ಅಂಕಣ

mail-img print-img

ಮುಸ್ಲಿಮರೇ ಗುರಿ ಯಾಕೆ?

ಶನಿವಾರ - ಜೂನ್ -23-2012

ಈ ವರ್ಷದ ಮೇ ತಿಂಗಳಲ್ಲಿ ಕಲ್ಯಾಣದಲ್ಲಿ ಓರ್ವ ಮುಸ್ಲಿಮ್ ಯುವಕ ಬಿಲಾಲ್ ಶೇಖ್‌ನ ವಿರುದ್ಧ 333ನೆ ಪರಿಚ್ಛೇದದಂತೆ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಲಾಯಿತು. ಆತನ ಅಪರಾಧ ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದು. ತಮ್ಮಿಂದಿಗೆ ವಾದ ಮಾಡಿದುದಕ್ಕಾಗಿ ಪೊಲೀಸರು ಆತನ ಮೇಲೆ ಅಮಾನುಷ ಹಲ್ಲೆ ನಡೆಸಿದರು. ಆತನ ಬಲಗೈ ಮೂಳೆ ಮುರಿತಕ್ಕೊಳಗಾಯಿತು ಹಾಗೂ 8 ದಿನಗಳ ಕಾಲ ಆತ ಜೈಲಿನಲ್ಲಿದ್ದ. ಆತನಿಗೆ ಹೊಡೆದ ಪೊಲೀಸರ ವಿರುದ್ಧ ಗಂಭೀರವಲ್ಲದ ಅಪರಾಧದ ವಾರಂಟ್ ಹೊರಡಿಸಲಾಯಿತು ಹಾಗೂ ಅವರಿಗೆ ಜಾಮೀನು ಲಭಿಸಿತು.ಇನ್ನೊಬ್ಬ ಮುಸ್ಲಿಂ ಯುವಕ 18 ವರ್ಷ ಪ್ರಾಯದ ಆಮಿರ್ ಖಾನ್ ತನ್ನ ಶಾಲಾ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದಾಗ ಪೊಲೀಸರು ಅಪಹರಿಸಿ ದರು. ಆತನ ವಿರುದ್ಧ ದಿಲ್ಲಿಯಲ್ಲಿ ಸರಣಿ ಬಾಂಬ್‌ಗಳನ್ನು ಸ್ಫೋಟಿ ಸಿದ ಆರೋಪವನ್ನು ಹೊರಿಸಲಾಯಿತು ಹಾಗೂ ಸಾಧ್ಯವಿರುವ ಎಲ್ಲ ಪರಿಚ್ಛೇದಗಳಡಿಯಲ್ಲಿ ಆತನ ವಿರುದ್ಧ ಮೊಕದ್ದಮೆಗಳನ್ನು ಹೂಡಲಾಯಿತು. 14 ವರ್ಷಗಳ ಕಾಲ ಆತನಿಗೆ ಜೈಲಿನಲ್ಲಿ ಚಿತ್ರಹಿಂಸೆ ನೀಡಲಾಯಿತು. ಅಂತಿಮವಾಗಿ ಆತನ ವಿರುದ್ಧದ ಯಾವುದೇ ಆರೋಪವನ್ನು ಸಾಬೀತುಪಡಿಸಲು ಪೊಲೀಸರು ವಿಫಲರಾದಾಗ ಆತನನ್ನು ಬಿಡುಗಡೆ ಮಾಡಲಾಯಿತು.

ಮಾಲೆಗಾಂವ್, ಮಕ್ಕಾ ಮಸೀದಿ (ಹೈದರಾಬಾದ್) ಅಜ್ಮೀರ್ ಮತ್ತು ಸಂರೆತಾ ಎಕ್ಸ್‌ಪ್ರೆಸ್‌ಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿ ಪ್ರತಿ ಸ್ಫೋಟದ ಬಳಿಕ ಪೊಲೀಸರು ಹಲವಾರು ಮುಸ್ಲಿಂ ಯುವಕರನ್ನು ಬಂಧಿಸಿದರು. ಇವೇ ಸ್ಫೋಟ ಗಳಿಗಾಗಿ ಅಸೀಮಾನಂದ-ಪ್ರಜ್ಞಾಸಿಂಗ್ ಠಾಕೂರ್ ಮತ್ತು ಗುಂಪು ಈಗ ಕಂಬಿ ಎಣಿಸುತ್ತಿದೆ. ಈ ಎಲ್ಲ ಪ್ರಕರಣಗಳಲ್ಲಿ ಮುಸ್ಲಿಂ ಯುವಕರನ್ನು ಪೊಲೀಸರು ಬಿಡುಗಡೆ ಮಾಡಲೇ ಬೇಕಾಗಿತ್ತು. ಯಾಕೆಂದರೆ, ಅವರ ವಿರುದ್ಧ ಯಾವುದೇ ರೀತಿಯ ಪುರಾವೆ ಪೊಲೀಸರ ಬಳಿಯಿರಲಿಲ್ಲ. ಈ ನಡುವೆ, ಅವರ ಪೈಕಿ ಹಲವರು ತಮ್ಮ ಶಿಕ್ಷಣವನ್ನು ಅರ್ಧದಲ್ಲೇ ಕೈಬಿಟ್ಟರು ಹಾಗೂ ಅವರ ಬದುಕು ನಾಶವಾಗಿ ಹೋಗಿದೆ.

ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆ ಇತ್ತೀಚೆಗೆ (ಜೂನ್ 2012) ವರದಿಯೊಂದನ್ನು ಬಿಡುಗಡೆ ಮಾಡಿತು. ಆ ವರದಿಯ ಪ್ರಕಾರ, ಮಹಾರಾಷ್ಟ್ರದಲ್ಲಿ ಇರುವ ಜೈಲುಗಳ ಕೈದಿಗಳ ಪೈಕಿ 36 ಶೇ. ಮುಸ್ಲಿಮರು. ಅದೇ ವೇಳೆ, ರಾಜ್ಯದ ಮುಸ್ಲಿಮರ ಜನಸಂಖ್ಯೆಯ ಪ್ರಮಾಣ ಸುಮಾರು ಶೇ.10.6 ಮಹಾರಾಷ್ಟ್ರ ರಾಜ್ಯ ಅಲ್ಪಸಂಖ್ಯಾತ ಆಯೋಗ ಈ ವರದಿಯ ಪ್ರಾಯೋಜಕತ್ವ ವಹಿಸಿತ್ತು.ಈ ಸಂಸ್ಥೆಯ ವರದಿಯ ಅಂಶಗಳು ಸಾಚಾರ್ ಸಮಿತಿಯ ವರದಿಯ ಅಂಶಗಳು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರ ಸಾಮಾನ್ಯ ಅಭಿಪ್ರಾಯಗಳಿಗೆ ಪೂರಕವಾಗಿದೆ.

‘‘ಮುಸ್ಲಿಮರು ಕ್ರಿಮಿನಲ್‌ಗಳು ಮತ್ತು ಭಯೋತ್ಪಾದಕರು’’ ಎಂಬುದಾಗಿ ವ್ಯಾಪಕವಾಗಿ ನೆಲೆಸಿರುವ ಪೂರ್ವಾಗ್ರಹದಿಂದ ಪ್ರೇರಣೆ ಗೊಂಡು ಮುಸ್ಲಿಂ ಯುವಕರ ಹೆಚ್ಚಿನ ಬಂಧನಗಳು ನಡೆಯುತ್ತವೆ. ಈ ಪೂರ್ವಾಗ್ರಹಗಳು ಸಮಾಜದಲ್ಲಿ ಮಾತ್ರವಲ್ಲ, ಪೊಲೀಸ್ ಮತ್ತು ಗುಪ್ತಚರ ವ್ಯವಸ್ಥೆ ಮುಂತಾದ ಅಧಿಕಾರಶಾಹಿಯಲ್ಲೂ ವ್ಯಾಪಕವಾಗಿ ನೆಲೆಸಿದೆ. ಪೊಲೀಸ್ ಪಡೆಯಲ್ಲಿರುವ ಹೆಚ್ಚಿನವರು ಕೋಮುವಾದಿ ಪ್ರಭಾವಕ್ಕೆ ಒಳಗಾಗಿದ್ದಾರೆ. ಅವರಿಗೆ ಅನಿಯಮಿತ ಅಧಿಕಾರವಿದ್ದು ಸಂದರ್ಭ ಸಿಕ್ಕಾಗಲೆಲ್ಲ ಮುಸ್ಲಿಂ ಯುವಕರ ಮೇಲೆ ಮುಗಿಬೀಳುತ್ತಾರೆ.

ಸಮಾಜದಲ್ಲಿ ಕೋಮುವಾದೀಕರಣ ಹೆಚ್ಚಾಗಿದ್ದು, ಮುಖ್ಯವಾಗಿ ಅಲ್-ಖಾಯಿದಾ ಮಾದರಿಯ ಭಯೋತ್ಪಾದನೆ ಹುಟ್ಟಿಕೊಂಡ ಬಳಿಕ ಮುಸ್ಲಿಮರ ವಿರುದ್ಧದ ಪೂರ್ವಾಗ್ರಹ ಗಂಭೀರ ಮಟ್ಟಕ್ಕೆ ತಲುಪಿದೆ. ಈ ಮಾದರಿಯ ಭಯೋತ್ಪಾದನೆಯನ್ನು ಚಾಲ್ತಿಗೆ ತಂದದ್ದು ಅಮೆರಿಕ, ತೈಲ ಸಂಪತ್ತಿನ ಮೇಲೆ ನಿಯಂತ್ರಣ ಹೊಂದುವ ತನ್ನ ಗುರಿಯನ್ನು ಸಾಧಿಸುವುದಕ್ಕಾಗಿ. ಅಧಿಕಾರಿಗಳು ಹೆಚ್ಚೆಚ್ಚು ಅಲ್ಪಸಂಖ್ಯಾತ ವಿರೋಧಿ ಧೋರಣೆಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ ಹಾಗೂ ಅದರ ಪರಿಣಾಮವಾಗಿ ಅವರ ವೃತ್ತಿಪರತೆ ಕಳೆಗುಂದಿದೆ. ಅಧಿಕಾರಿಗಳು ಕಾನೂನಿನ ಆಡಳಿತಕ್ಕಿಂತಲೂ ಪೂರ್ವಾಗ್ರಹದಿಂದ ಹೆಚ್ಚೆಚ್ಚು ಪ್ರೇರಣೆಗೊಳ್ಳುತ್ತಿದ್ದಾರೆ.

ರಾಜ್ಯಗಳ ಅಧಿಕಾರಿಗಳು ಮುಸ್ಲಿಂ ಯುವಕರನ್ನು ಗುರಿ ಮಾಡು ತ್ತಿರುವುದಕ್ಕೆ ಹಲವು ಕಾರಣಗಳಿವೆ. ಅದೇ ವೇಳೆ, ಕೆಲವು ಮುಸ್ಲಿಂ ಯುವಕರು ಬಡತನದಿಂದಾಗಿ ಸಮಾಜ ವಿರೋಧಿ ಶಕ್ತಿಗಳ ಬಲೆಗೆ ಬಿದ್ದಿರುವದನ್ನೂ ನಿರಾಕರಿಸುವಂತಿಲ್ಲ. ಆದಾಗ್ಯೂ, ಭಯೋತ್ಪದನೆ ಮತ್ತು ಕೋಮು ಹಿಂಸೆಯ ಕುರಿತ ತಪ್ಪು ಕಲ್ಪನೆ ಪೊಲೀಸರು ಮುಸ್ಲಿಂ ಯುವಕರನ್ನು ವಿವೇಚನಾ ರಹಿತವಾಗಿ ಬಂಧಿಸುತ್ತಿರುವುದಕ್ಕೆ ಪ್ರಮುಖ ಕಾರಣವಾಗಿದೆ.ಕೋಮು ಹಿಂಸೆಯಲ್ಲಿ ಹಿಂಸೆಯನ್ನು ಪ್ರಚೋದಿಸುವ ಮುಖ್ಯ ಅಪರಾಧಿ ಬಹುಸಂಖ್ಯಾತ ಕೋಮು ಶಕ್ತಿಗಳು. ಹೆಚ್ಚಿನ ಕೋಮು ಹಿಂಸೆ ಪ್ರಕರಣಗಳಿಗೆ ಅದಾಗಲೇ ಅಸ್ತಿತ್ವದಲ್ಲಿರುವ ಅಥವಾ ಈ ಉದ್ದೇಶಕ್ಕಾಗಿ ಆಗಷ್ಟೆ ಸ್ಥಾಪನೆಯಾದ ಆರೆಸ್ಸೆಸ್ ನಂಥ ಸಂಘಟನೆಗಳು ಕಾರಣವಾಗಿವೆ ಎಂದು ತೀಸ್ತಾ ಸೆಟಲ್ವಾಡ್‌ರ (ಕಮ್ಯುನಲಿಸಂ ಕೋಂಬ್ಯಾಟ್, ಮಾರ್ಚ್, 1998) ವಿವಿಧ ವಿಚಾರಣಾ ಸಮಿತಿಗಳ ವರದಿಗಳ ಅಧ್ಯಯನ ಹೇಳಿದೆ.

ಮುಂಬೈ ಕೋಮು ಹಿಂಸೆಯಲ್ಲಿ ಶಿವಸೇನೆ ಪ್ರಮುಖ ಪಾತ್ರ ವಹಿಸಿತು ಎಂದು ಶ್ರೀಕೃಷ್ಣ ಆಯೋಗದ ವರದಿ ಹೇಳಿದೆ. ಹಾಗಾಗಿ, 2001ರ ಜನ ಗಣತಿಯ ಪ್ರಕಾರ, ದೇಶದ ಜನಸಂಖ್ಯೆಯ 13.4 ಶೇ.ದಷ್ಟಿರುವ ಮುಸ್ಲಿಮರು, ಹಿಂಸಾ ಸಂತ್ರಸ್ತರ ಪೈಕಿ 90 ಶೇ. ಆಗಿರುತ್ತಾರೆ. ಪೊಲೀಸರು ಹಾಗೂ ಹೆಚ್ಚಿನ ಸಂದರ್ಭಗಳಲ್ಲಿ ರಾಜಕೀಯ ನಾಯಕತ್ವ ತಾಳುವ ಮನೋಭಾವ ಅಲ್ಪಸಂಖ್ಯಾತ ಸಮುದಾ ಯದಲ್ಲಿ ಅಭದ್ರತೆಯನ್ನು ಹೆಚ್ಚಿಸುತ್ತದೆ.

ಅತ್ಯಂತ ದುರಂತದ ಸಂಗತಿಯೆಂದರೆ,ಗಲಭೆ ಆರಂಭಿಸುವವರು ಮುಸ್ಲಿಮರು ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ಕೋಮು ಹಿಂಸಾಚಾರದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿರುವ ಡಾ.ವಿ.ಎನ್.ರೈ ಹೇಳುವಂತೆ,ಹೆಚ್ಚಿನ ಸಂದರ್ಭಗಳಲ್ಲಿ ಮೊದಲ ಕಲ್ಲನ್ನು ಅಲ್ಪಸಂಖ್ಯಾತ ಸಮುದಾಯದವರು ಬಿಸಾಡುವಂತೆ ಬಲವಂತಪಡಿಸುವ ಪರಿಸ್ಥಿತಿಯನ್ನು ನಿರ್ಮಿಸಲಾಗುತ್ತದೆ.ಇದೂ ಸಾಲದೆಂಬಂತೆ, ಹಿಂಸಾಚಾರದ ಬಳಿಕ ಅದಕ್ಕಾಗಿ ಪೊಲೀಸರು ಬಂಧಿಸುವ ಹೆಚ್ಚಿನವರು ಮುಸ್ಲಿಮರು.ಇತ್ತೀಚೆಗೆ ನಡೆದ ಭಯೋತ್ಪಾದಕ ಕೃತ್ಯಗಳು ಹಾಗೂ ಆ ಕುರಿತ ಪೊಲೀಸ್ ಮನೋಭಾವ ಈ ಪ್ರವೃತ್ತಿಯನ್ನು ಎತ್ತಿ ತೋರಿಸಿದೆ. ಮಾಲೆಗಾಂವ್,ಅಜ್ಮೀರ್,ಜೈಪುರ ಮತ್ತು ಸಂರೆತಾ ಎಕ್ಸ್‌ಪ್ರೆಸ್‌ಗಳಲ್ಲಿ ನಡೆದ ಸ್ಫೋಟಗಳಲ್ಲಿ ಹೆಚ್ಚಿನ ಯುವಕರನ್ನು ಅವರು ಸ್ಫೋಟ ನಡೆಸಿದ್ದಾರೆ ಎಂಬುದಾಗಿ ಬಂಧಿಸಲಾಯಿತು.

ಈ ಯುವಕರು ಪಾಕಿಸ್ತಾನದಲ್ಲಿರುವ ಭಯೋತ್ಪಾದನಾ ಗುಂಪುಗಳೊಂದಿಗೆ ಶಾಮೀಲಾಗಿ ದ್ದಾರೆ ಎಂಬ ಪುರಾವೆಯನ್ನು ಪೊಲೀಸ್ ವ್ಯವಸ್ಥೆ ಹಾಜರುಪಡಿಸಿತು.ಇಂಥ ಹೆಚ್ಚಿನ ಸ್ಫೋಟಗಳಿಗೆ ಸಿಮಿಯನ್ನು ಹೆಚ್ಚಿನ ಸಂದರ್ಭಗಳಲ್ಲಿ ಗುರಿ ಪಡಿಸಲಾಗುತ್ತಿದೆ.ಆ ಸಮಯದಲ್ಲೂ, ಪೊಲೀಸ್ ತನಿಖೆಗಳು ಮತ್ತು ಅವರ ಕೃತ್ಯಗಳು ಸಾಮಾನ್ಯ ಪ್ರಜ್ಞೆಯನ್ನು ಮೀರುತ್ತಿವೆ ಎಂಬುದನ್ನು ಸೂಚಿಸುವ ಹಲವಾರು ವಿಷಯಗಳಿದ್ದವು.ಪ್ರತಿ ಸ್ಫೋಟದ ಬಳಿಕ ಮುಸ್ಲಿಮ ರನ್ನು ಬಂಧಿಸುವ ಸ್ವೀಕೃತ ಸೂತ್ರವನ್ನು ಪೊಲೀಸರು ಅನುಸರಿಸುತ್ತಿದ್ದರು.

ಮುಸ್ಲಿಂ ಯುವಕರನ್ನು ಸಿಲುಕಿಸಿ ಅವರ ವಿರುದ್ಧ ಸ್ಫೋಟದ ಆರೋಪವನ್ನು ಹೊರಿಸುವುದು ಹಾಗೂ ಅವರಿಗೆ ಲಷ್ಕರೆ ತಯ್ಯಬ, ಇಂಡಿಯನ್ ಮುಜಾಹಿದೀನ್, ಸಿಮಿ ಅಥವಾ ಇಂಥದೇ ಇತರ ಸಂಘಟನೆಗಳೊಂದಿಗೆ ಸಂಪರ್ಕ ಕಲ್ಪಿಸುವುದನ್ನು ಪೊಲೀಸರು ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ಭಯೋತ್ಪಾದನೆ ಕೃತ್ಯಗಳು ಹರಿದುಬರುತ್ತಿರುವ ಇನ್ನೊಂದು ದಿಕ್ಕಿನತ್ತ ಸಾಮಾಜಿಕ ಕಾರ್ಯಕರ್ತರು ಅಧಿಕಾರಿಗಳಿಗೆ ಕೈತೋರಿಸುತ್ತಲೇ ಇದ್ದಾರೆ. ಆದರೆ, ಪೊಲೀಸರು ಮಾತ್ರ ಸಂಪೂರ್ಣವಾಗಿ ಪೂರ್ವಾಗ್ರಹ ಪೀಡಿತರಾಗಿದ್ದಾರೆ ಹಾಗೂ ತಮ್ಮ ಸಿದ್ದ ಮಾದರಿಯನ್ನು ಪುನರಾವರ್ತಿಸುತ್ತಿದ್ದಾರೆ.

ಒಮ್ಮೆ ಹೇಮಂತ ಕರ್ಕರೆ ನಡೆಸಿದ ತನಿಖೆಯಲ್ಲಿ ಮಾಲೆಗಾಂವ್ ಸ್ಫೋಟ ಮತ್ತು ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್‌ಳ ಮೋಟರ್ ಸೈಕಲ್ ನಡುವಿನ ಕೊಂಡಿ ಪತ್ತೆಯಾಯಿತು ಹಾಗೂ ಹಲವು ಹಿಂದುತ್ವ ಗುಂಪುಗಳೊಂದಿಗಿನ ಅವಳ ನಂಟೂ ಪತ್ತೆಯಾಯಿತು.ಆದರೆ, ಬಳಿಕ ಆ ವಿಷಯ ಅಲ್ಲಿಗೇ ನಿಂತಿದೆ. ಸ್ವಾಮಿ ದಯಾನಂದ ಪಾಂಡೆ, ಲೆ.ಕ.ಪ್ರಸಾದ್ ಶ್ರೀಕಾಂತ್ ಪುರೋಹಿತ್, ನಿವೃತ್ತ ಮೇಜರ್ ಉಪಾಧ್ಯಾಯ, ಸ್ವಾಮಿ ಅಸೀಮಾನಂದ ಹಾಗೂ ಹಿಂದುತ್ವ ಸಿದ್ಧಾಂತದ ಇತರ ಹಲವರ ಜೊತೆಗಿನ ಸಾಧ್ವಿಯ ಸಂಪರ್ಕ,ಅಲ್ಲಿಯವರೆಗೆ ಪೊಲೀಸರು ಸಂಪೂರ್ಣ ತಪ್ಪು ಹಾದಿಯಲ್ಲಿ ತನಿಖೆ ಕೈಗೊಂಡಿದ್ದರು ಎಂಬುದನ್ನು ಸಾಬೀತುಪಡಿಸಿದೆ.

ಈ ಹಿನ್ನೆಲೆಯಲ್ಲಿ ಮಾನವಹಕ್ಕುಗಳ ಸಂಘಟನೆ ಅನ್‌ಹಡ್ (ಆ್ಯಕ್ಟ್ ನೌ ಫಾರ್ ಹಾರ್ಮನಿ ಆ್ಯಂಡ್ ಡಿಮಾಕ್ರಸಿ) ಹೈದರಾಬಾದ್‌ನಲ್ಲಿ ‘ಸ್ಕೇಪ್‌ಗೋಟ್ಸ್ ಎಂಡ್ ಹಾಲಿ ಕೌಸ್’ ಎಂಬ ನ್ಯಾಯಮಂಡಳಿಯನ್ನು ಏರ್ಪಡಿಸಿತು. ಈ ನ್ಯಾಯಮಂಡಳಿಯ ವರದಿ ತನಿಖಾಧಿಕಾರಿಗಳು ಮತ್ತು ಸರಕಾರದ ಕೃತ್ಯಗಳನ್ನು ತರಾಟೆಗೆ ತೆಗೆದುಕೊಂಡಿತು. ತಾರ್ಕಿಕವಾಗಿ,ಕೇಸರಿ ಭಯೋತ್ಪಾದಕ ಗುಂಪುಗಳ ಬಂಧನದ ಬಳಿಕ ಭಯೋತ್ಪಾದನಾ ಕೃತ್ಯಗಳು ನಿಲುಗಡೆಗೆ ಬಂದಿರುವುದಾಗಿ ಭಾಸವಾಗುತ್ತಿದೆ.

ಇದರ ಹೊರತಾಗಿಯೂ ಪೊಲೀಸರ ಮನೋಭಾವ ಹಿಂದಿನಂತೆಯೇ ಪೂರ್ವಾಗ್ರಹದಿಂದ ಕೂಡಿದೆ. ಅವರು ದೈನಂದಿನ ವ್ಯವಹಾರಗಳಲ್ಲಿ ತಮ್ಮ ಪೂರ್ವಾಗ್ರಹ ಪ್ರವೃತ್ತಿಯನ್ನು ತೋರಿಸುತ್ತಿದ್ದಾರೆ. ಸರಕಾರ, ಮುಖ್ಯವಾಗಿ ಪೊಲೀಸರು ಹಾಗೂ ಗುಪ್ತಚರ ಇಲಾಖೆಯ ಮನೋಭಾವ ಹಲವು ಮುಸ್ಲಿಮ್ ಯುವಕರ ಬದುಕು ಮತ್ತು ವೃತ್ತಿಯನ್ನು ನಾಶ ಮಾಡಿದೆ.ಇದನ್ನು ತಡೆಯುವ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಮುಖ್ಯವಾಗಿ ಮುಸ್ಲಿಮರ ವಿರುದ್ಧ ಬೇರು ಬಿಟ್ಟಿರುವ ತಾರತಮ್ಯ ದೋರಣೆಯನ್ನು ಹೋಗಲಾಡಿಸುವತ್ತ ಕೆಲಸ ಮಾಡಬೇಕಾದ ಅಗತ್ಯವಿದೆ.ಭಯೋತ್ಪಾದನಾ ಕೃತ್ಯಗಳಿಗೆ ಸಂಬಂಧಿಸಿ ಮುಸ್ಲಿಮರ ವಿರುದ್ಧವಿರುವ ಕಲ್ಪನೆಗಳನ್ನು, ಈ ಕಲ್ಪನೆಗಳ ಹಿಂದಿರುವ ಸತ್ಯಗಳನ್ನು ಪ್ರಚಾರ ಪಡಿಸುವ ಮೂಲಕ ಹೋಗಲಾಡಿಸಲು ಪ್ರಯತ್ನಿಸಬೇಕು. ಇದು ಸರಕಾರ ಮತ್ತು ಸಾಮಾಜಿಕ ಸಂಘಟನೆಗಳ ಕರ್ತವ್ಯವಾಗಿದೆ.



Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮುಂಗಾರಿನ ಆಗಮನ:ಸರಕಾರ ಜೋಪಾನ

ರಾಜ್ಯಾದ್ಯಂತ ಮಳೆ ಚುರುಕುಗೊಳ್ಳುತ್ತಿದೆ. ಈ ಸಾಲಿನಲ್ಲಿ ಮಳೆ ನಿರೀಕ್ಷೆಯಷ್ಟು ಬರದೆ ಇದ್ದರೂ, ಮುಂದಿನ ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ರಾಜ್ಯಾದ್ಯ ...


ನಿಮ್ಮ ಅನಿಸಿಕೆ

postClick here to post your views
EPAPER
access

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್

ಅಕ್ಷರ ಸೇವೆಯಿಂದ ಜನಸೇವೆಗೆ;ತೆಂಕಮಿಜಾರಿನ ಮುತ್ತು

ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...


- ಪ್ರೇಮಶ್ರೀ ಕಲ್ಲಬೆಟ್ಟು