ಅಂಕಣ

mail-img print-img

ವಿಶ್ವ ಪಾರಂಪರಿಕ ಪಟ್ಟದ ಹಿಂದಿನ ಹುನ್ನಾರ: ಭಾಗ-೧

ಸೋಮವಾರ - ಸೆಪ್ಟೆಂಬರ್ -10-2012

ಪಶ್ಚಿಮಘಟ್ಟಗಳನ್ನು ವಿಶ್ವಪಾರಂಪರಿಕ ತಾಣಕ್ಕೆ ಸೇರಿಸಬೇಕೆನ್ನುವುದು ಸ್ವಾರ್ಥ  ಸಾಧಕರ ಒಂದು ಕುತಂತ್ರವಲ್ಲದೆ ಮತ್ತೇನು ಅಲ್ಲ. ಪಶ್ಚಿಮಘಟ್ಟಗಳ ವ್ಯಾಪ್ತಿಯಲ್ಲಿ ಬರುವ ಹಲವಾರು ಭೂಪ್ರದೇಶಗಳನ್ನು ವಿಶ್ವಪಾರಂಪರಿಕ ತಾಣವೆಂದು ಘೋಷಿಸಲು ಬಾರದೆಂದು ಅದನ್ನು ಕೈಬಿಡಬೇಕೆಂದು ಒತ್ತಾಯಿಸಿ, ಕರ್ನಾಟಕ ವಿಧಾನ ಸಭೆ ಅವಿರೋಧವಾದ ನಿರ್ಣಯ ವೊಂದನ್ನು ಅಂಗೀಕರಿಸಿದ ಬೆನ್ನಲ್ಲೇ ಕೆಲವೊಂದು  ಪರಿಸರವಾದಿಗಳೆಂದು ಹಣೆಪಟ್ಟಿ ಧರಿಸಿ ಕೊಂಡಿರುವ ಶಕ್ತಿಗಳು ನಿರಂತರವಾಗಿ ವಿಧಾನ ಸಭೆಯ ನಿರ್ಣಯವನ್ನು ಖಂಡಿಸುವ ಕಾಯಕ ವನ್ನು ಹಮ್ಮಿಕೊಂಡಿದ್ದರೆ. ಈ ಕಾರ್ಯವನ್ನು ಮುಂದುವರಿಸುದಕ್ಕಾಗಿ ಡೋಂಗಿ ಪರಿಸರವಾದಿಗಳು ಭಿನ್ನ ಭಿನ್ನ ಸಂಘಟನೆಗಳನ್ನು ಸಹ ಹುಟ್ಟು ಹಾಕಿ ಅಂತಹ ಬಾಡಿಗೆ ಜೀವಿ ಸಂಘಟನೆಗಳ ಬಾಯಿಂದಲೂ ಮಾತನಾಡಿಸುತ್ತಿದ್ದಾರೆ. ಕೊಡಗಿನಲ್ಲಿ ಕಾವೇರಿ ಸೇನೆ ಪ್ರಗತಿಪರ ರೈತ ಸಂಘ ಮತ್ತು ಹೊರಗಡೆ ಮಲೆನಾಡು ಜನಪರ ಹೋರಾಟ ಸಮಿತಿ ಎಂಬೆಲ್ಲಾ ಸಂಘಟನೆಗಳು ಡೋಂಗಿ ಪರಿಸರವಾದಿಗಳು ಹುಟ್ಟು ಹಾಕಿದ ಬಾಡಿಗೆ ಜೀವಿಗಳಿಂದಲೇ ಹುಟ್ಟಿಕೊಂಡಿವೆ ಎಂಬುದನ್ನು ಅನುಮಾನಿಸಬೇಕಿಲ್ಲ.

ಈ ಎಲ್ಲಾ ಶಕ್ತಿಗಳು ಒಟ್ಟಾಗಿ ಕರ್ನಾಟಕದ ಶಾಸಕರುಗಳು, ಟಿಂಬರ್ ಲಾಬಿ, ಗಣಿಲಾಬಿ, ಮತ್ತು ಭೂ ಮಾಫಿಯಾಗಳ ಒತ್ತಡಕ್ಕೆ ಮಣಿದು, ವಿಧಾನಸಭೆಯಲ್ಲಿ ಪಶ್ಚಿಮಘಟ್ಟಗಳನ್ನು ವಿಶ್ವಪಾರಂಪರಿಕ ತಾಣಕ್ಕೆ ಸೇರಿಸುವುದರ ವಿರುದ್ಧ ನಿರ್ಣಯ ಕೈಗೊಂಡಿದ್ದಾರೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಈ ರೀತಿ ವ್ಯಾಖ್ಯಾನಿಸುತ್ತಿರುವವರು ಪ್ರಜಾ ಪ್ರಭುತ್ವ ಎಂದರೆ ಏನು? ಜನ ಹಿತ ಎಂದರೇನು? ಎಂಬುದರ ಬಗ್ಗೆ ಅರಿತವರಂತೆ ಕಾಣುವುದಿಲ್ಲ. ಅಥವಾ ಅರಿತರೂ ಅರಿಯದ ವರಂತೆ ತಮ್ಮ ಸ್ವಾರ್ಥ ಸಾಧನೆಗಾಗಿ ನಟಿಸುತ್ತಿದ್ದಾರೆ.

ವಿಧಾನ ಸಭೆ ರಾಜ್ಯದ ಅತ್ಯುನ್ನತವಾದಂತಹ ಜನಪ್ರತಿನಿಧಿ ಸಭೆ. ಅದು ಕೈಗೊಳ್ಳುವ ನಿರ್ಣಯವನ್ನು ಜನಭಿಪ್ರಾಯವೆಂದು ಪರಿಗಣಿಸಲು ನಿರಾಕರಿಸುವವರು  ಪ್ರಜಾ ಪ್ರಭುತ್ವಕ್ಕೆ ಮಾರಕವಾಗುತ್ತಾರೆ. ವಿಧಾನಸಭೆಗಿಂತಲೂ ಇವರು ದೊಡ್ಡವರು ಎಂದು ಪ್ರತಿವಾದಿಸಿದಂತಾಗುತ್ತದೆ. ಜೊತೆಯಲ್ಲಿ ವಿಧಾನಸಭೆ ನಿರ್ಣಯ ಅಂಗೀಕರಿಸಿದ್ದಕ್ಕಾಗಿ ಶಾಸಕರುಗಳು, ಟಿಂಬರ್ ಲಾಬಿ,ಭೂ ಮಾಫಿಯಾ ಎಂಬಿತ್ಯಾದಿಗಳಿಗೆ ಮಣಿದಿದ್ದಾರೆ ಎಂದು ಆರೋಪಿಸುವುದು ವಿಧಾನಸಭೆಗೆ ನಿರ್ಣಯ ಅಂಗೀಕರಿಸಿದ್ದಕ್ಕಾಗಿ ಶಾಸಕರುಗಳು, ಮಾಡಿದ ಘೋರ ಅಪಮಾನವಲ್ಲದೆ, ವಿಧಾನಸಭೆಯ ಸಾರ್ವಭೌಮತ್ವವನ್ನೇ ಪ್ರಶ್ನಿಸಿದಂತಾಗುತ್ತದೆ.

ವಿಧಾನಸಭಾ ಸದಸ್ಯರ ವಿರುದ್ಧ ಇಂತಹ ಆರೋಪ ಮಾಡುತ್ತಿರುವವರು, ವಿದೇಶಿ ಹಣವೆಂಬ ಎಂಜಲು ಕಾಸಿಗೆ ಕೈಯೊಡ್ಡಿದವರೆಂದೂ, ಇಂತಹ ಎಂಜಲು ಕಾಸಿಗೆ ಆಸೆ ಪಟ್ಟ ಇವರು ನಮ್ಮ ದೇಶದ ಹಾಗೂ ಜನತೆಯ ಹಿತಾಶಕ್ತಿಗೆ ವಿರುದ್ಧವಾಗಿ ದೇಶ ಹಾಗೂ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದ್ದಾರೆಂದು ಹಿಂದಿರುಗಿ ಆರೋಪಿಸಬಹುದು. ಮತ್ತು ಅಂತಹ ಆರೋಪಗಳನ್ನು ಸಾಬೀತು ಮಾಡುವುದಕ್ಕೂ ಸಾಕಷ್ಟು ಪುರಾವೆಗಳಿವೆ. ಪಶ್ಚಿಮಘಟ್ಟವನ್ನು ವಿಶ್ವ ಪಾರಂಪರಿಕ ತಾಣಕ್ಕೆ ಸೇರಿಸಬೇಕೆನ್ನುವವರು ಎಲ್ಲರೂ ನಗರ ನಿವಾಸಿಗಳಾಗಿದ್ದು ಒಬ್ಬೊಬ್ಬರು ಒಂದೊಂದು ಸರಕಾರೇತರ ಸಂಸ್ಥೆ (ಎನ್‌ಜಿಓ) ಗಳನ್ನು ಹುಟ್ಟು ಹಾಕಿಕೊಂಡು, ಕಾರ್ಯ ಚಟುವಟಿಕೆ ನಡೆಸುತ್ತಿರುವವರೇ ಆಗಿದ್ದಾರೆ.

ಇತ್ತೀಚೆಗೆ ಸಂಸತ್ ಸದಸ್ಯ ಹಾಗೂ ಬಿಜೆಪಿ ನಾಯಕರಾಗಿರುವ ಅನಂತಕುಮಾರ್ ರವರು ಹುಟ್ಟು ಹಾಕಿ ನಡೆಸುತ್ತಿರುವ ಅದಮ್ಯ ಚೇತನ ಎಂದು ಕರೆಯಲ್ಪಡುವ ಸ್ವಯಂ ಸೇವಾ ಸಂಘಟನೆಯ ಆಶ್ರಯದಲ್ಲಿ ಮಾತನಾಡಿದ ಇನ್ನೊಬ್ಬ ಇಂತಹ ಸಂಸ್ಥೆಯ ಮಾಲಕ ಪ್ರಣ್ ಭಾರ್ಗವ ಎನ್ನುವವರು ವಿಧಾನಸಭೆಯ ನಿರ್ಣಯವನ್ನು ಖಂಡಿಸಿ ಮಾತನಾಡಿದ್ದಾರೆ. ಸಂಸದ ಅನಂತಕುಮಾರ್‌ರವರು ಅವರ ಪಕ್ಷವೇ ಸರಕಾರ ನಡೆಸುತ್ತಿರುವ ಕರ್ನಾಟಕ ವಿಧಾನ ಸಭೆಯ ನಿರ್ಣಯದ ವಿರುದ್ಧವೇ ಧ್ವನಿ ಎತ್ತಿದ್ದಾರೆ. ಸಂಸದರಾಗಿರುವ ಅನಂತಕುಮಾರ್‌ರವರು ತಮ್ಮ ಪತ್ನಿಯ ಹೆಸರಿನಲ್ಲಿ ಅದಮ್ಯ ಚೇತನ ಎನ್ನುವ ಸ್ವಯಂ ಸೇವಾ ಸಂಘಟನೆಗಳನ್ನು ನಡೆಸುತ್ತಿದ್ದಾರೆ.

ರಾಜಕಾರಣಿಗಳು ತಮ್ಮ ಕಳ್ಳ ಹಣವನ್ನು ಬಚ್ಚಿಡುವುದಕ್ಕೆ ಇಂತಹ ಸ್ವಯಂ ಸೇವಾ ಸಂಘಟನೆಗಳನ್ನು ಹುಟ್ಟುಹಾಕುತ್ತಾರೆ ಎನ್ನುವುದಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರುಗಳು ಹುಟ್ಟು ಹಾಕಿದ ಇಂತಹ ಸ್ವಯಂ ಸೇವಾ ಸಂಸ್ಥೆಗಳಿಗೆ ಅಪಾರ ಪ್ರಮಾಣದಲ್ಲಿ ಗಣಿ ಮಾಫಿಯಾಗಳಿಂದ ಲಂಚದ ಹಣ ಸಂಗ್ರಹಣೆಯಾಗಿರುವುದು ಸಾಕ್ಷಿಯಾಗಿದೆ.

ಅನಂತಕುಮಾರ್‌ರವರು ತಾನು ಪಕ್ಷದಲ್ಲಿ ಇಬ್ಬ ಪ್ರಮುಖ ಪದಾಧಿಕಾರಿಯೂ ಆಗಿದ್ದು, ಸಂಸತ್ ಸದಸ್ಯನೂ ಆಗಿರುವಾಗ ಇನ್ನೊಂದು ಸ್ವಯಂ ಸೇವಾ ಸಂಘವನ್ನು ಹುಟ್ಟು ಹಾಕಿ ಕೆಲಸ ಮಾಡುದಕ್ಕೆ ಪುರಸೊತ್ತು ಎಲ್ಲಿರುತ್ತದೆ? ಮತ್ತು ಇಂತಹ ಸ್ವಯಂ ಸೇವಾ ಸಂಘಟನೆಗಳ ಅಗತ್ಯವಾದರೂ ಏನು ಎಂಬ ಪ್ರಶ್ನೆಗಳಿಗೆ ಅನಂತಕುಮಾರ್ ಉತ್ತರಿಸಬೇಕಾ ಗುತ್ತದೆ. ಮತ್ತು ಇವರು ತಮ್ಮ ಸ್ವಯಂ ಸೇವಾ ಸಂಘಟನೆಗೆ ಯಾವ ಮೂಲಗಳಿಂದ ಹಣ ಬಂದಿದೆ? ಎಷ್ಟು ಹಣ ಬಂದಿದೆ? ಈ ಸಂಸ್ಥೆ ನಡೆಸಿದ ಕಾರ್ಯ ಚಟುವಟಿಕೆಗಳೇನು? ಇದರಿಂದ ಸಮಾಜಕ್ಕಾದ ಲಾಭವಾದರೂ ಏನು ಎಂಬುದರ ಬಗ್ಗೆ ಪೂರ್ಣ ವಿವರಗಳನ್ನು ಜನತೆಯ ಮುಂದಿಟ್ಟು, ತಮ್ಮ ಚಟುವಟಿಕೆಗಳ ಪಾರದರ್ಶಕತೆಯನ್ನು ಪ್ರದರ್ಶಿಸುವುದು ಅಗತ್ಯ.

ಈ ಮಾತು ಪ್ರಣ್ ಭಾರ್ಗವ ಅವರಿಗೂ ಅನ್ವಯಿಸುತ್ತದೆ. ಈ ರೀತಿ ವಿಶ್ವಪಾರಂಪರಿಕ ತಾಣವಾಗಿ ಪಶ್ಚಿಮಘಟ್ಟಗಳನ್ನು ಘೋಷಿಸ ಬೇಕೆಂದು ವಾದಿಸುತ್ತಿರುವವರು, ಅದನ್ನು ವಿರೋಧಿಸುವವರ ಹಲವು ಪ್ರಶ್ನೆಗಳಿಗೆ ಉತ್ತರ ವನ್ನೇ ನೀಡದೆ, ಅದನ್ನು ವಿರೋಧಿಸುವವರು ಟಿಂಬರ್ ಲಾಬಿ, ಭೂ ಮಾಫಿಯಾ ಇತ್ಯಾದಿಗಳ ಪ್ರಭಾವಕ್ಕೆ ಒಳಗಾಗಿದ್ದಾರೆಂದು ಬೇಜವಾಬ್ದಾರಿಯಿಂದ ಆರೋಪಿಸುತ್ತಾ, ವಿರೋಧಿಸುವವರ ಬಾಯಿ ಮುಚ್ಚಿಸುವ ಪ್ರಯತ್ನವನ್ನಷ್ಟೇ ಮಾಡುತ್ತಿದ್ದಾರೆ. ವಿರೋಧಿಸುವವರ ವೊದಲನೆ ಪ್ರಶ್ನೆ, ಪಶ್ಚಿಮಘಟ್ಟಗಳು ಆವರಿಸಿಕೊಂಡಿರುವ ಭೂ ಪ್ರದೇಶಗಳಲ್ಲಿ ತಲತಲಾಂತರದಿಂದ ವಾಸಿಸುತ್ತಾ, ಅಲ್ಲಿನ ಪರಿಸರದೊಡನೆ ಬದುಕುತ್ತಾ, ಪ್ರಕೃತಿಯ ವಿಕೋಪಗಳನ್ನು ಎದುರಿಸುತ್ತಾ, ಬಾಳಿ ಬದುಕುತ್ತಾ ಬಂದ ಆದಿವಾಸಿಗಳು, ರೈತ ಕಾರ್ಮಿಕರನ್ನೆಲ್ಲಾ ಕತ್ತಲೆಯಲ್ಲಿಟ್ಟು, ಅವರ ಬೆನ್ನ ಹಿಂದೆ ಕಾರ್ಯಾಚರಣೆಯನ್ನು ನಡೆಸಿ, ಪಶ್ಚಿಮಘಟ್ಟಗಳ ಭೂಪ್ರದೇಶಗಳನ್ನು ವಿಶ್ವಪಾರಂಪರಿಕ ತಾಣದ ಪಟ್ಟಿಗೆ ಸೇರಿಸಲು ಹುನ್ನಾರ ನಡೆಸಿಕೊಂಡು ಬಂದ ಶಕ್ತಿ ಯಾವುದು?

ಇವರು ಪಶ್ಚಿಮಘಟ್ಟಗಳ ಯಜಮಾನರೇ? ಯಜಮಾನರಂತೆ ಮಾತನಾಡುವುದಕ್ಕೆ ಇವರಿಗೆ ಅಧಿಕಾರ ನೀಡಿದವರಾದರೂ ಯಾರು? ಪಶ್ಚಿಮ ಘಟ್ಟ ಎಂಬುದು ಒಂದು ಸಾವಿರದ ಆರುನೂರು ಕಿಲೋ ಮೀಟರ್ ಉದ್ದದವರೆಗೆ ಪಸರಿಸಿರುವ ಬೆಟ್ಟಗಳಾಗಿವೆ. ಈ ಬೆಟ್ಟಗಳ ವ್ಯಾಪ್ತಿಯಲ್ಲಿ ಸುಮಾರು ಎಂಟು ಸಾವಿರ ಚದರ ಕಿ.ಮೀ.ಗಿಂತಲೂ ಮಿಗಿಲಾದ ಭೂ ಪ್ರದೇಶಗಳನ್ನು ಒಳಗೊಂಡಿದೆ. ಇದರಲ್ಲಿ ಅಂದಾಜು ಎರಡು ಸಾವಿರ ಚದರ ಕಿ.ಮೀ.ಗಿಂತಲೂ ಹೆಚ್ಚಾದ ಭೂ ಪ್ರದೇಶಗಳನ್ನು ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ತರಬೇಕೆಂಬುದು ಡೋಂಗಿ ಪರಿಸರವಾದಿಗಳ ವಾದವಾಗಿದೆ.

ವಿಶ್ವಪಾರಂಪರಿಕ ತಾಣಕ್ಕೆ ಸೇರಿಸ ಬಹುದಾದಂತಹ ತಾಣಗಳೆಂದರೆ, ವಿಶೇಷವಾದ ಸಾಂಸ್ಕೃತಿಕ ಮತ್ತು ನೈಸರ್ಗಿಕ ತಾಣವಾಗಿದೆ. ಅದೊಂದು ನಿರ್ದಿಷ್ಟವಾದ ತಾಣವಾಗಿರಬೇಕು. ಭೂ ಪ್ರದೇಶ ಅಲ್ಲ. ಯಾವುದೇ ಒಂದು ವಿಶಾಲವಾದಂತಹ ಭೂಪ್ರದೇಶವನ್ನೆ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿರುವ ಹಿನ್ನೆಲೆಯಿಲ್ಲ. ಹೀಗಿದ್ದರೂ ಸುಮಾರು 1,600 ಕಿ.ಮೀ. ಉದ್ದ ಸಾಗಿರುವ ಪಶ್ಚಿಮಘಟ್ಟಗಳ ವ್ಯಾಪ್ತಿಯೊಳಗಿನ ಹಲವಾರು ಮೀಸಲು ಅರಣ್ಯಗಳನ್ನು, ವನ್ಯಜೀವಿ ಸಂರಕ್ಷಣಾ ಅರಣ್ಯಗಳನ್ನು ಒಳಗೊಂಡ ಸಾವಿರಗಟ್ಟೆಲೆ ಚದರ ಕಿ.ಮೀ. ಭೂಪ್ರದೇಶಗಳನ್ನು ವಿಶ್ವಪಾರಂಪರಿಕ ತಾಣವೆಂದು ಘೋಷಿಸಬೇಕೆಂದು ಆಂದೋಲನ ನಡೆಸಿದವರು ಈ ಬಗ್ಗೆ ಆ ಪ್ರದೇಶಗಳಲ್ಲಿ ತಲೆತಲಾಂತರದಿಂದ ವಾಸ ಮಾಡುತ್ತಾ ಬಂದ ಜನರನ್ನು ಸಂಪೂರ್ಣ ಕತ್ತಲೆಯಲ್ಲಿಟ್ಟು, ಅವರ ಬೆನ್ನ ಹಿಂದೆ ಕಾರ್ಯಾಚರಣೆ ಮಾಡಿರುವುದರ ರಹಸ್ಯವಾದರೂ ಏನು?

ಆ ವರ್ಗದ ಜನರ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಅಧ್ಯಯನ ನಡೆದಿದೆಯೆ? ಅಂತಹ ಅಧ್ಯಯನ ಅಗತ್ಯತೆ ಇಲ್ಲ. ಅಲ್ಲಿಯ ಜನಗಳು ಮನುಷ್ಯರೆ ಅಲ್ಲ, ಅವರಿಗೆ ಯಾವ ಮಾನಯ ಹಕ್ಕು ಇಲ್ಲ ಎಂಬುದು ಡೋಂಗಿ ಪರಿಸರವಾದಿಗಳ ಮತ್ತು ಅವರೊಡನೆ ಕೈ ಜೋಡಿಸಿರುವ ಭ್ರಷ್ಟ ಅಧಿಕಾರಿಗಳ ಧೋರಣೆ ಆಗಿದೆಯೇ? ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ವೊದಲು ಪಶ್ಚಿಮಘಟ್ಟಕ್ಕೆ ಸೇರಿದ ಭೂ ಪ್ರದೇಶದ ಜನಗಳ ಜೊತೆ ಚರ್ಚಿಸಲಾಗಿದೆಯೇ? ಆ ಭೂಪ್ರದೇಶದ ಜನಪ್ರತಿನಿಧಿ ಸಂಸ್ಥೆಗಳಾದ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್‌ಗಳ ಅನುಮತಿ ಪಡೆಯಲಾಗಿದೆಯೆ? ಮತ್ತು ಆ ಪ್ರದೇಶದ ಜನಗಳು ವಿಶ್ವಪಾರಂಪರಿಕ ತಾಣವನ್ನು ಕಾಪಾಡುವಲ್ಲಿ ಭಾಗಿಗಳಾಗುವಂತೆ ಅವರ ಮನವೊಲಿಸಲಾಗಿದೆಯೆ?

ಯಾವುದೇ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಸಂಬಂಧಪಟ್ಟ ಜನರ ಅನುಮತಿ ಮತ್ತು ಅವರ ಪಾಲುಗೊಳ್ಳುವಿಕೆ ಅತ್ಯಂತ ಅವಶ್ಯಕವಾಗಿದೆ. ಇಲ್ಲವಾದಲ್ಲಿ ಯಾವ ಕಾರ್ಯಕ್ರಮವೂ ಯಶಸ್ವಿಯಾಗುವುದಿಲ್ಲ. ಹೀಗಿದ್ದ ಮೇಲೆ ಪಶ್ಚಿಮಘಟ್ಟಗಳ ಸಾಲುಗಳನ್ನು ವಿಶ್ವಪಾರಂಪರಿಕ ತಾಣವೆಂದು ಜನರ ಬೆನ್ನ ಹಿಂದೆ ಘೋಷಿಸಿ, ಅದರ ಜವಾಬ್ದಾರಿ ನಿರ್ವಹಿಸಲು ಡೋಂಗಿ ಪರಿಸರವಾದಿಗಳ ಮತ್ತು ಅವರೊಡನೆ ಸಹಕರಿಸುವ ಭ್ರಷ್ಟ ಅಧಿಕಾರಿಗಳನ್ನೊಳಗೊಂಡ ಒಂದು ಕಾರ್ಯಪಡೆ ಮಾಡಿದರೆ, ವಿಶ್ವಪಾರಂಪರಿಕ ತಾಣ ವಿಜೃಂಬಿಸುತ್ತದೆಯೇ? ಈ ಬಗ್ಗೆ ಪ್ರಬಲ ವಿರೋಧವನ್ನು  ಗಣನೆಗೆ ತೆಗೆದುಕೊಂಡ ಯುನೆಸ್ಕೋ ಪಶ್ಚಿಮಘಟ್ಟಗಳ ಭೂಪ್ರದೇಶಗಳನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸುವುದನ್ನು ಮೂರು ವರ್ಷದವರೆಗೆ ತಡೆಹಿಡಿಯಲಾಗಿದೆ ಎಂದು ಕೆಲವು ಸಮಯದ ಹಿಂದೆ ಘೋಷಿಸಿತ್ತು.

ಆದರೆ ಒಂದು ತಿಂಗಳೊಳಗೆ ತದ್ವಿರುದ್ಧವಾಗಿ ಅದೇ ಯುನೆಸ್ಕೋ ತಂಡದವರು ಪಶ್ಚಿಮಘಟ್ಟಗಳನ್ನು ವಿಶ್ವಪಾರಂಪರಿಕ ತಾಣಕ್ಕೆ ಸೇರಿಸುವ ನಿರ್ಣಯ ಕೈಗೊಂಡದ್ದರ ಹಿಂದಿನ ಶಕ್ತಿ ಯಾವುದು? ಜನಗಳು ಬೇಡವೆಂದಾಗ, ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಅದನ್ನು ಮೇಲಿನಿಂದ ಜನರ ಮೇಲೆ ಹೇರುವಂತಹ ಶಕ್ತಿ ಯಾವುದಾದರೂ ಇದ್ದರೆ ಅದು ದೇಶದ್ರೋಹಿ ಶಕ್ತಿಯಾಗುತ್ತದೆ. ಸಮಾಜಘಾತಕ ಶಕ್ತಿಯಾಗುತ್ತದೆ. ಇಂತಹ ದೇಶದ್ರೋಹಿ ಮತ್ತು ಸಮಾಜಘಾತಕ ಶಕ್ತಿಯ ಒತ್ತಡಕ್ಕೆ ಮಣಿದು, ಪಶ್ಚಿಮಘಟ್ಟಗಳನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸುವ ನಿರ್ಣಯವನ್ನು ಯುನೆಸ್ಕೋ ತಂಡದವರು ಕೈಗೊಂಡಿದ್ದಾರೆ ಎನ್ನುವುದು, ಅದನ್ನು ವಿರೋಧಿಸುವವರ ನೇರವಾದ ಆರೋಪವಾಗಿದೆ. ಈ ಶಕ್ತಿ ಬೇರೆ ಯಾವುದೂ ಅಲ್ಲ. ಐಷಾರಾಮಿ ಬದುಕು ಸಾಗಿಸುವುದಕ್ಕೋಸ್ಕರ ಎನ್‌ಜಿಓಗಳನ್ನು ಹುಟ್ಟು ಹಾಕಿ ಕೋಟಿಗಟ್ಟಲೆ ವಿದೇಶಿ ಹಣ ತರಿಸಿಕೊಂಡು ಮೋಜಿನಿಂದ ಬದುಕು ಸಾಗಿಸುತ್ತಿರುವ ಡೋಂಗಿ ಪರಿಸರವಾದಿಗಳೇ ಆಗಿದ್ದಾರೆ.

ಈ ಡೋಂಗಿ ಪರಿಸರವಾದಿಗಳು ಅವರ ವಿದೇಶಿ ಹಣ ಬಲದಿಂದ ಮತ್ತು ಕರಗತವಾಗಿರುವ ಬುದ್ಧಿವಂತಿಕೆಯಿಂದ ಮೇಲ್ಮಟ್ಟದಲ್ಲಿ ಎಲ್ಲರ ಮೇಲೆ ಪ್ರಭಾವ ಬೀರಿ, ತಮ್ಮ ಬೇಳೆ ಬೇಯಿಸಿಕೊಳ್ಳುವ ಚಾಕಚಕ್ಯತೆಯನ್ನು ಕರಗತ ಮಾಡಿ ಕೊಂಡವರು ಕೂಡ ಆಗಿದ್ದಾರೆ. ಇವರು ನಡೆಸುತ್ತಿರುವ ಚಟುವಟಿಕೆ ಶ್ರೀಸಾಮಾನ್ಯನ ವಿರುದ್ಧ ನಡೆಸುತ್ತಿರುವ ದಬ್ಬಾಳಿಕೆಯೇ ವಿನಃ ಮತ್ತೇನೂ ಅಲ್ಲ. ನಮ್ಮ ದೇಶದಲ್ಲಿ ಅಧಿಕಾರಿಗಳು, ಅದರಲ್ಲೂ ಅರಣ್ಯ ಇಲಾಖೆಯ ಮೇಲಾಧಿಕಾರಿಗಳಾಗಿ ಕೆಲಸ ಮಾಡಿದವರು ತಮ್ಮ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ನಡೆಸಿ, ಪರಿಸರ ವಿನಾಶಕ್ಕೆ ಕಾರಣರಾಗಿದ್ದರೂ, ನಿವೃತ್ತರಾದ ತಕ್ಷಣವೇ ತಮ್ಮ ಸಂಪರ್ಕ ಮತ್ತು ಪ್ರಭಾವವನ್ನು ದುರುಪಯೋಗ ಮಾಡಿಕೊಂಡು ಒಂದು ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ಹುಟ್ಟು ಹಾಕಿ ಶುದ್ಧ ಪರಿಸರವಾದಿಗಳಂತೆ ಸೋಗು ಹಾಕಿಕೊಂಡು, ವಿದೇಶಿ ದೇಣಿಗೆ ತರಿಸಿಕೊಂಡು ಮೋಜಿನ ಜೀವನ ನಡೆಸುತ್ತಾರೆ.

ಹಾಗೆಯೇ ಚುರುಕು ಬುದ್ಧಿಯ ವಿದ್ಯಾವಂತರು ಯಾವ ಉದ್ಯೋಗಕ್ಕೂ ಹೋಗದೆ, ಸ್ವಯಂ ಸೇವಾ ಸಂಸ್ಥೆಗಳನ್ನು ಹುಟ್ಟು ಹಾಕಿಕೊಂಡು ಕೋಟ್ಯಧೀಶರಾಗುತ್ತಾರೆ. ಇದೆಲ್ಲವೂ ಅವರ ಮೋಜಿನ ಬದುಕಿಗೆ ಆರಿಸಿಕೊಂಡಿರುವ ಮಾರ್ಗ. ಇಂತಹವರ ಒತ್ತಡಕ್ಕೆ ಮಣಿದು, ಜನ ವಿರೋಧವನ್ನು ಧಿಕ್ಕರಿಸಿ, ಪಶ್ಚಿಮಘಟ್ಟಗಳನ್ನು  ವಿಶ್ವಪಾರಂಪರಿಕ ತಾಣದ ಪಟ್ಟಿಯಲ್ಲಿ ತರಬೇಕೆನ್ನುವುದು ಸಹ ಪ್ರಮುಖವಾದ ಪ್ರಶ್ನೆಯಾಗಿದೆ. ಇಂತಹ ಸ್ವಯಂ ಸೇವಾ ಸಂಸ್ಥೆಗಳ ಯಜಮಾನರು ತಮಗೂ ಸ್ಥಳೀಯರ ಬೆಂಬಲವಿದೆ ಎಂಬುದನ್ನು ತೋರಿಸಿಕೊಳ್ಳುವುದಕ್ಕೆ ಅಲ್ಲಲ್ಲಿ ಕೆಲವರನ್ನು ಆಯ್ಕೆಮಾಡಿಕೊಂಡು, ಸ್ಥಳೀಯವಾಗಿ ಹಲವಾರು ಬಾಡಿಗೆ ಸಂಸ್ಥೆಗಳನ್ನು ಹುಟ್ಟುಹಾಕಿಕೊಂಡು, ಅಂತಹವುಗಳ ಮೂಲಕವೂ ಮಾತನಾಡುತ್ತಿದ್ದಾರೆ.

ಬುಡಮಟ್ಟದಲ್ಲಿ ವಿಶ್ವಪಾರಂಪರಿಕ ತಾಣದ ಪರವಾಗಿ ಮಾತನಾಡುವವರೆಲ್ಲರೂ ಸಹ ಮೇಲೆ ನಮೂದಿಸಿದ ಡೋಂಗಿ ಪರಿಸರವಾದಿಗಳ ಸಾಕು ನಾಯಿಗಳೇ ಆಗಿದ್ದಾರೆ. ಇಂತಹವರು ವಿಧಾನಸಭೆ ಕೈಗೊಂಡ ನಿರ್ಣಯದ ವಿರುದ್ಧ ಮಾತನಾಡುತ್ತಿದ್ದಾರೆಂದರೆ ಮತ್ತು ನಿರ್ಣಯ ಕೈಗೊಂಡ ವಿಧಾನಸಭೆ ಸದಸ್ಯರುಗಳ ವಿರುದ್ಧವೇ ದುರುದ್ದೇಶ ಕಲ್ಪಿಸುವ ಮಟ್ಟಕ್ಕೆ ಹೋಗುತ್ತಾರೆಂದರೆ ಇದು ತುಂಬಾ ಅಘಾತಕಾರಿ ಬೆಳವಣಿಗೆಯೆಂದೇ ವ್ಯಾಖ್ಯಾನಿಸಬೇಕಾಗುತ್ತದೆ. ಇವರ ಇಂತಹ ನಡಾವಳಿಕೆ ಪ್ರಜಾತಂತ್ರ ವ್ಯವಸ್ಥೆಗೆ ಮಾರಕ ಮಾತ್ರವಲ್ಲ, ಇದು ವಿಧಾನಸಭೆಯ ಘೋರವಾದ ಹಕ್ಕುಚ್ಯುತಿ ಕೂಡ ಆಗುತ್ತದೆ. ಇದನ್ನು ಗಮನಕ್ಕೆ ತೆಗೆದುಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕಾದುದು ವಿಧಾನಸಭಾ ಸದಸ್ಯರ ಜವಾಬ್ದಾರಿಯಾಗಿದೆ.

ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯ ಸರ್ವಸಮ್ಮತವಾದುದು. ಎಲ್ಲ ಪಕ್ಷಗಳ ಸದಸ್ಯರು ಅದರಲ್ಲಿ ಭಾಗವಹಿಸಿ, ಸುಮಾರು 2 ಗಂಟೆಗಳ ಕಾಲ ಚರ್ಚೆಯಲ್ಲಿ ಪಾಲ್ಗೊಂಡು ನಿರ್ಣಯವನ್ನ್ನು ಅಂಗೀಕರಿಸಿದ್ದಾರೆ. ಈ ನಿರ್ಣಯ ಅಂಗೀಕರಿಸಿದ್ದಕ್ಕೆ ಶಾಸಕರುಗಳ ಮೇಲೆ ದುರುದ್ದೇಶದ ಆರೋಪ ಅಂದರೆ ಗಣಿಲಾಬಿ, ಟಿಂಬರ್ ಲಾಬಿಗಳಂತಹ ಲಾಬಿಗಳಿಗೆ ಮಣಿದಿದ್ದಾರೆ ಎಂದು ಆರೋಪ ಮಾಡುವ ಭಂಡ ಧೈರ್ಯವನ್ನು ಪ್ರದರ್ಶಿಸಿದವರ ವಿರುದ್ಧ ಸೂಕ್ತ ಕಾರ್ಯಾಚರಣೆಯಾಗಬೇಕು. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ನಿರ್ಣಯವನ್ನು ಸಮರ್ಥಿಸಿದ್ದಾರೆ. ಜೆಡಿಎಸ್ ಪಕ್ಷದ ಸದನದ ಸದಸ್ಯರೆಲ್ಲರೂ ನಿರ್ಣಯವನ್ನ್ನು ಸಮರ್ಥಿಸಿದ್ದಾರೆ.

ಸುಮಾರು 2 ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ 15 ಜನರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಶಾಸಕರು ಭಾಗವಹಿಸಿ, ಎಲ್ಲರೂ ಒಕ್ಕೊರಲಿನಿಂದ ನಿರ್ಣಯವನ್ನು ಬೆಂಬಲಿಸಿ, ಅವಿರೋಧವಾಗಿ ನಿರ್ಣಯ ಅಂಗೀಕೃತಗೊಂಡಿದ್ದರೂ ಕೂಡ ಅದನ್ನು ಬೀದಿಯಲ್ಲಿ ಖಂಡಿಸಿ ಮಾತನಾಡುವಷ್ಟು ವಿದೇಶಿ ಎಂಜಲು ಕಾಸಿನ ಜನರ ಭಂಡ ಧೈರ್ಯವನ್ನು ಮೆಚ್ಚಲೇಬೇಕು. ಇಂತಹ ಶಕ್ತಿಗಳ ಪರವಾಗಿ ಪ್ರಜಾವಾಣಿಯಂತಹ ಜನಪರ ಪತ್ರಿಕೆಯಲ್ಲಿ ಸಂಪಾದಕೀಯ ಪ್ರಕಟವಾಗುವುದು ಮತ್ತು ಹಲವಾರು ಮುಖ್ಯವಾಹಿನಿ ಪತ್ರಿಕೆಗಳಲ್ಲಿ ನಿರಂತರವಾಗಿ ಲೇಖನಗಳು ಪ್ರಕಟವಾಗುತ್ತಿರುವುದು, ಈ ಡೋಂಗಿ ಪರಿಸರವಾದಿಗಳ ಪ್ರಭಾವ ಎಷ್ಟಿದೆ ಎಂಬುದನ್ನು ಸಾರಿ ಹೇಳುತ್ತದೆ.


Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಖಾಲಿಯಾದ ಜಲಾಶಯಗಳು ಕುಡಿಯುವ ನೀರಿಗೆ ಹಾಹಾಕಾರ

ಬೇಸಿಗೆಯ ಪ್ರಖರತೆ ಹೆಚ್ಚುತ್ತಲೇ ಇದೆ. ಕಾವೇರಿ ಮತ್ತು ಕೃಷ್ಣಾ ಕೊಳ್ಳದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಹಿಂದೆಂದೂ ಕಂಡರಿಯದಷ್ಟು ಕುಸಿದಿದೆ. ಪ್ರತಿ ಸಲದಂತೆ ಜ ...


ನಿಮ್ಮ ಅನಿಸಿಕೆ

postClick here to post your views
EPAPER
access

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್

ಅಕ್ಷರ ಸೇವೆಯಿಂದ ಜನಸೇವೆಗೆ;ತೆಂಕಮಿಜಾರಿನ ಮುತ್ತು

ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...


- ಪ್ರೇಮಶ್ರೀ ಕಲ್ಲಬೆಟ್ಟು

ನಾನು ಮತ್ತು ದೇವರು

 ರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...


- ಸುನೀಲ್ ರಾವ್

ಬಿಟ್ಟಿ ಅಂಕದ ಪಿಯುಸಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಬುಟ್ಟಿಗೆಸೆ!

 ಮಾನ್ಯರೆ,

ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...


- -‘ಮಾತರಿ’ ಸಾಗ

ಶಂಕರದರ್ಶನ ಮತ್ತು ವಿಮರ್ಶಾ ರಾಜಕೀಯಗಳು

ಭಾರತ ದೇಶದ, ಜಗತ್ತಿನ ಅಗ್ರ ದಾರ್ಶನಿಕರಲ್ಲಿ ಓರ್ವರು ಶ್ರೀ ಶಂಕರಾಚಾರ್ಯರು. (ಕ್ರಿ. 8ನೆ ಶತಮಾನ) ಅವರ ದ ...


- -ಡಾ.ಎಂ. ಪ್ರಭಾಕರ ಜೋಶಿ