ಅಂಕಣ - ಪ್ರಚಲಿತ

mail-img print-img

ಮಾಧ್ಯಮ ಮೂಲವ್ಯಾಧಿಗಳು ಮತ್ತು ಶಂಕಿತ ಉಗ್ರರು

ಸೋಮವಾರ - ಸೆಪ್ಟೆಂಬರ್ -10-2012

ಕರ್ನಾಟಕದ ಮಾಧ್ಯಮರಂಗದ ಮೂವರನ್ನು ಕೊಲ್ಲಲು ಶಂಕಿತ ಭಯೋತ್ಪಾದಕರು ನಡೆಸಿದ ಸಂಚು ಬಯಲಾದಾಗ ನಾನು ಮಹಾರಾಷ್ಟ್ರದ ಅಹಮದ್‌ನಗರದಲ್ಲಿ ಇದ್ದೆ. ಅಲ್ಲಿ ಯಾವ ಕನ್ನಡ ಪತ್ರಿಕೆಗಳು ಸಿಗುವುದಿಲ್ಲ. ನಾನು ಇಳಿದುಕೊಂಡ ಕಡೆ ಟಿವಿಯೂ ಇರಲಿಲ್ಲ. ಆದರೆ ವಿವಿಧ ಕನ್ನಡ ಚಾನೆಲ್‌ಗಳು ಈ ಬಗ್ಗೆ ರೋಚಕ ವರದಿಗಳನ್ನು ಬಿತ್ತರಿಸುತ್ತಿವೆ ಎಂದು ಕೆಲ ಗೆಳೆಯರು ಫೋನ್ ಮಾಡಿ ಹೇಳಿದರು. ಶಂಕಿತ ಉಗ್ರರ ಹಿಟ್‌ಲಿಸ್ಟ್‌ನಲ್ಲಿ ಇರುವ ಹೆಸರುಗಳನ್ನು ಕೇಳಿ ನನಗೂ ದಿಗಿಲಾಯಿತು. ಫೋನ್ ಮಾಡಿದ ಗೆಳೆಯರು ಈ ಬಗ್ಗೆ ನಿಮಗೇನು ಅನ್ನಿಸುತ್ತಿದೆ ಎಂದು ಕೇಳಿದರು. ಆಗ ನನ್ನ ಬಾಯಿಯಿಂದ ಬಂದ ಸಹಜ ಮಾತು, ಇದೆಲ್ಲ ಬಿಜೆಪಿ ಸರಕಾರದ ಕುತಂತ್ರ. ನಾನಾ ಹಗರಣಗಳಲ್ಲಿ ಸಿಲುಕಿ ಆಂತರಿಕ ಕಚ್ಚಾಟದಲ್ಲಿ ವಿಲಿವಿಲಿ ಒದ್ದಾಡುತ್ತಿರುವ ಭ್ರಷ್ಟ ಕೋಮುವಾದಿ ಪಕ್ಷವೊಂದಕ್ಕೆ ಜನರ ಬಳಿ ಹೋಗಲು ಮುಖವಿಲ್ಲ. ಅದಕ್ಕಾಗಿ ಮತ್ತೆ ಹಿಂದೂ ವೋಟ್‌ಬ್ಯಾಂಕ್ ನಿರ್ಮಿಸಲು, ಜನರ ಗಮನ ಬೇರೆಡೆ ಸೆಳೆಯಲು ಸಂಘ ಪರಿವಾರ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದೆ ಎಂದೆ.ನನ್ನ ಸ್ನೇಹಿತರಿಗೂ ಈ ಮಾತು ಸರಿ ಅನ್ನಿಸಿತು. ನಂತರದ ಘಟನೆಗಳು ಅದನ್ನೇ ದೃಢ ಪಡಿಸತೊಡಗಿದವು.

ಕರ್ನಾಟಕದ ಪೊಲೀಸರ ಈ ಸಾಹಸಗಾಥೆ ಬಗ್ಗೆ ಕೇಳಿದಾಗ ಹಾಗೂ ಮಾಧ್ಯಮಗಳು ಈ ಪ್ರಕರಣವನ್ನು ವರದಿ ಮಾಡಿದ ಶೈಲಿಯನ್ನು ಗಮನಿಸಿದಾಗ ಪತ್ರಿಕಾ ಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಅವರು ಹೇಳಿದ ಮಾತೊಂದು ನೆನಪಿಗೆ ಬಂತು.2011ರ ಅಕ್ಟೋಬರ್ 10ರಂದು ದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ದಿಲ್ಲಿ, ಮುಂಬೈ, ಬೆಂಗಳೂರು ಅಲ್ಲದೇ ದೇಶದ ಯಾವುದೇ ಮೂಲೆಯಲ್ಲಿ ಬಾಂಬ್ ಸ್ಫೋಟವಾಗಲಿ ಮುಂದೆ ಒಂದೇ ತಾಸಿನಲ್ಲಿ ದೇಶದ ಟಿವಿ ಚಾನೆಲ್‌ಗಳಲ್ಲಿ ಬಾಂಬ್ ಸ್ಫೋಟವಾಗುತ್ತದೆ.

ಕಿರುತೆರೆಯ ಪರದೆ ಮೇಲೆ ಇಂಡಿಯನ್ ಮುಜಾಹಿದ್ದೀನ್, ಲಷ್ಕರ್-ಇ-ತಯ್ಯಿಬ, ಜೈಷ್-ಇ-ಮಹಮ್ಮದ್ ಈ ಸಂಘಟನೆಗಳ ಹೆಸರುಗಳು ಮೂಡುತ್ತವೆ. ಸ್ಫೋಟದ ಹೊಣೆಯನ್ನು ಹೊತ್ತು ಈ ಸಂಘಟನೆಗಳ ಹೆಸರಿನಲ್ಲಿ ಯಾರೇ ಇ-ಮೇಲ್ ಕಳುಹಿಸಿದರೂ ಟಿವಿ ಚಾನೆಲ್‌ಗಳು ಹಿಂದೆ-ಮುಂದೆ ನೋಡದೇ ಪ್ರಸಾರ ಮಾಡುತ್ತವೆ. ಸಾಮಾನ್ಯವಾಗಿ ಇವೆಲ್ಲ ಮುಸ್ಲಿಂ ಹೆಸರುಗಳನ್ನು ಹೊಂದಿರುತ್ತವೆ. ಈ ಸಂದೇಶವನ್ನು ಯಾವನೋ ಕಿಡಿಗೇಡಿ ಕಳುಹಿಸಿದರೂ ಸಾಕು ಅದರ ಮೂಲವನ್ನು ಪತ್ತೆ ಹಚ್ಚದೇ ಪ್ರಸಾರ ಮಾಡುವುದು ಟಿವಿಗಳ ಚಾಳಿಯಾಗಿದೆ ಎಂದು ಅವರು ಹೇಳಿದ್ದರು. ಬೆಂಗಳೂರಿಗೆ ವಾಪಸಾಗಿ ನಾಲ್ಕು ದಿನಗಳ ಪತ್ರಿಕೆಗಳನ್ನೆಲ್ಲ ತಿರುವಿ ಹಾಕಿದಾಗ, ನ್ಯಾಯಮೂರ್ತಿ ಕಟ್ಜು ಅವರ ಮಾತು ನೆನಪಿಗೆ ಬಂತು.

ಉಗ್ರರ ಹಿಟ್‌ಲಿಸ್ಟ್‌ನಲ್ಲಿದ್ದವರು ನರೇಂದ್ರಮೋದಿ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಕ್ಕಾಗಿ, ರಾಷ್ಟ್ರವಾದಿ ವಿಚಾರಗಳನ್ನು ಹೊಂದಿದ್ದಕ್ಕಾಗಿ ತಮಗೆ ಬೆದರಿಕೆ ಬಂದಿದೆ ಎಂದು ಹೇಳಿಕೊಂಡಿದ್ದರು. ಈ ಮೂವರನ್ನು ಮಾತ್ರವಲ್ಲ ಕೈಗಾ ಅಣುಸ್ಥಾವರವನ್ನು, ಮೆಟ್ರೊ ರೈಲು ನಿಲ್ದಾಣವನ್ನು, ಶೃಂಗೇರಿ ದೇವಾಲಯವನ್ನು ನಾಶ ಮಾಡಲು ಮುಸ್ಲಿಂ ಸಂಘಟನೆಗಳು ಸಂಚು ರೂಪಿಸಿವೆ ಎಂದು ಕೆಲ ಪತ್ರಿಕೆಗಳು ವರದಿ ಮಾಡಿದ್ದವು. ಈ ವರದಿಯ ಮೂಲ ಯಾವುದು ಎಂಬುದನ್ನು ಹೇಳಿರಲಿಲ್ಲ. ಪೊಲೀಸರು ಹೇಳಿದ್ದರೆ, ಅವರ ಹೆಸರು ಇರುತ್ತದೆ. ಆದರೆ ಖಚಿತ ಮೂಲಗಳು ಎಂಬ ಹೆಸರಿನಲ್ಲಿ ಇಂಥ ಕುಚೇಷ್ಟೆಯ ಸುದ್ದಿಗಳನ್ನು ಪ್ರಕಟಿಸುವುದು ರೋಗಗ್ರಸ್ಥ ಮನಸ್ಸುಗಳಿಂದ ಮಾತ್ರ ಸಾಧ್ಯ.

ಈ ರೀತಿ ಸುದ್ದಿಗಳು ಪ್ರಕಟವಾಗುವುದನ್ನು ಕಂಡು ರೋಸಿ ಹೋದ ಬೆಂಗಳೂರು ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ  ಪತ್ರಿಕೆಗಳ ಹಾಗೂ ಟಿವಿ ಚಾನೆಲ್ ಸಂಪಾದಕರ ಸಭೆ ಕರೆದರು. ಶೃಂಗೇರಿ ದೇವಾಲಯ, ಕೈಗಾ ಅಣುಸ್ಥಾವರ ಸ್ಫೋಟಗೊಳಿಸುತ್ತಾರೆ ಎಂಬುದು ಸುಳ್ಳು. ಈ ರೀತಿ ನಮ್ಮನ್ನು ಸಂಪರ್ಕಿಸದೇ ನಿರಾಧಾರ ವರದಿಗಳನ್ನು ಪ್ರಕಟಿಸಬೇಡಿ ಎಂದು ಮನವಿ ಮಾಡಬೇಕಾಗಿ ಬಂತು. ಆದರೆ ಗೃಹಸಚಿವ ಅಶೋಕ್ ಮಾತ್ರ ಭಯೋತ್ಪಾದಕರ ಬಗ್ಗೆ ವಿವರ ತಿಳಿಸಲು ಅತ್ಯುತ್ಸಾಹದಲ್ಲೇ ಇದ್ದರು. ವೆಬ್‌ಸೈಟ್ ಆರಂಭಿಸುವುದಾಗಿ ಹೇಳಿದರು. ಕೊನೆಗೆ ಕೇಂದ್ರ ಗೃಹಸಚಿವ ಖಾತೆ ಮಧ್ಯಪ್ರವೇಶಿಸಿ ಕರ್ನಾಟಕ ಸರಕಾರದ ಕಿವಿ ಹಿಂಡಿ, ಈ ರೀತಿ ಶಂಕಿತ ಉಗ್ರರ ಬಗ್ಗೆ ಸುದ್ದಿ ಸೋರಿಕೆಯಾಗಲು ಅವಕಾಶ ಕೊಡಬೇಡಿ ಎಂದು ಎಚ್ಚರಿಕೆ ನೀಡಿತು.

ಮಾಧ್ಯಮಗಳು ಜನರಿಗೆ ಸುದ್ದಿ ನೀಡಲು ಯಾರ ಆಕ್ಷೇಪವೂ ಇಲ್ಲ. ಆದರೆ ಯಾವುದೇ ಸುದ್ದಿ ಸಾಮಾಜಿಕ ಅಶಾಂತಿಗೆ ಕಾರಣ ವಾಗಬಾರದು. ಸುದ್ದಿಯಲ್ಲಿ ಜಾತಿ-ಕೋಮಿನ ದುರ್ವಾಸನೆ ಇರಬಾರದು. ಎಂದೂ ಭಯೋತ್ಪಾದಕ ಸಂಘಟನೆಗಳ ಚಟುವಟಿಕೆಗಳನ್ನು ಮೃದು ಧೋರಣೆ ತಾಳುವುದು, ಅಲ್ಪಸಂಖ್ಯಾತ ಯುವಕರನ್ನು ರಾಷ್ಟ್ರದ್ರೋಹಿ ಎಂದು ಬಿಂಬಿಸುವುದು ಪತ್ರಿಕಾಧರ್ಮವಲ್ಲ. ಸಂಘಪರಿವಾರಕ್ಕೆ ತನ್ನ ಅಜೆಂಡಾ ಜಾರಿಗೆ ತರಲು ಇಂಥ ಕಥೆ ಕಟ್ಟುವುದು ಅನಿವಾರ್ಯ ಆಗಿರಬಹುದು. ಆದರೆ ಮಾಧ್ಯಮದಲ್ಲಿ ಇರುವವರು ಬಿಜೆಪಿ ಏಜೆಂಟರಂತೆ ಕೆಲಸ ಮಾಡಬಾರದು. ಚುನಾವಣೆ ಸಮೀಪಿಸಿದಾಗ ಇಂಥ ಪ್ರಚೋದನಕಾರಿ ಚಟುವಟಿಕೆಗಳು, ವದಂತಿಗಳು ರಕ್ಕೆಪುಕ್ಕ ಪಡೆದುಕೊಳ್ಳುತ್ತವೆ ಎಂಬ ಎಚ್ಚರ ಇರಬೇಕು.

ಕಳೆದ ವಿಧಾನಸಭಾ ಚುನಾವಣೆಗೆ ಮುಂಚೆ ಅಂದರೆ 2008ರ ಮೇ 10ರಂದು ಹುಬ್ಬಳ್ಳಿಯ ಸಿವಿಲ್ ಕೋರ್ಟ್‌ನಲ್ಲಿ ಬಾಂಬ್ ಸ್ಫೋಟವಾಯಿತು. ಈ ಬಾಂಬ್ ಸ್ಫೋಟಕ್ಕೆ ಮುಸ್ಲಿಂ ಉಗ್ರರು ಕಾರಣವೆಂದು ಈಗಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಂದ ಹಿಡಿದು ಪ್ರಹ್ಲಾದ ಜೋಶಿ, ಪ್ರಮೋದ ಮುತಾಲಿಕ್ ವರೆಗೆ ಎಲ್ಲರೂ ಹಿಂದೂ ಭಾವನೆ ಕೆರಳಿಸಲು ಯತ್ನಿಸಿದರು. ಮಾಧ್ಯಮಗಳು ಕೂಡ ತಮ್ಮ ಪಾಲಿನ ಸೇವೆಯನ್ನು ಸಲ್ಲಿಸಿದವು. ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಲಾಯಿತು. ಅವರ ಪರವಾಗಿ ವಕಾಲತ್ತು ಹಾಕಲು ಬಂದ ವಕೀಲರನ್ನು ತಡೆಯಲಾಯಿತು. ಆದರೆ ಪೊಲೀಸರು ವಿಚಾರಣೆ ಮುಂದುವರೆಸಿ ದಾಗ, ಈ ಬಾಂಬ್ ಸ್ಫೋಟಕ್ಕೆ ಪ್ರಮೋದ ಮುತಾಲಿಕರ ಶ್ರೀರಾಮಸೇನೆ ಕಾರ್ಯಕರ್ತರೇ ಕಾರಣ ಎಂಬ ಸಂಗತಿ ಬಯಲಿಗೆ ಬಂತು. ಅವರನ್ನು ಬಂಧಿಸಲಾಯಿತು.

ಆದರೆ ಬಿಜೆಪಿ ಸರಕಾರ ಪೊಲೀಸರ ಮೂಲಕ ದುರ್ಬಲ ಆರೋಪಪಟ್ಟಿ ಸಲ್ಲಿಸಿ, ಇವರು ಆರೋಪ ಮುಕ್ತಗೊಳ್ಳಲು ಕಾರಣವಾಯಿತು.ಮುಸ್ಲಿಂ ಯುವಕರನ್ನು ಬಂಧಿಸಿದಾಗ, ಮುಖಪುಟದಲ್ಲಿ ವರ್ಣರಂಜಿತ ಸುದ್ದಿಗಳನ್ನು ಪ್ರಕಟಿಸಿದ ಮಾಧ್ಯಮಗಳು, ಟಿವಿ ಚಾನೆಲ್‌ಗಳು ಹಿಂದೂ ಕೋಮುವಾದಿ ಕಾರ್ಯಕರ್ತರು ಸಿಕ್ಕಿಬಿದ್ದಾಗ ಯಾವುದೋ ಪುಟದ ಯಾವುದೋ ಮೂಲೆಯಲ್ಲಿ ಕಂಡು ಕಾಣದಂತೆ ಪ್ರಕಟಿಸಿದವು. 2006-2008ರ ಕಾಲಾವಧಿಯಲ್ಲಿ ದೇಶದಲ್ಲಿ ಚುನಾವಣಾ ಜ್ವರ ಏರಿತ್ತು. ಮತ್ತೆ ಕೇಂದ್ರದ ಅಧಿಕಾರ ಸೂತ್ರ ಹಿಡಿಯಲು ಬಿಜೆಪಿ ತುದಿಗಾಲಲ್ಲಿ ನಿಂತಿತ್ತು. ಆಗ ಮಹಾರಾಷ್ಟ್ರದ ಮಾಲೆಗಾಂವ್, ನಾಂದೇಡ, ಹೈದರಾಬಾದ್, ಶಿವಕಾಶಿ, ನಾಸಿಕ್, ಖಾನಪುರ ಮತ್ತು ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್‌ಗಳು ಸ್ಫೋಟಗೊಂಡು ಅಮಾಯಕರು ಸಾವಿಗೀಡಾದರು.

ಅದೇ ಸಂದರ್ಭದಲ್ಲಿ ದಿಲ್ಲಿಯಲ್ಲಿ ಟೀಸ್ಟಾ ಸೆಟಲ್ವಾಡ್  ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ನಾನು ಪಾಲ್ಗೊಂಡಿದ್ದೆ. ಅಲ್ಲಿ ಮಾಲೇಗಾಂವ್‌ನಿಂದ ಬಂದಿದ್ದ ಭಯಭೀತ ಮುಸಲ್ಮಾನರು ಅಲ್ಲಿದ್ದ ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಅವರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದನ್ನು ನಾನು ಕಣ್ಣಾರೆ ಕಂಡಿದ್ದೆ. ಈ ಮಾಲೆಗಾಂವ್ ಬಾಂಬ್ ಸ್ಫೋಟದ ಬಗ್ಗೆ ಮಹಾರಾಷ್ಟ್ರದ ಮುಖ್ಯಸ್ಥ ಹೇಮಂತ್ ಕರ್ಕರೆ ಜಾಲಾಡತೊಡಗಿದಾಗ, ಎಬಿವಿಪಿ ನಾಯಕಿ ಸಾಧ್ವಿ ಪ್ರಜ್ಞಾಸಿಂಗ್ ಸಿಕ್ಕಿಬಿದ್ದರು. ಮಾಲೆಗಾಂವ್ ಬಾಂಬ್ ಸ್ಫೋಟದ ಸಂಚು ಉತ್ತರ ಕರ್ನಾಟಕದ ಗೋಕಾಕ್‌ನಲ್ಲಿ ರೂಪುಗೊಂಡಿತೆಂದು ಪ್ರಜ್ಞಾಸಿಂಗ್‌ಗೆ ಅದಕ್ಕಾಗಿ ಇಲ್ಲಿಂದ 80 ಲಕ್ಷ ರೂಪಾಯಿ ಹೋಗಿತ್ತು ಎಂದು ಮುತಾಲಿಕ್ ಶಿಷ್ಯ ನಾಗರಾಜ್ ಜಂಬಗಿ ಪೊಲೀಸರ ಎದುರು ಬಾಯಿಬಿಟ್ಟ.

ಆದರೆ ಈ ಮಾತನ್ನು ನ್ಯಾಯಾಲಯದಲ್ಲಿ ಹೇಳುವ ಮುನ್ನವೇ ಜೈಲಿನಲ್ಲಿ ಆತನ ಕೊಲೆಯಾಯಿತು. ಈ ಯಾವ ಸುದ್ದಿಗಳು ಕೂಡ ಮಾಧ್ಯಮಗಳಲ್ಲಿ ಪ್ರಕಟಗೊಳ್ಳಲೇ ಇಲ್ಲ. ಇತ್ತೀಚೆಗೆ ಉಡುಪಿ ಜಿಲ್ಲೆ ಬ್ರಹ್ಮಾವರದಲ್ಲಿ ಗಣೇಶ್‌ಪ್ರಸಾದ್ ಎಂಬಾತನಿಂದ ಭಾರಿ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡರು. ಈತನ ಬಳಿ 16 ಜಿಲೆಟಿನ್ ಸ್ಟಿಕ್‌ಗಳು ಸಿಕ್ಕವು. ಈತ ಹಿಂದೂವಾದಿ ಸಂಘಟನೆಯ ಕಾರ್ಯಕರ್ತನೆಂದು ತಿಳಿದು ಬಂತು. 75 ಸಾವಿರ ರೂಪಾಯಿಯ ವೊತ್ತದ ಸ್ಫೋಟಕ ಸಾಮಗ್ರಿಗಳು ದೊರೆತಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಹೇಳಿದ್ದರು. ಇದೇ ಸಾಮಗ್ರಿ ಅಕಸ್ಮಾತ್ ಮುಸ್ಲಿಂ ಯುವಕನ ಬಳಿ ದೊರೆತಿದ್ದರೆ, ಆತನ ಗತಿ ಏನಾಗುತಿತ್ತು.

ಇದನ್ನೇಕೆ ಮಾಧ್ಯಮಗಳು ದೊಡ್ಡದಾಗಿ ಪ್ರಕಟಿಸಲಿಲ್ಲ. 90ರ ದಶಕದ ನಂತರ ಮಾಧ್ಯಮಗಳಲ್ಲಿ ಸೇರಿಕೊಂಡ ಸಂಘಪರಿವಾರದ ವಿಷಜಂತುಗಳು ಒಂದು ಜನ ಸಮುದಾಯಕ್ಕೆ  ಸೇರಿದ ಯುವಕರನ್ನು ರಾಷ್ಟ್ರದ್ರೋಹಿ ಎಂದು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರ ಇದಲ್ಲವೇ? ಈ ಬಾರಿ ಬೆಂಗಳೂರು, ಹುಬ್ಬಳ್ಳಿಗಳಲ್ಲಿ ಬಂಧಿಸಲ್ಪಟ್ಟ ಯುವಕರು ನಿಜವಾಗಲೂ ಭಯೋತ್ಪಾದಕರೇ? ಇದು ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಾದ ವಿಷಯ. ಇದಕ್ಕೆ ಪೊಲೀಸರು ಸೂಕ್ತವಾದ ಸಾಕ್ಷ್ಯಾಧಾರಗಳನ್ನು ಒದಗಿಸಬೇಕಾಗುತ್ತದೆ. ಆದರೆ ಈವರೆಗೆ ಲಭ್ಯವಿದ್ದ ಮಾಹಿತಿ ಪ್ರಕಾರ, ಯಾವ ಸ್ಫೋಟಕ ಸಾಮಗ್ರಿಗಳು ಇವರ ಬಳಿ ದೊರೆತಂತೆ ಕಾಣುವುದಿಲ್ಲ. ವಶಪಡಿಸಿಕೊಂಡ ಸಾಮಗ್ರಿಗಳನ್ನು ಪೊಲೀಸರು ಕಾನೂನು ಪ್ರಕಾರ ಪಂಚನಾಮೆ ಮಾಡಿಲ್ಲ.

ಬಿನ್ ಲಾಡೆನ್ ಫೋಟೋವನ್ನು ಯಾರು ಬೇಕಾದವರು ಡೌನ್‌ಲೋಡ್ ಮಾಡಿಸಿಕೊಳ್ಳಬಹುದು. ಅದು ಅಪರಾಧವಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಯುವಕರು ಕೊಲೆ ಸಂಚು ನಡೆಸಿದ್ದರು ಎಂಬುದಕ್ಕೆ ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರ ಒದಗಿಸಬೇಕಾಗುತ್ತದೆ. ಮಾಧ್ಯಮಗಳಲ್ಲಿನ ಮೂಲವ್ಯಾಧಿಗಳಂತೆ ಕೋರ್ಟ್‌ನಲ್ಲಿ ಕಂಡಿದ್ದನ್ನು ಮಾತನಾಡಲು ಆಗುವುದಿಲ್ಲ. ಹಾಗೆಂದು ಪೊಲೀಸರಿಂದ ಬಂಧಿಸಲ್ಪಟ್ಟವರೆಲ್ಲ ನಿರಪರಾಧಿಗಳೆಂದಲ್ಲ. ಆದರೆ ಆರೋಪ ಸಾಬೀತಾಗುವವರೆಗೆ ತಾನು ನಿರಪರಾಧಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೊಳ್ಳುವುದಾದರೆ, ಅದೇ ರೀತಿ ಇವರಿಗೆ ಹೇಳಿಕೊಳ್ಳಲು ಹಕ್ಕಿದೆ. ರಾಜ್ಯದ ಹಿರಿಯ ವಕೀಲ, ಮಾಜಿ ಶಾಸಕ ಎ.ಕೆ.ಸುಬ್ಬಯ್ಯನವರು ಹೇಳಿದಂತೆ ಪೊಲೀಸರು ಸಂಘಪರಿವಾರದ ಕೈಗೊಂಬೆಗಳಾಗಿ ವರ್ತಿಸಿದ್ದಾರೆ. ಇವರಿಂದ ನಿಷ್ಪಕ್ಷಪಾತ ತನಿಖೆಗೆ ಅವಕಾಶ ಆಗುವುದಿಲ್ಲ.

ಶಂಕಿತ ಬಂಧಿತರು ಉಗ್ರರೇ ಆಗಿದ್ದಲ್ಲಿ, ಅವರಿಗೆ ಕಠಿಣ ಶಿಕ್ಷೆಯಾಗಲಿ. ಅದೇ ರೀತಿ ಪೊಲೀಸರು ತಪ್ಪಿತಸ್ಥರಾಗಿದ್ದರೆ, ಅವರಿಗೂ ಶಿಕ್ಷೆಯಾಗಬೇಕಾಗುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಮಾಧ್ಯಮಗಳಲ್ಲಿ ಇರುವವರು ವರದಿ ಮಾಡಬೇಕಾಗುತ್ತದೆ. ಹಾಗೆ ಮಾಡದಿದ್ದರೆ, ಅದು ಸುದ್ದಿಯೆನ್ನಿಸಿಕೊಳ್ಳುವುದಿಲ್ಲ. ಮುತಾಲಿಕ್ ಮತ್ತು ಜಗದೀಶ್ ಕಾರಂತರ ಭಾಷಣದ ನಕಲು ಅನ್ನಿಸಿಕೊಳ್ಳುತ್ತದೆ.
 

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಖಾಲಿಯಾದ ಜಲಾಶಯಗಳು ಕುಡಿಯುವ ನೀರಿಗೆ ಹಾಹಾಕಾರ

ಬೇಸಿಗೆಯ ಪ್ರಖರತೆ ಹೆಚ್ಚುತ್ತಲೇ ಇದೆ. ಕಾವೇರಿ ಮತ್ತು ಕೃಷ್ಣಾ ಕೊಳ್ಳದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಹಿಂದೆಂದೂ ಕಂಡರಿಯದಷ್ಟು ಕುಸಿದಿದೆ. ಪ್ರತಿ ಸಲದಂತೆ ಜ ...


ನಿಮ್ಮ ಅನಿಸಿಕೆ

postClick here to post your views
EPAPER
access

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್

ಅಕ್ಷರ ಸೇವೆಯಿಂದ ಜನಸೇವೆಗೆ;ತೆಂಕಮಿಜಾರಿನ ಮುತ್ತು

ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...


- ಪ್ರೇಮಶ್ರೀ ಕಲ್ಲಬೆಟ್ಟು

ನಾನು ಮತ್ತು ದೇವರು

 ರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...


- ಸುನೀಲ್ ರಾವ್

ಬಿಟ್ಟಿ ಅಂಕದ ಪಿಯುಸಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಬುಟ್ಟಿಗೆಸೆ!

 ಮಾನ್ಯರೆ,

ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...


- -‘ಮಾತರಿ’ ಸಾಗ

ಶಂಕರದರ್ಶನ ಮತ್ತು ವಿಮರ್ಶಾ ರಾಜಕೀಯಗಳು

ಭಾರತ ದೇಶದ, ಜಗತ್ತಿನ ಅಗ್ರ ದಾರ್ಶನಿಕರಲ್ಲಿ ಓರ್ವರು ಶ್ರೀ ಶಂಕರಾಚಾರ್ಯರು. (ಕ್ರಿ. 8ನೆ ಶತಮಾನ) ಅವರ ದ ...


- -ಡಾ.ಎಂ. ಪ್ರಭಾಕರ ಜೋಶಿ