ಅಂಕಣ

mail-img print-img

ಭಾರತೀಯ ಮಾಧ್ಯಮಗಳಿಂದ ಆತ್ಮಾವಲೋಕನ ತಿರುಕನ ಕನಸೇ?

ಸೋಮವಾರ - ಜೂನ್ -18-2012

ಮಾಧ್ಯಮಗಳು ಯಾವತ್ತೂ ಸಾರ್ವಜನಿಕ ಹಿತಾಸಕ್ತಿಯಿಂದ ಕಾರ್ಯಾಚರಿಸಬೇಕು, ಜನ ಪರವಾದ ಭಾವನೆ-ಚಿಂತನೆಗಳನ್ನು ಪ್ರಚುರಪಡಿಸ ಬೇಕು ಎಂದು ಹೇಳಲಾಗುತ್ತದೆ. ಇದು ನಿಜ ಎನ್ನುವುದರಲ್ಲಿ ಎರಡು ಮಾತಿಲ್ಲ; ಮಾಧ್ಯಮಗಳ ಮೂಲಭೂತ ಕರ್ತವ್ಯವೇ ಇದು. ಮಾಧ್ಯಮ ಗಳು ಬಹುತೇಕವಾಗಿ ಸಮಾಜದ ಅವಶ್ಯಕತೆ ಗಳನ್ನು ಪೂರೈಸುತ್ತವೆ. ಆದರೂ ಕೆಲವೊಮ್ಮೆ ಗುಂಪುಗಳ ಅವಶ್ಯಕತೆಗಳು ಸಮಾಜದವು ಗಳಿಗೆ ವಿರುದ್ಧವಿಲ್ಲದಿದ್ದರೆ ಅವುಗಳನ್ನೂ ಪರಿಗಣಿಸಬೇಕಾಗುತ್ತದೆ. ಅನುಚಿತ ಸಾಮಾಜಿಕ ಬಯಕೆಗಳನ್ನು ಪೂರೈಸಲು ಸಾಧ್ಯವಿಲ್ಲ. ಯಾಕೆಂದರೆ ಆ ಬಯಕೆಗಳು ವಿಕೃತಗೊಂಡು ಸಾಮಾಜಿಕ ಸಮ ತೋಲನ, ಸೌಹಾರ್ದ ಮತ್ತು ಮೌಲ್ಯ ಗಳಿಗೆ ಧಕ್ಕೆಯಾಗುವ ಸಾಧ್ಯತೆಗಳಿರುತ್ತವೆ. ಅದೇ ರೀತಿ ಕೆಲವು ವಿಶೇಷ ಸಂದರ್ಭ ಗಳನ್ನು ಹೊರತುಪಡಿಸಿ ವೈಯುಕ್ತಿಕ ಬಯಕೆಗಳಿಗೂ ಅವಕಾಶವಿಲ್ಲ.

ಮಾಧ್ಯಮ ಸ್ವಾತಂತ್ರ್ಯ

ಇತ್ತೀಚೆಗೆ ಭಾರತದ ಸರ್ವೋಚ್ಚ ನ್ಯಾಯಾಲಯ ತಾನು ಕೆಲವು ಸ್ಥೂಲ ಮಾರ್ಗದರ್ಶಿ ಸೂತ್ರಗಳನ್ನು ನಿರೂಪಿಸುವೆನೆಂದು ಹೇಳಿದಾಕ್ಷಣ ಮಾಧ್ಯಮ ವಲಯಗಳಿಂದ, ಪ್ರಧಾನವಾಗಿ ಮಾಲಕ ವರ್ಗ ಮತ್ತು ಸಂಪಾದಕರ ಸಂಘ ದಿಂದ, ಭಾರೀ ದೊಡ್ಡ ಕೂಗೆದ್ದಿತು. ನಾನಾ ಮಾಧ್ಯಮಗಳಲ್ಲಿ ನಾನಾ ತೆರನಾದ ಚರ್ಚೆಗಳು ಏರ್ಪಟ್ಟವು. ಮಾಧ್ಯಮ ರಂಗ ಸ್ವತಂತ್ರವಾಗಿ ಕಾರ್ಯಾಚರಿಸಬೇಕು, ಅದರ ಮೇಲೆ ನಿಯಂತ್ರಣ ಸಲ್ಲದು ಎನ್ನುವುದನ್ನು ಎಲ್ಲರೂ ಒಪುತ್ತಾರೆ. ಅದೇ ವೇಳೆ ಅದು ಕೆಲವು ಕನಿಷ್ಠ ನಿಬಂಧನೆಗಳಿಗೆ ಒಳಪಟ್ಟು ನಡೆದು ಕೊಳ್ಳುವ ಅಗತ್ಯವಿದೆ ಎಂಬ ವಾದದಲ್ಲಿ ಹುರುಳಿಲ್ಲವೇ? ಪ್ರಜಾಸತ್ತಾತ್ಮಕ ಭಾರತದ ಸಂವಿಧಾನ ಪ್ರತಿಯೊಬ್ಬ ಪ್ರಜೆಗೆ ಮೂಲ ಭೂತ ಹಕ್ಕುಗಳೊಂದಿಗೆ ಮೂಲ ಭೂತ ಕರ್ತವ್ಯಗಳನ್ನೂ ಕೊಟ್ಟಿರುವಾಗ ಇದೇ ನಿಯಮ ಮಾಧ್ಯಮದಂತಹ ಸಂಸ್ಥೆಗಳಿಗೆ ಸಹ ಅನ್ವಯಿಸಬೇಡವೇ, ಮಾಧ್ಯಮಕ್ಕೆ ಕೂಡ ಅದರ ಮೂಲಭೂತ ಸ್ವಾತಂತ್ರ್ಯದ ಹಕ್ಕಿನೊಂದಿಗೆ ಸಾಮಾಜಿಕ ಜವಾಬ್ದಾರಿ ಯೂ ಇರಲೇಬೇಕಲ್ಲವೇ ಎಂಬ ಪ್ರಶ್ನೆಗಳೇ ಳುವುದು ಸಹಜವೇ ಆಗಿದೆ.

ತಮ್ಮ ಸ್ವಾತಂತ್ರ್ಯಹರಣವನ್ನು ವಿರೋಧಿಸುವ ಮಾಧ್ಯಮಗಳು ಸ್ವಾತಂತ್ರ್ಯಕ್ಕೂ ಮಿತಿಗಳಿವೆ ಎನ್ನುವುದನ್ನು ತಿಳಿದಿರಬೇಕಲ್ಲವೇ? ವಾಸ್ತವ ದಲ್ಲಿ ಒಂದು ಸಮಾಜದೊಳಗೆ ಪ್ರತಿಯೊ ಬ್ಬನಿಗೂ ಅನಿರ್ಬಂಧಿತ ಅಥವಾ ಅನಿಯಮಿತ ಸ್ವಾತಂತ್ರ್ಯ ಅಸಾಧ್ಯ. ಒಬ್ಬನ ಸ್ವಾತಂತ್ರ್ಯದಿಂದ ಮತ್ತೊಬ್ಬನ ಸ್ವಾತಂತ್ರ್ಯ ಮತ್ತು ಹಕ್ಕುಗಳಿಗೆ ಚ್ಯುತಿಯಾಗದಂತಿದ್ದರೆ ಮಾತ್ರ ಆರೋಗ್ಯಯುತ ಸಮಾಜದ ನಿರ್ಮಾಣ ಸಾಧ್ಯ. ಮಾಧ್ಯಮದಲ್ಲಿ ಪ್ರಕಟವಾಗುವ ಸುದ್ದಿಗಳು ವ್ಯಕ್ತಿ, ಸಮುದಾಯ, ಸಮಾಜದ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಯೋಚಿಸುವ ಮಹತ್ತರ ಹೊಣೆಗಾರಿಕೆ ಪ್ರಜಾಸತ್ತೆಯ ನಾಲ್ಕನೆ ಆಧಾರಸ್ತಂಭಕ್ಕೆ ಇದೆ.

ಆದರೆ ವಾಣಿಜ್ಯ, ಜಾತಿ, ಧರ್ಮ ಮೊದಲಾದ ಸ್ಥಾಪಿತ ಹಿತಾಸಕ್ತಿಗಳ ಕೈವಾಡದ ಪರಿಣಾಮವಾಗಿ ವೈಜ್ಞಾನಿಕ ಚಿಂತನೆಗಳಿಗಿಂತ ಜ್ಯೋತಿಷ್ಯ, ವಾಸ್ತುವಿನಂತಹ ಮೂಢ ನಂಬಿಕೆ ಗಳಿಗೇ ಹೆಚ್ಚು ಮಹತ್ವ ನೀಡುವುದು, ನಿರ್ದಿಷ್ಟ ವ್ಯಕ್ತಿ, ಸಮುದಾಯಗಳ ಬಗ್ಗೆ ಪೂರ್ವಗ್ರಹ ಪೀಡಿತ, ಪಕ್ಷಪಾತೀಯವಾಗಿ ವರದಿ ಮಾಡುವುದು, ವರದಿ ಮಾಡದಿರುವುದು, ಕೆಲವು ವರದಿಗಳಿಗೆ ಹೆಚ್ಚು, ಇನ್ನು ಕೆಲವಕ್ಕೆ ತೀರಾ ಕಡಿಮೆ ಪ್ರಾಮು ಖ್ಯತೆ ನೀಡುವುದು ಇವೆಲ್ಲ ನಡೆಯುತ್ತಿವೆ. ಪ್ರಸಕ್ತವಾಗಿ ಭಾರತದ ಬಹುತೇಕ ಮಾಧ್ಯಮಗಳಲ್ಲಿ ಮೇಲ್ಮಧ್ಯಮ, ಶ್ರೀಮಂತ ವರ್ಗಗಳಿಗೆ, ರಾಜಕಾರಣಿಗಳಿಗೆ ಮತ್ತು ರೋಚಕ ಸುದ್ದಿಗಳಿಗೇ ಅತಿಯಾದ ಪ್ರಾಶಸ್ತ್ಯ.

ವಿಮಾನ ಸಂಸ್ಥೆಯೊಂದರ ಮಾಲಕನೂ ಹೆಂಡದ ದೊರೆಯೂ ಆಗಿರುವ ವ್ಯಕ್ತಿ ತನ್ನ ಪೈಲೆಟ್‌ಗಳಿಗೆ ಸಂಬಳ ಪಾವತಿಸದಿದ್ದರೂ, ಸರಕಾರಕ್ಕೆ ಕೋಟಿಗಟ್ಟಲೆ ಬಾಕಿ ಇರಿಸಿ ದರೂ ಆತನಿಗೆ ವಿಶೇಷ ಪ್ರಚಾರ ನೀಡುವ ಮಾಧ್ಯಮಗಳೂ ನಮ್ಮಲ್ಲಿವೆ.ಸಿನೆಮಾತಾರೆಯರು ಹಾಗೂ ಅವರ ಒಳ, ಹೊರ ಉಡುಪುಗಳು, ಕ್ರಿಕೆಟ್ ಆಟಗಾರರು, ವಾಣಿಜ್ಯೋದ್ಯಮಿಗಳು, ರೂಪದರ್ಶಿಗಳು, ತಲ್ವಾರ್ ಕುಟುಂಬದಂತಹ ವರು ಅಗತ್ಯಕ್ಕಿಂತಲೂ ಹೆಚ್ಚು ಪ್ರಚಾರ ಪಡೆಯು ತ್ತಾರೆ. ಅದೇ ವೇಳೆ ಕೃಷಿವಲಯದ ಬಿಕ್ಕಟ್ಟು, ರೈತರ ಆತ್ಮಹತ್ಯೆ, ಹೆಚ್ಚುತ್ತಿರುವ ಬಡತನ, ಅಪೌಷ್ಟಿಕತೆ, ಬಾಲಕಾರ್ಮಿಕ ಪದ್ಧತಿ, ಮಹಿಳೆ ಯರ ಶೋಷಣೆ, ಪ್ರತಿಭಟನೆ, ಮುಷ್ಕರ, ಧರಣಿ ಗಳು, ದಲಿತರ, ಅಲ್ಪಸಂಖ್ಯಾತರ, ಹಿಂದುಳಿದ ಜಾತಿಗಳ, ಬುಡಕಟ್ಟುಗಳ ಬೃಹತ್ ಸಮಸ್ಯೆಗಳು, ಸೆಝ್ ಹೆಸರಿನಲ್ಲಿ ಲಕ್ಷಾಂತರ ಜನರಿಗೆ ಆಗುತ್ತಿರುವ ಅನ್ಯಾಯಗಳು ವೊದಲಾದ ವಿಷಯಗಳಿಗೆ ಸಿಗುವ ಸ್ಥಳಾವಕಾಶ ಅತ್ಯಲ್ಪ.

ದೇಶಕ್ಕೆ ಸ್ವಾತಂತ್ರ್ಯ ಬಂದು ೬೫ ವರ್ಷಗಳೇ ಕಳೆದ ವಾದರೂ ಮಾಧ್ಯಮ ರಂಗದ ಮೇಲ್ಪದರಗಳಲ್ಲಿ ದಲಿತ ಪತ್ರಕರ್ತರು, ಸಂಪಾದಕರು ಹೆಚ್ಚು ಕಮ್ಮಿ ಇಲ್ಲವೇ ಇಲ್ಲವೆನ್ನುವ ಪರಿಸ್ಥಿತಿ ಇದೆ. ಹಾಗೆಯೇ ಅನೇಕ ಮಾಧ್ಯಮಗಳ ಆಯಕಟ್ಟಿನ ಸ್ಥಾನಗಳಲ್ಲಿ ಕೋಮುವಾದಿಗಳು ತಳವೂರಿರುವುದನ್ನು ಕಾಣಬಹುದು. ಈ ಬೆಳವಣಿಗೆಗಳಿಗೂ ದಲಿತರ ಅವಗಣನೆ ಮತ್ತು ಕೋಮು ಅಸೌಹಾರ್ದತೆಯ ವಾತಾವರಣ ಮುಂದುವರಿಯುವುದಕ್ಕೂ ನೇರ ಸಂಬಂಧವಿಲ್ಲವೇ? ಕೆಲವು ಪತ್ರಕರ್ತರು ಕೆಲವು ರಾಜಕಾರಣಿ ಗಳಿಂದ ನಿಯಮಿತವಾಗಿ ಹಫ್ತಾ ಪಡೆಯುತ್ತಿದ್ದ ವಿಷಯ ಈಗಾಗಲೇ ಬಯಲಾಗಿದೆ. ಮಂತ್ರಿ ವರ್ಯರೊಬ್ಬರ ಕಟ್ಟಡ ನಿರ್ಮಾಣ ಸಂಸ್ಥೆಯ ಕಚೇರಿಗೆ ಆದಾಯ ತೆರಿಗೆ ಇಲಾಖೆ ನಡೆಸುವ ದಾಳಿಯನ್ನು ಭೇಟಿ ಎಂದು ಬರೆಯುವ ಪತ್ರಿಕೆ ಗಳೂ ಇವೆ. ಕುಪ್ರಸಿದ್ಧ ಕಾಸಿಗಾಗಿ ಸುದ್ದಿ ಹಗರಣದ ಕುರಿತು ತಿಳಿಯದವರಾರು?

ಹಾಗೆ ನೋಡಿದರೆ ರಾಜಕಾರಣಿಗಳ ಪರವಾಗಿ, ಕಾರ್ಪೊರೇಟ್ ಉದ್ಯಮಿಗಳ ಪರವಾಗಿ ವರದಿ ಮಾಡಲು ಗುಂಡು ತುಂಡು ಪಾರ್ಟಿ, ಕವರ್, ಗಿಫ್ಟು, ಸೈಟು ಇತ್ಯಾದಿಗಳ ಬಳಕೆ ಸಾಪೇಕ್ಷವಾಗಿ ತುಂಬಾ ಹಳೆಯದು. ಅಧಿಕಾರಸ್ಥ ರಾಜಕಾರಣಿ ಗಳ ಹಿಂದೆ ಅಲೆದಾಡುತ್ತಾ ವಿವಿಧ ಸೌಲಭ್ಯ ಗಳನ್ನು ಗಿಟ್ಟಿಸಿಕೊಳ್ಳುವ ಇಂತಹ ಮಾಧ್ಯಮಗಳಿಗೆ ಅಂತಹ ರಾಜಕಾರಣಿಗಳ ತಪ್ಪುಗಳನ್ನು ಟೀಕಿಸುವ ನೈತಿಕತೆಯಾದರೂ ಎಲ್ಲಿಂದ?  ವಾಸ್ತವ ಹೀಗಿರುವಾಗ ಸಾಮಾಜಿಕ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿ ಸದ ಅಥವಾ ಕೇವಲ ತುಟಿಸೇವೆಯಷ್ಟನ್ನೆ ಸಲ್ಲಿಸುವ ಮಾಧ್ಯಮಗಳು ಮಾಧ್ಯಮ ಸ್ವಾತಂತ್ರ್ಯದ ಕಹಳೆ ಊದುವುದು ಎಷ್ಟರ ಮಟ್ಟಿಗೆ ಸಮರ್ಥನೀಯವೆಂಬ ಪ್ರಶ್ನೆಯಿದೆ.

ಭಾರತೀಯ ಮಾಧ್ಯಮಗಳ ವರದಿ ಗಾರಿಕೆ ಮೇಲೆ ಜಾಗತೀಕರಣದ ಪ್ರಭಾವ

ಭಾರತದಲ್ಲಿ ಇಂದು ಪತ್ರಿಕಾಧರ್ಮವನ್ನು ಪ್ರಾಮಾಣಿಕವಾಗಿ ಪಾಲಿಸುವ ಮಾಧ್ಯಮಗಳ ಸಂಖ್ಯೆ ಬೆರಳೆಣಿಕೆಗಿಳಿದಿದೆಯೆಂದರೆ ಅದು ಖಂಡಿತಾ ಅತಿಶಯೋಕ್ತಿ ಆಗಲಾರದು. ಕೆಲವೇ ದಶಕಗಳ ಹಿಂದೆ ವಿಯೆಟ್ನಾಂ, ಕ್ಯೂಬಾ ಮುಂತಾದ ವಿಮೋಚನಾ ಚಳವಳಿಗಳ ಕಾಲದಲ್ಲಿ ನಮ್ಮ ಹೆಚ್ಚಿನ ಮಾಧ್ಯಮಗಳು ಆ ಹೋರಾಟಗಳ ಪರವಾಗಿದ್ದವು.ಆದರೆ ಇಂದು? ೧೯೯೦ರಲ್ಲಿ ಆರಂಭವಾದ ಜಾಗತೀಕರಣ ಪ್ರಕ್ರಿಯೆ ಎಲ್ಲ ಮೌಲ್ಯಗಳನ್ನೂ ತಲೆಕೆಳಗಾಗಿಸಿದೆ.ಪಾಶ್ಚಿಮಾತ್ಯ ಮಾಧ್ಯಮಗಳ ಅಂಧಾನುಕರಣೆ ಆಗುತ್ತಿದೆ.ಭಾರತೀಯ ಮಾಧ್ಯಮಗಳು ಇಂದು ಪ್ರಪಂಚವನ್ನು ಮತ್ತು ಇನ್ನಿತರ ವಿದ್ಯಮಾನಗಳನ್ನು ನೋಡುವುದೇ ಅಮೆರಿಕಾದ ಕಣ್ಣುಗಳ ಹಾಗೂ ಪ್ರಜ್ಞೆಯ ಮೂಲಕ ಎಂದಾಗಿಬಿಟ್ಟಿದೆ.  ಇರಾಕ್, ಇರಾನ್ ಮತ್ತು ಇತ್ತೀಚಿನ ಅರಬ್ ಬಂಡಾಯ ದಂತಹ ಪ್ರಕರಣಗಳ ವರದಿಗಳಲ್ಲಿ ಅಮೆರಿಕದ ಆಕ್ರಮಣಕಾರಿ ಪರಿಭಾಷೆಯ ಅನುಕರಣೆಯನ್ನು ಸ್ಪಷ್ಟವಾಗಿ ಗಮನಿಸ ಬಹುದು. ಹೇಗೆ ಅಮೆರಿಕದ ಏಕಪಕ್ಷೀಯ ನಿಲುವುಗಳನ್ನು ಪ್ರತಿಬಿಂಬಿಸಲಾಗುತ್ತಿದೆ ಎನ್ನುವುದಕ್ಕೆ ಮತ್ತೊಂದು ಅತ್ಯುತ್ತಮ ನಿದರ್ಶನವೆಂದರೆ ಭಯೋತ್ಪಾದನೆ ವಿರುದ್ಧದ ಸಮರ.

ಮುಕ್ತ ಮಾರುಕಟ್ಟೆ ಸಿದ್ಧಾಂತದ ಮಾದರಿ ಯಾಗಿರುವ ಅಮೆರಿಕಾದ ಹೆಚ್ಚಿನ ಮಾಧ್ಯ ಮಗಳು ಕಾರ್ಪೊರೇಟ್‌ಗಳ ಹಿಡಿತದಲ್ಲಿವೆ ಮತ್ತು ಆಳುವ ರಾಜಕೀಯ ವ್ಯವಸ್ಥೆಗೆ ಪೂರಕವಾಗಿವೆ. ಅಲ್ಲಿನ ಕಾರ್ಪೊರೇಟ್‌ಗಳು ಇಂದು ಎಷ್ಟರ ಮಟ್ಟಿಗೆ ಬೆಳೆದು ಬಿಟ್ಟಿವೆಯೆಂದರೆ ತಮಗೆ ಅನುಕೂಲಕರವಾದ ಕಾನೂನುಗಳನ್ನು ತಾವೇ ತಯಾರಿಸಿ ತಮ್ಮ ಮುಷ್ಟಿಯೊಳಗಿರುವ ಶಾಸಕರ ಮೂಲಕ ಅವುಗಳನ್ನು ಕಾಯಿದೆಗಳಾಗಿ ಮಾಡಿಸಿಕೊಳ್ಳುತ್ತವೆ. ವಾಣಿಜ್ಯೀಕರಣ ಎನ್ನುವುದು ಒಂದು ರೀತಿಯಲ್ಲಿ ಮಾಧ್ಯಮ ವಲಯಕ್ಕೆ ವ್ಯಾಪಿಸಿರುವ ಸಾಂಕ್ರಾಮಿಕ ರೋಗದಂತಿದೆ.

ಅಮೆರಿಕಾದಲ್ಲಿ ಕಾರ್ಪೊರೇಟ್ ಮಾಧ್ಯಮ ಮತ್ತು ಆಳುವ ಪ್ರಭುತ್ವಗಳ ಮಧ್ಯೆ ಅದೇನು ಅನೈತಿಕ ಕೂಟ ಏರ್ಪಟ್ಟಿದೆಯೋ ಅದೇ ಪ್ರಕ್ರಿಯೆ ಭಾರತಕ್ಕೂ ಕಾಲಿರಿಸಿರುವ ಲಕ್ಷಣಗಳು ಗೋಚರಿಸುತ್ತಿವೆ. ಭಾರತದಲ್ಲಿಯೂ ಮಾಧ್ಯಮಗಳ ಮಾಲಕತ್ವ ಇಂದು ಹೆಚ್ಚೆಚ್ಚಾಗಿ ಕಾರ್ಪೊರೇಟ್‌ಗಳ ಮತ್ತು ರಾಜಕಾರಣಿಗಳ ಕೈಸೇರುತ್ತಿದೆ. ಭಾರತದಲ್ಲಿ ಇಂದು ರಾಜಕಾರಣಿಗಳು, ದೊಡ್ಡ ದೊಡ್ಡ ಉದ್ಯಮಿಗಳು ಕೂಡ ಟಿವಿ ಚಾನಲ್ ಮಾಲಕರಾಗುತ್ತಿರುವುದನ್ನು ಗಮನಿಸಬಹುದು.

ಇವುಗಳಲ್ಲಿ ಪ್ರಸಾರವಾಗುವ ಸುದ್ದಿ, ವಿಶ್ಲೇಷಣೆಗಳು ಪ್ರಾಮಾಣಿಕವಾಗಿರುತ್ತವೆ ಎಂದೂ ಸ್ವಪ್ರಚಾರ ಮತ್ತು ಸ್ವವೈಭಕರಣ ಆಗುವುದಿಲ್ಲವೆಂದೂ ಹೇಳಿದರೆ ನಂಬಬಹುದೇ? ಒಂದೆಡೆ ಟಿವಿ ಚಾನಲ್‌ಗಳ ಸಂಖ್ಯೆಯೇನೋ ಅಗಾಧವಾಗಿ ಬೆಳೆಯುತ್ತಿದೆ. ಆದರೆ ಗುಣಮಟ್ಟ ಮಾತ್ರ ಪಾತಾಳಕ್ಕಿಳಿಯುತ್ತಿದೆ.ಬಹುತೇಕ ಚಾನಲ್‌ಗಳ ನಿಕೃಷ್ಟ ಸ್ಥಿತಿಯನ್ನು ಕಂಡಾಗ ನಾಚಿ ತಲೆತಗ್ಗಿಸುವಂತಾಗುತ್ತದೆ.ಹೆಚ್ಚಿನ ಚಾನಲ್‌ಗಳಲ್ಲಿ ಜ್ಯೋತಿಷಿಗಳು,ವಾಸ್ತುತಜ್ಞರು,ಅದೃಷ್ಟವನ್ನು ಹೇಳುವ ಕಾರ್ಯಕ್ರಮಗಳು, ಕೆಟ್ಟ ಜಾಹೀರಾತುಗಳು ಇಂತಹವುಗಳೇ ವಿಜೃಂಭಿಸುತ್ತಿವೆ.

ಪೈಪೋಟಿಯ ಭಯವೇ ಇದಕ್ಕೊಂದು ಕಾರಣ ಎನ್ನಲಾಗುತ್ತಿದೆ. ವಾಣಿಜ್ಯೋದ್ಯಮದಂತಾಗಿರುವ ಮಾಧ್ಯಮರಂಗದಲ್ಲಿ ಪೈಪೋಟಿಯೂ ಸ್ವಾಭಾವಿಕವಲ್ಲವೆ? ಇಂದು ಸುದ್ದಿಯೊಂದಿಗೆ ಮನರಂಜನೆ ಎಂಬ ಹೆಸರಿನಲ್ಲಿ, ಅದು ಜನತೆಯ ಆಯ್ಕೆ ಎನ್ನುತ್ತಲೇ, ಅಶ್ಲೀಲತೆಯನ್ನು ಬಿತ್ತರಿಸಲಾಗುತ್ತಿದೆ. ಚಾನೆಲ್ ಮಾಲಕರೊಬ್ಬರ ಪ್ರಕಾರ ಇಂದಿನ ಕ್ಷಕರು ಉತ್ತೇಜಕ ಸುದ್ದಿಗಳನ್ನು ಇಷ್ಟಪಡುವುದರಿಂದಲೇ ಬಹಳಷ್ಟು ಸಿನಿಮಾ, ಕ್ರಿಕೆಟ್ ಮತ್ತು ಕ್ರೈಮ್ ದೃಶ್ಯಗಳನ್ನು ತೋರಿಸಲಾಗುತ್ತದೆಯಂತೆ. ಇದೊಂದು ಅಸಮರ್ಥನೀಯ ಹೇಳಿಕೆ. ಅಶ್ಲೀಲತೆ ಮತ್ತು ಮನರಂಜನೆ ನಡುವೆ ವ್ಯತ್ಯಾಸ ಇರುವ ಹಾಗೆ ಮನರಂಜನೆ ಮತ್ತು ಸುದ್ದಿಗಳ ನಡುವೆಯೂ ವ್ಯತ್ಯಾಸವಿದೆ.

ಆದರೆ ಹೆಚ್ಚಿನ ಖಾಸಗಿ ಚಾನಲ್‌ಗಳು ಅಶ್ಲೀಲತೆ, ಮನರಂಜನೆ ಮತ್ತು ಸುದ್ದಿಗಳ ನಡುವಿನ ಗಡಿಯನ್ನು ಮೀರಿ ವರ್ತಿಸುತ್ತಿರುವುದು ಸಾಮಾನ್ಯ. ಪ್ರಜಾತಂತ್ರದ ಚೌಕಟ್ಟಿನಲ್ಲಿ ಕಾರ್ಯಾಚರಿಸುವ ಚಾನಲ್‌ಗಳು ಇಂತಹ ಋಣಾತ್ಮಕ

ಹಿರಿಯರ ಕಿವಿಮಾತು

ಪತ್ರಿಕಾಧರ್ಮ ಮತ್ತು ಪತ್ರಿಕಾಸ್ವಾತಂತ್ರ್ಯಗಳ ಬಗ್ಗೆ ಸರ್ ಹೆರಾಲ್ಡ್ ಈವನ್ಸ್ ಹೇಳಿರುವ ಕೆಲವು ಮಾತುಗಳು ಮನನೀಯವಾಗಿವೆ. ಇವರು ಟೈಮ್ಸ್, ಸಂಡೇ ಟೈಮ್ಸ್ ಲಂಡನ್ ಪತ್ರಿಕೆಗಳ ಮಾಜಿ ಸಂಪಾದಕರು: “ಇಂದು ಕಾರ್ಪೊರೇಟ್ ಮಾಲಕರಿಂದಲೂ ನಿರ್ಬಂಧಗಳಿವೆ...... ಈಗ ಜಾಹೀರಾತುಗಳದ್ದೇ ಕಾರುಬಾರು.... ಹಿಂಸೆಯ ಯುಗದಲ್ಲಿ ಸ್ವತಂತ್ರ ಹಾಗೂ ಜವಾಬ್ದಾರಿಯುತ ಪತ್ರಿಕೆಗಳ ಪಾತ್ರವೇನೆಂದು ಅರಿಯಬೇಕಾದರೆ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮತ್ತು ಹಿಂಸೆಯ ಸ್ವಭಾವ ಹಾಗೂ ಮೂಲಗಳ ಬಗ್ಗೆ ಅರಿತುಕೊಳ್ಳಬೇಕಾಗುತ್ತದೆ.... ಸತ್ಯವನ್ನು ಒಂದೇ ಬಾರಿ ಮುದ್ರಿಸಿದರೆ ಸಾಲದು.... ಸತ್ಯಕ್ಕಾಗಿ ಇಂದು ಹೆಚ್ಚಿನ ಬೆಲೆಯನ್ನು ತೆರಬೇಕಾಗುತ್ತದೆ.... ದೇಶಭಕ್ತಿಯ ಕುರುಹು ಎಂಬ ಖೆಡ್ಡಾದ ಕುರಿತು ಎಚ್ಚರಿಕೆಯಿಂದಿರಬೇಕು.... ಪತ್ರಿಕಾವೃತ್ತಿಯ ಉದ್ದೇಶಗಳನ್ನು ಪದೇಪದೇ ನೆನಪಿಸಿಕೊಳ್ಳಬೇಕು.... ಸತ್ಯವನ್ನು ತಿರುಚುವುದು, ಪೂರ್ವಗ್ರಹಕ್ಕೆ ಒಳಗಾಗಿ ವರದಿ ಬರೆಯುವುದು, ಪಂಗಡ ಪಂಗಡಗಳ ನಡುವೆ ದ್ವೇಷವನ್ನು ಕೆರಳಿಸುವುದು, ಖಾಸಗಿ ದುಃಖದ ದುರ್ಬಳಕೆ ಮುಂತಾದುವನ್ನು ಮಾಡುತ್ತಿದ್ದರೆ ಪತ್ರಿಕೆಗಳು ಸ್ವಾತಂತ್ರ್ಯಕ್ಕೆ ಅರ್ಹವಲ್ಲ......”

ಆಧಾರ:ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಕಟಿಸಿದ ಸಂವಹನ-೨೦೦೬.
ಜಿ.ರಾಮಕೃಷ್ಣ ಮತ್ತು ಎನ್.ಕೆ.ಸಿಂಗ್ ಇವರ ಲೇಖನಗಳು.
ದ ಟ್ರಿಬ್ಯೂನ್.
ದ ಕ್ ೩೦.೧೨.೨೦೦೭.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಜನಸಂಖ್ಯೆ ಹೆಚ್ಚಳದ ಪರಿಣಾಮ

ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...


ನಿಮ್ಮ ಅನಿಸಿಕೆ

postClick here to post your views
EPAPER
access

ಅಗ್ಗದ ಮದ್ಯಕೆ ಶುದ್ಧ ನೀರು ಬೆರೆಸಿ ಕುಡಿವ ವೇಳೆಗೆ ಸೌಭಾಗ್ಯದ ಸೋನಿಯಾ ಬಾರಮ್ಮಾ...

ಕಳಂಕಿತರನ್ನು ಸಚಿವ ಸಂಪುಟದಿಂದ ಹೊರಗಿಟ್ಟು ಭೇಷ್ ಅನಿಸಿಕೊಂಡ ಸಿದ್ದು, ಖಾತೆ ಹಂಚಿಕೆಯಲ್ಲ ...


- ಪಿ.ಕೆ.ಮಲ್ಲನಗೌಡರ್‌

ಮನೋಲ್ಲಾಸದ ನಾಲೆಗಳು: (ಭಾಗ-2)

ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...


- ಶೂದ್ರ ಶ್ರೀನಿವಾಸ್

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್