ಅಂಕಣ

mail-img print-img

ಆನ್‌ಲೈನ್ ಆರೋಗ್ಯ ತಾಣಗಳು

ರವಿವಾರ - ಜುಲೈ -01-2012

ವಿಜ್ಞಾನ ಮತ್ತು ತಂತ್ರಜ್ಞಾನಗಳು ಶರವೇಗದಲ್ಲಿ ಅಭಿವೃದ್ಧಿ ಹೊಂದು ತ್ತಿರುವ ಈ ಕಾಲಘಟ್ಟದಲ್ಲಿ ಅವುಗಳಿಂದ ಮನುಕುಲಕ್ಕೆ ಬಹಳಷ್ಟು ಪ್ರಯೋಜನವಾಗಿದ್ದು ಎಷ್ಟು ಸತ್ಯವೋ ಅದರಿಂದ ಒಂದಷ್ಟು ಅನಾನು ಕೂಲಗಳಾಗಿದ್ದೂ ಅಷ್ಟೇ ಸತ್ಯ. ಈ ತೊಂದರೆಗಳಿಗೆ ಖಂಡಿತವಾಗಿಯೂ ವಿಜ್ಞಾನ ಮತ್ತು ತಂತ್ರಜ್ಞಾನಗಳ ಅಭಿವೃದ್ಧಿ ಕಾರಣವಲ್ಲ, ಬದಲಿಗೆ ಅವು ಗಳನ್ನು ಬಳಸಿಕೊಳ್ಳಬೇಕಾದ ರೀತಿಯಲ್ಲಿ ಬಳಸಿಕೊಳ್ಳದಿರುವುದು ಅಥವಾ ಇನ್ನೂ ನೇರವಾಗಿ ಹೇಳಬೇಕೆಂದರೆ ಅವುಗಳ ದುರುಪಯೋಗ ಮಾಡಿ ಕೊಂಡಿದ್ದೇ ಪ್ರಧಾನ ಕಾರಣ ಎನ್ನಬೇಕು. ಇರಲಿ, ಈ ಆವಿಷ್ಕಾರಗಳು ನಮ್ಮ ಬದುಕಿನ ವೇಗವನ್ನು ಹೆಚ್ಚಿಸಿವೆ. ಅದರ ಜೊತೆ ಜೊತೆಗೇ ನಮ್ಮಲ್ಲಿ ಸೋಮಾರಿತನವನ್ನೂ ಬೆಳೆಸಿವೆ.

ಹಿಂದೆಲ್ಲ ಜನ ನಡೆದುಕೊಂಡೇ ಓಡಾಡುತ್ತಿದ್ದರು, ಪ್ರತಿಯೊಂದನ್ನೂ ದೈಹಿಕ ಶ್ರಮದ ಮೂಲಕವೇ ಮಾಡುತ್ತಿದ್ದರು. ದೈಹಿಕ ದುಡಿಮೆಯ ಕಾರಣಕ್ಕಾಗಿಯೇ ಆರೋಗ್ಯ ವಾಗಿರುತ್ತಿದ್ದರು. ಕೈಗಾರಿಕೀಕರಣ, ನಗರೀಕರಣಗಳು ಅಷ್ಟಾಗಿ ಆಗದಿದ್ದ ಆ ಕಾಲದಲ್ಲಿ ಶುದ್ಧವಾದ ಗಾಳಿ, ನೀರು, ಪರಿಸರಗಳು ಇದ್ದವು. ಆದರೆ, ಇಂದು ಮಾನವನ ದೈಹಿಕ ಶ್ರಮದ ಜಾಗವನ್ನು ಯಂತ್ರಗಳು, ವಾಹನ ಗಳು, ಕಂಪ್ಯೂಟರುಗಳು ಆಕ್ರಮಿಸಿಕೊಂಡಿವೆ. ಪರಿಣಾಮವಾಗಿ ಮನು ಷ್ಯನ ದೈಹಿಕ ಶ್ರಮ ಗಣನೀಯವಾಗಿ ಕಡಿಮೆಯಾಗಿದೆ. ಇದರ ಜೊತೆಗೆ, ಕೈಗಾರಿಕೀಕರಣ, ನಗರೀಕರಣಗಳು ಪರಿಸರವನ್ನು ಮಲಿನಗೊಳಿಸಿ ಜನರ ಆರೋಗ್ಯವನ್ನು ಹಾಳು ಮಾಡಿವೆ. ಇರುವ ರೋಗಗಳ ಜೊತೆಗೆ ಹೊಸ ಹೊಸ ರೋಗಗಳು, ದೈಹಿಕ ದೌರ್ಬಲ್ಯಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಇಂದು ಆರೋಗ್ಯ ಪ್ರಜ್ಞೆ ಕೂಡ ಹೆಚ್ಚಾಗು ತ್ತಿದೆ. ನೀವು ಗಮನಿಸಿರಬಹುದು, ಉತ್ತಮ ಆರೋಗ್ಯ ಕಾಪಾಡಿಕೊಳ್ಳು ವುದು ಹೇಗೆ, ರಕ್ತದೊತ್ತಡ, ಮಧುಮೇಹಗಳಂತಹ ಸಮಸ್ಯೆಗಳನ್ನು ನಿಬಾಯಿಸಿಕೊಳ್ಳುವುದು ಹೇಗೆ, ಉತ್ತಮ ಆರೋಗ್ಯಕ್ಕಾಗಿ ಯಾವ ರೀತಿಯ ಆಹಾರ ಸೇವಿಸಬೇಕು, ಚಿಕ್ಕಪುಟ್ಟ ಆರೋಗ್ಯ ಸಮಸ್ಯೆಗಳು ಬಂದಾಗ ಡಾಕ್ಟರುಗಳ ಅನುಪಸ್ಥಿತಿಯಲ್ಲಿ ಖುದ್ದಾಗಿ ಹೇಗೆ ಅವುಗಳನ್ನು ನಿಬಾಯಿಸಬೇಕು, ಉತ್ತಮ ಮತ್ತು ಆರೋಗ್ಯವಂತ ಶರೀರವನ್ನು (ಫಿಟ್‌ನೆಸ್) ಕಾಪಾಡಿಕೊಳ್ಳುವುದು ಹೇಗೆ, ಉತ್ತಮ ಆರೋಗ್ಯಕ್ಕಾಗಿ ಯೋಗ ಮತ್ತು ಪ್ರಾಣಾಯಾಮ, ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ -ಇತ್ಯಾದಿ  ಶೀರ್ಷಿಕೆ ಗಳನ್ನು ಒಳಗೊಂಡ ನೂರಾರು ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅವುಗಳಿಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆಯೂ ಹೆಚ್ಚಾಗುತ್ತಿದೆ ಎಂದರೆ ಅದು ಜನರಲ್ಲಿ ಜಾಗೃತಗೊಳ್ಳುತ್ತಿರುವ ಆರೋಗ್ಯ ಪ್ರಜ್ಞೆಯನ್ನು ತೋರಿಸುತ್ತದೆ. ಇಷ್ಟೆಲ್ಲ ಮಾಹಿತಿಯ ಹೊರತಾಗಿಯೂ ಆರೋಗ್ಯ ಕುರಿತಂತೆ ಜನರಲ್ಲಿ ತಪ್ಪುಗ್ರಹಿಕೆಗಳು, ದೋಷಪೂರಿತ ಸಿದ್ಧಾಂತಗಳು, ಅಂತೆ ಕಂತೆಗಳ ಸಂತೆಗಳು ಮನೆ ಮಾಡಿವೆ.

ನೀರನ್ನು ಜಾಸ್ತಿ ಕುಡಿದಷ್ಟು ಒಳ್ಳೆಯದು ಎಂದು ಒಬ್ಬರು ಹೇಳಿದರೆ, ಅದರಿಂದ ಪ್ರಯೋಜನವೇ ನಿಲ್ಲ ಎಂದು ಮತ್ತೊಬ್ಬರು ಮಾತಾಡುತ್ತಾರೆ. ಹಾಲು, ಮೊಸರು, ಬೆಣ್ಣೆ, ತುಪ್ಪ ಹೆಚ್ಚೆಚ್ಚು ತಿಂದಷ್ಟು ಒಳ್ಳೆಯದು ಎಂದು ಒಬ್ಬರು ಹೇಳಿದರೆ ಅದರಿಂದ ಆರೋಗ್ಯ ಹದಗೆಡುತ್ತೆ ಅಂತ ಮತ್ತೊ ಬ್ಬರು ಹೇಳುತ್ತಾರೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಹಲವು ವ್ಯಕ್ತಿಗಳು ಏಕ ಕಾಲದಲ್ಲಿ ಪರಸ್ಪರ ವಿರುದ್ಧವಾಗಿರುವ ಸಲಹೆ ಗಳನ್ನು ಕೊಡುತ್ತಾರೆ. ವಾಸ್ತವದಲ್ಲಿ ಇದು ಜನರಲ್ಲಿ ಮನೆ ಮಾಡಿರುವ ಆರೋಗ್ಯ ಕುರಿತ ತಪ್ಪುಗ್ರಹಿಕೆ ಗಳನ್ನು, ಥಿಯರಿಗಳನ್ನು ತೋರಿಸುತ್ತದಷ್ಟೆ. ಇವು ಗಳ ಜೊತೆಗೆ ಕೇವಲ ಲಾಭದ ಉದ್ದೇಶವನ್ನಿಟ್ಟು ಕೊಂಡ ಕೆಲವು ಕಂಪೆನಿಗಳೂ ಕೂಡ ಜನರನ್ನು ತಪ್ಪು ದಾರಿಗೆಳೆಯುತ್ತಿವೆ. ಈ ಗುಳಿಗೆಯನ್ನು ತಿಂದರೆ ಸಣಕಲು ದೇಹ ಹೊಂದಿದವರು ದಪ್ಪಆಗುತ್ತಾರೆ, ಪೌಡರ್‌ನ್ನು ಹಾಲಿನಲ್ಲಿ ಸೇರಿಸಿ ಕುಡಿದರೆ ತುಂಬಾ ದಪ್ಪಇದ್ದವರು ಹತ್ತು ಕೆ.ಜಿ. ಕಡಿಮೆಯಾಗಿ ಸುಂದರವಾಗಿ ಕಾಣುತ್ತಾರೆ, ಈ ಎಣ್ಣೆಯನ್ನು ತಲೆಗೆ ಹಚ್ಚಿದರೆ ಬೋಳು ತಲೆಯಲ್ಲಿ ಕೂದಲು ಬರುತ್ತೆ, ಆ ಮಾತ್ರೆ ನುಂಗಿದರೆ ನಿಮ್ಮ ಲೈಂಗಿಕ ಶಕ್ತಿ ವರ್ಧಿಸುತ್ತದೆ...

ಇತ್ಯಾದಿ ಮಣ್ಣು ಮಸಿಗಳನ್ನೆಲ್ಲಾ ತಲೆಗೆ ತುರುಕಿ ಜನಸಾಮಾನ್ಯರನ್ನು ಹಾದಿತಪ್ಪಿಸಿ, ಅವರಿಗೆ ತಮ್ಮ ಉತ್ಪನ್ನಗಳನ್ನು ಮಾರಿ ದುಡ್ಡು ಮಾಡಿಕೊಳುತ್ತಾರೆ. ಆರೋಗ್ಯದ ವಿಚಾರದಲ್ಲಿ ತಜ್ಞರ, ಪರಿಣಿತರ ಸಲಹೆ ಸೂಚನೆಗಳನ್ನು ಪಡೆಯುವುದು ಯಾವಾಗಲೂ ಸೂಕ್ತವಾಗಿರುತ್ತದೆ. ಆದರೆ, ಯಾವಾಗಲೂ ನುರಿತ ವೈದ್ಯರೇ ಸಿಗುವುದಿಲ್ಲ. ನಮಲ್ಲಿ ನಮ್ಮ ದೇಹದ ಬಗ್ಗೆ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಧಾನಗಳ ಬಗ್ಗೆ ಮೂಲಭೂತ ಮಾಹಿತಿ ಇದ್ದರೆ ಚಿಕ್ಕ ಪುಟ್ಟ ಸಮಸ್ಯೆಗಳಿಗೆಲ್ಲಾ ಆಸ್ಪತ್ರೆಗೆ ಎಡಕಾಡುವುದನ್ನು ತಪ್ಪಿಸಬಹುದು. ದೈಹಿಕ ಆರೋಗ್ಯ ಗಂಭೀರವಾದಾಗ, ಕ್ಯಾನ್ಸರ್‌ನಂತಹ ಬೀಕರ ಕಾಯಿಲೆಗಳು ಬಂದಾಗ, ಅಪಘಾತದಲ್ಲಿ ವೈದ್ಯರ ಬಳಿ ಹೋಗಲೇ ಬೇಕಾಗುತ್ತದೆ. ಆದರೆ, ಶೀತ, ಕೆಮ್ಮು, ಬೆನ್ನುನೋವು ಮುಂತಾದ ಸಣ್ಣಪುಟ್ಟ ಸಮಸ್ಯೆಗಳನ್ನು ನಾವೇ ಖುದ್ದಾಗಿ ಮನೆಯಲ್ಲೇ ಬಗೆಹರಿಸಿಕೊಳ್ಳಬಹುದು. ಅದಕ್ಕೆ ನಮ್ಮ ಕನಿಷ್ಠ ಆರೋಗ್ಯ ಪ್ರಜ್ಞೆ ಇರಬೇಕಾಗುತ್ತದೆ. ಈಗಾಗಲೇ ಹೇಳಿರುವಂತೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ನೂರಾರು ಆರೋಗ್ಯ ಮಾರ್ಗದರ್ಶಿ ಪುಸ್ತಕಗಳು ಬಂದಿವೆ.

ಅವುಗಳಲ್ಲಿ ಬಹುಮುಖ್ಯವೆನಿಸಿದ ಕೆಲವನ್ನಾದರೂ ಕೊಂಡುಕೊಂಡು ಇಟ್ಟುಕೊಂಡರೆ ಉತ್ತಮ. ಬೇಕೆನಿಸಿದಾಗ ಕೈಪಿಡಿಯಂತೆ ಅವುಗಳನ್ನು ಉಪಯೋಗಿಸಿಕೊಳ್ಳಬಹುದು. ಆದರೆ, ಇವುಗಳಿಗೆ ತನ್ನದೇ ಆದ ಮಿತಿ ಇರುತ್ತದೆ. ಅವುಗಳನ್ನು ಯಾವಾಗಲೋ ಬರೆಯಲಾಗಿರುತ್ತದೆ. ಅನೇಕ ವಿಚಾರಗಳು ನಿತ್ಯ ಹಳತಾಗುತ್ತವೆ. ಆರೋಗ್ಯ ಕ್ಷೇತ್ರದಲ್ಲಿ ನಿತ್ಯ ಸಂಶೋದನೆ, ಆವಿಷ್ಕಾರಗಳು ಆದಂತೆ ಈ ಆರೋಗ್ಯ ಮಾರ್ಗ ದರ್ಶಿಗಳಲ್ಲೂ ಮಾರ್ಪಾಡು ಮಾಡುವ ಅವಶ್ಯಕತೆ ಇರುತ್ತದೆ. ಈ ಎಲ್ಲಾ ಆವಿಷ್ಕಾರಗಳನ್ನು ಒಳಗೊಂಡು ಮಾರ್ಪಾಡಾದ ಹೊಸ ಆವೃತ್ತಿಗಳೂ ನಿತ್ಯ ಬರುತ್ತಿರುತ್ತವೆ. ಹಾಗಂತ, ಅವುಗಳನ್ನೆಲ್ಲಾ ಕೊಂಡುಕೊಳ್ಳುತ್ತಾ ಹೋಗುವುದಕ್ಕೆ ಮಧ್ಯಮ ವರ್ಗದ ಜನರಿಗೆ ಸಾಧ್ಯವಾಗುವುದಿಲ್ಲ.

ಇಂತಹ ಸನ್ನಿವೇಶದಲ್ಲಿ ನಮಗೆ ನೆರವಾಗು ವುದು ಇಂಟರ್‌ನೆಟ್. ಅಂತರ್ಜಾಲ ಲೋಕ ದಲ್ಲಿ ನೂರಾರು ಆರೋಗ್ಯ ಸಂಬಂಧಿ ತಾಣ ಗಳಿವೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳು ವುದು ಹೇಗೆ, ರೋಗ ಬರದಂತೆ ತಡೆಯುವುದು ಹೇಗೆ, ರೋಗ ಬಂದ ಮೇಲೆ ಅದಕ್ಕೆ ಯಾವ ರೀತಿಯ ಚಿಕಿತ್ಸೆ ಪಡೆಯಬೇಕು, ಯಾವ್ಯಾವ ರೋಗಕ್ಕೆ ಯಾವ್ಯಾವ ಗುಣಲಕ್ಷಣಗಳಿರುತ್ತವೆ, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯೋಗ, ಪ್ರಾಣಾಯಾಮ ಮತ್ತು ವ್ಯಾಯಾಮ ಗಳ ಪಾತ್ರ ಏನು, ಯಾವ ರೀತಿಯ ಆಹಾರಾ ಭ್ಯಾಸಗಳನ್ನು ರೂಢಿಸಿಕೊಳ್ಳಬೇಕು -ಇಂತಹ ನೂರಾರು ಪ್ರಶ್ನೆಗಳಿಗೆ ಈ ತಾಣಗಳಲ್ಲಿ ಉತ್ತರ ಗಳಿವೆ. ಈ ತಾಣಗಳು ವೈದ್ಯಕೀಯ ಕ್ಷೇತ್ರದಲ್ಲಿ ಆಗುವ ಸಂಶೋಧನೆ, ಆವಿಷ್ಕಾರ, ಬೆಳವಣಿಗೆ ಗಳ ಭರಪೂರ ಮಾಹಿತಿಯನ್ನು ತಮ್ಮಾಡಲೊಳಗೆ ನಿತ್ಯ ಸೇರಿಸಿಕೊಳ್ಳುತ್ತಾ ಸದಾ ಪರಿಷ್ಕರಿಸಲ್ಪಡುತ್ತಿರುತ್ತವೆ. ಪುಸ್ತಕಗಳಂತೆ ಇವು ಔಟ್‌ಡೇಟ್ ಆಗುವುದಿಲ್ಲ. ಈ ತಾಣಗಳು ಎಷ್ಟರ ಮಟ್ಟಿಗೆ ಉಪಯೋಗಕಾರಿಯಾಗಿವೆ ಎಂದರೆ ಅವು ಕೇವಲ ಜನಸಾಮಾನ್ಯ ರಿಗೆ ಮಾತ್ರವಲ್ಲ, ನಿತ್ಯ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗೂ ಅನುಕೂಲಕರವಾಗಿವೆ. ಇಂತಹ ಅಂತರ್ಜಾಲ ತಾಣಗಳ ನೆರವು ಪಡೆದರೆ ನಮ್ಮ ಆರೋಗ್ಯವನ್ನು ನಾವೇ ಖುದ್ದಾಗಿ ನಿಭಾಯಿಸಿಕೊಳ್ಳು ವುದಕ್ಕೆ ನೆರವಾಗುತ್ತದೆ. ಮಾತ್ರವಲ್ಲ, ಈ ಮಾತ್ರೆ ನುಂಗಿ ಒಂದೇ ತಿಂಗಳಲ್ಲಿ ಬೇಕಾದಷ್ಟು ದಪ್ಪಆಗಿರಿ, ಬೇಕಾದಷ್ಟು ತೆಳ್ಳಗಾಗಿರಿ, ಬೇಕಾದಷ್ಟು ಬೆಳ್ಳಗಾಗಿರಿ ಎಂದು ಬೊಬ್ಬಿಟ್ಟು ದುಡ್ಡು ಸುಲಿಯುವ ಜನರಿಂದಲೂ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಮುಂದಿನ ವಾರದಿಂದ ಅಂತಹ ಕೆಲವು ಉತ್ತಮ ಆರೋಗ್ಯ ತಾಣಗಳ ಪರಿಚಯ ಮಾಡಿಕೊಳ್ಳೋಣ.

ಅಂತರ್ಜಾಲ ಲೋಕದಲ್ಲಿ ನೂರಾರು ಆರೋಗ್ಯ ಸಂಬಂಧಿ ತಾಣಗಳಿವೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ, ರೋಗ ಬರದಂತೆ ತಡೆಯುವುದು ಹೇಗೆ, ರೋಗ ಬಂದ ಮೇಲೆ ಅದಕ್ಕೆ ಯಾವ ರೀತಿಯ ಚಿಕಿತ್ಸೆ ಪಡೆಯಬೇಕು, ಯಾವ್ಯಾವ ರೋಗಕ್ಕೆ ಯಾವ್ಯಾವ ಗುಣಲಕ್ಷಣಗಳಿರುತ್ತವೆ, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯೋಗ, ಪ್ರಾಣಯಾಮ ಮತ್ತು ವ್ಯಾಯಾಮಗಳ ಪಾತ್ರ ಏನು, ಯಾವ ರೀತಿಯ ಆಹಾರಾಭ್ಯಾಸಗಳನ್ನು ರೂಢಿಸಿಕೊಳ್ಳಬೇಕು -ಇಂತಹ ನೂರಾರು ಪ್ರಶ್ನೆಗಳಿಗೆ ಈ ತಾಣಗಳಲ್ಲಿ ಉತ್ತರಗಳಿವೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ

ಲೋಕಾಯುಕ್ತಕ್ಕೆ ಇನ್ನಷ್ಟು ಅಧಿಕಾರ ಹೇಗೆ ಚುನಾವಣಾ ಆಯೋಗಕ್ಕೆ ಟಿ.ಎನ್.ಶೇಷನ್ ಅವರು ಜೀವಕೊಟ್ಟರೋ ಹಾಗೆಯೇ ಕರ್ನಾಟಕದಲ್ಲಿ ಲೋಕಾಯುಕ್ತವೆಂಬ ಸಂಸ್ಥೆಯಿರುವುದು ಬ ...


ನಿಮ್ಮ ಅನಿಸಿಕೆ

postClick here to post your views
EPAPER
access

ಎದೆಗೆ ಬಿದ್ದ ಗಾಂಧಿ!

ದಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗಾಂಧಿಯವರು ಅಸ್ಪೃಶ್ಯರ ಪ್ರಮುಖ ಶತ ...


- ರಘೋತ್ತಮ ಹೊ.ಬ, ಚಾಮರಾಜನಗರ

ಡೆಂಗ್ ರೋಗ ಲಕ್ಷಣಗಳು ಮತ್ತು ನಿಯಂತ್ರಣ

ಪ್ರತಿ ವರ್ಷ ವಿಶ್ವದಾದ್ಯಂತ 100 ಮಿಲಿಯನ್ ಡೆಂಗ್ ರೋಗದ ಪ್ರಕರಣಗಳು ವರದಿಯಾಗುತ್ತಿದ್ದು, ನಮ್ಮ ರ ...


- ಬಿ.ಶಿವಕುಮಾರ್,ವಾರ್ತಾ ಇಲಾಖೆ, ಉಡುಪಿ

14ನೆ ವಿಧಾನಸಭೆ: ಚುರುಕಾಗಿ 5ನೆ ಸಭೆಯ ದಾಖಲೆ ದಾಟಬೇಕು

 ರಾಜ್ಯಸರಕಾರ ರಾಜ್ಯದ ಹಾಗೂ ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಉನ್ನತ ಆಡಳಿತಕ್ಕಾಗ ...


- ಬಿ.ಜಿ.ಬಣಕಾರ ಮಾಜಿ ವಿಧಾನಸಭಾಧ್ಯಕ್ಷರು

ಜನ ಬಯಸುವ ಪರ್ಯಾಯ

ನವ ಉದಾರೀಕರಣದ ಕೂಪಕ್ಕೆ ದೇಶವನ್ನು ತಳ್ಳಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕ ...


- ಸನತ್‌ಕುಮಾರ ಬೆಳಗಲಿ

Coalಯುಪಿಎನಲ್ಲಿ -ಮಿಂಚು, ಎನ್‌ಡಿಎನಲ್ಲಿ ಮೋದಿ ಸಂಚು...

ಸುಮಾರು ನಾಲ್ಕೈದು ವರ್ಷಗಳಿಂದ ಆಗಾಗ್ಗೆ ಉದುರಿಸುತ್ತಲೇ ಬಂದಿರುವ ಅಣಿಮುತ್ತನ್ನು ಈಗ ಮತ್ತ ...


- ಪಿ.ಕೆ.ಮಲ್ಲನಗೌಡರ್

ಒಬ್ಬ ಅಪೂರ್ವ ವ್ಯಕ್ತಿ ಮರೆಯಾದಾಗ...

ಆದರ್ಶದ ತಾತ್ಪರ್ಯವೆಂದರೆ: ವೈಯಕ್ತಿಕವಾಗಿ ಏನನ್ನು ಬಯಸದೇ ಸಂತೋಷವಾಗಿ ಈ ಸಮಾಜಕ್ಕೆ ದುಡಿಯುವುದು ಎಂಬ ...


- ಶೂದ್ರ ಶ್ರೀನಿವಾಸ್

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬ ...


- ಬಿ.ಎಂ.ಬಶೀರ್

ರಾಜಕೀಯ ಪಕ್ಷಗಳ ಆತ್ಮವಿಮರ್ಶೆ ಅಗತ್ಯ

ಕೇಂದ್ರ ಅಥವಾ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ರಾಷ್ಟ್ರಪತಿಗಳು ಮತ್ತು ರ ...


- ನಾ ದಿವಾಕರ್