ಅಂಕಣ - ಪ್ರಚಲಿತ

mail-img print-img

ಛತ್ತೀಸ್‌ಗಡದಲ್ಲೊಂದು ಜಲಿಯನ್‌ವಾಲಾಬಾಗ್

ಸೋಮವಾರ - ಜುಲೈ -09-2012

1919ರ ಎಪ್ರಿಲ್ 13. ಪಂಜಾಬಿನ ಜನ ವೈಶಾಖಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಹಬ್ಬದ ಸಂತಸ ಹಂಚಿಕೊಳ್ಳಲು ಹಾಗೂ ಬ್ರಿಟಿಷರು ಹೇರಿದ್ದ ದಮನಕಾರಿ ರೌಲತ್ ಕಾಯ್ದೆಯನ್ನು ವಿರೋಧಿಸಲು ಅಮೃತಸರದ ಸ್ವರ್ಣಮಂದಿರ ಬಳಿಯ ಜಲಿಯನ್‌ವಾಲಾಬಾಗ್ ಮೈದಾನದಲ್ಲಿ ಸಾವಿರಾರು ಜನ ಸೇರಿದ್ದರು. ತಮ್ಮ ತಾಯಂದಿರ ಜೊತೆ ಮಕ್ಕಳು ಅಲ್ಲಿ ಬಂದಿದ್ದರು. ಈ ಮೈದಾನ ಪ್ರವೇಶಿಸಲು ಮತ್ತು ಹೊರಗಡೆ ಹೋಗಲು ಒಂದೇ ದ್ವಾರ. ಸುತ್ತಲೂ ಗೋಡೆ. ಇಲ್ಲಿ ಸೇರಿದ ಜನ ಯಾವ ತಪ್ಪನ್ನು ಮಾಡಿರಲಿಲ್ಲ. ಕರಾಳ ಕಾನೂನು ವಿರುದ್ಧ ಅಸಮಾಧಾನ ವ್ಯಕ್ತಪಡಿಸುವುದು ಅವರ ಉದ್ದೇಶವಾಗಿತ್ತು. ಹಿಂದು ಮತ್ತು ಮುಸ್ಲಿಂ ನಾಯಕರಾದ ಡಾ.ಸತ್ಯಪಾಲ ಮತ್ತು ಡಾ. ಕಿಚಲು ಈ ಸಭೆಯನ್ನು ಸಂಘಟಿಸಿದ್ದರು. ಆಗ ಬ್ರಿಟಿಷ್ ಪೊಲೀಸರು ಒಮ್ಮೆಲೇ ಮೈದಾನದೊಳಗೆ ನುಗ್ಗಿ ಇವರಿಬ್ಬರನ್ನು ಬಂಧಿಸಿದಾಗ, ಜನ, ಹಿಂದು-ಮುಸ್ಲಿಂ ಏಕತೆ ಚಿರಾಯುವಾಗಲಿ. ಕರಾಳ ಶಾಸನ ತೊಲಗಲಿ ಎಂದು ಘೋಷಣೆ ಹಾಕತೊಡಗಿದರು.ಆಗ ತನ್ನ ಪಡೆಯೊಂದಿಗೆ ನುಗ್ಗಿದ ಕ್ರೂರ ಸೇನಾಧಿಕಾರಿ ಡಾಯರ್ ಬಾಗಿಲಿಗೆ ಅಡ್ಡ ನಿಂತು ಗುಂಡಿನ ಸುರಿಮಳೆ ಮಾಡಿಸಿದ. ಜನರ ಆಕ್ರಂದನ ಮುಗಿಲು ಮುಟ್ಟಿತ್ತು.

ತಪ್ಪಿಸಿ ಕೊಳ್ಳಲು ಎಷ್ಟೋ ತಾಯಂದಿರು ಮಕ್ಕಳನ್ನು ಕಂಕುಳಲ್ಲಿ ಎತ್ತಿಕೊಂಡು ಮೈದಾನದೊಳಕ್ಕಿದ್ದ ಬಾವಿಯಲ್ಲಿ ದುಮ್ಮಿಕ್ಕಿದರು. ಬ್ರಿಟಿಷ್ ಸರಕಾರದ ವರದಿ ಪ್ರಕಾರವೇ, 400ಕ್ಕೂ ಹೆಚ್ಚು ಮಂದಿ ಅಲ್ಲಿ ಸಾವಿಗೀಡಾದರು. ಆದರೆ ಸತ್ತವರ ಸಂಖ್ಯೆ ಸಾವಿರ ದಾಟಿತ್ತು. ಗಾಯಗೊಂಡವರ ಸಂಖ್ಯೆ ಇನ್ನೂ ಜಾಸ್ತಿಯಾಗಿತ್ತು. ಮಾರಣಾಂತಿಕ ಗಾಯಗೊಂಡ ವರನ್ನು ದವಾಖಾನೆಗೂ ಸೇರಿಸಲಿಲ್ಲ.2012 ಜೂನ್ 29. ಶುಕ್ರವಾರ. ಛತ್ತೀಸ್‌ಗಡ ರಾಜ್ಯದ ಬಿಜಾಪುರ ಜಿಲ್ಲೆಯ ಸರ್ಕಗುಡಾ ಎಂಬ ಅರಣ್ಯದ ಒಳಗಿರುವ ಹಳ್ಳಿಯಲ್ಲಿ ನೂರಾರು ಜನ ಸೇರಿದ್ದರು. ತಮ್ಮ ಊರಿನ ಭೂಮಿ ಸಮಸ್ಯೆ ಬಗ್ಗೆ ಚರ್ಚಿಸಲು ಆಗಾಗ ಸೇರುವುದು ಅವರ ಪರಿಪಾಠ.

ಮಳೆಗಾಲದ ಸಂದರ್ಭದಲ್ಲಿ ಬೀಜ ಬಿತ್ತನೆ ಉತ್ಸವ ಎಂಬ ಆಚರಣೆ ಕುರಿತು ಚರ್ಚಿಸಲು ಇವರು ಸೇರಿದ್ದರು. ಪುಟ್ಟ ಮಕ್ಕಳನ್ನು ಬಗಲಲ್ಲಿ ಎತ್ತಿಕೊಂಡು ತಾಯಂದಿರು ಬಂದಿದ್ದರು. ಆಗ ಒಮ್ಮಿಂದೊಮ್ಮೆಲೇ ಸುತ್ತುವರೆದ ಕೇಂದ್ರ ಮೀಸಲುಪಡೆಯ ಪೊಲೀಸರು ಯಾವುದೇ ಪ್ರಚೋದನೆಯಿಲ್ಲದೇ ಗುಂಡಿನ ಮಳೆಗೆರೆದರು. ತಪ್ಪಿಸಿಕೊಂಡು ಓಡಿಹೋಗಲು ದಿಕ್ಕಾಪಾಲು ಆದವರನ್ನು ಬೆನ್ನಟ್ಟಿ ಕೊಂದರು. ಅನೇಕ ಆದಿವಾಸಿಗಳ ಕಾಲು, ಕೈ, ಬೆನ್ನು ಮತ್ತು ಎದೆಗಳಲ್ಲಿ ಬಂದೂಕಿನ ಕಾಡತೂಸು ಹೊಕ್ಕು 20ಕ್ಕೂ ಹೆಚ್ಚು ಜನ ಸಾವಿಗೀಡಾದರು.

ಜಲಿಯನವಾಲಾಬಾಗ್‌ಕ್ಕೂ ಮತ್ತು ಛತ್ತೀಸ್‌ಗಡ ಎನ್‌ಕೌಂಟರ್‌ಗೂ ಒಂದೇ ವ್ಯತ್ಯಾಸ. ಆಗ ಸ್ವಾತಂತ್ರಕ್ಕಾಗಿ ದನಿಯೆತ್ತಿದ ಜನರ ಮೇಲೆ ವಿದೇಶಿ ಆಳರಸರ ಸೈನಿಕರು ಗುಂಡು ಹಾರಿಸಿದರು. ಆದರೆ ಸ್ವತಂತ್ರ ಭಾರತದಲ್ಲಿ ಈ ಬಾರಿ ನಮ್ಮ ಸರಕಾರವೇ ಪ್ರಜೆಗಳನ್ನು ಗುಂಡಿಕ್ಕಿ ಕೊಂದಿತು. ಅಂತರಾಳ ಹೋಗಿ ನೋಡಿದರೆ, ಈ ಎರಡೂ ಹತ್ಯಾಕಾಂಡಗಳು ನಡೆದದ್ದು ಉಳ್ಳವರ ಹಿತಾಸಕ್ತಿಗಾಗಿ. ಬಲಿಯಾದವರು ಬಡವರು. ಈ ನಕಲಿ ಎನ್‌ಕೌಂಟರ್ ಪ್ರಕರಣ ‘ದಿ ಹಿಂದು’ವಿನಂತಹ ಒಂದೆರಡು ಪತ್ರಿಕೆಗಳಲ್ಲಿ ಮಾತ್ರ ವರದಿಯಾಯಿತು. ಮಾನವ ಹಕ್ಕು ಹೋರಾಟಗಾರರು ದನಿಯೆತ್ತಿದರು. ಆದರೆ ಛತ್ತೀಸ್‌ಗಡದ ಬಿಜೆಪಿ ಮುಖ್ಯಮಂತ್ರಿ ರಮಣಸಿಂಗ್ ಹಾಗೂ ಆತನ ಗುರು ಕೇಂದ್ರ ಗಹ ಸಚಿವ ಚಿದಂಬರಂ ಈ ಹತ್ಯಾಕಾಂಡವನ್ನು ಸಮರ್ಥಿಸಿದರು. ಎನ್‌ಕೌಂಟರ್‌ನಲ್ಲಿ ಸತ್ತವರಲ್ಲಿ ಕುಖ್ಯಾತ ನಕ್ಸಲೀಯರು ಇದ್ದರೆಂದು ಹಸಿಸುಳ್ಳು ಹೇಳಿದರು. ಆದರೆ ಆ ಕುಖ್ಯಾತ ನಕ್ಸಲೀಯರು ಯಾರು? ಅವರ ಹೆಸರೇನು? ಅವರು ಬಂದೂಕುಗಳು ಎಲ್ಲಿವೆ? ಎಂದರೆ ಇವರಿಬ್ಬರ ಬಳಿ ಉತ್ತರವಿಲ್ಲ.

ಈ ಹತ್ಯಾಕಾಂಡದಲ್ಲಿ ಆದಿವಾಸಿ ಯುವಕ ಸಬಕಾಮಿತು ಕತ್ತು ಪೊಲೀಸರ ಗುಂಡಿನಿಂದ ಸೀಳಿ ಇಬ್ಬಾಗವಾಗಿದೆ. ಈ ರೀತಿ ಕೈಕಾಲು, ಎದೆಗೆ ಗುಂಡು ಬಡಿದು ಸತ್ತವರು ಒಂದೆಡೆಯಿದ್ದಾರೆ. ಬದುಕುಳಿದ ವರು ನರಕಯಾತನೆ ಅನುಭವಿಸುತ್ತಿದ್ದಾರೆ. ಗುಂಡು ಬಡಿದು ಸತ್ತವರೆಲ್ಲ ನಕ್ಸಲೀಯ ರಾಗಿದ್ದರೆ, ಅವರ ಕೈಯಲ್ಲಿ ಬಂದೂಕುಗಳು ಏಕಿರಲಿಲ್ಲ? ಶಾಲೆಗೆ ಹೋಗುವ ಹತ್ತು ವರ್ಷದ ಮಗುವನ್ನು ಕೊಂದಿದ್ದಾರೆ? ಆ ಮಗು ಮಾವೋವಾದಿಯೇ? ಗುಂಡಿಗೆ ಬಲಿಯಾದ ಹತ್ತಕ್ಕೂ ಹೆಚ್ಚು ಬಾಲಕರು ನಕ್ಸಲೀಯರೇ? ಈ ಪ್ರಶ್ನೆಗೆ ಸರಕಾರದ ಬಳಿ ಉತ್ತರವಿಲ್ಲ. ಈ ಕುರಿತು ವಿಚಾರಣೆ ನಡೆಸಲು ಒತ್ತಾಯಿಸಿದರೆ, ರಾಜ್ಯ ಮತ್ತು ಕೇಂದ್ರ ಸರಕಾರಗಳು ನಿರಾಕರಿಸಿದವು. ಆದರೆ ಎಲ್ಲರೂ ಉಗುಳತೊಡಗಿದಾಗ, ಈಗ ನ್ಯಾಯಾಂಗ ವಿಚಾರಣೆಗೆ ಆದೇಶ ಮಾಡಿದ್ದಾರೆ.

ಈ ಹತ್ಯಾಕಾಂಡ ನಡೆಸಿ, ಪೊಲೀಸರು ಸುಮ್ಮನೆ ಹೋಗಲಿಲ್ಲ. ಮಾರನೇ ದಿನ ಮುಂಜಾನೆ ಮತ್ತೆ ಹಳ್ಳಿಗೆ ನುಗ್ಗಿದರು. ಹೆದರಿ ಮನೆಯಲ್ಲಿ ಅಡಗಿಕೊಂಡಿದ್ದ ಹೆಣ್ಣುಮಕ್ಕಳನ್ನು ಬಯಲಿಗೆ ಎಳೆದುತಂದು ಬೆತ್ತಲೆ ಮಾಡಿ, ಚಿತ್ರಹಿಂಸೆ ನೀಡಿದರು. ಕೆಲ ಯುವತಿಯರು ಅತ್ಯಾಚಾರಕ್ಕೂ ಬಲಿಯಾದರು.ಶೌಚಕ್ಕೆಂದು ಮನೆಗೆ ಹೊರಟಿದ್ದ ರಾಜು ಎಂಬ ಯುವಕನ ಮೇಲೆ ಗುಂಡು ಹಾರಿಸಿದರು. ಆ ಹುಡುಗ ಅವ್ವ ಎಂದು ಕೂಗುತ್ತ ವಾಪಸು ಮನೆಗೆ ಓಡಿದ ಆಗಲೂ ಸುಮ್ಮನೆ ಬಿಡದ ಪೊಲೀಸರು ಮನೆಯೊಳಗೆ ತಾಯಿತಂದೆ ಎದುರಲ್ಲೇ ಆತನನ್ನು ಕೊಂದರು. ಮನೆಯಲ್ಲಿದ್ದ ಹಣವನ್ನು ದೋಚಿಕೊಂಡು ಹೋದರು.

ಈ ಹತ್ಯಾಕಾಂಡದ ಬಗ್ಗೆ ಮಾನವಹಕ್ಕು ಹೋರಾಟಗಾರರು ಮಾತ್ರ ಆಕ್ಷೇಪಿಸಲಿಲ್ಲ. ಛತ್ತೀಸ್‌ಗಡ ರಾಜ್ಯದ ಕಾಂಗ್ರೆಸ್ ನಾಯಕರು ಸುಳ್ಳು ಹೇಳಿದ ಚಿದಂಬರಂ ಮತ್ತು ರಮಣ ಸಿಂಗ್‌ರನ್ನು ತರಾಟೆಗೆ ತೆಗೆದುಕೊಂಡರು. ಛತ್ತೀಸ್‌ಗಡದ ಬಿಜೆಪಿ ನಾಯಕರು ನೀಡಿದ ಸುಳ್ಳು ಮಾಹಿತಿಯನ್ನು ಆಧರಿಸಿ ಚಿದಂಬರಂ ಈ ರೀತಿಯ ಹೇಳಿಕೆ ನೀಡಿದ್ದಾರೆಂದು ಸ್ಪಷ್ಟವಾಗಿ ಹೇಳಿದರು. ಪ್ರದೇಶ ಕಾಂಗ್ರೆಸ್‌ನ ನಿಯೋಗ ಸತ್ಯಶೋಧನೆಗಾಗಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಬಂದು, ಇದು ಸುಳ್ಳು ಎನ್‌ಕೌಂಟರ್ ಎಂದು ಸ್ಪಷ್ಟಪಡಿಸಿತು.

ಕೇಂದ್ರ ಗೃಹಸಚಿವ ಚಿದಂಬರಂ ಹೇಳಿಕೆ ಬಗ್ಗೆ ಅದೇ ಕೇಂದ್ರ ಸರಕಾರದ ಆದಿವಾಸಿ ಇಲಾಖೆಯ ಸಚಿವ ಕಿಶೋರ್‌ಚಂದ್ರ ದೇವ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಎನ್‌ಕೌಂಟರ್ ಬಗ್ಗೆ ನಾನು ಮಾಹಿತಿ ಸಂಗ್ರಹಿಸಿದ್ದೇನೆ. ರಾಜ್ಯದ ಕಾಂಗ್ರೆಸ್ ನಾಯಕರು ಮಾತ್ರವಲ್ಲ ನನ್ನದೇ ಮೂಲಗಳಿಂದ ಪಡೆದ ಮಾಹಿತಿ ಪ್ರಕಾರ ಗುಂಡಿಗೆ ಬಲಿಯಾದ ವರು ಮಾವೋವಾದಿಗಳಲ್ಲ. ಸತ್ತವರಲ್ಲಿ ಅರ್ಧಕ್ಕಿಂತ ಹೆಚ್ಚು ಬಾಲಕರು ಇದ್ದಾರೆ. ಗಾಯಗೊಂಡ ನಾಲ್ಕು ವರ್ಷದ ಮಗು ನಕ್ಸಲೀಯನೇ? ಎಂದು ಕಿಶೋರ್‌ಚಂದ್ರ ಚಿದಂಬರಂ ರನ್ನು ಪ್ರಶ್ನಿಸಿದ್ದಾರೆ. ಈ ಪರಿ ಕಾಡಿಗೆ ನುಗ್ಗಿ ಅಮಾಯಕ ಆದಿ ವಾಸಿಗಳನ್ನು ಕೊಂದ ಪೊಲೀಸರು ಮತ್ತು ಅವರನ್ನು ಛೂಬಿಟ್ಟ ರಮಣ ಸಿಂಗ್ ಸರಕಾರ ಈಗ ಕಾಗಕ್ಕ-ಗೂಬಕ್ಕನ ಕತೆ ಹೇಳು ತ್ತಿದೆ. ನಕ್ಸಲೀಯರು ಇದ್ದರು. ಆದರೆ ಓಡಿಹೋದರು ಎಂದು ಹೇಳುತ್ತಿದ್ದಾರೆ. ಇದರ ಬಗ್ಗೆ ಸಿಪಿಐ ಮತ್ತು ಸಿಪಿಎಂ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ರೀತಿ ಅಮಾಯಕ ಆದಿವಾಸಿಗಳನ್ನು ಪೊಲೀಸರು ಗುಂಡು ಹಾರಿಸಿ ಕೊಂದರೇಕೆ? ಈ ಪ್ರಶ್ನೆಗೆ ಉತ್ತರ ನೀಡಬೇಕಾದವರು ಪೊಲೀಸರಲ್ಲ. ಕೇಂದ್ರ ಗಹ ಸಚಿವ ಚಿದಂಬರಂ ಮತ್ತು ಛತ್ತೀಸ್‌ಗಡ ಮುಖ್ಯಮಂತ್ರಿ ರಮಣಸಿಂಗ್ ಉತ್ತರ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿದೇಶಿ ಕಾರ್ಪೊರೇಟ್ ಬಂಡವಾಳಶಾಹಿ ಕಂಪೆನಿಗಳೊಂದಿಗೆ ಶಾಮೀಲಾಗಿ ರಹಸ್ಯ ಒಪ್ಪಂದ ಮಾಡಿಕೊಂಡು ಬಸ್ತಾರ್ ಪ್ರದೇಶದ ಖನಿಜ ಸಂಪತ್ತಾದ ಬಾಕ್ಸೈಟ್, ಉಕ್ಕು ಮತ್ತಿತರ ಅಮೂಲ್ಯ ಸಂಪತ್ತನ್ನು ದೋಚಿಕೊಂಡು ಹೋಗಲು ಅವಕಾಶ ಮಾಡಿಕೊಡಬೇಕಾಗಿದೆ. ಅದಕ್ಕಾಗಿ ಕಾಡಿನಿಂದ ಆದಿವಾಸಿಗಳನ್ನು ತೆರವುಗೊಳಿಸಬೇಕಾಗಿದೆ. ಕಾಡನ್ನು ಬಿಟ್ಟು ಹೋಗುವುದಿಲ್ಲ ಎನ್ನುವ ಆದಿವಾಸಿಗಳನ್ನು ಈ ರೀತಿ ಗುಂಡಿಕ್ಕಿ ಕೊಲ್ಲಲಾಗುತ್ತಿದೆ. ಅವರ ಪರವಾಗಿ ದನಿಯೆತ್ತುವವರನ್ನು ರಾಜದ್ರೋಹದ ಆಪಾದನೆ ಮೇಲೆ ಜೈಲಿಗೆ ತಳ್ಳಲಾಗುತ್ತಿದೆ. ಇದು ಸ್ವತಂತ್ರ ಭಾರತದ ಪ್ರಜಾಪ್ರಭುತ್ವ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಖಾಲಿಯಾದ ಜಲಾಶಯಗಳು ಕುಡಿಯುವ ನೀರಿಗೆ ಹಾಹಾಕಾರ

ಬೇಸಿಗೆಯ ಪ್ರಖರತೆ ಹೆಚ್ಚುತ್ತಲೇ ಇದೆ. ಕಾವೇರಿ ಮತ್ತು ಕೃಷ್ಣಾ ಕೊಳ್ಳದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಹಿಂದೆಂದೂ ಕಂಡರಿಯದಷ್ಟು ಕುಸಿದಿದೆ. ಪ್ರತಿ ಸಲದಂತೆ ಜ ...


ನಿಮ್ಮ ಅನಿಸಿಕೆ

postClick here to post your views
EPAPER
access

ಮನೋಲ್ಲಾಸದ ನಾಲೆಗಳು: (ಭಾಗ-1)

ಕಳೆದ ಒಂದು ವಾರದಿಂದ ಸ್ವಾತಂತ್ರ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಮತದಾನ ಕುರಿತು ಯ ...


- ಶೂದ್ರ ಶ್ರೀನಿವಾಸ್

ಐದು ವರ್ಷದ ಹಸುಳೆಗೆ ಉತ್ತರಿಸುವ ದಾರ್ಷ್ಟ ನಮಗಿದೆಯೆ?

ಭಾರತ ದೇಶಕ್ಕೆ ತನ್ನದೇ ಆದ ಭವ್ಯ(?) ಪರಂಪರೆ, ಇತಿಹಾಸ, ಸಂಸ್ಕೃತಿ, ಧಾರ್ಮಿಕ ತಳಹದಿ, ಆಧ್ಯಾತ್ಮಿಕ ಚ ...


- ನಾ ದಿವಾಕರ್

ವಿಪ್ರ ಸಮ್ಮೇಳನದಂಥ ಸಂಕುಚಿತ ಜಾತಿ ಕೂಟಗಳು ಉದಾತ್ತ ಚಿಂತನೆಗೆ ವೇದಿಕೆಯಾಗಲಿ...

ಶಿಕ್ಷಣತಜ್ಞ ಮತ್ತು ಚಿಂತಕ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಅವರ ವಿಪ್ರ ಜಾಗೃತಿ ಸಮ್ಮೇಳನದ ಫಲಶ ...


- ದುರ್ಗಾ ಎಸ್. ಭಟ್

ಅಕ್ಷರ ಸೇವೆಯಿಂದ ಜನಸೇವೆಗೆ;ತೆಂಕಮಿಜಾರಿನ ಮುತ್ತು

ಪರಿಶಿಷ್ಟ ಜಾತಿಯ ನಲ್ಕೆ ಸಮುದಾಯದ ಮಹಿಳೆ ಮುತ್ತು ಅವರು 1999ರಲ್ಲಿ ತೆಂಕಮಿಜಾರು ಗ್ರಾಮಪಂಚಾಯತ್ ವ ...


- ಪ್ರೇಮಶ್ರೀ ಕಲ್ಲಬೆಟ್ಟು

ನಾನು ಮತ್ತು ದೇವರು

 ರಿನಲ್ಲಿದ್ದಾಗ ಪೂಜೆ ಮಾಡುತ್ತಿದ್ದದ್ದು ವಿಚಿತ್ರ ಅನಿಸುತ್ತಿತ್ತು. ಅವಳು ರಾತ್ರ ...


- ಸುನೀಲ್ ರಾವ್

ಬಿಟ್ಟಿ ಅಂಕದ ಪಿಯುಸಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಬುಟ್ಟಿಗೆಸೆ!

 ಮಾನ್ಯರೆ,

ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ನೀಡುವ ತನ್ನ ಸಂಪ್ರದಾಯವನ್ನು ಪಿಯುಸಿ ಮಂಡಳಿಯ ...


- -‘ಮಾತರಿ’ ಸಾಗ

ಶಂಕರದರ್ಶನ ಮತ್ತು ವಿಮರ್ಶಾ ರಾಜಕೀಯಗಳು

ಭಾರತ ದೇಶದ, ಜಗತ್ತಿನ ಅಗ್ರ ದಾರ್ಶನಿಕರಲ್ಲಿ ಓರ್ವರು ಶ್ರೀ ಶಂಕರಾಚಾರ್ಯರು. (ಕ್ರಿ. 8ನೆ ಶತಮಾನ) ಅವರ ದ ...


- -ಡಾ.ಎಂ. ಪ್ರಭಾಕರ ಜೋಶಿ

ಅಕ್ಷಯ ತೃತೀಯವನ್ನು ತಿರುಚಿದ ವ್ಯಾಪಾರಿಗಳು

                                         
ಮಾನ್ಯರೇ, ಅಕ್ಷಯ ತೃತೀಯದಂದು ಚಿನ್ನ, ವಾಹನ ಅಥವಾ ಆಸ್ತಿಕೊಳ್ಳಲು ಶುಭ ದಿನ ಎಂದು ಯಾವುದೇ ಹ ...


- ಪ್ರವೀಣ್. ಎಸ್. ಶೆಟ್ಟಿ, ಮಂಗಳೂರು