ಅಂಕಣ

mail-img print-img

ಇವರಿಗೆ ನೈತಿಕತೆಯೇ ಇಲ್ಲವೇ ?

ಬುಧವಾರ - ಜುಲೈ -04-2012

ಒಂದು ಕಾಲದಲ್ಲಿ ಹೈಕಮಾಂಡ್ ಎಂದರೆ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯ ಪದವಾಗಿತ್ತು. ಎಲ್ಲ ಪಕ್ಷಗಳಲ್ಲೂ ಕೇಂದ್ರ ನಾಯಕತ್ವವನ್ನು ಹೀಗೆಯೇ ಸಂಬೋಧಿಸುತ್ತಿದ್ದರೂ ಇಂದಿರಾಗಾಂಧಿಯವರ ಆಡಳಿತಾವಧಿಯಲ್ಲಿ ಹೈಕಮಾಂಡ್ ಸಂಸ್ಕೃತಿ ಒಂದು ರಾಜಕೀಯ ವಿದ್ಯಮಾನವಾಗಿ ರೂಪುಗೊಂಡಿದ್ದು ಮಾತ್ರ ಸತ್ಯ. ರಾಷ್ಟ್ರಮಟ್ಟದಲ್ಲಿ ಒಂದು ಪಕ್ಷವಾಗಿ ಕಾರ್ಯನಿರ್ವಹಿಸುವಾಗ ರಾಜ್ಯಗಳ ಘಟಕಗಳನ್ನು ನಿಯಂತ್ರಿಸುವುದು ಅನಿವಾರ್ಯವೇ ಆದರೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂಸ್ಕೃತಿಯಲ್ಲಿ ರಾಜ್ಯ ಘಟಕಗಳಿಗೆ ಅಥವಾ ಎರಡನೆ ಹಂತದ ನಾಯಕರುಗಳಿಗೆ ಉಸಿರೆತ್ತಲೂ

ಒಂದೆಡೆ ಬರಗಾಲ, ಮೇವಿನ ಕೊರತೆ, ನೀರಿನ ಕೊರತೆ, ಕುಡಿಯುವ ನೀರಿಗೆ ಹಾಹಾಕಾರ, ಬೆಳೆ ನಾಶ, ಬಣಗುಡುತ್ತಿರುವ ಕೃಷಿ ಭೂಮಿ, ಇವೇ ಮುಂತಾದ ಸಮಸ್ಯೆಗಳು ಜನಸಾಮಾನ್ಯರನ್ನು ಕಂಗೆಡಿ ಸುತ್ತಿದ್ದರೆ ಮತ್ತೊಂದೆಡೆ ರೋಮ್ ಸಾಮ್ರಾಜ್ಯದ ನೀರೋಗಳಂತೆ ಬಿಜೆಪಿ ನಾಯಕರು ಅಧಿಕಾರ ಲಾಲಸೆ ಯಲ್ಲಿ ಪಿಟೀಲು ಬಾರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಈ ಅಸಹ್ಯಕರ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಗಾದಿಗೆ ಪೈಪೋಟಿ ನಡೆದಿದ್ದು ಜಾತಿ ರಾಜಕಾರಣದ ಪರಾಕಾಷ್ಠೆಯನ್ನು ಜನತೆ ವೀಕ್ಷಿಸುತ್ತಿ ದ್ದಾರೆ. ಲಿಂಗಾಯತ-ಒಕ್ಕಲಿಗ-ಕುರುಬ ಸಮುದಾಯ ಗಳನ್ನು ಹೊರತುಪಡಿಸಿ ಅನ್ಯರಿಗೆ ಆಡಳಿತ ನಡೆಸಲು ಅವಕಾಶವೇ ಇಲ್ಲದಂತೆ ಜಾತಿ ಸಮಾವೇಶಗಳನ್ನು ನಡೆಸಿ, ಮಠೋದ್ಯಮಿಗಳ ಆಶೀರ್ವಚನ ಪಡೆದಿರುವ ರಾಜಕೀಯ ನಾಯಕರುಗಳು ಪಕ್ಷ ಬೇಧವನ್ನು ಮರೆತು ಜಾತಿ ಪ್ರಜ್ಞೆಯನ್ನು ಬೆಳೆಸುತ್ತಿರುವುದು ಪ್ರಜಾಸತ್ತೆಗೆ ಮಾರಕವಾದ ಸಂಗತಿಯಾಗಿದೆ.

ಅಧಿಕಾರವಿರಲಿಲ್ಲ. ಸಚಿವ ಸಂಪುಟ ವಿಸ್ತರಣೆಯಿಂದ ಹಿಡಿದು, ರಾಜ್ಯಪಾಲರ ನೇಮಕದವರೆಗೆ ರಾಜ್ಯ ಘಟಕಗಳು ಹೈಕಮಾಂಡ್ ಆದೇಶ ಪಾಲಿಸುವುದು ಅನಿವಾರ್ಯವಾಗಿತ್ತು. ಇಂದಿರಾ ನಂತರದಲ್ಲಿ ಕಾಂಗ್ರೆಸ್‌ನ ಪ್ರಾಬಲ್ಯ ಕ್ಷೀಣಿಸಿ ಪ್ರಾದೇಶಿಕ ಪಕ್ಷಗಳು ಹೆಚ್ಚು ಜನಪ್ರಿಯತೆ ಗಳಿಸತೊಡಗಿದ ನಂತರ ಹೈಕಮಾಂಡ್ ಸಂಸ್ಕೃತಿಯೂ ತನ್ನ ಮೊನಚನ್ನು ಕಳೆದುಕೊಂಡಿತ್ತು. ಕಾರಣ ಅತೃಪ್ತ ರಾಜಕಾರಣಿಗಳಿಗೆ ಅವಕಾಶಗಳು ವಿಪುಲವಾಗಿದ್ದವು.

ಈ ಕಾಲಘಟ್ಟದಲ್ಲಿ ಹೊಸ ಭರವಸೆಯೊಂದಿಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂಸ್ಕೃತಿಯನ್ನು ವಿರೋಧಿಸುತ್ತಲೇ ಉದಯಿಸಿದ ಬಿಜೆಪಿ ತನ್ನ ಜನಸಂಘದ ಮುಖವಾಡವನ್ನು ಕಳಚಿ ಹೊಸ ಚಹರೆಯೊಂದಿಗೆ ವಿಭಿನ್ನವಾದ ಪಕ್ಷವಾಗಿ ಹೊರಹೊಮಿತ್ತು. ವಿಡಂಬನೆಯೋ ವಿಪರ್ಯಾಸವೋ ಕಳೆದ ಮೂರು ದಶಕಗಳಲ್ಲಿ (ಬಿಜೆಪಿ ಜನಿಸಿದ್ದು 1982ರಲ್ಲಿ) ಅಧಿಕಾರದ ಸವಿಯುಂಡಿರುವ ಬಿಜೆಪಿ ಕಾಂಗ್ರೆಸ್‌ಗಿಂತಲೂ ಪ್ರಬಲವಾದ ಹೈಕಮಾಂಡ್ ಸಂಸ್ಕೃತಿಯನ್ನು ಸೃಷ್ಟಿಮಾಡಿದೆ. ಇದು ಕರ್ನಾಟಕದ ರಾಜಕಾರಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಬಿಜೆಪಿಯನ್ನು ನಿಯಂತ್ರಿಸುವ ಸೂಪರ್ ಹೈಕಮಾಂಡ್, ಸಂಘಪರಿವಾರವನ್ನು ಬದಿಗಿಟ್ಟು ನೋಡಿದರೂ ಬಿಜೆಪಿ ಕೇಂದ್ರ ನಾಯಕತ್ವ ಕರ್ನಾಟಕದ ರಾಜಕಾರಣದಲ್ಲಿ ವಹಿಸುತ್ತಿರುವ ಪಾತ್ರವನ್ನು ನೋಡಿದರೆ 70ರ ದಶಕದ ಕಾಂಗ್ರೆಸ್ ಆಡಳಿತ ನೆನಪಾಗುತ್ತದೆ.

ಭಾರತದ ರಾಜಕಾರಣದಲ್ಲಿ ಕೆಸರಿನ ರಾಡಿ ಸೃಷ್ಟಿಯಾಗಿದೆ, ಈ ಕೆಸರಿನಲ್ಲಿ ಅರಳಿದ ಕಮಲದಂತೆ ಭಾರತೀಯ ಜನತಾ ಪಕ್ಷ ಒಂದು ವಿಭಿನ್ನ ಪಕ್ಷವಾಗಿ ‘ಪಾರ್ಟಿ ವಿತ್ ಎ ಡಿಫರೆನ್ಸ್’ ಎಂಬ ಘೋಷಣೆಯೊಂದಿಗೆ ಹುಟ್ಟಿಕೊಂಡಿತ್ತು. ವಾಜಪೇಯಿಯವರ ಸೌಮ್ಯ ಮುಖವಾಡದ ಹಿಂದೆ ಅಡ್ವಾಣಿಯವರ ಸಮರಶೀಲತೆ, ಜೋಷಿ, ಉಮಾಭಾರತಿ ಮುಂತಾದವರ ಧೂರ್ತ ಮುಖಗಳನ್ನು ಹೊತ್ತು ದೇಶದ ರಾಜಕಾರಣದಲ್ಲಿ ಸುಭದ್ರ ನೆಲೆ ಸ್ಥಾಪಿಸಿದ ಬಿಜೆಪಿ, ತನ್ನ ಫ್ಯಾಸಿಸ್ಟ್ ಸ್ವರೂಪವನ್ನು ಬಗಲಲ್ಲಿ ಹೊತ್ತುಕೊಂಡೇ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನೆಲೆ ಕಂಡುಕೊಂಡಿತ್ತು.

ಈ ತನ್ನ ಹೊಂದಾಣಿಕೆಯ ಲಕ್ಷಣಗಳಿಂದಲೇ ಅನ್ಯ ಪಕ್ಷಗಳ ಮತ್ತು ಸೆಕ್ಯುಲರ್ ನಾಯಕರುಗಳ ಬೆಂಬಲ ಗಳಿಸುವುದರಲ್ಲೂ ಯಶಸ್ವಿಯಾಗಿತ್ತು. ಆದರೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂಸ್ಕೃತಿ ಮಾತ್ರವಲ್ಲದೆ ಇತರ ರಾಜಕೀಯ ತಂತ್ರಗಳನ್ನೂ ಯಥಾವತ್ತಾಗಿ ಅನುಸರಿಸಿದ ಬಿಜೆಪಿ ಇಂದು ಅಧಿಕಾರ ರಾಜಕಾರಣದ ಹೊಸ ಆಯಾಮವನ್ನೇ ಸೃಷ್ಟಿಸಿರುವುದು ಕರ್ನಾಟಕದಲ್ಲಿ ಸ್ಪಷ್ಟವಾಗಿ ನಿರೂಪಿತವಾಗಿದೆ.

ದಕ್ಷಿಣ ಭಾರತದ ಪ್ರಥಮ ಸರಕಾರವನ್ನು ಕರ್ನಾಟಕದಲ್ಲಿ ಸ್ಥಾಪಿಸಿದಾಗ, ನಿಚ್ಚಳ ಬಹುಮತ ಗಳಿಸಿದ್ದ ವಿಶ್ವಾಸದಲ್ಲಿ 20 ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿ ರಾಜ್ಯವನ್ನು ‘‘ಗುಜರಾತ್ ಮಾಡುತ್ತೇವೆ, ಸಿಂಗಾಪುರ ಮಾಡುತ್ತೇವೆ ಎಂದು ಘೋಷಿಸಿದ್ದ ಮುಖ್ಯಮಂತ್ರಿಗಳು ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿ ಎರಡನೆ ಬಾರಿಗೆ ಜೈಲುವಾಸ ಅನುಭವಿಸಲು ಸಿದ್ಧರಾಗುತ್ತಿದ್ದಾರೆ. ಮೂರೂವರೆ ವರ್ಷಗಳ ನಂತರ ಈ ರಾಜ್ಯ ಗುಜರಾತ್ ಆಗುವ ಬದಲು ಗುಜರಿ ರಾಜ್ಯವಾಗಿದೆ. ಇಲ್ಲಿ ಶಾಸಕರಿಂದ ಸಂಸದರವರೆಗೆ, ವಿಧಾನಸಭೆಯಿಂದ ವಿಧಾನಪರಿಷತ್‌ವರೆಗೆ ಎಲ್ಲವೂ ಮೌಲ್ಯಾಧಾರಿತವೇ, ಮಾರುಕಟ್ಟೆ ಮೌಲ್ಯಾಧಾರಿತ. ಎಲ್ಲವೂ ಬಿಕರಿಗಿವೆ. ಮತಗಳನ್ನು ಖರೀದಿಸುವ ಬದಲು ಮತದಾರರನ್ನೇ ಖರೀದಿಸುವ ಸಂಸ್ಕೃತಿ ಕೇವಲ ಶಾಸಕಾಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಸಾಹಿತ್ಯ ಪರಿಷತ್ ಚುನಾವಣೆಗಳಿಗೂ ವ್ಯಾಪಿಸಿದೆ.

ರಾಜ್ಯವನ್ನು ಸುಂದರ ವಿಹಂಗಮ ಸಿಂಗಾಪುರವನ್ನಾಗಿ ಮಾಡಲು ಹೊರಟ ಮಹಾರಥಿಗಳು ರಾಜ್ಯವನ್ನು ಸಿಂಗಲೀಕಪುರವನ್ನಾಗಿ ಮಾಡಿದ್ದಾರೆ. ರಾಜ್ಯದ ಈಗಿನ ಪರಿಸ್ಥಿತಿಯನ್ನು ನೋಡಿದರೆ ಆಳ್ವಿಕರಿಗೆ ಆಳುವ ಇಚ್ಛಾಶಕ್ತಿ, ಸಾಮರ್ಥ್ಯವೇ ಇಲ್ಲವೇನೋ ಎನ್ನುವಂತಾಗಿದೆ.
 ಯಡಿಯೂರಪ್ಪಸ್ಥಾನವನ್ನು ಅಲಂಕರಿಸಿದ ಸದಾನಂದಗೌಡರು ತಮ್ಮ ಹತ್ತು ತಿಂಗಳ ಅಧಿಕಾರಾವಧಿಯಲ್ಲಿ ಭಿನ್ನಮತವನ್ನು ಶಮನಗೊಳಿಸುವುದರಲ್ಲೇ ಕಾಲ ಕಳೆದಿದ್ದು, ಸಚಿವ ಸಂಪುಟವನ್ನೂ ವಿಸ್ತರಿಸದೆ, ಆಡಳಿತ ಯಂತ್ರವನ್ನೇ ನಿಷ್ಕ್ರಿಯಗೊಳಿಸಿದ್ದಾರೆ. ಹತ್ತೊಂಬತ್ತು ಇಲಾಖೆಗಳನ್ನು ತಮ್ಮ ಮಗ್ಗುಲಲ್ಲಿ ಹೊತ್ತುಕೊಂಡು ಯಾವ ಮುಖ್ಯಮಂತ್ರಿ ತಾನೇ ದಕ್ಷ ಆಡಳಿತ ನೀಡಲು ಸಾಧ್ಯ. ಅದರಲ್ಲೂ ಅಧಿಕಾರವನ್ನು ಉಳಿಸಿಕೊಳ್ಳಲು ಒಂದು ಬಣ ಹೆಣಗಾಡುತ್ತಿದ್ದರೆ, ಕಸಿದುಕೊಳ್ಳಲು ಮತ್ತೊಂದು ಬಣ ಶ್ರಮಿಸುತ್ತಿದೆ. ಈ ಹಗ್ಗ ಜಗ್ಗಾಟದಲ್ಲಿ ಜಾತಿ ರಾಜಕಾರಣ ಒಂದು ಸ್ಪಷ್ಟ ಆಯಾಮವನ್ನು ಪಡೆದುಕೊಳ್ಳುತ್ತಿದ್ದು ಗುಜರಾತ್ ಆಗಬೇಕಿದ್ದ ಕರ್ನಾಟಕ ಬಿಹಾರ ಆಗುತ್ತಿದೆ. ಆಗುತ್ತಿರುವುದೇನು ಆಗಿಯೇ ಹೋಗಿದೆ.

ಒಂದೆಡೆ ಬರಗಾಲ, ಮೇವಿನ ಕೊರತೆ, ನೀರಿನ ಕೊರತೆ, ಕುಡಿಯುವ ನೀರಿಗೆ ಹಾಹಾಕಾರ, ಬೆಳೆ ನಾಶ, ಬಣಗುಡುತ್ತಿರುವ ಕೃಷಿ ಭೂಮಿ, ಇವೇ ಮುಂತಾದ ಸಮಸ್ಯೆಗಳು ಜನಸಾಮಾನ್ಯರನ್ನು ಕಂಗೆಡಿಸುತ್ತಿದ್ದರೆ ಮತ್ತೊಂದೆಡೆ ರೋಮ್ ಸಾಮ್ರಾಜ್ಯದ ನೀರೋಗಳಂತೆ ಬಿಜೆಪಿ ನಾಯಕರು ಅಧಿಕಾರ ಲಾಲಸೆಯಲ್ಲಿ ಪಿಟೀಲು ಬಾರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಈ ಅಸಹ್ಯಕರ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಗಾದಿಗೆ ಪೈಪೋಟಿ ನಡೆದಿದ್ದು ಜಾತಿ ರಾಜಕಾರಣದ ಪರಾಕಾಷ್ಠೆಯನ್ನು ಜನತೆ ವೀಕ್ಷಿಸುತ್ತಿದ್ದಾರೆ. ಲಿಂಗಾಯತ-ಒಕ್ಕಲಿಗ- ಕುರುಬ ಸಮುದಾಯಗಳನ್ನು ಹೊರತುಪಡಿಸಿ ಅನ್ಯರಿಗೆ ಆಡಳಿತ ನಡೆಸಲು ಅವಕಾಶವೇ ಇಲ್ಲದಂತೆ ಜಾತಿ ಸಮಾವೇಶಗಳನ್ನು ನಡೆಸಿ, ಮಠೋದ್ಯಮಿಗಳ ಆಶೀರ್ವಚನ ಪಡೆದಿರುವ ರಾಜಕೀಯ ನಾಯಕರುಗಳು ಪಕ್ಷ ಭೇದವನ್ನು ಮರೆತು ಜಾತಿ ಪ್ರಜ್ಞೆಯನ್ನು ಬೆಳೆಸುತ್ತಿರುವುದು ಪ್ರಜಾಸತ್ತೆಗೆ ಮಾರಕವಾದ ಸಂಗತಿಯಾಗಿದೆ.

ಈಗ ಬಿಜೆಪಿ ಹೈಕಮಾಂಡ್ ರಂಗಪ್ರವೇಶ ಮಾಡಲಿದ್ದು ಈ ಮೂರೂ ಜಾತಿಗಳ ನಾಯಕರುಗಳ, ಶೆಟ್ಟರ್ (ಅಂದರೆ ಯಡಿಯೂರಪ್ಪ), ಈಶ್ವರಪ್ಪ ಮತ್ತು ಸದಾನಂದಗೌಡರ ಪೈಕಿ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಿದೆ. ಇಲ್ಲಿ ಆಯ್ಕೆ ಇರುವುದು ಜಾತಿಗಳದ್ದೇ ಹೊರತು ಸಮರ್ಥ, ಅರ್ಹ ನಾಯಕರದ್ದಲ್ಲ. ಮುಖ್ಯಮಂತ್ರಿಯ ಆಯ್ಕೆಯ ಮಾನದಂಡ ಜನಾನುರಾಗಿ ನೀತಿಗಳಲ್ಲ, ಜನರನ್ನು ಒಡೆದಾಳುವ ಜಾತಿಗಳಾಗಿರುವುದು ಪ್ರಜಾತಂತ್ರ ವ್ಯವಸ್ಥೆಯ ದುರಂತ. ಈ ದುರಂತಕ್ಕೆ ಅಧಿಕೃತ ಮೊಹರು ಒತ್ತಿರುವುದು ಬಿಜೆಪಿಯ ಕೊಡುಗೆ. ಭ್ರಷ್ಟ, ಅಕ್ರಮ, ಅಸಮರ್ಥ ಆಡಳಿತದ ವಿರಾಟ್ ಸ್ವರೂಪವನ್ನು ಪ್ರಜೆಗಳಿಗೆ ಪ್ರದರ್ಶಿಸಿರುವ ಬಿಜೆಪಿ ಆಳುವ ಅರ್ಹತೆಯನ್ನೇ ಕಳೆದುಕೊಂಡಿದೆ. 20 ವರ್ಷ ಇರಲಿ ಒಂದು ದಿನವೂ ಅಧಿಕಾರದಲ್ಲಿರಲು ಅರ್ಹವಲ್ಲದ ಬಿಜೆಪಿ ನೈತಿಕತೆ ಇದ್ದರೆ ಜನರ ಬಳಿ ಹೋಗುವುದು ಒಳಿತು.
ಕೃಪೆ: ಅವಧಿ


Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮೊದಲ ಯುದ್ಧದಲ್ಲಿ ಗೆದ್ದ ಸಿದ್ದರಾಮಯ್ಯ

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮೊದಲ ಯುದ್ಧವನ್ನು ಗೆದ್ದಿದ್ದಾರೆ. ಸರಕಾರ ಸುಸೂತ್ರವಾಗಿ ನಡೆಯ ಬೇಕೆಂದಿದ್ದರೆ ಈ ಯುದ್ಧವನ್ನು ಗೆಲ್ಲಲೇ ಬೇಕಾಗ ...


ನಿಮ್ಮ ಅನಿಸಿಕೆ

postClick here to post your views
EPAPER
access

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್

ಅಕ್ಷರ ಸೇವೆಯಿಂದ ಜನಸೇವೆಗೆ;ತೆಂಕಮಿಜಾರಿನ ಮುತ್ತು

ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...


- ಪ್ರೇಮಶ್ರೀ ಕಲ್ಲಬೆಟ್ಟು

ನಾನು ಮತ್ತು ದೇವರು

 ರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...


- ಸುನೀಲ್ ರಾವ್

ಬಿಟ್ಟಿ ಅಂಕದ ಪಿಯುಸಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಬುಟ್ಟಿಗೆಸೆ!

 ಮಾನ್ಯರೆ,

ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...


- -‘ಮಾತರಿ’ ಸಾಗ