ಅಂಕಣ - ಫೋಕಸ್‌

mail-img print-img

ಗುಜರಾತ್ ಮೋದಿ ಮಾದರಿ ಅಭಿವೃದ್ಧಿಯ ಕೆಲವು ಸತ್ಯಗಳು

ಶುಕ್ರವಾರ - ಜೂನ್ -22-2012

ಕಳೆದ ಚುನಾವಣೆಯಲ್ಲಿ ಪಡೆದಷ್ಟು ಸೀಟುಗಳನ್ನು ಈ ಬಾರಿ ಕಾಂಗ್ರೆಸ್ ಆಗಲೀ ಅಥವಾ ಬಿಜೆಪಿಯಾಗಲೀ ಪಡೆಯಲಾರದು ಎಂಬ ದಟ್ಟ ಅಭಿಪ್ರಾಯ ರೂಪುಗೊಳ್ಳುತ್ತಿದ್ದರೂ ಬಿಜೆಪಿಯಲ್ಲಿ ಈಗಾಗಲೇ ಮುಂದಿನ ಪ್ರಧಾನಿ ಗುಜರಾತ್ ಮುಖ್ಯಮಂತ್ರಿ ನರಹಂತಕ ಮೋದಿಯೇ ಆಗಬೇಕೆಂಬ ಹುಯಿಲನ್ನು ಎಬ್ಬಿಸಲಾಗಿದೆ.ಅದಕ್ಕೆ ಪೂರಕವಾಗಿ ಅವರ ಸಾಧನೆಗಳ ದೊಡ್ಡ ಪಟ್ಟಿಯನ್ನು ಮತ್ತು ವಿಶೇಷವಾಗಿ ಗುಜರಾತನ್ನು ಮೋದಿ ಕಾಲದಲ್ಲಿ ಹೇಗೆ ಧರೆಗಿಳಿದ ಸ್ವರ್ಗವನ್ನಾಗಿ ಮಾಡಲಾಗಿದೆಯೆಂಬ ಬಗ್ಗೆ ದೊಡ್ಡ ರೀತಿಯಲ್ಲಿ ಮೀಡಿಯಾ ಪ್ರಚಾರ ನಡೆಯುತ್ತಿದೆ. ಆದರೆ ವಾಸ್ತವವಾಗಿ ನೋಡಿದರೆ ಗುಜರಾತಿನಲ್ಲೇ ಮೋದಿಯ ವಿರುದ್ಧ ಬಿಜೆಪಿಯ ದೊಡ್ಡ ಬಣ ಬಂಡೆದ್ದಿದೆ. ಕೇಶೂಭಾಯಿ ಪಟೇಲ್ ನೇತೃತ್ವದಲ್ಲಿ ಮೋದಿಯ ಸರ್ವಾಧಿಕಾರಿ ಆಡಳಿತದಿಂದ ಮೂಲೆಗುಂಪಾಗಿರುವ ಅತೃಪ್ತ ಮತ್ತು ‘ವಂಚಿತ’ ಬಿಜೆಪಿ ಹಿರಿಯ ನಾಯಕರುಗಳು ಮೋದಿಯ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ.ಜೊತೆಗೆ ಸಂಜಯ್ ಜೋಷಿ ಪ್ರಕರಣ ಮೋದಿ ಸಂತ್ರಸ್ತರಿಗೆ ಇನ್ನಷ್ಟು ಒಗ್ಗೂಡಲು ಅವಕಾಶ ಮಾಡಿಕೊಟ್ಟಿದೆ. ಬಿಜೆಪಿಗೆ ಹೆಚ್ಚು ಎಂಪಿಗಳನ್ನು ತಂದು ಕೊಡಬಲ್ಲ ಕರ್ನಾಟಕದ ಬಿಜೆಪಿ ಈಗಾಗಲೇ ಒಡೆದ ಮನೆಯಾಗಿದೆ.

ಅಲ್ಲದೆ ಬಿಜೆಪಿಯ ಕೇಂದ್ರೀಯ ನಾಯಕತ್ವವೇ ಒಡೆದ ಮನೆಯಾಗಿರುವುದರಿಂದ ಬಿಜೆಪಿ ಬಲವಾಗಿ ರುವ ರಾಜ್ಯಗಳಲ್ಲೂ ಈ ಒಡಕು ಬರಲಿ ರುವ ಚುನಾವಣೆಗಳಲ್ಲಿ ಪ್ರಭಾವ ಬೀರಲಿದೆ.ಎಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಆಗಲೀ, ಬಿಜೆಪಿಯಾಗಲೀ ತಮ್ಮ್ಮಂತೆ ತಾವೇ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲದಿರುವುದರಿಂದ ಸಮ್ಮಿಶ್ರ ರಾಜಕಾರಣದ ತರ್ಕಗಳೇ ಈ ಚುನಾವಣೆಯನ್ನೂ ಅದರ ರಾಜಕೀಯವನ್ನು ಪ್ರಭಾವಿಸಲಿವೆ.ಬಿಜೆಪಿ ನೇತೃತ್ವದ ಎನ್‌ಡಿಎ ಪಕ್ಷಗಳು ತಮ್ಮದೇ ಹಿತಾಸಕ್ತಿಗಾಗಿ ಪರಮ ಹಿಂದೂತ್ವವಾದಿ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಒಪ್ಪಿಕೊಳ್ಳಲಾರವು. ಅದರ ಬಗ್ಗೆ ಈಗಾಗಲೇ ಎನ್‌ಡಿಎಯ ಅತಿ ಪ್ರಮುಖ ಮಿತ್ರಪಕ್ಷ ವಾದ ಜೆಡಿಯುನ ಬಿಹಾರದ ಮುಖ್ಯ ಮಂತ್ರಿ ನಿತೀಶ್ ಕುಮಾರ್ ಹೇಳಿಯಾ ಗಿದೆ. ಈ ಎಲ್ಲಾ ಕಾರಣಗಳಿಂದ ಈ ಬಾರಿ ಎನ್‌ಡಿಎ ಅಧಿಕಾರಕ್ಕೆ ಬರುವುದು ಕಷ್ಟ.

ಹಾಗೆಯೇ ಕಾಂಗ್ರೆಸ್ ಹಾದಿಯು ಸುಗಮವಲ್ಲ. ಆದ್ದರಿಂದಲೇ ಮೂರನೆ ರಂಗದ ಚಟುವಟಿಕೆಗಳು ರಾಜ್ಯಮಟ್ಟದಲ್ಲಿ ಪ್ರಬಾವಿಗಳಾಗಿರುವ ದಳ, ಸಮಾಜವಾದಿ, ಟಿಎಂಸಿ ಪಕ್ಷಗಳು ದೆಹಲಿಯತ್ತ ಆಸೆಗಣ್ಣಿಂದ ನೋಡುತ್ತಾ ಅವ ಕಾಶವಾದಿ ರಾಜಕಾರಣ ಪ್ರಾರಂಭಿಸಿವೆ. ರಾಷ್ಟ್ರೀಯ ಪಕ್ಷಗಳ ಜೊತೆ ಚೌಕಾಸಿ ಪ್ರಾರಂಭಿಸಿವೆ. ರಾಷ್ಟ್ರಪತಿ ಚುನಾವಣೆ ಅದರ ಎಲ್ಲಾ ಆಯಾಮಗಳನ್ನು ಬಿಚ್ಚಿಡುತ್ತಿದೆ.ಅದೇನೇ ಇರಲಿ, ಎನ್‌ಡಿಎ ಅಧಿಕಾರಕ್ಕೆ ಬರುವುದು ಸುಲಭವಲ್ಲ.ಬಂದರೂ ಮೋದಿ ಎನ್‌ಡಿಎ ರಂಗದ ಸಮ್ಮತ ಪ್ರಧಾನಿಯಾಗುವುದಂತೂ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಈಗಂತೂ ಇದೆ.ಅದನ್ನೇ ಮೊನ್ನೆ ವಾಜಪೇಯಿ ಪ್ರಧಾನಿಯಾಗಿದ್ದಾಗ ಅವರ ರಾಜಕೀಯ ಸಲಹೆಗಾರನಾಗಿದ್ದ ಬ್ರಜೇಶ್ ಅವರೂ ಹೇಳಿದ್ದಾರೆ.

ಅದಕ್ಕಿಂತ ಹೆಚ್ಚಾಗಿ ಪ್ರಧಾನಿ ಅಭ್ಯರ್ಥಿ ಜಾತ್ಯತೀತ ವ್ಯಕ್ತಿಯಾಗಿರಬೇಕು ಎಂಬ ನಿತೀಶ್ ಸಲಹೆಯನ್ನು ಬಿಹಾರದ ಬಿಜೆಪಿ ಅಧ್ಯಕ್ಷ ಸುಶೀಲ್ ಕುಮಾರ್ ಮೋದಿಯೇ ಒಪ್ಪಿ ಕೊಂಡಿರುವುದು ಮೋದಿ ಪ್ರಧಾನಿಯಾಗುವುದು ಎನ್‌ಡಿಎ ಮಿತ್ರಪಕ್ಷಗಳಿಗೆ ಮಾತ್ರವಲ್ಲ, ಬಿಜೆಪಿಯೊಳಗೇ ಒಂದು ಗುಂಪಿಗೆ ಬೇಕಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಅದೇನೇ ಇರಲಿ. ಮೋದಿಯನ್ನು ಹಿಂದೂತ್ವ ಕಟ್ಟಾಳು ಎಂಬ ಕಾರಣಕ್ಕಾಗಿ ಮತ್ತು ಈ ದೇಶವನ್ನು ಹಿಂದೂ ರಾಷ್ಟ್ರ ಮಾಡಬೇಕು ಎಂದು ಯುದ್ಧ ಹೂಡಿರುವ ಹಿಂದೂತ್ವವಾದಿಗಳು ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಹತ್ತು ಹಲವು ಪ್ರಚಾರಗಳನ್ನು ಪ್ರಾರಂಭಿಸಿವೆ. ಅದರಲ್ಲಿ ಒಂದು ಗುಜರಾತ್ ದೇಶದಲ್ಲಿ ಅತ್ಯಧಿಕ ಅಭಿವೃದ್ಧಿಯನ್ನು ಸಾಧಿಸಿದೆ ಮತ್ತು ಅದು ಈ ದೇಶಕ್ಕೇ ಮಾದರಿಯೆಂಬ ಪ್ರಚಾರ. ಅದಕ್ಕೆ ಅವರು ಹಲವು ಅರ್ಧ ಸತ್ಯಗಳನ್ನೂ ಮತ್ತು ಹಸಿಸುಳ್ಳ್ಳುಗಳನ್ನೂ ಬಿತ್ತರಿಸುತ್ತಿದ್ದಾರೆ. ಅಂಥ ಹಲವು ಸುಳ್ಳುಗಳ ಕಂತೆಯನ್ನು ಇತ್ತೀಚೆಗೆ ರಾಷ್ಟ್ರದ ಕೆಲವು ಪ್ರಮುಖ ವಿದ್ವಾಂಸರು ಬಯ ಲು ಮಾಡಿದ್ದಾರೆ.

ಅವುಗಳಲ್ಲಿ ಕೆಲವು ಹೀಗಿವೆ:

1.ಗುಜರಾತ್ ಇಡೀ ದೇಶದಲ್ಲೇ ಅತಿ ಹೆಚ್ಚು ಅಭಿವೃದ್ಧಿ ಸಾಧಿಸಿರುವ ರಾಜ್ಯ ಎಂದು ಹೇಳಲಾ ಗುತ್ತದೆ. ಆದರೆ ಮಾನವ ಅಭಿವೃದ್ಧಿ ಸೂಚ್ಯಂಕ ದಲ್ಲಿ ಗುಜರಾತ್‌ನ ಸಾಧನೆ ಅತ್ಯಂತ ಕಳಪೆಯಾ ಗಿದೆ. ಉದಾಹರಣೆಗೆ LEB (life expectancy at birthಉದಾಹರಣೆಗೆ ),ಅಂದರೆ ಹುಟ್ಟುವ ಮಕ್ಕಳು ಬದುಕುಳಿಯುವ ಸಾಧ್ಯತೆಗಳ ಪ್ರಮಾಣದಲ್ಲಿ ಗುಜರಾತ್ ದೇಶದಲ್ಲಿ ಇರು ವುದು ಮೊದಲನೆಯ ಸ್ಥಾನದಲ್ಲಲ್ಲ. 9ನೆ ಸ್ಥಾನದಲ್ಲಿ.ಹಾಗೆಯೇ SLE (school life expectancy) ಶಾಲೆಯಲ್ಲಿ ಮಕ್ಕಳು ಓದು ಮುಂದುವರಿಸುವ ಸಾಧ್ಯತೆಯ ಪ್ರಮಾಣದಲ್ಲಿ 9ನೆ ಸ್ಥಾನದಲ್ಲೂ, MYS (mean years of schooling) ಅಂದರೆ ಒಟ್ಟು ಸರಾಸರಿ ಆ ವಯೋಮಾನದ ಮಕ್ಕಳು ಎಷ್ಟು ವರ್ಷ ಶಾಲೆಗೆ ಹಾಜರಾಗಿದ್ದಾರೆ ಎಂಬ ಗಣತಿಯಲ್ಲಿ 7ನೆ ಸ್ಥಾನದಲ್ಲೂ ಇದೆ.

2. ಇನ್ನು ಮಾನವ ಅಭಿವೃದ್ಧಿ ಸೂಚ್ಯಂಕ ಎಂಬ ಅಭಿವೃದ್ಧಿಯನ್ನು ಅಳೆಯುವ ಪರ್ಯಾ ಯ ಮಾನದಂಡವನ್ನು ಕೈಬಿಟ್ಟು ಸರಕಾರಿ ಮಾನದಂಡಗಳನ್ನೇ ಇಟ್ಟುಕೊಂಡರೂ ಗುಜ ರಾತ್‌ನ ಮೋದಿ ಸರಕಾರ ಹಸಿಸುಳ್ಳು ಗಳನ್ನು ಹೇಳುತ್ತಿರುವುದು ಸ್ಪಷ್ಟವಾಗುತ್ತದೆ. ಉದಾಹರಣೆಗೆ ಮೋದಿ ಭಟ್ಟಂಗಿಗಳ ಪ್ರಕಾರ ಮೋದಿ ಅಧಿಕಾ ರದ ಅವಧಿಯಲ್ಲಿ ಅಂದರೆ 2001-10ರ ಅವಧಿ ಯಲ್ಲಿ ಗುಜರಾತ್‌ನ ಸರಾಸರಿ ರಾಜ್ಯ ಒಟ್ಟಾರೆ ಉತ್ಪನ್ನದ ಅಭಿವೃದ್ಧಿಯ ಗತಿ 8.01ರಿಂದ 8.68ಕ್ಕೆ ಏರಿತೆಂದೂ ಇದು ದೇಶದ ಯಾವ ರಾಜ್ಯವೂ ಮಾಡದ ‘ಅಭಿವೃದ್ಧಿ’ಯೆಂದೂ ಕೊಂಡಾಡಲಾಗುತ್ತದೆ.

ಆದರೆ ಅಂಕಿಅಂಶಗಳನ್ನು ನೋಡಿದರೆ ದೇಶದ ಪ್ರಮುಖ ರಾಜ್ಯಗಳಾದ ಆಂಧ್ರ, ಹರ್ಯಾಣ, ಮಹಾರಾಷ್ಟ್ರ, ತಮಿಳುನಾಡು ಮತ್ತು ಉತ್ತರ ಪ್ರದೇಶಗಳು ಸಹ ಇದೇ ಪ್ರಮಾ ಣದ ‘ಅಭಿವೃದ್ಧಿ’ ಗತಿಯನ್ನು ತೋರಿಸಿವೆ. ಹಾಗೆ ನೋಡಿದರೆ ಉತ್ತರಖಂಡ್ (11.81) ಮತ್ತು ಹರ್ಯಾಣ (8.95) ಗುಜರಾತಿಗಿಂತ ಹೆಚ್ಚಿನ ಅಭಿವೃದ್ಧಿ ಗತಿಯನ್ನು ದಾಖಲಿಸಿದೆ. ಇದನ್ನೇ ಅಭಿವೃದ್ಧಿ ಎಂದುಕೊಂಡರೆ ಅತ್ಯಂತ ಹಿಂದುಳಿದ ರಾಜ್ಯಗಳಾದ ಬಿಹಾರ ಮತ್ತು ಒರಿಸ್ಸಾಗಳು ಈ ಅವಧಿಯಲ್ಲಿ ತಮ್ಮ ಅಭಿವೃದ್ಧಿ ಗತಿಯನ್ನು ಶೇ.4ರಿಂದ 8.3ಕ್ಕೇರಿಸಿಕೊಂಡಿವೆ.

ಈ ಅಭಿವೃದ್ಧಿಯ ಕಥನಗಳೆಲ್ಲಾ ಜನತೆಯನ್ನು ಅಳಿದುಳಿದ ಸಂಪನ್ಮೂಲಗಳನ್ನು ಕಿತ್ತು ಕೊಂಡು ಕೆಲವೇ ಶ್ರೀಮಂತರನ್ನು ಬೆಳೆಸಿದ ಹಗಲು ದರೋಡೆಯ ಕಥನವೇ ಎಂಬು ದನ್ನು ಮರೆಯುವಂತಿಲ್ಲ. ಆದರೆ ಇಲ್ಲಿ ಅಂಕಿ ಅಂಶಗಳನ್ನು ದಾಖಲಿಸಿರುವುದು ಅದರಲ್ಲೂ ಗುಜರಾತ್ ಸರಕಾರ ಎಷ್ಟು ಸುಳ್ಳು ಹೇಳು ತ್ತಿದೆ ಎಂಬ ಅಂಶಗಳನ್ನು ಸಾಬೀತು ಪಡಿಸಲು ಮಾತ್ರ!
 

3. ಅದೇ ರೀತಿ ವಿದೇಶಿ ಬಂಡವಾಳದ ಹರಿವಿನಲ್ಲೂ ಮೋದಿ ಅವಧಿಯಲ್ಲಿ ಅತಿ ಹೆಚ್ಚು ಆಕರ್ಷಿಸಲಾಗಿದೆಯೆಂದೂ ಮೋದಿಯ ಗುಜರಾತ್ ವಿದೇಶಿ ಬಂಡವಾಳಿಗರ ಅತಿ ನೆಚ್ಚಿನ ತಾಣವೆಂದೂ ಕೊಚ್ಚಿಕೊಳ್ಳಲಾಗುತ್ತಿದೆ. ಒಂದು ದೇಶಿ ಅಭಿವೃದ್ಧಿ, ಸುರಾಜ್ಯ, ಸ್ವರಾಜ್ಯ ಎಂದೆಲ್ಲಾ ಬೊಗಳೆ ಹೊಡೆಯುವ ಹಿಂದೂತ್ವವಾದಿಗಳಿಗೆ ಈ ದೇಶದ ಸಂಪನ್ಮೂಲವನ್ನೆಲ್ಲಾ ಲೂಟಿ ಹೊಡೆ ಯುವ ವಿದೇಶಿ ಬಂಡವಾಳದ ಹರಿವು ಹೇಗೆ ಅಭಿವೃದ್ಧಿಯ ಮಾನದಂಡವಾ ದೀತು? ಇದೇ ಅವರ ಆಷಾಢಭೂತಿತನಕ್ಕೆ ಒಂದು ಉದಾಹರಣೆ. ಆದರೂ ಒಂದು ಕ್ಷಣ ಅದೇ ಅಭಿವೃದ್ಧಿಯ ಮಾನದಂಡವೆಂದು ಇಟ್ಟು ಕೊಂಡರೂ ಅದರಲ್ಲೂ ಗುಜರಾತ್ ಸರಕಾರ ಎಷ್ಟು ಸುಳ್ಳು ಹೇಳುತ್ತಿದೆಯೆಂದು ಈ ಕೆಳಗಿನ ಅಂಕಿಅಂಶಗಳು ಹೇಳುತ್ತವೆ.

ಗುಜರಾತ್ ಸರಕಾರ ಪ್ರಕಾರ 2006-10ರ ಅವಧಿಯಲ್ಲಿ ಗುಜರಾತು 5.35 ಲಕ್ಷ ಕೋಟಿ ರೂಪಾಯಿಗಳ ಎಂಒಯು- ಅಂದರೆ ಒಡಂಬಡಿಕೆ ಮಾಡಿ ಕೊಂಡಿದೆ. ಇದರಿಂದ 6.74 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಸರಕಾರ ಹೇಳಿ ಕೊಳ್ಳು ತ್ತಿದೆ. ಕೇವಲ ಅಂಕಿಅಂಶವನ್ನೇ ಇಟ್ಟು ಕೊಂಡು ಮಾತನಾಡಿದರೂ ಇದೇ ಅವಧಿಯಲ್ಲಿ ಚತ್ತೀಸ್ ಘಡ 9.5 ಲಕ್ಷ ಕೋಟಿ ರೂಪಾಯಿಗಳ ಮತ್ತು ಒರಿಸ್ಸಾ 8 ಲಕ್ಷ ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿವೆ.

ಕರ್ನಾಟಕದ ಉದಾಹರಣೆಯನ್ನೇ ನೋಡುವುದಾದರೆ ಈ ಬಗೆಯ 2010 ರ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಒಪ್ಪಂದವಾದದ್ದು 5 ಲಕ್ಷ ಕೋಟಿ ರೂಪಾಯಿಗಳದ್ದು. ಈವರೆಗೆ ಸಾಕಾರಗೊಂಡಿದ್ದು 5000 ಕೋಟಿಗಳ ಬಂಡವಾಳ ಮತ್ತು ವಿವಿಧ ಹಂತದಲ್ಲಿರುವುದು 23000 ಕೋಟಿ ರೂಪಾಯಿ ಬಂಡವಾಳ ಹೂಡಿಕೆ. ಅಲ್ಲದೆ ಈ ವಿದೇಶಿ ಉದ್ಯಮಗಳು ಈ ನಾಡಿನ ಸಂಪತ್ತನ್ನು ದುಗ್ಗಾಣಿ ಬೆಲೆಗೆ ಕೊಡದ ಹೊರತು ಹೂಡಿಕೆ ಮಾಡುವುದಿಲ್ಲ. ಹೀಗಾಗಿ ಹೆಚ್ಚು ಹೂಡಿಕೆ ಎಂಬುದು ಅಭಿವೃದ್ಧಿಯ ಲಕ್ಷಣವಲ್ಲ. ಅಧೋಗತಿಯ ಲಕ್ಷಣ.ಅದನ್ನೇ ಒರೀಸ್ಸಾ ಮತ್ತು ಚತ್ತೀಸ್‌ಘಡದಲ್ಲೂ ನೋಡುತ್ತಿದ್ದೇವೆ. ಆದರೂ ಈ ಸುರಾಜ್ಯ-ಸ್ವರಾಜ್ಯದ ಬೊಗಳೆ ಬಿಡುವ ಹಿಂದೂತ್ವವಾದಿಗಳು ದೇಶದ ದರೋಡೆಯನ್ನು ಅಭಿವೃದ್ಧಿಯೆನ್ನುತ್ತಾರೆ. ಮೋದಿಯಂತು ಆ ಮಾನದಂಡದ ‘ಸಾಧನೆ’ಯಲ್ಲೂ ಹಸಿ ಸುಳ್ಳನ್ನೇ ಹೇಳುತ್ತಿದ್ದಾರೆ.

4.ಇನ್ನು ಜನತೆಯ ಆದಾಯ. ಶಿಕ್ಷಣ ಮತ್ತು ಆರೋಗ್ಯವನ್ನು ಮಾನದಂಡವಾಗಿಟ್ಟುಕೊಂಡು ಅಭಿವೃದ್ಧಿಯನ್ನು ಅಳತೆ ಮಾಡುವ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಗುಜರಾತ್ ದೇಶದ ಹಲವು ‘ಹಿಂದುಳಿದ’ ರಾಜ್ಯಗಳಿಗಿಂತಲೂ ಮತ್ತು ಮುಂದುವರಿದ ರಾಜ್ಯಗಳಿಗಿಂತಲೂ ಸಾಕಷ್ಟು ಹಿಂದೆಬಿದ್ದಿದೆ. ಮಾನವ ಅಭಿವೃದ್ಧಿಯ ಸೂಚ್ಯಂಕದಲ್ಲಿ 2008ರಲ್ಲಿ ಗುಜರಾತ್ ಗಳಿಸಿದ್ದು ಕೇವಲ 0.527 ಅಂಕವನ್ನು. ಆದರೆ ಗುಜರಾತ್‌ಗಿಂತ ಹಿಂದುಳಿದ ರಾಜ್ಯವಾದ ಹಿಮಾಚಲ ಪ್ರದೇಶ 0.652 ಅಂಕವನ್ನೂ,ಪಂಜಾಬ್ 0.605 ಅಂಕವನ್ನೂ, ಮಹಾರಾಷ್ಟ್ರ 0.572 ಮತ್ತು ಹರ್ಯಾಣ 0.552 ಅಂಕವನ್ನು ಪಡೆದುಕೊಂಡಿತ್ತು.ಕೇರಳ ಎಲ್ಲಕ್ಕಿಂತ ಅತಿ ಹೆಚ್ಚು 0.790 ಅಂಕವನ್ನೂ ಪಡೆದುಕೊಂಡಿತ್ತು.ದು ಗುಜರಾತ್ ಮಾದರಿ ಅಭಿವೃದ್ಧಿಯ, ಹಿಂದೂತ್ವವಾದಿಗಳ ಜನವಿರೋಧಿತನದ ಅಸಲೀ ಸ್ವರೂಪ.  



Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಖಾಲಿಯಾದ ಜಲಾಶಯಗಳು ಕುಡಿಯುವ ನೀರಿಗೆ ಹಾಹಾಕಾರ

ಬೇಸಿಗೆಯ ಪ್ರಖರತೆ ಹೆಚ್ಚುತ್ತಲೇ ಇದೆ. ಕಾವೇರಿ ಮತ್ತು ಕೃಷ್ಣಾ ಕೊಳ್ಳದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಹಿಂದೆಂದೂ ಕಂಡರಿಯದಷ್ಟು ಕುಸಿದಿದೆ. ಪ್ರತಿ ಸಲದಂತೆ ಜ ...


ನಿಮ್ಮ ಅನಿಸಿಕೆ

postClick here to post your views
EPAPER
access

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್

ಅಕ್ಷರ ಸೇವೆಯಿಂದ ಜನಸೇವೆಗೆ;ತೆಂಕಮಿಜಾರಿನ ಮುತ್ತು

ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...


- ಪ್ರೇಮಶ್ರೀ ಕಲ್ಲಬೆಟ್ಟು

ನಾನು ಮತ್ತು ದೇವರು

 ರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...


- ಸುನೀಲ್ ರಾವ್

ಬಿಟ್ಟಿ ಅಂಕದ ಪಿಯುಸಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಬುಟ್ಟಿಗೆಸೆ!

 ಮಾನ್ಯರೆ,

ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...


- -‘ಮಾತರಿ’ ಸಾಗ

ಶಂಕರದರ್ಶನ ಮತ್ತು ವಿಮರ್ಶಾ ರಾಜಕೀಯಗಳು

ಭಾರತ ದೇಶದ, ಜಗತ್ತಿನ ಅಗ್ರ ದಾರ್ಶನಿಕರಲ್ಲಿ ಓರ್ವರು ಶ್ರೀ ಶಂಕರಾಚಾರ್ಯರು. (ಕ್ರಿ. 8ನೆ ಶತಮಾನ) ಅವರ ದ ...


- -ಡಾ.ಎಂ. ಪ್ರಭಾಕರ ಜೋಶಿ