ಅಂಕಣ

mail-img print-img

ಅಭಿವೃದ್ಧಿಯ ಪುರುಷಾಧಿಪತ್ಯ!

ಶುಕ್ರವಾರ - ಜುಲೈ -06-2012

ಭಾರತದ ರಾಷ್ಟ್ರೀಯ ಕ್ರೈಮ್ ರೆಕಾರ್ಡ್ ಬ್ಯೂರೋದ ವಾರ್ಷಿಕ ವರದಿ ಹೊರಬಿದ್ದಿದೆ. ಈ ವರ್ಷವೂ ಭಾರತದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಿದೆ. ಅದರಲ್ಲೂ ‘ಅಭಿವೃದ್ಧಿ ಶೀಲ’ ಭಾರತದಲ್ಲಿ ಸಮಾಜದ ದುರ್ಬಲರ ಮೇಲೆ ನಡೆಯುತ್ತಿರುವ ಅಪರಾಧಗಳ ಸಂಖ್ಯೆ ಹಿಂದೆಂ ದಿಗಿಂತಲೂ ಈ ಅವಧಿಯಲ್ಲಿ ಹೆಚ್ಚುತ್ತಿರುವು ದನ್ನು ಈ ವರದಿಯು ಅಂಕಿ ಅಂಶಗಳ ಸಮೇತ ಸಾಬೀತು ಪಡಿಸುತ್ತಿದೆ. ಉದಾಹರಣೆಗೆ ಈ ವರ್ಷ ದೇಶಾದ್ಯಂತ ಮಹಿಳೆಯರ ಮೇಲೆ 2, 28,650 ಅಪರಾಧಗಳು ಎಸಗಲ್ಪಟ್ಟಿವೆ. ಹೋದ ವರ್ಷ ಈ ಸಂಖ್ಯೆ 2,13, 585 ಇತ್ತು. ಅಂದರೆ 2011ರಲ್ಲಿ 2010ಕ್ಕಿಂತ ಶೇ.7.1ರಷ್ಟು ಅಂದರೆ 15,000 ಹೆಚ್ಚು ಅಪರಾಧಗಳು ಎಸಗಲ್ಪಟ್ಟಿವೆ. ಅಂದರೆ ಈ ದೇಶದ ಹೆಣ್ಣು ಮಕ್ಕಳು ಹೋದ ವರ್ಷಕ್ಕಿಂತ ಈ ವರ್ಷ ದಿನಕ್ಕೆ ನಾಲ್ಕು ಹೆಚ್ಚು ಅತ್ಯಾಚಾರ ಮತ್ತು ಅನ್ಯಾಯಗಳಿಗೆ ಒಳಗಾ ಗಿದ್ದಾರೆ. ಈ ಅಪರಾಧಗಳು ಸಹ ಯಾವ ಬಗೆಯವು ಮತ್ತು ಎಲ್ಲಿ ಸಂಭವಿಸುತ್ತಿವೆ ಎಂಬುದನ್ನು ಗಮನಿಸಿದರೆ ನಮ್ಮ ದೇಶದ ಅಭಿವೃದ್ಧಿಯ ಕ್ರೌರ್ಯದ ಸ್ವರೂಪ ಮತ್ತು ಅದರ ಬರ್ಬರತೆ ಅರ್ಥವಾಗುತ್ತದೆ. ಈವರೆಗೆ ಕಮ್ಯುನಿಷ್ಟರು ಆಳಿದ ಮತ್ತು ಈಗ ಮಹಿಳಾ ಮುಖ್ಯಮಂತ್ರಿ ಆಳುತ್ತಿರುವ ಪಶ್ಚಿಮ ಬಂಗಾಳದಲ್ಲಿ ಈ ವರ್ಷ ದೇಶದಲ್ಲೇ ಅತಿ ಹೆಚ್ಚು ಹೆಂಗಸರ ಮೇಲಿನ ಅಪರಾಧಗಳು ದಾಖಲಾಗಿವೆ.

2011ರಲ್ಲಿ ದಾಖಲಾದ ಅಪರಾಧಗಳ ಸಂಖ್ಯೆ 29, 133. ಅಂದರೆ ದಿನಕ್ಕೆ ನೂರು!! ಅದರ ನಂತರದ ಸ್ಥಾನ ಅತ್ಯಂತ ಮುಂದುವರಿದ ರಾಜ್ಯಗಳಲ್ಲಿ ಒಂದೆಂಬ ಹೆಗ್ಗಳಿಕೆ ಹೊಂದಿರುವ ಆಂಧ್ರಪ್ರದೇಶದ್ದು, 28,246. ನಂತರದಲ್ಲಿ ಉತ್ತರಪ್ರದೇಶ, 223, 639. ಕಳೆದ 5 ವರ್ಷಗಳ ಕಾಲ ದಲಿತ ಮಹಿಳೆ ಮಾಯಾವತಿಯೇ ರಾಜ್ಯವಾಳಿದರೂ ಮಹಿಳೆಯರ ಮೇಲಿನ ಅದರಲ್ಲೂ ದಲಿತ ಮತ್ತು ಬಡ ಮಹಿಳೆಯರ ಮೇಲಿನ ದೌರ್ಜನ್ಯಗಳ ಸಂಖ್ಯೆಯೇನೂ ಕಡಿಮೆ ಯಾಗಲಿಲ್ಲ. ನಂತರದ ಸ್ಥಾನದಲ್ಲಿ ರಾಜ ಸ್ಥಾನ ಮತ್ತು ಪಂಜಾಬ್‌ಗಳಿದ್ದರೂ ಹತ್ತರ ಒಳಗಿನ ಸ್ಥಾನದಲ್ಲಿ ಅತ್ಯಂತ ಮುಂದುವರಿದ ರಾಜ್ಯಗಳಾದ ಕರ್ನಾಟಕ, ಗುಜರಾತ್ ಮತ್ತು ಮಹಾರಾಷ್ಟ್ರಗಳು ಬರುತ್ತವೆ.

ಕರ್ನಾಟಕದಲ್ಲಂತೂ ಕಳೆದ ವರ್ಷ 8807 ಅಪರಾಧಗಳು ಸಂಭವಿಸಿದ್ದರೆ ಈ ವರ್ಷ 9594 ಅಪರಾಧಗಳು ಸಂವಿಸಿವೆ. ಅಂದರೆ 700ಕ್ಕಿಂತ ಹೆಚ್ಚು ಅಪರಾಧಗಳು ಸಂಭವಿ ಸಿವೆ. ಹೀಗಾಗಿ ದೇಶದಲ್ಲಿ ಹೆಣ್ಣು ಮಕ್ಕಳ ವಿರುದ್ಧ ಅಪರಾಧಗಳ ಏರಿಕೆಯ ಪ್ರಮಾಣ 7.1ರಷ್ಟಿದ್ದರೆ ಕರ್ನಾಟಕದಲ್ಲಿ ಅದು ಶೇ.10ರಷ್ಟು ಹೆಚ್ಚಾಗಿದೆ. ಅದೇ ರೀತಿ ಮುಂದುವರೆದ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತುಗಳಲ್ಲೂ ಒಟ್ಟಾರೆ ಹೆಣ್ಣುಮಕ್ಕಳ ಮೇಲಿನ ಅಪರಾಧಗಳ ಏರಿಕೆಯ ಪ್ರಮಾಣ ಶೇ.10ಕ್ಕಿಂತ ಹೆಚ್ಚಿದೆ. ಹೆಂಗಸರ ಮೇಲಿನ ಅಪರಾಧಗಳು ಯಾವ ಯಾವ ನಗರಗಳಲ್ಲಿ ಸಂಭವಿಸಿವೆ ಎಂಬುದನ್ನು ಗಮನಿಸಿದರೆ ನಮ್ಮ ಅಭಿವೃದ್ಧಿಶೀಲ ಸಮಾಜದ ಅಂತರಂಗ ಇನ್ನಷ್ಟು ಸ್ಪಷ್ಟವಾಗುತ್ತದೆ.

10 ಲಕ್ಷ ಕ್ಕಿಂತ ಹೆಚ್ಚು ಜನಸಂಖ್ಯೆ ಹೆಚ್ಚಿರುವ 53 ಬೃಹತ್ ನಗರಗಳನ್ನು ಈ ಅಧ್ಯಯನಕ್ಕಾಗಿ ಆಯ್ದುಕೊಂಡು ಕ್ರೈಮ್ ರೆಕಾರ್ಡ್ ಬ್ಯೂ ರೋ ಅಂಕಿಅಂಶಗಳನ್ನು ಒದಗಿಸಿದೆ. ಅದರ ಪ್ರಕಾರ ಇಡೀ ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ಬಹುಪಾಲು ಎಲ್ಲಾ ಬಗೆಯ ಅಪರಾಧಗಳು ಅತಿ ಹೆಚ್ಚು ಸಂಭವಿಸಿರುವುದು ದೇಶದ ರಾಜ ಧಾನಿ, ಈ ದೇಶದ ಅಭಿವೃದ್ಧಿಯ ಶೋಕೇಸ್ ಆಗಿರುವ ನವದೆಹಲಿಯಲ್ಲಿ. 2010ರಲ್ಲಿ ದೆಹಲಿ ಯಲ್ಲಿ ಹೆಂಗಸರ ಮೇಲೆ 3886 ಅಪರಾಧಗಳು ಸಂಭವಿಸಿದ್ದರೆ 2011ರಲ್ಲಿ 4489 ಅಪರಾಧಗಳು ಸಂಭವಿಸಿವೆ. ಅಂದರೆ ದೆಹಲಿ ನಗರದಲ್ಲಿ ಒಂದಲ್ಲ ಒಂದು ಕಡೆ ದಿನಕ್ಕೆ ಹತ್ತು ಬಗೆಯ ಹಿಂಸೆಗಳಿಗೆ ರಾಜಧಾನಿಯ ಹೆಂಗಸು ಒಳಗಾಗುತ್ತಿದ್ದಾಳೆ.

ಸ್ತ್ರೀ ಪೀಡನೆ ಮತ್ತು ಪುರುಷಾಹಂಕಾರದಲ್ಲಿ ಅತ್ಯಂತ ಪ್ರಗತಿಪರ ಮತ್ತು ಅತಿಹೆಚ್ಚು ಅಭಿವೃದ್ಧಿ ಹೊಂದಿದ ಮಾಡರ್ನ್ ನಗರವಾದ ಬೆಂಗ ಳೂರು ದೆಹಲಿಯ ನಂತರದಲ್ಲಿ ಎರಡನೇ ಸ್ಥಾನದಲ್ಲಿದೆ. 2010ರಲ್ಲಿ ಬೆಂಗಳೂರಿನಲ್ಲಿ 1570 ಅಪ ರಾಧಗಳು ಸಂಭವಿಸಿದ್ದರೆ 2011ರಲ್ಲಿ 1890 ಅಪರಾಧಗಳು ಸಂಭವಿಸಿವೆ. ನಂತರದ ಸ್ಥಾನದಲ್ಲಿ ಹೈದರಾಬಾದ್, ಮತ್ತೊಂದು ಐಟಿ ನಗರ, ಮುಂಬೈ, ಹೊಸದಾಗಿ ಐಟಿ ಕಿರೀಟ ಪಡೆದು ಕೊಳ್ಳುತ್ತಿರುವ ಕೋಲ್ಕತ್ತಾ, ಕಾನ್ಪುರ, ಆಂಧ್ರದ ಹೆಮ್ಮೆಯ ನಗರಗಳಾದ ವಿಜಯವಾಡ ಮತ್ತು ವಿಶಾಖಪಟ್ಟಣಗಳು ನಂತರದ ಮಹಿಳೆಯರ ಮೇಲಿನ ಅತಿ ಹೆಚ್ಚು ಅಪರಾಧ ನಡೆಯುತ್ತಿರುವ ಸ್ಥಾನಗಳನ್ನು ಪಡೆದುಕೊಳ್ಳುತ್ತವೆ.

ವಾಸ್ತವವಾಗಿ ಬಿಹಾರ ಒಟ್ಟಾರೆ ಹೆಣ್ಣುಮಕ್ಕಳ ಮೇಲಿನ ಅಪ ರಾಧಗಳ ಸಂಖ್ಯೆಯಲ್ಲಿ ಹಿಂದೆ ಇದ್ದರೂ ನಿತೀಶ್ ಕುಮಾರ್ ನೇತೃತ್ವದಲ್ಲಿ ಅಲ್ಲಿ ಸಂಭವಿಸುತ್ತಿರುವ ಮೇಲ್ ಮಧ್ಯಮವರ್ಗ ಕೇಂದ್ರಿತ ಅಭಿವೃದ್ಧಿ ಮಾದರಿಯಲ್ಲಿ ಬೆಳೆದಿರುವ ಪಾಟ್ಣಾ ಸಹ ಹೆಂಗ ಸರ ಮೇಲೆ ಹೆಚ್ಚು ಅಪರಾಧ ನಡೆಯುವ ನಗರ ಗಳಲ್ಲಿ ಮೊದಲ ಐದರಲ್ಲಿ ಸ್ಥಾನ ಪಡೆದು ಕೊಂಡಿದೆ. ವಾಸ್ತವವಾಗಿ ಒಟ್ಟಾರೆಯಾಗಿ ದೇಶದಲ್ಲಿ ಮತ್ತು ಈ ನಗರಗಳಲ್ಲಿ ಯಾವ ಬಗೆಯ ಅಪರಾಧಗಳು ಹೆಚ್ಚುತ್ತಿವೆ ಮತ್ತು ಯಾವುದು ಹೆಚ್ಚು ಕಡಿಮೆಯಾ ಗುತ್ತಿವೆ ಎಂದು ಅರ್ಥಮಾಡಿಕೊಂಡರೂ ಈ ಅಭಿವೃದ್ಧಿ ಮಾದರಿಯ ಸಾಮಾಜಿಕ ಪರಿಣಾ ಮದ ಸ್ವರೂಪ ಅರ್ಥವಾಗುತ್ತದೆ.

ಒಟ್ಟಾರೆಯಾಗಿ ಬಾಲೆಯರನ್ನು ವೇಶ್ಯಾವಾಟಿಕೆಗೆ ತಳ್ಳುವ, ಅಪ ಹರಣ ಮಾಡಿ ಚಿತ್ರಹಿಂಸೆಗೆ ಗುರಿ ಮಾಡುವ, ವರದಕ್ಷಿಣೆಗೆ ಪೀಡಿಸುವ ಮತ್ತು ಸಾಯಿಸುವ ಹಾಗೂ ಲೈಂಗಿಕ ಬಲಾತ್ಕಾರ ಮಾಡುವ ಅಪ ರಾಧಗಳ ಸಂಖ್ಯೆ ಈ ವರ್ಷವೂ ಅತಿ ಹೆಚ್ಚು ಸಂಭವಿಸಿದೆ. ಉದಾಹರಣೆಗೆ ಬಾಲೆಯರನ್ನು ವೇಶ್ಯಾವಾಟಿಕೆಗೆ ದೂಡುವ ಅಪರಾಧಗಳ ಪ್ರಮಾಣ ಶೇ.122ರಷ್ಟು ಹೆಚ್ಚಿದ್ದರೆ, ಅಪಹರಣದ ಪ್ರಮಾಣ ಶೇ.19.4ರಷ್ಟು, ವರದಕ್ಷಿಣೆ ಕಿರು ಕುಳದ ಸಂಖ್ಯೆ ಶೇ.27ರಷ್ಟು ಹೆಚ್ಚಿದ್ದರೆ ವರದಕ್ಷಿಣೆ ಸಾವಿನ ಪ್ರಮಾಣ ಶೇ.2.7ರಷ್ಟು ಹೆಚ್ಚಿವೆ. ಒಟ್ಟಾರೆ ಲೈಂಗಿಕ ಬಲಾತ್ಕಾರದ ಸಂಖ್ಯೆ ಶೇ.9.2 ರಷ್ಟು ಹೆಚ್ಚಿದೆ. ವರದಕ್ಷಿಣೆ ಕಿರುಕುಳದ ಪ್ರಮಾಣದಲ್ಲಿ ಅತಿ ಹೆಚ್ಚು ಕೋಟ್ಯಾಧೀಶರನ್ನು ಮತ್ತು ಎನ್‌ಆರ್‌ಐ ಗಳನ್ನು ಹೊಂದಿರುವ ಹೆಗ್ಗಳಿಕೆ ಇರುವ ಆಂಧ್ರ ಪ್ರದೇಶ ಮೊದಲ ಸ್ಥಾನದಲ್ಲಿದೆ.

ಒಟ್ಟಾರೆ ಭಾರತದಲ್ಲಿ 2011ರಲ್ಲಿ 6619 ವರದಕ್ಷಿಣೆ ಕಿರುಕುಳದ ಪ್ರಕರಣಗಳು ಸಂಭವಿಸಿದ್ದರೆ ಅದರಲ್ಲಿ ಆಂಧ್ರದ ಪ್ರಮಾಣ ಶೇ.28.7 ಮತ್ತು ನಂತರದಲ್ಲಿ ಕರ್ನಾಟಕ ಶೇ.18.3! ಇದು ದೇಶದಲ್ಲೇ ಅತಿ ಹೆಚ್ಚು ಶ್ರೀಮಂತಿಕೆ ಮತ್ತು ಅತಿ ‘ಘನವಾದ ಆಧು ನಿಕತೆ’ ಪಡೆದುಕೊಂಡ ಸಮಾಜಗಳು ವರ್ತಿಸು ತ್ತಿರುವ ರೀತಿ. ಇನ್ನೂ ನಗರಗಳ ಮಟ್ಟಿಗೆ ಹೇಳು ವುದಾದರೆ ಬೆಂಗಳೂರಿನಲ್ಲೇ ಅತಿ ಹೆಚ್ಚು ವರದಕ್ಷಿಣೆ ಕಿರುಕುಳ ಮತ್ತು ವರದಕ್ಷಿಣೆ ಸಾವುಗಳ ಪ್ರಕರಣಗಳು ದಾಖಲಾಗಿದ್ದವು. ಲೈಂಗಿಕ ಬಲಾತ್ಕಾರದ ಪ್ರಕರಣಗಳಲ್ಲಿ ದೇಶದ ಶೇ.17.6 ಪ್ರಕರಣಗಳು ದಾಖಲಾಗಿರುವ ದೆಹಲಿ ಮೊದಲ ಸ್ಥಾನದಲ್ಲಿದ್ದರೆ ಮುಂಬೈ, ಭೋಪಾಲ್, ಬೆಂಗಳೂರು ನಂತರದ ಸ್ಥಾನದ ಲ್ಲಿದೆ. ಹೆಂಗಸರ ಅಪಹರಣ ಮತ್ತು ಬಲಾತ್ಕಾರದ ಪ್ರಕರಣದಲ್ಲೂ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ.

ಇದರೊಡನೆ ಹೆಣ್ಣುಮಕ್ಕಳ ಅಸಹಜ ಸಾವು ಮತ್ತು ಆತ್ಮಹತ್ಯೆಗಳ ಪ್ರಕರಣಗಳಲ್ಲೂ ಬೆಂಗಳೂರು ದೆಹಲಿಯ ನಂತರದ ಸ್ಥಾನ ದಲ್ಲಿದೆ. ಕೋಲ್ಕತ್ತ, ಹೈದರಾಬಾದ್ ನಂತರದ ಸ್ಥಾನಗಳಲ್ಲಿವೆ. ಹಾಗೆಯೇ ರೈತರ ಆತ್ಮಹತ್ಯೆ ಯ ಪ್ರಕರಣಗಳಲ್ಲೂ ಮಹಾರಾಷ್ಟ್ರ, ಕರ್ನಾ ಟಕ, ಆಂಧ್ರಪ್ರದೇಶ ಮತ್ತು ಕೇರಳಗಳು ಸತತವಾಗಿ ಹತ್ತನೇ ವರ್ಷವೂ ಮೊದಲ ಐದು ಸ್ಥಾನದಲ್ಲಿವೆ!
ಹೀಗೆ ಸಮಾಜದ ಬಲಹೀನರ ಮತ್ತು ದುರ್ಬಲರ ದೃಷ್ಟಿಯಿಂದ ನೋಡಿದರೆ ಈ ದೇಶ ಜಾಗತೀಕರಣ ಪ್ರಣೀತ ಅಭಿವೃದ್ಧಿ ಮಾದರಿ ಹಿಡಿದ ನಂತರದಲ್ಲಿ ಈ ದೇಶ ದಲ್ಲಿ ದುರ್ಬಲರ ಪರಿಸ್ಥಿತಿ ಸಾಮಾಜಿಕವಾಗಿ ಇನ್ನಷ್ಟು ಅತಂತ್ರವಾಗಿದೆ.

ಈ ಕಾರ್ಪೊ ರೇಟ್ ಬಂಡವಾಳಶಾಹಿ ವ್ಯವಸ್ಥೆ ತಂದಿ ರುವ ಆಧುನಿಕತೆ ಸಮಾಜದಲ್ಲಿ ಮಹಿಳೆ ಯರಿಗೆ ಸಮಾನತೆ ಮತ್ತು ಗೌರವ ನೀಡುವ ಆಧುನಿಕ ಮತ್ತು ಮಾನವೀಯ ಮೌಲ್ಯವನ್ನೇನು ಹೆಚ್ಚು ಮಾಡಿಲ್ಲ. ಬದಲಿಗೆ ಅವರ ಮೇಲೆ ವರದಕ್ಷಿಣೆ ಕಿರುಕುಳದಂತಹ ಹಳೆಯ ಕ್ರೌರ್ಯದ ಜೊತೆಗೆ ಹೊಸ ಬಗೆಯ ಲೈಂಗಿಕ ಮತ್ತು ದೈಹಿಕ ದೌರ್ಜನ್ಯಗಳನ್ನೂ ಹೆಚ್ಚು ಮಾಡಿದೆ. ಇದು ಆಂಧ್ರ ಪ್ರದೇಶ, ದೆಹಲಿ ಮತ್ತು ಬೆಂಗಳೂರಿನ ಸಂದಭರ್ದಲ್ಲಿ ಇನ್ನಷ್ಟು ನಿಚ್ಚಳವಾಗಿ ತಿಳಿಯುತ್ತದೆ. ಇಲ್ಲಿ ಅತ್ಯಂತ ಆಧುನಿಕ ಶಿಕ್ಷಣ ಪಡೆದು ಅತಿ ಹೆಚ್ಚು ಆದಾಯ ಗಳಿಸುವ ಉದ್ಯೋಗ ಮಾಡಿದಷ್ಟು ಸ್ವಾಭಿಮಾನ ಮತ್ತು ಮಹಿಳೆಯರನ್ನು ಸರಿಸಮಾನವಾಗಿ ನೋಡುವ ವೌಲ್ಯಗಳು ಹೆಚ್ಚಾಗುವ ಬದಲು ಅವರನ್ನು ಆಸ್ತಿಯನ್ನಾಗಿ ನೋಡುವ ಮತ್ತು ದೈಹಿಕ ತೃಷೆ ಯನ್ನು ತೀರಿಸುವ ವಸ್ತುವನ್ನಾಗಿ ಪರಿಗಣಿಸುವ ಮನೋಧರ್ಮವೇ ಹೆಚ್ಚಾಗುತ್ತಿದೆ.

ಇದು ನಮ್ಮ ಸಂದರ್ಭದಲ್ಲಿ ಹೇಗೆ ಆಧುನಿಕತೆಯು ಸಾಂಪ್ರ ದಾಯಿಕತೆಯೊಂದಿಗೆ ರಾಜಿ ಮಾಡಿಕೊಂಡು ಮಹಿಳೆಯರ ಮೇಲೆ ಇನ್ನಷ್ಟು ಅಸಹನೀಯ ದೌರ್ಜನ್ಯವನ್ನೇ ಹುಟ್ಟಿಹಾಕುತ್ತಿದೆ. ಹಾಗೆಯೇ ಪ್ರಗತಿಪರ ಎಂದು ಕೊಚ್ಚಿಕೊಳ್ಳುತ್ತಿರುವ ಹಾಗೂ ದೇಶದಲ್ಲಿ ಹೆಚ್ಚೆಚ್ಚು ಅಭಿವೃದ್ಧಿ ಹೊಂದಿರುವ ಕರ್ನಾಟಕ, ಆಂಧ್ರದಂತಹ ರಾಜ್ಯಗಳಲ್ಲೇ ಅತಿ ಹೆಚ್ಚು ಆತ್ಮಹತ್ಯೆ ನಡೆಯುತ್ತಿವುದು ಇದನ್ನೇ ಸೂಚಿಸುತ್ತಿದೆ.ಈ ಐದು ರಾಜ್ಯಗಳಲ್ಲಿ ದೇಶದಲ್ಲಿ ಸಂಭವಿಸುತ್ತಿರುವ ರೈತರ ಆತ್ಮಹತ್ಯೆಗಳ ಶೇ.65ರಷ್ಟು ಸಂಭವಿಸುತ್ತಿದೆ ಎಂದರೆ ಈ ದೇಶದ ಅಭಿವೃದ್ಧಿಯು ಹೇಗೆ ರೈತ ವಿರೋಧಿಯಾಗಿದೆ, ಮಹಿಳಾ ವಿರೋಧಿಯಾಗಿದೆ ಎಂಬುದನ್ನು ಸೂಚಿಸುವುದಿಲ್ಲವೇ?ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಅತ್ಯಂತ ಕಡಿಮೆ ಸಂಭವಿಸಿರುವುದು ನಾಗಾಲ್ಯಾಂಡಿನಲ್ಲಿ. ಅಂದರೆ ಶೇ.1.9ರಷ್ಟು ಮಾತ್ರ. ಅದಕ್ಕೆ ಹಲವು ಕಾರಣಗಳಿವೆ. ಅದು ಮೂಲಭೂತವಾಗಿ ಬುಡಕಟ್ಟು ಸಮಾಜ.
 






Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಭಾರತದ ಹೆಮ್ಮೆ ಅನಂತಮೂರ್ತಿ

ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮ್ಯಾನ್ ಬೂಕರ್ ಪ್ರಶಸ್ತಿ ಕೂದಲೆಳೆಯಲ್ಲಿ ಕೈ ತಪ್ಪಿತು. ಅಮೆರಿಕದ ಹಿರಿಯ ಬರಹಗಾರ್ತಿ ಲಿಡಿಯಾ ಡೇವಿಸ್ ಈ ಪ್ರಶಸ್ತಿಯನ್ನ ...


ನಿಮ್ಮ ಅನಿಸಿಕೆ

postClick here to post your views
EPAPER
access

ಸರ್ವೋದಯ ಸಮಾಜದ ಕನಸು: ಭಾಗ-2

ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...


- ಡಾ.ಮೊಗಳ್ಳಿ ಗಣೇಶ್

ಸರ್ವೋದಯ ಸಮಾಜದ ಕನಸು:ಭಾಗ-1

ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...


- ಡಾ.ಮೊಗಳ್ಳಿ ಗಣೇಶ್

ನನ್ನ ಅತ್ತಿಗೆ ಗೋವು ಸಾಕಿದ್ದು

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...


- ಬಿ. ಎಂ. ಬಶೀರ್

ಇದು ಪ್ರಜಾಪ್ರಭುತ್ವದ ಪವಾಡ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...


- ಸನತ್‌ಕುಮಾರ ಬೆಳಗಲಿ

ಉತ್ತರಕುಮಾರಿಯರು, ಉತ್ತರಭೂಪರು ಮತ್ತು ಉತ್ತರಪತ್ರಿಕೆಗಳು!

ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...


- ಅಶೋಕ್ ಶೆಟ್ಟರ್

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್