ಅಂಕಣ

mail-img print-img

ಜನನಾಯಕನೊಬ್ಬನ ನಿರ್ಗಮನ

ಸೋಮವಾರ - ಜೂನ್ -11-2012

ಅದೊಂದು ಕಾಲವಿತ್ತು. ಆಗ ಬಂದ ಜನನಾಯಕರು ಅಂತಿಂಥವರಲ್ಲ. ಈಗಿನವರಂತೆ ಫ್ಲೆಕ್ಸ್-ಬೋರ್ಡ್‌ನಲ್ಲಿ ಹುಟ್ಟಿ ಅಲ್ಲಿ ಹುಳುಗಳಂತೆ ಸಾಯುವವರಲ್ಲ. ಯಾರದೋ ಕಾಲೊತ್ತಿ, ಇನ್ನಾರದೋ ತಲೆಹಿಡಿದು ಮೇಲೆ ಬಂದವರಲ್ಲ. ಜನಹೋರಾಟದ ಅಗ್ನಿಕುಂಡದಲ್ಲಿ ಮಿಂದು ಮೇಲೆದ್ದು ಬಂದವರು. ನಂದಾದೀಪದಂತೆ ಸುತ್ತಲೂ ಬೆಳಕು ನೀಡಿ, ತಮ್ಮನ್ನು ತಾವು

ಕಳೆದ ವಾರ ನಮ್ಮನ್ನಗಲಿದ ಬಿ.ವಿ.ಕಕ್ಕಿಲ್ಲಾಯ ಆ ಕಾಲದ ಅಗ್ನಿಕುಂಡದಲ್ಲಿ ಮಿಂದು ಬಂದವರು. 1952ರಲ್ಲಿ ಸಂಸತ್ತನ್ನು ಪ್ರವೇಶಿಸಿ ಜವಹರಲಾಲ್ ನೆಹರೂ, ಡಾ.ಅಂಬೇಡ್ಕರ್, ಲೋಹಿಯಾ, ಭೂಪೇಶ ಗುಪ್ತಾ, ಎಕೆಜಿ ಒಡನಾಟ ಹೊಂದಿದವರು. ಸಂಸತ್ತು ಪ್ರವೇಶಿಸುವ ಮುನ್ನ ಸ್ವಾತಂತ್ರ್ಯ ಹೋರಾಟ ದಲ್ಲಿ ಧುಮುಕಿ ಕರ್ನಾಟಕದ ಉದ್ದಕ್ಕೂ ಓಡಾಡಿದವರು. ಭೂಗತ ರಾಗಿದ್ದಾಗ ಬಂಧನಕ್ಕೆ ಒಳ ಗಾಗಿ ದಾವಣಗೆರೆ ಜೈಲನ್ನು ಸೇರಿದವರು. ಮುಂದೆ ಒಂದೇ ತಿಂಗಳಲ್ಲಿ ಅದೇ ಜೈಲಿನ ಕಿಟಕಿ ಮುರಿದು ತಪ್ಪಿಸಿಕೊಂಡು ರೈಲು ಹಳಿಗುಂಟ ಮಂಗಳೂರನ್ನು ತಲುಪಿದವರು. ನಂತರ ಏಕೀಕರಣ ಕರ್ನಾಟಕ ಹೋರಾಟದ ಸಾರಥ್ಯ ವಹಿಸಿದವರು.

ಸುಟ್ಟುಕೊಂಡವರು. ಸ್ವಾತಂತ್ರ ಹೋರಾಟದ ಆ ದಿನಗಳಲ್ಲಿ ಬಂದ ನೇತಾರರು ಮುಂದೆ ಯಾವುದೇ ಪಕ್ಷಕ್ಕೆ ಸೇರಿರಲಿ, ಆದರೆ ಅವರ ಪ್ರಾಮಾಣಿಕತೆ, ಸೈದ್ಧಾಂತಿಕ ಬದ್ಧತೆ, ಸಾಮಾಜಿಕ ಕಾಳಜಿ ಎಲ್ಲಕ್ಕೂ ಮುಖ್ಯವಾಗಿ ಮನುಷ್ಯತ್ವ ಅವರಲ್ಲಿ ಕೊನೆಯವರೆಗೂ ಅಬಾಧಿತವಾಗಿ ಉಳಿಯಿತು.

ಕಳೆದ ವಾರ ನಮ್ಮನ್ನಗಲಿದ ಬಿ.ವಿ.ಕಕ್ಕಿಲ್ಲಾಯ ಆ ಕಾಲದ ಅಗ್ನಿಕುಂಡದಲ್ಲಿ ಮಿಂದು ಬಂದವರು. 1952ರಲ್ಲಿ ಸಂಸತ್ತನ್ನು ಪ್ರವೇಶಿಸಿ ಜವಹರಲಾಲ್ ನೆಹರೂ, ಡಾ.ಅಂಬೇಡ್ಕರ್, ಲೋಹಿಯಾ, ಭೂಪೇಶ ಗುಪ್ತಾ, ಎಕೆಜಿ ಒಡನಾಟ ಹೊಂದಿದವರು. ಸಂಸತ್ತು ಪ್ರವೇಶಿಸುವ ಮುನ್ನ ಸ್ವಾತಂತ್ರ್ಯ ಹೋರಾಟ ದಲ್ಲಿ ಧುಮುಕಿ ಕರ್ನಾಟಕದ ಉದ್ದಕ್ಕೂ ಓಡಾಡಿದವರು. ಭೂಗತ ರಾಗಿದ್ದಾಗ ಬಂಧನಕ್ಕೆ ಒಳ ಗಾಗಿ ದಾವಣಗೆರೆ ಜೈಲನ್ನು ಸೇರಿದವರು. ಮುಂದೆ ಒಂದೇ ತಿಂಗಳಲ್ಲಿ ಅದೇ ಜೈಲಿನ ಕಿಟಕಿ ಮುರಿದು ತಪ್ಪಿಸಿಕೊಂಡು ರೈಲು ಹಳಿಗುಂಟ ಮಂಗಳೂರನ್ನು ತಲುಪಿದವರು. ನಂತರ ಏಕೀಕರಣ ಕರ್ನಾಟಕ ಹೋರಾಟದ ಸಾರಥ್ಯ ವಹಿಸಿದವರು.

ಇಂತಹ ಕಕ್ಕಿಲಾಯರ ಹೆಸರನ್ನು ನಾನು ಮೊದಲು ಕೇಳಿದ್ದು ನನ್ನ ಹದಿನಾರನೇ ವಯಸ್ಸಿನಲ್ಲಿ. ಆಗಲೇ ಕಮ್ಯುನಿಸ್ಟ್ ವಿಚಾರಧಾರೆಯ ಸೆಳೆತಕ್ಕೆ ಒಳಗಾಗಿದ್ದ ನಾನು ಚಳವಳಿಯೊಂದಿಗೆ ಗುರುತಿಸಿ ಕೊಳ್ಳಲು ತಹತಹಿಸುತ್ತಿದ್ದೆ. ಆಗ ಕಕ್ಕಿಲ್ಲಾಯರು ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ. ಪಕ್ಷದ ಸದಸ್ಯತ್ವ ನೀಡಬೇಕೆಂದು ಕೋರಿ ಅವರಿಗೆ ಹತ್ತು ಪೈಸೆಯ ಒಂದು ಅಂತರ್ದೇಶಿ ಪತ್ರವನ್ನು ಬರೆದಿದ್ದೆ. ಅಷ್ಟು ದೊಡ್ಡ ನಾಯಕರು ನನಗೇನು ಉತ್ತರ ಕೊಡುತ್ತಾರೆಂದು ಮರೆತುಬಿಟ್ಟಿದ್ದೆ. ಆದರೆ ಹತ್ತು ದಿನಗಳ ನಂತರ ನನಗೆ ಕಕ್ಕಿಲಾಯರ ಮೂರು ಪುಟಗಳ ಪತ್ರಬಂತು. ಮಾರ್ಕ್ಸವಾದ ಅಧ್ಯಯನ ಮಾಡಲು ತಿಳಿಸಿದ ಅವರು ಸದಸ್ಯತ್ವ ನೀಡಲು ನಿಮಗೆ ಇನ್ನೂ ವಯಸ್ಸಾಗಿಲ್ಲ ಎಂದು ಹೇಳಿದ್ದರು.

ನಂತರ ಕಕ್ಕಿಲಾಯರನ್ನು ಕಣ್ಣಾರೆ ಕಂಡಿದ್ದು 1969ರಲ್ಲಿ. ಹುಬ್ಬಳ್ಳಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಆಗ ನಡೆಯುತ್ತಿತ್ತು. ಜನಸಂಘದ ಪರವಾಗಿ ಗೆದ್ದಿದ್ದ ಸದಾಶಿವ ಶೆಟ್ಟರ (ಜಗದೀಶ ಶೆಟ್ಟರ ದೊಡ್ಡಪ್ಪ) ಅವರ ಅಕಾಲಿಕ ಮರಣದಿಂದ ನಡೆದ ಈ ಉಪಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಪರವಾಗಿ ಎ.ಜೆ.ಮುಧೋಳ ಸ್ಪರ್ಧಿಸಿದ್ದರು. ಅವರು ಪ್ರಚಾರಕ್ಕೆ ಭೂಪೇಶ ಗುಪ್ತಾ ಜೊತೆಗೆ ಆಗಮಿಸಿದ್ದ ಕಕ್ಕಿಲಾಯರನ್ನು ಆಗ ಭೇಟಿ ಮಾಡಿ ಮಾತನಾಡಿಸಿದೆ. ಕೆಲ ಪುಸ್ತಕಗಳನ್ನು ಕೊಟ್ಟು ಓದಲು ಹೇಳಿದ್ದರು. ಆ ಕಾಲದಲ್ಲಿ ಜಗನ್ನಾಥರಾವ್ ಜೋಶಿ ಜನಸಂಘದ ದೊಡ್ಡ ನಾಯಕರು. ಪ್ರಭಾವಿ ಭಾಷಣಕಾರರಾಗಿದ್ದ ಅವರ ಮಾತುಗಳನ್ನು ಕೇಳಲು ಹುಬ್ಬಳ್ಳಿಯ ದುರ್ಗದಬೈಲಿನಲ್ಲಿ ಸಾವಿರಾರು ಜನ ಸೇರುತ್ತಿದ್ದರು. ಅವರಿಗೆ ಪ್ರತಿಯಾಗಿ ಕಕ್ಕಿಲ್ಲಾಯರು ಮಾಡುತ್ತಿದ್ದ ಭಾಷಣವು ಕೂಡ ಅಷ್ಟೇ ಜನರನ್ನು ಆಕರ್ಷಿಸಿತ್ತು.

ಆರೆಸ್ಸೆಸ್, ಜನಸಂಘ ಎಂದರೆ ಏನು? ಅವು ಎಷ್ಟು ಅಪಾಯಕಾರಿ ಎಂದು ಕಕ್ಕಿಲ್ಲಾಯರು ವಿವರವಾಗಿ ಮಾತ ನಾಡುತ್ತಿದ್ದರು. ಆ ಪ್ರಭಾವ ಮುಂದೆ ನನ್ನನ್ನು ಅದೇ ದಾರಿಯಲ್ಲಿ ಮುನ್ನಡೆಸಿತು. ಮನುಷ್ಯ ಜಾತಿ-ಮತ-ಭಾಷೆಯನ್ನು ಮೀರಿ ಮನುಷ್ಯನಾಗಿ ಬದುಕಬೇಕೆಂಬ ಉದಾತ್ತ ಆಶಯ ನನ್ನಲ್ಲಿ ಒಡಮೂಡಿತು. ಕಕ್ಕಿಲಾಯರು ಕೊನೆ ಉಸಿರು ಇರುವವರೆಗೂ ಕೋಮುವಾದದ ಅಪಾಯದ ಬಗ್ಗೆ ಮಾತನಾಡುತ್ತಲೇ ಇದ್ದರು. ಒಂದೆರಡು ವರ್ಷಗಳ ಹಿಂದೆ ಅನಂತ ಸುಬ್ಬರಾವ್ ಜೊತೆ ಮಂಗಳೂರಿ ನಲ್ಲಿ ಅವರನ್ನು ಭೇಟಿ ಮಾಡಿದಾಗಲೂ ದಕ್ಷಿಣ ಕನ್ನಡ ಜಿಲ್ಲೆ ಹಿಂದೂ ಮತಾಂಧರ ಹುತ್ತವಾಯಿತಲ್ಲ ಎಂದು ಕಕ್ಕಿಲಾಯರು ಮಿಡುಕಿದ್ದರು.

1985ರಿಂದ 1989ರವರೆಗೆ ಕಕ್ಕಿಲಾಯರ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಅವಕಾಶವು ನನಗೆ ದೊರಕಿತ್ತು. ಆಗ ನಾನು ಬೆಂಗಳೂರು ಸಂಯುಕ್ತ ಕರ್ನಾಟಕದಲ್ಲಿದ್ದೆ. ಬಿಡುವಿನ ವೇಳೆಯಲ್ಲಿ ಕೆಂಬಾವುಟಕ್ಕೆ ಸೇವೆ ಸಲ್ಲಿಸುತ್ತಿದ್ದೆ. ಕಕ್ಕಿಲಾಯರು ಕೆಂಬಾವುಟದ ಸಂಪಾದಕರಾಗಿದ್ದರು. ನಿತ್ಯವೂ ಅವರೊಂದಿಗೆ ಚರ್ಚಿಸುತ್ತ ಸಾಕಷ್ಟು ವಿಷಯ ತಿಳಿದುಕೊಂಡೆ. ನೆಹರೂ, ಅಂಬೇಡ್ಕರ್, ಇಎಂಎಸ್, ಡಾಂಗೆ ಜೊತೆಗಿನ ಒಡನಾಟದ ನೆನಪುಗಳನ್ನು ಕಕ್ಕಿಲ್ಲಾಯರು ಹಂಚಿಕೊಳ್ಳುತ್ತಿದ್ದರು. ಅನೇಕ ಸಂದರ್ಭಗಳಲ್ಲಿ ಅವರ ರಾಜಕೀಯ ನಿಲುವುಗಳನ್ನು ನಾನು ವಿರೋಧಿಸುತ್ತಿದ್ದೆ. ಆದರೆ ನನ್ನ ಟೀಕೆಯನ್ನು ಕಕ್ಕಿಲ್ಲಾಯರು ಎಂದಿಗೂ ಪರ್ಸನಲ್ ಆಗಿ ತೆಗೆದುಕೊಳ್ಳಲಿಲ್ಲ. ಅದೇ ಪ್ರೀತಿ ಮತ್ತು ವಿಶ್ವಾಸದಿಂದ ಮಾತನಾಡುತ್ತಿದ್ದರು. ಆಗ ಕರ್ನಾಟಕದಲ್ಲಿ ಜನತಾದಳದ ಸರಕಾರ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ. ಕೆಲ ಸಿಪಿಐ ನಾಯಕರಂತೆ ಕಕ್ಕಿಲ್ಲಾಯರಿಗೂ ಹೆಗಡೆ ಬಗ್ಗೆ ಮೃದು ಧೋರಣೆಯಿತ್ತು. ಆದರೆ ಹೆಗಡೆ ಗುಳ್ಳೇನರಿ ಎಂಬುದು ನನ್ನ ಖಚಿತ ಅಭಿಪ್ರಾಯ. ಬಂಗಾರಪ್ಪನವರಿಗೆ ಮೋಸ ಮಾಡಿ ಹೆಗಡೆ ಮುಖ್ಯಮಂತ್ರಿಯಾದರೆಂದು ನಾನು ವಾದಿಸುತ್ತಿದ್ದೆ.

ಆಗ ನಡೆದ ಬಾಟ್ಲಿಂಗ್ ಮತ್ತು ರೇವಜಿತು ಹಗರಣಗಳ ಬಗ್ಗೆ ಕೆಂಬಾವುಟದ ಮುಖಪುಟದಲ್ಲಿ ನಾನು ಟೀಕಿಸಿ ಬರೆದೆ. ಒಂದು ಬಾರಿಯಂತೂ ನನ್ನ ಮುಖಪುಟ ಲೇಖನಕ್ಕೂ ಕಕ್ಕಿಲ್ಲಾಯರ ಸಂಪಾದಕೀಯಕ್ಕೂ ಮುಖಾಮುಖಿ ವಾಗ್ವಾದವೇ ನಡೆದಂತಿತ್ತು. ಎರಡೂ ಪ್ರಕಟವಾದವು. ಆದರೆ ಕಕ್ಕಿಲ್ಲಾಯರು ಅದ್ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳಲಿಲ್ಲ. ಆದರೆ ಅದೇ ಕಕ್ಕಿಲ್ಲಾಯರು ಹೆಗಡೆಯವರನ್ನು ಒಮ್ಮೆ ತರಾಟೆಗೆ ತೆಗೆದುಕೊಂಡಿದ್ದರು. ಕಮ್ಯುನಿಸ್ಟ್ ಪಕ್ಷದ ರೈತ ಸಂಘದ ನಿಯೋಗವೊಂದರ ನಾಯಕತ್ವ ವಹಿಸಿ ಕಕ್ಕಿಲ್ಲಾಯರು ಹೆಗಡೆಯವರನ್ನು ಭೇಟಿ ಯಾಗಿದ್ದರು. ಆಗ ಹೆಗಡೆ ತಮ್ಮದೇ ವ್ಯಂಗ್ಯ ಶೈಲಿಯಲ್ಲಿ, ನಿಮಗೆ ಬೇಸಾಯದ ಬಗ್ಗೆ ಎಷ್ಟು ಗೊತ್ತು ಎಂದು ಕಕ್ಕಿಲ್ಲಾಯರನ್ನು ಕೇಳಿದರು. ಆಗ ಅದೇ ಭಾಷೆಯಲ್ಲಿ ಕಕ್ಕಿಲ್ಲಾಯರು, ಬೇಸಾಯದ ಬಗ್ಗೆ ನಿಮಗೆಷ್ಟು ಗೊತ್ತೋ ನನಗೂ ಅಷ್ಟೇ ಗೊತ್ತು ಎಂದು ತಿರುಗೇಟು ನೀಡಿದರು. ಜಮೀನ್ದಾರಿ ಕುಟುಂಬ ದಿಂದ ಬಂದ ಕಕ್ಕಿಲ್ಲಾಯರಲ್ಲಿ ಅಪ್ರಜ್ಞಾ ಪೂರ್ವಕವಾಗಿ ಆಗಾಗ ಆ ಪಾಳೇಗಾರಿ ಗತ್ತು ಮತ್ತು ಚುಚ್ಚುಮಾತು ಸ್ಫೋಟವಾಗುತ್ತಿತ್ತು.

ಕಕ್ಕಿಲ್ಲಾಯರು ಶಾಸಕ ರಾಗಿದ್ದಾಗ ನಾನು ಮತ್ತು ರಂಜಾನ ದರ್ಗಾ ಅವರ ಶಾಸಕರ ಭವನದ ಕೊಠಡಿಗೆ ಹೋಗುತ್ತಿದ್ದೆವು. ದಿನವಿಡೀ ರಾಜಕಾರಣ ದಲ್ಲಿ ಮುಳುಗಿ ಸಾಕಾಗಿ ಹೋಗಿದ್ದ ಕಕ್ಕಿಲಾಯರು ನಮ್ಮನ್ನು ಕಂಡೊಡನೆ ಸಾಹಿತ್ಯದ ಬಗ್ಗೆ ಮಾತಿಗೆ ಎಳೆಯುತ್ತಿದ್ದರು. ಕನ್ನಡ ಸಾಹಿತ್ಯದ ಹೊಸ ಟ್ರೆಂಡ್‌ಗಳ ಬಗ್ಗೆ ಚರ್ಚಿಸುತ್ತಿದ್ದರು. ನವ್ಯ ಸಾಹಿತ್ಯದ ಬಗ್ಗೆ ಕಟುವಾದ ವಿಮರ್ಶೆ ಮಾಡುತ್ತಿದ್ದರು. ನಾನೊಂದು ಬಾರಿ ಕಕ್ಕಿಲಾಯರೊಂದಿಗೆ ಚರ್ಚಿಸುತ್ತಿದ್ದಾಗ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀವು ಅಷ್ಟು ಕಷ್ಟಪಟ್ಟು ಸಂಘಟಿಸಿದ ಚಳವಳಿ ಎಲ್ಲಿ ಹೋಯಿತು? ಈ ಜಿಲ್ಲೆ ಸಂಘ ಪರಿವಾರದ ಕೋಮುವಾದಿ ವಿಷಸರ್ಪದ ಹುತ್ತವೇಕಾಯಿತು? ನೀವು ಬರೀ ಕಾರ್ಮಿಕರನ್ನು ಆರ್ಥಿಕ ಬೇಡಿಕೆಗಳಿಗೆ ಮಾತ್ರವೇ ಸೀಮಿತ ಗೊಳಿಸಲಿಲ್ಲವೇ? ಇದು ನಿಮ್ಮ ಚಳವಳಿಯ ವೈಫಲ್ಯವಲ್ಲವೇ ಎಂದು ಪ್ರಶ್ನಿಸಿದೆ. ಕೆಲ ಸಮಯ ವೌನವಾದ ಕಕ್ಕಿಲಾಯರು ಅದಕ್ಕಾಗಿ ವಿಷಾದ ವ್ಯಕ್ತಪಡಿಸಿ ನಮ್ಮನ್ನು ನಾವು ವಿಮರ್ಶಿಸಬೇಕಿದೆ ಎಂದರು.

-ಸನತ್‌ಕುಮಾರ್‌ ಬಳಗಲಿ

 

 

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...


ನಿಮ್ಮ ಅನಿಸಿಕೆ

postClick here to post your views
EPAPER
access

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್

ರಾಜಕೀಯ ಪಕ್ಷಗಳ ಆತ್ಮವಿಮರ್ಶೆ ಅಗತ್ಯ

ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...


- ನಾ ದಿವಾಕರ್