ಅಂಕಣ

mail-img print-img

ಈ ಚೆಡ್ಡಿಧಾರಿಗಳಿಂದ ಯಾರಾದರೂ ರಕ್ಷಣೆ ಕೊಡಿ....

ರವಿವಾರ - ಆಗಸ್ಟ್ -19-2012

ಅಸ್ಸಾಂನ ಹಿಂದೂಗಳೆಲ್ಲ ವಲಸೆ ಹೋಗುತ್ತಿದ್ದಾರೆ....ಎಂಬ ಸುದ್ದಿ ಹಬ್ಬಿದ್ದೇ...ಚೆಡ್ಡಿ ಕಾರ್ಯಕರ್ತರೆಲ್ಲ ಬಾಬರೀ ಮಸೀದಿ ಧ್ವಂಸದ ಬಳಿಕ ಅಟ್ಟದಲ್ಲಿ ಎಸೆದಿದ್ದ ತಮ್ಮ ತಮ್ಮ ಚೆಡ್ಡಿಗಳನ್ನು ಹುಡುಕಾಡ ತೊಡಗಿದರು. ಒಗೆಯದೆ ಇಂದಿಗೆ 20 ವರ್ಷಗಳಾಗಿದ್ದರೂ, ಅದು ಸೂಸುತ್ತಿರುವ ಹಿಂದುತ್ವದ ಪರಿಮಳಕ್ಕೆ ರೋಮಾಂಚಿತರಾಗಿ ಅವಸರವಸರವಾಗಿ ಧರಿಸಿಕೊಂಡು, ರೈಲ್ವೇ ಸ್ಟೇಶನ್‌ಬಳಿಗೆ ಧಾವಿಸಿದರು. ಅದಾಗಲಿ ಪೊಲೀಸ್ ಅಧಿಕಾರಿಗಳು ಈ ಚೆಡ್ಡಿ ಕಾರ್ಯಕರ್ತರ ಮಾರ್ಗದರ್ಶನಕ್ಕಾಗಿ ರೈಲ್ವೇ ಸ್ಟೇಷನ್‌ನಲ್ಲಿ ಕಾಯುತ್ತಿದ್ದರು. ಕಲ್ಲಡ್ಕದ ಹಿರಿ ಚೆಡ್ಡಿಯ ನಿರ್ದೇಶನ ದೊರಕಿದ್ದೇ ರೈಲ್ವೇ ಸ್ಟೇಶನ್‌ನಲ್ಲಿ ಮರಿ ಚೆಡ್ಡಿಗಳಿಗಾಗಿ ಪೊಲೀಸರು ಕಾಯುತ್ತಿದ್ದರು. ಚೆಡ್ಡಿಗಳು ಲಾಠಿ ಬೀಸಿಕೊಂಡು ಬಂದವರೇ ಪೊಲೀಸರಿಗೆ ಭದ್ರತೆಯ ನಿರ್ದೇಶನವನ್ನು ನೀಡತೊಡಗಿದರು. ಅಸ್ಸಾಮ್‌ನ ನಾಗರಿಕರು ಯಾರಾದರೂ ಕಂಡದ್ದೇ ಅವರನ್ನು ತಡೆದು ನಿಲ್ಲಿಸಿ ಅವರಿಗೆ ಭದ್ರತೆ ನೀಡತೊಡಗಿದರು.

ಒಬ್ಬ ಲಾಠಿಧಾರಿ ಮರಿ ಚಡ್ಡಿ ರೈಲಿನೊಳಗೆ ಕುಳಿತಿದ್ದ ಓರ್ವನನ್ನು ನೋಡಿ ‘‘ನೀವು ಅಸ್ಸಾಮಿನವರೋ...?’’ ಎಂದು ಪ್ರಶ್ನಿಸಿದ. ಚೆಡ್ಡಿ ಮತ್ತು ಲಾಠಿಯನ್ನು ಕಂಡದ್ದೇ ಏನೋ ಅಪಾಯವಿದೆ ಎಂದು ಅರಿತ ಆತ ಏನು ಹೇಳಿದರೆ ಅಪಾಯದಿಂದ ಪಾರಾಗಬಹುದು ಎಂದು ಯೋಚಿಸತೊಡಗಿದ.

ಚೆಡ್ಡಿಧಾರಿ ಮನವಿ ಮಾಡತೊಡಗಿದ ‘‘ನನಗೆ ಗೊತ್ತು...ನೀವು ಅಸ್ಸಾಂಗೆ ವಲಸೆ ಹೋಗುತ್ತಿದ್ದೀರಿ ಎಂದು. ದಯವಿಟ್ಟ ಹೋಗಬೇಡಿ. ನಿಮಗೆ ಸಕಲ ಭದ್ರತೆ ನೀಡುತ್ತೇವೆ...’’

ಪ್ರಯಾಣಿಕನು ಅಸ್ಸಾಮಿನವನೇನೋ ಆಗಿದ್ದ. ಆದರೆ ಅವನಿಗೆ ಭದ್ರತೆ ಬೇಕಾಗಿರಲಿಲ್ಲ ‘‘ನನಗೆ ಅರ್ಜಂಟಾಗಿ ಊರಿಗೆ ಹೋಗಲೇಬೇಕಾಗಿದೆ. ಅಮ್ಮನಿಗೆ ಹುಷಾರಿಲ್ಲ...’’ ಎಂದ. ಆದರೆ ಹಿಂದೂ ರಕ್ಷಣೆಗಾಗಿ ಅಸ್ಸಾಮಿಗರಿಗೆ ಭದ್ರತೆ ಕೊಡಲೇ ಬೇಕಾಗಿದೆ. ಚೆಡ್ಡಿಧಾರಿ ಒತ್ತಾಯಿಸತೊಡಗಿದ ‘‘ದಯವಿಟ್ಟು ನಿಮ್ಮ ರಕ್ಷಣೆಗೆ ನಮಗೆ ಅವಕಾಶ ಮಾಡಿಕೊಡಬೇಕು...ನೀವು ಊರಿಗೆ ಹೋಗಲೇ ಬಾರದು...ನಾವು ನಿಮಗೆ ರಕ್ಷಣೆ ಕೊಡುತ್ತೇವೆ...’’

‘‘ಇಲ್ಲ ನಾನು ಊರಿಗೆ ಹೋಗಲೇ ಬೇಕು...ನನ್ನ ತಾಯಿಗೆ ಹುಷಾರಿಲ್ಲ. ಅವರು ಆಸ್ಪತ್ರೆಯಲ್ಲಿದ್ದಾರೆ... ಅವರನ್ನು ನೋಡಲು ಹೋಗಲೇ ಬೇಕು...’’ ಅಸ್ಸಾಮಿಗ ಆತಂಕದಿಂದ ಹೇಳಿದ.
‘‘ಸಾಧ್ಯವೇ ಇಲ್ಲ. ನೀವು ಊರಿಗೆ ಹೋದರೆ ನಾವು ಯಾರಿಗೆ ರಕ್ಷಣೆ ಕೊಡುವುದು. ನಿಮಗೆ ರಕ್ಷಣೆಕೊಡುವು ದಕ್ಕಾದರೂ ನೀವು ಇಲ್ಲಿ ಉಳಿಯಲೇ ಬೇಕು...’’

‘‘ಆದರೆ ನಾವು ಅರ್ಜೆಂಟಾಗಿ ಊರಿಗೆ ಹೋಗಬೇಕು...’’ ಅಸ್ಸಾಂ ನಾಗರಿಕ ಗೋಗರೆದ.
‘‘ಅದು ಸಾಧ್ಯವಿಲ್ಲ....ಅಮ್ಮನನ್ನು ನೋಡಲು ಬೇಕಾದರೆ ಒಂದು ತಿಂಗಳ ಬಳಿಕ ಹೋಗಿ. ಇಲ್ಲದಿದ್ದರೆ ಓಂ ಮಿನಿಸ್ಟರ್‌ರತ್ರ ಹೇಳಿ ನಿಮ್ಮ ವಿರುದ್ಧ ಅಕ್ರಮ ವಲಸಿಗ ಕೇಸು ಹಾಕಿಸಬೇಕಾಗುತ್ತದೆ. ನಮ್ಮ ಭದ್ರತೆಯನ್ನು ನೀವು ಒಪ್ಪಿಕೊಳ್ಳಲೇ ಬೇಕು...’’
 ಅಸ್ಸಾಮಿಗ ಅನಿವಾರ್ಯವಾಗಿ ರೈಲಿನಿಂದ ಕೆಳಗಿಳಿದ. ಕೆಳಗಿಳಿದು ನೋಡಿದರೆ ಎಲ್ಲರ ಬಳಿ ಮರಿ ಚೆಡ್ಡಿಗಳು ‘‘ರಕ್ಷಣೆ ಕೊಡುತ್ತೇವೆ...ಪ್ಲೀಸ್...ಪ್ಲೀಸ್...’’ ಎನ್ನುತ್ತಿದ್ದರು. ಒಬ್ಬ ಅಸ್ಸಾಮಿಗ ಜೋರಾಗಿ ಅರಚತೊಡಗಿದ ‘‘ಅಯ್ಯೋ...ಈ ಚೆಡ್ಡಿಧಾರಿಗಳಿಂದ ನಮಗೆ ಯಾರಾದರೂ ರಕ್ಷಣೆ ಕೊಡಿ....’’ ಅದನ್ನು ಕೇಳಿದ್ದೇ ಪೊಲೀಸ್ ಅಧಿಕಾರಿ ಗಳು ಆತನಿಗೆ ಎರಡು ತದುಕಿದರು ‘‘ಮಾರ್ಯಾದೆಯಿಂದ ಅವರ ಭದ್ರತೆಯನ್ನು ತೆಗೆದು ಕೊಳ್ಳುತ್ತೀಯೋ ಇಲ್ಲವೋ...’’

ಚಡ್ಡಿಧಾರಿಯಲ್ಲಿ ಒಬ್ಬ ಕೇಳಿದ ‘‘ಸ್ವಾಮಿ...ನೀವೆಲ್ಲ ನಮಗೆ ಯಾಕೆ ರಕ್ಷಣೆಕೊಡುತ್ತಿದ್ದೀರಿ?’’
ಚಡ್ಡಿಧಾರಿ ಆಶ್ಚರ್ಯದಿಂದ ಪ್ರಶ್ನಿಸಿದ ‘‘ನಾವು ಸಾಬ್ರುಗಳ ಹೆಸರಿನಲ್ಲಿ ಮೆಸೇಜು ಕಳಿಸಿ ದ್ದೇವಲ್ಲ...ನಿಮಗೆ ತಲುಪಲಿಲ್ಲವ?’’ ಎನ್ನುತ್ತಾ ಅವನಿಂದ ನಂಬರ್ ಪಡೆದು, ತನ್ನಲ್ಲಿದ್ದ ಮೆಸೇಜನ್ನು ಅಸ್ಸಾಮಿಗನಿಗೆ ಫಾರ್‌ವರ್ಡ್ ಮಾಡಿದ. ಆ ಮೆಸೇಜ್ ಓದಿದ್ದೇ...‘ಹೆಲ್ಪ್ ಹೆಲ್ಪ್...’ ಎಂದು ಅಸ್ಸಾಮಿಗ ರೈಲು ಹತ್ತಿದ. ಅವನ ಹಿಂದೆ ಭದ್ರತೆ ನೀಡುವುದಕ್ಕಾಗಿ ಮರಿಚೆಡ್ಡಿಯೂ ಓಡಿದ.

ಒಬ್ಬ ಕಿರಿ ಚೆಡ್ಡಿ ಒಂದು ಬಾಟಲ್ ನೀರನ್ನು ಅಸ್ಸಾಮಿಗರಿಗೆ ಕೊಟ್ಟು ಸತ್ಕಾರ ಮಾಡಿದ. ‘‘ನನಗೆ ನೀರು ಬೇಡ. ನಾವು ಕುಡಿದು ಬಂದಿದ್ದೇವೆ...’’ ಎಂದದ್ದೇ ಕಿರಿ ಚೆಡ್ಡಿಗೆ ಸಿಟ್ಟು ಬಂತು. ‘‘ನಾವು ನಿಮಗೆ ಭದ್ರತೆ ನೀಡಲು ಬಂದಿದ್ದೇವೆ. ಕಡ್ಡಾಯವಾಗಿ ನೀರನ್ನು ಕುಡಿದು ಹಿಂದೂ ರಕ್ಷಣೆಯನ್ನು ಮಾಡಿದ್ದಕ್ಕಾಗಿ ನಮಗೆ ಕೃತಜ್ಞತೆಯನ್ನು ಸಲ್ಲಿಸಬೇಕು...’’ ಎಂದು ಆದೇಶಿಸಿದ. ಅಸ್ಸಾಮಿಗ ಅನಿವಾರ್ಯವಾಗಿ ನೀರನ್ನು ಗಂಟಲಿಗೆ ಸುರಿದು ಕೊಂಡ. ಅಷ್ಟರಲ್ಲಿ ಮಾಧ್ಯಮದ ಚೆಡ್ಡಿ ಪತ್ರಕರ್ತರೆಲ್ಲ ತಮ್ಮ ಪೆನ್ನನ್ನು ಲಾಠಿಯಂತೆ ಆಡಿಸುತ್ತಾ ಅದನ್ನು ಬರೆದುಕೊಂಡರು. ಫೋಟೋಗ್ರಾಫರ್‌ಗಳು ಫೋಟೋ ಕ್ಲಿಕ್ಕಿಸಿದರು. ಟಿವಿಗಳಲ್ಲಿ ಮರಿ, ಕಿರಿ ಚಡ್ಡಿಗಳು ಅಸ್ಸಾಮಿಗರಿಗೆ ಭದ್ರತೆ ನೀಡುತ್ತಿರುವುದು ಲೈವ್ ಆಗಿ ಪ್ರಸಾರವಾಗತೊಡಗಿತು.

ಇವರೆಲ್ಲರ ಮಧ್ಯೆ ಪತ್ರಕರ್ತ ಎಂಜಲು ಕಾಸಿ ರೈಲ್ವೇ ಸ್ಟೇಶನ್‌ನಲ್ಲಿ ಪೊಲೀಸ್ ಅಧಿಕಾರಿಗಳಿಗಾಗಿ ಹುಡುಕಾಡ ತೊಡಗಿದ. ಉದ್ದ ಚೆಡ್ಡಿ ಹಾಕಿದವರು ಪೊಲೀಸರು, ಗಿಡ್ಡ ಚೆಡ್ಡಿ ಹಾಕಿದವರು ರಕ್ಷಕರು ಎಂದು ಯಾರೋ ಮಾಹಿತಿ ನೀಡಿದ್ದರಿಂದ, ಕಾಸಿ ಉದ್ದ ಚೆಡ್ಡಿ ಹಾಕಿದ ಪೊಲೀಸರನ್ನು ಭೇಟಿ ಮಾಡಿದ. ‘‘ಸಾರ್...ನೀವೇನು ಮಾಡುತ್ತಿದ್ದೀರಿ ಇಲ್ಲಿ?’’ ಎಂದು ಪೊಲೀಸ್ ಅಧಿಕಾರಿಯನ್ನು ಇಂಟರ್ಯೂ ಮಾಡತೊಡಗಿದ.
‘‘ನಾವು ಭದ್ರತೆ ಕೊಡುತ್ತಿದ್ದೇವೆ....’’ ಪೊಲೀಸ್ ಅಧಿಕಾರಿ ಹೇಳಿದರು.
‘‘ಯಾರಿಗೆ ಸಾರ್...?’’ ಕಾಸಿ ಕುತೂಹಲದಿಂದ ಕೇಳಿದ.
‘‘ಅದೇ...ಅಸ್ಸಾಮಿಗರಿಗೆ ಕಿರಿ, ಮರಿ ಚೆಡ್ಡಿಗಳು ಭದ್ರತೆ ಕೊಡುತ್ತಿದ್ದಾರೆ. ಈ ಕಿರಿ, ಮರಿ ಚೆಡ್ಡಿಗಳಿಗೆ ನಾವು ಭದ್ರತೆ ಕೊಡುತ್ತಿದ್ದೇವೆ....’’ ಪೊಲೀಸ್ ಅಧಿಕಾರಿ ಹೆಮ್ಮೆಯಿಂದ ಹೇಳಿದ.
‘‘ಸಾರ್...ಈ ಮರಿ-ಕಿರಿ ಚೆಡ್ಡಿಗಳು ನಿಮ್ಮ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೋ...?’’ ಪತ್ರಕರ್ತ ಕಾಸಿ ಮುಗ್ಧವಾಗಿ ಕೇಳಿದ.

‘‘ಅವರು ನಮ್ಮ ಇಲಾಖೆಯಲ್ಲಿ ಕೆಲಸ ಮಾಡುತ್ತಿಲ್ಲ. ಬದಲಿಗೆ ನಮಗಿಂತ ದೊಡ್ಡ ಇಲಾಖೆ ಅಂದರೆ ವಿಧಾನಸೌಧದಲ್ಲಿ ಇದ್ದಾರಲ್ಲ...ಅವರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಮಗೆ ಅಲ್ಲಿಂದಲೇ ಆದೇಶ ಬಂದಿದೆ. ಅಸ್ಸಾಮಿಗರಿಗೆ ಯಾವ ಕಾರಣಕ್ಕೂ ಪೊಲೀಸರು ಭದ್ರತೆ ಕೊಡುವುದು ಬೇಡ. ಅದಕ್ಕೆಲ್ಲ ಕರಾವಳಿಯ ಕಲ್ಲಡ್ಕದಿಂದ ಜನ ಬರುತ್ತಾರೆ. ಹಾಗೆ ಬಂದ ಆ ಮರಿ, ಕಿರಿ ಚೆಡ್ಡಿಗಳಿಗೆ ಪೊಲೀಸರು ಭದ್ರತೆ ಕೊಟ್ಟರೆ ಸಾಕು ಅಂತ...’’
ಅಷ್ಟರಲ್ಲಿ ಯಾವುದೋ ಒಂದು ರೈಲು ಬಂದು ನಿಂತಿತು. ಅದರಿಂದ ಸಾವಿರಾರು ವಲಸಿಗರು ದಬದಬನೆ ಕೆಳಗಿಳಿದರು. ಅದನ್ನು ನೋಡಿದ್ದೇ ಕಿರಿ, ಮರಿಚೆಡ್ಡಿಗಳು ಅತ್ಯುತ್ಸಾಹದಿಂದ ‘‘ಜೈ ಶ್ರೀರಾಮ್...ಭಾರತ್ ಮಾತಾಕಿ ಜೈ...’’ ಎಂದು ಅವರ ರಕ್ಷಣೆಗೆ ಧಾವಿಸಿದರು.

ಆದರೆ ಹತ್ತಿರ ಹೋದರೆ ಅವರ ಮುಖದಲ್ಲಿ ಅಸ್ಸಾಮಿಗರ ಬಣ್ಣ ವಿರಲಿಲ್ಲ. ಒಬ್ಬ ಚೆಡ್ಡಿ ಕೇಳಿದ ‘‘ನೀವೆಲ್ಲ ನಿರ್ವಸಿತರಲ್ಲವೆ?’’
ಅದಕ್ಕೆ ಒಬ್ಬ ನಿರ್ವಸಿತ ಅಳುತ್ತಾ ಹೇಳಿದ ‘‘ಹೌದು ಸಾಮಿ...ನಾವೆಲ್ಲ ಮನೆ ಮಾರು ಬಿಟ್ಟು ಬಂದಿದ್ದೇವೆ....’’
‘‘ಮುಸಲರು ನಿಮ್ಮನ್ನು ಅಸ್ಸಾಮಿನಿಂದ ಓಡಿಸಿದ್ದಾರಲ್ಲವೆ...ನಿಮಗೆ ನಾವು ರಕ್ಷಣೆ ಕೊಡುತ್ತೇವೆ... ಹೆದರಬೇಡಿ...’’ ಕಿರಿ ಚೆಡ್ಡಿ ಹೇಳಿದ.
ನಿರ್ವಸಿತ ಅಳುತ್ತಾ ಹೇಳಿದ ‘‘ಅಲ್ಲ ಸಾಮಿ...ನಾವು ಅಸ್ಸಾಮಿನಿಂದ ಬಂದಿಲ್ಲ....ನಾವು ಬರದಿಂದ ಕಂಗೆಟ್ಟು ಬಿಜಾಪುರ, ಬೀದರ್‌ನಿಂದ ಬಂದಿದ್ದೇವೆ... ದಯವಿಟ್ಟು ನಮಗೆ ರಕ್ಷಣೆಕೊಡಿ...ನಮಗೆ ಉಳ್ಕೊಳ್ಳೋದಕ್ಕೆ ಜಾಗ ಕೊಡಿ...ಕುಡಿಯುವುದಕ್ಕೆ ನೀರು ಕೊಡಿ...ಮಾಡುವುದಕ್ಕೆ ಕೆಲಸ ಕೊಡಿ....’’ ಎಲ್ಲರೂ ಜೋರಾಗಿ ಅಳತೊಡಗಿದರು.
ಕಿರಿ ಚೆಡ್ಡಿ, ಮರಿ ಚೆಡ್ಡಿಗಳೆಲ್ಲ ಕಂಗಾಲಾಗಿ ‘‘ಥೂ ತ್ತೇರಿ...’’ ಎನ್ನುತ್ತಾ ಅಲ್ಲಿಂದ ಪಲಾಯನ ಮಾಡಿದರು. ಪೊಲೀಸ್ ಅಧಿಕಾರಿಗಳು ಬರ ಪೀಡಿತ ವಲಸಿಗರ ಮೇಲೆ ಲಾಠಿ ಬೀಸಿ ಅವರಿಗೆ ಭದ್ರತೆ ನೀಡತೊಡಗಿದರು.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಖಾಲಿಯಾದ ಜಲಾಶಯಗಳು ಕುಡಿಯುವ ನೀರಿಗೆ ಹಾಹಾಕಾರ

ಬೇಸಿಗೆಯ ಪ್ರಖರತೆ ಹೆಚ್ಚುತ್ತಲೇ ಇದೆ. ಕಾವೇರಿ ಮತ್ತು ಕೃಷ್ಣಾ ಕೊಳ್ಳದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಹಿಂದೆಂದೂ ಕಂಡರಿಯದಷ್ಟು ಕುಸಿದಿದೆ. ಪ್ರತಿ ಸಲದಂತೆ ಜ ...


ನಿಮ್ಮ ಅನಿಸಿಕೆ

postClick here to post your views
EPAPER
access

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್

ಅಕ್ಷರ ಸೇವೆಯಿಂದ ಜನಸೇವೆಗೆ;ತೆಂಕಮಿಜಾರಿನ ಮುತ್ತು

ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...


- ಪ್ರೇಮಶ್ರೀ ಕಲ್ಲಬೆಟ್ಟು

ನಾನು ಮತ್ತು ದೇವರು

 ರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...


- ಸುನೀಲ್ ರಾವ್

ಬಿಟ್ಟಿ ಅಂಕದ ಪಿಯುಸಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಬುಟ್ಟಿಗೆಸೆ!

 ಮಾನ್ಯರೆ,

ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...


- -‘ಮಾತರಿ’ ಸಾಗ

ಶಂಕರದರ್ಶನ ಮತ್ತು ವಿಮರ್ಶಾ ರಾಜಕೀಯಗಳು

ಭಾರತ ದೇಶದ, ಜಗತ್ತಿನ ಅಗ್ರ ದಾರ್ಶನಿಕರಲ್ಲಿ ಓರ್ವರು ಶ್ರೀ ಶಂಕರಾಚಾರ್ಯರು. (ಕ್ರಿ. 8ನೆ ಶತಮಾನ) ಅವರ ದ ...


- -ಡಾ.ಎಂ. ಪ್ರಭಾಕರ ಜೋಶಿ