‘ಪ್ರಳಯ’ದ ಬಗ್ಗೆ ನ್ಯೂಸ್ ಚಾನಲ್ ಒಂದರಲ್ಲಿ ಇತ್ತೀಚೆಗೆ ನಡೆದ ಚರ್ಚೆಯನ್ನು ಗಮನಿಸುವಾಗ ನನ್ನಲ್ಲಿ ಮೂಡಿದ ವಿಚಾರ ಗಳನ್ನು ಇಲ್ಲಿ ದಾಖಲಿಸುತ್ತಿರುವೆ. ಓಶೋ ಬರೆದ ಪುಸ್ತಕದ ಕನ್ನಡದ ಅನುವಾದ ‘ಪ್ರಳಯ’ದ ಬಿಡುಗಡೆಯ ಸಂದರ್ಭದಲ್ಲಿ ಆ ಪುಸ್ತಕದ ಪ್ರಸ್ತುತತೆಯ ಕುರಿತು ಆ ಚರ್ಚೆ ನಡೆಯುತ್ತಿತ್ತು. ದಾರ್ಶನಿಕ ಓಶೋ, ‘ಪ್ರಳಯ ವೆಂದರೆ ಮನುಷ್ಯ ತನ್ನ ಸೃಜನಶೀಲತೆಯನ್ನು ಕಳೆದುಕೊಂಡು ಸಾವಿನ ಸ್ಥಿತಿಯನ್ನು ತಲುಪುವಿಕೆ ಅಷ್ಟೆ. ಇಲ್ಲದಿದ್ದರೆ ಪ್ರಳಯವೆಂಬುದಿಲ್ಲ. ಪ್ರಕೃತಿ ನಿರಂತರ ಸಹಜ ಚೈತನ್ಯದಿಂದಿದ್ದು, ನಮ್ಮನ್ನು ಕಾಪಾಡುತ್ತಿರುತ್ತದೆ’ ಎಂಬರ್ಥದ ಸಂದೇಶವನ್ನು ತಮ್ಮ ಪುಸ್ತಕದಲ್ಲಿ ಕೊಡುತ್ತಾರೆ. ಖುಷಿಯಿಂದ ನೃತ್ಯ ಮಾಡುವುದೂ ಕೂಡ ಪ್ರಳಯವನ್ನು ತಡೆಗಟ್ಟಲು-ಈ ಕ್ಷಣವನ್ನು ಚಂದವಾಗಿಸಲು ಇರುವ ಸರಳ ಮಾರ್ಗ ಎಂಬ ಹೊಳಹುಗಳನ್ನು ನೀಡುತ್ತ ಚರ್ಚೆ ಮುಕ್ತಾಯವಾಯಿತು.
ಡಿ.ವಿ.ಜಿ.ಯವರ ‘ಮಂಕುತಿಮ್ಮ’ನ ಈ ಕಗ್ಗವನ್ನು ಉದಾಹರಿಸಬೇಕೆನಿಸುತ್ತಿದೆ-
ಸೃಷ್ಟಿ ಕಥೆ ಕಟ್ಟು ಕಥೆ
ಹುಟ್ಟು -ಸಾವುಗಳೆರಡೆ ಗುರುವಿನೆರಡು ದೆಶೆ
ಮೃತ್ಯು ಎನ್ನುವುದೊಂದು ತೆರೆ ಇಳಿತ- ತೆರೆಏರು
ಮತ್ತೆ ತೋರ್ಪುದು ನಾಳೆ ಮಂಕುತಿಮ್ಮ...
‘ಪ್ರಳಯ’ ಜ್ಯೋತಿಷಿಗಳು ಹೇಳುವ ರಾಶಿ ಫಲಗಳ ಭವಿಷ್ಯ ವಾಣಿಗಳೂ ಹೆಚ್ಚಾಗುತ್ತಿವೆ. ಆದರೆ ಇವೆಲ್ಲಾ ಮನುಷ್ಯನ ಮನಸ್ಸಿನ ಸಮಗ್ರ ಶಾಂತಿಯನ್ನು ಕಾಪಾಡುವಲ್ಲಿ ಸಫಲವಾಗು ತ್ತಿವೆಯೇ? ಎಂಬ ಪ್ರಶ್ನೆ ನನ್ನಲ್ಲಿ ಮೂಡುತ್ತದೆ. ‘ಪ್ರಳಯ’ದ ನಿಜವಾದ ಆತಂಕ ಎಷ್ಟು? ವಾಣಿಜ್ಯ ಲಾಭದ ಹುನ್ನಾರವೆಷ್ಟು? ಸರಳದಾರಿಯ ಕರ್ತವ್ಯಪರತೆಯಲ್ಲಿ ನಿರತರಾಗಿ ಸಾವಿನ ಬಗೆಗೆ ನಿರಾತಂಕವಾಗಿರುವವರು ಎಷ್ಟು ಮಂದಿ?
ಅಕಸ್ಮಾತ್ ಈ ವರ್ಷ ಇಡೀ ಭೂಮಿಯೇ ಕೊಚ್ಚಿಕೊಂಡು ಹೋಗುವಂಥ ಪ್ರವಾಹ - ಪ್ರಳಯ ಸಂಭವಿಸಿದರೂ ಅದಕ್ಕೆ ಆತಂಕಪಟ್ಟು ಹೃದಯವನ್ನು ಹಿಡಿ ಮಾಡಿಕೊಂಡು ಕುಳಿತು ಕೊಂಡು ಬಿಟ್ಟರೆ ಎಂದೋ ಆಗುವ ಪ್ರಳಯದ ಆರಂಭಕ್ಕೆ ನಮ್ಮಿಂದಲೇ ನಾಂದಿ ಹಾಡಿದಂತಾಗಿ ಸಾವನ್ನು ಎದುರಿಸಲಾಗದ ಆ ಪ್ರಾಣಭಯದಿಂದ ಬದುಕಿದ್ದೂ ಸತ್ತು ಹೋಗುತ್ತಿರುತ್ತೇವೆ. ‘ಜಾತಸ್ಯ ಮರಣಂ ದ್ರುವಂ’ ಜನಿಸಿದ ಮೇಲೆ ಮರಣ ಸತ್ಯ ಎಂಬ ನಿಷ್ಠುರ ಸತ್ಯ ನಮ್ಮ ಮನಃಪಟಲದ ಮೇಲೆ ಮೂಡುವ ಸರಳ ವಿಧಿ ನಿಯಮವಾಗದಿದ್ದರೆ ಪ್ರತಿದಿನವೂ ನಾವು ಸಾವಿಗೆ ಸನ್ನದ್ಧರಾಗಿರುವ ಸುಖವೇ ತಪ್ಪಿಹೋಗುವುದಲ್ಲವೇ?
ಭ್ರಷ್ಟಾಚಾರ, ಅನ್ಯಾಯ, ಮೋಸಗಳ ಬಲೆ ಯಲ್ಲಿ ಮನುಷ್ಯ ತನ್ನ ಮುಗ್ಧತೆಯನ್ನು ಕಳೆದುಕೊಂಡು ತನ್ನದೇ ಸ್ವಂತ ಜೀವನವನ್ನೂ- ಒಂದೇ ಒಂದು ಜೀವನವನ್ನು ಸರಿಯಾಗಿ ಬದುಕಲು ಅರ್ಹತೆ ಕಳೆದುಕೊಳ್ಳುತ್ತಿರುವಾಗ ಇದಕ್ಕಿಂತ ಇನ್ನೊಂದು ರೀತಿಯ ‘ಪ್ರಳಯ’ ಸಂಭವಿಸುತ್ತದೆ ಎಂದು ನನಗಂತೂ ಅನಿಸುವುದಿಲ್ಲ.
"Life is short - Make it sweet'' ಕಾಲೇಜು ದಿನಗಳಲ್ಲಿ autogrph ಬರೆದು ಕೂಡುತ್ತಿದ್ದ ಸ್ನೇಹಿತರ ನೆನಪಾಗುತ್ತದೆ. ಆಗಲೇ ಮೊಳೆತಿತ್ತಲ್ಲವೇ ಈ ಅನಿಶ್ಚಿತ- ಪುಟ್ಟ ಜೀವನ ವೃಕ್ಷದ ಬೀಜ? ಆದರೂ ಯಾಕೆ ನಮ್ಮ ಸುತ್ತ ಇಷ್ಟೊಂದು ವಿಷಮಯವಾದ ಮನಗೋಡೆಯ ಸುತ್ತುಗಳೇ ಬೆಳೆದುಕೊಂಡು ಬಿಟ್ಟವು?
"End of the world'' ‘ನವ ಮಾನವ’ ಎನ್ನುವ ಓಶೋವಿನ ಎಂಬ ಪ್ರಳಯ ಕುರಿತ ಪುಸ್ತಕದಲ್ಲಿ ಬಂದಿರುವ ಪರಿಕಲ್ಪನೆ ಒಳಿತನ್ನು ಕುರಿತು ರಚನಾತ್ಮಕ ನಿಲುವು ತಳೆಯುವ ಎಲ್ಲ ದಾರ್ಶನಿಕರಲ್ಲಿಯೂ ಬಂದಿರುವಂಥದ್ದು. ಮಾನವ ಮೊದಲು ಮಾನವತೆಯ ಸರಳತೆ ಯನ್ನು ಬದುಕುವ ಸುಗಮ ಬಾಳು ಸಾಧ್ಯವಾದರೆ ಮಾತ್ರವಲ್ಲವೇ ನವ ಮಾನವ ನಾಗುವ ಹೊಸತನ ಸಾಧ್ಯವಾಗುವುದು?
ತಾವೂ ಒಂದು ಸೆಲೆಬ್ರೇಶನ್ ಎಂಬ ಓಶೋವಿನ ಸಂದೇಶ ನಮ್ಮ ಶರಣರು ಬಾಳಿ ತೋರಿಸಿರುವ ‘ಮರಣವೊಂದು ಮಹಾನವಮಿ’ ಎಂಬ ಧೀರ ನಿಲುವೇ ಆಗಿದೆ. ನಿಸರ್ಗದ ಮುಗ್ಧತೆ ಸಾಧ್ಯವಾಗುವಂತಹ ಅನ್ಯೋನ್ಯತೆ ಜೀವನದಲ್ಲಿ ಸಾಧ್ಯವಾಗುವುದಾದರೆ ಆ ಕ್ಷಣ ಪ್ರಾಣ ಹೋದರೂ ಪರವಾಗಿಲ್ಲ ಎನ್ನುವಂಥ ಸ್ಥಿರತೆ-ತೃಪ್ತಿ-ಶಾಂತಿ ಜೀವದಲ್ಲಿ ಉದ್ಭವವಾಗುತ್ತದೆ.
ಇದು ‘ಟೈಟಾನಿಕ್, ಎಂಬ ಮಹೋನ್ನತ ಬಾಲಿವುಡ್ ಚಿತ್ರದಲ್ಲಿ ಅಮರ ಚಿತ್ರಕತೆಯಾಗುವ ಪ್ರೇಮ ಚಿತ್ರಣವಾಗಿದೆ. ಹಡಗು ಮುಳುಗುತ್ತಿದ್ದರೂ ಅಲ್ಲಿ ಪ್ರಯಾಣಿಕರನ್ನು ಉಳಿಸುವ ಕೆಲಸ ಮಾಡುತ್ತಲೇ ಸಂಗೀತವನ್ನೂ ನಿರುಮ್ಮಳವಾಗಿ ನುಡಿಸುವ ಸಂಗೀತಪ್ರೇಮಿ ಕಂಡುಬರುತ್ತಾನೆ. ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ತನ್ನ ಸಂಗಾತಿಯ ಉಳಿವಿನಲ್ಲಿ ಕಥಾನಾಯಕ ತನ್ನ ಅಸ್ತಿತ್ವವನ್ನು ಕಾಣುತ್ತಾನೆ. ತಾನು ಮುಳುಗಿ ಅವಳನ್ನು ತೇಲಿಸಿ ಉಳಿಸುತ್ತಾನೆ.
ಅವನ ಪ್ರೇಮದ ಕುರುಹಾಗಿ ಅವಳು ಉಳಿಸಿಕೊಂಡ ವಜ್ರುದುಂಗುರಕ್ಕೆ ವಾಣಿಜ್ಯ ಲಾಭದ ಹಾಹಾಕಾರದ ಕಿರುಕುಳ ಆರಂಭವಾದಾಗ ಅವಳು- ಹಣ್ಣು ಹಣ್ಣು ಮುದುಕಿಯಾದರೂ ಅವನ ಪ್ರೇಮದ ಸ್ಮಾರಕವನ್ನು ಹೃದಯದಲ್ಲಿ ಹೊತ್ತಿರುವ ಅವಳು ಆ ಸ್ಥಾವರ ಉಂಗುರವನ್ನು ಸಮುದ್ರಕ್ಕೆ ಎಸೆದುಬಿಡುತ್ತಾಳೆ. ಅವನ ಪ್ರೇಮವನ್ನು ನೈಜವಾಗಿ ಬದುಕುವ ಅವಳ ಕಣ್ಣಲ್ಲಿ ಹೊಳೆಯುವ ಕಂಬನಿಯ ಮುತ್ತು ನವ ಮಾನವತೆಯ ಶಾಶ್ವತತೆಯನ್ನು ಸಾರುತ್ತದೆ.
ನನ್ನ ಇಷ್ಟದ ಈ ಹಳೆಯ ಚಿತ್ರಗೀತೆಯೂ ಕೂಡ ಪ್ರೇಮದ ಹಾದಿಯ ಪ್ರಳಯದ ಅನ್ಯೋನ್ಯತೆಯನ್ನು ಎಷ್ಟು ಚೆನ್ನಾಗಿ ನಿವೇದಿಸುತ್ತದೆ ನೋಡಿ. ಪ್ರೀತಿಸುವ ಹೃದಯಗಳನ್ನು ಒಂದಾಗಿ ಬೆಸೆಯುವ ಇಂಥ ಪ್ರಳಯ ಆಗಬೇಕಿದೆ.
ಮರೆತೆ ನಾನು ನನ್ನನಿರುವ ನಿನ್ನ ಹೃದಯ ರಾಜ್ಯದಿ
ಅರಿತೆ ನಾನು ನನ್ನತನವ ನಿನ್ನ ಪ್ರೇಮ ಕಾವ್ಯದಿ
ಮೇಲೆ ಮೇಲೆ ಮೇಲೆ ಏರಿ ನಿನ್ನ ಬಳಿಗೆ ಬಂದು
ಸೇರಿ
ಮನಕೆ ಮನವು ಬೆರೆಯಿತು ಬಾಳು
ಸುಗಮವಾಯಿತು
ತೇಲಿ ಹೋದೆ ನಿನ್ನ ನಗೆಯ ಚಿಮ್ಮಿ ಹರಿವ
ಹೊಳೆಯಲಿ
ಮುಳುಗಿ ಹೋದೆ ನಿನ್ನ ಮನದ ತಿಳಿಯ ಜಲದ ಕಡಲಲಿ...
ಕೊನೆಗೂ 17 ವರ್ಷದ ಜೆಡಿಯು-ಬಿಜೆಪಿ ನಡುವಿನ ಮೈತ್ರಿ ಮುರಿದಿದೆ. ನರೇಂದ್ರ ಮೋದಿಯ ಕೈಗೆ ಬಿಜೆಪಿಯ ನೇತೃತ್ವವನ್ನು ಕೊಟ್ಟ ಬೆನ್ನಿಗೇ ಇದು ನಡೆದಿದ ...
Click here to post your views ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...
ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...
ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...
ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...
ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...
ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...
1881ರಲ್ಲೇ ವಿಲಿಯಂ ಹಂಟರ್ ಎಂಬವರು ‘ಭಾರತದಲ್ಲಿ ಬೌದ್ಧಧರ್ಮದ ಪುನರುತ್ಥಾನ ವಾಗುವುದೆಂದು’ ಭವಿಷ್ಯ ನ ...