ಅಂಕಣ

mail-img print-img

ಔಷಧ ರಾಜಕಾರಣ

ಮಂಗಳವಾರ - ಸೆಪ್ಟೆಂಬರ್ -18-2012

ಔಷಧಿಗಳು ಜನರ ಆರೋಗ್ಯ ಮತ್ತು ಜೀವರಕ್ಷಕಗಳು. ವಿಶ್ವದ ಬಹುತೇಕ ರಾಷ್ಟ್ರಗಳು ಜನಸಾಮಾನ್ಯರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರಜೆಗಳ ಸಂಪೂರ್ಣ ಆರೋಗ್ಯ ವೆಚ್ಚವನ್ನು ಸರಕಾರಗಳೇ ಉಚಿತವಾಗಿ ನೀಡುವ ಪ್ರಯತ್ನವನ್ನು ಮಾಡುತ್ತಿವೆ. ಆದರೆ ವಿಪರ್ಯಾಸವೆಂದರೆ ನಮ್ಮ ದೇಶದಲ್ಲಿ ಕೇಂದ್ರ ಸರಕಾರವು ಆಯವ್ಯಯದ ಶೇ.0.9 ಮಾತ್ರ ಜನರ ಆರೋಗ್ಯ ರಕ್ಷಣೆಗಾಗಿ ಒದಗಿಸಿದೆ. ನಮ್ಮ ರಾಷ್ಟ್ರದ ಜನಸಂಖ್ಯೆಗೆ ಹೋಲಿಸಿ ನೋಡಿದಲ್ಲಿ ಕೇವಲ ಶೇ.೩೫ ಜನರು ಮಾತ್ರ ಈ ಯೋಜನೆಯ ಉಪಯೋಗ ಪಡೆಯಬಹುದಾಗಿದೆ. ಉಳಿದ ಶೇ.65 ಜನರಿಗೆ ಯಾವುದೇ ಆರೋಗ್ಯ ಯೋಜನೆಗಳು ಲಭ್ಯವಾಗುತ್ತಿಲ್ಲ ಹಾಗೂ ಇವರು ಖಾಸಗಿಯಲ್ಲಿ ಲಭ್ಯವಿರುವ ದುಬಾರಿ ಔಷಧಿಗಳ ಮೇಲೆ ಅವಲಂಬಿಸ ಬೇಕಾಗಿದೆ. ಸಾರ್ವತ್ರಿಕ ಆರೋಗ್ಯ ರಕ್ಷಣಾ ನೀತಿಯನ್ನು ಇತರ ರಾಷ್ಟ್ರಗಳು ಅನುಸರಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ಸರಕಾರಗಳು ಗಂಭೀರ ಚಿಂತನೆಯ ಜೊತೆ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ.

ಆರೋಗ್ಯ ಕ್ಷೇತ್ರದ ಕಡೆಗೆ ಕೇಂದ್ರ ಸರಕಾರಕ್ಕೆ ಇರುವ ಧೋರಣೆಗೆ ನಮ್ಮೆಲ್ಲರ ಸವಾಲೆಂದರೆ, ಹಗರಣಗಳ ಸರಮಾಲೆಯಲ್ಲಿ ಮುಳುಗಿರುವ ಸರಕಾರ ಮತ್ತು ಕೇವಲ ಒಂದೇ ಪ್ರಮುಖ ಹಗರಣದಲ್ಲಿ ರೂ. 1.67ಲಕ್ಷ ಕೋಟಿ ನಷ್ಟ ಹೊಂದಿರುವ ಸಂದರ್ಭದಲ್ಲಿ ಕೇಂದ್ರ ಸರಕಾರವು ಇದೇ ಹಣದಲ್ಲಿ ಇಡೀ ರಾಷ್ಟ್ರದ ಜನತೆಗೆ ಸಂಪೂರ್ಣ ಉಚಿತವಾಗಿ ಔಷಧಿಗಳನ್ನು ವಿತರಿಸಬಹುದಾಗಿತ್ತು. ಏಕೆಂದರೆ ಇಡೀ ದೇಶದ ಔಷಧಿ ಉದ್ಯಮದ ವಾರ್ಷಿಕ ವಹಿವಾಟು ಕಳೆದ ವರ್ಷದಲ್ಲಿ 1.04 ಲಕ್ಷ ಕೋಟಿ ರೂಪಾಯಿಗಳಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ ಔಷಧಿಗಳ ಬೆಲೆಗಳು ತೀವ್ರವಾಗಿ ಏರಿಕೆಯಾಗಿದ್ದರೂ ಕೂಡ ಸರಕಾರ ಈ ವಿಚಾರವನ್ನು ನಿರ್ಲಕ್ಷಿಸುತ್ತಾ ಬಂದಿದೆ.

ಔಷಧಿ ಉತ್ಪಾದಕರು ವಿಪರೀತ ಲಾಭದ ಆಸೆಗೆ ಅತೀ ಹೆಚ್ಚು ಬೆಲೆಯನ್ನು ವಿಧಿಸಿ ಸಾರ್ವಜನಿಕರ ಮೇಲೆ ಸವಾರಿ ಮಾಡುತ್ತಿದ್ದರೂ ಸರಕಾರ ದಿವ್ಯ ಮೌನವನ್ನು ವಹಿಸಿದೆ.ಸರಕಾರವೇ ಆಯೋಜಿಸಿರುವ ರಾಷ್ಟ್ರೀಯ ಔಷಧ ಬೆಲೆಗಳನ್ನು ನಿಗದಿ ಮಾಡಬಹುದಾದ ಆಯೋಗ (NPPA) ಹೆಚ್ಚು ಬೆಲೆಗೆ ಮಾರಾಟ ಮಾಡಿರುವ ಔಷಧ ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ಈ ವರದಿಯ ಪ್ರಕಾರ ಸುಮಾರು ಮೂರು ವರ್ಷಗಳ ಅವಧಿಗೆ ರೂ.2328.92 ಕೋಟಿಗಳು. ನಿಗದಿಯಾದ ಬೆಲೆಗಿಂತ ಹೆಚ್ಚಿನ ದರದಲ್ಲಿ ಮಾರಾಟವಾಗಿರುವುದನ್ನು ಸರಕಾರ ಮುಂದಿಟ್ಟಿದೆ. ಆದರೆ ಕೇಂದ್ರ ಸರಕಾರವು ಶೇ.10 ಕ್ಕಿಂತ ಕಡಿಮೆ ಹಣವನ್ನು ಮಾತ್ರ ಇದುವರೆಗೂ ಔಷಧಿ ಉತ್ಪಾದಕರಿಂದ ವಸೂಲಿ ಮಾಡಿದೆ. ಉಳಿದ ಹಣ ಚಿದಂಬರ ರಹಸ್ಯವಾಗಿ ಉಳಿದಿದೆ. ಇದು ನಮ್ಮ ಕೇಂದ್ರ ಸರಕಾರದ ಉಡಾಫೆ ಹಾಗೂ ದಿವ್ಯ ನಿರ್ಲಕ್ಷಕ್ಕೆ ಕೇವಲ ಒಂದು ಉದಾಹರಣೆಯಾಗಿದೆ.

ನಮ್ಮ ರಾಷ್ಟ್ರದಲ್ಲಿ ಔಷಧ ಬೆಲೆ ನಿಯಂತ್ರಣ ಕಾಯಿದೆ (DPCO) ಚಾಲ್ತಿಯಲ್ಲಿದ್ದು, ಹಲ್ಲಿಲ್ಲದ ಹುಲಿಗೆ ಸಮಾನವಾಗಿದೆ. ಈವರೆಗೆ ಕಾಯಿದೆಯಡಿಯಲ್ಲಿ ಕೇವಲ 74 ಔಷಧಿಗಳು ಇದರ ಅಡಿಯಲ್ಲಿ ಇವೆ. ಇವುಗಳಲ್ಲಿ ಹಲವಾರು ಔಷಧಿಗಳು ಬಳಕೆಯಲ್ಲೇ ಇಲ್ಲವಾಗಿದೆ. ಇಷ್ಟಾಗಿಯೂ ಕೇಂದ್ರ ಸರಕಾರ ಕೆಲವೇ ಔಷಧಿಗಳ ಮೇಲಿರುವ ಬೆಲೆ ನಿಯಂತ್ರಣವನ್ನು ಪಾಲಿಸುವಲ್ಲಿ ವಿಫಲವಾಗಿದೆ.

ದೇಶೀಯ ಔಷಧ ಉತ್ಪಾದಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೂಪಿಸಲಾಗಿದ್ದ ಕೈಗಾರಿಕಾ ನೀತಿಗಳು ಭಾರತವು ಔಷಧ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಸಾಧ್ಯವಾಯಿತು ಹಾಗೂ ಜಾಗತಿಕ ಮಟ್ಟದಲ್ಲಿ ಹಲವು ಬಹುರಾಷ್ಟ್ರೀಯ ಕಂಪೆನಿಗಳ ಜೊತೆ ಪೈಪೋಟಿ ಮಾಡಲು ಸಾಧ್ಯವಾಯಿತು. ಆದರೆ ಇಂದು ಪರಿಸ್ಥಿತಿ ಬದಲಾಗಿದ್ದು, ಇದಕ್ಕೆ ವ್ಯತಿರಿಕ್ತವಾದ ಬೆಳವಣಿಗೆಗಳಾಗಿವೆ. ಔಷಧ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ  ನೀತಿ ನಿಯಮಗಳನ್ನು ಅನುಷ್ಠಾನ ಮಾಡದ ಸರಕಾರದ ಧೋರಣೆ ಹಾಗೂ ಆರ್ಥಿಕ ಉದಾರೀಕರಣ ನೀತಿಗಳಿಂದಾಗಿ ಬಹುರಾಷ್ಟ್ರೀಯ ಕಂಪೆನಿಗಳು ಅತಿ ಹೆಚ್ಚಿನ ಲಾಭದ ಆಸೆಗೆ ಭಾರತದ ಮಾರುಕಟ್ಟೆಯ ಮೇಲೆ ದಾಳಿ ಇಡುತ್ತಿವೆ.

ನಮ್ಮ ದೇಶದ ಸ್ಥಳೀಯ ಉತ್ಪಾದಕರು ಗಳೊಂದಿಗೆ ಸಹಭಾಗಿತ್ವ ಅಥವಾ ಸ್ವಾಧೀನ ಪಡಿಸಿಕೊಳ್ಳುವುದರ ಮೂಲಕ ಮಾರುಕಟ್ಟೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದೆ. ದೇಶೀಯ ಮಾಲಕರುಗಳು, ಹಣದ ಆಸೆಗೆ ಬಲಿಯಾಗಿ ಸಾವಿರಾರು ಕೋಟಿ ರೂಪಾಯಿಗಳಿಗೆ ತಮ್ಮ ಉತ್ಪಾದನಾ ಘಟಕಗಳನ್ನು, ಸಂಸ್ಥೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ  ಕೈಗಾರಿಕಾ ಯೋಜನೆ ಮತ್ತು ಪ್ರಚಾರ ಇಲಾಖೆ ಪ್ರಕಟಿಸಿರುವ ವರದಿಯಲ್ಲಿ ಆತಂಕ ವ್ಯಕ್ತಪಡಿಸಿದೆ. ಇದೇ ರೀತಿ ಔಷಧ ಕ್ಷೇತ್ರದ ಕಬಳಿಕೆ ಮುಂದುವರಿದಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಏಕಸ್ವಾಮ್ಯತೆಯನ್ನು ಸಾಧಿಸಿ ಔಷಧ ಬೆಲೆ ಇನ್ನೂ ದುಬಾರಿಯಾಗುವ ಎಲ್ಲಾ ಸಾಧ್ಯತೆಗಳು ಇವೆಯೆಂದು ಅಭಿಪ್ರಾಯಪಟ್ಟಿದೆ. ಈವರೆಗೆ ಯಾವುದೇ ಕ್ರಮವನ್ನು ಕೈಗೊಳ್ಳದಿರುವುದು ದುರದೃಷ್ಟಕರವೇ ಸರಿ.

ಕೇಂದ್ರ ಸರಕಾರ ಮತ್ತೊಂದು ಗಂಭೀರ ವಿಷಯವನ್ನು ಕಡೆಗಣಿಸುತ್ತಿರುವುದು ವಿಷಾದನೀಯ. ಅದೇನೆಂದರೆ ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಅನೈತಿಕ ಮಾರಾಟ ವಿಧಾನಗಳ ವಿಚಾರ. ಔಷಧ ಸಂಸ್ಥೆಗಳು ಅತಿ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುತ್ತಿದ್ದು ಅಲ್ಲದೆ ಅಕ್ರಮ ವಿಧಾನಗಳನ್ನು ಮುಕ್ತವಾಗಿಯೇ ಅನುಸರಿಸುತ್ತಿದೆ. ಇವುಗಳು ಹೆಚ್ಚಿನ ವ್ಯಾಪಾರದ ದುರಾಸೆಯಿಂದ ಮಧ್ಯವರ್ತಿಗಳಿಗೆ  ಹೆಚ್ಚು ಲಾಭ ಬರುವಂತೆ ವ್ಯವಹಾರ ರೂಪಿಸಿ ಔಷಧಗಳನ್ನು ವಿತರಿಸುತ್ತಿವೆ. ಅನೇಕ ಔಷಧ ಸಂಸ್ಥೆಗಳು ಅನಧಿಕೃತವಾಗಿ ಅಧಿಕ ಅಂತರದ ಲಾಭವನ್ನು ನೀಡುತ್ತಿದ್ದು, ಇದರಿಂದ ಜನಸಾಮಾನ್ಯರಿಗೆ ಯಾವುದೇ ಉಪಯೋಗವಾಗದೆ ಬರೀ ಉತ್ಪಾದಕರಿಗೆ ಮತ್ತು ವಿತರಕರಿಗೆ ಲಾಭ ತಂದು ಕೊಡುತ್ತಿದೆ. 

ಕೇಂದ್ರ ಸರಕಾರದ ಮೇಲಿನ ಬೇಡಿಕೆಯೆಂದರೆ ಸಾರ್ವಜನಿಕರು/ರೋಗಿಗಳನ್ನು ಈ ಮೇಲಿನ ಹಗಲು ದರೋಡೆ ನಡೆಯುತ್ತಿರುವ ಈ ಕ್ಷೇತ್ರದಲ್ಲಿ ಮಧ್ಯಪ್ರವೇಶಿಸಿ ಅಧಿಕ ಪ್ರಮಾಣದ ಹಣವು ಅನೈತಿಕ ರೀತಿಯಲ್ಲಿ ವಹಿವಾಟಾಗುತ್ತಿರುವುದನ್ನು ನಿಯಂತ್ರಿಸಬೇಕು ಹಾಗೂ ಜನಪರ/ರೋಗಿಗಳ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಔಷಧ ನೀತಿಗಳನ್ನು ರೂಪಿಸಬೇಕು.

ಇಷ್ಟೆಲ್ಲಾ ಗಂಭೀರ ವಿಚಾರಗಳ ನಡುವೆ ಸರಕಾರವು ಮೌನವಾಗಿದೆ. ಈ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ಕೆಲವು ಕಳಪೆ ಹಾಗೂ ನಕಲಿ ಔಷಧ ತಯಾರಕರು ನಮ್ಮ ದೇಶದ ಮಾರುಕಟ್ಟೆಯನ್ನು ವ್ಯಾಪಿಸುತ್ತಿದ್ದಾರೆ. ಔಷಧ ಮಾರುಕಟ್ಟೆಯಲ್ಲಿ ತರ್ಕಬದ್ಧವಲ್ಲದ ಹಾಗೂ ಅಪಾಯಕಾರಿ ಔಷಧಗಳು ದೊಡ್ಡ ಪ್ರಮಾಣದಲ್ಲಿ ಸರಬರಾಜಾಗುತ್ತಿದೆ. ಇದನ್ನು ಮಾರಾಟ ಮಾಡಲು ಸಂಸ್ಥೆಗಳು ಅಕ್ರಮ ಮಾರ್ಗದಲ್ಲಿ ಪ್ರಚಾರ ಕಾರ್ಯಕೈಗೊಳ್ಳುತ್ತಿದ್ದು, ಎಲ್ಲ ತರಹದ ಆಮಿಷಗಳನ್ನು ಮತ್ತು ಮನೋರಂಜನೆಗಳನ್ನು ವೈದ್ಯರಿಗೆ ಒಡ್ಡುತ್ತಿವೆ.

ಉದ್ಯಮದವರೇ ಯಾವುದೇ ಕಡಿವಾಣವಿಲ್ಲದೆ ಮುಕ್ತವಾಗಿ ಅತ್ಯಂತ ಶ್ರೇಷ್ಠ ಹಾಗೂ ಉನ್ನತವಾದ ಈ ವೈದ್ಯಕೀಯ ಮತ್ತು ಔಷಧ ಕ್ಷೇತ್ರವನ್ನು ಹಾಗೂ ವೃತ್ತಿಯನ್ನು ಭ್ರಷ್ಟಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ಸರಕಾರವು ದುರ್ಬಲವಾದ ಪ್ರಯತ್ನವನ್ನು ಸಮಾನ ನೈತಿಕ ನಿಯಮವನ್ನು ತರಲು ಯತ್ನಿಸಿ ಅರ್ಧದಲ್ಲಿಯೇ ಕೈಬಿಟ್ಟಿದೆ. ಈ ನಿಟ್ಟಿನಲ್ಲಿ ಸರಕಾರವು ಪ್ರಾಮಾಣಿಕವಾಗಿ ಶ್ರೀಸಾಮಾನ್ಯರ ಹಿತದೃಷ್ಟಿಯನ್ನು ಬಡರೋಗಿಗಳ ಹಿತದೃಷ್ಟಿಯನ್ನು ಕಾಪಾಡುವಂತಹ ಔಷಧ ನೀತಿಯನ್ನು ರೂಪಿಸಿ ಅದನ್ನು ಅನುಷ್ಠಾನಕ್ಕೆ ತರಬೇಕು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆರೋಗ್ಯವೂ ಕೂಡ ಎಲ್ಲ ನಾಗರಿಕರ ಹಕ್ಕು ಎಂಬುದನ್ನು ಕಾಣಬೇಕು.   

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಜನಸಂಖ್ಯೆ ಹೆಚ್ಚಳದ ಪರಿಣಾಮ

ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮನೋಲ್ಲಾಸದ ನಾಲೆಗಳು: (ಭಾಗ-2)

ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...


- ಶೂದ್ರ ಶ್ರೀನಿವಾಸ್

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್