ಅಂಕಣ

mail-img print-img

ತುರ್ತು ಪರಿಸ್ಥಿತಿಗೆ 37 ವರ್ಷ;ಅಂದು ಘೋಷಿತ ಸತ್ಯ ಇಂದು ಅಘೋಷಿತ ವಾಸ್ತವ

ಬುಧವಾರ - ಜೂನ್ -27-2012

ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಹತ್ತು ಹಲವು ಕಹಿ ಘಟನೆಗಳು, ಅವಘಡಗಳು, ಹಿಂಸಾತ್ಮಕ ಘಟನೆಗಳು ನಡೆದಿವೆ. ಇತಿಹಾಸದ ಪುಟಗಳಲ್ಲಿ ತಮ್ಮ ಕರಾಳ ಛಾಯೆಯನ್ನು ಶಾಶ್ವತವಾಗಿ ಸ್ಥಾಪಿಸುವ ಈ ಘಟನೆಗಳು ದೇಶದ ವಿಭಜನೆಯಿಂದ ಆರಂಭವಾಗಿ 2002ರ ಗುಜರಾತ್‌ವರೆಗೂ ವಿಸ್ತರಿಸುತ್ತವೆ.ದೇಶದ ಸಾರ್ವಭೌಮ ಪ್ರಜೆಗಳ ಜೀವಗಳಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡದಂತಹ ಹೃದಯ ವಿದ್ರಾವಕ ಘಟನೆಗಳ ಸರಮಾಲೆಯನ್ನು ಪೋಣಿಸುತ್ತಾ ಹೋದರೆ,ಕಳೆದ ಆರು ದಶಕಗಳಲ್ಲಿ ಈ ದೇಶವನ್ನಾಳಿದ ಆಳುವ ವರ್ಗದ ಪ್ರತಿನಿಧಿಗಳು ಶಾಶ್ವತವಾಗಿ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಾರೆ.ಮೃತ ದೇಹಗಳ ಸಂಖ್ಯೆಗಳನ್ನು ಗಣನೆಗೆ ತೆಗೆದು ಕೊಳ್ಳ ದೆಯೇ ನೋಡಿದಾಗಲೂ ಹಲವು ಹಿಂಸಾತ್ಮಕ ಘಟನೆಗಳು ಈ ದೇಶದ ಇತಿಹಾಸದಲ್ಲಿ ರಕ್ತಾಕ್ಷರಗಳಲ್ಲಿ ಕಾಣಿಸಿಕೊಳುತ್ತವೆ.1984ರಲ್ಲಿ ಸಿಖ್ ವಿರೋಧಿ ಗಲಭೆಯಲ್ಲಿ ಹತರಾದ ಅಮಾಯಕ ಜೀವಗಳಿಗೂ, 1989-92ರ ಅಯೋಧ್ಯಾ ಪರ್ವದಲ್ಲಿ ಅಸುನೀಗಿದ ಅಸಂಖ್ಯಾತ ಜೀವಗಳಿಗೂ, ಭೂಪಾಲ್ ಅನಿಲ ದುರಂತದಲ್ಲಿ ಇಂದಿಗೂ ಬಲಿಯಾಗುತ್ತಿರುವ ಜೀವಗಳಿಗೂ ಮತ್ತು 2002ರ ಗುಜರಾತ್ನಲ್ಲಿ ಜೀವ ತೆತ್ತ ಜೀವಗಳಿಗೂ ಯಾವ ವ್ಯತ್ಯಾಸವಿದೆ?

ಭಯೋತ್ಪಾದಕ ಕೃತ್ಯಗಳಲ್ಲಿ ಮಡಿದವರಿಗಿಂತಲೂ ಈ ಘಟನೆಗಳಲ್ಲಿ ಮಡಿದವರ ಸಂಖ್ಯೆಯೇ ಹೆಚ್ಚು. ಇನ್ನೂ ಹೆಚ್ಚಿನ ಸಂಖ್ಯೆಯ ರೈತ ಬಾಂಧವರು ‘ಜಾಗತೀಕರಣ’ ಎಂಬ ಜಾಗತಿಕ ಭಯೋ ತ್ಪಾದನೆಗೆ ಬಲಿಯಾಗಿದ್ದಾರೆ.ಯಾರನ್ನು ದೂಷಿಸುವುದು. ಅಪರಾಧಿಗಳೇ ಇಲ್ಲ. ಮಡಿದವರೇ ಅಪರಾಧಿಗಳು ಏಕೆಂದರೆ ಅವರ ಅಮಾಯಕತನವೇ ಅವರ ಅಪ ರಾಧ ಅಲ್ಲವೇ ?ಇರಲಿ, ಈ ಎಲ್ಲಾ ಘಟನೆಗಳೂ ಸ್ವತಂತ್ರ ಭಾರತದ ನಕ್ಷೆಯಲ್ಲಿ ತಮ್ಮ ಕೆಂಪು ಚುಕ್ಕೆಗಳನ್ನು ಉಳಿಸಿಹೋಗಿವೆ.ಗುರುತಿಸಿ, ನೆನಪಿಸಿಕೊಳ್ಳುವ ದಾರ್ಷಟ್ಯೆತೆ ಪ್ರಜ್ಞಾವಂತ ಪ್ರಜೆಗಳಿಗೆ ಇರಬೇಕಷ್ಟೆ.

ಈ ಯಾವುದೇ ಘಟನೆಗಳನ್ನೂ ಯಾವುದನ್ನೂ ಮರೆಯಲಾಗದು. ಆದರೂ ಒಂದು ವಿದ್ಯಮಾನ ಈ ಎಲ್ಲ ಘಟನೆಗಳನ್ನೂ ಮೀರಿ ನಿಂತು ಈ ದೇಶದ ಸಾರ್ವಭೌಮ ಪ್ರಜೆಗಳ ಪ್ರಜ್ಞೆ ಯನ್ನು ಬಡಿದೆಬ್ಬಿಸುತ್ತಿರುತ್ತದೆ.ಈ ಕರಾಳ ದಿನದ ಮತ್ತೊಂದು ವಾರ್ಷಿಕ ಎದುರಾಗಿದೆ. ಈ ದೇಶದ ರಾಜಕೀಯ ನಕ್ಷೆಯನ್ನೇ ಬದಲಿಸಿ ಸಾಮಾಜಿಕ ವಿಪ್ಲವಕ್ಕೆ ನಾಂದಿ ಹಾಡಿದ 1975ರ ತುರ್ತು ಪರಿಸ್ಥಿತಿ ಭಾರತದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆಯುತ್ತದೆ. 37 ವರ್ಷಗಳ ಕಾಲ ಜನರ ಪ್ರಜ್ಞೆಯನ್ನು ಬಾಧಿಸು ತ್ತಲೇ ಇರುವ ತುರ್ತು ಪರಿಸ್ಥಿತಿಯ ಸಂದರ್ಭ ಆಚರಣೆಗೊಳಪಡಬೇಕಾದ ವಿದ್ಯಮಾನವಲ್ಲ.ಅಥವಾ ಕೇವಲ ಪ್ರತಿರೋಧ, ಖಂಡನೆಗಳಲ್ಲಿ ಪರ್ಯವಸಾನ ಹೊಂದಬೇಕಾದ ವಿಚಾರವೂ ಅಲ್ಲ. ಭಾರತೀಯ ಸಮಾಜ, ವಿಶೇಷವಾಗಿ ಈ ದೇಶದ ಹಿರಿಯ ಪೀಳಿಗೆಯ ಜನತೆ ಆತ್ಮಾವ ಲೋಕನ ಮಾಡಿಕೊಳ್ಳಲು ಪದೇ ಪದೇ ನೆನಪು ಮಾಡುವ ಒಂದು ಕರಾಳ ಅಧ್ಯಾಯ.

ದೇಶದ ರಾಜಕೀಯ ವಲಯಗಳಲ್ಲಿ ವಿಶ್ಲೇಷಿ ಸುವಂತೆ ತುರ್ತು ಪರಿಸ್ಥಿತಿಗೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಅಥವಾ ಕಾಂಗ್ರೆಸ್ ಪಕ್ಷವನ್ನು ದೂಷಿಸುವ ಅಥವಾ ಹಳಿಯುವ ಧೋರಣೆ ಸಮಕಾಲೀನ ಸಂದರ್ಭದಲ್ಲಿ ಕ್ಲೀಷೆ ಎನಿಸುತ್ತದೆ. ನಿಜ, ಅಂದಿನ ಪರಿಸ್ಥಿತಿಯಲ್ಲಿ ಅಧಿಕಾರಸ್ಥ ರಾಜ ಕಾರಣಿಗಳಿಗೆ, ಪ್ರಭುತ್ವಕ್ಕೆ ಮತ್ತು ಭಾರತೀಯ ಸಮಾಜವನ್ನು ತನ್ನ ನಿಯಂತ್ರಣದಲ್ಲಿರಿಸಿ ಕೊಂಡಿರುವ ಪ್ರಬಲವರ್ಗಗಳಿಗೆ ತುರ್ತು ಪರಿ ಸ್ಥಿತಿ ಒಂದು ಅನಿವಾರ್ಯ ಅಸ್ತ್ರವಾಗಿತ್ತೇನೋ? ಇದು ಕೇವಲ ರಾಜಕೀಯ ವಿದ್ಯ ಮಾನವಾಗಿರಲಿಲ್ಲ.

1975ರ ಸಂದರ್ಭದಲ್ಲಿ ದೇಶದ ಸಂವಿ ಧಾನವನ್ನೇ ಬುಡಮೇಲು ಮಾಡಿ ಸಾರ್ವಭೌಮ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಭುತ್ವದ ಹುನ್ನಾರ ಸಮಾಜೋ-ಆರ್ಥಿಕ ಹಿನ್ನೆಲೆಯಲ್ಲೂ ವಿಶ್ಲೇಷಣೆಗೊಳಪಡ ಬೇಕಾಗುತ್ತದೆ. ಇಂದಿರಾಗಾಂಧಿ ಹೇರಿದ ತುರ್ತು ಪರಿಸ್ಥಿತಿ ಅಂದಿನ ಕಾಲಘಟ್ಟದ ವಿಶಿಷ್ಟ ವಿದ್ಯಮಾ ನವಾಗಿದ್ದಲ್ಲಿ ಇಂದು ಭಾರತೀಯ ಸಮಾಜ ಮುಕ್ತವಾದ, ನೈಜ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಣಬೇಕಿತ್ತು.ಆದರೆ ಹಾಗಾಗುತ್ತಿಲ್ಲ. ತುರ್ತು ಪರಿಸ್ಥಿತಿಯ ಅನಿವಾರ್ಯತೆಗಳು ಇಂದಿರಾ ಸರಕಾರವನ್ನು ಬಾಧಿಸುವಷ್ಟೇ ಪ್ರಸಕ್ತ ಆಳುವ ವರ್ಗಗಳನ್ನೂ ಬಾಧಿಸುತ್ತಿರುವುದು ಸ್ಪಷ್ಟ.

ಈಗ ತುರ್ತು ಪರಿಸ್ಥಿತಿ ಜಾರಿಯಲ್ಲಿಲ್ಲ. ಆದರೆ ದೇಶದ ಸಾಮಾಜಿಕ-ರಾಜಕೀಯ ಪರಿಸ್ಥಿತಿ ಮುಕ್ತ ಪ್ರಜಾತಂತ್ರವನ್ನು ಬಿಂಬಿಸುವ ರೀತಿ ಖಂಡಿತವಾಗಿಯೂ ಇಲ್ಲ. ಅಂದು ಪ್ರಜೆಗಳ ದೃಷ್ಟಿಯಲ್ಲಿ ಇಂದಿರಾ ಏಕೈಕ ದುಷ್ಮನ್ ಆಗಿದ್ದರು. ಇಂದೇನಾಗಿದೆ? ಇಡೀ ಆಳುವ ವರ್ಗಗಳೇ ಪ್ರಜೆಗಳ ದೃಷ್ಟಿಯಲ್ಲಿ ದುಷ್ಮನ್‌ಗಳಾಗಿ ಕಾಣುತ್ತಿದ್ದಾರೆ. ಅಷ್ಟೇಕೆ ಪ್ರಭುತ್ವದ ದಮನಕಾರಿ ನೀತಿಗಳನ್ನು, ಪ್ರಜಾತಾಂತ್ರಿಕ ಮೌಲ್ಯಗಳನ್ನು ಹೊಸಕಿ ಹಾಕುವ ಯತ್ನಗಳನ್ನು ವಿರೋಧಿಸ ಬೇಕಾದ ಪ್ರಜ್ಞಾವಂತ ಸಮಾಜವೂ ತನ್ನದೇ ಆದ ರೀತಿಯಲ್ಲಿ,ತನ್ನದೇ ಆದ ಕಾರಣಗಳಿಗಾಗಿ ಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಮಾನವ ಹಕ್ಕುಗಳನ್ನು ಮೊಟಕುಗೊಳಿಸುತ್ತಿವೆ. ಎಲ್ಲವೂ ಸಾಮುದಾಯಿಕ ಅಸ್ಮಿತೆಗಳ ಹೆಸರಿನಲ್ಲಿ. ಅಥವಾ ಸಾಮುದಾಯಿಕ ಘನತೆ ಗೌರವಗಳ ನೆಪದಲ್ಲಿ.

ಕೊಲ್ಕತ್ತದಲ್ಲಿ ಮುಖ್ಯ ಮಂತ್ರಿಗಳ ವ್ಯಂಗ್ಯಚಿತ್ರ ಬರೆದ ಕಲಾವಿದನನ್ನು ಬಂಧಿಸಲಾಗುತ್ತದೆ, ಸ್ಲಂ ನಿವಾಸಿಗಳ ಪರವಾಗಿ ಹೋರಾಡುವ ವಿಜ್ಞಾನಿಯನ್ನು ದೇಶದ್ರೋಹಿ ಎಂದು ಬಂಧಿಸಲಾಗುತ್ತದೆ. ಭಗತ್ ಸಿಂಗ್ ಜೀವನ ಚರಿತ್ರೆಯ ಕೃತಿಯನ್ನು ಹೊಂದಿರುವ ವಿದ್ಯಾರ್ಥಿಯನ್ನು ಕರ್ನಾಟಕದಲ್ಲಿ ಮಾವೋವಾದಿ ಎಂದು ಬಂಧಿಸಲಾಗುತ್ತದೆ.ಉತ್ತರ ಪ್ರದೇಶದಲ್ಲಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಸರಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಹೋರಾ ಡುವ ದಂಪತಿಗಳನ್ನು ಮಾವೋವಾದಿಗಳೆಂದು ಬಂಧಿಸಲಾಗುತ್ತದೆ. ನ್ಯಾಯಾಂಗವೂ ಇದನ್ನು ಅನುಮೋದಿಸುತ್ತದೆ. ಆಳುವ ಸರಕಾರದ ನೀತಿಗಳನ್ನು ವಿರೋಧಿಸುವುದು ಪ್ರಭುತ್ವವನ್ನೇ ವಿರೋಧಿಸಿದಂತೆ ಅಥವಾ ಪ್ರಭುತ್ವದ ವಿರುದ್ಧ ಸಮರ ಸಾರಿದಂತೆ ಎಂದು ಅರ್ಥೈ ಸಲಾಗುತ್ತಿದೆ.

ಅಂದರೆ ಸರಕಾರ ಮತ್ತು ಪ್ರಭುತ್ವದ ನಡುವಿನ ವ್ಯತ್ಯಾಸ ಹಾಗೂ ಅಂತರವನ್ನು ಆಳುವ ವರ್ಗಗಳೇ ಕಿರಿದಾಗಿ ಸುತ್ತಿವೆ. ದಶಕಗಳ ಕಾಲ ಜನಸಾಮಾನ್ಯರ ನೋವುಗಳಿಗೆ, ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯಕ್ಕಾಗಿ ಹೋರಾಡುವ ಬಿನಾಯಕ್ ಸೆನ್, ಹಿಮಾಂಶು ಕುಮಾರ್, ಸೀಮಾ ಆಜಾದ್ ಮುಂತಾದವರು ದೇಶದ್ರೋಹಿ ಗಳಾಗಿ ಕಾಣುತ್ತಾರೆ. ಆದರೆ ಅಮಾಯಕ ಪ್ರಜೆಗಳ ಮಾರಣ ಹೋಮಕ್ಕೆ ಕಾರಣ ಕರ್ತರಾದ ಆಳುವ ವರ್ಗದ ಪ್ರತಿನಿಧಿಗಳು ಸಾಕ್ಷ್ಯಾಧಾರಗಳಿಲ್ಲದ ಕಾರಣ ನಿರಪರಾಧಿ ಗಳಾಗುತ್ತಾರೆ.

ಭೂಪಾಲ್, 1984, 1989, 1992, 1993, 2002 ಮತ್ತು 1975 ಈ ವರ್ಷಗಳನ್ನು ನೆನೆದರೆ ಪ್ರಜ್ಞಾವಂತ ಮನಸ್ಸುಗಳು ಕುದಿಯುತ್ತವೆ. ಆದರೆ ಯಾವುದೇ ಘಟನೆ ಗಳಲ್ಲೂ ಅಪರಾಧಿಗಳಿಗೆ ಶಿಕ್ಷೆಯಾಗಿಲ್ಲ. ಅಪರಾಧಿ ಯಾರು ಎಂದೇ ನಿರ್ಧರಿಸಲಾ ಗಿಲ್ಲ. ಆದರೆ ಒಂದು ಸಾಹಿತ್ಯ ಕೃತಿ, ಒಂದು ಕರಪತ್ರ, ಒಂದು ಜೀವನ ಚರಿತ್ರೆ, ಒಂದು ಪತ್ರ ಹೀಗೆ ಸಣ್ಣ ಪುಟ್ಟ ಸಾಕ್ಷಿಗಳಿದ್ದ ಕಾರಣ ನಿರಪರಾಧಿಗಳು ಶಿಕ್ಷೆ ಅನುಭವಿಸುತ್ತಿದ್ದಾರೆ.

 ದೇಶವನ್ನು, ದೇಶದ ಸಂಪತ್ತನ್ನು ಲೂಟಿ ಮಾಡುತ್ತಿರುವ ಉದ್ಯಮಿಗಳು, ಕಾರ್ಪೊರೇಟ್ ಶಕ್ತಿಗಳು, ರಾಜಕೀಯ ವ್ಯಕ್ತಿಗಳು, ಮಠೋದ್ಯಮಿಗಳು ಇಂದು 2ಜಿ,3ಜಿ, ಆದರ್ಶ,ಗಣಿಗಾರಿಕೆ,ಡಿನೋಟಿಫಿಕೇಷನ್ ಮುಂತಾದ ಹಗರಣಗಳ ರೂವಾರಿಗಳಾಗಿದ್ದರೂ ನ್ಯಾಯದ ಕಣ್ಣಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಕಾರಣ ಪ್ರಭುತ್ವದ ನಿಯಂತ್ರಣ ಸೂತ್ರಗಳು ಇವರನ್ನು ರಕ್ಷಿಸುತ್ತಿದೆ.ಮತ್ತೊಂದೆಡೆ ತಮ್ಮ ಖಾಸಗಿ ವರಮಾನವನ್ನೂ ಜನರಿಗಾಗಿ ಖರ್ಚು ಮಾಡುತ್ತಾ ಸರಳ ಜೀವನ ನಡೆಸುವ ಸಾಮಾಜಿಕ ಕಾರ್ಯಕರ್ತರು ದೇಶದ್ರೋಹಿಗಳೆಂದು ಬಿಂಬಿಸಲ್ಪಡುತ್ತಿದ್ದಾರೆ. ಇದೆಂತಹ ವಿಪರ್ಯಾಸ?

ದೇಶವನ್ನು, ದೇಶದ ಸಂಪತ್ತನ್ನು ಲೂಟಿ ಮಾಡುತ್ತಿರುವ ಉದ್ಯಮಿಗಳು, ಕಾರ್ಪೊರೇಟ್ ಶಕ್ತಿಗಳು, ರಾಜಕೀಯ ವ್ಯಕ್ತಿಗಳು, ಮಠೋದ್ಯಮಿಗಳು ಇಂದು 2ಜಿ, 3ಜಿ,ಆದರ್ಶ,ಗಣಿಗಾರಿಕೆ,ಡಿನೋಟಿಫಿಕೇಷನ್ ಮುಂತಾದ ಹಗರಣಗಳ ರೂವಾರಿಗಳಾಗಿದ್ದರೂ ನ್ಯಾಯದ ಕಣ್ಣಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಕಾರಣ ಪ್ರಭುತ್ವದ ನಿಯಂತ್ರಣ ಸೂತ್ರಗಳು ಇವರನ್ನು ರಕ್ಷಿಸುತ್ತಿದೆ.ಮತ್ತೊಂದೆಡೆ ತಮ್ಮ ಖಾಸಗಿ ವರಮಾನವನ್ನೂ ಜನರಿಗಾಗಿ ಖರ್ಚು ಮಾಡುತ್ತಾ ಸರಳ ಜೀವನ ನಡೆಸುವ ಸಾಮಾಜಿಕ ಕಾರ್ಯಕರ್ತರು ದೇಶದ್ರೋಹಿಗಳೆಂದು ಬಿಂಬಿಸಲ್ಪಡುತ್ತಿದ್ದಾರೆ. ಇದೆಂತಹ ವಿಪರ್ಯಾಸ?

ಯಾರನ್ನು ದೂಷಿಸುವುದು? ಇಂದಿರಾಗಾಂಧಿಯನ್ನು ಹಳಿಹಳಿದು ಸಾಕಾಗಿದೆ. ಇಂದು ಎಲ್ಲೆಡೆ ೧೯೭೫ರ ಇಂದಿರಾಗಳು ಕಾಣುತ್ತಿದ್ದಾರೆ.ಮಹಾಭಾರತದ ಶ್ರೀಕೃಷ್ಣನಂತೆ. ಸರ್ವವ್ಯಾಪಿಯಾಗಿ. ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಭುತ್ವದಿಂದ ಮಾತ್ರವಲ್ಲ ಪ್ರಜೆಗಳ ಪ್ರತಿನಿಧಿತ್ವ ವಹಿಸುವ ಸಂಘಟನೆಗಳಿಂದಲೂ ಆಕ್ರಮಣಕ್ಕೊಳಗಾಗಿರುವುದು ತುರ್ತು ಪರಿಸ್ಥಿತಿಯ ಹೊಸ ಆಯಾಮವೆಂದು ಹೇಳಬಹುದು.ಮುಕ್ತ ಸ್ವಾತಂತ್ರ್ಯದ ಪರಿಕಲ್ಪನೆಯಲ್ಲಿ ಭಾರತೀಯ ಸಮಾಜ ಇನ್ನೂ ಪ್ರಬುದ್ಧವಾಗಿಲ್ಲ ಎಂಬುದು ಸ್ಪಷ್ಟ. ಹಾಗಾಗಿಯೇ ಕರಾಳ ಶಾಸನಗಳು ಸದ್ದಿಲ್ಲದೇ ಜಾರಿಯಲ್ಲಿವೆ.ಪ್ರಜೆಗಳು ಮೌನವಾಗಿಯೇ ಸಹಿಸಿಕೊಳ್ಳುತ್ತಿದ್ದಾರೆ. ಅಪರಾಧಿಗಳು ಯಾರು ? ಪ್ರಭುತ್ವವೋ, ಆಳ್ವಿಕರೋ, ಪ್ರಜೆಗಳೋ ಅಥವಾ ಭಾರತೀಯ ಸಮಾಜದ ಸಮೂಹ ಪ್ರಜ್ಞೆಯೋ?                

ಕೃಪೆ: ಅವಧಿ

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಚರ್ಚ್‌ದಾಳಿ ಗೃಹ ಇಲಾಖೆಗೆ ಪಾಠವಾಗಲಿ

‘ಮುರಿದು ನೇತಾಡುತ್ತಿರುವ ಏಸುವಿನ ಕೈ, ಮುರಿದ ಕಾಲು, ಒಡೆದ ಮುಖ....’’ ಈ ಸಮಾಜದ ಕ್ರೌರ್ಯ ಮತ್ತು ವಿರೂಪಕ್ಕೆ ಹಿಡಿದ ಕನ್ನಡಿಯಂತೆ ಮಾಧ್ಯಮಗಳ ಮುಖಪುಟದಲ್ಲ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮಾನಸಿಕ ದಾಸ್ಯಕ್ಕೆ ಬಲಿಯಾದ ‘ದ ಇಂಡಿಯನ್’

ಇಂದು ಇಂಡಿಯಾದ ಸಮಕಾಲೀನ ರಾಜಕೀಯ ಮಾದರಿಗಳು ತನ್ನ ಸೋಲೊಪ್ಪದ ಛಾತಿ ಮತ್ತು ಇಚ್ಛಾಶಕ್ತಿ, ಧನ ...


- ಬಿ.ಶ್ರೀಪಾದ ಭಟ್

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್