ಅಂಕಣ - ಬುಡಬುಡಿಕೆ

mail-img print-img

ಅದರಿಂದ ದೇಶ ಸರಿಯಾಗತ್ತ ಸಾರ್?

ರವಿವಾರ - ಸೆಪ್ಟೆಂಬರ್ -09-2012

‘‘ಭಾರತ ಸೇನೆಯನ್ನು ನನ್ನ ಕೈಗೆ ಕೊಡಿ. ನಾನು ಭಾರತವನ್ನು ಸರಿಪಡಿಸುತ್ತೇನೆ...’’ ಬಾಳಠಾಕ್ರೆ ಹೇಳಿದ್ದೇ.. ಎಂಜಲು ಕಾಸಿ ಮಹಾರಾಷ್ಟ್ರಕ್ಕೆ ಓಡಿ, ಅಲ್ಲಿನ ಖಾಸಗಿ ಆಸ್ಪತ್ರೆಯ ಐಸಿಯುವನ್ನು ಪ್ರವೇಶಿಸಿದ. ಕಾಸಿಯನ್ನು ನೋಡಿದ್ದೇ, ವೈದ್ಯರು ಬಾಳಾಠಾಕ್ರೆಯ ಉಸಿರಾಡುತ್ತಿದ್ದ ಆಕ್ಸಿಜನ್‌ನ್ನು ತೆಗೆದರು. ಕಾಸಿಗೆ ಹೆದರಿಕೆಯಾಯಿತು ‘‘ಡಾಕ್ಟರ್...ಆಕ್ಸಿಜನ್ ತೆಗೆದರೆ ಅವರು ಉಸಿರಾಡುವುದು ಹೇಗೆ?’’ ‘‘ಚಿಂತೆ ಬೇಡ. ಪತ್ರಕರ್ತರನ್ನು ನೋಡಿದಾಗ ಅವರು ಉಸಿರಾಡಲು ಶುರು ಮಾಡುತ್ತಾರೆ... ಪತ್ರಕರ್ತರಿಲ್ಲದೇ ಇದ್ದಾಗ ಅವರಿಗೆ ಉಸಿರಾಟದ ತೊಂದರೆ ಶುರುವಾಗತ್ತೆ...’’ ಎನ್ನುತ್ತಾ ಅದಾಗಲೇ ಹೊಸದಾಗಿ ಮಾಡಿದ ಹುಲಿಯ ಕೋರೆಹಲ್ಲಿನ ಸೆಟ್ಟನ್ನು ಠಾಕ್ರೆಯ ಕೈಗೆ ಕೊಟ್ಟರು. ಅವರು ಕೋರೆ ಹಲ್ಲಿನ ಸೆಟ್ಟನ್ನು ಬಾಯಿಯೊಳಗೆ ಧರಿಸಿಕೊಂಡರು. ಹಲ್ಲಿನ ಸೆಟ್ ಧರಿಸಿದ್ದೇ ‘ಗುರ್ರ್‌ ಗುರ್ರ್‌’ ಎಂದು ಗರ್ಜಿಸತೊಡಗಿದರು. ಕಾಸಿ ಆ ಹುಲಿಯ ಗರ್ಜನೆಗೆ ಹೆದರತೊಡಗಿದ.

ಡಾಕ್ಟರ್ ಸಮಾಧಾನಿಸಿದರು ‘‘ಹೆದರಬೇಡಿ... ಕಾಸಿಯವ್ರೇ...ಅವರಿಗೆ ಇತ್ತೀಚೆಗೆ ಅಸ್ತಮಾ ಜಾಸ್ತಿಯಾಗಿದೆ...ಅದರ ಸದ್ದು ಹೊರ ಬರ್ತಾ ಇದೆ ಅಷ್ಟೇ...’’ ಎಂದು ಅಲ್ಲಿಂದ ಹೊರಟರು.‘‘ಸಾರ್ ಸೇನೆಯನ್ನು ಕೊಟ್ರೆ...ಎಲ್ಲವನ್ನು ಸರಿಪಡಿಸು ತ್ತೇನೆ ಎಂದಿದ್ದೀರಿ....ಯಾವ ಸೇನೆ ಸಾರ್? ಉದ್ಧವ್ ಠಾಕ್ರೆಯವರ ಸೇನೆಯೋ, ರಾಜ್ ಠಾಕ್ರೆಯವರ ಶಿವಸೇನೆಯೋ?’’ ಕಾಸಿ ಆಸಕ್ತಿಯಿಂದ ಕೇಳಿದ. ಆ ಪ್ರಶ್ನೆಯನ್ನು ಕೇಳಿದ್ದೇ ಅವರ ಅಸ್ತಮಾ ಇನ್ನಷ್ಟು ಜೋರಾಗಿ ‘ಗುರ್ರ್‌’ ‘ಗುರ್ರ್‌’ ಎಂದು ಗರ್ಜಿಸತೊಡಗಿದರು.

‘‘ಕಾಸಿಯವ್ರೇ...ನೀವು ಕರ್ನಾಟಕದಿಂದ ಬಂದಿದ್ದೀರಿ. (ಕೆಮ್ಮು) ಅದಕ್ಕೆ ಇಂತಹ ಪ್ರಶ್ನೆ ಕೇಳ್ತಾ ಇದ್ದೀರಿ...ನನ್ನ ಬಳಿ ಶಿವಸೇನೆಯ ಸೈನಿಕರಿರುವಾಗ ನಾನೇಕೆ ರಾಜ್‌ಠಾಕ್ರೆಯ ಸೇನೆಯನ್ನು ಕೈಗೆ ಕೊಡಿ ಎಂದು ಕೇಳಲಿ...’’‘‘ಆದ್ರೆ ಶಿವಸೇನೆ ನಿಮ್ಮ ಕೈಯಲ್ಲಿಲ್ಲ ಎನ್ನೋದು ಸುದ್ದಿ. ಇದೀಗ ರಾಜ್‌ಠಾಕ್ರೆಯ ಕೈಯಲ್ಲಿದೆಯಂತಲ್ಲ...’’ ಕಾಸಿ ಗಾಯಕ್ಕೆ ಉಪ್ಪು ಹಾಕಿ ಉಜ್ಜಿದ.ಬಾಳಾಠಾಕ್ರೆಯ ಅಸ್ತಮಾ ಮತ್ತೆ ಏರ ತೊಡಗಿತು. ಕೆಮ್ಮುತ್ತಾ ಮಾತನಾಡಿದರು ‘‘ನಾನು ಭಾರತದ ಸೇನೆಯನ್ನು ನನ್ನ ಕೈಗೆ ಕೊಡಿ... ಸರಿಪಡಿಸುವೆ ಎಂದು ಹೇಳಿದ್ದು...’’ ಎಂದು ಸ್ಪಷ್ಟಪಡಿಸಿದರು.‘‘ಅಂದರೆ, ಶಿವಸೇನೆಯನ್ನು ಸರಿಪಡಿಸಬೇಕಾದರೆ ಭಾರತದ ಸೇನೆಯ ಪ್ರವೇಶ ಅತ್ಯಗತ್ಯವೆ? ಶಿವಸೇನೆ ಅಷ್ಟು ಕೆಟ್ಟಿದೆಯೆ?’’ ಕಾಸಿ ಪ್ರಶ್ನೆಯನ್ನು ಗೊಂದಲಗೊಳಿಸಿ ಕೇಳಿದ.ಠಾಕ್ರೆ ಸಿಟ್ಟಾದರು ‘‘ನಾನು ಭಾರತವನ್ನು ಸರಿಪಡಿಸು ತ್ತೇನೆ ಎಂದದ್ದು. ಶಿವಸೇನೆಯನ್ನಲ್ಲ... ಭಾರತದ ಸೇನೆಯನ್ನು ನನ್ನ ಕೈಗೆ ಕೊಟ್ಟರೆ ಇಡೀ ಭಾರತವನ್ನು ಕೆಲವೇ ಕ್ಷಣಗಳಲ್ಲಿ ಸರಿಪಡಿಸಿಕೊಡುತ್ತೇನೆ...’’

‘‘ಅಂದರೆ ಭಾರತೀಯ ಸೇನೆಯನ್ನು ಬಳಸಿಕೊಂಡು ಶಿವಸೇನೆಯ ಕಾರ್ಯಕರ್ತರನ್ನೆಲ್ಲ ಬಗ್ಗು ಬಡಿಯುತ್ತೀರಿ ಅಂತಾಯ್ತು...’’ ಕಾಸಿ ಪ್ರಶ್ನಿಸಿದ.
‘‘ಶಿವಸೇನೆಯ ಕಾರ್ಯಕರ್ತರನ್ನೇಕೆ ಬಗ್ಗು ಬಡಿಯಲಿ?(ಕೆಮ್ಮು)’’ ಠಾಕ್ರೆ ಸಿಟ್ಟಿನಿಂದ ಕೇಳಿದರು.
‘‘ಅದೇ ಸಾರ್...ಭಾರತವನ್ನು ಸರಿಪಡಿಸಲು...’’
‘‘ನಮ್ಮ ಶಿವಸೇನೆ ಇದ್ದುದರಿಂದ ಭಾರತ ಇಷ್ಟಾದರೂ ಇದೆ....ಸೇನೆಯನ್ನು ಒಮ್ಮೆ ಕೊಟ್ಟು ನೋಡಿ ನನ್ನ ಕೈಗೆ...’’ ಎಂದು ಅಸ್ತಮಾದಿಂದ ಏದುಸಿರು ಬಿಡತೊಡಗಿದರು.

‘‘ಸೇನೆ ಸಿಕ್ಕಿದರೆ ಏನು ಮಾಡುತ್ತೀರಿ....?’’ ಕಾಸಿ ತಮಾಷೆಯ ಪ್ರಶ್ನೆಯೊಂದನ್ನು ಹಾಕಿದ.
‘‘ಸೇನೆಯನ್ನು ಬಳಸಿಕೊಂಡು ಬಿಹಾರಿಗಳನ್ನು ಬಿಹಾರಕ್ಕೆ, ಮದ್ರಾಸಿಗಳನ್ನು ಮದ್ರಾಸಿಗೆ, ಕನ್ನಡಿಗರನ್ನು ಕರ್ನಾಟಕಕ್ಕೆ... ಓಡಿಸುತ್ತೇನೆ...’’ ಠಾಕ್ರೆ ಉಗ್ರವಾಗಿ ಏದುಸಿರು ಬಿಡುತ್ತಾ ಹೇಳಿದರು.
‘‘ಅದರಿಂದ ದೇಶ ಸರಿಯಾಗತ್ತ ಸಾರ್?’’ ಕಾಸಿ ಕೇಳಿದ.
‘‘ಹೌದು...ನನ್ನ ಭಾರತ ಮುಂಬೈಯೊಳಗೆ ಇರುವುದರಿಂದ, ನನ್ನ ದೇಶ ಸರಿಯಾಗತ್ತೆ...ಏನೀಗ? ಹಾಗೆಯೇ ಸೇನೆಯನ್ನು ಬಳಸಿಕೊಂಡು ಮುಂದಿನ ಚುನಾವಣೆಯನ್ನು ಗೆದ್ದು ದೇಶದ ಪ್ರಧಾನಿಯಾಗಬೇಕು ಎಂದಿದ್ದೇನೆ....ಆಮೇಲೆ ನಾನು ನೇರವಾಗಿ ಪಾಕಿಸ್ತಾನದ ಮೇಲೆ ಯುದ್ಧ ಮಾಡ್ತೇನೆ...’’
‘‘ಪಾಕಿಸ್ತಾನದ ಮೇಲೆ ಯುದ್ಧ ಮಾಡಿದರೆ ಭಾರತ ಸರಿಯಾಗತ್ತ ಸಾರ್?’’ ಕಾಸಿ ಕೇಳಿದ.
‘‘ಭಾರತದ ಎಲ್ಲ ಸಮಸ್ಯೆಗಳಿಗೆ ಪಾಕಿಸ್ತಾನವೇ ಕಾರಣ... ಆದುದರಿಂದ ಯುದ್ಧ ಮಾಡಿದರೆ ಎಲ್ಲ ಸರಿಯಾಗತ್ತೆ’’ ಠಾಕ್ರೆ ಹೂಂಕರಿಸಿದರು.

‘‘ನಿಮ್ಮ ಸದ್ಯದ ಆರೋಗ್ಯದ ಸಮಸ್ಯೆಗೂ ಪಾಕಿಸ್ತಾನವೇ ಕಾರಣವಾ ಸಾರ್? ಸೇನೆ ಕೊಟ್ರೆ ನಿಮ್ಮ ಆರೋಗ್ಯದಲ್ಲಿ ಸುಧಾರಣೆಯಾಗತ್ತ ಸಾರ್?’’ ಕಾಸಿ ಮುಗ್ಧವಾಗಿ ಕೇಳಿದ.
‘‘ನನ್ನ ಆರೋಗ್ಯಕ್ಕೇನಾಗಿದೆ...ನಾನು ಇನ್ನೂ ಯುವಕನಾಗಿಯೇ ಇದ್ದೇನೆ(ಕೆಮ್ಮು)...ಸೇನೆಯನ್ನು ಕೊಟ್ಟು ನೋಡಿ...’’ ಠಾಕ್ರೆ ಹೇಳಿದರು.
‘‘ಅದು ಮಂಗನಿಗೆ ಹೆಂಡ ಕುಡಿಸಿದ ಹಾಗೆ ಆಗ್ಲಿಕ್ಕಿಲ್ಲವಾ ಸಾರ್?’’ ಕಾಸಿ ಧೈರ್ಯ ಮಾಡಿ ಕೇಳಿದ.
ಠಾಕ್ರೆ ಅಸ್ತಮಾ ಮತ್ತೆ ಜಾಸ್ತಿಯಾಯಿತು...‘‘ಈ ಪ್ರಶ್ನೆಯನ್ನು ನೀವು 20 ವರ್ಷ ಕೆಳಗೆ ಕೇಳಿದ್ದರೆ ಆಗ ನಿಮ್ಮ ಸ್ಥಿತಿ ಹೀಗಿರುತ್ತಿರಲಿಲ್ಲ...ಇರಲಿ...ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ...’’ ಠಾಕ್ರೆ ವಿಷಾದದಿಂದ ನುಡಿದರು.

‘‘ಹಾಗಲ್ಲ ಸಾರ್...ಮಾವನಿಗೊಂದು ಕಾಲ... ಸೋದರಳಿಯನಿಗೊಂದು ಕಾಲ...’’ ಕಾಸಿ ತಿದ್ದಿದ.
‘‘ಹೂಂ...ಏನೋ ಒಂದು...’’
‘‘ಹಾಗಲ್ಲ ಸಾರ್...ಈಗ ನೀವು ಕೇಳಿದಾಕ್ಷಣ ಸೇನೆಯನ್ನು ನಿಮಗೆ ಕೊಡ್ತಾರ ಸಾರ್?’’
‘‘ದೇಶ ಉಳೀಬೇಕು ಅಂತಂದ್ರೆ ನನ್ನ ಕೈಗೆ ಸೇನೆಯನ್ನು ಕೊಡ್ಬೇಕು. ಇದಕ್ಕಾಗಿ ನಾನು ಶೀಘ್ರದಲ್ಲಿ ಸೇನಾಧಿಕಾರಿಗಳ ಜೊತೆಗೆ ಮಾತುಕತೆ ನಡೆಸಲಿದ್ದೇನೆ....’’
‘‘ಯಾವ ಸೇನಾಧಿಕಾರಿ ಸಾರ್?’’ ಕಾಸಿ ಆತಂಕದಿಂದ ಕೇಳಿದ.
‘‘ಅದೇ ಕಣ್ರೀ...ಕರ್ನಲ್ ಪುರೋಹಿತ್...’’

‘‘ಸಾರ್...ಅವನು ಸೇನಾಧಿಕಾರಿ ಅಲ್ಲ ಸಾರ್... ಸೇನೆಯಲ್ಲಿದ್ದ ಉಗ್ರ ಸಾರ್....’’ ಕಾಸಿ ಎಚ್ಚರಿಸಿದ.
‘‘ನಮ್ಗೆ ಕರ್ನಲ್...ಮುಂದೆ ಈ ದೇಶವನ್ನು ಸರಿಪಡಿಸಿದ ಬಳಿಕ ಅವನನ್ನು ನಾವು ಮೂರೂ ಸೇನಾವಿಭಾಗದ ಮುಖ್ಯ ಚೀಫ್ ಮಾಡಬೇಕೆಂದಿ ದ್ದೇವೆ...ಯಾಕೆಂದರೆ ದೇಶ ಸರಿಯಾಗಿರಬೇಕು ನೋಡಿ...’’ ಠಾಕ್ರೆ ಹೇಳಿದರು.
ಎಂಜಲು ಕಾಸಿ ‘‘ಡಾಕ್ಟರ್ ಡಾಕ್ಟರ್...’’ ಎಂದು ಕರೆದ.
ಡಾಕ್ಟರ್ ಓಡೋಡಿ ಬಂದರು. ‘‘ಏನ್ರೀ... ಏನಾಯ್ತು...’’ ಡಾಕ್ಟರ್ ಕೇಳಿದರು.
‘‘ಸಾರ್...ಇಲ್ಲಿಂದ ತಕ್ಷಣ ಇವರನ್ನು ಯಾವುದಾದ್ರೂ ಮೆಂಟಲ್ ಹಾಸ್ಪಿಟಲ್‌ಗೆ ಶಿಪ್ಟ್ ಮಾಡಿ ಈ ದೇಶವನ್ನು ಹೇಗಾದರೂ ಇವರ ಕೈಯಿಂದ ರಕ್ಷಿಸಿ ಸಾರ್...’’ ಎಂದು ಜೋರಾಗಿ ಹೇಳಿದ.
ಅದನ್ನು ಕೇಳಿದ್ದೇ ಠಾಕ್ರೆಯ ಅಸ್ತಮಾ ಇನ್ನಷ್ಟೂ ಜೋರಾಗಿ, ಉಸಿರಾಟ ಕಷ್ಟವಾಯಿತು.

 

chelayya@gmail.com

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮುಂಗಾರಿನ ಆಗಮನ:ಸರಕಾರ ಜೋಪಾನ

ರಾಜ್ಯಾದ್ಯಂತ ಮಳೆ ಚುರುಕುಗೊಳ್ಳುತ್ತಿದೆ. ಈ ಸಾಲಿನಲ್ಲಿ ಮಳೆ ನಿರೀಕ್ಷೆಯಷ್ಟು ಬರದೆ ಇದ್ದರೂ, ಮುಂದಿನ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ರಾಜ್ಯಾದ್ಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್

ಅಕ್ಷರ ಸೇವೆಯಿಂದ ಜನಸೇವೆಗೆ;ತೆಂಕಮಿಜಾರಿನ ಮುತ್ತು

ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...


- ಪ್ರೇಮಶ್ರೀ ಕಲ್ಲಬೆಟ್ಟು