ಕರ್ನಾಟಕದಲ್ಲೀಗ ಬಂಪರ್ ಜಾತ್ರೆ. ಯಾರು ಎಲ್ಲಿ ಬೇಕಾದರೂ ಅಂಗಡಿ ಹಾಕಿಕೊಳ್ಳಬಹುದು. ವ್ಯಾಪಾರ ಹಂಡ್ರೆಡ್‌ಪರ್ಸೆಂಟ್ ಗ್ಯಾರಂಟಿ... ಒಂದೇ ಒಂದು ವರ್ಷ ಬಾಕಿಯಿದೆ; ದುಡಿಯಿರಿ, ದುಡಿದು ಗಳಿಸಿರಿ- ಅಮೇದ್ಯವನ್ನು...
ಜಾತ್ರೆ ನಿಂತಿರುವುದೇ ಜಾತಿಯ ಮೇಲೆ. ಈ ರಾಜ್ಯದ ಬಹುದೊಡ್ಡ ಜಾತಿಗಳೆನಿಸಿರುವ ಲಿಂಗಾಯತ ಮತ್ತು ಒಕ್ಕಲಿಗ ಎಂಬ ‘ಸಮುದಾಯ’ಗಳ ನಾಯಕರೇ ಇಲ್ಲಿ ಹೀರೋಗಳು. ಉಳಿದವರೆಲ್ಲ ಜೀರೋಗಳು..
ಗಣಿ ಹಣ ತಿಂದವರು, ಭೂಮಿ ಲೂಟಿ ಹೊಡೆದವರು ಎಲ್ಲ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ-ಜಾತಿಯ ಹೆಸರಲ್ಲಿ... ಮುಂಗಾರೆಂಬ ಬಂಗಾರದ ನಿರೀಕ್ಷೆಯಲ್ಲಿ ಈ ರಾಜ್ಯದ ರೈತಾಪಿ ಸಮುದಾಯ ಕಳವಳದಲ್ಲಿರುವಾಗ, ದೆಹಲಿಯ ವೃದ್ಧಾತಿವೃದ್ಧರಿಗೆ ‘ವಿಸರ್ಜನೆ’ಯ ಬಾಧೆ ಕಾಡತೊಡಗಿತಂತೆ! ಗಡ್ಕರಿ, ಜೇಟ್ಲಿ, ಸುಷ್ಮಾ, ಮೋದಿಗಳ ಆಟದಲ್ಲಿ ವೃದ್ಧ ಪಿತಾಮಹ ಅಡ್ವಾಣಿ ‘ವಿಸರ್ಜನೆ, ವಿಸರ್ಜನೆ’ ಎಂದು ಕೂಗಿಕೊಂಡರೆ, ಅದನ್ನು ಕೇಳುವವರು ಯಾರಿದ್ದಾರೆ?
ಇಟ್ಟಿಗೆ, ಮಣ್ಣು ಮಸಿ ಅಂತೆಲ್ಲ ರಕ್ತದ ಕೋಡಿ ಹರಿಸಿದ ಈ ಮಹಾಶಯನಿಗೆ ಇವತ್ತು ಮೂ..ವಿಸರ್ಜನೆ ಮಾಡುವುದೂ ಕಷ್ಟಕರವಾಗಿ ಬಿಟ್ಟಿದೆಯಲ್ಲ!
ಛೇ, ಇದು ‘Nature's call’ ಗೆ ಒದಗಿದ ದುರ್ಗತಿಯೇ.. ಅಥವಾ ರಕ್ತ ಕುಡಿದವರಿಗೆ ನಿಸರ್ಗವೇ ಕೊಟ್ಟ ಶಿಕ್ಷೆಯೇ?
***
ಏನೇ ಇರಲಿ, ಜಾತ್ರೆ ರಂಗೇರಿದ ಈ ಹೊತ್ತಿನಲ್ಲಿ ‘ಮುದುಕಪ್ಪ’ನಿಗೆ ‘ವಿಸರ್ಜನೆ’ಯ ನೆನಪು ಬಂದಿದೆಯಲ್ಲ.. ಆದರೆ ಈ ‘ಮುದುಕಪ್ಪ’ನ (‘‘ಮುದುಕಪ್ಪ’’ ಎನ್ನುವುದನ್ನು ಇಲ್ಲಿ ಹಿರಿಯ ನಾಯಕ ಎಂದು ಅರ್ಥೈಸಿಕೊಳ್ಳಿ. ವೃದ್ಧ ನಾಗರಿಕರಿಗೆ ಅವಮಾನ ಮಾಡುವ ಉದ್ದೇಶವಂತೂ ಇಲ್ಲಿ ಇಲ್ಲವೇ ಇಲ್ಲ..) ‘ಮೂ...’ಬಾಧೆಗೆ ಅವರದೇ ಪಕ್ಷದ ‘ಅಮೂರ್ತ’ ರಾಕ್ಷಸರೇ ಕಾರಣರಾಗಿದ್ದಾರಲ್ಲ.. ಪಾಪ, ಸಂಜೆ ಹೊತ್ತಿನಲ್ಲಿ ಬಸವಳಿದಿರುವ ಜೀವಕ್ಕೆ ವಿಸರ್ಜನಾಲಯವೂ ಸಿಗದೇ ಇರುವಂತಹ ಪರಿಸ್ಥಿತಿ ಉಂಟಾಗಿಬಿಟ್ಟಿದೆಯಲ್ಲ..
ಛೇ, ರಕ್ತದ ರುಚಿ ಕಂಡವನಿಗೆ ಮಣೆ ಹಾಕಿದ ಮೇಲೆ ಈ ಬಾಧೆಯನ್ನು ತಡೆದುಕೊಳ್ಳಲೇ ಬೇಕಲ್ಲವೇ? ಛೇ, ರಕ್ತವೇ!
***
ಈ ಎಲ್ಲದರ ನಡುವೆ ಜಾತ್ರೆಯಲ್ಲಿ ‘ಲಿಂಗಾಯತ’ ಎಂಬ ಏಕೈಕ ಅರ್ಹತೆ ಹೊಂದಿರುವ ಜಗದೀಶ ಶೆಟ್ಟರ್ ಎಂಬ ‘ವ್ಯಾಪಾರಿ’ ಗಿರಾಕಿ ಮಿರಿ ಮಿರಿ ಮಿಂಚುತ್ತಿದೆಯಲ್ಲ... ಕನ್ನಡದ ಜಾತ್ಯಾತೀತ ಮನಸ್ಸುಗಳ ಮತದಾರರನ್ನು ಒಡೆದು ಹಾಕಲು ಯತ್ನಿಸುತ್ತಿರುವವರಲ್ಲಿ ಈ ಗುಮ್ಮನಗುಸುಗ ಶೆಟ್ಟರ್ ಕೂಡಾ ಇದ್ದಾರಲ್ಲ... ಈ ನಡುವೆ, ಸದಾ ಪೇಜಾವರರ ಕಾಲಧೂಳನ್ನೇ ಅಂಗಾರ ಎಂದುಕೊಂಡಿರುವ ಈಶ್ವರಪ್ಪ ಎಂಬ ‘ಹಿಂದುಳಿದ ನಾಯಕ’ ‘ಜೊಳ್ಳು, ಜೊಳ್ಳು’ ಎಂದು ಕಿರುಚಿ, ತಮ್ಮೆಲ್ಲ ಜೊಳ್ಳುತನವನ್ನು ಹರಾಜಿಗೆ ಇಟ್ಟಿದ್ದು ಕರ್ನಾಟಕದ ಪಾಲಿಗೆ ಶುಭ ಸೂಚಕ ಸುದ್ದಿಯೇ ಆಗಿದೆಯಲ್ಲ..
ಈಶ್ವರಪ್ಪನವರ ಸಲಹೆಯಂತೆ ಜರಡಿ ಹಿಡಿದು ಜಾಲಾಡಿದರೆ, ಜರಡಿಯಲ್ಲಿ ಉಳಿಯೋದು ಒಂದೋ, ಎರಡೋ ಗಟ್ಟಿ ಕಾಳುಗಳಷ್ಟೇ ಎಂಬುದು ಆರೆಸ್ಸೆಸ್ ಪಂಡಿತರಿಗೂ ಗೊತ್ತೇ ಇರುವ ಸಂಗತಿಯಾಗಿದೆಯಲ್ಲ..
ಛೇ, ಜರಡಿಯೇ, ಜೊಳ್ಳು ಕಾಳುಗಳೇ, ಹಿಂದುತ್ವದ ಕೂಲಿ ಆಳುಗಳೇ!
***
ಕನ್ನಡದ ರೈತಾಪಿ ಸಮೂಹ ‘ಮೋಡ ವಿಸರ್ಜನೆ’ಗೆ ಕಾದಿರುವಾಗ, ದೆಹಲಿಯ ನಾಯಕ ಮಣಿಗೆ ಈಗ ವಿಸರ್ಜನೆಯ ಬಾಧೆ ಕಾಡತೊಡಗಿದ್ದು ಆಕಸ್ಮಿಕ ಎಂದು ತಿಪ್ಪೆ ಸಾರಿಸಿ ಬಿಡಬಹುದಲ್ಲ..ಏನೇ ಆಗಲಿ, ಪಾಪ ಒಂದು ದಿನವಾದರೂ ಪಿ.ಎಂ. ಸೀಟಿನಲ್ಲಿ ಕೂಡ್ರುವ ಮಹಾದಾಶೆ ಹೊಂದಿರುವ ಈ ವೃದ್ಧರಿಗೆ ಅದೀಗ ಮರೀಚಿಕೆ ಆಗಿಬಿಟ್ಟಿದೆಯಲ್ಲ...
ಪಾಪದ ಕೊಡ ತುಂಬಿ ತುಳುಕಿದಾಗ ಯಾರೇನು ಮಾಡಲು ಸಾಧ್ಯ ಹೇಳಿ? ಭ್ರಷ್ಟಾತಿ ಭ್ರಷ್ಟರ ಸಂಗಮವಾಗಿರುವಲ್ಲಿ ‘ನಿಸರ್ಗ ನ್ಯಾಯ’ ಸಿಗುವುದು ಕಷ್ಟವೇ ಅಲ್ಲವೇ?
ನ್ಯೂಸ್ ‘‘ಬ್ರೇಕಿಂಗು’’
* ಸದ್ಯದಲ್ಲೇ ವಿಧಾನಸೌಧದ ಹಣೆಗೆ ವಿಭೂತಿ ಪಟ್ಟ! ಮಧ್ಯದಲ್ಲಿ ಕಳ್ಳ ಖದೀಮರ ಕೇಸರಿ ಜುಟ್ಟ!!
* ಹಿರಿಯ ಬಿಜೆಪಿ ನಾಯಕ ಅಡ್ವಾಣಿಗೆ ‘ವಿಸರ್ಜನಾ’ ಬಾಧೆ!
ರಥಯಾತ್ರೆಯ ವೀರನೀಗ ಜಾತ್ರೆಯಲ್ಲೇ ಸಿಕ್ಕು ಫಜೀತಿ!!
* ‘‘ದೇವಕಣ’’ ಅಸ್ತಿತ್ವ ಸಾಬೀತು!
ಗೌಡರ ಪಕ್ಷದಲ್ಲಿ ಹೊಸ ಸಂಚಲನ!
*ಮುಂಗಾರು ನಿರೀಕ್ಷೆಯಲ್ಲಿ ಆರ್‌ಬಿಐ!
ಆರ್‌ಬಿಐ ಹಿಂದೆ ಬಿದ್ದಿದೆ ಸಿಬಿಐ!!
* ‘‘ಛೇ, ಇದು ಸರಿಯಲ್ಲ’’ ಎಂದ ರಾಜ್ಯ ಆರೆಸ್ಸೆಸ್;
ತಿಂದಿದ್ದನ್ನು ಕಕ್ಕಿ ಎಂದ ಯಡ್ಡಿ ಪುತ್ರರು!
* ಬೆಂಗಳೂರಿನಲ್ಲಿ ಸಿಕ್ಕಸಿಕ್ಕಲ್ಲಿ ‘‘ಪತ್ರಿಕಾ’’ದಿನಾಚರಣೆ; ಕಳ್ಳ ಖದೀಮರ ಪ್ರಾಯೋಜಕತ್ವದಲ್ಲಿ ಸಂಭ್ರಮಾಚರಣೆ!
ಕರ್ನಾಟಕದ ಜನಸಂಖ್ಯೆ ಕಳೆದ ಹತ್ತು ವರ್ಷಗಳಲ್ಲಿ ಶೇ.15.60ರಷ್ಟು ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆ 6.10 ಕೋಟಿ ಯಾಗಿದೆ. 2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ ...
Click here to post your views ಹಾಗೆಯೇ ಕಳೆದ ಒಂದು ದಶಕದಿಂದ ಕ್ರಿಕೆಟ್ ಲೋಕದ ಶ್ರೇಷ್ಠ ಆಟಗಾರ ಇಮ್ರಾನ್ ಖಾನ್ ಅವರು ಪಾಕಿಸ ...
ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕ ...
ಸಿದ್ದರಾಮಯ್ಯ ಹೊಸ ಕನಸಿನ ಆಸೆ ಬಿತ್ತಿದ್ದಾರೆ. ಅವರ ಹೊಣೆಗಾರಿಕೆ ಹೆಚ್ಚಾಗಿದೆ. ದೇವರಾಜ ...
ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ...
ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯ ...
ಬುದ್ಧನಿಗೆ ಜ್ಞಾನೋದಯ ಹೇಗಾಯಿತು?
ಸಿದ್ದಾರ್ಥ ಜನಿಸುವ ಮುನ್ನ ಆತನ ತಾಯಿ ರಾಣಿ ಮಹಾಮ ...
ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...
ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...