ಅಂಕಣ

mail-img print-img

‘ಬರಹ’ ಎಂಬ ಲೋಕದಲ್ಲಿಯ ‘ವಿಸ್ಮಯ’ಗಳು (ಭಾಗ-2)

ಶನಿವಾರ - ಆಗಸ್ಟ್ -18-2012

ದಿವ್ಯ ನಾರಾಯಣಪ್ಪ ಅವರು ಅತ್ಯಂತ ಸೂಕ್ಷ್ಮ ಸಂವೇದನೆಯ ಅಧಿಕಾರಿಯಾಗಿದ್ದರಿಂದ ಎಲ್ಲಾ ಸ್ವತಂತ್ರವನ್ನು ನನಗೆ ಬಿಟ್ಟುಕೊಟ್ಟರು. ಎಲೆಮರೆ ಕಾಯಿಯಂತೆ ಅಥವಾ ಪುಷ್ಪದಂತೆ ಅವರು ಹಿಂದಿದ್ದು ಅಚ್ಚುಕಟ್ಟಾಗಿ ವ್ಯವಸ್ಥೆ ರೂಪಿಸಿದರು. ಅವರಿಗೆ ಪ್ರೋತ್ಸಾಹದಾಯಕವಾಗಿ ಕರ್ನಾಟಕದ ಮಕ್ಕಳ ಕಲ್ಯಾಣ ಇಲಾಖೆಯ ಬಾಲಭವನದ ಅಧ್ಯಕ್ಷರಾದ ಸುಲೋಚನಾ.ಜಿ.ಕೆ.ಭಟ್ ಅವರು ನಗುನಗುತಾ ಬೆಂಬಲವಾಗಿ ನಿಂತರು. ಉದ್ಘಾಟನೆಯಿಂದ ಸಮಾರೋಪದವರೆಗೂ ನಮ್ಮಾಂದಿಗಿದ್ದು ಮಕ್ಕಳು ಸಂಭ್ರಮಿಸುವುದನ್ನು ಕಂಡು ಸಂತೋಷಪಟ್ಟರು.ಇದಕ್ಕೆ ನಾವು ಚಂದ್ರಶೇಖರ ಕಂಬಾರ, ಸಂಧ್ಯಾರೆಡ್ಡಿ, ಎಲ್.ಎನ್. ಮುಕುಂದರಾಜ್, ನಾಗರಾಜ ಶೆಟ್ಟಿ, ಸಿ.ಎಂ.ಗೋವಿಂದ ರೆಡ್ಡಿ, ಮುಖ್ಯಮಂತ್ರಿ ಚಂದ್ರು, ಡುಂಡಿರಾಜ್, ಬಿ.ಆರ್.ಲಕ್ಷಣ ರಾವ್, ಟಿ.ಆರ್. ಅನಂತರಾಮ್, ಮತ್ತು ಜಯರಾಮ ಅಡಿಗ, ಅಂಥವರನ್ನ್ನೆಲ್ಲ ತೊಡಗಿಸಿಕೊಂಡೆವು. ಎಲ್ಲರೂ ಶಿಶು ಸಾಹಿತ್ಯದ ಶ್ರೀಮಂತಿಕೆಯನ್ನು ಕುರಿತಂತೆ, ನಮ್ಮ ಕಾವ್ಯ ಹಾಗೂ ಸಾಹಿತ್ಯ ಸಂದರ್ಭದಲ್ಲಿ ಆಗಿರುವ ಸೂಕ್ಷ್ಮತೆಗಳನ್ನು ಮತ್ತು ಒಳನೋಟಗಳನ್ನು ಮಕ್ಕಳ ಮುಂದೆ ಇಟ್ಟಾಗ ಪುಳಕಿತರಾಗಿದ್ದರು.

ಎಲ್ಲ ಮಕ್ಕಳು ಎಂಟು ಮತ್ತು ಹದಿನೈದು ವರ್ಷದೊಳಗಿನ ವಯೋಮಾನದವರು. ಒಬ್ಬೊಬ್ಬರ ಮಾತಿಗೂ ಮಕ್ಕಳು ಎಷ್ಟು ಚೆನ್ನಾಗಿ ಸ್ಪಂದಿಸುತ್ತಿದ್ದರು. ಅದರಲ್ಲೂ ಬಾಲಭವನದ ಸುತ್ತಲಿನ ವಾತಾವರಣ ಎಷ್ಟು ಚೆನ್ನಾಗಿದೆ, ನಾನು ಇತ್ತೀಚಿನ ವರ್ಷಗಳಲ್ಲಿ ಆ ಕಡೆ ಹೋಗಿರಲಿಲ್ಲ. ಒಂದು ಕಾಲದಲ್ಲಿ ವಾರಕ್ಕೆರಡು ಬಾರಿ ಬಾಲಭವನದಲ್ಲಿ ನಡೆಯುವ ಚಲನಚಿತ್ರಗಳನ್ನು ವೀಕ್ಷಿಸಲು ಹೋಗುತ್ತಿದ್ದೆ. ಜಗತ್ತಿನ ಕೆಲವು ಶ್ರೇಷ್ಠ ಚಿತ್ರಗಳನ್ನು ಅಲ್ಲಿ ವೀಕ್ಷಿಸಲು ಸಾಧ್ಯವಾಯಿತು. ಆಗ ಸುಚಿತ್ರ ಫಿಲಂ ಸೊಸೈಟಿ ಹುಟ್ಟಿರಲಿಲ್ಲ. ‘ಮಯೂರ’ ಮತ್ತು ಬೆಂಗಳೂರು ಫಿಲಂ ಸೊಸೈಟಿ ತುಂಬ ಆಕ್ಟೀವ್ ಆಗಿದ್ದ ಕಾಲಘಟ್ಟವದು. ಹಾಗೆಯೇ ಬಾಲಭವನದ ಅಧಿಕಾರಿಯಾಗಿ ರಂಗಭೂಮಿ ತಜ್ಞ ಎನ್.ಎಸ್.ವೆಂಕಟರಾಂ ಅವರು ಅಲ್ಲಿದ್ದರು. ಅವರು ಬಾದಲ್ ಸರ್ಕಾರ್ ಅವರ ‘ಏವಂ ಇಂದ್ರಜಿತ್’ ಮತ್ತು ‘ಬಾಕಿ ಇತಿಹಾಸ್’ ರೀತಿಯ ಉತ್ತಮ ನಾಟಕಗಳನ್ನು ಬೆಂಗಾಲಿಯಿಂದ ಕನ್ನಡಕ್ಕೆ ತಂದು ಕೊಟ್ಟವರು. ಇದರ ಮೂಲಕ ಬಾದಲ್ ಸರ್ಕಾರ್ ಅವರು ಕರ್ನಾಟಕಕ್ಕೆ ಸುಪರಿಚಿತರಾದರು. ಅಷ್ಟೇ ಅಲ್ಲ; ಒಂದೆರಡು ದಶಕಗಳು ಬೀದಿನಾಟಕ ಪರಂಪರೆ ಉತ್ತುಂಗ ಪ್ರಮಾಣದಲ್ಲಿ ಬೆಳೆದು ನಿಲ್ಲಲು ಸಹಕಾರಿಯಾಯಿತು. ಇದನ್ನು ಯಾಕೆ ಪ್ರಸ್ತಾಪಿಸುತ್ತಿದ್ದೇನೆಂದರೆ: ಪ್ರತಿಯೊಂದು ಸಂಸ್ಥೆಯಲ್ಲೂ ದೂರ ದೃಷ್ಟಿಯುಳ್ಳ ಅಧಿಕಾರಿಗಳು ಬಂದು ಹೋಗಿದ್ದರೆ ಅಥವಾ ಇದ್ದರೆ; ಅಂತಹ ಸಂಸ್ಥೆಗಳು ಚಾರಿತ್ರಿಕ ನೆನಪುಗಳನ್ನು ಮುಂದಿನ ಪೀಳಿಗೆಯವರಿಗೆ ಬಿಟ್ಟು ಹೋಗುತ್ತವೆ.
  ಈ ಮಕ್ಕಳ ಬರೆಯುವ ಶಿಬಿರದಿಂದ ಬಾಲಭವನದ ಸುತ್ತಲಿನ ಪರಿಸರ ಪರಿಚಯವಾಯಿತು. ಒಬ್ಬ ರಂಗಭೂಮಿ ನಿರ್ದೇಶಕ ಇಲ್ಲಿಯ ವೇದಿಕೆಗಳನ್ನು ಎಷ್ಟು ಚೆನ್ನಾಗಿ ಪರಿಚಯ ಮಾಡಿಕೊಳ್ಳಬಹುದು, ಇದೆಲ್ಲ ಇತ್ತೀಚಿನ ವರ್ಷಗಳಲ್ಲಿ ರೂಪುಗೊಂಡಿರುವಂಥದ್ದು. ಇಂಥ ಅದ್ಭುತ ವಾತಾವರಣದಲ್ಲಿ ಬೇಂದ್ರೆಯವರನ್ನು ನೆನಪಿಗೆ ತರುವಂತೆ ‘ಪಾತರಗಿತ್ತಿ ಪಕ್ಕ ನೋಡಿದೇನೇ ಅಕ್ಕ’ ಎಂದು ಹೇಗೆ ಹೇಗೆ ಕುಪ್ಪಳಿಸಿದರು, ಇದೆಲ್ಲದಕ್ಕಿಂತ ಮಿಗಿಲಾಗಿ; ಉತ್ತರ ಕರ್ನಾಟಕ ಮತ್ತು ದಕ್ಷಿಣ ಕನ್ನಡದ ವಿದ್ಯಾರ್ಥಿಗಳು ಎಂಥ ಶುದ್ಧವಾದ ಕನ್ನಡವನ್ನು ಬರೆಯುತ್ತಿದ್ದರು. ಇದಕ್ಕೆ ಪೂರಕವಾಗಿ ಬೊಳುವಾರು ಮಹಮ್ಮದ್ ಕುಂಞಿ ಅವರು ಸಂಪಾದಿಸಿರುವ ಪ್ರಾತಿನಿಧಿಕ ಶಿಶುಗೀತೆಗಳ ಸಂಗ್ರಹ ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಸಂಕಲನವನ್ನು ಎಲ್ಲಾ ಮಕ್ಕಳಿಗೂ ಒಂದೊಂದು ಪ್ರತಿ ಕೊಡಲು ವ್ಯವಸ್ಥೆ ಮಾಡಿದೆವು. ಅಲ್ಲಿಯ ಕವನಗಳನ್ನು ಗಟ್ಟಿಯಾಗಿ ಹಾಗೂ ಮನಸ್ಸಿನಲ್ಲಿಯೇ ಓದಿಕೊಂಡು ಆನಂದಪಟ್ಟವರು ಆ ಕವನಗಳ ರೀತಿಯಲ್ಲಿಯೇ ಬರೆದು ತೋರಿಸುತ್ತಿದ್ದವು. ಅದಕ್ಕೆ ಪ್ರೇರಕವಾಗಿ ಇತ್ತೀಚಿಗೆ ನಮ್ಮಲ್ಲಿ ಶಿಶು ಕಾವ್ಯವನ್ನು ಚೆನ್ನಾಗಿ ಬರೆಯುತ್ತಿರುವ ಪ್ರೊ.ನಾಗರಾಜ್ ಶೆಟ್ಟಿ ಹಾಗೂ ಸಿ.ಎಂ.ಗೋವಿಂದ ರೆಡ್ಡಿಯವರು ಮಕ್ಕಳಿಗೆ ಮನ ಮುಟ್ಟುವಂತೆ ತಮ್ಮ ಹಾಗೂ ಬೇರೆಯವರ ಪ್ರಾತಿನಿಧಿಕ ಕವಿತೆಗಳನ್ನು ಓದಿ ಹೇಳಿದರು. ಇದರ ಜೊತೆಗೆ ಕವಿಗಳಾದ ಪ್ರೊ. ಎಲ್. ಎನ್. ಮುಕುಂದರಾಜ್ ಅವರು ಪಂಪಭಾರತದ ಬಗ್ಗೆ ಎಷ್ಟು ಚೆನ್ನಾಗಿ ವಿವರಿಸಿದ್ದರು. ಅದಕ್ಕಿಂತ ಮಿಗಿಲಾಗಿ ಆ ಹಳೆಗನ್ನಡ ಕಾವ್ಯದ ಭಾಗಗಳನ್ನು ಮಕ್ಕಳಿಗೆ ತಲುಪುವಂತೆ ಹೇಳಿದ್ದರು. ಅವರು ಮಾತಾಡುತ್ತಿದ್ದರೆ; ನನ್ನಂಥವರ ಗುರುಗಳಾದ ಕಿ. ರಂ. ನಾಗರಾಜ್ ಅವರು ಮುಂದೆ ನಿಂತು ಮಾತಾಡುತ್ತಿದ್ದಾರೆ ಅನ್ನಿಸಿತ್ತು. ಮುಕುಂದರಾಜ್ ಅವರಿಗೆ ಬೆಂಬಲವಾಗಿ ಪ್ರೊ. ಬೈರಮಂಗಲ ರಾಮೇಗೌಡ ಅವರು ಮಾರ್ಮಿಕವಾಗಿ ಮಾತಾಡಿದ್ದರು. ನಾನು ಪ್ರಾರಂಭದಲ್ಲಿಯೇ ನನಗೆ ಪ್ರಾಥಮಿಕ ಶಾಲೆಯಲ್ಲಿ ‘ನನ್ನ ಮೇಸ್ಟ್ರು ಹೇಳಿದ ಕಥೆಗಳು ಎಂದು; ತೆನಾಲಿ ರಾಮಕೃಷ್ಣನ, ಬೀರಬಲ್ಲನ, ಪಂಚತಂತ್ರದ ಹಾಗೂ ಒಂದು ನೀತಿ ಕಥೆಯನ್ನು ಹೇಳಿದ್ದೆ. ಅವರಿಗೆ ಕಥೆ ಹೇಳುವ ಮನಸ್ಸು ಉದ್ದೀಪನಗೊಳ್ಳಲಿ ಎಂದು. ಇದನ್ನು ಕೇಳಿದ ನಂತರ ಅವರು ಸಾಲಾಗಿ ನಿಂತು ‘‘ನಾನು ಕಥೆಯನ್ನು ಹೇಳುತ್ತೇನೆ’’ ಎಂದು ಉತ್ಸಾಹ ತುಂಬಿಕೊಂಡರು. ನಿಯಂತ್ರಿಸುವುದೇ ಕಷ್ಟವಾಯಿತು. ಕಂಬಾರರ, ಸಂಧ್ಯಾರೆಡ್ಡಿಯವರ, ಮುಖ್ಯಮಂತ್ರಿ ಚಂದ್ರು, ಡುಂಡಿರಾಜ್ ಹಾಗೂ ಜಯರಾಮ ಅಡಿಗ ಅವರ ಮಾತುಗಳನ್ನೂ ಹೀಗೆಯೇ ಮನದೊಳಗೆ ಬಿಟ್ಟುಕೊಂಡಿದ್ದರು. ಹಾಗೆಯೇ ಕರ್ನಾಟಕ ಗ್ರಂಥಾಲಯ ನಿರ್ದೇಶಕರಾದ ಕೆ.ಜಿ.ವೆಂಕಟೇಶ್ ಅವರ ನುಡಿಗಳನ್ನು.
‘‘ಮಕ್ಕಳು ಭವಿಷ್ಯದ ಪ್ರಜೆಗಳು’’ ಎಂಬ ಮಾತುಗಳನ್ನು ನನ್ನ ಬಾಲ್ಯ ಕಾಲದಿಂದಲೂ ಕೇಳುತ್ತಲೇ ಬಂದಿದ್ದೇನೆ. ನಿಜವಾಗಿಯೂ ಅದನ್ನು ಕೇಳಿಸಿಕೊಳ್ಳಲು ಹಿಂಸೆಯಾಗುವುದು. ಹಾಗೆಯೇ ನಮ್ಮಲ್ಲಿ ಬಹುಪಾಲು ಮಂದಿ ಚರ್ಚಾಪಟುಗಳ ರೀತಿಯಲ್ಲಿ ಕೆಲವು ಕ್ಲೀಷೆಯ ಮಾತುಗಳನ್ನು ಹೇಳುತ್ತಲೇ ಇರುತ್ತಾರೆ. ಅವುಗಳನ್ನು ಕೇಳಿಸಿಕೊಳ್ಳುವಾಗ ಮಕ್ಕಳು ಮುಸಿ ಮುಸಿ ನಗುತ್ತಲೇ ಇರುತ್ತಾರೆ. ಈ ನಗು ಒಂದು ರೀತಿಯ ವಿಮರ್ಶೆಯೇ ಆಗಿರುತ್ತದೆ. ಹಾಗೆಯೇ ‘‘ನಾವು ಈಗ ಪ್ರಜೆಗಳಲ್ಲವೇ’’ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡಿರುತ್ತಾರೆ. ಇದನ್ನು ಒಂದು ಮುಖ್ಯ ಕಾರಣಕ್ಕಾಗಿ ಪ್ರಸ್ತಾಪಿಸುತ್ತಿರುವೆ: ಮಕ್ಕಳ ಮನಸ್ಸಿಗೆ ಆರೋಗ್ಯ ಪೂರ್ಣವಾಗಿ ಏನು ಬೇಕಾದರೂ ತುಂಬಬಹುದು. ಆದರೆ ಎಷ್ಟನ್ನು ತುಂಬಿದರೆ ಚೆನ್ನಾಗಿರುತ್ತದೆ ಎಂಬುದನ್ನು ನಾವೇ ಗುರುಗಳಾಗಿ, ಮೇಸ್ಟ್ರಾಗಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಒಂದಷ್ಟು ಮಿತಿಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ಒಂದು ದೃಷ್ಟಿಯಿಂದ ಆ ಮಕ್ಕಳೇ ನಮಗೆ ಎಷ್ಟೊಂದನ್ನು ಕಲಿಸುತ್ತವೆ. ಈ ಕಾರಣಕ್ಕಾಗಿ ಪ್ರತಿದಿನ ಎಂಟೊಂಬತ್ತು ಗಂಟೆ ಅವರ ಜೊತೆಯಲ್ಲಿ ಕಳೆಯುವಾಗ; ಕರ್ನಾಟಕದ ಉದ್ದಗಲದಿಂದ ಬಂದ ಭಿನ್ನ ಭಿನ್ನ ಧ್ವನಿಯ ಮಾತುಗಳು ನನ್ನ ಕಿವಿಯ ಮೇಲೆ ಬೀಳುತ್ತಿತ್ತು ಎಂಬುದೇ ಆನಂದದಾಯಕವಾಗಿತ್ತು. ಎಲ್ಲರೂ ಮೂರುದಿನ ಎಷ್ಟು ಚೆನ್ನಾಗಿತ್ತು ಎಂದು ಹೇಳಿ ದರು. ಮತ್ತೆ ಬೇರೆ ಬೇರೆ ಕಡೆ ಇಂಥ ಕಮ್ಮಟಗಳನ್ನು ಮಾಡಿ ನಮ್ಮನ್ನು ಕರೆಸಿಕೊಳ್ಳಿ ಎಂಬ ಬೇಡಿಕೆ ಸಹಜವಾಗಿಯೇ ಇತ್ತು. ಎಲ್ಲಾ ಮಕ್ಕಳು ಸಂಪನ್ಮೂಲ ವ್ಯಕ್ತಿಗಳಿಗೆ ಹಾಗೂ ಮುಖ್ಯ ಅತಿಥಿಗಳಿಗೆ ಕಾಲಿಗೆ ನಮಸ್ಕರಿಸಿ ಹಸ್ತಾಕ್ಷರ ಪಡೆ ಯುವಾಗ; ಒಂದೆರಡು ಸಾಲು ಏನಾದರೂ ಬರೆಯಿರಿ ಎಂಬುದು ಸಾಮಾನ್ಯವಾಗಿತ್ತು.



ಈ ಕಮ್ಮಟ ಮುಗಿದು ಎರಡು ವಾರ ಕಳೆದರೂ; ಆ ಜೀವನೋತ್ಸಾಹದ ಮಕ್ಕಳ ಪ್ರಶ್ನೆಗಳು ವಿವಿಧ ನುಡಿಗಳು ಈಗಲೂ ಗುನುಗುನಿತ್ತಿದೆ. ಇದರ ಜೊತೆಗೆ ಎಲ್ಲೆಲ್ಲಿಂದಲೋ ಜಂಗಮವಾಣಿಗೆ ಸಂಪರ್ಕಿಸಿ ‘‘ಶೂದ್ರ ಸರ್ ಹೇಗಿದ್ದೀರಿ? ಬಾಲಭವನದ ಕಡೆ ಹೋಗಿದ್ದೀರಾ? ಎಂದು ಕೇಳುವರು. ಆಗ ಅವರ ಹಾಡು, ಕುಣಿತ, ಬರವಣಿಗೆ ಮುಖಾಮುಖಿಯಾಗುತ್ತಿರುತ್ತದೆ. ಪುಸ್ತಕ ಸಂಸ್ಕೃತಿಯ ಮೂಲಕ ಜೀವನ ಸಂಸ್ಕೃತಿ ಬೆಳೆಯುವುದು ಹೀಗೆಯೇ ಅನ್ನಿಸುತ್ತದೆ. ಈ ಮಕ್ಕಳ ಜೊತೆ ರಕ್ಷಣೆಗಾಗಿ ಬಂದಿದ್ದ ಶಿಕ್ಷಕಿಯರೂ ಕೂಡಾ ‘‘ಇದು ನಮಗೊಂದು ಹೊಸ ಅನುಭವ. ನಾವು ಏನಾದರೂ ಬರೆಯಲು ಪ್ರಾರಂಭಿಸುತ್ತೇವೆ.’’ ಎಂದು ನಗುತ್ತಲೇ ಹೊರಟರು. ಬಾಲಭವನದವರು ಸಣ್ಣ ಪ್ರಮಾಣದಲ್ಲಿಯಾದರೂ ಇಂಥ ಕೆಲಸ ಮಾಡುತ್ತಿದ್ದರೆ ಸಾಕು. ಭಾಗವಹಿಸಿದವರಿಗೆಲ್ಲ ನಾಳೆಯ ದಿನಗಳು ಜೀವಂತವಾಗಿರುತ್ತದೆ.
·       

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಜನಸಂಖ್ಯೆ ಹೆಚ್ಚಳದ ಪರಿಣಾಮ

ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮನೋಲ್ಲಾಸದ ನಾಲೆಗಳು: (ಭಾಗ-2)

ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...


- ಶೂದ್ರ ಶ್ರೀನಿವಾಸ್

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್