ಸೌದಿ ಮತ್ತು ಭಾರತೀಯ ಅಧಿಕಾರಿಗಳು ಮೇ 13ರಂದು ಸೌದಿ ನಗರ ಅಲ್-ಜುಬೈಲ್‌ನ ಮನೆಯಿಂದ ತಮ್ಮ ವಶಕ್ಕೆ ತೆಗೆದುಕೊಂಡ ಯುವ ಎಂಜಿನಿಯರ್ ಫಾಸೀಹ್ ಮಹ್ಮೂದ್ ಕುರಿತ ಸುದ್ದಿಯಲ್ಲೂ ಇದೇ ಕತೆ. ಇಂದಿನವರೆಗೆ ಆತ ಎಲ್ಲಿದ್ದಾನೆ ಎಂಬ ಬಗ್ಗೆ ಮಾಹಿತಿಯಿಲ್ಲ. ಒಂದು ತಿಂಗಳಿಗೂ ಅಧಿಕ ಕಾಲ ನಿರಾಕರಿಸುತ್ತಾ ಬಂದ ಭಾರತ ಸರಕಾರ ಆತನನ್ನು ಬಂಧಿಸಿರುವುದಾಗಿ ಒಲ್ಲದ ಮನಸ್ಸಿನಿಂದ ಸುಪ್ರೀಂ ಕೋರ್ಟ್‌ನಲ್ಲಿ ತಿಳಿಸಿತು. ಕೆಲವು ಭಯೋತ್ಪಾದನೆ ಸಂಚಿನ ಪ್ರಕರಣಗಳಲ್ಲಿ ಆತ ಆರೋಪಿಯಾಗಿದ್ದಾನೆ. ಆದರೆ, ಆತ ಒರ್ವ ಭಯೋತ್ಪಾದಕ ಎಂದು ನೇರವಾಗಿ ಘೋಷಿಸುವ ಮೂಲಕ ಜಾಗರಣ್ ತನ್ನ ತೀರ್ಪು ಪ್ರಕಟಿಸಿತು. ‘‘ಫಶೀಶ್ ಇಂಡಿಯನ್ ಮುಜಾಹಿದೀನ್‌ನ ಭಯೋತ್ಪಾದಕ ಹಾಗೂ ಇಂಡಿಯನ್ ಮುಜಾಹಿದೀನ್‌ನ ಬಿಹಾರ ಯೋಜನೆಯ ಮುಖ್ಯ ಹಣಕಾಸು ಪೂರೈಕೆದಾರನಾಗಿದ್ದಾನೆ’’ ಎಂದು ಜುಲೈ 2, 3 ಮತ್ತು 10ರ ಸಂಚಿಕೆಗಳಲ್ಲಿ ಸರಕಾರ ಮತ್ತು ಭದ್ರತಾ ಸಂಸ್ಥೆಗಳಲ್ಲಿರುವ ಹೆಸರು ಹೇಳದ ಸರಕಾರಿ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿತು. ಈ ಎಲ್ಲ ವರದಿಗಳಲ್ಲಿ ವಸ್ತನಿಷ್ಠತೆ ಇಲ್ಲ.

ಸಂಪಾದಕೀಯ ಪುಟದಲ್ಲಿ 10 ದಿನಗಳಲ್ಲಿ ಒಮ್ಮೆ ಮುಸ್ಲಿಮರಿಗೆ ಸಂಬಂಧಿಸಿದ ಲೇಖನವಿತ್ತು. ಸರಕಾರಿ ಹುದ್ದೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಕಾನೂನು ಆಯಾಮಗಳಿಗೆ ಅದು ಸಂಬಂಧಿಸಿದ್ದಾಗಿತ್ತು. ಜುಲೈ 3ರ ಸಂಚಿಕೆಯಲ್ಲಿ ಸಂಪಾದಕೀಯ ಪುಟದ ಪ್ರಮುಖ ಲೇಖನವನ್ನು ರಾಜ್ಯಸಭಾ ಸದಸ್ಯ ಬಲಬೀರ್ ಪುಂಜ್ ಬರೆದಿದ್ದರು. ‘‘ಪಾಕಿಸ್ತಾನದಿಂದ ಉದ್ಭವಿಸುತ್ತಿರುವ ಇಸ್ಲಾಮಿಕ್ ಭಯೋತ್ಪಾದನೆಯ ಬೆದರಿಕೆಯನ್ನು ಕಡೆಗಣಿಸಿದ ಬಲಪಂಥೀಯ ಹಿಂದೂ ಭಯೋತ್ಪಾದನೆ ಕುರಿತು ಹುಯಿಲೆಬ್ಬಿಸುತ್ತಿರವುದಕ್ಕಾಗಿ’’ ಅವರು ಜಾತ್ಯತೀತವಾದಿಗಳನ್ನು ತನ್ನ ಲೇಖನದಲ್ಲಿ ಟೀಕಿಸಿದ್ದರು.
ಇಂಕಿಲಾಬ್ ಮಾದರಿ
ಫಸೀಹ್ ಮಹ್ಮೂದ್ ಮತ್ತು ಇತರ ಮುಸ್ಲಿಮರ ಬಂಧನದ ಸುದ್ದಿಗಳು ಜುಲೈ 1ರಿಂದ 10ರವರೆಗೆ ‘ಇಂಕಿಲಾಬ್’ನಲ್ಲಿ ಪ್ರಮುಖವಾಗಿ ಪ್ರಕಟವಾದವು. ಜುಲೈ 2ರ ಮುಖಪುಟದ ಒಂದು ಶೀರ್ಷಿಕೆ ಹೀಗಿದೆ: ‘‘ಓ ನನ್ನ ಮಗನೆ, ನನಗೆ ಹೇಳು, ಭಾರತದಲ್ಲಿ ಮುಸ್ಲಿಮನಾಗಿರುವುದು ತಪ್ಪೇ?’’ ಪಾಟ್ನಾ ಸ್ಥಳನಾಮ ಹೊಂದಿರುವ ಸುದ್ದಿಯ ಮುಖ್ಯಾಂಶ ಹೀಗಿದೆ: ‘‘ಓ ಮಗನೆ, ನೀನೊಬ್ಬ ಪತ್ರಕರ್ತ. ನೀನು ನನ್ನ ಮಗನ ಬಂಧನದ ಬಗ್ಗೆ ತನಿಖೆ ನಡೆಸಲು ಹಾಗೂ ನನ್ನ ಬಗ್ಗೆ ತಿಳಿಯಲು ದಿಲ್ಲಿಯಿಂದ ಬಂದಿರುವೆ. ನಾನು ನಿನಗೆ ಎಲ್ಲವನ್ನೂ ಹೇಳುತ್ತೇನೆ. ಆದರೆ, ಮೊದಲು ನೀನು ನನ್ನ ಒಂದು ಪ್ರಶ್ನೆಗೆ ಉತ್ತರ ಕೊಡು: ‘ಭಾರತದಲ್ಲಿ ಮುಸ್ಲಿಮನಾಗಿ ಹುಟ್ಟುವುದು ಅಪರಾಧವೇ? ಭಾರತೀಯ ಮಣ್ಣು ಮುಸ್ಲಿಮರಿಗೆ ಪರಕೀಯವಾಗಿದೆಯೇ?’’

ಈ ಹೇಳಿಕೆಗಳನ್ನು ಪ್ರೇಮ್ ಚಂದ್, ಕುರಾತುಲೈನ್ ಹೈದರ್, ಅಸ್ಮತ್ ಚುಗ್‌ತಾಯ್ ಅಥವಾ ಮಾಂಟೆ ಅವರ ಸಣ್ಣ ಕತೆಯಿಂದ ಸಂಗ್ರಹಿಸಲಾಗಿಲ್ಲ. ವಾಸ್ತವವಾಗಿ, ಈ ಮಾತನ್ನು ಕಣ್ಣೀರೊರೆಸುತ್ತಾ ಹೇಳಿದವರು ಎಂಜಿನಿಯರ ಫಸೀಹ್ ಮಹ್ಮೂದ್‌ರ ತಾಯಿ ಆಮಿರಾ ಜಮಾಲಿ, ಎಂ.ಎ; ಬಿ.ಎಡ್.

ಈ ಸುದ್ದಿ ಮೂರು ದಿನಗಳ ಕಾಲ ಮುಖಪುಟದ ಪ್ರಧಾನ ಸುದ್ದಿಯಾಯಿತು: ಮುಸ್ಲಿಂ ಯುವಕರ ಬಂಧನ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯುವಂತೆ ಮಾಡಲು ಪ್ರಯತ್ನಗಳು ಜಾರಿಯಲ್ಲಿ- ಜುಲೈ 1; ಮುಸ್ಲಿಮ್ ಯುವಕರ ಬಂಧನದ ವಿರುದ್ಧದ ಬಿಹಾರದಲ್ಲಿ ಪ್ರತಿಭಟನೆಗೆ ಸಿದ್ಧತೆ- ಜುಲೈ 4; ಬಿಹಾರ ಶಿಕ್ಷಕ ಕಫೀಲ್ ಅಖ್ತರ್‌ಗೆ ಬೆಂಗಳೂರು ಪೊಲೀಸರಿಂದ ಕ್ಲೀನ್‌ಚಿಟ್, ಈಗ ದಿಲ್ಲಿ ಪೊಲೀಸರಿಗೆ ಹಸ್ತಾಂತರ- ಜುಲೈ 8. ಇತರ ದಿನಗಳ ಮೊದಲ ಪುಟದ ಪ್ರಮುಖ ಸುದ್ದಿಗಳೂ ಉಲ್ಲೇಖನೀಯ: ನರಸಿಂಹ ರಾವ್ ಬಾಬರಿ ಧ್ವಂಸ ಪಿತೂರಿಯ ಭಾಗ- ಜುಲೈ 6; ಅಶ್ತಾನ್ ಗ್ರಾಮದ (ಉತ್ತರಪ್ರದೇಶದ ಗಲಭೆಪೀಡಿತ ಪ್ರತಾಪ್‌ಗಢ ಜಿಲ್ಲೆಯ) ಭಯಭೀತ ಮುಸ್ಲಿಮರು ಮನೆಗೆ ವಾಪಸ್- ಜುಲೈ 7; ಧ್ವಂಸಗೊಂಡ ಪೂಜಾ ಸ್ಥಳಗಳ ವಿವರ ನೀಡಲು ಗುಜರಾತ್ ಸರಕಾರಕ್ಕೆ ಸೂಚನೆ- ಜುಲೈ 10. ರಾಷ್ಟ್ರಪತಿ ಚುನಾವಣೆ ಮತ್ತು ಮನಮೋಹನ್ ಬಗ್ಗೆ ‘ಟೈಮ್’ ಮ್ಯಾಗಝಿನ್‌ನ ಮುಖಪುಟ ಕುರಿತ ಸುದ್ದಿಗಳು ಇತರ ದಿನಗಳ ಪ್ರಮುಖ ಸುದ್ದಿಗಳಾಗಿದ್ದವು.

ಜುಲೈ 2ರಂದು 6ನೆ ಪುಟದಲ್ಲಿ ಸಣ್ಣ ಸುದ್ದಿಯೊಂದಿತ್ತು. ಸಾಮಾನ್ಯ ಪರಿಸ್ಥಿತಿಯಲ್ಲಾದರೆ ಅದೊಂದು ಮಾನವಾಸಕ್ತಿ ಸುದ್ದಿಯಾಗಬಹುದಿತ್ತು. ಆದರೆ, ಭಾರತದಲ್ಲಿ ನೆಲೆಸಿರುವ ಪ್ರಸಕ್ತ ಭದ್ರತಾ ಮತ್ತು ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅದು ಮಾನವ ದುರಂತದ ಕತೆಯನ್ನು ಹೇಳುತ್ತದೆ. ಎಂಬ್ರಾಯ್ಡರಿ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಗಡ್ಡಧಾರಿ ಮುಸ್ಲಿಂ ಯುವಕನೊಬ್ಬನನ್ನು ರಾಂಚಿ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಿಂದ ಬಂಧಿಸಲಾಯಿತು. ಕಾರಣ: ಆತ ಈ ಹಿಂದೆ ವಿಮಾನ ನಿಲ್ದಾಣವನ್ನು ನೋಡಿರಲಿಲ್ಲ. ಹಾಗಾಗಿ, ವಿಮಾನ ನಿಲ್ದಾಣವನ್ನು ಒಮ್ಮೆ ನೋಡುವುದಕ್ಕಾಗಿ ಮುಂಜಾನೆ ಮಸೀದಿಯಿಂದ ಹಿಂದಿರುಗುವಾಗ ಆತ ತನ್ನ ಬೈಕನ್ನು ವಿಮಾನ ನಿಲ್ದಾಣದತ್ತ ತಿರುಗಿಸಿದ.

ಆದಾಗ್ಯೂ, ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಹತ್ವದ ಸುದ್ದಿ ಇಂಕಿಲಾಬ್‌ನಲ್ಲಿ ಪ್ರಕಟವಾಗುವುದಿಲ್ಲ ಎಂದಲ್ಲ. ಅಬು ಜುಂದಾಲ್, ಭಾರತ-ಪಾಕ್ ಕಾರ್ಯದರ್ಶಿ ಮಟ್ಟದ ಮಾತುಕತೆ, ರಾಷ್ಟ್ರಪತಿ ಚುನಾವಣೆ, ಕರ್ನಾಟಕ ಸರಕಾರದಲ್ಲಿ ಬದಲಾವಣೆ, ಈಜಿಪ್ಟ್ ಚುನಾವಣೆ- ಇವೆಲ್ಲವೂ ಅಧ್ಯಯನದ ಅವಧಿಯಲ್ಲಿ ಮುಖಪುಟದ ಸುದ್ದಿಗಳಾಗಿದ್ದವು. ವಾಸ್ತವವಾಗಿ, ಅಂತಾರಾಷ್ಟ್ರೀಯ ಸುದ್ದಿ ವರದಿಗಾರಿಕೆ ಹಲವು ರಾಷ್ಟ್ರೀಯ ಇಂಗ್ಲಿಷ್ ಪತ್ರಿಕೆಗಳಿಗಿಂತ ಚೆನ್ನಾಗಿತ್ತು.ತೀರ್ಪಿಲ್ಲ‘ಜಾಗರಣ್’ ಮತ್ತು ‘ಇಂಕಿಲಾಬ್’ ಪತ್ರಿಕೆಗಳಲ್ಲಿ ಕಂಡು ಬಂದ ಒಂದು ಸಮಾನ ಅಂಶವೆಂದರೆ ವೃತ್ತಿಪರತೆ ಹಾಗೂ ವಸ್ತುನಿಷ್ಠತೆ ಕೊರತೆ. ಇದಕ್ಕಿಂತ ಹೆಚ್ಚಿಗೆ ನಾನು ಏನೂ ಹೇಳುವುದಿಲ್ಲ. ತೀರ್ಮಾನವನ್ನು ಸಂಪಾದಕರು, ವಿದ್ವಾಂಸರು ಮತ್ತು ಚಿಂತಕರಿಗೆ ಬಿಡುತ್ತೇನೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...


ನಿಮ್ಮ ಅನಿಸಿಕೆ

postClick here to post your views
EPAPER
access

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್

ರಾಜಕೀಯ ಪಕ್ಷಗಳ ಆತ್ಮವಿಮರ್ಶೆ ಅಗತ್ಯ

ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...


- ನಾ ದಿವಾಕರ್