ಅಂಕಣ

mail-img print-img

ಗಾಂಧೀಜಿಯವರ ದಲಿತೋದ್ಧಾರದ ‘‘ಸಾಕ್ಷಿ’’ಗಳು!

ಮಂಗಳವಾರ - ಜೂನ್ -26-2012

ವೈಯಕ್ತಿಕ ಅನುಭವದೊಂದಿಗೆ ಈ ಲೇಖನವನ್ನು ಪ್ರಾರಂಭಿಸುತ್ತಿದ್ದೇನೆ. ಅದು ಇಪ್ಪತ್ತು ವರ್ಷದ ಹಿಂದಿನ ಘಟನೆ ಅಂದರೆ 1992ನೆ ಇಸವಿ.ಬಾಬ್ರಿಮಸೀದಿ ಧ್ವಂಸದ ಸಮಯ.ಅದೇ ಕಾಲಕ್ಕೆ ನಾನು ಆರೆಸ್ಸೆಸ್ ಕ್ಯಾಂಪ್ ಒಂದನ್ನು ಅಟೆಂಡ್ ಮಾಡಿದ್ದೆ.ಕ್ಯಾಂಪ್‌ನಲ್ಲಿ ನಡೆದ ಒಂದು ಘಟನೆ ಅಕ್ಷರಶಃ ಈಗಲೂ ಕಣ್ಣಿಗೆ ಕಟ್ಟುವಂತಿದೆ. ಮೀಸಲಾತಿಯ ಬಗೆಗಿನ ಚರ್ಚೆಯ ಆ ಒಂದು ಸಂದರ್ಭದಲ್ಲಿ ದಲಿತ ಯುವಕನೋರ್ವನೊಡನೆ ಇಬ್ಬರು ಆರೆಸ್ಸೆಸ್ ಕಾರ್ಯಕರ್ತರು ವಾಗ್ವಾದಕ್ಕಿಳಿದಿದ್ದರು. ಆ ದಡ್ಡ ದಲಿತ ಯುವಕ ತಾನು ಬಂದಿರುವುದು ಆರೆಸ್ಸೆಸ್ ಕ್ಯಾಂಪಿಗೆ ಎಂಬ ಸಾಮಾನ್ಯ ಜ್ಞಾನದ ಅರಿವೂ ಇಲ್ಲದೇ ಸಂಘ ಪರಿವಾರದ ಆ ಯುವಕರೊಂದಿಗೆ ಮೀಸಲಾತಿಯ ಪರವಾಗಿ ಚರ್ಚೆಗೆ ಇಳಿದಿದ್ದ. ಅವನ ಜೊತೆ ಚರ್ಚೆಗೆ ಅಷ್ಟೆ ಜಿದ್ದಿನಿಂದ ಇಳಿದಿದ್ದ ಆ ಆರೆಸ್ಸೆಸ್ ಕಾರ್ಯಕರ್ತರು ಹೇಳುತ್ತಿದ್ದುದು ಒಂದೇ ಮಾತು ‘‘ಮೀಸಲಾತಿ ನೀಡುವುದರಿಂದ ದಲಿತರು ಮತ್ತು ಹಿಂದೂಗಳ ನಡುವೆ ಶಾಶ್ವತವಾದ ಪ್ರತ್ಯೇಕತೆ ಉಂಟಾಗುತ್ತದೆ, ಹಿಂದೂ ಧರ್ಮ ಹೋಳಾಗುತ್ತದೆ’’ ಎಂದು. ಅಂದಹಾಗೆ ಆ ದಲಿತ ಯುವಕನಿಗೆ ಆರೆಸ್ಸೆಸ್ ಕಾರ್ಯಕರ್ತರ ವಿವರಣೆ ಕಿರಿಕಿರಿ ತರಿಸುತ್ತಿತ್ತು.ಎಷ್ಟೇ ಹೇಳಿದರು ಇವರು ಬಗ್ಗುವುದಿಲ್ಲವೆಂದು ಆತ ಕೋಪಗೊಂಡಿದ್ದ.

ಅದೃಷ್ಟವಶಾತ್ ಆ ಚರ್ಚೆಯ ಸಂದರ್ಭದಲ್ಲಿ ನಾನು ಅಲ್ಲಿಗೆ ಎಂಟ್ರಿ ಕೊಟ್ಟಿದ್ದರಿಂದ ಚರ್ಚೆಯನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿ ಆ ನನ್ನ ಸಹಪಾಠಿ ದಲಿತನಿಗೆ ಆರೆಸ್ಸೆಸ್‌ನ ಸಿದ್ಧಾಂತ, ಹೋರಾಟ, ಹಿನ್ನೆಲೆ, ಎಲ್ಲವನ್ನು ಕ್ಷಣ ಮಾತ್ರದಲ್ಲಿ ವಿವರಿಸಿ ಬಾಯಿ ಮುಚ್ಚಿ ಕೂರುವಂತೆ ತಿಳಿಸಿದೆ.ಆಶ್ಚರ್ಯಕರವೆಂದರೆ ಇಂತಹದ್ದೇ ಚರ್ಚೆ ಅಂಬೇಡ್ಕರ್ ಮತ್ತು ಗಾಂಧೀಜಿಯವರ ನಡುವೆ 80ವರ್ಷಗಳ ಹಿಂದೆ ನಡೆದಿದೆ! ಆಗ ಗಾಂಧೀಜಿಯವರು ಕೂಡ ಈಗ ಆರೆಸ್ಸೆಸ್ ಕಾರ್ಯಕರ್ತರು ಏನು ಹೇಳುತ್ತಿದ್ದಾರೋ ಅದೇ ಡೈಲಾಗನ್ನು ಅಂದರೆ ಅಸ್ಪಶ್ಯರಿಗೆ ಪ್ರತ್ಯೇಕ ಮತದಾನ (ಮೀಸಲಾತಿ) ನೀಡುವುದರಿಂದ ಹಿಂದೂಗಳು ಮತ್ತು ಅಸ್ಪೃಶ್ಯರ ನಡುವೆ ಶಾಶ್ವತವಾದ ಪ್ರತ್ಯೇಕತೆ ಏರ್ಪಡುತ್ತದೆ.ಹಿಂದೂ ಧರ್ಮ ಹೋಳಾಗುತ್ತದೆ ಎಂದಿದ್ದಾರೆ.

ಹಾಗಿದ್ದರೆ ಗಾಂಧೀಜಿ ಮತ್ತು ಆರೆಸ್ಸೆಸ್ ಕಾರ್ಯಕರ್ತರು ಇಬ್ಬರೂ ಒಂದೆನಾ? ಈ ನಿಟ್ಟಿನಲ್ಲಿ ಗಾಂಧೀಜಿಯವರ ಅಸ್ಪೃಶ್ಯೋದ್ಧಾರದ ಮೊದಲ ಸಾಕ್ಷಿ ಇದು! ಇನ್ನು ಎರಡನೆಯ ಸಾಕ್ಷಿಯೊಂದನ್ನು ಇಲ್ಲಿ ಪ್ರಸ್ತಾಪಿಸಲೇಬೇಕು.ಅದು 1937ರಲ್ಲಿ ಕೇಂದ್ರೀಯ ಪ್ರಾಂತದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿ ಪ್ರಧಾನ ಮಂತ್ರಿಯಾಗಿದ್ದ  ಡಾ||ಖೇರ್ ಎಂಬವರಿಗೆ ಸಂಬಂಧಪಟ್ಟಿದ್ದು.ಹಾಗಿದ್ದರೆ ಡಾ|| ಖೇರ್‌ರವರು ಮಾಡಿದ್ದ ತಪ್ಪಾದರೂ ಏನು? ಉತ್ತರ:ದಲಿತನೋರ್ವನನ್ನು ಅವರು ಮಂತ್ರಿಯಾಗಿ ಮಾಡಿದ್ದು! ಹೌದು,ದಲಿತನೋರ್ವನನ್ನು ಅವರು ಮಂತ್ರಿಯಾಗಿ ಮಾಡಿದುದ್ದಕ್ಕೆ ಗಾಂಧೀಜಿ ಅಂದು ವ್ಯಗ್ರಗೊಂಡಿದ್ದರು.ಅದು ಯಾವ ಪರಿ ಎಂದರೆ ಅಸ್ಪಶ್ಯರಿಗೆ ಈ ರೀತಿ ಅಧಿಕಾರದ ಆಸೆ ಆಮಿಷಗಳನ್ನು ತೋರಿಸಿ ಕಾಂಗ್ರೆಸ್‌ಗೆ ನೀನು (ಡಾ|| ಖೇರ್) ದ್ರೋಹ ಬಗೆದಿದ್ದೀಯ ಎಂದು ಆರೋಪಿಸಿ ಪತ್ರ ಬರೆಯುವಷ್ಟು! ಅಂದ ಹಾಗೆ ಗಾಂಧೀಜಿಯವರು ಬರೆದ ಆ ಪತ್ರ ಅದೆಷ್ಟು ಪರಿಣಾಮಕಾರಿಯಾಗಿತ್ತೆಂದರೆ ಡಾ|| ಖೇರ್‌ರವರು ತಕ್ಷಣವೇ ರಾಜೀನಾಮೆ ನೀಡಬೇಕಾಯಿತು.

ಹಾಗೆಯೇ ಮಂತ್ರಿಯಾಗಿ ನೇಮಿಸಲ್ಪಟ್ಟಿದ್ದ ಆ ದಲಿತ ವ್ಯಕ್ತಿಯಿಂದಲೂ ಕೂಡ ತಕ್ಷಣ ರಾಜೀನಾಮೆ ಪಡೆಯಲಾಯಿತು! ಅಂದರೆ ಗಾಂಧೀಜಿಯವರ ದೆಸೆಯಿಂದಾಗಿ ದಲಿತ ಮಂತ್ರಿಯೊಬ್ಬ ಅಧಿಕಾರ ಕಳೆದುಕೊಂಡ. ಅದೂ ಆತ ಅಧಿಕಾರದಲ್ಲಿದ್ದದ್ದು ಎಷ್ಟು ದಿನ? ಕೇವಲ ಒಂದೇ ದಿನ! ಈ ನಿಟ್ಟಿನಲ್ಲಿ ಹೇಳುವುದಾದರೆ ಗಾಂಧೀಜಿಯವರ ಅಸ್ಪಶ್ಯೋದ್ಧಾರದ ಎರಡನೆ ಸಾಕ್ಷಿ ಇದು! ಇನ್ನು ಮೂರನೆ ಸಾಕ್ಷಿ ದಲಿತ ಹೆಣ್ಣು ಮಗಳೊಬ್ಬಳಿಗೆ ಸಂಬಂಧಪಟ್ಟಿದ್ದು.ಬಾಚುಮ ಎಂಬ ಆ ಹೆಣ್ಣುಮಗಳನ್ನು ಮೂರು ಜನ ಮೇಲ್ಜಾತಿ ಅಧಿಕಾರಿಗಳು, ಓರ್ವ ಸಬ್‌ಇನ್ಸ್ ಪೆಕ್ಟರ್, ಮತ್ತೋರ್ವ ಶಿಕ್ಷಣ ಇಲಾಖೆ ಇನ್ಸ್ ಪೆಕ್ಟರ್, ಮಗದೊಬ್ಬ ವಕೀಲ ಸೇರಿಕೊಂಡು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು.

ಈ ಘಟನೆ ಬೆಳಕಿಗೆ ಬಂದು ಸಹಜವಾಗಿ ಆ ಮೂವರ ಮೇಲೆ ಕೇಸು ದಾಖಲಾಗಿ ನ್ಯಾಯಾಲಯದ ಮೂಲಕ ಆ ಮೂವರು ಶಿಕ್ಷೆಗೀಡಾದರು.ದುರಂತವೆಂದರೆ ಕಾಂಗ್ರೆಸ್ ನೇತೃತ್ವದ ಸರಕಾರದ ಮಂತ್ರಿಯೊಬ್ಬ ಈ ಮೂವರಿಗೆ ಗೌರ್ನರ್ ಜನರಲ್‌ರಿಂದ ಕ್ಷಮಾ ದಾನ ಕೊಡಿಸಲು ಯತ್ನಿಸಿದ್ದ! ಮತ್ತು ಈ ಕಾರಣಕ್ಕಾಗಿ ಮಂತ್ರಿಯ ಈ ನಡೆ ವ್ಯಾಪಕ ಟೀಕೆಗೆ ಕೂಡ ಒಳಗಾಯಿತು. ತತ್ಪರಿಣಾಮವಾಗಿ ಆತ ರಾಜೀನಾಮೆ ಕೂಡ ನೀಡಬೇಕಾಗಿ ಬಂತು.ಆಶ್ಚರ್ಯಕರವೆಂದರೆ  ಈ ಸಂದರ್ಭದಲ್ಲಿಯೂ ಗಾಂಧೀಜಿಯವರು ಸದರಿ ಮಂತ್ರಿಯ ಬಗ್ಗೆ ಮತ್ತು ಆತನ ದಲಿತ ವಿರೋಧಿ ಕೃತ್ಯದ ಬಗ್ಗೆ ತುಟಿಪಿಟಿಕ್ಕೆನ್ನಲಿಲ್ಲ.ಬದಲಿಗೆ ಪದಚ್ಯುತ ಆ ಮಂತ್ರಿಯನ್ನು ಅವರು ಮತ್ತೆ ಅದೇ  ಹುದ್ದೆಗೆ  ನೇಮಿಸಲು ಯತ್ನಿಸಿದರು! ಅಂದಹಾಗೆ ದಲಿತ ಮಹಿಳೆಯ ಮೇಲೆ ಆ ಮಂತ್ರಿಯ ಶಿಷ್ಯರು ನಡೆಸಿದ ಅತ್ಯಾಚಾರ ಗಾಂಧೀಜಿಯವರ ಕಣ್ಣಿಗೆ ಕಾಣಲಿಲ್ಲವೆ? ಗಾಂಧೀಜಿಯವರ ಅಸ್ಪೃಶ್ಯೋದ್ಧಾರದ ಮೂರನೆ ಸಾಕ್ಷಿ ಇದು!


ಇನ್ನು ನಾಲ್ಕನೆ ಸಾಕ್ಷಿ ಅಸ್ಪಶ್ಯರ ದೇವಾಲಯ ಪ್ರವೇಶಕ್ಕೆ ಸಂಬಂಧಪಟ್ಟಿದ್ದು. ಈ ಸಾಕ್ಷಿ ಅಂಬೇಡ್ಕರರ ‘ಕಾಂಗ್ರೆಸ್ ಮತ್ತು ಗಾಂಧಿ ಅಸ್ಪಶ್ಯರಿಗೆ ಮಾಡಿದ್ದೇನು?’ ಕೃತಿಯಲ್ಲಿ ಉಲ್ಲೇಖವಾಗಿದೆ.ದಲಿತರ ದೇವಳ ಪ್ರವೇಶ ಚಳವಳಿಗೆ ಸಂಬಂಧಿಸಿದ ಗಾಂಧೀಜಿಯವರ ಆ ಹೇಳಿಕೆ ಇಂತಿದೆ, ‘‘ಅಂತ್ಯಜರಿಗೆ ದೇವಾಲಯಗಳನ್ನು ಪ್ರವೇಶಿಸುವ ಹಕ್ಕನ್ನು ಕೊಡಲು ಹೇಗೆ ಸಾಧ್ಯ? ಹಿಂದೂ ಧರ್ಮದಲ್ಲಿ ಜಾತಿ, ವರ್ಣಾಶ್ರಮಗಳಿಗೆ ಎಲ್ಲಿಯವರೆಗೆ ಸ್ಥಾನವಿರುತ್ತದೋ ಅಲ್ಲಿಯವರೆಗೆ ಪ್ರತಿ ಹಿಂದೂವು ಎಲ್ಲಾ ದೇವಸ್ಥಾನಗಳನ್ನು ಪ್ರವೇಶಿಸಬಲ್ಲ ಎನ್ನುವುದು ಅಸಾಧ್ಯದ ಮಾತು!’’ ಹೇಗಿದೆ ನೋಡಿ ಗಾಂಧೀಜಿಯವರ ಹೇಳಿಕೆ.

ಹಾಗಿದ್ದರೆ ಗಾಂಧೀಜಿಯವರ ಪ್ರಕಾರ ದಲಿತರಿಗೆ ಹಿಂದೂ ದೇವಾಲಯಗಳ ಪ್ರವೇಶ ಅಸಾಧ್ಯದ ಮಾತು ಮತ್ತು ಗಾಂಧೀಜಿಯವರ ಈ ನಿಲುವಿನ ಪ್ರಕಾರ ದಲಿತರು ಹಿಂದೂ ದೇವಾಲಯಗಳಿಗೆ ಪ್ರವೇಶಿಸಲು ಯತ್ನಿಸಲೇಬಾರದು! ದೇವಳ ಪ್ರವೇಶಿಸುವ ತಮ್ಮ ಚಳವಳಿಯನ್ನು ದಲಿತರು ಕೈಬಿಡಲೇಬೇಕು!! ಈ ನಿಟ್ಟಿನಲ್ಲಿ ಗಾಂಧೀಜಿಯವರ ಅಸ್ಪೃಶ್ಯೋದ್ಧಾರದ ನಾಲ್ಕನೆ ಸಾಕ್ಷಿ ಇದು! ಕ್ಷಮಿಸಿ, ಇನ್ನು ಮುಂದಿನ ಸಾಕ್ಷಿಗಳನ್ನು ಹೇಳಲು ಮನಸ್ಸಾಗುತ್ತಿಲ್ಲ.

ಯಾಕೆಂದರೆ ಹಿಂದೂ ನ್ಯಾಯಾಲಯದಲ್ಲಿ ಇಂತಹ ಸಾಕ್ಷಿಗಳಿಗೆ ಬೆಲೆ ಏನೆಂದು ನಮಗೆ ಗೊತ್ತು.ಯಾಕೆಂದರೆ ಈ ಸಾಕ್ಷಿಗಳನ್ನು ಮೂಲತಃ ಹೇಳಿದ್ದು ಬಾಬಾಸಾಹೇಬ್ ಅಂಬೇಡ್ಕರ್‌ರವರು.ಅವರ ಬರಹಗಳು ಮತ್ತು ಭಾಷಣಗಳ ಪುಟ ಪುಟದಲ್ಲೂ ಇಂತಹ ಸಾಕ್ಷಿಗಳು ಹೇರಳವಾಗಿ ಸಿಗುತ್ತವೆ.‘‘ಪ್ರಶ್ನೆ ಏನೆಂದರೆ ಇಷ್ಟೆಲ್ಲಾ ಸಾಕ್ಷಿಗಳಿದ್ದೂ ಗಾಂಧೀಜಿಯವರನ್ನು ದಲಿತರ ಉದ್ಧಾರಕ ಎಂದು ಒಪ್ಪಿಕೊಳ್ಳಬೇಕೆ? ಅಥವಾ ಹಾಗೆ ಹೇಳುವವರ ಮಾತನ್ನು ಒಪ್ಪಬೇಕೆ? ಖಂಡಿತ ಸಾಧ್ಯವಿಲ್ಲ.

ಏಕೆಂದರೆ ಗಾಂಧೀಜಿಯವರ ಇಂತಹ ಸಾಕ್ಷ್ಯಗಳನ್ನು ದಲಿತೋದ್ಧಾರದ ಕೃತ್ಯಗಳು ಎಂದು ಒಪ್ಪಿಕೊಳ್ಳಲು ದಲಿತರೇನು ಕಿವಿ ಮೇಲೆ ಹೂ ಇಟ್ಟುಕೊಂಡಿಲ್ಲ.ಯಾಕೆಂದರೆ ಬಾಚುಮಳಿಗೆ ಅನ್ಯಾಯವಾದ ಸಂದರ್ಭದಲ್ಲೇ ಅತ್ಯಾಚಾರಕ್ಕೆ ಒಳಗಾದ ಆ ಅಸ್ಪೃಶ್ಯ ಹುಡುಗಿಯ (ಬಾಚುಮ) ಜಾಗದಲ್ಲಿ ಒಂದು ವೇಳೆ ಗಾಂಧೀಜಿಯ ಮಗಳೇ ಇದ್ದಿದ್ದರೆ ಗಾಂಧೀಜಿ ಆಗಲೂ ಹೀಗೆ ಸುಮ್ಮನಿದ್ದು ಬಿಡುತ್ತಿದ್ದರೆ?’’ ಎಂದು ಸ್ವತಃ ಬಾಬಾ ಸಾಹೇಬ್ ಅಂಬೇಡ್ಕರ್‌ರವರೇ ಪ್ರಶ್ನಿಸಿದ್ದಾರೆ.

ಈ ನಿಟ್ಟಿನಲ್ಲಿ ಅಂಬೇಡ್ಕರ್‌ರವರ ಅಂತಹ ಪ್ರಶ್ನೆಯ ಬೆಳಕು ದಲಿತರ ಮುಂದಿರುವಾಗ ಗಾಂಧೀಜಿಯವರನ್ನು ‘ದಲಿತೋದ್ಧಾರಕ’ ಎಂದು ದಲಿತರು ನಂಬಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲ.ಅಕಸ್ಮಾತ್ ಯಾರಾದರೂ ಗಾಂಧೀಜಿಯವರನ್ನು ದಲಿತೋದ್ಧಾರಕ ಎಂದು ನಂಬಿದ್ದೇ ಆದರೆ ಆರೆಸ್ಸೆಸ್ ಕಾರ್ಯಕರ್ತರು ಹೇಳುವ ಹಾಗೆ ಮತ್ತು ಸ್ವತಃ ಗಾಂಧೀಜಿಯವರೇ ಆಶಯ ವ್ಯಕ್ತಪಡಿಸಿರುವ ಹಾಗೆ ಹಿಂದೂ ಧರ್ಮ ಖಂಡಿತ ಹೋಳಾಗುವುದಿಲ್ಲ ಬದಲಿಗೆ ಮತ್ತಷ್ಟು ಗಟ್ಟಿಯಾಗುತ್ತದಷ್ಟೆ.


Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಭಾರತದ ಹೆಮ್ಮೆ ಅನಂತಮೂರ್ತಿ

ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾನ್ ಬೂಕರ್ ಪ್ರಶಸ್ತಿ ಕೂದಲೆಳೆಯಲ್ಲಿ ಕೈ ತಪ್ಪಿತು. ಅಮೆರಿಕದ ಹಿರಿಯ ಬರಹಗಾರ್ತಿ ಲಿಡಿಯಾ ಡೇವಿಸ್ ಈ ಪ್ರಶಸ್ತಿಯನ್ನ ...


ನಿಮ್ಮ ಅನಿಸಿಕೆ

postClick here to post your views
EPAPER
access

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್