ಯೋಗಿಯ ದಿನಚರಿಯ ಯಾವುದೇ ನಿಯತ್ತಿಲ್ಲದ ನಿತ್ಯಾನಂದ ಎಂಬ ಕಪಟಿ ಒಕ್ಕೊರಲಿನ ಎಲ್ಲಾ ಸಾತ್ವಿಕ ಪ್ರತಿಭಟನೆಯ ಫಲವಾಗಿ ನ್ಯಾಯಸಮ್ಮತವಾಗಿ ಕಾರಾಗೃಹ ಸೇರಿದ್ದಾನೆ. ರಾಜ್ಯದ ಜನತೆಗೆ ಇದು ಶುಭ ಲಕ್ಷಣ. ಸ್ವತಃ ಮುಖ್ಯಮಂತ್ರಿ ಸದಾನಂದ ಗೌಡರು ‘ರಾಜ್ಯದ ಶಾಂತಿ ಸುವ್ಯವಸ್ಥೆ ಕಾಪಾಡಲು ರಾಜ್ಯದ ಜನತೆಗೆ ಒಳಿತಾಗುವುದಾದರೆ ನಾನು ಜೈಲಿಗೆ ಹೋಗಲು ಸಿದ್ಧ’ ಎಂದಿದ್ದಾರೆ. ನಿತ್ಯಾನಂದ ತನ್ನನ್ನು ಬಂಧಿಸಲು ಆದೇಶವಿತ್ತಿ ರುವ ಮುಖ್ಯಮಂತ್ರಿಗಳ ಕ್ರಮವನ್ನೇ ‘ಅಕ್ರಮ’ ಎಂದು ಕರೆದು ತನ್ನ ವಕೀಲರ ಸಹಾಯದಿಂದ ಮುಖ್ಯಮಂತ್ರಿಯ ವಿರುದ್ಧವೇ ಕೇಸು ದಾಖಲಿಸಿ ರುವ ಸಂದರ್ಭದಲ್ಲಿ ಸದಾನಂದ ಗೌಡರ ಪ್ರತಿಕ್ರಿಯೆ ಇದು.ಒಬ್ಬ ಮುಖ್ಯಮಂತ್ರಿಯ ಸಂಕಲ್ಪ ಹೀಗೆ ‘ಬಹುಜನ ಸುಖಾಯಃ ಬಹು ಜನ ಹಿತಾಯಃ’ಎಂಬ ಹಾದಿಯಲ್ಲಿ ನಿರಂತರ ಸಾಗಿದ್ದೇ ಆದರೆ ರಾಜ್ಯ ಭ್ರಷ್ಟಾಚಾರ ಮುಕ್ತವಾಗುವ ಸುಂದರ ಕನಸನ್ನು ಪ್ರಜೆಗಳು ಖಂಡಿತಾ ಕಾಣಬಹುದು.
ಆದರೆ ಯಾವುದೋ ಒಂದು ಪಾರ್ಶ್ವಕ್ಕೆ ಕಾಣಿಸಿಕೊಳ್ಳುವ ಇಂತಹ ಹುಮ್ಮಸ್ಸು ರಾಜ್ಯದ ಹಿತರಕ್ಷಣೆಯ ಜವಾಬ್ದಾರಿಯ ಸಮಗ್ರ ತೆಯಾಗಿ ಕಾಣಿಸಿಕೊಳ್ಳದಿದ್ದಾಗ ಎಡವಟ್ಟು ಆರಂಭವಾಗುತ್ತದೆ. ಆ ಎಡವಟ್ಟು ಎಷ್ಟು ತೀವ್ರ ವಾಗುತ್ತದೆಂದರೆ ಸ್ವತಃ ಒಂದು ಕಾಲದಲ್ಲಿ ಮುಖ್ಯ ಮಂತ್ರಿ ಗದ್ದುಗೆ ಏರಿದ್ದ ವ್ಯಕ್ತಿ ಭ್ರಷ್ಟಚಾರದ ಪರಮಪಾತಕದಲ್ಲಿ ಸಿಲುಕಿ ಜೈಲು ಸೇರಬೇಕಾದ ಅನಿವಾರ್ಯ ಸಂದರ್ಭ ಒದಗಿ ಬರುವಷ್ಟು.
ಕುತಂತ್ರವನ್ನು ಅನುಸರಿಸಿಯೇ ಆಳ್ವಿಕೆಗೆ ಬಂದಿರುವ ಪ್ರಸ್ತುತ ರಾಜ್ಯ ಸರಕಾರ ಇನ್ನೂ ಕೂಡ ಜನತೆಗೆ ಸಮಗ್ರ ನ್ಯಾಯವನ್ನು ಒದಗಿಸಲು ಅಶಕ್ತವಾಗಿ ಸ್ವಾರ್ಥ ಲಾಲಸೆಯ ಮಹಾ ಪರಾಧಗಳನ್ನೇ ಹೊತ್ತು ನಲುಗುತ್ತಿದೆ. ಗಣಿ ರೆಡ್ಡಿಯ ಭೂಗಳ್ಳತನ, ಯಡಿಯೂರಪ್ಪನವರ ಸ್ವಜನ ಪಕ್ಷಪಾತದ ಆಸ್ತಿ ಗಳಿಸುವ ಮೋಹ, ರಾಜ್ಯ ರಾಜಕಾರಣವನ್ನು ನಡುಬೀದಿಗೆ ತಂದು ನಿಲ್ಲಿಸಿ ಮಾನನಷ್ಟ ಮಾಡಿರುವುದನ್ನು ಕೂಡ ಜನತೆ ಮರೆಯಬಾರದು.ಈ ಮಾನನಷ್ಟಕ್ಕೆ ಯಾರ ಮೇಲೆ ಯಾರು ಕೇಸ್ ಹಾಕುವುದು!? ನಿತ್ಯಾನಂದನೆನ್ನುವವನು ಸನ್ಯಾಸಿಯ ಫೋಸ್ ಕೊಟ್ಟು ಲೈಂಗಿಕತೆಯ ವಿಕೃತ ಹಾದಿಯಲ್ಲಿ ಸಾಗಿದ್ದರಿಂದ ಈ ಅನ್ಯಾಯ ಬಯಲಿಗೆ ಬಂದು ಜನತೆ ರೊಚ್ಚಿಗೆದ್ದರು. ಸುದ್ದಿ ಮಾಧ್ಯಮಗಳು ಸಹಕರಿಸಿದವು. ಮುಖ್ಯಮಂತ್ರಿಯೂ ನ್ಯಾಯದ ಅಂಕಿತ ಮುದ್ರೆಯನ್ನೊತ್ತಿದ್ದರು.
ಇದೇ ನಿಯತ್ತು ಆಡಳಿತದ ಪ್ರತಿಯೊಂದು ಹಂತದಲ್ಲಿಯೂ ಇರಬೇಕೆಂಬ ಗಾಂಭೀರ್ಯ ಜನತೆಯ ಎಚ್ಚರವಾಗಿ ಬೆಳೆದರೆ ಮಾತ್ರ ರಾಜ್ಯದ ಸುಭೀಕ್ಷದ ಕನಸು ನನಸಾಗುತ್ತದೆ. ಯಡಿಯೂರಪ್ಪನವರು ತಾವೇ ಮತ್ತೇ ಮುಖ್ಯಮಂತ್ರಿಯಾಗಿ ಮುಂದು ವರೆಯಬಹುದೆಂಬ ಆಸೆಯಿಂದ ಮಾತ್ರ ತಾವು ಭ್ರಷ್ಟಾಚಾರದ ಆರೋಪ ಹೊತ್ತ ಸಂದರ್ಭದಲ್ಲಿ ತಮ್ಮ ಪದವಿಯನ್ನು ಸದಾನಂದರಿಗೆ ವರ್ಗಾಯಿಸುವ ವಿರಕ್ತಿಯ ನಾಟಕವನ್ನು ಆಡಿದರು. ಆದರೆ ಅವರ ನಾಟಕ ಫಲಶ್ರುತಿ ನೀಡಲಿಲ್ಲ. ಏಕೆಂದರೆ ಅದು ಕಪಟ ನಾಟಕ. ಅವರು ಮತ್ತೇ ಮುಖ್ಯ ಮಂತ್ರಿಯಾಗಲು ಸಾಧ್ಯವಾಗಲಿಲ್ಲ! ಏಕೆಂದರೆ ಯಡಿಯೂರಪ್ಪನವರು ಆರೋಪ ಮುಕ್ತರಾಗಿ ರಾಜ್ಯದ ಜನತೆಯೆದುರು ಇನ್ನೂ ಬರಲು ಸಾಧ್ಯವಾಗಿಲ್ಲ.
ಯಡಿಯೂರಪ್ಪನವರ ಈ ಅಪರಾಧದಿಂದ ಮಾತ್ರ ಇಂದು ತಾನು ಮುಖ್ಯಮಂತ್ರಿಯ ಪಟ್ಟ ಅಲಂಕರಿಸಲು ಸಾಧ್ಯವಾಗಿದೆ ಎಂಬ ಪ್ರಜ್ಞೆ ಸದಾನಂದ ಗೌಡರಿಗೆ ಸದಾ ಇದ್ದು ಅವರು ತನ್ನ ಆಡಳಿತದಲ್ಲಿ ಮತ್ತೇ ಅಂಥಹ ಅಪರಾಧಗಳು ಸ್ವತಃ ತನ್ನಿಂದಾಗಲೀ ಮಂತ್ರಿಮಂಡಲದ ಇನ್ನಿತರರಿಂದಾಗಲೀ ಸರಕಾರದ ಅಧಿಕಾರದ ವರ್ಗದವರಿಂದಾಗಲೀ ಸಂಭವಿಸದಂತೆ ಹಗಲಿರುಳು ಶ್ರಮಿಸಿ ಕಾರ್ಯರೂಪಕ್ಕೆ ತರುವುದು ಕೂಡ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಆದ್ಯ ಕರ್ತವ್ಯವಾಗಿರುತ್ತದೆ. ಇಲ್ಲದಿದ್ದರೆ ನಿತ್ಯಾನಂದನನ್ನು ಬಂಧಿಸಿರುವ ಈ ಪ್ರಕರಣವೇ ಎಲ್ಲ ಕಡೆಯೂ ಮುಖ್ಯಮಂತ್ರಿಗಳಿಗೆ ಸಲ್ಲಬೇಕಾದ ಕಟ್ಟಕಡೆಯ ಅಭಿನಂದನೆಯಾಗಿ ರಾರಾಜಿಸುತ್ತ ಮುಖ್ಯಮಂತ್ರಿಗಳು ಸಂತೃಪ್ತರಾಗಿ ಇತರ ಕ್ಷೇತ್ರದ ಸುಧಾರಣೆಗೆ ಗಮನ ಹರಿಸದಿದ್ದರೆ ಏನೂ ಪ್ರಯೋಜನವಿಲ್ಲ.
ನಿತ್ಯಾನಂದನ ಈ ಬಂಧನ ರಾಜ್ಯದ ಮಾನ ಹರಾಜು ಹಾಕುವ ಎಲ್ಲಾ ಅಪರಾಧಗಳಿಗೂ ಮುನ್ನೆಚ್ಚರಿಕೆಯಂತೆ ಮಾನನಷ್ಟ ಮೊಕದ್ದಮೆಯ ಹಕ್ಕಿನ ಪ್ರಾತಿನಿಧ್ಯ ಪಡೆದರೆ ಮಾತ್ರ ಮುಖ್ಯ ಮಂತ್ರಿಗಳ ಮಾತು ಘನತೆಯ ಮಾತಾಗಿ ಸಾರ್ಥಕ್ಯ ಪಡೆಯುತ್ತದೆ ಎಂಬುದು ನನ್ನ ಅನಿಸಿಕೆ. ಶಾಂತಿ ಮಂತ್ರದ ಲವಲೇಶ ಜ್ಞಾನವೂ ಇಲ್ಲದ ನಿತ್ಯಾನಂದ ಬಿಡದಿಯಲ್ಲಿ ಆಶ್ರಮದ ಹೆಸರಲ್ಲಿ ಸಿಕ್ಕಾಪಟ್ಟೆ ನೆಲದ ಆಸ್ತಿ ಪಡೆದು ಸನ್ಯಾಸಿಯ ವೇಷದಲ್ಲಿ ಕುತ್ಸಿತ ಮಾರ್ಗದಲ್ಲಿ ಭೋಗಲಾಲಸೆಯ ಸುಖವನ್ನು ಅರಸಿ ತನ್ನ ಶಿಷ್ಯರ ಬಾಳನ್ನು ಕತ್ತಲು ಮಾಡಿ ಸ್ವತಃ ತನಗೂ ನೆಮ್ಮದಿ ಇಲ್ಲದೆ ಬಿಪಿ ಹೆಚ್ಚಿಸಿಕೊಂಡು ಮೈಸೂರು ಕಾರಾಗೃಹದ ಕಠೋರ ಅಪರಾಧಿಯೊಬ್ಬ ಕುಳಿತುಕೊಳ್ಳುವ 19ನೆ ಸಂಖ್ಯೆಯ ಕತ್ತಲು ಕೋಣೆಯಲ್ಲಿ ಕುದಿಯುತ್ತಾ ಕುಳಿತಿದ್ದಾನೆ; ಅರೆಬೆಂದ ಮಡಕೆ.
ಇಂಥಹ ಮಡಕೆಯಿಂದ ಅಡುಗೆಯೂ ಸಾಧ್ಯವಿಲ್ಲದೆ ನೀರು ಶೇಖರಿಸಲು ಸಾಧ್ಯವಿಲ್ಲದೆ ಒಡೆದು ಹೋಗುತ್ತದೆ ಎಂಬ ಸಣ್ಣ ಜ್ಞಾನೋದಯ ನಿತ್ಯಾನಂದನಂಥಹ ವೇಷಧಾರಿಗಳಿಗೆ ಈಗ ಜೈಲಿನಲ್ಲೂ ಮೂಡದಿದ್ದರೆ ‘ಶಾಂತಿಯ ಸುವ್ಯವಸ್ಥೆ’ ಎಂಬ ಮಾತು ಬರೀ ಕನ್ನಡ ನಿಘಂಟಿನ ಪದ ಸಂಪತ್ತಾಗಿ ಮಾತ್ರ ಉಳಿಯುತ್ತದೆ. ನಿತ್ಯಾನಂದನ ವಿಚಾರಣೆಯಲ್ಲಿ ಕನ್ನಡದ 2 ಶ್ರೀಮಂತ ಚಲನಚಿತ್ರಗಳಾದ ‘ಭಕ್ತಕುಂಬಾರ ’ಮತ್ತು ‘ಸಾಕ್ಷಾತ್ಕಾರ’ ಎಂಬ ಸಿನಿಮಾಗಳನ್ನು ಆತ ನೋಡಿರುವನೇ? ಹಾಗೆ ನೋಡಿದ್ದರೆ ಅದರಿಂದ ಏನು ಕಲಿತುಕೊಂಡ ಎಂದು ಅವನು ಜೈಲಿನಲ್ಲಿ ಕೂತು ಬರೆಯುವ ಇಂಪೋಸಿಸನ್ ಒಂದನ್ನು ಜೈಲಿನಲ್ಲಿ ಆತನಿಗೆ ಜೈಲಾಧಿಕಾರಿಗಳು ನೀಡಬೇಕು.
ಅಕಸ್ಮಾತ್ ಆ ಚಿತ್ರಗಳನ್ನು ವೀಕ್ಷಿಸಿರದಿದ್ದರೆ ಈ ಚಿತ್ರಗಳ ವೀಕ್ಷಣೆಯನ್ನು ಕೂಡ ಆತನ ಶಿಕ್ಷೆಯ ಭಾಗವಾಗಿ ಅವನಿಗೆ ವಿಧಿಸಬೇಕು ಎಂಬುದು ನನ್ನ ನಮ್ರ ಮನವಿ! ಎಜುಕೇಟೆಡ್ ಬ್ರೂಟ್ಸ್ ಎನಿಸಿಕೊಂಡಿರುವ ಆತನ ಕೆಲವು ಶಿಷ್ಯರು ಈಗಲೂ ಬುದ್ಧಿ ಕಲಿಯದೆ ವಿವೇಚನೆಯಿಲ್ಲದೆ ಚೋರ ಗುರುವಿನ ಪರ ವಹಿಸುತ್ತಿರುವುದು ಹೇಬಿಯಸ್ ಕಾರ್ಪಸ್ ಮೊಕದ್ದಮೆ ಹೂಡುವೆವೆಂದು ಸಿಲ್ಲಿಯಾಗಿ ಮಾನವ ಹಕ್ಕುಗಳನ್ನೇ ಉಲ್ಲಂಘಿಸುತ್ತಿರುವುದು ಘೋರ ಅಧರ್ಮ. ಒಬ್ಬ ಡಾಕ್ಟರ್ ಆಗಲಿ, ಇಂಜಿನಿಯರ್ ಆಗಲಿ, ಗೃಹಸ್ಥರಾಗಲಿ, ವ್ಯಾಪಾರಿಯಾಗಲಿ, ಪತ್ರಕರ್ತರಾಗಲಿ, ಶಿಕ್ಷಕರಾಗಲಿ, ಪ್ರೇಮಿಯಾಗಲಿ ತಾನು ಏಕಾಂತದಲ್ಲಿಯೂ ತನ್ನ ಸ್ಥಾನಕ್ಕೆ ದ್ರೋಹ ಬಗೆಯಬಾರದೆಂಬ ಅಂತಃಸಾಕ್ಷಿಯ ಕರ್ತವ್ಯ ಮಾತ್ರ ಯೋಗಿಯ ನಡೆಗೆ ಮಾದರಿಯಾಗುತ್ತದೆ.
ಹೋಗುತಿಹುದು ಕಾಯ ವ್ಯರ್ಥ
ಇದರ ಲಾಭವ ತಿಳಿದವ ಯೋಗಿ ಸಮರ್ಥ
ಏಳು ಜನ್ಮಾಂತರ ದಿನವೂ
ಹೀಂಗೆ ಹೇಳದೆ ಹೋದವು ನಿನಗಿಲ್ಲ ನೆನಹು
ಭೋಗ ಲಂಪಟ ಸುಖ ಧನವು
ಭವ ರೋಗಕ್ಕೆ ಆಯಿತು ಅನುವು
ಇನ್ನಾರ ತಿಳಿ ಕಂಡ್ಯ ತಮ್ಮ
ನುಡಿ ಓಂ ನಮಃ ಶಿವ ಎಂಬ ಮಂತ್ರದ ಮರ್ಮ
ಪುಣ್ಯಪಾಪಂಗಳ ಕರ್ಮ
ಉಳಿದುದು ಚೆನ್ನಶಿಶುವಿನಾಳಧೀಶನ ಧರ್ಮ...
-ಸಂತಶಿಶುನಾಳ ಶರೀಫರು
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಹದಿನಾಲ್ಕು ವರ್ಷದ ಹುಡುಗಿ ಮತ್ತು ಮೂರು ವರ್ಷದ ಹುಡುಗ ಹಸಿವಿನಿಂದಾಗಿ ಬರ್ಬರ ಸಾವನ್ನಪ್ಪಿದ್ದಾರೆ. ನಾಝ್ರಾ ಖಾತೂನ್ ಎನ್ನ ...
Click here to post your views ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...
ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...
ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...
ಊರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...
ಮಾನ್ಯರೆ,
ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...