ಅಂಕಣ

mail-img print-img

ಮಾಧ್ಯಮ ತನ್ನನ್ನು ಪುನರ್ ಸೃಷ್ಟಿಸಿಕೊಳ್ಳಬಲ್ಲದೆ?

ಬುಧವಾರ - ಜೂನ್ -13-2012

ಉತ್ತರ ಪ್ರದೇಶದ ಚುನಾವಣೆಗಳಲ್ಲಿ ಇಂದು ಹಿಂದೆಂದಿಗಿಂತ ಹೆಚ್ಚು ಮತದಾರರು ಮತ ಚಲಾಯಿಸುತ್ತಿದ್ದಾರೆ. ನಾನು ರಾಜ್ಯದ ನನ್ನ ಪರಿಚಿತರನ್ನು ಎರಡು ಪ್ರಶ್ನೆ ಕೇಳುತ್ತೇನೆ. ಹೀಗೆ ಹೆಚ್ಚು ಜನರು ಮತ ಚಲಾಯಿಸುತ್ತಿರುವುದಕ್ಕೆ ಕಾರಣವೇನು? ಹೊಸದಾಗಿ ಮತ ಚಲಾಯಿಸುತ್ತಿರುವವರು ಯಾರು?ಹೊಸದಾಗಿ ಮತ ಚಲಾಯಿಸುತ್ತಿರುವವರಲ್ಲಿ ಹೆಚ್ಚು ಮಂದಿ ಮೇಲ್ಜಾತಿಯವರು ಮತ್ತು ಇತರೆ ಹಿಂದುಳಿದ ವರ್ಗದವರು ಎನ್ನುತ್ತಾರೆ ಅವರು. ದಲಿತರು, ಯಾದವರು ಮತ್ತು ಮುಸ್ಲಿಮರು 1990ರ ನಂತರ ಪೂರ್ಣ ಪ್ರಮಾಣದಲ್ಲಿ ಮತ ಚಲಾಯಿಸುತ್ತಿದ್ದಾರೆ ಎನ್ನುತ್ತಾರೆ ಒಬ್ಬರು.ರಾಜ್ಯವನ್ನು ಚೆನ್ನಾಗಿ ಬಲ್ಲ ಉತ್ತರ ಪ್ರದೇಶದಿಂದಲೇ ಬಂದ ಮತ್ತು ದೆಹಲಿಯಲ್ಲಿರುವ ಅನುಭವಿ ಪತ್ರಕರ್ತರೊಬ್ಬರ ಉತ್ತರದಿಂದ ನನಗೆ ಆಶ್ಚರ್ಯವಾಯಿತು. ಅವರ ಪ್ರಕಾರ ಇತ್ತೀಚಿನ ಚುನಾವಣೆಯಲ್ಲಿ ಚುನಾವಣಾ ಆಯೋಗ ಎರಡು ಮುಖ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಮೊದಲನೆಯದು ಚುನಾವಣಾ ಚೀಟಿಗಳನ್ನು ಚುನಾವಣಾ ಆಯೋಗದ ಅಧಿಕಾರಿಗಳು ಮತದಾರರ ಮನೆಗಳಿಗೆ ಒಂದು ದಿನ ಮೊದಲೆ ತಲುಪಿಸುತ್ತಾರೆ ಮತ್ತು ರಾಜಕೀಯ ಪಕ್ಷಗಳು ಮತಗಟ್ಟೆಗಳ ಸಮೀಪ ಮತದಾರರಿಗೆ ಸಹಾಯ ಮಾಡಲು ಬೂತ್‌ಗಳನ್ನು ನಿರ್ಮಿಸುವುದನ್ನು ತಡೆಯಲಾಗಿದೆ.

ಚುನಾವಣಾ ಆಯೋಗ ತೆಗೆದುಕೊಂಡಿರುವ ಮತ್ತೊಂದು ಕ್ರಮವೆಂದರೆ ಸರಣಿಯಾಗಿ ಮತ ಚಲಾಯಿಸದೆ ಇರುವ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸುವುದು.ಬೇರೆ ಮಾತುಗಳಲ್ಲಿ ಹೇಳುವುದಾದರೆ ಮತದಾರರೊಬ್ಬರು ಸರಣಿಯಾಗಿ ಮೂರು ಚುನಾವಣೆಗಳಲ್ಲಿ ಮತ ಚಲಾಯಿಸದಿದ್ದಲ್ಲಿ ಚುನಾವಣಾ ಆಯೋಗ ಬೇರಾವುದೋ ಸ್ಥಳಕ್ಕೆ ಅವರು ಸ್ಥಳಾಂತರಗೊಂಡಿದ್ದಾರೆ ಎಂದು ತಿಳಿದು ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕುತ್ತದೆ. ಕೇಜರಿವಾಲ್ ಅವರ ಹೆಸರು ಏಕೆ ಮತದಾರರ ಪಟ್ಟಿಯಲ್ಲಿರಲಿಲ್ಲ ಎಂಬುದನ್ನು ಇದು ವಿವರಿಸುತ್ತಿದೆ. ಕೇಜರಿವಾಲ್ ಕಡಿಮೆ ಎಂದರೆ ಹಿಂದಿನ ಮೂರು ಚುನಾವಣೆಗಳಲ್ಲಿ ಮತ ಚಲಾಯಿಸಿರುವುದಿಲ್ಲ.

ಈಗ ಮಾಧ್ಯಮ, ಅದರಲ್ಲೂ ದೃಶ್ಯ ಮಾಧ್ಯಮದವರು ತಾವು ಎಂತಹ ಕೆಟ್ಟ ಜನರನ್ನು ದೊಡ್ಡ ನಾಯಕರಾಗಿ ಬಿಂಬಿಸು ತ್ತಿದ್ದೇವೆ ಎಂಬುದನ್ನು ವಿವರಿಸಬಲ್ಲರೇ? ಮತದಾರರು ಚುನಾವಣೆಗಳಲ್ಲಿ ಮತ ಚಲಾಯಿಸಬೇಕು ಎಂಬ ಅರಿವನ್ನು ಮೂಡಿಸಲು ಕೇಜರಿವಾಲ್ ಸರಿಯಾದವರೆ? ಅವರ ಸಹಪಾಠಿ ಬದೋರಿಯ ಸಹ ಮತ ಹಾಕಲಿಲ್ಲ. ಅಣ್ಣಾ ಹಝಾರೆ ಸಹ ಮತ ಚಲಾಯಿಸುವುದಿಲ್ಲ.ಇದು ಅಣ್ಣಾ ಹಝಾರೆಯವರ ಆಂದೋಲನ ಮತ್ತು ಅದಕ್ಕೆ ಮಾಧ್ಯಮಗಳು ನೀಡಿದ ಬೆಂಬಲ ದಂತಹ ದೊಡ್ಡ ವಿಷಯಗಳತ್ತ ಕೊಂಡೊಯ್ಯುತ್ತದೆ.

ಅಣ್ಣಾ ಚಳವಳಿ ಮುಖ್ಯವಾಗಿ ರಾಜಕೀಯ ವಿರೋಧಿ, ರಾಜಕಾರಣಿ ವಿರೋಧಿ ಮತ್ತು ರಾಜಕೀಯ ಸಂಸ್ಥೆಗಳ ವಿರೋಧಿ ನೆಲೆಯದು. ರಾಜಕಾರಣಿಗಳು ಬೇಜವಾಬ್ದಾರಿಯಿಂದ ನಡೆದು ಕೊಳ್ಳುತ್ತಿದ್ದಾರೆ ಎಂಬುದು ನಿಜ. ರಾಜಕೀಯ ಸಂಸ್ಥೆಗಳು ಜನರ ಅಪೇಕ್ಷೆಯನ್ನು ತುಂಬುತ್ತಿಲ್ಲ ಎಂಬುದೂ ನಿಜ. ಚುನಾವಣೆಯಲ್ಲಿ ಎಂದೂ ಗೆಲ್ಲಬಾರದಂಥ ಅನೇಕ ವ್ಯಕ್ತಿಗಳು ಸಹ ಭಾರತದ ಪ್ರಜಾಪ್ರಭುತ್ವದ ನ್ಯೂನ್ಯತೆಗಳನ್ನು ಉಪಯೋಗಿಸಿಕೊಂಡು ಶಾಸನ ಸಭೆಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ ಎಂಬುದೂ ನಿಜ. ಆದರೆ ಭಾರತದ ಪ್ರಜಾಪ್ರಭುತ್ವ ಒಂದು ಶತಮಾನಕ್ಕಿಂತ ಈಚಿನದು. ಬ್ರಿಟಿಷ್ ಪ್ರಜಾಪ್ರಭುತ್ವ ಸಹ ಇಂಥದ್ದೆ ಆಘಾತಕಾರಕ ದಾರಿಯ ಮೂಲಕ ಹಾದು ಬಂದಿದೆ.

ಆದರೆ ನಾವು ಈ ಪ್ರಾತಿನಿಧಿಕ ಪ್ರಜಾಪ್ರಭುತ್ವವನ್ನು ಕಿತ್ತೊಗೆದು ಅದರ ಸ್ಥಳದಲ್ಲಿ ಬೇರೆ ರೀತಿಯ ಆಡಳಿತ ವ್ಯವಸ್ಥೆಯನ್ನು ತರಬೇಕೆ? ದೃಶ್ಯ ವಾರ್ತಾ ಮಾಧ್ಯಮಗಳ ಬರುವಿಕೆಯೊಡನೆ ಒಂದು ಹೊಸ ಪೀಳಿಗೆಯ ವರದಿಗಾರರು ಅಸ್ತಿತ್ವಕ್ಕೆ ಬಂದರು. ವಾರ್ತಾ ನಿರೂಪಕರು ಎಂದು ಕರೆದುಕೊಳ್ಳುವ ಈ ಗುಂಪಿನ ವರದಿಗಾರರು ತಮ್ಮನ್ನು ತಾವು ಕಲ್ಪಿಸಿಕೊಂಡಂತೆ ದೇವಾನುದೇವತೆಗಳ ಪ್ರತಿನಿಧಿಗಳು. ಸತ್ಯ ಅವರೊಬ್ಬರಿಗೆ ಸೇರಿರುವಂತದ್ದು. ಸತ್ಯ ಮತ್ತು ವಿವೇಕದ ವಾಹಕರಾಗಿ ಅವರು ಅಣ್ಣಾ ಹಝಾರೆ ಆಂದೋಲನಕ್ಕೆ ಬಲವಾದ ಬೆಂಬಲ ನೀಡಿದರು. ಅಣ್ಣಾ ಆಂದೋಲನವನ್ನು ವಿಮರ್ಶಾತ್ಮಕವಾಗಿ ನೋಡಿ ವರದಿ ಮಾಡುವ ಬದಲಾಗಿ ಅವರು ಅದರ ಪ್ರತಿನಿಧಿಯಾಗಿ ವರದಿ ಮಾಡಿದರು.

ವರದಿಗಾರರಿಂದ ನಿರೂಪಕರು ಮತ್ತು ಸುದ್ದಿ ಸಂಪಾದಕರವರೆಗೆ ಎಲ್ಲರೂ ತಮ್ಮ ಚಿಂತನಾಶಕ್ತಿಯನ್ನು ಬದಿಗಿಟ್ಟು ಅಣ್ಣಾ ಆಂದೋಲನದ ಪರವಾಗಿ ವರದಿ ಮಾಡಿದರಲ್ಲದೆ ಭಿನ್ನ ಧ್ವನಿಗಳನ್ನು ಹಿಚುಕಿ ಹಾಕಿದರು.ಮೂರು ವರ್ಷಗಳ ಹಿಂದೆ ನಾನು ಪುಣೆಗೆ ಭೇಟಿ ನೀಡಿದ್ದೆ. ಆಗ ಅಣ್ಣಾರ ಹಳ್ಳಿ ರಾಲೆಗಾನ್ ಸಿದ್ದಿಗೆ ಭೇಟಿ ನೀಡುವ ಇಚ್ಛೆ ವ್ಯಕ್ತಪಡಿಸಿದೆ. ನನ್ನ ಅತಿಥೇಯರು ನನ್ನನ್ನು ರಾಲೆಗಾನ್ ಸಿದ್ದಿಗೆ ಕರೆದು ಕೊಂಡು ಹೋದರು. ಅಣ್ಮಾ ಹಝಾರೆಯವರ ಬಗ್ಗೆ ನನಗೆ ತುಂಬಾ ಗೌರವವಿತ್ತು. ಒಂದೆರಡು ಗಂಟೆಗಳಲ್ಲಿ ಈ ಸ್ವಘೋಷಿತ ಗಾಂಧಿವಾದಿ ನನ್ನ ಕಣ್ಣುಗಳಲ್ಲಿ ರಾಕ್ಷಸನಾಗಿ ಮಾರ್ಪಾಡುಗೊಂಡರು. ವ್ಯಕ್ತಿಗತ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವಲ್ಲಿ ಅಣ್ಣಾರಿಗೆ ಗೊತ್ತಿರುವುದು ಹಿಂಸೆಯೊಂದೆ ಎಂದು ರಾಲೆಗಾನ್ ಸಿದ್ದಿಯ ದಲಿತರು ನನಗೆ ಹೇಳಿ ದರು. ಅವರ ಸಾಮಾಜಿಕ ನೀತಿ ನಿಯಮಗಳು ಮತ್ತು ಅವನ್ನು ಜಾರಿಗೊಳಿಸಲು ಅವರು ನೀಡುವ ಚಾಟಿ ಏಟು ತಾಲಿಬಾನಿಗಳನ್ನೂ ನಾಚಿಸುವಂತಿದೆ. ತಾಲಿಬಾನಿಗಳು ಮಾಂಸಾಹಾರಿ ಆಹಾರವನ್ನು ವರ್ಜಿಸುವುದಿಲ್ಲವಲ್ಲ, ಆದ್ದರಿಂದ ಅವರೆ ಸ್ವಲ್ಪ ಮೇಲು.

ಅಣ್ಣಾ ಆಂದೋಲನದ ಬಗ್ಗೆ ಭಿನ್ನವಾದ ಅಭಿಪ್ರಾಯ ಹೊಂದಿರುವುದಕ್ಕಾಗಿ ಎನ್.ಡಿ.ಟಿ.ವಿ. ಜಾಲ ಬಿಟ್ಟರೆ ಉಳಿದ ವಾರ್ತಾ ವಾಹಿನಿಗಳು ದೂರ ಇಡುವುದಕ್ಕೆ ಮೊದಲು ರಾಲೆಗಾನ್ ಸಿದ್ದಿಯಲ್ಲಿ ಅಣ್ಣಾ ತಂದಿರುವ ಹಿಂಸಾತ್ಮಕ ಪದ್ಧತಿಗಳ ಬಗ್ಗೆ ವರದಿ ಮಾಡಲು ನಾನು ವಾರ್ತಾ ನಿರೂಪಕರುಗಳನ್ನು ಕೋರಿಕೊಂಡಿದ್ದೆ.ಇತರ ವಾಹಿನಿಗಳಿಗಿಂತ ಸ್ವಲ್ಪ ಉದಾರವಾದ ಎನ್.ಡಿ.ಟಿ.ವಿ. ಸಹ ಅವರ ಹಳ್ಳಿಯಲ್ಲಿ ಅಣ್ಣಾ ಸೃಷ್ಟಿಸಿರುವ ನರಕದ ಬಗ್ಗೆ ವರದಿ ಮಾಡುವ ಧೈರ್ಯ ತೆಗೆದುಕೊಳ್ಳಲಿಲ್ಲ.ಈಗ ಅಣ್ಣಾ ಬಗೆಗಿನ ವಿಜೃಂಭಣೆ ಕಡಿಮೆಯಾಗಿದ್ದು, ಅವರ ತಂಡದ ಮೇಲೆ ಹೆಚ್ಚು ಬೆಳಕು ಬೀಳುತ್ತಿರುವಾಗ ದೃಶ್ಯ ಮಾಧ್ಯಮ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಡಬಲ್ಲದೆ?

1.ಸತ್ಯವನ್ನು ಬೆಂಬಲಿಸುವುದಕ್ಕಾಗಿ ದೃಶ್ಯ ಮಾಧ್ಯಮಗಳು ಭ್ರಷ್ಟಾಚಾರ ವಿರೋಧಿ ಹೋರಾಟಗಾರರಾದ ಭೂಷಣ್ ತಂದೆ-ಮಕ್ಕಳ ಅನೈತಿಕ ಕಾರ್ಯಗಳ ಬಗ್ಗೆ ತನಿಖೆ ನಡೆಸಬಲ್ಲವೆ?
2.ಸತ್ಯವನ್ನು ಎತ್ತಿ ಹಿಡಿಯುವುದಕ್ಕೋಸ್ಕರ ದೃಶ್ಯ ಮಾಧ್ಯಮಗಳು ಭ್ರಷ್ಟಾಚಾರ ವಿರೋಧಿ ಹೋರಾಟಗಾರ್ತಿ ಶ್ರೀಮತಿ ಬೇಡಿ ಅವರ ವಿಮಾನ ಪ್ರಯಾಣಕ್ಕೆ ಸಂಬಂಧಿಸಿದ ಅನೈತಿಕ ಕೆಲಸವನ್ನು ತನಿಖೆ ಮಾಡಬಲ್ಲವೆ?
3.ಸತ್ಯನ್ನು ಎತ್ತಿಹಿಡಿಯುವುದಕ್ಕೋಸ್ಕರ ದೃಶ್ಯ ಮಾಧ್ಯಮಗಳು ಭ್ರಷ್ಟಾಚಾರ ವಿರೋಧಿ ಕೇಜರಿವಾಲ್ ನಡೆಸುತ್ತಿರುವ ಸರಕಾರೇತರ ಸಂಸ್ಥೆಗಳ ಅನೈತಿಕ ಕಾರ್ಯಗಳನ್ನು ತನಿಖೆ ಮಾಡಬಲ್ಲುವೆ?
4.ಸತ್ಯವನ್ನು ಎತ್ತಿಹಿಡಿಯುವುದಕ್ಕೋಸ್ಕರ ದೃಶ್ಯ ಮಾಧ್ಯಮಗಳು ಅಣ್ಣಾ ತನ್ನ ಹಳ್ಳಿಯಲ್ಲಿ ಹೇರಿರುವ ಸಾಮಾಜಿಕ ನೀತಿ, ನಿಯಮ ಗಳನ್ನು ಮತ್ತು ವೈಯಕ್ತಿಕ ಭಿನ್ನಾಭಿಪ್ರಾಯ ಗಳನ್ನು ಸರಿಪಡಿಸುವ ಹಿಂಸಾತ್ಮಕ ಮಾರ್ಗಗಳನ್ನು ತನಿಖೆ ಮಾಡಬಲ್ಲುವೆ?
5.ಸತ್ಯವನ್ನು ಎತ್ತಿಹಿಡಿಯುವುದಕ್ಕೋಸ್ಕರ ದೃಶ್ಯ ಮಾಧ್ಯಮಗಳು ಮತ್ತೊಬ್ಬ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಬಿಸ್ವಾಸ್ ಉತ್ತರ ಪ್ರದೇಶದ ಕಾಲೇಜೊಂದರಿಂದ ಕ್ಲಾಸ್‌ಗಳನ್ನೇ ತೆಗೆದು ಕೊಳ್ಳದೆ ಸಂಬಳ ಪಡೆಯುತ್ತಿರುವ ಅನೈತಿಕತೆಯ ಬಗ್ಗೆ ತನಿಖೆ ಮಾಡಬಲ್ಲವೆ?

ಭಾರತ ಅನೇಕ ಜಾತಿಗಳ, ಅನೇಕ ಜನಾಂಗಗಳ, ಅನೇಕ ಧರ್ಮಗಳ ಒಂದು ಸಮಾಜ. ರಾಜ್ಯ ವಿಧಾನ ಸಭೆ ಮತ್ತು ಸಂಸತ್ತು ಇದನ್ನು ಪ್ರತಿಬಿಂಬಿಸುತ್ತವೆ. ದೃಶ್ಯ ಮಾಧ್ಯಮ ತನ್ನ ನೌಕರ ವರ್ಗದಲ್ಲಿ ಶಾಸನ ಸಭೆಗಳಲ್ಲಿನ ವೈವಿಧ್ಯತೆಯನ್ನು ಪ್ರತಿಫಲಿಸಬಲ್ಲದೆ?ಉತ್ತಮ, ಚಲನಶೀಲ ಮತ್ತು ವೈವಿಧ್ಯ ಭಾರತಕ್ಕಾಗಿ ಮಾಧ್ಯಮ ತನ್ನನ್ನು ಪುನರ್ ರಚಿಸಿಕೊಳ್ಳಬಲ್ಲದೆ?

 ಅನು: ಎಸ್. ಮರಿಸ್ವಾಮಿ

ಕೃಪೆ: ಸಂವಾದ

 



Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮುಂಗಾರಿನ ಆಗಮನ:ಸರಕಾರ ಜೋಪಾನ

ರಾಜ್ಯಾದ್ಯಂತ ಮಳೆ ಚುರುಕುಗೊಳ್ಳುತ್ತಿದೆ. ಈ ಸಾಲಿನಲ್ಲಿ ಮಳೆ ನಿರೀಕ್ಷೆಯಷ್ಟು ಬರದೆ ಇದ್ದರೂ, ಮುಂದಿನ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ರಾಜ್ಯಾದ್ಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್

ಅಕ್ಷರ ಸೇವೆಯಿಂದ ಜನಸೇವೆಗೆ;ತೆಂಕಮಿಜಾರಿನ ಮುತ್ತು

ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...


- ಪ್ರೇಮಶ್ರೀ ಕಲ್ಲಬೆಟ್ಟು