ಅಂಕಣ - ಮುಂಬೈ ಮೇರಿ ಜಾನ್‌

mail-img print-img

ಕಥನ ಕಲೆಯಲ್ಲಿ ಪಳಗಿರುವ ಪ್ರಾ. ಸೀತಾರಾಮ ಶೆಟ್ಟಿ

ಮಂಗಳವಾರ - ಜೂನ್ -26-2012

ಕತೆ ಓದುವಾಗ ಅದು ‘ಕತೆ ಹೇಳುವಂತಿರಬೇಕು’,ಕುತೂಹಲ ಹುಟ್ಟಿಸಬೇಕು; ಕಥನ ಕಲೆಯ ಕುಶಲತೆ ಒಳಗೊಂಡಿರಬೇಕು; ಒಳ್ಳೇ ಕತೆ ಮತ್ತೆ ಮತ್ತೆ ಓದುಗನನ್ನು ಕಾಡುತ್ತಿರಬೇಕು.. ಹೀಗೆ ಕತೆ ಇರಬೇಕು ಎನ್ನುವುದರ ಕುರಿತು ಬರೆಯುವುದು ಬಹಳ ಸುಲಭ. ಆದರೆ ಕತೆ ಬರೆಯುವ ಧ್ಯಾನಸ್ಥ ಸ್ಥಿತಿಯ ಸವಾಲು ಕತೆಗಾರನಷ್ಟೇ ಬಲ್ಲ. ಮುಂಬೈಯಲ್ಲಿರುವ ಪ್ರಾ. ಸೀತಾರಾಮ ಶೆಟ್ಟಿಯವರ ಮೂರು ಕತೆಗಳನ್ನು ಓದಿದ ನಂತರ ನನಗನ್ನಿಸಿದ್ದು, ಇವರು ಕೇವಲ ಕತೆಗಳನ್ನಷ್ಟೇ ಬರೆದಿರುತ್ತಿದ್ದರೆ ಇಂದು ಹೆಸರಾಂತ ಕತೆಗಾರರ ಸಾಲಿನಲ್ಲಿ ಸೇರಿ ಬಿಡುತ್ತಿದ್ದುದರಲ್ಲಿ ಸಂದೇಹವೇ ಇಲ್ಲ. ಒಳ್ಳೇ ಕತೆಗಳೆನಿಸಿಕೊಳ್ಳುವ ಎಲ್ಲ ಲಕ್ಷಣಗಳು ಈ ಮೂರು ಕತೆಗಳಲ್ಲಿವೆ.ಅವುಗಳಲ್ಲಿ ‘ಇಲಿಗಳು’ ಎದ್ದು ನಿಲ್ಲುವ ಕತೆ.ಸರಳವಾಗಿ ಓದಿಸಿಕೊಂಡು ಹೋಗುವ ಕತೆಯಲ್ಲಿ ಕಥಾನಾಯಕ ಸಾಹಿತ್ಯದಲ್ಲಿ ಎಂ.ಎ. ಮಾಡಿ ಪ್ರೀತಿ, ಅಂತಃಕರಣ, ವಾತ್ಸಲ್ಯಭರಿತ ಬದುಕಿನಿಂದ ವಂಚಿತನಾಗಿದ್ದು ಆದರ್ಶದ ಬೆನ್ನು ಹತ್ತಿದವ. ಎಂತಹ ಸಂದರ್ಭದಲ್ಲೂ ತನ್ನ ನಿಲುವನ್ನು ಸಡಿಲಿಸದೆ ತಾನು ನಂಬಿದ ಹಾದಿಯಲ್ಲಿ ನಡೆದಾತ.

ಈತನದ್ದು ವಾಸ್ತವದಲ್ಲಿ ಅಕ್ಷರಶಃ ಪ್ರವಾಹದ ವಿರುದ್ಧ ಈಜುವಿಕೆ.ಈ ದಿಶೆಯಲ್ಲಿ ಸ್ವತಃ ಹೆತ್ತವರನ್ನೇ ದಿಕ್ಕರಿಸಿ ‘ಕ್ರೂರಿ’ಎನಿಸಿಕೊಂಡವ.ಅದಕ್ಕೆ ಕಾರಣ ಇಲ್ಲದಿಲ್ಲ. ತನ್ನ ಅಸ್ತಿತ್ವವನ್ನೇ ಧಿಕ್ಕರಿಸಿದ ಹೆತ್ತವರ ಮೇಲಿನ ಕಠೋರತೆ ಕೊನೆಗೊಳ್ಳು ವಂತಹದಲ್ಲ. ತಂದೆ ಸೀರಿಯಸ್ಸಾಗಿ ಆಸ್ಪತ್ರೆ ಸೇರಿದ ಸುದ್ದಿ ಕೇಳಿಯೂ ಆತ ಕರಗಲಾರ... ಆದರೆ ಕೊನೆಯಲ್ಲಿ ತಾನು ಮೆಚ್ಚಿ ಮದುವೆ ಆದ ಮಡದಿ ತೆಗೆದುಕೊಂಡ ನಿರ್ಣಯದಿಂದ ಈತ ಮೆದುವಾಗುತ್ತಾನೆ. ಕುಬ್ಜನಾದಂತೆ ಪರಿತಪಿಸುತ್ತಾನೆ... ತನ್ನೊಳಗಿನ ದ್ವಂದ್ವದಿಂದ ಮುಕ್ತನಾಗುವುದನ್ನು ‘ಇಲಿಗಳ’ ಮೂಲಕ ಸಾಂಕೇತಿಕವಾಗಿ ಹಿಡಿದಿಟ್ಟು ಕಥೆ ಕೊನೆಗೊಳ್ಳುತ್ತದೆ.

ಬಿಗು ನಿರೂಪಣೆ, ಧ್ವನಿಪೂರ್ಣ ಕತೆಯಾಗಿದೆ. ಇನ್ನೊಂದು ಕತೆ ‘ಪ್ರವಾಹ’ ಶ್ವೇತಪುರಕ್ಕೆ ಬರಗಾಲ. ಊರಿನವರು ನಂಬುವಂತೆ ಬರಗಾಲಕ್ಕೆ ಕಾರಣ ಮಠದ ಸ್ವಾಮಿಗಳು ಸನ್ಯಾಸ ತೊರೆದು ಸಂಸಾರಿಯಾದುದು. ಆಶ್ಚರ್ಯವೆಂದರೆ, ಭ್ರಷ್ಟವಾದ ಪೀಠವನ್ನು ಶುದ್ಧಿಗೊಳಿಸಿ ಹಿಂದಿನ ಸ್ವಾಮಿಗಳು ಪೀಠ ತ್ಯಜಿಸಿದ ಎರಡು ತಿಂಗಳ ನಂತರ ಇನ್ನೋರ್ವ ಸ್ವಾಮಿಯನ್ನು ನೇಮಿಸಿದಂದೇ ‘ಮಳೆ’ ಬಂದದ್ದು. ಮತ್ತೂ ಆಶ್ಚರ್ಯ ವೆಂದರೆ, ಹಿಂದಿನ ಸ್ವಾಮಿಗಳು ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಕೂಡಲೇ ಶ್ವೇತ ಪುರದಲ್ಲಿ ಧಾರಾಕಾರವಾಗಿ ಮಳೆ ಸುರಿದು ‘ಪ್ರವಾಹ’ ಬಂದದ್ದು!

ಶಾಲಾ ಮಾಸ್ತರ ಮತ್ತು ಸನ್ಯಾಸಿಗಳ ನಡುವೆ ನಡೆವ ಮುಖಾಮುಖಿ, ಮೂಲಕ ತೆರೆದುಕೊಳ್ಳುವ ಕತೆಯ ತಿರುಳು ‘ಹಳೆಯ ನಂಬಿಕೆಗಳನ್ನು ಹೊಸ ಪುರೋಗಾಮಿ ಚಿಂತನೆಗಳು ಪ್ರವಾಹದ ಮೂಲಕ ಕೊಚ್ಚಿಕೊಂಡು ಹೋಗುವ ದೃಷ್ಟಾಂತವಾಗಿದೆ.’ ಸ್ವಾಮೀಜಿಯವರು ಸನ್ಯಾಸ ತೊರೆದು ಗೃಹಸ್ಥಾಶ್ರಮ ಸೇರಿದಾಗ ಹಲವು ಬುದ್ಧಿಜೀವಿಗಳು ಅವರ ಪರ ನಿಂತು ಮಾನ ಸಮ್ಮಾನ ಮಾಡುವ ಈ ಹೊಸ ಚಿಂತನೆಯ ಅಲೆಗಳು ಮುಂದೆ ‘ಪ್ರವಾಹ’ರೂಪದಲ್ಲಿ ಸಮಾಜದಲ್ಲಿ ಹರಿಯಲು ಸಾಧ್ಯವಿದೆ ಎಂಬ ಸೂಕ್ಷ್ಮ ಕತೆಯಲ್ಲಿ ಅಡಕವಾಗಿದ್ದು ಕತೆಗಾರರು ಪ್ರವಾಹವನ್ನು ಪ್ರತಿಮಾತ್ಮಕವಾಗಿ ನಿರೂಪಿಸಿ ಕಥನ ಶೈಲಿಯ ಹಿಡಿತವನ್ನು ತೋರಿಸಿದ್ದಾರೆ. ಆದರೆ ಈ ಕತೆ ತುಸು ವಾಚ್ಯವಾಗಿದೆ (ಸಂಭಾಷಣೆ ಸಂದರ್ಭಗಳಲ್ಲಿ) ಅನ್ನಿಸುವುದೂ ಸುಳ್ಳಲ್ಲ. ಇಂಗ್ಲಿಷ್ ಶಬ್ದಗಳನ್ನು ಕಡಿಮೆಗೊಳಿಸಬಹುದು.

ಎಪ್ಪತ್ತು ಎಂಬತ್ತರ ದಶಕಗಳಲ್ಲಿ ಮೂರನೆ ಕತೆ ಮುಖಗಳು ತೀರಾ ಸಾಮಾನ್ಯವಾಗಿರುವ ‘ಒಕ್ಕಲು ಆಳು’ ಸಂಬಂಧ ಬಿಂಬಿಸುವ ಕಥಾವಸ್ತು. ಆದರೆ ಈ ಕತೆ ನಿರೂಪಣೆ ಶೈಲಿಯಿಂದಾಗಿ ತಾಜಾ ಅನಿಸುತ್ತದೆ. ಕರಾವಳಿ ಕರ್ನಾಟಕದ ಪರಿಸರ ಚಿತ್ರಣ, ಕೌಟುಂಬಿಕ ದೈವಾರಾಧನೆ ಸನ್ನಿವೇಶ ನೈಜವಾಗಿ ಮೈತಾಳಿವೆ.

ಪ್ರಾ. ಸೀತಾರಾಮ ಆರ್.ಶೆಟ್ಟಿಯವರು ಅನೇಕ ಕಥೆಗಳನ್ನು ಬರೆದಿರಬಹುದು. ಮುಂದೆ ಹೊಸ ಸಂವೇದನೆ, ಹೊಸ ಸವಾಲುಗಳ ಜೊತೆ ಜೊತೆಗೆ ಹೊಸ ಬಗೆಯ ಆಲೋಚನೆ ಗಳಿಗೆ ತೆರೆದುಕೊಳ್ಳುವ ಕತೆಗಳನ್ನು ಬರೆಯ ಬೇಕು. ಬರವಣಿಗೆಯಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳಬೇಕು. ಇದು ಇವರಿಂದ ಸಾಧ್ಯ ಎಂಬ ಭರವಸೆ ಮತ್ತು ಹಾರೈಕೆ ನನ್ನದು.


Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...


ನಿಮ್ಮ ಅನಿಸಿಕೆ

postClick here to post your views
EPAPER
access

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್

ರಾಜಕೀಯ ಪಕ್ಷಗಳ ಆತ್ಮವಿಮರ್ಶೆ ಅಗತ್ಯ

ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...


- ನಾ ದಿವಾಕರ್