ಅಂಕಣ

mail-img print-img

ಜೈವಿಕ ಇಂಧನ-ಬಾಳಿಗೆ ನಂದನ

ಗುರುವಾರ - ಆಗಸ್ಟ್ -23-2012

ಇಂದಿನ ಮಾನವ ಸಮಾಜಕ್ಕೆ ಇಂಧನವಿಲ್ಲದೆ ಅಸ್ತಿತ್ವವೇ ಇಲ್ಲ. ಮುಂಜಾನೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಮಲಗಿದ ನಂತರವೂ ಇಂಧನ ಬೇಕೇ ಬೇಕು. ವಾಹನಗಳಿಗೆ, ಯಂತ್ರಗಳ ಚಲನೆಗೆ, ವಿದ್ಯುತ್ ಉತ್ಪಾದನೆಗೆ ಇಂಧನದ ಅವಶ್ಯಕತೆಯಷ್ಟೇ ಅಲ್ಲ ಅನಿವಾರ್ಯವೂ ಆಗಿದೆ. ಇಂಧನವೆಂದರೆ ದಹನಕ್ರಿಯೆಗೆ ಒಳಗಾಗಿ ಶಕ್ತಿಯನ್ನು ಬಿಡುಗಡೆ ಮಾಡುವ ರಾಸಾಯನಿಕ ಪದಾರ್ಥ. ಇದು ಘನ, ದ್ರವ ಹಾಗೂ ಅನಿಲ ರೂಪದಲ್ಲಿರುವುದು. ಜನಸಾಮಾನ್ಯರಿಗೆ ಗೊತ್ತಿರುವ ಅತ್ಯಂತ ಜನಪ್ರಿಯ ಇಂಧನವೆಂದರೆ, ಸೀಮೆ ಎಣ್ಣೆ-ದೀಪಕ್ಕೆ, ಅಡುಗೆ ಸ್ಟೌವ್‌ಗಳಿಗೆ ಬಳಸುತ್ತಿರುವುದು. ಇದನ್ನು ಬಿಟ್ಟರೆ ಪೆಟ್ರೋಲ್ ಹಾಗೂ ಡೀಸೆಲ್ ಚಿರಪರಿಚಿತ. ಈ ಇಂಧನಗಳು ಪೆಟ್ರೋಲಿಯಂ ಎಂಬ ಕಚ್ಚಾತೈಲದ ರೂಪದಲ್ಲಿ ಭೂಮಿಯ ನಿರ್ದಿಷ್ಟ ಸ್ಥಳದಲ್ಲಿ ಸಹಸ್ರಾರು ಮೀಟರ್ ಆಳದಲ್ಲಿ ದೊರಕುತ್ತದೆ. ಇದನ್ನು ಇಂಗ್ಲಿಷ್‌ನಲ್ಲಿ ಫಾಸಿಲ್ ಫ್ಯೂಯಲ್ ಎಂದೂ ಕರೆಯುತ್ತಾರೆ. ಇದಕ್ಕೆ ಕಾರಣ, ಕೋಟ್ಯಂತರ ವರ್ಷಗಳ ಹಿಂದೆ ಭೂಮಿಯ ಆಳಕ್ಕೆ ಹೂಳಲ್ಪಟ್ಟ ಜೀವಿಗಳು ಕಾಲಕ್ರಮೇಣ ಇಂಧನವಾಗಿ ಮಾರ್ಪಾಡಾಗುವುದು. ಇದನ್ನೇ ಕಚ್ಚಾತೈಲ ಎನ್ನುವರು. ಇಂತಹ ಕಚ್ಚಾ ತೈಲವನ್ನು ನಮ್ಮ ದೇಶವು ಲಕ್ಷಾಂತರ ಕೋಟಿ ರೂಪಾಯಿಗಳ ವಿದೇಶಿ ವಿನಿಮಯವನ್ನು ನೀಡಿ ಆಮದು ಮಾಡಿಕೊಳ್ಳುತ್ತಿದೆ.

ಜನಸಂಖ್ಯಾ ಸ್ಫೋಟದಿಂದಾಗಿ ದಿನನಿತ್ಯ ಲಕ್ಷಾಂತರ ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಮುಂದೊಂದು ದಿನ ಕಚ್ಚಾತೈಲ ನಿಕ್ಷೇಪ ಸಂಪೂರ್ಣವಾಗಿ ಬರಿದಾಗಿ ಇಡೀ ಮಾನವ ಸಮಾಜದ ಸಂಚಲನವೇ ಸ್ಥಬ್ಧವಾಗಬಹುದು.ಇದಕ್ಕೆ ಸುರಕ್ಷಿತ ಪರಿಹಾರವೆಂದರೆ, ನಮ್ಮ ಸುತ್ತಮುತ್ತಲು ನಾವೇ ಇಂಧನವನ್ನು ಬೆಳೆಸುವುದು. ಹೌದು, ಕೆಲವು ಮರಗಿಡಗಳ ಬೀಜಗಳಿಂದ ತೆಗೆದ ಎಣ್ಣೆಯನ್ನೇ ಬದಲಿ ಇಂಧನವಾಗಿ ಬಳಸಲು ಸಾಧ್ಯವಿದೆ. ಇಂತಹ ಸಸ್ಯಜನ್ಯ ಇಂಧನವನ್ನೇ ಜೈವಿಕ ಇಂಧನ ಎಂದು ಕರೆಯುತ್ತಾರೆ.ಜೈವಿಕ ಇಂಧನವು ಎಲ್ಲರಿಗೂ ಒಂದು ಹೊಸ ವಿಷಯವಾಗಿದೆ.  ಸಸ್ಯ ಮೂಲ ಗಳಿಂದ ಪಡೆಯುವ ಇಂಧನ ಇದು.

ಪೆಟ್ರೋಲ್ ಮತ್ತು ಡೀಸೆಲ್‌ಗೆ ಬದಲಾಗಿ ಬಳಸುವ ವಿದೇಶಿ ವಿನಿಮಯವನ್ನುಳಿಸುವ, ಕೃಷಿಗೆ ಪೂರಕವಾಗಿ ಪರಿಸರ ಸಮತೋಲನವನ್ನು ಕಾಪಾಡುವ ಪರಿಸರ ಸ್ನೇಹಿಯಾದ ಇಂಧನದ ಮೂಲವೇ ಜೈವಿಕ ಇಂಧನವಾಗಿದೆ.  ಸಸ್ಯಜನ್ಯ ಇಂಧನದ ಮೂಲಗಳನ್ನು ಅಭಿವೃದ್ಧಿಪಡಿಸಿ ಕಚ್ಚಾ ತೈಲಗಳ ಮೇಲಿನ ಅವಲಂಬನೆಯನ್ನು ತಗ್ಗಿಸಿ ಕೃಷಿ ವಲಯದ ಮೂಲಕ ಇಂಧನ ಭದ್ರತೆಯನ್ನು ಬಲಪಡಿಸುವುದು.ಭಾರತ ದೇಶವು ಶೇ.85%ರಷ್ಟು ಪೆಟ್ರೋಲಿಯಂ ಉತ್ಪನ್ನಗಳನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಪರಿಣಾಮವಾಗಿ ಪರಾವಲಂಬನೆ, ಪರಿಸರ ಮಾಲಿನ್ಯ, ವಿದೇಶಿ ವಿನಿಮಯಗಳ ಹೊರೆ ಹೆಚ್ಚಾಗುತ್ತದೆ. 

ಈ ಎಲ್ಲಾ ದೃಷ್ಟಿಯಿಂದ ಬದಲಿ ಇಂಧನ ಮೂಲಗಳಿಗೆ ಪ್ರಾಮುಖ್ಯತೆ ದೊರೆಯುತ್ತಿದ್ದು, ಭವಿಷ್ಯದ ಇಂಧನವಾಗಿ ಜೈವಿಕ ಇಂಧನವನ್ನು ಅಭಿವೃದ್ಧಿಪಡಿಸುವುದು ಅನಿವಾರ್ಯ. 2038ರ ವೇಳೆಗೆ ಪೆಟ್ರೋಲಿಯಂ ಉತ್ಪನ್ನದ ಪ್ರಮಾಣ ಬರಿದಾಗುವ ಸಾಧ್ಯತೆಗಳು ಸಾಕಷ್ಟು ಇದೆ ಎಂದು ಹಲವಾರು ಪರಿಸರ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಹೀಗೇ ಊಹಿಸಿ, ಒಂದು ವೇಳೆ ಪೆಟ್ರೋಲಿಯಂ ಉತ್ಪನ್ನಗಳು ಸಿಗದೆ ಅರಬ್ ರಾಷ್ಟ್ರಗಳು ನಮ್ಮ ದೇಶಕ್ಕೆ ಪೂರೈಸುತ್ತಿರುವ ಇಂಧನವನ್ನು ನಿಲ್ಲಿಸಿದರೆ ಕೈಗಾರಿಕ ವಲಯ, ಸಾರಿಗೆ ಕ್ಷೇತ್ರ ಹಾಗೂ ಎಲ್ಲಾ ಅಭಿವೃದ್ಧಿಪರ ಚಟುವಟಿಕೆಗಳು ಸ್ಥಗಿತಗೊಂಡು ನಿರುದ್ಯೋಗದ ಪ್ರಮಾಣ ಹೆಚ್ಚಿ ಆರ್ಥಿಕ ಸಮಸ್ಯೆಗೆ ಸಿಲುಕಿ ದೇಶ ದಿವಾಳಿಯಾಗಬಹುದು. 

ಈ ಎಲ್ಲಾ ಸಮಸ್ಯೆಗಳ ನಿವಾರಣೆಗಾಗಿ ಸರಕಾರವು ಜೈವಿಕ ಇಂಧನ ಕಾರ್ಯಪಡೆಯ ಮೂಲಕ ಜೈವಿಕ ಇಂಧನ ಎಂಬ ಕಾರ್ಯಕ್ರಮದ ಮೂಲಕ ಶ್ರಮಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯ ಸುಪರ್ದಿನಲ್ಲಿ ಕಾರ್ಯನಿರ್ವಹಿಸುತ್ತಿದೆ.  ಜೈವಿಕ ಇಂಧನ ಸಸಿಗಳಾದ ಹೊಂಗೆ, ಬೇವು, ಜಟ್ರೋಫಾ, ಸುರಹೊನ್ನೆ ಸಿಮರೂಬ, ಹಿಪ್ಪೆ  ಇನ್ನು ಮುಂತಾದ ಸಸಿಗಳನ್ನು ಬೆಳೆಸುವುದರಿಂದ ಅವುಗಳಿಂದ ಬರುವ ಬೀಜಗಳಿಂದ ಜೈವಿಕ ಇಂಧನವನ್ನು ಉತ್ಪಾದಿಸಬಹುದಾಗಿದೆ.  ಅದರಲ್ಲೂ ಎಣ್ಣೆ ಅಂಶವು ಹೆಚ್ಚಾಗಿರುವ ಹೊಂಗೆಯನ್ನು ಹೆಚ್ಚಾಗಿ ನೆಡುವ ಕಾರ್ಯಕ್ರಮವನ್ನು ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಮಾಡಲು ಮುಂದಾಗಿದೆ. 

ಹೊಂಗೆ ಹಾಗೂ ಇನ್ನಿತರ ಬೀಜಗಳನ್ನು ಸ್ಥಳಿಯವಾಗಿಯೇ ಹಾಲು ಉತ್ಪಾದನಾ ಸಹಕಾರ ಸಂಘಗಳ ಮಾದರಿಯಲ್ಲಿ ಬೀಜ ಸಂಗ್ರಹಣಾ ಕೇಂದ್ರಗಳನ್ನು ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ತೆರೆದು ಬೀಜ ಸಂಗ್ರಹಣೆಯನ್ನು ಮಾಡುವುದು ಸ್ಥಳಿಯವಾಗಿಯೇ ಯಂತ್ರಗಳನ್ನು ಬಳಸಿಕೊಂಡು ಬೀಜಗಳಿಂದ ಎಣ್ಣೆಯನ್ನು ಸಂಗ್ರಹಿಸಿ, ಸಂಸ್ಕರಿಸಿ, ಇಂಧನವಾಗಿ ಬಳಸು ವುದು. ಹಿಂಡಿಯನ್ನು ರೈತರಿಗೆ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಲು ಪೂರೈಸಿ ಉಪ ಉತ್ಪನ್ನಗಳನ್ನು ಗ್ಲಿಸರಿನ್, ಸಾಬೂನು ತಯಾರಿಕೆ, ಕ್ರಿಮಿನಾಶಕಗಳಾಗಿ ಬಳಸಬಹುದಾಗಿದೆ.  ಜೈವಿಕ ಇಂಧನ ಸಸಿಗಳು ವಾತಾವರಣದಲ್ಲಿನ ಕಾರ್ಬನ್ ಡೈ ಆಕ್ಸೈಡ್, ಮಾನಾಕ್ಸೈಡ್, ಗಂಧಕಾಮ್ಲಗಳನ್ನು ಹೀರಿಕೊಂಡು ಪರಿಸರ ಮಾಲಿನ್ಯವನ್ನು ಸಹ ತಡೆಗಟ್ಟುತ್ತಿವೆ.

ಭೂಮಿಯ ತಾಪಮಾನವನ್ನು ಕಡಿಮೆಗೊಳಿಸಿ ತಂಪಾದ ವಾತಾವರಣ ನಿರ್ಮಿಸಿ ಕೃಷಿಗೆ ಪೂರಕವಾದ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತದೆ.  ಎಣ್ಣೆ ಬೀಜಗಳ ಮಾರಾಟದಿಂದ ರೈತರಿಗೆ ನೆರವಾದ ಆರ್ಥಿಕ ಲಾಭ ಗ್ರಾಮೀಣ ಮಟ್ಟದಲ್ಲಿ ಜನರಿಗೆ ಉದ್ಯೋಗಾವಕಾಶಗಳ ನಿರ್ಮಾಣ ವಿದ್ಯುತ್ ಉತ್ಪಾದನೆ, ಟ್ರಾಕ್ಟರ್ ನೀರೆತ್ತುವ ಪಂಪುಗಳು, ಜನರೇಟರ್‌ಗಳಲ್ಲಿ ಜೈವಿಕ ಇಂಧನವನ್ನು ಬಳಸಲಾಗುತ್ತದೆ. ಪೆಟ್ರೋಲಿಯಂ ಇಂಧನದ ಆಮದು ಪ್ರಮಾಣವನ್ನು ಕಡಿಮೆ ಮಾಡುವುದಲ್ಲದೆ ವಿದೇಶಿ ವಿನಿಮಯದಲ್ಲಿ ಗಮನಾರ್ಹ ಉಳಿತಾಯ ಮಾಡಬಹುದಾಗಿದೆ. 

ಬರಡು ಬಂಗಾರ ಯೋಜನೆಯಲ್ಲಿ ಸರಕಾರದ ಭೂಮಿಯಲ್ಲಿ ಗೋಮಾಳ, ಸ್ಮಶಾನ, ಕೆರೆ ಅಂಗಳ, ಶಾಲಾ ಆವರಣ, ರಸ್ತೆಯ ಬದಿಗಳಲ್ಲಿ ಜೈವಿಕ ಇಂಧನ ಸಸಿಗಳನ್ನು ಸಾಮಾಜಿಕ ಅರಣ್ಯವಲಯದ ಮುಖೇನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯತ್ ಮುಖಾಂತರ ರೈತ ಸಮುದಾಯವನ್ನು ತೊಡಗಿಸಿಕೊಂಡು ನಡೆಸುವ ಕಾರ್ಯಕ್ರಮ ಕಾರ್ಯಗತಗೊಳಿಸುತ್ತದೆ.  ಈಗಾಗಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 2,000 ಬಸ್ಸುಗಳು ಜೈವಿಕ ಇಂಧನ ಮತ್ತು ಎಥೆನಾಲ್ ಮಿಶ್ರಿತ ಇಂಧನದಿಂದ ಚಾಲನೆಯಾಗುತ್ತಿವೆ. ಇವು ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೆಡ್‌ನ್ನು ಬಿಡುಗಡೆ ಮಾಡದೆ ಪರಿಸರ ಸ್ನೇಹಿಯಾಗಿ ವರ್ತಿಸುತ್ತಿವೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಹನಗಳು ಜೈವಿಕ ಇಂಧನ ಮಿಶ್ರಣವನ್ನು ಬಳಸುತ್ತಿವೆ.  ಇನ್ನು ಮುಂದೆ ಎಲ್ಲಾ ವಾಹನಗಳನ್ನು ಜೈವಿಕ ಇಂಧನದಿಂದಲೇ ಚಲಿಸುವಂತೆ ಮಾಡಬೇಕೆಂಬ ಗುರಿಯನ್ನು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಹೊಂದಿದೆ.  ಹಸಿರುಕ್ರಾಂತಿ, ಕ್ಷೀರಕ್ರಾಂತಿಗಳ ಹರಿಕಾರರಾಗಿರುವ ರೈತರೆ ಜೈವಿಕ ಇಂಧನ ಕ್ರಾಂತಿಯನ್ನು ಮಾಡಲು ಸಹಕರಿಸಬೇಕೆಂಬ ದಿವ್ಯ ನಿಲುವನ್ನು ಹೊಂದಿದ್ದು ಸಸಿ ನೆಡುವುದರಿಂದ ಪಾಲನೆ, ಪೋಷಣೆ, ನಿರ್ವಹಣೆಗಳನ್ನು ಮಾಡಿ ಅದರಿಂದ ಬಂದ ಬೀಜಗಳನ್ನು ಹಾಲು ಉತ್ಪಾದಕ ಸಹಕಾರ ಸಂಘಗಳ ಮಾದರಿಯಲ್ಲಿ ಸಂಗ್ರಹಿಸಿ ಸಂಸ್ಕರಿಸಿ ಸ್ಥಳೀಯವಾಗಿಯೇ ಬಳಸುವಂತೆ ಮಾಡಿ ಜೈವಿಕ ಇಂಧನವು ಜಗತ್ತಿನ ಇಂಧನವಾಗಿ ಎಲ್ಲಾ ಅಭಿವೃದ್ಧಿ ಚಟುವಟಿಕೆಗಳ ಮೂಲಾಧಾರವಾಗಿ ನಕರಿಸಬಹುದಾದ ಸಂಪನ್ಮೂಲವಾಗಿ ಬೆಳೆಸಬೇಕು ಎಂಬ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಕಾರ್ಯನಿರ್ವಹಿಸುತ್ತಾ ಬಂದಿದೆ.

ಜೈವಿಕ ಇಂಧನದ ಮರಗಳನ್ನು ಬೆಳೆಸುವುದರಿಂದ ಮಣ್ಣಿನ ಸವಕಳಿಯನ್ನು ತಡೆಗಟ್ಟ ಬಹುದು.  ಮಣ್ಣಿನ ತೇವಾಂಶ ಕಾಪಾಡುವುದ ರೊಂದಿಗೆ ಆ ಪ್ರದೇಶವನ್ನು ನಿತ್ಯ ಹಸಿರಾಗಿಸಬಹುದು. ಅಂತರ್ಜಲ ಪುನಶ್ಚೇತನಕ್ಕೆ ಸಹಕಾರಿ ಆಗಿ ರಾಸಾಯನಿಕ ಗೊಬ್ಬರಗಳಿಂದ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟುತ್ತದೆ.ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಜೈವಿಕ ಇಂಧನ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ವಿವಿಧ ಪ್ರದೇಶ ಗಳಿಗೆ ಯೋಗ್ಯವಾದ ಜೈವಿಕ ಇಂಧನ ಸಸಿಗಳನ್ನು ಬೆಳೆಸಲು ಕೃಷಿಯೇತರ ಭೂಮಿಯನ್ನು ಗುರುತಿಸುವುದು, ಜೈವಿಕ ಎಥೆನಾಲ್ ಉತ್ಪಾದನೆಗಾಗಿ ಕಬ್ಬು, ಬೀಟ್‌ರೂಟ್, ಗೋವಿನ ಜೋಳ ಮುಂತಾದ ಬೆಳೆಗಳ ಬೇಸಾಯವನ್ನು ಪ್ರೋತ್ಸಾಹಿಸಿ ಜೈವಿಕ ಇಂಧನ ಮತ್ತು ಉಪ ಉತ್ಪನ್ನಗಳ ಬಳಕೆಗೆ ಪ್ರೋತ್ಸಾಹಿಸಿ ಈ ನಿಟ್ಟಿನಲ್ಲಿ ಸುವರ್ಣಭೂಮಿ ಹಸಿರು ಹೊನ್ನು ಬರಡು ಬಂಗಾರ, ಹಸಿರು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ.

ಹಸಿರು ಹೊನ್ನು ಯೋಜನೆ ಅಡಿಯಲ್ಲಿ ರೈತರು ತಮ್ಮ ಕೃಷಿಯೇತರ ಜಮೀನಿನಲ್ಲಿ ಸಸಿಗಳನ್ನು ನೆಡಲು ಪ್ರೋತ್ಸಾಹಿಸಿ ಹೊಂಗೆ ಸಸಿಗಳನ್ನು ಗ್ರಾಮ ಪಂಚಾಯತ್‌ನಲ್ಲಿ ಉದ್ಯೋಗ ಚೀಟಿ ಹೊಂದಿರುವ ಸಣ್ಣ ಮತ್ತು ಮಾಧ್ಯಮ ವರ್ಗದ ರೈತಾಪಿ ವರ್ಗದವರಿಗೆ ಪೂರೈಸುತ್ತದೆ.  ನಿರ್ವಹಣೆಗೆ ಸಹ ಹಣಕಾಸಿನ ನೆರವನ್ನು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅವಕಾಶ ಕಲ್ಪಿಸಿದೆ. ಸುವರ್ಣಭೂಮಿ ಯೋಜನೆ ಅಡಿಯಲ್ಲಿ 5 ಎಕರೆ ಜಮೀನು ಹೊಂದಿರುವ ಸಣ್ಣ ರೈತರಿಗೆ ರೂ.10,000 ಸಹಾಯ ಧನ ನೀಡುವ ಮೂಲಕ ಜೈವಿಕ ಇಂಧನ ಸಸಿಗಳಾದ ಹೊಂಗೆ ಬೇವು, ಸಿಮರೂಬ ಸಸಿಗಳನ್ನು ಹೊಲದ ಬದುಗಳಲ್ಲಿ ಕೃಷಿಗೆ ಪೂರಕವಾಗಿ ಬೆಳೆಸಲು ಸೂಚಿಸಿದೆ.  ಗ್ರಾಮಮಟ್ಟದಲ್ಲಿ ರೈತರು ತಮ್ಮ ಕೃಷಿಯೇತರ ಭೂಮಿಯಲ್ಲಿ ಜೈವಿಕ ಇಂಧನ ಸಸಿಗಳನ್ನು ನೆಡಬೇಕು.

ಸುವರ್ಣಭೂಮಿ, ಹಸಿರುಹೊನ್ನು, ಬರಡುಬಂಗಾರ  ಯೋಜನೆಗಳ ಅಡಿಯಲ್ಲಿ  ಅನುಕೂಲಗಳನ್ನು ಸರಿಯಾಗಿ ಬಳಸಿಕೊಂಡು ಸರಕಾರಿ ಬರಡುಭೂಮಿ ಕೆರೆ ಅಂಗಳದಲ್ಲಿ ಸಸಿ ನೆಡಲು ತನ್ನನ್ನು ತೊಡಗಿಸಿಕೊಳ್ಳಬೇಕು ಎಂಬುದು ಮಂಡಳಿಯ ಆಶಯವಾಗಿದೆ. ಕರ್ನಾಟಕ ಸರಕಾರದ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಜೈವಿಕ ಇಂಧನ ಕಾರ್ಯಕ್ರಮಗಳ ಅನುಷ್ಠಾನದ ಜವಾಬ್ದಾರಿಯನ್ನು ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡಿದೆ.  ಸ್ವಯಂ ಸೇವಾ ಸಂಸ್ಥೆಗಳು ಗ್ರಾಮ ಮಟ್ಟದಲ್ಲಿ ರೈತ ಸಮುದಾಯವನ್ನು ಈ ಕಾರ್ಯಕ್ರಮಗಳಲ್ಲಿ ಸಂಪೂರ್ಣವಾಗಿ ತೊಡಗಿಸಿ ರೈತ ಸಮುದಾಯ ಮತ್ತು ಇಲಾಖೆಗಳ ನಡುವೆ ಸಾಮರಸ್ಯವನ್ನು ಸಾಧಿಸಿ ಜೈವಿಕ ಇಂಧನ ಸಸಿಗಳನ್ನು ನೆಡುವ, ನಿರ್ವಹಿಸುವ, ಅದರಿಂದಾಗುವ ಅನುಕೂಲತೆಯ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ಮುಂದಾಗಬೇಕಿದೆ. 

ಈ ಕಾರ್ಯಕ್ರಮಗಳ ಅನುಷ್ಠಾನ ಮಾಡಲು ಬೆಂಗಳೂರು ನಗರ ಜಿಲ್ಲೆಯಲ್ಲಿ ಸಾಧನಾ ಸಂಸ್ಥೆಯನ್ನು ಜಿಲ್ಲಾ ಮುಂದಾಳು ಸ್ವಯಂ ಸೇವಾ ಸಂಸ್ಥೆ ಆಗಿ ಗುರುತಿಸಿ ಸಂಸ್ಥೆಯು ಕಾರ್ಯಕ್ರಮದ ಅನುಷ್ಠಾನ, ಕಾರ್ಯರೂಪಕ್ಕೆ ತರಲು ಸದಾ ಕಾರ್ಯಾಚರಣೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.  ಸಮಾಜದಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಯಾವುದಾದರೊಂದು ಒಳ್ಳೆಯ ಕೆಲಸ ಮಾಡಬೇಕೆಂದಿದ್ದರೆ,  ಒಂದು ಜೈವಿಕ ಇಂಧನ ಸಸಿ ನೆಡಲು ಮುಂದಾದರೆ ಅದರಷ್ಟು ಒಳ್ಳೆಯ ಕೆಲಸ  ಮತ್ತೊಂದಿಲ್ಲದಂತಿದೆ.  ಮನೆಯ ಮುಂದೆಯಾಗಲಿ ಅಕ್ಕಪಕ್ಕದಲ್ಲಾಗಲಿ ಒಂದು ಹೊಂಗೆ ಮರವನ್ನು ನೆಡುವುದರಿಂದ ಪರಿಸರ ಶುಭ್ರವಾಗಿರುತ್ತದೆ. 

ತಂಪಾದ ವಾತಾವರಣ ಇರುತ್ತದೆ ಮತ್ತು ತಮ್ಮಲ್ಲಿ ವಾಹನಗಳು ಲಭ್ಯವಿದ್ದರೆ ಅವುಗಳಿಗೆ ಇಂಧನವಾಗಿ ಹೊಂಗೆ ಬೀಜದ ಎಣ್ಣೆಯನ್ನು ಸಂಸ್ಕರಿಸಿ ಬಳಸಬಹುದಾಗಿರುತ್ತದೆ.  ಮುಂದೊಂದು ದಿನ ಇಂಧನದ ಅಭಾವವಂತೂ ತಪ್ಪಿದ್ದಲ್ಲ. ಆದ್ದರಿಂದ ಪ್ರತಿಯೊಬ್ಬ ಮನುಷ್ಯನು ಜೈವಿಕ ಇಂಧನದ ಸಸಿಗಳನ್ನು ನೆಡಲು, ನೆಡಿಸಲು ನಿರ್ವಹಿಸಲು ಮುಂದಾಗಿದ್ದೇ ಆದರೆ ಒಂದು ಒಳ್ಳೆಯ ಸ್ವಾವಲಂಬಿ ಸಮಾಜದ ನಿರ್ಮಾಣಕ್ಕೆ ಕಾರಣವಾಗುತ್ತಾನೆ.   


Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಜನಸಂಖ್ಯೆ ಹೆಚ್ಚಳದ ಪರಿಣಾಮ

ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮನೋಲ್ಲಾಸದ ನಾಲೆಗಳು: (ಭಾಗ-2)

ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...


- ಶೂದ್ರ ಶ್ರೀನಿವಾಸ್

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್